ಗಜಲ್
----------------
ಮೌನವಾಗಿ ಕಾದಿರುವೆ ಯಾಕೋ ತಿಳಿಯೆನು ಸಖಿ
ಬಿಡದೆ ಕಾಡುತ್ತಿರುವೆ ಯಾಕೋ ತಿಳಿಯೆನು ಸಖಿ
ಮಿನುಗುವ ಮಿಂಚಿನಂತೆ ಮರೆಯಾಗದಿರು ಹಾಗೆ
ಕಂಡಂತೆ ಕವಿದಿರುವೆ ಯಾಕೋ ತಿಳಿಯೆನು ಸಖಿ
ಬಾಡಿದ ಕುಸುಮದಲು ಬಿಡದಿರುವ ಸುಗಂಧದ ಹಾಗೆ
ನನ್ನೊಳಗೆ ಉಸಿರಾಗಿರುವೆ ಯಾಕೋ ತಿಳಿಯೆನು ಸಖಿ
ಮಣ್ಣಿನೊಳಗೆ ಅಡಗಿದ ಹೊನ್ನಿನ ನಿಧಿಯ ಹಾಗೆ
ಕಣ್ಣೊಳಗೆ ಪೊರೆಯ ಕಾದಿರುವೆ ಯಾಕೋ ತಿಳಿಯೆನು ಸಖಿ
ಬಹಳ ನೆನಪಿನ ಸವಿಯಾಗಿ ಸದಾ ನನ್ನೊಳಗಿರುವೆ ಹಾಗೆ
ಬಿಡದೆ ನಾಣಿಯ ಆವರಿಸಿರುವೆ ಯಾಕೋ ತಿಳಿಯೆನು ಸಖಿ
--- ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ