ಕೆರೆ ದಂಡೆ ಮೇಲೆ ನಿಂತುಕೊಂಡು
ಮಲ್ಲಿಗೆ ದಂಡೆ ಹೂವ ಮುಡಕೊಂಡು
ಶಶಿಯಂತ ಮೊರೆಯವಳೇ ನೀನ್ಯಾರೆ
ಮುದ್ದು ಚೆಲುವೆ ನೀನ್ಯಾರೆ ನೀನ್ಯಾರೆ//೧//
ಕಿಲಕಿಲನೆ ನಗುತ ನೆಲವನ್ನೇ ಕೆರೆಯುತ
ಹೃದಯವ ಕಲುಕುವ ಹೆಣ್ಣೇ,ನೀನ್ಯಾರೆ
ತುಂಬು ಮನದ ಚೆಲುವೆ ನೀನ್ಯಾರೆ
ನೀನ್ಯಾರೆ ನೀನ್ಯಾರೆ ನೀನ್ಯಾರೆ//೨//
ಉದ್ದನೆ ನಾಗರ ಜಡೆಯವಳೇ
ಜಿಗಿಯುವ ಜಿಂಕೆಯ ನಡೆಯವಳೆ
ಹೊಳೆಯುವ ಸೌಂದರ್ಯವತಿಯೇ
ನೀನ್ಯಾರೆ ನೀನ್ಯಾರೆ ನೀನ್ಯಾರೆ//೩//
ಹಣೆಯಲಿ ರವಿಯಂತ ಬೊಟ್ಟುಯಿಟ್ಟು
ಅಂದದ ಕಣ್ಣಿಗೆ ಕಾಡಿಗೆಯಿಟ್ಟು
ಬಂಗಾರದ ಮೂಗುತಿ ತೊಟ್ಟವಳೇ
ನೀನ್ಯಾರೆ ನೀನ್ಯಾರೆ ನೀನ್ಯಾರೆ//೪//
ಕೈಗೆ ಬಣ್ಣ ಬಣ್ಣದ ಬಳೆಯ ತೊಟ್ಟು
ಬೆಳ್ಳಿ ಕಾಲ್ಗೆಜ್ಜೆಯ ನಾದವ ಕೊಟ್ಟು
ಮಂದಹಾಸ ಬೀರುತ್ತ,ತುಂಟನಗೆ ಚೆಲ್ಲುತ್ತ
ಬಿಂಕದ ಸುಂದರಿ ನೀನ್ಯಾರೆ ನೀನ್ಯಾರೆ//೫//
ಬಳುಕುವ ನಡೆ ಚಂದ ಕೋಗಿಲೆಯ ನುಡಿ ಚೆಂದ
ಮಾಣಿಕ್ಯದಂತ ನುಡಿಯವಳೆ ನೀನ್ಯಾರೆ
ನವಿಲಂತ ವೈಯ್ಯಾರಿ ಸೊಬಗಿನ ಬಂಗಾರಿ
ನೀನ್ಯಾರೆ ನೀನ್ಯಾರೆ ನೀನ್ಯಾರೆ//೬//
ವನಕೆಲ್ಲ ಹಸಿರಾಗಿ ಪ್ರಾಣಕ್ಕೆ ಉಸಿರಾಗಿ
ನನ್ನ ಕನಸ ಕದ್ದ ಕಣ್ಮಣಿ ನೀನ್ಯಾರೆ
ಮನವ ಕಲಕುತ ಕಿಲಕಿಲನೆ ನಗುತ
ನೀರ ಹೊತ್ತು ಬರುವವಳೇ ನೀನ್ಯಾರೆ ನೀನ್ಯಾರೆ//೭//
ಚಿತ್ತದಿ ರಂಗಿನ ಚಿತ್ತಾರ ಪಡೆದು ನೀ ಆಕಾರ
ಹರಿಯುವ ನೀರಂತೆ ಜೇನಿನ ಹೊಳೆಯಂತೆ
ಗುಡಿಯೊಳಗೆ ಎಂದು ನೀ ಬರುವೆ ನನಾ ಚೆಲುವೆ
ತುಂಬು ಮನದವಳೇ ನೀನ್ಯಾರೆ ನೀನ್ಯಾರೆ//೮//✍️
- ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಸಾಹಿತಿ ನಟ ಸಂಘಟಕ
ಅಂಚೆ ಜೀವ ವಿಮೆ ಮಂಡ್ಯ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಜಾನಪದ ಶೈಲಿಯ ರಚನೆ ತುಂಬಾ ಹಿಡಿಸಿತು. ನೀವೊಬ್ಬ ಅದ್ಬುತ ಬರಹಗಾರ ಎಂಬುದರಲ್ಲಿ ಅನುಮಾನವಿಲ್ಲ. ಶುಭವಾಗಲಿ 🌹
ಪ್ರತ್ಯುತ್ತರಅಳಿಸಿ