ಶನಿವಾರ, ಡಿಸೆಂಬರ್ 11, 2021

ನಡೆ ಮನವೆ ಬೆಳಕಿನೆಡೆಗೆ (ಕವಿತೆ) - ಶಿವಾನಂದ ಭಾಗಾಯಿ, ಬೆಳಗಾವಿ.

ಬಾಳ ದಾರಿಯಲ್ಲಿ ಬರುವ ಕಷ್ಟಗಳಿಗೆ
ಅಳುಕದೇನೆ ಒಂದು ಘಳಿಗೆ
ನಂಬಿಕೆ/ಭರವಸೆ ಗಳ ದಿವಟಿಗೆ ಹಿಡಿದು
ನಡೆ ಓ ಮನವೆ ಬೆಳಕಿನೆಡೆಗೆ.!!


ಜ್ಞಾನದ ಬೆಳಕಿನಿಂದ ಮರೆಯಾಗಬೇಕು
ನಮ್ಮ ಮನದಲ್ಲಿನ ಅಂಧಕಾರ
ಉತ್ತಮ ನಡೆ ನುಡಿಗಳಿಂದ ಆಗಬೇಕು
ನಮ್ಮಯ ಬದುಕು ಸಾಕ್ಷಾತ್ಕಾರ.!!


ಜೀವನದಿ ಎಷ್ಟೇ ಕಷ್ಟಗಳು ಎದುರಾದರು
ಕುಗ್ಗದಿರಲಿ ನಮ್ಮ ಆತ್ಮವಿಸ್ವಾಸ
ಛಲದಿಂದ ಮುನ್ನುಗ್ಗಿ ಗೆಲುವನು ಸಾಧಿಸಿ
ನಿರ್ಮಿಸಬೇಕು ಹೊಸ ಇತಿಹಾಸ.!!

- ಶಿವಾನಂದ ಭಾಗಾಯಿ , ಬೆಳಗಾವಿ. 


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...