ಶನಿವಾರ, ಜನವರಿ 15, 2022

ಮಗುವಾಗಿರು (ಕವಿತೆ) - ನಂದಿನಿ ರಾಜಶೇಖರ್, ಹಾಸನ.

ಸಿದ್ಧನಾಗು ಬದುಕ ಉದ್ದಗಲ ನೋಡಲಿಕ್ಕೆ
ಜಗದ ಸೌಂದರ್ಯ ಅಸ್ವಾದಿಸಲಿಕ್ಕೆ
ಮಗುವೇ ನೀ ಮುಗುವಾಗಿರು
ಇಲ್ಲಿಯ ಕಿಷ್ಕಿಂದೆಗಳು ಬೇಡ ನಿನಗೆ

ನೋಡಲು ಸುಂದರ ಮುಖದ ಹಿಂದಿರುವ
ಕೆಟ್ಟ ಮನದ ಅನಾವರಣವಾಗುವ ಘಳಿಗೆ
ನಿನ್ನ ನೋಡಿ ತಾಯಿ ಜೀವ ಸಂತಸ ಪಡುವುದು
ಪಟ್ಟ ಕಷ್ಟಗಳೆಲ್ಲವ ಕ್ಷಣದಲ್ಲಿ ಮರೆಯುವಳು

ಇರುವರು ಕೆಲವರು ನಿನ್ನಂತೆ
ಸುಂದರ ಮನಸುಳ್ಳವರು
ಕಷ್ಟ ಕಾರ್ಪಣ್ಯಗಳ ಮೆಟ್ಟಿ ನಿಂತು
ಪರರಿಗೂ ಸಹಾಯ ಮಾಡುವ ವರು

ನಿನ್ನ ಪುಟ್ಟ ಕಂಗಳಲ್ಲಿ ನೂರು ಕೌತುಕವ ಹೊತ್ತಿರುವೆ
ಹೆತ್ತವರ ಬಾಳಿಗೆ ಜ್ಯೋತಿ ನೀ ಆಗಿರುವೆ
ಆಗು ನೀ ನಿನ್ನ ಪ್ರೀತಿಸುವವರಿಗೆ ಆಸರೆ
ಪ್ರೀತಿಸು ಗೌರವಿಸು ನಿನ್ನವರ ಮನಸಾರೆ
- ನಂದಿನಿ ರಾಜಶೇಖರ್, ಹಾಸನ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...