ಮಂಗಳವಾರ, ಅಕ್ಟೋಬರ್ 12, 2021

ಸ್ನೇಹದ ಸಿಂಚನ (ಕವಿತೆ) - ಶ್ರೀ ಕೆ.ಬಿ. ಮಧು, ಮಂಡ್ಯ ಜಿಲ್ಲೆ.

 ಸ್ನೇಹದ ಸಿಂಚನ

ಚಂದನದ ಸಿರಿಯಲ್ಲಿ ಬಣ್ಣದ ಬದುಕಿನಲ್ಲಿ.
ಸ್ನೇಹವೆಂಬ ಚಿಗುರು ಮೀಸೆಯ ಹೊಸಿಲಲ್ಲಿ.
ಎಳೆ ಮನಸ್ಸಿನ ನನ್ನ ಹೃದಯದಲ್ಲಿ.
ನಿನ್ನ ಅಪ್ಪುಗೆಯ ಹೃದಯ ಮಿಡಿತದಲ್ಲಿ.//

ಮನಸ್ಸಿನ ಮಿಡಿತವ ಹರಿಯುವ ನಲ್ಲಿ.
ನನ್ನ ಏಳಿಗೆಯ ಯಶಸ್ಸಿನಲ್ಲಿ.
ಸಂಬಂಧ ನಮ್ಮ ಹೃದಯ ಮಿಡಿತದಲ್ಲಿ.
ಹೊಸ ಚೈತನ್ಯದ ಚಿಲುಮೆಯಲ್ಲಿ.//

ಸ್ನೇಹದ ಬದುಕಿನ ಬಂಡಿಯ ಪಯಣದಲ್ಲಿ.
ಹೊಸ ಬದುಕನ್ನು ನೀ ಸೃಷ್ಟಿಸುವ ತವಕದಲಿ.
ಕೂಡಿದೆ ಮನಗಳ ಪ್ರೀತಿಯ ಬೇಸಿಗೆಯಲ್ಲಿ.
ಜೊತೆಯಾಗಿ ನಲಿದಾಡುತ್ತಿದೆ ಹೃದಯ ಮಿಡಿತದಲ್ಲಿ.//

ಸ್ನೇಹದ ಸಿಂಚನ ಒಲವಿನ ಬದುಕಿನಲ್ಲಿ.
ಹೊಸ ಭರವಸೆಯ ಹುರುಪಿನಲ್ಲಿ.
ಹೊಸ ಮಿಲನ ನಮ್ಮಿಬ್ಬರ ಗೆಳೆತನದಲ್ಲಿ.
ಕೂಡಿ ನಲಿದಾಡಿದೆ ಹೊಸ ಬದುಕಿನ ಪಯಣ ಸ್ನೇಹದ ಸಿಂಚನ.//
 ಕೆ . ಬಿ. ಮಧು.
 ಮಂಡ್ಯ ,ತಾಲೂಕ್, ಜಿಲ್ಲೆ.
 ಕೊತ್ತತ್ತಿ ಗ್ರಾಮ.
 ಕಾವ್ಯನಾಮ: "ಭಾವುಕ ಮನ"


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...