ಕಾಣದೂರ ದಾರಿಗೆ ಹೆಜ್ಜೆ ನಾನು ಹಾಕುವೆ
ಮನದ ತೊಳಲಾಸೆಗೆ ಕಡಿವಾಣ ಬೇಡುವೆ
ನೀಡು ಎನಗೆ ಬಾಳಲ್ಲಿ ವಿನಮ್ರದಿ ಕೈಮುಗಿವೆ
ಆಸೆಯ ಜೀವಿಗೆ ಭಾಗ್ಯದ ವರ ಕೊಡು ದೈವವೆ
ಕಂಡು ಕಾಣದವರಂತೆ ನಟಿಸುವವರ ಮುಂದೆ
ನೀ ಕಂಡದ್ದನ್ನೆಲ್ಲಾ ಹೇಳ ಹೋದರೆ ನೀನುಳಿವೆ ಹಿಂದೆ
ನೂಕು ನುಗ್ಗವ ಮಂದಿಯೊಳಗೆ ಮೂಕನಂತಿರು
ಮಾತು ಬರದೆಂದು ನಿಂದಿಸುವವರೊಳಗೆ ಜಾಣ್ಮೆಯಿಂದಿರು
ಚಿರತೆ ಹಾಗೆ ಓಡಿದರೆ ಮುಂದೊದಗುವುದೊಮ್ಮೆ ಅಪಾಯ
ಆಮೆಯಂತೆ ನಡೆಯೋದು ಕಲಿತರೆ ನಿನಗೊಳಿವುದು ಉಪಾಯ
ತಪ್ಪುವುದು ನಿನಗೊದಗುವ ತಾಪತ್ರಯ
ಇದ್ದಾಗ ಮಾಡು ಜೀವನದ ಸಡಗರ ಜಾತ್ರೆಯ
ಎರಗುವೆ ಗುರುವೇ ವಿನಯದಿ ನಿನ್ನ ಚರಣಕ್ಕೆ
ತಪ್ಪುವುದಿಲ್ಲ ನಿನ್ನ ಮೇಲಿನ ಭಕ್ತಿಯು ಯಾವ ಕಾರಣಕ್ಕೆ
ನಾ ಬರುವ ದಾರಿಗೆ ಕಲ್ಲೊಗೆಯದಿರು ನಡುಬರಕ್ಕೆ
ಸುರಿವೆನು ತಂದು ಹೂವ ನಿಶ್ಚಲ ಮನದಿಂದ ನಿನ್ನ ಶಿರಕ್ಕೆ
- ಬಿ.ಹೆಚ್. ತಿಮ್ಮಣ್ಣ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ