ಮಂಗಳವಾರ, ಮಾರ್ಚ್ 7, 2023

ಹೋಳಿ ಸಂಭ್ರಮ - ಮಧುಮಾಲತಿ ರುದ್ರೇಶ್, ಬೇಲೂರು.

ರಂಗಿನಾಟದ ಬಣ್ಣದೋಕುಳಿ ಹೋಳಿ ಹೋಳಿ
ರಾಧಾಕೃಷ್ಣರ ಪ್ರೇಮದ ರಂಗಿನೋಕುಳಿ.
ಕಾಮದಹನವ ನೆನಪಿಸುವ ಹಬ್ಬವಿದು
ತಾಮಸ ಗುಣಗಳ ದಹಿಸಿರಿ ಎನ್ನುವ ಪರ್ವವಿದು

ವಯಸಿನ ಭೇದವಿಲ್ಲದೆ ಸಂಭ್ರಮಿಸುವ ಘಳಿಗೆಯದು
ರಂಗಿನ ಬಣ್ಣಗಳಲಿ ಮಿಂದೇಳುವ ಸಮಯವದು

ಶಿವನ ಸಮಾಧಿ ಸ್ವರೂಪವ ಭಂಗಗೊಳಿಸಿದ ದಿನವದು
ತ್ರಿನೇತ್ರನ ಕೆಂಗಣ್ಣಿಗೆ ಕಾಮದೇವ ಬಲಿಯಾದ ಕ್ಷಣವದು.

ಕಾಮˌ ಕ್ರೋಧˌ ಮದˌ ಮಾತ್ಸರ್ಯವ ದಹಿಸೋಣ
ಸ್ನೇಹ ಸಮರಸ ಬಾಂಧವ್ಯದ ಸಿಹಿ ಹಂಚೋಣ.

ಬಣ್ಣಗಳ ಓಕುಳಿಯಲಿ ತೇಲಿ ಸಂಭ್ರಮಿಸೋಣ
ಮಳೆಬಿಲ್ಲಿನ ವರ್ಣಗಳ ಎರವಲು ಪಡೆಯೋಣ.

ಮನದಿ ತುಂಬಿದ ಅಸುರ ಗುಣಗಳ ನಿರ್ನಾಮ ಮಾಡುತ
ಭೇದ ಮರೆತು ಭಾವೈಕ್ಯತೆಯ ಬಂಧ ಬೆಸೆಯುತ.

ಮನಕೆ ಕವಿದ ಜ್ಞಾನಾಂಧಕಾರವ ಸರಿಸೋಣ
ವಿವಿಧವರ್ಣದಿ ಕಂಗೊಳಿಸುತ ಶಾಂತಿ ಮಂತ್ರ ಪಠಿಸೋಣ.

 - ಮಧುಮಾಲತಿ ರುದ್ರೇಶ್, ಬೇಲೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...