ಶನಿವಾರ, ಜನವರಿ 15, 2022

ಸ್ಫೂರ್ತಿಯ ಮಹಾ ಚೈತನ್ಯ (ಕವಿತೆ) - ಶಾಂತಾರಾಮ ಶಿರಸಿ.

ಸ್ಪೂರ್ತಿಯ ಮಹಾ ಚೈತನ್ಯ,
ಶ್ರೇಷ್ಠ ಸಂತ, ಶ್ರೇಷ್ಠ ಸನ್ಯಾಸಿ, 
ಶ್ರೇಷ್ಠ ಆಧ್ಯಾತ್ಮಿಕ ಗುರು-ಶಿಷ್ಯರ ಪಡೆದ ಈ ಭರತ ಭೂಮಿ ಧನ್ಯ,
ಸಾಗರದಾಚೆಗಿನ ಜಗಕೆಲ್ಲ ಹಬ್ಬಿಸಿಹರು ಭರತ ಭೂಮಿಯ ಮಣ್ಣಿನ ಶಕ್ತಿ - ಭವ್ಯ ಕೀರ್ತಿ,
ಇವರ ನಡೆ-ನುಡಿ ಇಡಿಯ ಜಗಕೆ ಸ್ಪೂರ್ತಿ...

"ನನ್ನ ಪ್ರೀತಿಯ ಸಹೋದರ-ಸಹೋದರಿಯರೇ" ಎಂಬ ಮಾತಲ್ಲಿನ ಮಾನವತೆಯ ಮಿತ್ರತ್ವ,
ವಿವೇಕಾನಂದರ ಪ್ರತೀ ನುಡಿಯು ಸಾರುವುದು ಶ್ರೇಷ್ಠ ವೇದಾಂತ ತತ್ವ,
ಜಗಕೆ ಸಾರಿ ಹೇಳಿಹರು ಭರತ ಭೂಮಿಯ ಮಣ್ಣಿನ ಸತ್ವ,
ಯಾರ ಎದುರೂ ಕೈಕಟ್ಟಿ ನಿಲ್ಲದೇ ಸ್ವಾಭಿಮಾನದಿ ಬದುಕಬೇಕೆಂದು ಪ್ರತಿಯೊಬ್ಬರಿಗೂ ತಿಳಿ ಹೇಳಿ ಬದುಕಿ ತೋರಿದ ವ್ಯಕ್ತಿತ್ವ...

"ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರೆಂದು"  ಮಲಗಿದ್ದವರನು ಮಾತುಗಳಿಂದಲೇ/ನುಡಿಗಳಿಂದಲೇ  ಬಡಿದೆಚ್ಚರಿಸುವ ಬಿಸಿಯ ಮುಟ್ಟಿಸಿಹರು,
ಗೆದ್ದರೆ ಸಂತೋಷ-ಸೋತರೆ ಅನುಭವ-
ಓ! ಮಾನವ ಸದಾ ಪ್ರಯತ್ನದ  ಪಥದಲ್ಲಿ ಮುನ್ನುಗ್ಗುತ್ತಿರುವ ಎಂಬ ಕರೆಯ ನೀಡಿಹರು,
"ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ;ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ" ವೆಂದಿಹರು,
ಬದುಕಿನಲ್ಲಿ ಗುರಿಯನ್ನೂ ಮೀರಿದ ಸಾಧನೆಯ ಶಿಖರವನ್ನೇರು,
ನೀನು ಏರಿದ ಮಾರ್ಗವ ಎಲ್ಲರೂ ಅನುಸರಿಸುರಿಸಿ ಹಿಂಬಾಲಿಸುಂತೆ ಮಾದರಿಯಾಗಿರು-
ಆದರ್ಶವಾಗಿರು..

ಸದಾಕಾಲ ಕೆಲಸದಲ್ಲಿ ತಲ್ಲೀನನಾಗಿರು- ಕೆಟ್ಟ ವಿಚಾರಗಳ ಸುಳಿಯದಂತೆ ನೋಡಿಕೊಳ್ಳುತ್ತಿರು,
ಮಾರ್ಗದರ್ಶನ ನೀಡುವವರು ಇಲ್ಲವೆಂದು ಕೊರಗದಿರು- ಹೊಸ ಮಾರ್ಗವ ಸೃಷ್ಟಿಸುವ ಧೈರ್ಯ- ತಾಕತ್ತು ನಿನ್ನಲ್ಲೇ ಇದೇ ಎಂಬುದನ್ನು ಮರೆಯದಿರು- ನುಗ್ಗಿ ಮುಂದೆ ನಡೆಯುತಿರು,
ಶತ್ರುಗಳ ಎದುರಲ್ಲೇ ಬದುಕನ್ನು ಕಟ್ಟಿ - ಗಟ್ಟಿಯಾಗಿ ನೆಲೆಯೂರು-
ಬದುಕುವ ಆ ಛಲಕ್ಕೆ ಬಲಬಂದಂತಾಗುವುದು ಶತ್ರುಗಳು ಸುಳಿದಾಗ ನಿನ್ನ ಎದುರು,
ಒಂದೇ-ಎರಡೇ ಬದುಕಿಗೆ ಭರವಸೆಯ ನೀಡಿ ಬದುಕಿಸುವ ಸ್ಫೂರ್ತಿಯ ಹಿತ ನುಡಿಗಳು ಸಾವಿರಾರು-ನಿತ್ಯ ಅವುಗಳ ಅರಿತು ಬದುಕುತಿರು...

ನನ್ನ ಭರತ ಭೂಮಿ ವಿಶ್ವಗುರು, 
ನನ್ನ ಭರತ ಭೂಮಿ ಆಧ್ಯಾತ್ಮಿಕ ಸನಾತನ ಧರ್ಮದ ಬೇರು,
ನನ್ನ ಭರತ  ಭೂಮಿ ಆಚಾರ-ವಿಚಾರ-ಉಪಚಾರ ಸಂಸ್ಕೃತಿ-ಸಂಪ್ರದಾಯಗಳ ತವರು,
ಕತ್ತಲೆಯ ಅಜ್ಞಾನವನ್ನು ತೊಲಗಿಸಿ ಬೆಳಕಿನ ಜ್ಞಾನದೆಡೆಗೆ  ಮಾರ್ಗವ ತೋರುವ ಗುರು ಸ್ವಾಮಿ ವಿವೇಕಾನಂದರು.. 

ವಿವೇಕಾನಂದರ ನುಡಿಗಳು ಬದುಕಿನಲ್ಲಿ ಭರವಸೆಯ ತುಂಬುವ ಸ್ಪೂರ್ತಿಯ ರತ್ನ, 
ಅವರ ಸಂದೇಶದ ನುಡಿಗಳು ಮಿಂಚಿನ ವೇಗದ ಗತಿಯ ಹೊಂದಿ 'ವಿವೇಕವಾಣಿ'-'ವಿದ್ಯುತ್ ವಾಣಿ'ಯಾಗಿ ಜಗದೆಲ್ಲೆಡೆ ಹರಡಿ ಸೃಷ್ಚಿಸಿಹವು ಸಂಚಲನ, 
ದೇಶದ ಕುರಿತಾಗಿ ಯುವ ಜನಾಂಗದ ಕುರಿತಾದ ಅವರ ಹಂಬಲಕ್ಕೆ  ಸ್ಪೂರ್ತಿಯ ಬೆಂಬಲವ ನೀಡುವ "ರಾಷ್ಟೀಯ ಯುವದಿನ", 
"ಈ ಪ್ರಪಂಚ ಒಂದು ಗರಡಿ ಮನೆ;ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ" ಬಲಿಷ್ಠರಾಗುತ್ತಾ  ನಮ್ಮನ್ನು ನಾವು ಜಯಿಸುತ್ತಾ ಗುರಿಯ ಕಡೆಗೆ ಸಾಗುತಿರಲಿ ನಮ್ಮ ಯಾನ, 
"ವಿಕಾಸವೇಜೀವನ;
ಸಂಕೋಚವೇ ಮರಣ,
ಪ್ರೇಮವೆಲ್ಲಾ ವಿಕಾಸ;
ಸ್ವಾರ್ಥವೆಲ್ಲಾ ಸಂಕೋಚ, 
ಆದುದರಿಂದ ಪ್ರೇಮವೇ ಬದುಕಿನ ಧರ್ಮ,"ವೆಂದು "ಆದರ್ಶ ಭಾರತ"ದ ಕನಸಿನ ಬೀಜವ ಬಿತ್ತಿದ
ಸ್ಪೂರ್ತಿಯ ಚೈತನ್ಯ 
ಮಹಾಪುರುಷನಿಗೆ ನಮನ...

- ಶಾಂತಾರಾಮ ಶಿರಸಿ, 
ಉತ್ತರ ಕನ್ನಡ... 
8762110543
7676106237


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಸಿಸಿ 9448713659 ವಾಟ್ಸಪ್ ಮಾತ್ರ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...