ವಾವ್ ! ಬಿಂದಾಸ್ ಹುಡುಗಿ
ಬಿಂದಾಸಾಗಿ ಬಂದು ಬಿಡು ಜಂಟಿಯಾಗೋಣ
ಒಂಟಿತನ ಕಳೆಯಲೊಲ್ಲೇ ಏನೋ ಒಂಥರಾ
ಬೆಳದಿಂಗಳೊಮ್ಮೆ ನಕ್ಕು ನಿನ್ನ ಹೊಳಪು ಸುಂದರಾ
ಭಯವೂ ಇಲ್ಲ ಜಯವೇಎಲ್ಲ ಈ ಜಟಕಾ ಬಂಡಿಗೆ
ನಕ್ಕುನಗಿಸುವ ತುಂಟ ನಡೆಯು ಯಾರಾ ಪಾಲಿಗೆ
ನವಿಲಾ ಹೆಜ್ಜೆ ಕುಣಿವ ಲಜ್ಜೆ ಈ ಮೋಡಿ ಯಾರಿಗೆ
ನಯನಸುಂದರ ಒಲವ ಮಂದಿರ ಕಟ್ಟುವೆ ಯಾರಿಗೆ
ನೀ ಬಯಸು ಒಲವ ಗೆಳತಿ ನಿನ್ನ ಮುಡಿಯ ಏರುವೆ
ಬರದ ಭಯದಲಿ ಅಧರ ಒಣಗಿದೆ ಹರಸು ಸಿಂಚನ
ಕಟಿಯ ಕುಟಿಲದಿ ಮೋಡಿ ಮಾಡದೇ ಪ್ರೀತಿ ಚುಂಬನ
ಬಾಳ ಪಯಣದಿ ಏರು ರಥದಲಿ ಸ್ವಚ್ಛ ಸುಂದರ
ನೀ ಬಯಸು ನನ್ನ ಪ್ರೀತಿ ಒಲವ ಬಾಳ ಮಂದಿರ
ಕರಿಯ ಮೋಡದಿ ಬೆಳ್ಳಿಚಂದ್ರನ ಬೆಳಕ ಬಯಲಲಿ
ನಿನ್ನ ಕೇಶರಾಶಿಯ ಘಮಲು ವಾಸನೆ ಮತ್ತೇರಲಿ
ವರುಷ ವರುಷದಿ ಹೊಳೆವ ಚುಕ್ಕೆ ಮೂಡಿ ಬರಲಿ
ನೀ ಬಯಸಿದಂತೆ ನನ್ನೆದೆಯ ಸಾಮ್ರಾಜ್ಞೆ ನೀನಾಗಲಿ
- ಶ್ರೀಧರ ಗಸ್ತಿ ಧಾರವಾಡ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ