ಜಗಕ್ಕೆ ಕಣ್ಣು ತೆರೆದಾಗ ಖುಷಿಯಾದವಳು ನನ್ನ ತಾಯಿ
ಅತ್ತಾಗ ಕಣ್ಣೀರು ವರೆಸುವಳು ನನ್ನ ತಾಯಿ
ಹಾಲುಣಿಸಿ ಬೆಳೆಸಿದವಳು ನನ್ನ ತಾಯಿ
ಬಿದ್ದಾಗ ಮೇಲಕ್ಕೆ ಎತ್ತುಗಳು ನನ್ನ ತಾಯಿ
ನನ್ನ ತಾಯಿ ಇವಳೇ ನನ್ನ ತಾಯಿ
ಮನದಲ್ಲಿ ಕನಸು ಕಟ್ಟಿದವಳು ನನ್ನ ತಾಯಿ
ನನ್ನ ನೋವು ಆಲಿಸುವಳು ನನ್ನ ತಾಯಿ
ತನ್ನ ನೋವ ಮರೆಯುವಳು ನನ್ನ ತಾಯಿ
ಮನದಲ್ಲೇ ಕೊರಗುವಳೇ ನನ್ನ ತಾಯಿ
ನನ್ನ ತಾಯಿ ಅವಳೇ ನನ್ನ ತಾಯಿ
ಹರಸಿ ಹಾರೈಸುವಳು ನನ್ನ ತಾಯಿ
ಗಂಡನೇ ಸ್ತ್ರೀರಕ್ಷೆ ಎನ್ನುವಳು ನನ್ನ ತಾಯಿ
ಜೀವನವೇ ನರಕ ಎನ್ನುವಳು ನನ್ನ ತಾಯಿ
ಮನಸಿದ್ದರೆ ಸಾಧ್ಯವೆನ್ನುವಳು ನನ್ನ ತಾಯಿ
ನನ್ನ ತಾಯಿ ಇವಳೇ ನನ್ನ ತಾಯಿ
ಧೈರ್ಯವ ತುಂಬುವಳು ನನ್ನ ತಾಯಿ
ಕನಸುಗಳ ಬದಲಿಸುವಳು ನನ್ನ ತಾಯಿ
ಹೆಣ್ಣಿನ ಜೀವನ ನರಕ ಎನ್ನುವಳು ನನ್ನ ತಾಯಿ
ಹೆಣ್ಣಿನ ಜೀವನ ಶ್ರೇಷ್ಠ ಎಂದವಳು ನನ್ನ ತಾಯಿ
ನನ್ನ ತಾಯಿ ಅವಳೇ ನನ್ನ ತಾಯಿ.
- ದುರ್ಗೆಶ್ ವಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ