ಬುಧವಾರ, ಸೆಪ್ಟೆಂಬರ್ 4, 2024

ನನ್ನೂರು...!!!

ನನ್ನೂರು ..........!!!!

ಜೈನರ ಪವಿತ್ರ ಕಾಶಿ ನಮ್ಮೂರು 
ಬಾಹುಬಲಿ ಸುಂದರ ಮೂರ್ತಿ 
ಇರುವುದು ಈ ನಮ್ಮೂರು 
ವಿದ್ಯಾ ಗಿರಿ ಬೆಟ್ಟದ ಮೇಲೆ
58 ಅಡಿ ಎತ್ತರದಲ್ಲಿ ಗೊಮ್ಮಟೇಶ್ವರ
ನಿಂತಿರುವುದು ನಮ್ಮೂರು...

12 ವರ್ಷಕೊಮ್ಮೆ ನಡೆಯುವುದು ಐತಿಹಾಸಿಕ 
ಮಹಾ ಮಹಾಮಸ್ತಕಾಭೀಷೇಕ 
ದೇಶ ವಿದೇಶಗಳಿಂದ ಲಕ್ಷತರ ಜನಗಳು ನಿತ್ಯ ಬರುವರು
ನಮ್ಮ ದಕ್ಷಿಣ ಭಾರತದ 
ಮಣ್ಣಿನ ನೆಲದೂರಿಗೆ...

ಕಳೆದ ಕ್ಷಣಗಳು ಕಡಿಮೆ
ನೆನಪುಗಳು ಮಾತ್ರ ನನ್ನಲ್ಲಿವೆ 
ಹೋಗುವಾಗ ಪ್ರತಿ ಸಾರಿ 
ನಿನ್ನ ನೆನಪುಗಳು ಮೂರಾರು 
ಬಿಟ್ಟು ಹೋಗುವಾಗ ಮನಸಿಗೆ 
ಎಲ್ಲೊ ಒಂದು ಮೂಲೆಯಲ್ಲಿ
ಭಾವನೆಗಳು ನನ್ನಲ್ಲಿ ನೂರಾರು.

           ಕಾರ್ತಿಕ್...✍️
      ( ಶ್ರವಣ ಬೆಳಗೊಳ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...