ಅಂಬುಗಳ ಶೂಲ
ಅಂಬುಗಳ ಶೂಲದಿ ಜಗದಿ ತಿವಿದು ಬೀಳಿಸುವರಯ್ಯ
ಅಲ್ಪಮತಿಯಾದರೂ ಜ್ಞಾನಿಯಂತೆ ಕಂಗೊಳಿಸುವರಯ್ಯ
ಸುಜ್ಞಾನಿಗಳ ಕಂಡರೆ ಅಜ್ಞಾನಿಯೆಂದು ಆಡಿಕೊಳ್ಳುವರಯ್ಯ
ಸುಳ್ಳಾಡುತ್ತಲೇ ಸತ್ಯವಂತರೆಂದು ಗುರುತಿಸಿಕೊಳ್ಳುವರಯ್ಯ
ನಿತ್ಯದಿ ಧರ್ಮದಿಂದ ಇರುವವರಿಗೆ ಬೆಲೆ ಎಲ್ಲಿಹುದಯ್ಯ
ಮೇಲೇರುವ ತವಕ ಕೊನೆಗಾಣಿಸುವರಯ್ಯ
ಶ್ರೀ ಮಹೇಶ್ವರ//
ಮಾಯಾ ಮನೆ
ಮಾಯಾ ಮನೆಯೊಳಗೆ ಬಂದಿಯಾಗಿರುವೆನಯ್ಯ
ನಿಜದಿ ಮನೆ ಅಲ್ಲಿಹುದು ಎಂಬುದನ್ನೇ ಮರೆತಿಹೆನಯ್ಯ
ನಾನು ನನ್ನದೆಂಬ ಮೋಹದಲಿ
ಬೇಯುತಿಹೆನಯ್ಯ
ಯಾವುದೂ ಬಾರದು
ನಮ್ಮೊಂದಿಗೆಂಬುದ ಅರಿತಿಲ್ಲವಯ್ಯ
ದ್ರವ್ಯದ ಸಂಗ್ರಹವೇ ಯುಗದಿ ದೊಡ್ಡದಾಯಿತಯ್ಯ
ಧನದಾಹ ಅವನತಿಯ ಮೂಲವಯ್ಯ
ಶ್ರೀ ಮಹೇಶ್ವರ //
- ಸೂಗಮ್ಮ ಡಿ ಪಾಟೀಲ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ