ಶನಿವಾರ, ಡಿಸೆಂಬರ್ 11, 2021

ಸಿದ್ಧಗಂಗಾ ಶರಣರ ಮಾರ್ಗ (ಕವಿತೆ) - ಸಂಗಮೇಶ ಎನ್ ಜವಾದಿ, ಬೀದರ್. ೯೬೬೩೮೦೯೩೪೦.

ಶರಣರ ತತ್ತ್ವ ಅರಿಯಲಾಗದು ನಿಮ್ಮ ನಿಲುವನ್ನು
ಸತ್ಯ ತತ್ತ್ವದ ಉಳಿವಿಗೆ ನೀವೇ ಸಿಹಿಜೇನು!

ಸಾಮಾನ್ಯರ ಸಂಕಲ್ಪದಿ ವಚನಗಳು ಅವತರಿಸಿ
ಜ್ಞಾನ ರತ್ನಲಾಗಿ ಸಾಮಾನ್ಯರ ಸ್ವತ್ತಾಗಿ
ಪ್ರಜಗಳ ಹೃದಯ ಸಿಂಹಾಸನ ಗೆದ್ದು
ಸಮಾನತೆಯ ಕ್ರಾಂತಿಯು ಮೊಳಗೀಸಿದರು ಶರಣರು!

ಶರಣರ ಅರಿಯಲಾಗದು ನಿಮ್ಮ ನಿಲುವನ್ನು,ಷಸತ್ಯದ ತತ್ತ್ವದ ಉಳಿವಿಗೆ ನೀವೇ ಸಿಹಿಜೇನು!

ಅಂಧಾಚಾರವನ್ನು ಅಳಿಸಿ, ಶಿಷ್ಟಾಚಾರವನ್ನು ತಂದರು
ವಚನಗಳಿಂದ ಜ್ಞಾನದ ಜ್ಯೋತಿಯನ್ನು ಬೆಳಗಿಸಿ
ಮನುಜ ಧರ್ಮ ಬೆಳಗಿಸಿದರು ಜಗದಲಿ
ಶಿವಶರಣರೆಲ್ಲಾ ಸೇರಿ ಕಟ್ಟಿದರೆಲ್ಲಾ ಅನುಭವ ಮಂಟಪ
ಜಗಕ್ಕೇಲ್ಲಾ ಸಾರಿದರು ಶರಣು ಶರಣಾರ್ಥಿ ವೆಂಬ
ಶ್ರೇಷ್ಠ ತೇಯ ತ್ಯಾಗದ ಒಡಲಿನ ಕರುಣಿಸಿದ ಪದ

ಪಾವನವಾಯಿತು ಶರಣರ ಸಂಗದ ಸದ್ಗುಣ!

ಶರಣರಅರಿಯಲಾಗದು ನಿಮ್ಮ ನಿಲುವನ್ನು
ಸತ್ಯ ತತ್ತ್ವದ ಉಳಿವಿಗೆ ನೀವೇ ಸಿಹಿಜೇನು!

ಅನುಭವ ಮಂಟಪ ದಲ್ಲಿ ಶರಣರ ಸಂಗವ ಕಟ್ಟಿ
ಅನುಭವ ಅನುಭಾವದ ನೆಲೆಯಲ್ಲಿ ವಚನಗಳು ರಚಿಸಿ
ಕಾಯಕ ತತ್ತ್ವ ವನ್ನು  ಜಾರಿಗೆ  ತಂದರು
ಸಕಲ ಜೀವಿಗಳಿಗೂ ತುಂಬಿದರು ಆಶ್ರಯ ನೀಡಿದ ಸ್ವೋರ್ತಿ
ಕಟ್ಟಿದರು ಕಲ್ಯಾಣ ನಾಡು,ಶರಣರ ಬೀಡು.!

ಶರಣರ ತತ್ತ್ವ ಅರಿಯಲಾಗದು ನಿಮ್ಮ ನಿಲುವನ್ನು
ಸತ್ಯದ ತತ್ವದ ಉಳಿವಿಗೆ ನೀವೇ ಸಿಹಿಜೇನು!

ಶರಣರ ನಿಸ್ವಾರ್ಥದ ಹೋರಾಟದ ಕಿಡಿ
ಸಿಡಿಲು,ಮಿಂಚಿನ ಕೆಚ್ಚೇದೇಯ ಕ್ರಾಂತಿ

ನುಡಿದಂತೆ ನಡೆದರು, ಸೇವೆಯೇ ಶ್ರೇಷ್ಠ ಜೀವನದ ಪಾಲಕರು
ಪ್ರೀತಿ ಪ್ರೇಮ ವ್ಯಾತ್ಸಲದ ಶರಣರು
ದಯವೇ ಧರ್ಮದ ಬುನಾದಿ
ಇದುವೇ ಶರಣರು ಸಾಧಿಸಿದ,ಸಮ ಸಮಾಜದ ಬುತ್ತಿ!!
-ಸಂಗಮೇಶ ಎನ್ ಜವಾದಿ, ಬೀದರ್.
೯೬೬೩೮೦೯೩೪೦

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...