ಬಡತನದ ಹಾದಿಯಲಿ
ಬದುಕು ತೇರನೆಳದು
ತಪ್ಪಾದಂತೆ ತಪವ ಮಾಡಿ
ಯತೀಯ ನನ್ನ ತಂದೆ
ಹಸಿವ ತಿಂದು ನೊಂದರೂನೂ
ಕಂದ ಚಂದ ಇರಲು, ಅದುವೇ
ತನ್ನ ಬದುಕಿನಾನಂದ ಎಂದವನು ನನ್ನ ತಂದೆ
ಇನಿತೂ ಕಷ್ಟ ಬರದ ಹಾಗೆ
ಕಣ್ಣ ರೆಪ್ಪೆ ಸಲುಹಿದಂತೆ
ಸಾಕಿ, ಸಲುಹಿ ಸುಖದಿ
ಬೆಳೆಸಿದವನು ನನ್ನ ತಂದೆ.
ಎಲ್ಲದಕ್ಕೂ ಹೆಗಲ ಕೊಟ್ಟು
ಹಗಲಿರುಲಳೂ ನಿದ್ದೆಗೆಟ್ಟು
ಮಗನ,ಮಗಳ ಕನಸು ನನಸು
ಮಾಡಿದವನು ನನ್ನ ತಂದೆ
ಕಷ್ಟಕಾಲದಲ್ಲೂ ಅಳದೆ, ನೋವನ್ನೆಲ್ಲ ಮರೆತು
ನಗುತ ಎಲ್ಲರನ್ನ ನಗಿಸಿದವನು ನನ್ನ ತಂದ.
- ಶಶಿಕುಮಾರ್ ಬಿ. ಟಿ, ಹಾವೇರಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ