ಎಲ್ಲರೂ ಎಲ್ಲಾ ವಿಷಯಗಳಲ್ಲಿ
ನಾನೇ ಸರಿ ಅನ್ನುತ್ತಿರಲು
ಹಾಗಿದ್ದಲ್ಲಿ ತಪ್ಪು ಯಾರ ಕಡೆಯಿಂದ
ಆಗಿದೆ ಎಂಬ ದಿಗಿಲುl
ಅವರಿಗೆ ಅವರದ್ದೇ ಸರಿ,
ಇವರಿಗೆ ಇವರದ್ದೇ ಸರಿ,
ಅನ್ನುತ್ತಿರಲು, ತಪ್ಪಿಗೊಂದು ಕಾರಣ
ಏನಿದೆ ಎಂಬುದನ್ನು ತಿಳಿಯದಿರಲುl
ಕಾರಣಗಳ ತಿಳಿಸಿದರೆ
ಅವರ ತಪ್ಪು ಅವರಿಗೆ
ಮನವರಿಕೆ ಮಾಡಿದರೆ
ಅವರು ಅದ ತಿದ್ದಿಕೊಳ್ಳದಿರೆl
ನಾನೇ ಸರಿ ಎಂದು ಹೊಗಳಿಕೊಂಡರೆ
ಬೇರೆಯವರು ಸರಿ ಇಲ್ಲ
ಎಂದು ಇತರರ ದೂರಿದರೆ
ಇದಕ್ಕಾರು ಹೊಣೆಯಾಗರುl
- ಶಾರದ ದೇವರಾಜ್, ಎ. ಮಲಾಪುರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ