ಮಂಗಳವಾರ, ಮಾರ್ಚ್ 7, 2023

ಜಗದ ಜನ್ಮದಾತೆ (ಕವಿತೆ) - ಕುಮಾರಿ ಕಾಜಲ ಎ. ಹೆಗಡೆ.

ರೂಪದಿ ನೋಡಲು ಸೌಂದರ್ಯದಂತೆ
ಸಂಸಾರ ಮಾಡಲು ಚಾನಾಕ್ಷತೆ
ತೋರುವಳು ಎಲ್ಲರಲ್ಲೂ ಮಮತೆ
ಅವಳೇ ತಾಯಿ ಜನ್ಮದಾತೆ...

ಕಷ್ಟದ ಸಮಯಕ್ಕೆ ವೀರವನಿತೆ
ಸುಖದ ಸನ್ನಿವೇಶಕ್ಕೆ ಖುಷಿದಾತೆ
ಕೋಪದಲ್ಲಿ ಕಣ್ಣು ಕಾಳಿಯಂತೆ
ಸೋಲಳು ಎಂದೂ ಈ ಧೀರವಂತೆ...

ನಡೆದ ದಾರಿಯೂ ಪಾವನದಂತೆ
ತಂದೆ ಮನೆಗೆ ಸರಸ್ವತಿ ಯಂತೆ
ಅತ್ತೆ ಮನೆಗೆ ಅಪರೂಪದ ಲಕ್ಷ್ಮಿಯಂತೆ
ಬೆಳಗುವಳು ಜಗಕೆ ಜ್ಯೋತಿಯ ಹಣತೆ...

ಕೆಲಸದಲ್ಲಿ ಬಾಡದ ಹೂವಿನಂತೆ
ಶಿಕ್ಷಣ ಕ್ಷೇತ್ರಕ್ಕೆ ಅಕ್ಕರ ಶೂರತೆ
ಪತಿಯ ಜೋತೆ ಧರ್ಮ ದೇವತೆ
ವರ್ಣಿಸಲಾಗದು ಈ ಹೆಣ್ಣಿನ ಮಹತ್ವತೆ...

- ಕುಮಾರಿ ಕಾಜಲ ಎ. ಹೆಗಡೆ.
ನವಲಿಹಾಳ, (ಚಿಕ್ಕೋಡಿ).


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...