ಈ ಒಮಿಕ್ರಾನ್ ಎಂಬ ಮಹಾಮಾರಿ ಬಂದಿದ್ದು ಎಷ್ಟರ ಮಟ್ಟಿಗೆ ನಿಜವೋ.., ಸುಳ್ಳೋ ಎಂಬ ಪ್ರಶ್ನೆ ದಿನವಿಡೀ ಕಾಡುತ್ತಿದೆ. ಆದರೆ ನಾವೆಲ್ಲ ಅಕ್ಷರಸ್ಥರಾಗಿರುವುದರಿಂದ ಇದನ್ನು ನಂಬಲೇ ಬೇಕಾದದ್ದೂ ಅನಿವಾರ್ಯ. ಈ ಮಹಾಮಾರಿಯ ಹೆಸರಲ್ಲಿ ಮಾಡಲಾಗುತ್ತಿರುವ ಈ ಲೌಕ್ಡೌನ್, ಹಳ್ಳಿಗರು ಮತ್ತು ಬಡ-ಬಗ್ಗರ ಮೇಲಾಗುವ ಪರಿಣಾಮ ಅಷ್ಟಿಷ್ಟಲ್ಲ. ನಿಜಕ್ಕೂ ಒಂದೊಪ್ಪತ್ತಿನ ಕೂಳಿಗೂ ದಿನಗೂಲಿ ಮಾಡುವ ಜನ ಈ ಸಮಾಜದಲ್ಲಿದ್ದಾರೆ. ಸರ್ಕಾರಿ ಉದ್ಯೋಗಸ್ಥರಾದರೇ ಹೇಗೂ ಅವರವರ ಸಂಬಳ ಸಮಯಕ್ಕೆ ಸರಿಯಾಗಿ ಮಾಸ ಮಾಸುವುದರೊಳಗೆ ಕೈ ಸೇರುತ್ತದೆ. ಸರ್ಕಾರಿ ನೌಕರಸ್ಥರಲ್ಲದ ನಮ್ಮ ರೈತರು, ಕೂಲಿ ಕಾರ್ಮಿಕರು ದುಡಿದು ತಿನ್ನದೇ ಬೇರೆ ದಾರಿ ಇಲ್ಲ. ಇಷ್ಟಕ್ಕೂ ಈ ಮಹಾಮಾರಿ ಶನಿವಾರ ರವಿವಾರ ಗಳಿಗೆ ಮಾತ್ರ ನುಸುಳುತ್ತದೆಯೋ.!? ಹಾಸ್ಯವೆನಿಸುತ್ತೆ ಅಲ್ವಾ? ಕಳೆದ ಬಾರಿಯ ಲಾಕ್ಡೌನ್ ಪರಿಣಾಮದಿಂದ ಮಹಾಮಾರಿಗೆ ತುತ್ತಾದವರೆಷ್ಟೋ ಹಾಗೆ ಕುಟುಂಬ ನಡೆಸಲಾಗದ ಅದೆಷ್ಟು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಾಕ್ಡೌನ್ ಘೋಷಣೆಯಾಗಿದ್ದೇ ತಡ ಈ ಪೋಲೀಸ್ ಇಲಾಖೆಯವರು ಎಲ್ರಿಗೂ ಮಾನವೀಯತೆ ಇಲ್ಲದವರಂತೆ ಚಚ್ಚುತ್ತಿದ್ದಾರೆ. ತಮ್ಮ ಹೆಂಡ್ತಿ ಮಕ್ಳು, ಬೀದಿಲಿ ಬಂದು ತಮ್ಮಿಷ್ಟದ ದಿನ ಬಳಕೆ ವಸ್ತುಗಳನ್ನ ತರಕಾರಿಗಳನ್ನು ಕೊಳ್ಳಬಹುದು, ಆದರೆ ಜನ ಸಾಮಾನ್ಯರಿಗೆ ಈ ಅವಕಾಶ ಇಲ್ಲ. ಅಲ್ವಾ? ಪೋಲೀಸರಿಗೆ ಇದೊಂದು ಹುಡುಗಾಟಿಕೆಯಾಗಿದೆ. ನಮ್ಮ ರಕ್ಷಣೆಗಾಗಿ ಹೋರಾಟ ಮಾಡ್ತಾರೆ ಅನ್ನೋದು ಎಷ್ಟ್ ಸತ್ತ್ಯಾನೋ.., ಅವರ ಅಹಂಮ್ಮಿಕೆ, ದರ್ಪವನ್ನು ಅಮಾಯಕ ಮುಗ್ದ ಸಾರ್ವಜನಿಕರ ಮೇಲೆ ತೋರಿಸ್ತಿದಾರೆ ಅನ್ನೋದು ಅಷ್ಟೇ ಸತ್ಯ. ಕಾನೂನಿನ ಚೌಕಟ್ಟಿನ ಎಲ್ಲೆಯನ್ನು ಮೀರಿ ಹಿಗ್ಗ-ಮುಗ್ಗ ಹೊಡಿಯೋದು ಯಾವ್ ಸೀಮೆ ಲಾಕ್ಡೌನ್ ರಿ. ವಿಶೇಷವಾಗಿ ಯಾದಗಿರಿ ಜಿಲ್ಲಾ ಪೋಲೀಸರು ಒಬ್ಬ ರೈತನಿಗೆ ಬಡಿಯೋದನ್ನ ಒಂದು ದೃಶ್ಯದಲ್ಲಿ ನೋಡ್ದೆ. ಆ ರೈತ, ಹೊಲಕ್ಕೆ ರಾಸಾಯನಿಕ ಗೊಬ್ಬರವನ್ನು ತರಲು ಪಟ್ಟಣಕ್ಕೆ ಹೋಗಿದ್ದೇನೆಂಬುದರ ಕುರಿತು ಪೋಲೀಸರ ಕಾಲುಗಳನ್ನಿಡಿದರೂ ಮತ್ತೆ ಮಾನವೀಯತೆ ಕಳೆದುಕೊಂಡ ಪೋಲೀಸರು ಒಬ್ಬ ರೈತನನ್ನು ಹೊಡೆತದಿಂದ ಕಣ್ಣೀರಿಗೆ ತಳ್ಳಿದರು. ನಿಜಕ್ಕೂ ಆ ದೃಶ್ಯ ಯಾದಗಿರಿ ಜಿಲ್ಲೆಯ ಬಹಳಷ್ಟು ಜನ ಸಾಮಾನ್ಯರು ಪೋಲೀಸರ ವಿರುದ್ಧ ರೊಚ್ಚಿಗೇಳುವಂತೆ ಮಾಡಿದೆ. ರೈತ ಸಮಂಜಸವಾದ ಸಾಕ್ಷಾದಾರದ ಕಾರಣ ಕೊಟ್ಟರೂ ಸಹಿತ ಲಂಚದ ಲಾಟಿಯಿಂದ ಹೊಡೆಯುವುದನ್ನ ನಿಲ್ಲಿಸದ ಪೋಲೀಸರು ಎಷ್ಟು ಕಟುಕತನಕ್ಕಿಳಿದಿದ್ದಾರೆಂದು ಯೋಚಿಸಿ. ನಾನು ಗಮನಿಸಿದ ಪ್ರಕಾರ ಯಾದಗಿರಿ ಜಿಲ್ಲೆಯಲ್ಲಿ ಕೆಲ ಹಂತದ ಪೋಲೀಸ್ ಹುದ್ದೆಯಲ್ಲಿರುವವರು ಈ ಲಾಕ್ಡೌನ್ ಸಮಯವನ್ನು ಜನರನ್ನು ಚಚ್ಚುವುದಕ್ಕಾಗಿಯೇ ಬಳಸಿಕೊಂಡಿದ್ದಾರೆ. ಸರ್ಕಾರದ ಹಾಗೂ ಕಾನೂನಿನ ಚೌಕಟ್ಟನ್ನೇ ಮೀರಿ ಅಧಿಕಾರ ಚಲಾಯಿಸುವ ಎಲ್ಲಾ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು, ಪೋಲಿಸ್ ಇಲಾಖೆಯವರಿಗೆ ನನ್ನ ಕ್ರಾಂತಿಕಾರಕ ಧಿಕ್ಕಾರ. ಒಮ್ಮೆ ತಾವು ಒಪ್ಪತ್ತಿಗಿಲ್ಲದವರ ಸ್ಥಾನದಲ್ಲಿ ನಿಂತು ಮಾತನಾಡಿ, ಆ ಅನುಭವದಲ್ಲೊಮ್ಮೆ ಮುಳುಗಿ, ಆ ನೋವು ಯಾತನೆ ಏನೂ ಅಂತ ನಿಮಗೇ.. ಗೊತ್ತಾಗುತ್ತೆ. ಅಧಿಕಾರ ಇದೆ ಅಂದ ಮಾತ್ರಕ್ಕೆ ಅದನ್ನು ಅಸ್ತವ್ಯಸ್ತವಾಗಿ (ದುರುಪಯೋಗ) ಬಳಸಿಕೊಳ್ಳೋದು ಸರಿ ಅಲ್ಲ. ಅಧಿಕಾರ ಎಷ್ಟೇ ಇದ್ರೂ ಅದು ಜನ ಸಾಮನ್ಯರಿಂದಲೇ ಲಭ್ಯ ಎನ್ನುವುದು ಗಮನದಲ್ಲಿರಲಿ. ಅಧಿಕಾರ ಚಲಾವಣೆಯ ಮೇಲೆ ಹಿಡಿತವರಲಿ, ಇಲ್ಲವೇ ಜನ ಸಾಮನ್ಯಾರು ರೊಚ್ಚಿಗೆದ್ದ ಪಕ್ಷದಲ್ಲಿ ಅನಾಹುತವೇ ಸಂಭವಿಸ ಬಹುದು ಎಚ್ಚರ..! ಹಾಗೆಯೇ ಯಾದಗಿರಿ ಜಿಲ್ಲೆಯ ಪೋಲೀಸ್ ಇಲಾಖೆಯ ತಂಡ ತಮ್ಮ ಮಾತಿನ ಮೇಲೆ ನಿಗ ಇರಲಿ, ಸಾರ್ವಜನಿಕರಿಗೆ ಅಶ್ಲೀಲವಾಗಿ ಬೈಯ್ಯುತ್ತಿರುವ ಅದೆಷ್ಟೋ ದೃಶ್ಯಗಳು ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಇದು ಸರಿಯಲ್ಲ. ಇಲಾಖೆಗೆ ಮಸಿ ಬಳಿಯುವ ಕೆಲಸ ಮಾಡದಿರಿ. ಸಾರ್ವಜನಿಕರಿಗೆ ಮಹಾಮಾರಿಯ ಕುರಿತು ತಿಳಿ ಹೇಳಿ. ನಿಯಮಗಳನ್ನು ಪಾಲಿಸಲು ತಿಳಿಸಿ. ಇದನ್ನೊರೆತು ಕಿರಿ-ಹಿರಿಯರನ್ನೂ ನೋಡದೇ ಮನಬಂದಂತೆ ಹೊಡೆದರೆ ಮಾನವೀಯತೆ ತನ್ನ ಅರ್ಥವನ್ನೇ ಕಳೆದುಕೊಳ್ಳಬಹುದು.
— ಯಸಾಚಿಂ ಯಾದಗಿರಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಸೂಪರ್
ಪ್ರತ್ಯುತ್ತರಅಳಿಸಿ