ಹರಿದ ಅಂಗಿ ಕಚ್ಚೆ ತೊಟ್ಟು
ಕುರುಚಲು ಗಡ್ಡ-ಮೀಸೆ ಬಿಟ್ಟು
ಉರಿ ಬಿಸಿಲಲ್ಲಿ ಬರಿಮೈಲಿ ನಿಂತು
ಬೆವರ ಹನಿಯ ನೆಲಕ್ಕೆ ಬಸಿದು
ಜೀವನ ಜಂಜಾಟಕ್ಕೆ ಸಿಕ್ಕು ವಿದ್ಯೆಯಿಂದ ವಂಚಿತವ
ಮಕ್ಕಳಿಗೆ ಜ್ಞಾನದ ಸುಧೆ ಎರೆದವ
ಆಸೆ-ಆಕಾಂಕ್ಷೆಗಳಿಗೆ ತರ್ಪಣವ ಬಿಟ್ಟು
ತನ್ನವರಿಗಾಗಿ ಜೀವನವನ್ನೇ ಮುಡಿಪಾಗಿಟ್ಟವ
ತಾನುಣ್ಣುವ ತುತ್ತಲಿ
ಮನೆಯೊಡತಿ-ಮಕ್ಕಳ ಹೊಟ್ಟೆ ತುಂಬಿಸಿ
ಹಸಿದೊಟ್ಟೇಲಿ ಮಲಗಿದವ
ಹೊಟ್ಟೆತುಂಬಿತೆಂದವ
ಮಕ್ಕಳು ಬಿಟ್ಟ ಎಂಜಲನ್ನು ಪ್ರೀತಿಯಿಂದ ಉಂಡವ
ಕಣ್ಣೀರಲಿ ಕೈತೊಳೆದು ಪ್ರೇಮದಿಂದ ಸಲುಹಿದವ
ಕಷ್ಟಗಳೆಂಬ ಶರಗಳಿಗೆ ಕವಚವಾಗಿ ಮುಗ್ಗರಿಸಿದವ
ಮೈಯೊಳಗಿನ ರಕ್ತ ಬಸಿದು ಸಿರಿಸಂಪತ್ತ ಗಳಿಸಿದವ
ಮಮತೆ-ಸ್ಪೂರ್ತಿಯ ಸೆಲೆಯಾಗಿ
ಪ್ರೇಮದ ಜ್ಯೋತಿಯಾಗಿ
ಬಾಳೆಂಬ ಗಾಣಕ್ಕೆ ಎತ್ತಾಗಿ ಸವೆದವ
ಮನೆತನದ ಗೌರವವನ್ನು ಕಣ್ರೆಪ್ಪೆಯಾಗಿ ಕಾಯ್ದವ.
-ರಾಮಾ.
(ರಾಮಲಿಂಗ ಮಾಡಗಿರಿ).
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ