ವಿಶ್ವನಾಥದತ್ತ ಭುವನೇಶ್ವರಿಯವರ ನೆಚ್ಚಿನ ಪುತ್ರನೀತ
ನರೇಂದ್ರನಾಥದತ್ತ ನಾಮವ ಧರಿಸಿದ ಪುತ್ರನೀತ
ಶಿಕ್ಷಣದೊಂದಿಗೆ ಅಧ್ಯಾತ್ಮಿಕತೆ ಅರಿತವನೀತ
ವಿವೇಕ ಹೊತ್ತ ಆನಂದನಾಗಿ ದೀಕ್ಷೆ ಪಡೆದವನೀತ..!!
ಪರಮಹಂಸರ ಮೆಚ್ಚಿನ ಶಿಷ್ಯರಾಗಿ
ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ವೀರ ಸನ್ಯಾಸಿಯಾಗಿ
ರಾಜಯೋಗ ಕರ್ಮಯೋಗ ಭಕ್ತಿಯೋಗ ರಚಿಸಿದವರಾಗಿ
ಜನಸೇವೆಯೇ ಜನಾರ್ದನ ಸೇವೆ ಎಂದ ಯೋಗಿ..!!
ವಿಶ್ವಕ್ಕೆ ಸಹೋದರತೆ ಭಾಂದವ್ಯ ತಿಳಿಸಿದಾತ
ಸ್ತ್ರೀಯರನ್ನು ಗೌರವದಿಂದ ಜಗನ್ಮಾತೆ ಎಂದಾತ
ವಿದೇಶಗಳಲ್ಲೂ ವೇದಾಂತ ಕೇಂದ್ರಗಳ ಸ್ಥಾಪಿಸಿದಾತ
ಯುವಕರಲ್ಲಿಯೇ ಶ್ರೇಷ್ಠ ಯುವಕನೀತ..!!
ಯುವಕರ ಕಣ್ಮಣಿ ಸ್ವಾಮಿ ವಿವೇಕಾನಂದರು
ವಿಶ್ವದಲ್ಲೆಲ್ಲಾ ನವ ಚೈತನ್ಯ ನೀಡಿದವರು
ರಾಮಕೃಷ್ಣ ಮಿಷನ್ ಸ್ಥಾಪಿಸಿದವರು
ಭಾರತಾಂಬೆಯ ಮರೆಯದ ಮಾಣಿಕ್ಯ ಇವರು..!!
- ರಹಿಮಾನ ನದಾಪ್,
ವಿದ್ಯಾರ್ಥಿ
ಸರಕಾರಿ ಪ್ರಥಮ ದರ್ಜೆ ಕಾಲೇಜು,
ಇಲಕಲ್.
#6360523334
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ