ನೋಡಬನ್ನಿ ನಮ್ಮಿ ಹಂಪಿಯ ಸೊಬಗನುˌˌ
ಹಕ್ಕ-ಬುಕ್ಕರಾಳಿದ ಭವ್ಯತೆಯ ಬೀಡನು ˌˌˌ
ವಿರೂಪಾಕ್ಷ ದೇವತಾ ಹಂಪೆಯ ಆರಾಧ್ಯನುˌˌ
ಭಕ್ತರ ಪಾಲಿನ ಕರುಣಾಮಯಿ ಕಾಮಧೇನು ˌˌˌ
ವಿಜಯನಗರ ದೊರೆಗಳ ಆಳ್ವಿಕೆಯ ಬೀಡಿದುˌˌ
ವಿಶ್ವವನ್ನೇ ಸೆಳೆದ ಮುತ್ತು ರತ್ನದ ನಾಡಿದುˌˌˌ
ತುಂಗಾ ನದಿಯ ದಡದಲಿ ಅರಳಿ ನಿಂತುˌˌˌ
ಪಂಪಾಕ್ಷೇತ್ರವದು ಇಂದು ಹಂಪಿಯಾಯಿತುˌˌˌ
ವಿಜಯವಿಠ್ಠಲ ಹಜಾರ ರಾಮಸ್ವಾಮಿ ದೇಗುಲˌˌˌ
ಕಲ್ಲಿನ ರಥ ಕಣ್ಸೆಳೆವ ಕಮಲಮಹಲ ˌˌˌ
ಸಾಸಿವೆಕಾಳು ಗಣಪತಿ ಅರಳಿದ ಏಕಶಿಲೆಯಲಿˌˌ
ದಿನಗಳು ಸಾಲವು ಸೊಬಗ ಹಿಡಿದಿಡಲು ಮನದಲಿˌˌˌ
ಸಂಗೀತ ಪಾಡುವ ಸಪ್ತಸ್ವರ ಸ್ತಂಭಗಳುˌˌˌ
ಕಣ್ಮನಸೆಳೆಯುವ ಗುಡಿಗೋಪುರಗಳುˌˌˌ
ಹೋಗೋಣ ಹಂಪಿಗೆ ಸೊಬಗ ಸವಿಯೋಣˌˌˌ ಭಾರತವಿದು ಕಲೆಯ ಗೂಡೆಂದು ಸಾರೋಣˌˌˌ
- ಮಧುಮಾಲತಿ ರುದ್ರೇಶ್ ಬೇಲೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ