ಭಾನುವಾರ, ಸೆಪ್ಟೆಂಬರ್ 5, 2021

ನಿತ್ಯ ಹಣತೆ (ಕವಿತೆ) - ಶ್ರೀಧರ ಗಸ್ತಿ, ಧಾರವಾಡ.

ನಿತ್ಯ ಹಣತೆ

ಬೆಳಗುವಾ ಹಣತೆಯಿದು ಕತ್ತಲೆಯ ಗುಡಿಯಲ್ಲಿ
ಬಾಳಿನ ದಿವ್ಯ ಕಡಲ ಹಾಯಿ ದೋಣಿಯಲ್ಲಿ

ಅಲೆ ಅಲೆಗಳ ಮಿಡಿತ ತುಡಿತಗಳ  ಹಿಡಿತ
ಒಟ್ಟಾಗಿ ಸಾಗಿಸುವ ಪಯಣಿಗನ ತುಡಿತ
ಆ ತುಡಿತಕ್ಕೆ ಅರ್ಪಿಸುವೆ ನನ್ನದೊಂದು ಕವನ
ಕೋರುವೆ ಶುಭಾಷಯ ಬಲು ನಗುನಗುತ

ಕಡಲಾಚೆಗೂ ಮಿಗಿಲು ಪ್ರೀತಿಯ ನಿನ್ನ ಒಡಲು
ಸಮತೆಯ ಶಿಲ್ಪಿಯಾಗಿ ಬೆಳಗುವೀ ಮುಗಿಲು
ಹರಮುನಿದರೂ ಗುರುಕಾಯ್ವನೆಂಬ ವಿಶ್ವನೆಳಲು
ಮನೆ ಮನದಲೂ ನಿನ್ನ ಆದರ್ಶದ ಹೊನಲು

ಮೌಢ್ಯಗಳ ಬಲೆಯಿಂದ ಕಿತ್ತೆಸೆಯುವ ಮಿಡಿತ
ಕನಸುಗಳ ಅಗ್ನಿದಿವ್ಯಕೆ ತೈಲಜ್ಯೋತಿಯ ಪುಳಕ
ಕಡಲಾಚೆಗೂ ಮೀರಿನಿಂತ ಕಲಿಕೆಯ ಬೆಳಕ
ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುವಿ ಅನವರತ

ದನಿವರಿಯದ ಯೋಗಿಯೇ ಯುಗಪ್ರವರ್ತಕನೀನು
ವಿಶ್ವಕೆಲ್ಲ ಮಾನವೀಯತೆಯ ಹರಡುವೀ ಘಮಲು
ದೇವರಿಗೂ ಮೀರಿನಿಂತ ಸಾತ್ವಿಕತೆಯ ಹರವು
ನಮೀಸುವೆ ನೂರೊಂದು ನಿತ್ಯ ಕೊಳೆ ತೊಳೆಯಲೆಂದು ನಮನ
✍ ಶ್ರೀಧರ ಗಸ್ತಿ ಧಾರವಾಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...