ಶನಿವಾರ, ಜನವರಿ 8, 2022

ತೊರೆದು ಆಡಂಬರ ಬದುಕಿಹರು (ಕವಿತೆ) - ಶ್ರೀ ತುಳಸಿದಾಸ ಬಿ ಎಸ್

ಕನ್ನಡ ನಾಡಿನ ಹೆಮ್ಮೆಯ ಸತಿ ಪತಿ
ಚಿನ್ನದ ಬುದ್ದಿಯ ಸಾಧಕರು ಇರ್ವರೂ
ಪಣ ತೊಟ್ಟು ಮೇಲೆದ್ದು ಬಂದಾರೊ

ಮೂರ್ತಿ ದಂಪತಿ ಕೂಡಿ ಹೆಸರು ಕೀರ್ತಿಯ ಪಡೆದು
ಸಂಕುಚಿತ ಸ್ವಾರ್ಥಗಳ ತೊರೆದಾರೊ ಈ ಜಗಕೆ
ಬದುಕುವುದು ಹೇಗೆಂದು ಕಲಿಸಿಹರು

ಡಾಲರು ಸೊಸೆಯಾಗಿ ಋಣವನ್ನು ತೀರಿಸುತ 
ಮೃದು ಮನದಿ ಪರದಿಯ ತಾ ದಾಟಿ 
ಈ ಜಗದಿ ಗುಟ್ಟೆಲ್ಲ ಹೇಳುತ ನಡೆದಾರೋ

ಪದ್ಮಕ್ಕೆ ಸಿರಿಯಾಗಿ ಪದ್ಮಭೂಷಣರಾಗಿ
ಗಾಂಧಿ ಪ್ರತಿಮೆಗೆ ನೆರವಾಗಿ ನೊಂದವರ
ವಿದ್ಯೆ ಬುದ್ದಿಗೆ ವರವಾಗಿ

ಕಟ್ಟಿ ಬೆಳಿಸಿದ ಸಂಸ್ಥೆ ಹಲವರಿಗೆ ನೆರಳಾಗಿ
ಗಟ್ಟಿಗೊಂಡಿಹದು ಜಗದೊಳಗೆ ನಿತ್ಯವು
ಜುಟ್ಟಿಗೆ ಮಲ್ಲಗೆಯ ನೀಡುತಲಿ

ಧರೆಯೊಳಗೆ ಉತ್ತಮರು ಸರಳತೆಗೆ ಪ್ರತಿರೂಪ
ಸುರ ಲೋಕ ನಾಚೋ ಸಂಪತ್ತು ಬಳಿಯಿರಲು
ತೊರೆದು ಆಡಂಬರ ಬದುಕಿಹರು

(ಇನ್ಫೋಸಿಸ್ ನ ನಾರಾಯಣ ಮೂರ್ತಿ ದಂಪತಿಗಳ ಕುರಿತಾದ ಕವಿತೆ)
- ಶ್ರೀ ತುಳಸಿದಾಸ ಬಿ ಎಸ್ ಶಿಕ್ಷಕರು, ರಾಯಚೂರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...