ಹಕ್ಕಿ ಬದುಕು
ನಾನು ಹಾರಾಡ ಬಯಸುವೆ ಎಲ್ಲೆಡೆ,
ಬಾನಿನಲ್ಲೂ ಭುವಿಯಲ್ಲೂ,
ಊರ ಕೇರಿ ತಿರುಗುವೆ ಕಾಡು ಮೇಡ ಅಲೆಯುವೇ,
ಅದುವೇ ಎನ್ನ ಕೂಳಿಗಾಗಿ ಹೊಟ್ಟೆಗಾಗಿ,
ಹೊಸ ಗೂಡೊಂದ ನಿರ್ಮಿಸಿರುವೆ,
ಎನ್ನ ಸಂತತಿಗಾಗಿ ಉನ್ನತಿಗಾಗಿ,
ಹಳ್ಳ ಕೊಳ್ಳಗಳಲ್ಲಿ ಮಿಂದೆದ್ದು ,
ನಲಿವೆ ಸದಾ ಎಂದೆಂದೂ ನಗುತ ,
ಹಸಿರೇ ಎನ್ನ ಉಸಿರೆಂದು, ನಾನಿರುವೆ ಎಂದೆಂದೂ ನೇಸರದಲಿ,
ಮಳೆಯಲಿ ನೆಂದು ಬಿಸಲಲ್ಲಿ ಬೆಂದು,
ಚಳಿಯಲಿ ಕೂತು ನೇನೆಯುವೆ ಎಲ್ಲವ,
ಬೆಚ್ಚನೆಯ ಕಾವೆಂಬ ಹಿತ ಕೊಟ್ಟು,
ನೆರಳಂತೆ ಜೋಪಾನ ಗೈದು,
ಎನ್ನಂತೆ ತನ್ನವರ ಭುವಿಗೆ ತರುವೆ ,
ಎನ್ನೊಡಲ ಮಕ್ಕಳಿಗೆ ತುತ್ತಿಟ್ಟು ಸಲಹುವೆನು,
ಪ್ರೀತಿಯ ಧಾರೆ ಎರೆದು,
ಪರಿವಾರ ಎಂಬ ಬೆಸುಗೆ ಬೆಸೆದು,
ಒಬ್ಬೊಂಟಿಯಾಗಿ ಹಾರಡುವುದ ಕಲಿಸಿ,
ಹಾರಾಡ ಬಯಸುವೆ ನಾನು ಎಲ್ಲೆಡೆ,
ಬಾನಿನಲ್ಲೂ ಭುವಿಯಲ್ಲೂ,
ಎಂದೆಂದೂ ನಲಿಯುವೆ ಹಾರುತ ಕುಣಿಯುತ,
ಬದುಕಿನ ಬಂಡಿ ಸಾಗುವತ್ತ,
ಕಾಲದ ಚಕ್ರ ಸವೆಯುವತ್ತ,
ನಾನು ಹಾರಡ ಬಯಸುವೆ ಎಲ್ಲೆಡೆ,
ಬಾನಿನಲ್ಲೂ ಭುವಿಯಲ್ಲೂ.
- ಭರತ್ ಕೆ ಆರ್ (ಕಾರಭ)
S/o ರಂಗಸ್ವಾಮಿ, ಕಾರೇಕೆರೆ, ಹಾಸನ (ಜಿಲ್ಲೆ), ದೂ : 6363668307.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ