ಬುಧವಾರ, ಅಕ್ಟೋಬರ್ 6, 2021

ಗುರು ಕಂಡ ಮಡಕೆ (ಕವಿತೆ) - ಹೆಸರು: ಗೂಳೇಶ್ ಬಿ ಯಾಗಾಪೂರ.

“ಗುರು ಕಂಡ ಮಡಕೆ”

ನಂದಲ್ಲ ವೆನ್ನುವರು ಗುರು ಕಲಿತ ವಿದ್ಯೆಯನು
ಧಾರೆ ಎರೆಯಲು ಉತ್ಸೂಕರಾಗಿಹರು
ಹೊಸ ವಿಷಯ ತಿಳಿಯಲು ಹೋದರೆ
ಬಾ ನಾಳೆ ಎನ್ನಲು ಮನಸೊಪ್ಪದವರು

ನೀ ಶಿಷ್ಯ ಅಲ್ಲ ಇವ ನನ್ನ ಶಿಷ್ಯ
ಎನ್ನುವ ಮನ ಕಾಣಲಿಲ್ಲ ನಾನೆಂದಿಗೂ
ಪಕ್ಕದಲ್ಲೆ ಕುಳ್ಳಿರಿಸಿ ಕೈ ಹಿಡಿದು ತಿದ್ದಿ
ಹೇಳುವರಲ್ಲ ಜೀವನದ ಪಾಠಗಳನು

ಮಕ್ಕಳ ಪ್ರತಿ ನಡೆಯು ಆಲಿಸುತ
ವಿಧ ವಿಧದ ಆಸಕ್ತಿಗಳ ಕಂಡು
ಪ್ರತಿ ಅಭಿರುಚಿಗೆ ತಕ್ಕಂತೆ ಮಗು ಬೆಳೆಯಲು
ಸದಾ ಪ್ರೋತ್ಸಾಹ ನೀಡುವ ಗುರು ದೇವರಿವರು

ಪ್ರತಿ ದಿನವೂ ತಿದ್ದಿ ಹೇಳುತ, ಆರಂಭದಲ್ಲಿ
ಕೆಸರಿನ ಮುದ್ದೆಯಂತ ಬುದ್ಧಿಯನು
ಸುಂದರ ಮಡಕೆಗಳಾಗಿಸುವ
ಗುರು ಕುಂಬಾರರಿವರು
 - ಗೂಳೇಶ್ ಬಿ ಯಾಗಾಪೂರ
ತಾಲ್ಲೂಕು: ಚಿತ್ತಾಪುರ 
ಜಿಲ್ಲಾ: ಕಲಬುರಗಿ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...