ಮತ್ತೆ ಬಂದೇ ಬಂತು ಚುನಾವಣೆ
ನೋಡಲಾಗದು ಜನನಾಯಕರ ಬವಣೆ
ಯಾರಿಗೆ ಹಾಕೋಣ ಅಧಿಕಾರದ ಮಣೆ
ಯೋಗ್ಯ ವ್ಯಕ್ತಿಯ ಆರಿಸುವುದು ನಮ್ಮೆಲ್ಲರ ಹೊಣೆ.
ಪುಡಾರಿಗಳ ಪೊಳ್ಳು ಭರವಸೆಗಳ ನಂಬಲೇಬೇಡಿ
ಸ್ವಜಾತಿ, ಸ್ವಧರ್ಮವ ಕಂಡು ಮರುಗಲೇಬೇಡಿ
ಜನಸೇವೆಯ ಹೆಸರಲ್ಲಿ ಗೋಮುಖ ವ್ಯಾಘ್ರರಿರುವರು ಸ್ವಲ್ಪ ನೋಡಿ
ಆಮಿಷಗಳಿಗೆ ತಲೆಬಾಗಿ ಮಾಡುವುದು ಬೇಡ ಪ್ರಜಾಪ್ರಭುತ್ವದ ರಾಡಿ.
ಮತದಾನ ನಮ್ಮೆಲ್ಲರ ಜನ್ಮಸಿದ್ಧ ಹಕ್ಕು
ಮಾಡಬಾರದು ಸಭ್ಯರ ಆರಿಸುವುದರಲ್ಲಿ ಗಿಮಿಕ್ಕು
ನಮ್ಮನ್ನೇನು ಮಾಡಲಾಗದು ಅವರ ಕುಮ್ಮಕ್ಕು
ಮುರಿಯಲೇಬೇಕಿದೆ ನಾವೀಗ ಪಕ್ಷಾಂತರಿಗಳ ಸೊಕ್ಕು.
ಎಷ್ಟಾದರೂ ತೋರಲಿ ಅವರು ತೋಳ್ಬಲ, ಹಣಬಲ
ನಾವಾಗಬೇಕಿದೆ ಇಂದು ಯೋಗ್ಯರ ಆರಿಸುವಲ್ಲಿ ಪ್ರಬಲ, ಸಬಲ
ನಾವಿಂದು ಅರಿಯಬೇಕಿದೆ ಶ್ರೇಷ್ಠತೆಯ ಚುನಾವಣಾ ತತ್ವ
ಉಳಿಸಿ ಗೌರವಿಸೋಣ ಪ್ರಜಾತಂತ್ರದ ಪ್ರಜಾಪ್ರಭುತ್ವದ ಮಹತ್ವ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್. ಪಾವಗಡ ತಾಲ್ಲೂಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ