ಮಂಗಳವಾರ, ಅಕ್ಟೋಬರ್ 12, 2021

ಕನ್ನಡಕ ಮತ್ತು ಕೋಲು (ಕವಿತೆ) - ಗೌತಮ್ ಗೌಡ, ಕೀರಣಗೆರೆ, ರಾಮನಗರ.

ಕನ್ನಡಕ ಮತ್ತು ಕೋಲು

ಹಿಂದೆ ಕೋಟಿ ಜನ
ಮುಂದೆ ಸಾವಿರ ಕನಸು..!!
ಕನ್ನಡಕ ಏನನ್ನೋ
ಅನ್ವೇಷಿಸುತ್ತಿದೆಯಲ್ಲ 
ಏನಿರಬಹುದು..??
ಸತ್ಯ..!!
ಹುಸಿಯನುಸಿರುವುದಿಲ್ಲವೆಂದು
ಶಪಥವಾಗಿದೆ..!!
ಹೋ ಹೋ 
ಅದಕ್ಕೆ ಅನ್ವೇಷಣೆ
ಸತ್ಯದ ಅನ್ವೇಷಣೆ..!!
ಚರಕದಿಂದ ನೇಯ್ದ
ಶುಭ್ರ ಶಾಂತಿ ಬಿಳಿ ಪಂಚೆ
ಚಿ ಚಿ ಅರೆ ಬೆತ್ತಲು ಇದು ಯಾಕೋ..??
ನನ್ನವರು ಹರಿದ ಅರಿವೆ ಹುಟ್ಟಿರುವಾಗ
ನನಗೇಕೆ ಸೂಟು ಬೂಟು
ಇದೆ ಸಾಕು ಸರಳವಾಗಿದೆ..!!
ಹೋ ಹಾಗೆ
ಸರಳತೆಯ ರೂಪಕ..!!
ನೆತ್ತರು ಚಿಮ್ಮುವ ಚಾಟಿ ಏಟು
ಕೈಲಿ ಕೋಲಿದೆ ಆದರೆ ಯಾಕೆ
ಕೈ ಎತ್ತಲಿಲ್ಲ..??
ಅಹಿಂಸೆ 
 ಕೋಲು ಸಹ ಅಹಿಂಸೆ ಅನುಯಾಯಿ..!!
ಹೋ ಹೌದೇ ಹಾಗಾದರೆ
ಅಹಿಂಸಾ ಪಾಲಕ..!!
ಗುಂಡಿನ ದಾಳಿಗೆ
ಹೊಡೆದು ಚೂರಾದ ಕನ್ನಡಕ
ಕೈ ಜಾರಿದ ಕೋಲು 
ನೆಲಕ್ಕುರುಳಿದ ಮಹಾಪರ್ವತ
"ಹೈ ಹೈ ಹಿಡಿಯಿರಿ ಅವನನ್ನು
ಗುಂಡಿಕ್ಕಿ"
ಬೇಡ ಬೇಡ ಕನ್ನಡಕವನ್ನು
ಕೊಲನ್ನು ಭದ್ರ ಪಡಿಸಿ ಬಂಧಿಸ ಬೇಡಿ ಜೈ ಶ್ರೀ ರಾಮಾ ಜೈ ಶ್ರೀ ರಾಮಾ..!!
  

 -ಗೌತಮ್ ಗೌಡ, ಕೀರಣಗೆರೆ
ರಾಮನಗರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...