ಗುರುವಾರ, ಅಕ್ಟೋಬರ್ 31, 2024

ವಿಸ್ಮಯ...

ಬೆಳಕ ನಿರೀಕ್ಷೆಯಲ್ಲಿರುತ್ತೇನೆ
ಸೂರ್ಯ ಹುಟ್ಟುತ್ತಾನೆ

ಇನ್ನೇನು ಬೆಳಕು ಹರಿಯುವ ಹೊತ್ತಿಗೆ
ಹೃದಯ ಬಡಿದುಕೊಳ್ಳುತ್ತದೆ

ಹತ್ತಾರು ಗೊಂದಲ
ಮತ್ತೆಲ್ಲೊ ಕುತೂಹಲ
ಇನ್ನೆಲ್ಲೋ ಆತಂಕ

ಇಷ್ಟೆಲ್ಲಾ ಬೆಸೆದುಕೊಳ್ಳುತ್ತ
ಬಿಗಿಯಾಗುತ್ತೇನೆ

ಶಾಖಕ್ಕೆ ಮೈಯೊಡ್ಡಲೇಬೇಕಿದೆ
ಇಷ್ಟಿಷ್ಟೇ ಕಣ್ಣುಗಳ ಬಿಟ್ಟಾದರೂ
ಆಗಾಗ್ಗೆ ನೋಡಲೇಬೇಕಿದೆ

ಈ ತಟಸ್ಥ ಬದುಕು 
ಚಲಿಸುವ ಹೊತ್ತಿದು
ಒಮ್ಮೆಲೆ ಸತ್ತು ಬದುಕುವ
ಗಳಿಗೆಯದು

ಉಸಿರ ತೆಗೆದುಕೊಳ್ಳುತ್ತಾ
ಅಷ್ಟೆಲ್ಲಾ ಬೆಳಕಿಗೂ
ಹಬ್ಬಿಕೊಂಡೆ

ಜೀವರಾಶಿಗೆಲ್ಲ ಜೀವ ಬಂದಂತಾಯ್ತು
ಭೂಮಿ ಅರೆಕ್ಷಣ ನಿಂತುಹೋಗಿತ್ತು.... ಖುಶಿಗೆ!
  
ನೂರು ಪ್ರಶ್ನೆಗೆ
ಒಂದೇ ಉತ್ತರ ಸಿಗುವುದು ,ಅದೆಷ್ಟು ಅಪರೂಪ.....
ಎಂದು ಕಣ್ಣು ಮುಚ್ಚಿಕೊಂಡೆ....
ಅವನು ಬದುಕು ವಿಸ್ಮಯ ಅಂತಷ್ಟೇ ಹೇಳುತ್ತ ಮುಗುಳ್ನಕ್ಕ......
ಸಿರಿ❤️

ಕಲ್ಪವೃಕ್ಷದ ನಾಡು ಕರುನಾಡು...

ಕಲ್ಪವೃಕ್ಷದ ನಾಡು ಕರುನಾಡು..

ಕಪ್ಪು ಮಣ್ಣಿನ ಕಲ್ಪವೃಕ್ಷದ ನಾಡು 
ಮಲೆನಾಡ ಸೊಬಗಿನ ಶ್ರೀಗಂಧದ ಬೀಡು 
 ಹಲವು ಕವಿರತ್ನರು ಇರುವ ಗೂಡು 
 ಕೇಳಿ ಆನಂದಿಸಿ ಕನ್ನಡ ನುಡಿಯ ಹಾಡು 

ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯು 
ಎಂಟು ಜ್ಞಾನಪೀಠ ಪಡೆದ ನಲ್ಮೆಯ ಹಿರಿಮೆಯು 
ಬೇಲೂರು ಹಳೇಬೀಡು ಹಂಪಿಯ ಶಿಲ್ಪಕಲೆಯು 
ವಿವಿಧತೆಯಲಿ ಏಕತೆಯ ಸಂಸ್ಕೃತಿಯ ಪರಂಪರೆಯು 

ಬಳಸಿದಷ್ಟು ಬೆಳೆಯುವ ಭಾಷೆ ಕನ್ನಡ 
ಮಾತನಾಡಿದಷ್ಟು ಮೆರುಗು ಬರುವ ಭಾಷೆ ಕನ್ನಡ 
ಬರೆದಷ್ಟು ಭಾವನೆ ಹೆಚ್ಚಾಗುವ ಭಾಷೆ ಕನ್ನಡ 
ಓದಲು ಬಾರದವರಿಗೂ ಅರ್ಥವಾಗುವ ಭಾಷೆ ಕನ್ನಡ 

ಕರುನಾಡಿನ ನೀರು ದೇವರ ತೀರ್ಥದಂತೆ 
ಈ ನೆಲದ ಅನ್ನ ಪವಿತ್ರ ಪ್ರಸಾದದಂತೆ 
ಕರ್ನಾಟಕದಲಿ ನಡೆದರೆ ದೇವಸ್ಥಾನದಲಿ ನಡೆದಂತೆ 
ಈ ಪುಣ್ಯ ಭೂಮಿಯಲಿ ಮಲಗಿದರೆ ಸ್ವರ್ಗದಲಿ ಮಲಗಿದಂತೆ 

ಆಗದಿರೋಣ ನವೆಂಬರ್ ಒನ್ ಕನ್ನಡಿಗರು 
ಆಗೋಣ ನಂಬರ್ ಒನ್ ಕನ್ನಡಿಗರು 
ನೀರು ಕೇಳಿದರೆ ಹಾಲು ಕೊಡುವ ಹೃದಯವಂತರು 
ತಾಯಿ ಭುವನೇಶ್ವರಿಯ ಅನುಗ್ರಹದ ಪುಣ್ಯವಂತರು 

ಕನ್ನಡವೆಂದರೆ ಬರಿ ಅಕ್ಷರವಲ್ಲ ಅಮೃತವು 
ಕನ್ನಡವೆಂದರೆ ಬರಿ ಮಾತುಗಳಲ್ಲ ಮಾಣಿಕ್ಯವು 
ಕನ್ನಡವೆಂದರೆ ಬರಿ ಬರಹವಲ್ಲ ಭಾಗ್ಯವು 
ಕನ್ನಡವೆಂದರೆ ಬರಿ ಪದವಲ್ಲ ಪಂಚಾಮೃತವು
ಶ್ರೀ ಮುತ್ತು ಯ.ವಡ್ಡರ 
 ಶಿಕ್ಷಕರು
ಬಾಗಲಕೋಟ 
9845568484

ದೀಪಾವಳಿ...

ದೀಪಾವಳಿ ಹಬ್ಬದ ಶುಭಾಶಯಗಳು ನಿಮಗೂ ಮತ್ತು ಕುಟುಂಬದವರಿಗೂ🪔🪔🪔
 
ಬೆಳಕಿನಿಂದ ಸುಂದರ 
ಜಗತ್ತನ್ನ ಸವಿದು
ನೋಡೋಣ..
ಪ್ರೀತಿಯಿಂದ ಎಲ್ಲರೊಡನೆ
ಬದುಕಿ ಮುಂದೆ 
ಸಾಗೋಣ...
ಕತ್ತಲೆಯನ್ನ ತೊರೆದು 
ದೀಪವ ಅಂದಕಾರವನ್ನ ಮಮತೆಯಿಂದ ಅಚ್ಛಿ
ಬೆಳಗೋಣ....
ಮಣ್ಣಿನಂತೆ ಸಂಭಂದಗಳನ್ನ
ಗಟ್ಟಿಯಾಗಿ ನಾವು ಕಾಪಾಡಿಕೊಳ್ಳೋಣ....
ಎಲ್ಲರೂ ಸೇರಿ
ಈ ದೀಪಾವಳಿ ಹಬ್ಬವನ್ನ ಆಚರಿಸೋಣ...🪔


        ಕಾರ್ತಿಕ್...✍️
   ( ಶ್ರವಣ ಬೆಳಗೊಳ )

ಕನ್ನಡ ರಾಜ್ಯೋತ್ಸವ ಚುಟುಕುಗಳು...

ಕನ್ನಡ ರಾಜ್ಯೋತ್ಸವ ಚುಟುಕುಗಳು 

""ಗಂಧದ ಗುಡಿ""

 ಗಂಧದಗುಡಿಯಿದು ತಾಯ್ನೆಲವು
ಸೆಳೆದಿದೆ ಕನ್ನಡಮ್ಮನ ಒಲವು
 ವಿಶ್ವವನ್ನೇ ತನ್ನತ್ತ ಸೆಳೆವ ಚೆಲುವು 
ಭಾರತಾಂಬೆಯ ಹೆಮ್ಮೆಯ ಮುಕುಟವು

"'' ಹಬ್ಬ ""

ಕನ್ನಡಿಗರ ಹೆಮ್ಮೆಯ ಹಬ್ಬವಿದು
ನಾವೆಲ್ಲ ಸಂಭ್ರಮಿಸುವ ದಿನವಿದು 
ಬೇದ ಭಾವ ತೊರೆದು ನಲಿಯೋಣ 
ಜನ್ಮಭೂಮಿ ನಮ್ಮದಿದು ಕಾಯೋಣ 

 ""ಮುಡಿಪಿರಲಿ ಪ್ರಾಣ""

 ಬಂದಿತಿದೋ ನಮ್ಮ ರಾಜ್ಯೋತ್ಸವ
 ಕನ್ನಡ ನುಡಿಯ ರಥೋತ್ಸವ
 ಆಗದಿರಲಿ ಬರಿಯ ಘೋಷಣ
 ತಾಯ್ನುಡಿಗೆ ಮುಡಿಪಿರಲಿ ಪ್ರಾಣ 
 
ಮಧುಮಾಲತಿ ರುದ್ರೇಶ್ ಬೇಲೂರು
💐🌷🙏

ನನ್ನುಡಿ...!

ನನ್ನುಡಿ!

ಮಾರ್ಕೇಟಿಗೆ ಮಾಲಾಗಿ ಮೆರೆದ ಫಸಲುಗಳು ಹತ್ತಾರು!
ಹಸಿವಿಂಗಿಸಿದ ಹಿಂಗಾರಿನ ಬಿಳಿಜೋಳ ನನ್ನುಡಿ!!

ಬೃಹತ್ ವಿಶ್ವವಿದ್ಯಾಲಯಗಳಿವೆ ನೂರಾರು!
ಮಮತೆಯ ಮಡಿಲಾದ ಬಾಲವಾಡಿ ನನ್ನುಡಿ!!

ನದಿ ಸರೋವರ ಜಲರಾಶಿಗಳುಂಟು ಸಹಸ್ರ!
ದಾಹ ತಣಿಸಿದ ಹಿತ್ತಲಿನ ತೊರೆ ನನ್ನುಡಿ!!

ತರತರದ ಖಾದ್ಯ ತಿನಿಸುಗಳಿವೆ ಲಕ್ಷೋಪಲಕ್ಷ!
ರುಚಿಯೇ ತಿಳಿಯದ ಎದೆಹಾಲು ನನ್ನುಡಿ!!

ಕಂಚಿ ಕಾಶಿ ರಾಮೇಶ್ವರ ಗೋಪುರಗಳು ಹಲವು!
ಅಭಯವಿತ್ತ ನನ್ನೂರ ಹನುಮನ ಗುಡಿ ನನ್ನುಡಿ!!

ಪೋಷಾಕು ಧಿರಿಸು ವಸ್ತ್ರಗಳು ಅನೇಕ!
ಎನ್ನ ಮೈಗಂಟಿದ ಅಕ್ಷಯ ತೊಗಲು ನನ್ನುಡಿ!!

ಮಾರ್ಗ ಪಥ ವಾಹನಗಳು ಅನಂತ!
ಎಂದೆಂದಿಗು ಜೊತೆಯಾಗುವ ಹೆಜ್ಜೆ ನನ್ನುಡಿ!!

ಜಗಮಗಿಸುವ ವಿದ್ಯುತ್ತಿನ ಹಾವಳಿ ಜೋರುಜೋರು!
ಕಗ್ಗತ್ತಲ ನಡುರಾತ್ರಿಗೆ ಕಣ್ಣಾದ ಪ್ರಣತಿ ನನ್ನುಡಿ!!

ಜನಜಾತ್ರೆಯಲೊಬ್ಬಂಟಿಯಾದ ಜೀವಕೆ
ಅಮ್ಮನ ಬೆಚ್ಚನೆಯ ಸ್ಪರ್ಶ ನನ್ನುಡಿ!!

ಹಿರಿದು ಕಿರಿದೆಂಬುದಿಲ್ಲ ಜಗದಲಿ!
ಅವರವರ ತಾಯಿಯು, ಅನಂತವಾಗಿ ಕಾಯುವಳು!
ಅವರವರ ಅರಿವು, ಅನವರತ ಪೊರೆವುದು!
ಮಾಂಸಖಂಡ ಕಮರಿಯಾಳಕೆ ಬಿದ್ದ ದನಿ!
ಬೆಳಕಾಗಿ ಎದ್ದದು ನನ್ನುಡಿ!

ಎನ್ನುಡಿಯು ಕನ್ನಡ ; ಚೆನ್ನುಡಿಯದು ಕನ್ನಡ
ಸದಾ..........sss

ಉಸಿರಾಡಲು ತಾನು
ಹಸಿರಾಗುವಳು ತಾಯಿ!
ನಲಿದಾಡಲು ನಾನು
ನರ್ತಿಸುವಳು ನೋಡಿ!!
ಬದುಕಾಗಲು ನಾವು
ಬಾಳುವಳು ಕಾಣಿ!!!

ಹೋರಾಟದ ಕಿಚ್ಚಿನೊಂದು
ಕಿಡಿಯ ತಂದು ಬೆಳಗಿರಿ!
ಬಾಳಜ್ಯೋತಿ ಬೆಳಗಲಲ್ಲಿ
ಜೈ ಜೈ ಭುವನೇಶ್ವರಿ!!

~ ಅರಬಗಟ್ಟೆ ಅಣ್ಣಪ್ಪ

ಬುಧವಾರ, ಅಕ್ಟೋಬರ್ 30, 2024

ಬೆಳಗುವ ದೀಪದಿಂದ ದೀಪ... ಹೃದಯದಿಂದ ಪ್ರೀತಿ ಹಂಚುವ...

ಬೆಳಗುವ ದೀಪದಿಂದ ದೀಪ
ಹೃದಯದಿಂದ ಪ್ರೀತಿಯ ಹಂಚುವ..

ಸಂಸ್ಕೃತಿ-ಸಂಪ್ರದಾಯ ಆಚಾರ -ವಿಚಾರ,
ಹಬ್ಬ-ಹರಿದಿನ ಸಂಭ್ರಮ ಸಡಗರ..
ದೀಪಾವಳಿ ಬಂದಿತು,
ಸಡಗರ-ಸಂಭ್ರಮ ತಂದಿತು,
ಜ್ಯೋತಿ ಬೆಳಗಿತು,
ಬೆಳಕು ಪ್ರಜ್ವಲಿಸಿತು...

ದೀಪದಿಂದ ದೀಪ ಬೆಳಗುತ,
ಮನುಕುಲದ ಸಂಬಂಧ ಗಟ್ಟಿ ಕಟ್ಟುತ,
ಹರ್ಷದಿಂದ ದೀಪಾವಳಿ ಆಚರಿಸುತ,
ಪ್ರೀತಿಯಿಂದ ಪ್ರೀತಿಯ ಹಂಚುತ...

ಸುಖ-ಸಂಪತ್ತಿಗೆ ಹಿಗ್ಗದೇ,
ಕಷ್ಟ-ನಷ್ಟಕೆ ಕುಗ್ಗದೇ, 
ಬದುಕಲ್ಲಿ ಕತ್ತಲೆ ದೂರವಾಗಲಿ,
ಭರವಸೆಯ ಬೆಳಕು ಮೂಡಲಿ,
ದೀಪ ಬೆಳಗಲಿ ದೀಪಾವಳಿ ಹರುಷ ತರಲಿ..

ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..

ಶಾಂತಾರಾಮ ಹೊಸ್ಕೆರೆ, ಶಿರಸಿ, ಉತ್ತರ ಕನ್ನಡ..

ಮಂಗಳವಾರ, ಅಕ್ಟೋಬರ್ 29, 2024

ಆಯುಷ್ಯದ ತಕ್ಕಡಿ...

ಆಯುಷ್ಯದ ತಕ್ಕಡಿ...

ಓ ಕ್ರೂರ ವಿಧಿಯೇ ಏಕಿಷ್ಟು ನಿರ್ದಯಿಯಾಗುವೆ 
ಅಮಾಯಕ ಜೀವಗಳ ಮೇಲಷ್ಟೇ ನಿನ್ನ ಪ್ರತಾಪವೇ

 ನೆರಳು ನೀಡುವ ಕೈಗಳನ್ನೇ ನೀ ಕತ್ತರಿಸುವೆ 
ಆಸರೆಯಾದ ಜೀವಿಗಳನ್ನೇಕೆ ನೀ ಕಬಳಿಸುವೆ 

ಹೋರಾಟದ ಬದುಕಿನಲ್ಲಿ ಕಾಣುವ ಕನಸುಗಳೆಷ್ಟೊ
 ನನಸಾಗುವ ವೇಳೆಗೆ ನಿನ್ನ ತೆಕ್ಕೆಗೆ ಬೀಳುವವರೆಷ್ಟೊ

 ಜೀವನದಂತ್ಯವ ಬಯಸುವ ಜೀವಿಗಳ ನಡುವೆ
 ಬದುಕಿ ಘಮಿಸಬೇಕಾದ ಸುಮಗಳನ್ನೇಕೆ ಹುಡುಕುವೆ

 ತನ್ನವರಿಗಾಗಿಯೇ ಬದುಕ ಸವೆಸುವ ಹೃದಯಗಳು
 ತನ್ನವರೆದುರೇ ಕೈಚೆಲ್ಲುವ ಅಸಹಾಯಕ ಕ್ಷಣಗಳು 

ನಿನಗೂ ಮಿಡಿವ ಹೃದಯ ಕೊಡಬೇಕಿತ್ತು ದೇವ 
ಅರ್ತನಾದ ಕೇಳುವ ಕಿವಿಗಳಿರಬೇಕಿತ್ತು ಅಲ್ಲವಾ

 ಓ ವಿಧಿಯೇ ಇನ್ನಾದರೂ ಕೊಂಚ ಯೋಚಿಸು 
ಅಳೆದು ತೂಗಿ ಆಯುಷ್ಯದ ತಕ್ಕಡಿಯ ತೂಗಿಸು...
 ಮಧುಮಾಲತಿ ರುದ್ರೇಶ್
ಬೇಲೂರು

ದೀಪಾವಳಿ...

      ದೀಪಾವಳಿ
ಬಂತೋ.. ಬಂತೋ.. ದೀಪಾವಳಿ ಬಂತೋ.. 
ತಂತೋ.. ತಂತೋ.. ಸಡಗರ ತಂತೋ.. 
ಸಿರಿ ತಂದಿತಪ್ಪ ಈ ಬೆಳಕಿನ ಹಬ್ಬ 
ಸಂತಸದ ರೂಪ ಈ ದೀಪಾವಳಿ ಹಬ್ಬ 
ಮನೆಯ ಅಂಗಳದಿ ಬಣ್ಣದ ರಂಗೋಲಿ 
ಮನೆಯ ಬಾಗಿಲು ಮಾವಿನ ತೋರಣ 
ಸಾಲು ಸಾಲು ಹಣತೆಯ ದೀಪ 
ಅಂಗಳ ತುಂಬಿ ಬೆಳಗಿತೇ ದೀಪ 
ಊರ ತುಂಬೇಲ್ಲಾ ಹೊಸತು ನೋಡಾ 
ನಾಡಿನ ಜನದ ಹಿಗ್ಗು ನೋಡಾ 
ಹಬ್ಬದ ಸಿರಿಗೆ ತುಪ್ಪದ ಘಮ ಘಮ 
ಹಸಿರಿನ ಗರಿಗೆ ಸಂಭ್ರಮದ ಸಮ ಸಮ 
ಹರಿಯುವ ನೀರಲ್ಲಿ ತಲೆ ಎಣ್ಣೆ ಸ್ನಾನ 
ನಾರಿಯರ ಮುಡಿ ತುಂಬ ಮಲ್ಲಿಗೆ 
ತರ ತರಹದ ಪಟಾಕಿ 
ಬೆಳಕು ಬೀರಿ ಸಿಡಿಯುತ್ತೆ 
ದೀಪಗಳ ಸಾಲು ಈ ದೀಪಾವಳಿ ಹಬ್ಬ 
ಸಂತಸದ ರೂಪ ಈ ದೀಪಾವಳಿ ಹಬ್ಬ. 
     - ವಿ.ಎಂ.ಎಸ್.ಗೋಪಿ ✍️
  ಲೇಖಕರು, ಸಾಹಿತಿಗಳು 
           ಬೆಂಗಳೂರು.

ಶುಕ್ರವಾರ, ಅಕ್ಟೋಬರ್ 25, 2024

ಪ್ರೇಮ ದೇವತೆ...

ಸ್ವರಾಕ್ಷರ ಕವನ

ಪ್ರೇಮ ದೇವತೆ

ಅವಳ ನಗುಮೊಗವ ಕಂಡರೆ 
ಆನಂದಕ್ಕಿಲ್ಲ ಪಾರವು 
ಇಳೆಗೆ ಮುತ್ತಿಟ್ಟಂತೆ ಮಳೆಯು 
ಈ ಭುವಿಗೆ ಇಳಿದಂತೆ ನಾಕವು
ಉದಯಿಸಿದಂಗೆ ಬೆಳದಿಂಗಳ ಚಂದ್ರನು
ಊದಿದಂಗೆ ಪ್ರೇಮದ ಕಹಳೆಯ
ಋಷಿಯ ವೃತ ಭಂಗವು ಇವಳಿಂದ 
ಎಷ್ಟು ಹೇಳಲಿ ಅವಳ ಚೆಲುವು 
ಏರುತಲಿಹುದು ಪ್ರೀತಿಯ ಗುಂಗು 
ಐರಾವತ ಮೇಲಿನ ಅಂಬಾರಿಯಂತ ಹೊಳಪು
ಒಂದೊಂದು ಮಾತು ಉದುರಿದಂಗೆ ಮುತ್ತು 
ಓದಬೇಕಿದೆ ಇಬ್ಬರು ಸೇರಿ ಪ್ರೇಮದ ಪುಟಗಳ
ಔಷಧಿಯು ಅವಳೇ ನನ್ನೀ ಹೃದಯಕೆ 
ಅಂದ-ಚೆಂದಕೆ ಅವಳಿಗವಳೇ ಸಾಟಿಯು 
ಆಹಾ ಹೇಳತೀರದು ಇವಳೇನ್ನ ಸೌಂದರ್ಯ ದೇವತೆ 
ಶಿವಾ ಮದಭಾoವಿ
ಗೋಕಾಕ
8951894526

ಮಾಡಬಾರದ ಆ ಒಂದು ತಪ್ಪು...

ಮಾಡಬಾರದ ಆ ಒಂದು ತಪ್ಪು.....

ಗಡಿ ಭಾಗದ ಮಲಾಬಾದ ಪುಟ್ಟ ಹಳ್ಳಿ ಕೃಷಿಯನ್ನು ನಂಬಿರುವ ಜನ. ಬರಗಾಲವನ್ನು ತಲೆಯಲ್ಲಿ ಇಟ್ಟುಕೊಂಡು ತಿರುಗುವ ಜನ ಸಾಲಕ್ಕೆ ಅಂಜದೆ ಕುಗ್ಗದೆ ದುಡಿಮೆಯೇ ದೇವರು ಹೃದಯದಲ್ಲಿ ಇಟ್ಟುಕೊಂಡು ಸಾಗುವ ಜನ ಮನಸು ಸಹ ತುಂಬಿದ ಕೊಡ ಇದ್ದಂತೆ ಗ್ರಾಮದ ದೊಡ್ಡ ಸಾಹುಕಾರ ಇದ್ದ ಸುತ್ತ ಮುತ್ತ ಹತ್ತಹಳ್ಳಿಗೆ ಧಣಿ ಇವನ ಹೆಸರು ರಾಮಣ್ಣ ಸಾಹುಕಾರ ಕಥೆಯ ಮಹಾನಾಯಕ ಈ ಘಟನೆ ನಡೆದಿದ್ದು 19ನೇ ಶತಮಾನದ ಕಾಲಘಟ್ಟದಲ್ಲಿ ನೂರಾರು ಏಕರೆ ಜಮೀನು ಆಳುಕಾಳು ದನಕರುಗಳಿಂದ ತುಂಬಿ ತುಳುಕುವ ದೊಡ್ಡ ಕುಟುಂಬ ಬೆಳ್ಳಿ ಬಂಗಾರದಿಂದ ತುಂಬಿರುವ ಶ್ರೀಮಂತಿಕೆ.
ಸಾಹುಕಾರ ಜೀವನ ಹೀಗೆ ಕಳೆದು ಹೋದವು ಮಕ್ಕಳು ದೊಡ್ಡವರು ಆದ ಮೇಲೆ ಮದುವೆಯ ಸಮಯ ರುಚಿ ರುಚಿಯಾದ ಅಡುಗೆಯ ತಯಾರಿ ರಾತ್ರಿಯ ಸಮಯ ಅದೇ ವೇಳೆಗೆ ವಯಸ್ಸು ಯಾದ ಹೆಣ್ಣುಮಗಳು ನನಗ ಹಸಿವು ಆಗ್ತೀತ್ರಿ ತಿನ್ನಲು ಸ್ವಲ್ಪ ಬುಂದಿ ಕಾಳು ನೀಡೀರಿ ಬೇಡಿಕೊಂಡಳು. ಸಾಹುಕಾರನ ಮಂದಿ ಏ ಮುದಿಕಿ ನಿನಗ ಏನು ಕೊಡುವುದಿಲ್ಲ ಮೊದಲ ನಡೆ ನಮ್ಮ ಮುಂದ ನಿಲ್ಲುವುದು ಬೇಡ. ಆಕೆಯನ್ನು ಹಿಡಿಕೊಂಡು ಹೊರಗೆ ಹಾಕಿದರು ಮೂರು ಸಲ ಹೀಗೆ ಮಾಡಿದರು ಏಕೆಂದರೆ ವೃದ್ಧೆಯೇ ಲಕ್ಷ್ಮಿಯೇ ಆಗಿದ್ದಳು ಸಾಹುಕಾರನ ಪರೀಕ್ಷೆ ಮಾಡಲು ಬಂದಿದ್ದಳು ಸಾಹುಕಾರ ತೋಟದಿಂದ ಮನೆಗೆ ಹೊರಟ್ಟಿದ್ದ ಕೈಯಲ್ಲಿ ಕಂದೀಲು ಬೆಳಕಿನಲ್ಲಿ ವೃದ್ದೆಯನ್ನು ನೋಡಿದ. ಸಾಹುಕಾರನಿಗೆ ಸಂಶಯ ಬಂತು ಮನೆಗೆ ಯಾರು ಬಂದಿದ್ದರು ಏನು? ಹೌದು ಬಂದಿದ್ದರು ಮುದುಕಿ ನನಗ ತಿನ್ನಲ್ಲಾಕ ಕೂಡಿರಿ ಎಂದು ಕೇಳಿದಳು ಆದರೆ ಏನು ಕೂಡಲಿಲ್ಲ ಎಂದು ಹೇಳಿದರು ಎಂಥಾ ದೊಡ್ಡ ತಪ್ಪ ಮಾಡಿರಿ ನೀವು ಆಕೆ ಮನೆಯ ಲಕ್ಷ್ಮಿ ಬೇರೆ ವೇಷದ್ಯಾದ ನಮ್ಮ ಪರೀಕ್ಷೆ ಮಾಡಲು ಬಂದ್ಯಾಳ ಆದರ ನೀವ ದೊಡ್ಡ ತಪ್ಪು ಮಾಡೀರಿ ಲಕ್ಷ್ಮಿ ಮನೆ ಬಿಟ್ಟುಹೋದಳು ಆಸ್ತಿ ಪಾಸ್ತಿ ಎಲ್ಲ ಬಿಟ್ಟ ಹೋಗತ್ತಿತ್ತಿ ನಮ್ಮ ಮನೆತನ ದಿವಾಳಿ ಆತು ಸಾಹುಕಾರ ಬಿಕ್ಕಿಬಿಕ್ಕಿ ಅತ್ತ ವೃದ್ಧೆಯನ್ನು ಹುಡುಕಾಡಿದ ಆದರೆ ಸಿಗಲಿಲ್ಲ. ಮಾಡಿದ ಒಂದು ತಪ್ಪುಸಾಹುಕಾರನ ಮಕ್ಕಳು ಬಿಕಾರಿಯಾಗಿ ಮನೆ ಮನೆ ಸುತ್ತಿ ಬಿಕ್ಷೆ ಬೇಡಿ ತಿನ್ನುತ್ತಿದ್ದರು ಹೆಂಡರು ಮನೆ ಬಿಟ್ಟುಹೋದರು. ತಿನ್ನಲು ಏನು ಸಿಗದೆ ಬಾಂಡೆ ಕೊಂಡೆ ಮಾರಿ ತಿಂದರು ಮನೆಯ ಕಲ್ಲು ಮಣ್ಣು ಮಾರಿದರೂ ಹೊಟ್ಟೆ ತುಂಬಲಿಲ್ಲ ತೊಡಲು ಬಟ್ಟೆ ಇಲ್ಲದೆ ಅರೇ ಬೆತ್ತಲೆಯಾಗಿ ತಿರುಗುವಸಾಹುಕಾರನ ಮಕ್ಕಳು ತಮ್ಮ ಶ್ರೀಮಂತಿಕೆಯ ಮದದಲ್ಲಿ ತಮ್ಮನ್ನು ತಾವು ಕಳೆದು ಹೋಗಿದ್ದರು. ಹಳ್ಳಿಯಲ್ಲಿ ನಡೆದ ಘಟನೆ ಇಂದಿಗೂ ಸಹ ರಾಮಣ್ಣ ಸಾಹುಕಾರನ ಕಥೆ ಇಂದಿಗೂ ಸಹ ಜನಮನದಲ್ಲಿ ಸಾಕ್ಷಿಯಾಗಿ ಕಂಡುಬರುತ್ತದೆ.
ಲೇಖಕರು. ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಬಳಗ ಮಹಾರಾಷ್ಟ್ರ

ಪದ್ಮಶ್ರೀ ಪುರಸ್ಕೃತೆ ಡಾ. ಮಾತಾ ಬಿ ಮಂಜಮ್ಮ ಜೋಗತಿ...

ಪದ್ಮಶ್ರೀ ಪುರಸ್ಕೃತೆ ಡಾ. ಮಾತಾ ಬಿ ಮಂಜಮ್ಮ ಜೋಗತಿ....

ಕನ್ನಡ ರಂಗಭೂಮಿಯ ನಟಿಯು 
ಅವಮಾನದಿ ಸನ್ಮಾನಕ್ಕೊಳಗಾದ ಮಾತೆಯು 
ಮಂಜಮ್ಮ ಜೋಗತಿ ನೃತ್ಯಕ್ಕೆ ಪ್ರಖ್ಯಾತಿಯು
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಹೆಮ್ಮೆಯು

ಹನುಮಂತ ಶೆಟ್ಟಿ ಹಾಗೂ ಜಯಲಕ್ಷ್ಮಿ ದಂಪತಿಗಳ ಉಸಿರಾಗಿ 
ಮೂಢನಂಬಿಕೆಗಳ ಬಲೆಗೆ ತುತ್ತಾಗಿ 
ಬೆಳೆದರು ಕರುನಾಡಿನ ನೃತ್ಯಗಾರ್ತಿಯಾಗಿ 
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ತಲೆಬಾಗಿ

ಜಾನಪದ ವಿಶ್ವವಿದ್ಯಾಲಯಕೆ ಕಥೆಯಾಗಿ
ಎಂಟು ವಿಶ್ವವಿದ್ಯಾಲಯದ ಪಠ್ಯಕ್ರಮವಾಗಿ 
ಬಾಳುತಿದ್ದಾರೆ ಸರಳ ಜೀವಿಯಾಗಿ 
ಕರುನಾಡಿನ ಮಹಿಳೆಯರಿಗೆ ಮಾದರಿಯಾಗಿ

ಪದ್ಮಶ್ರೀ ಪ್ರಶಸ್ತಿಗೆ ಮುತ್ತಿಟ್ಟ ಮಹಾಮಾತೆಯು 
ಮರಿಯಮ್ಮನಹಳ್ಳಿಯಿಂದ ದೆಹಲಿವರೆಗೂ ಪ್ರಸಿದ್ಧಿಯು 
ಸಮಸ್ಯೆಗಳ ಸುಳಿಯಲ್ಲಿ ಬೆಳೆದ ತಾವರೆಯು 
ಕಷ್ಟದಲ್ಲಿ ಓದಿದರು ಹತ್ತನೆ ತರಗತಿಯು

ಕಲೆಗಾರ್ತಿಯ ಜೀವನ ಬಲು ರೋಚಕವು 
ಕೈಲಾಗದೆಂದವರಿಗೆ ಆದರ್ಶ ಪ್ರಾಯವು
ಶ್ರೇಷ್ಠ ಕಲಾವಿದೆಗೆ ಅಭಿನಂದಿಸಿದೆ ದೇಶವು 
ಸಾಮಾನ್ಯರಾಗಿ ಸಾಧಕರಾದ ಇವರಿಗೆ ನಮಸ್ಕಾರವು 
ಶ್ರೀ ಮುತ್ತು ಯ. ವಡ್ಡರ 
 ಶಿಕ್ಷಕರು
 ಬಾಗಲಕೋಟ 
9845568484

ಗುರುವಾರ, ಅಕ್ಟೋಬರ್ 17, 2024

ಜ್ಞಾನ ವಿಶಾರದೆ ಸಮ್ಮಾನ್ ಗೌರವ ಪುರಸ್ಕಾರಕ್ಕೆ ಎಲೆಮರೆ ಕಾಯಿಗಳು ಪುಸ್ತಕ ಆಯ್ಕೆ...

ಜ್ಞಾನ ವಿಶಾರದೆ ಸಮ್ಮಾನ್ ಗೌರವ ಪುರಸ್ಕಾರಕ್ಕೆ ಎಲೆಮರೆ ಕಾಯಿಗಳು ಪುಸ್ತಕ ಆಯ್ಕೆ....

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ನಿವಾಸಿಯಾಗಿರುವ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಶಿಕ್ಷಕರು ಆಗಿರುವ ಶ್ರೀ ಮುತ್ತು ಯ. ವಡ್ಡರ ಇವರ ನಾಡಿನ ಸುಮಾರು 50 ಜನ ಸಾಧಕರ ಪರಿಚಯ ಇರುವ ಎಲೆಮರೆ ಕಾಯಿಗಳು ಪುಸ್ತಕವು ಶ್ರೀ ಉತ್ಸವಾಂಬ ಪ್ರಕಾಶನ ಇಟ್ಟಿಗಿ ಇವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೊಡ ಮಾಡುವ 2024ರ ಜ್ಞಾನ ವಿಶಾರದೆ ಸಮ್ಮಾನ್ ಪುಸ್ತಕ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದೆ ಎಂದು ಹಾಲಪ್ಪ ಚಿಗಟೇರಿ (ಹಾಚಿ ) ಅಧ್ಯಕ್ಷರು ಹಾಗೂ ಪ್ರಕಾಶಕರು ಶ್ರೀ ಉತ್ಸವಾಂಬ ಪ್ರಕಾಶನ ಇಟ್ಟಿಗಿ ಇವರು ತಿಳಿಸಿದ್ದಾರೆ.

 ಶ್ರೀ ಮುತ್ತು ವಡ್ಡರ ಇವರ ಕರ್ನಾಟಕದ ಹಲವಾರು ಜಿಲ್ಲೆಗಳ ಸುಮಾರು 50 ಜನ ಸಾಧಕರ ಪರಿಚಯ ಇರುವ ಈ ಪುಸ್ತಕವು ಇದೇ ವರ್ಷದ ಜೂನ್ ತಿಂಗಳಲ್ಲಿ ಮೈಸೂರಿನಲ್ಲಿ ಬಿಡುಗಡೆಯಾಗಿತ್ತು. ಪುಸ್ತಕ ಗೌರವ ಪುರಸ್ಕಾರಕ್ಕೆ ಆಯ್ಕೆಯಾದ ಪ್ರಯುಕ್ತ ಎಲೆಮರೆ ಕಾಯಿಗಳು ಪುಸ್ತಕದಲ್ಲಿರುವ ಸರ್ವ ಸಾಧಕರು ಹರ್ಷ ವ್ಯಕ್ತಪಡಿಸಿದ್ದಾರೆ...

ಮುಂಬಯಿ ಸಾಹಿತಿಯ ಕನ್ನಡ ಮುತ್ತು...

ಮುಂಬಯಿ ಸಾಹಿತಿಯ ಕನ್ನಡ ಮುತ್ತು.......
ಮುಂಬಯಿ ಮಹಾನಗರದ ಸಾಹಿತಿ ಶ್ರೀವಿಶ್ವೇಶ್ವರ ಮೇಟಿಯವರು ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಕನ್ನಡ ಸಾಹಿತ್ಯ ಹಾಗೂ ಭಾಷೆಯ ಬಗ್ಗೆ ಅಭಿಮಾನ ಗೌರವ ಮೆಚ್ಚುಗೆ ಪಾತ್ರರಾಗಿದ್ದಾರೆ. ೩ ಕೃತಿಗಳು ಬಿಡುಗಡೆಯಾಗಿ ಕನ್ನಡಿಗರ ಮಡಲಿಗೆ ಅಪ್ಪಿಕೊಂಡಿವೆ. ಅದೇ ರೀತಿ ೩ ಕೃತಿ ಬಿಡುಗಡೆಯ ಹಂತದಲ್ಲಿ ಇವೆ. ತಮ್ಮ ಕಾಯಕಗಳನಡುವೆ ಕೂಡ ಸಾಹಿತ್ಯಕ್ಕೆ ಒತ್ತು ನೀಡುತ್ತಿರುವ ಮೇಟಿಯವರು ಈಗ ಮತ್ತೆ ಮದುವೀಗೆ ಬಂದಾಕಿ ಕವನ ಸಂಕಲನ ಬಿಡುಗಡೆಯಾಗಿದೆ.
ನಾವು ನಡೆಯುತ್ತಿದ್ದೇವೆ ಇಪ್ಪತ್ತೊಂದನೆಯ ಶತಮಾನದಲ್ಲಿ.
ಭಾಷೆ ಭಾಷೆಗಳ ದ್ವೇಷಗಳ ನಡುವೆ
ಧರ್ಮ ಧರ್ಮಗಳ
 ಕಿಚ್ಚಿನೊಡನೆ ದೇಶ ಒಡೆಯುವ ಸಂಚಿನೊಡನೆ,
ದೇಶದಲ್ಲಿ ಇಂದು ನಡೆಯಬಾರದ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ಭಾಷೆಯ ಹೆಸರಲ್ಲಿ ದಬ್ಬಾಳಿಕೆ ನಡೆಯುತ್ತಿರುವುದು ವಿಷಾದನೀಯ ಅದರ ಜೊತೆಯಲ್ಲಿ ಜಾತಿ ಜಾತಿಗಳ ನಡುವೆ ಕೋಮುಗಲಭೆ ಸಂಚು ಮಾಡಿ ಕೊಲೆ ಸುಲಿಗೆ ಮಾಡಿ ಜನಸಾಮಾನ್ಯರನ್ನು ಬೀದಿಗೆ ನಿಲ್ಲಿಸುವ ಕುತಂತ್ರ ನಡೆಯುತ್ತಿದೆ ಇದರ ಲಾಭ ಪಡೆದು ಅಧಿಕಾರಕ್ಕೆ ಬರುವ ರಾಜಕಾರಣಿಗಳು, ಒಂದು ಧರ್ಮವನ್ನು ಕಟ್ಟಿ ಮತ್ತೊಂದು ಧರ್ಮಕ್ಕೆ ಸಹಾಯ ಮಾಡುವ ರಾಜಕಾರಣಿಗಳನ್ನು ಇಂದು ಕಾಣುತ್ತಿದ್ದೇವೆ. ತಮ್ಮ ಸ್ವಾರ್ಥ ಗೋಸ್ಕರ ಜನರನ್ನು ಬಲಿ ನೀಡುತ್ತಿರುವುದು ಏಕೆಂದರೆ ರಕ್ತ ಹರಿಯಬೇಕು ರಕ್ತದ ಹೆಸರಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬೇಕು. ಎಂಬ ಹಪಾಪಪಿ ಇದು ದೇಶದ ದುರಂತ ಎಲ್ಲಾ ಧರ್ಮದ ಜನರನ್ನು ಸಮಾನವಾಗಿ ನೋಡಿಕೊಳ್ಳ ಬೇಕಾಗಿದೆ. ಆದರೆ ರಾಜಕಾರಣಿಗಳು ಕೋಮುಗಲಭೆ ಗಳಿಗೆ ಇವರೇ ಕಾರಣರು ಇವರು ಮಾಡುತ್ತಿರುವುದು ಏನು? ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಕೆಲಸ ಮಾಡದೆ ಜಾತಿ ಭಾಷೆಗಳ ನಡುವೆ ಕಿಚ್ಚು. ಹೆಚ್ಚುವ ರಾಜಕಾರಣಿಗಳಿಂದ ಎಚ್ಚರಿಕೆಯಿಂದ ಇರಬೇಕಾಗಿದೆ.
ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದ ನಾಡು ನಮ್ಮದು.
ಹೇಳಿದರು ನಮ್ಮ ಹಿರಿಯರು ಅದಕ್ಕೆಲ್ಲ ಪುರಾವೆಗಳಿತ್ತರು.
ನಾಣ್ಯ ದೇವಕರ್ನಾಟಕದವನು ಇದಕ್ಕೆ ರುಜುವಾತು ಆಗಿರುವುದು ಅಷ್ಟೆ ಸತ್ಯ ಅವನ ಹೆಸರು ಸೂಚಿಸುವಂತೆ ನನ್ನೇಯ ಎಂದರೆ ದ್ರಾವಿಡ ಭಾಷೆಯಲ್ಲಿ ಪ್ರೀತಿ ಪ್ರಿಯ ಬಲವು ಎಂದಾಗಿ ನಾನ್ಯದೇವ ಕರ್ನಾಟಕದವನು ರುಜುವಾತು ಪಡಿಸಿದೆ. ಚಲದೋಳ್ ದುಯೋಧನಂ ನನ್ನಿಯೋಳಿನ ತನಯಂ ಗಂಡಿ ನೋಳ್ ಭೀಮಸೇನ ಪದಪ್ರಯೋಗ ಕನ್ನಡ ಭಾಷೆಯಲ್ಲಿ ಅಪೂರ್ವ ನೇಪಾಳದ ತೆರಾರಿ ಬಿಹಾರಿನ ಚಂಪಾರಣ ಸಿಂಹರಾಯ ಪೂರ (ಅಥವಾ ಸಿಂಹರಾನ ರಾಜಧಾನಿ ಮಾಡಿಕೊಂಡ ಕೀರ್ತಿ ನ್ಯಾಣ ದೇವನಿಗೆ ಸಲ್ಲುತ್ತದೆ ಕೊನೆಯ ರಾಜ ಹರಿ ಸಿಂಹ ದೇವವ Oಶದವರಿಗೆ ಕರ್ನಾಟಕ ಭೂಷಣ ಕರ್ನಾಟಕ ಕುಲ ಶ್ರೇಷ್ಠ. ಶಾಸನದಲ್ಲಿ ಉಲ್ಲೇಖವಿದೆ. ಕನ್ನಡಿಗರಾದ ನಾವು ನಮ್ಮ ಕರ್ನಾಟಕ ನಮ್ಮ ನಾಡು ಕರ್ನಾಟಕ ನಮ್ಮ ಭಾಷೆ ಕರ್ನಾಟಕ ಎದೆತಟ್ಟಿ ಹೇಳಿದರೆ ತಪ್ಪೀನು? ಸೋಮೇಶ್ವರರು ತಮಿಳುನಾಡಿನ ಕಣ್ಣ ನೂರ ಪ್ರದೇಶವನ್ನು ಆಳ್ವಿಕೆ ಮಾಡಿದ ತಮಿಳುನಾಡಿನ ಶಾಸನದಲ್ಲಿ ಕನ್ನಡ ಅಕ್ಷರದಲ್ಲಿ ತಮ್ಮ ಅದಿ ಬಿರುದು ಮಲೇಪೆರೋಲ್ ಗಂಡ ಕೆತ್ತಿ ಕನ್ನಡ ಪ್ರೇಮ ಶಾಶ್ವತಗೊಳಿಸಿದ್ದಾರೆ. ಇನ್ನೊಂದು ಕುಡಿ ಬಂಗಾಳದ ಸೇನರು ಮಗದ ದೇಶ ಅಳಿದರು.
ತುತ್ತಿನ ಚೀಲಕೂ ಸಾವಿರದ ಛಿದ್ರ
ಹೊಡೆತ ತಿನ್ನುತ್ತ ಬೀಳುತ್ತ ಏಳುತ್ತ ಕಟುಕರ ಮನೆಗೆ ಆಹಾರವಾಗಿ
ದನಕರುಗಳು ಸಾಲು ಸಾಲಾಗಿ ಗುಂಪು ಗುಂಪಾಗಿ,
ಒಂದು ವರುಷ ಮಳೆಯಾದರೆ ಮತ್ತೊಂದು ವರುಷ ಬರಗಾಲಗಳ ನಡುವೆ ಕಣ್ಣು ಮುಚ್ಚಾಲೆ ಆಟ ನಡೆದಿದೆ. ತಾನು ದುಡಿದ ಹಣವನ್ನು ಗದ್ದೆಗೆ ಖರ್ಚು ಮಾಡುತ್ತಾನೆ. ಉತ್ತಮ ಬೆಳೆ ಬಂದರೆ ಬೆಲೆ ಇರುವುದಿಲ್ಲ. ಲಾಭಕ್ಕಿಂತ ಹಾನಿಯೇ ಹೆಚ್ಚು ಕುಟುಂಬದ ನಿರ್ವಹಣೆ ಮಾಡಲು ಕೂಲಿನಾಲಿ ಮಾಡಬೇಕು ದುಡಿದ ಹಣ ಹೊಟ್ಟೆ ಬಟ್ಟೆ ಶಿಕ್ಷಣಕ್ಕೆ ಸಾಲುವುದಿಲ್ಲ ಲೇವಿದಾರರ ಹಾಗೂ ಬ್ಯಾಂಕರ್ ಹತ್ತಿರ ಸಾಲ ತೆಗೆದುಕೊಳ್ಳಬೇಕು. ದನಕರುಗಳು ರೈತರ ಜೀವನಾಡಿ ಬದುಕಿನ ಅವಿಭಾಜ್ಯ ಅಂಗಯೆಂದರೆ ತಪ್ಪಾಗಲಾರದು ಬರಗಾಲ ಬೇಗೆಗೆ ತತ್ತರಿಸುತ್ತಿರುವ ಸಾಕುಪ್ರಾಣಿಗಳಿಗೆ ಮೇವು ನೀರು ಇಲ್ಲದೇ ದುಬಾರಿ ಹಣಕ್ಕೆ ತೆಗೆದುಕೊಳ್ಳಲು ಸಾಧ್ಯ ವಾಗದೆ ಬೆಳೆಸಿದ ದನ ಕರುಗಳನ್ನು ಕಡಿಮೆ ದರದಲ್ಲಿ ಮಾರಿಬಿಡುತ್ತಾರೆ. ಹೀಗೆ ಪ್ರತಿ ವರುಷ ಕೋಟ್ಯಂತರ ದನ ಗಳು ಕಟುಕರ ಕೈಯಲ್ಲಿ ಬಲಿಯಾಗುತ್ತೀವೆ. ಅಂಕೆ ಸಂಖ್ಯೆ ಸಿಗದ ಕಸಾಯಿಖಾನೆಗಳು ಸರ್ಕಾರ ಕಡಿವಾಣ ಹಾಕಲು ವಿಫಲವಾಗಿದೆ. ಸರಕಾರ,
ನಮ್ಮ ಕನ್ನಡ ಸಾಲಿ ಮಾಸ್ತರ ಸಾಲ್ಯಾಗೋ ಗುಡಿಗುಂಡಾರ ದಾಗೂ ಇದ್ದು ಮಕ್ಕಳಿಗೆ ಪಾಠ ಮಾಡುತ್ತಿದ್ದರು.
90ರ ದಶಕದಲ್ಲಿ ಪ್ರತಿ ತರಗತಿಯಲ್ಲಿ 120 ರಿಂದ 180 ವಿದ್ಯಾರ್ಥಿಗಳು ಇರುತ್ತಿದ್ದರು. ಒಬ್ಬರೇ ಶಿಕ್ಷಕರು ಪ್ರತಿಯೊಂದು ವಿಷಯವನ್ನು ಮನದಟ್ಟು ಮಾಡಿ ಶಾಣ್ಯ ಮಾಡಿದ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ ಶಿಕ್ಷಕರು ಸಹ ತಮ್ಮ ಮಕ್ಕಳನ್ನು ಸಹ ಕನ್ನಡ ಶಾಲೆಗೆ ಕಳಿಸುತ್ತಿದ್ದರು ಮೇಲು ಕೀಳು ಎಂಬ ಭಾವನೆ ಇರುತ್ತಿರಲಿಲ್ಲ ಒಂದು ರೀತಿಯಲ್ಲಿ ಹೇಳಬೇಕಾದರೆ ನಡೆದಾಡುವ ದೇವರು ಯೆಂದರೆ ತಪ್ಪಗಲಾರದು. ದುಷ್ಟ ಪ್ರವೃತ್ತಿಯ ಅಟ್ಟುವ ಮಟ್ಟಹಾಕುವ ದಿಟ್ಟೆದೆಯ ಸ್ವಾತಂತ್ರ್ಯ ಬೇಕವಳಿಗೆ ಇಲ್ಲಾ ಚಂಡಿಯಾಗಿ ರುಂಡ ಚೆಂಡಾಡುವ ದಿನಗಳೇನೂ ದೂರವಿಲ್ಲ.
ಕಳೆದ 10-15 ವರುಷಗಳಿಂದ ಮುಗ್ಧ ಕಂದಮ್ಮ ಹಿಡಿದು ಎಪ್ಪತ್ತು ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿರುವುದು ನಾಚಿಕೆಗೇಡು ಪ್ರೀತಿಯ ಹೆಸರಲ್ಲಿ ನಾಟಕ ಮಾಡಿ ಅತ್ಯಾಚಾರ ಮಾಡಿ ಕೊಲೆ ಮಾಡುವ ಹಂತಕ್ಕೆ ಕಾಮುಕರು ಬಂದಿದ್ದಾರೆ. ಅತ್ಯಾಚಾರಕ್ಕೆ ಬಲಿಯಾದ ಹೆಣ್ಣು ಮಕ್ಕಳು ಮಾನಕ್ಕೆ ಅಂಜಿಆತ್ಮಹತ್ಯೆಗೆ ಶರಣಾಗುತ್ತಿರುವುದುನೋವಿನ ಸಂಗತಿ ನಮ್ಮ ದೇಶ ಪ್ರೀತಿ ವಿಶ್ವಾಸದಯೆ ಮಾನವೀಯತೆ ಭದ್ರ ಬುನಾದಿ ಹಾಕಿದ ಪುಣ್ಯ ಭೂಮಿಯಲ್ಲಿ ಹೇಯ ಕೃತ್ಯ ನಡೆಯುತ್ತಿರುವುದು ಸಮಾಜ ಯತ್ತ ಸಾಗುತ್ತಿದೆ? ಊಹೆ ಮಾಡಲಾರದಷ್ಟು ಎಂಬ ಮಾತನ್ನು ವಿಷಾದದಿಂದ ಹೇಳಬೇಕಾಗಿದೆ. ನುಡಿದರೆ ನಾರಿ ಮುನಿದರೆ ಮಾರಿ ನುಡಿಯಂತೆ ಅತ್ಯಾಚಾರಿಗಳ ಅರ್ಭಟಕ್ಕೆ ಮುನ್ನುಡಿ ಬರೆಯಬಲ್ಲರು. ಯಾರು ಏನೇನು ಕಳೆದುಕೊಂಡರು ವೃದ್ಧ ತಂದೆ ತಾಯಿ ಇರುವೊಬ್ಬ ಮಗ ಎಳೆ ಮಕ್ಕಳು ತಂದೆ-ತಾಯಿಯ'''
2021 ವರುಷಮರೆಯಲಾಗದ ನೋವಿನ ದಿನಗಳು ಕೋರೋನಾ ಎಂಬ ಮಾರಿ ಲಕ್ಷಾಂತರ ಜನರನ್ನು ಸಾವಿನ ಮನೆಗೆ ಕಳಿಸಿದ ಆದಿನ ಗಳು ತಂದೆ ತಾಯಿಗಳ ಮುಂದೆ ಮಕ್ಕಳ ಸಾವು ಇಂದಿಗೂ ಸಹ ಅಳು ನಿಂತಿಲ್ಲ. ಇಡೀ ಕುಟುಂಬಗಳು ನಾಶಮಾಡಿದ ಆ ಘಟನೆ ಇಂದಿಗೂ ಹೃದಯ ಬಡಿತ ಜಾಸ್ತಿ ಆಗುತ್ತೆ. ಒಂದೊಂದು ಮನೆಯ ಒಂದೊಂದು ಬೇರೆ ಬೇರೆಯಾಗಿದೆ. ಗಂಡ ಇದ್ದರೆ ಹೆಂಡತಿ ಇಲ್ಲ ಹೆಂಡತಿ ಇದ್ದರೆ ಗಂಡ ಇಲ್ಲ ಗಂಡ ಹೆಂಡತಿ ಇದ್ದರೆ ಮಕ್ಕಳು ಇಲ್ಲ ತುಂಬಿದ ಸಂಸಾರ ಇಲ್ಲದೇ ಅವರ ನೆನಪಿನಲ್ಲಿ ನಡೆಯಬೇಕಾಗಿದೆ.
ಕನ್ನಡಾಂಭೆಯ ಕಣ್ಮಣಿಯೇ ಅರ್ಪಿಸಿ ತನು ಮನ ಧನವ ಕನ್ನಡಕ್ಕೆ ಜಯವ ತಂದ ಜಯದೇವಿತಾಯಿಯೇ.
ಸೋಲಾಪೂರ ಸಿದ್ದ ರಾಮೇಶ್ವರರ ಪುಣ್ಯ ಭೂಮಿ ಕನ್ನಡಿಗರ ಕರ್ಮಭೂಮಿ ಕನ್ನಡ ತಾಯಿ ಕನ್ನಡ ಕಟ್ಟಾಳು ಹೆಸರಾದ ಡಾ ಜಯದೇವಿತಾಯಿ ಕರುನಾಡಿನ ಮಹಾಚೇತನ ಕನ್ನಡಕ್ಕಾಗಿ ತಮ್ಮ ಜೀವನವನ್ನು ತಾಗ್ಯ ಮಾಡಿದ ಕರುಣಾಮಯಿ ತಾಯಿಯ ಹೋರಾಟ ಕನ್ನಡ ಕಳಕಳಿ ಪ್ರತಿಯೊಬ್ಬ ಕನ್ನಡಿಗರಿಗೆ ಸ್ಪೂರ್ತಿಯಾಗಬೇಕು ಅಂದಾಗ ಮಾತ್ರ ಕನ್ನಡ ಕನ್ನಡಿಗ ಕನ್ನಡ ನಾಡು ಉಳಿಯಲು ಸಾಧ್ಯ ಮೊದಲು ತಾಯಿ ಭಾಷೆ ಪ್ರೀತಿ ಸಬೇಕು ಬೆಳೆಸಬೇಕು ಸ್ವಾಭಿಮಾನಿಯಾಗಬೇಕು. ಅಂಶಗಳನ್ನು ಅಳವಡಿಸಿಕೊಂಡರೆ ತಾಯಿಗೆ ನೀಡಬೇಕಾದ ಸಣ್ಣ ಕಾಣಿಕೆ.
ಸಾಹಿತಿ ಸಂಘಟಕರಾದ ವಿಶ್ವೇಶ್ವರ ಮೇಟಿಯವರ ಸಾಹಿತ್ಯ ಬರವಣಿಗೆ ಹೀಗೆ ನಿರಂತರವಾಗಿ ಸಾಗಲಿ ಎಂದು ಶುಭಾಶಯಗಳೊಂದಿಗೆ.....
ಲೇಖಕರು. ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ...

ಭಾನುವಾರ, ಅಕ್ಟೋಬರ್ 6, 2024

ಕರುನಾಡ ನಾಡ ಹಬ್ಬ...

ಕರುನಾಡಿನ ನಾಡಹಬ್ಬ...

ದಸರಾ ಕರ್ನಾಟಕದ ನಾಡಿನ ಹಬ್ಬವು 
ಎಲ್ಲೆಡೆ ವಿಜಯ ದಶಮಿಯ ಸಂಭ್ರಮವು 
ಬಂದಿದೆ ನವರಾತ್ರಿಗಳ ವಿಶೇಷ ಕ್ಷಣವು 
ಕೈಬೀಸಿ ಕರೆಯುತ್ತಿದೆ ಮೈಸೂರು ನಗರವು 

ಚಾಮುಂಡಿ ದೇವಿಯ ಮೂರ್ತಿ ಮೆರವಣಿಗೆಯು 
ಇಡೀ ವಿಶ್ವಕ್ಕೆ ಆಗಿದೆ ಪ್ರಸಿದ್ಧಿಯು 
ಮತ್ತೆ ನೆನಪಿಸುತ್ತಿದೆ ರಾಜ ಪರಂಪರೆಯು 
ನೋಡ ಬನ್ನಿರಿ ಸಾಂಸ್ಕೃತಿಕ ನಗರಿಯು

ಒಳ್ಳೆಯ ವಿಜಯವನ್ನು ಗುರುತಿಸುವ ದಿನವು 
ನಡೆಯಲಿದೆ ಜಂಬೂ ಸವಾರಿಯ ಯಾತ್ರೆಯು 
ಮಲ್ಲಗಂಬ ಕುಸ್ತಿಯ ರೋಮಾಂಚನದ ದಸರೆಯು 
ಕಾಪಾಡಲಿ ಎಲ್ಲರನು ಶಕ್ತಿ ದೇವತೆಯು

ಮೈಸೂರು ದಸರಾ ಸಂಭ್ರಮ ಸುಂದರ 
ಒಂಬತ್ತು ದಿನವೂ ವಿಶೇಷ ಸಡಗರ 
ಮೈಸೂರ ಪಾಕ ತಿನ್ನಿರಿ ರುಚಿಕರ 
ಕೂಗಿ ಹೇಳಿ ಚಾಮುಂಡಿಗೆ ಜೈಕಾರ

ವಿಜಯನಗರ ಅರಸರ ಕಾಲದಲ್ಲಿ ಆರಂಭವು 
ರಾಜ ದರ್ಬಾರು ಒಳಗೊಂಡಿರುವ ಉತ್ಸವವು 
ಐತಿಹಾಸಿಕ ದಿನಗಳ ನೆನಪಿನ ಹಬ್ಬವು 
ಚಿನ್ನದ ಅಂಬಾರಿಯಿಂದ ಜಗತ್ಪ್ರಸಿದ್ಧಿಯು

ಮಹಿಷಾಸುರ ರಾಕ್ಷಸನ ಸಂಹಾರವ ಅರಿಯಿರಿ 
ಅರಮನೆಯ ಸಂಪೂರ್ಣ ಮಾಹಿತಿ ತಿಳಿಯಿರಿ 
ಆಯುಧ ಪೂಜೆಯ ಖುಷಿಯಲ್ಲಿ ಮಾಡಿರಿ 
ಬನ್ನಿಕೊಟ್ಟು ಬಂಗಾರದ ಹಾಗೆ ಬಾಳಿರಿ...
ಶ್ರೀ ಮುತ್ತು ಯ ವಡ್ಡರ 
 ಶಿಕ್ಷಕರು
 ಬಾಗಲಕೋಟ
9845568484

ನವರಾತ್ರಿ...

     ನವರ್ರಾತಿ...
ಮೈಸೂರ ದಸರಾ 
ಎಷೊಂದು ಸುಂದರ 
ನವರಾತ್ರಿ ಉತ್ಸವ 
ಹಬ್ಬದ ಸಡಗರ 
ಎಲ್ಲೆಲೂ ಸಂಭ್ರಮ 
ನವ ಅವಾತರಗಳು 
ಶೈಲಪುತ್ರಿ ದುರ್ಗೆ 
ಬ್ರಹ್ಮಚಾರಿಣಿ ದುರ್ಗೆ
ಚಂದ್ರಘಂಟಾ ದುರ್ಗೆ
ಕೂಷ್ಮಾಂಡದೇವಿ ದುರ್ಗೆ
ಸ್ಕಂದಾ ಮಾತಾ ದುರ್ಗೆ
ಕಾತ್ಯಾಯಿನಿ ದುರ್ಗೆ
ಕಾಳರಾತ್ರಿ ಮಹಾಮಾಯೇ 
ಮಹಾ ಗೌರಿ ತಾಯಿ
ಸಿದ್ಧಿಧಾತ್ರಿ ತಾಯಿ 
ದೇವಿಯ ಅವತಾರಗಳು 
ನವರಾತ್ರಿಯ ದಿನಗಳು
ಆಯುಧ ಪೂಜೆಗಳು 
ವಿಜಯದಶಮಿ ಹಬ್ಬದ ಶುಭಾಶಯಗಳು. 
           - ವಿ.ಎಂ.ಎಸ್.ಗೋಪಿ ✍
          ಲೇಖಕರು, ಸಾಹಿತಿಗಳು
                 ಬೆಂಗಳೂರು.
ಹತ್ತು ಸುತ್ತು ಒಂದು ಮುತ್ತು ಒಂದು ಅವಲೋಕನ...

ಸಂಜಯ ಕುರಣೆಯವರು ಬೆಳಗಾವಿ ಜಿಲ್ಲೆಯ ಸಾಹಿತಿಗಳಲ್ಲಿ ಸಹ ಒಬ್ಬರು. ಸಾಹಿತ್ಯದ ವಿವಿಧ ಬಗೆಯ ರೀತಿಯಲ್ಲಿ ಸಾಹಿತ್ಯ ರಚನೆ ಮಾಡಿರುವುದು ಬಹಳ ವಿಶೇಷವಾದದು. ಪ್ರತಿಯೊಂದು ವಿಷಯ ಬಗ್ಗೆ ಅಧ್ಯಯನ ಮಾಡಿ ತಮ್ಮ ಅಂತರಾಳದಿಂದ ಬರುವ ಪ್ರತಿಯೊಂದು ಶಬ್ದವೂ ಮನ ತಟ್ಟಿದೆ ಕೂಡ.  
 ಪ್ರತಿಯೊಂದು ಅಕ್ಷರ ಸಾವಿರ ಕಥೆ ಹೇಳುತ್ತದೆ ದಾರಿಗೆ ದಾರಿಯಾಗುತ್ತದೆ ತಪ್ಪುಗಳ ತಿದ್ದುವ ದೀವಿಗೆಯಾಗುತ್ತದೆ
 ಸಾಹಿತ್ಯ ಕಸದ ತೊಟ್ಟಿಯಲ್ಲ. ಸದಾ ಬೆಳಗುತ್ತಿರುವ ನಂದಾದೀಪ , ಶಿಕ್ಷಕರಾಗಿ ಅದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ ಇದಕ್ಕೆ ಸೂಕ್ತ ವೃಕ್ತಿ ಸಂಜಯ ಕುರಣೆಯವರು. ಈಗ ಮತ್ತೊಂದು ಕೃತಿ ಹತ್ತು ಸುತ್ತು ಒಂದು ಮುತ್ತು ಕೃತಿ ಅರ್ಥಪೂರ್ಣ ಹಾಗೂ ವೈವಿಧ್ಯತೆಯಿಂದ ಕೂಡಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾ ಪೂರ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಶತಮಾನದ ಇತಿಹಾಸ ಹೊಂದಿದೆ 1905 ರಲ್ಲಿ ಪ್ರಾರಂಭವಾದ ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ದೇಶದ ಉತ್ತಮ ಪ್ರಜೆಯಾಗಿ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದೆ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಶಾಲೆಗೆ ಹಾಗೂ ಗ್ರಾಮಕ್ಕೆ ಹೆಸರು ತಂದಿದ್ದಾರೆ.
10 ಗಂಟೆ 15 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಎಲ್ಲ ವಿದ್ಯಾರ್ಥಿಗಳು ವಿಭಾಗವಾರು ಸರಿಯಾಗಿ ನಿಂತು ಪ್ರಾರ್ಥನೆ ಗಾಯತ್ರಿ ಮಂತ್ರ ನಾಡಗೀತೆ ಪಂಚಾಂಗ ಸುದ್ಧಿ ರಾಷ್ಟ ಗೀತೆ ನಾಣ್ಣುಡಿ ಗೀತಾ ಶ್ಲೋಕ ಸಂವಿಧಾನ ಮಗ್ಗಿ 15 ತಾರೀಖಇದ್ದರೆ ಹದಿನೈದರ ಮಗ್ಗಿ ಹೇಳುವುದು ಶಿಕ್ಷಣ ಜೊತೆ ಜೊತೆಗೆ ಒಳ್ಳೆಯ ಗುಣಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಮಾಡುತ್ತಿರುವುದು ಶ್ಲಾಘನೀಯ.
ಶ್ರೀಶೈಲ ಹೊಸೂರು ಅವರು ಅಂಕುರಿಸು ಕವನ ಸಂಕಲನ ಸುತ್ತಮುತ್ತಲಿನ ಪರಿಸರದ ಅಧ್ಯಯನಕ್ಕೆ ಸೂಕ್ತವಾಗಿದೆ ಸಂಜಯ ಕುರಣೆಯವರ ಹಿನ್ನುಡಿ
ಯೊಂದಿಗೆ ಉತ್ತಮ ಗುಣಮಟ್ಟದ ರಚನೆಯಾಗಿದೆ.
ದಂತಕಥೆ ನನ್ನವಳು
ನಾನು ಅವಳಿಗೆ ಅವಳು
ನನಗೆ ನೆನಪಾದರೆ ನಮಗೆ
ನಾವೇ ಭವ್ಯಇತಿಹಾಸ
ಪ್ರೀತಿಯ ಮಡಿಲೊಳಗಿನ ಕನವರಿಕೆಯೊಂದಿಗೆ ಕವಿತೆಯು ಅಂಕುರಿಸು ಸಂಕಲನದೊಳಗೆ ಇಂತಹ ಪ್ರೀತಿ ಪ್ರೇಮದ ಒಂದೇ ಸೂರಿನಡಿ ಹಲವಾರು ಕವಿತೆಗಳು ಗಿರಕಿ ಹೊಡೆಯುತ್ತಾ ಮೂಡಿ ಬಂದಿದೆ.
ಹಿರಿಯ ಲೇಖಕರಾದ ಎಸ್.ಕೆ. ಹೊಳೆಪ್ಪ ನವರ ಯವರು ರಚನೆ ಮಾಡಿರುವ ಅಂಬಿಗರ ಚೌಡಯ್ಯ ಕೃತಿ 12ನೇ ಶತಮಾನದಲ್ಲಿ ಶರಣರ ಸರಳ ವಿಚಾರದ ವಚನಗಳು ಜನರ ನಾಲಿಗೆಯ ಮೇಲೆ ಕುಳಿತು ಕಿವಿಗಳಲ್ಲಿ ಸುಳಿದು ಹೃದಯ ಹೃದಯದಲ್ಲಿ ಇಳಿದು ಮನದಲ್ಲಿ ಉಳಿದು ಜನಪದ ಬೆಳೆದು ಹೊಳೆಯಾಗಿ ಹರಿದು ಶಿಲಾಶಾಸನಗಳಲ್ಲಿ ಮೂಡಿ ಬಂದಿವೆ
ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು ನಂಬಿದರೆ ಒಂದೇ ಹುಟ್ಟಲಿ ಕಡೆದು ಹಾಯಿಸುವ ಅಂಬಿಗರ ಚೌಡಯ್ಯ
ತಮ್ಮ ಕಾರ್ಯದ ಅನುಭವದ ನುಡಿಗಳನ್ನು ವಚನಗಳ ಮುಖಾಂತರ ರಚನೆ ಮಾಡಿದ್ದಾರೆ.
ರಾಜು ಸನದಿಯವರದು ಗುಡದ ಕುಂಡ ಕೃತಿಯಲ್ಲಿರ ಕವಿತೆ ಹಾಗೂ ಚುಟುಕುಗಳು ಒಳಗೊಂಡಿವೆ ತಮ್ಮ ಸಂಕಟದುಗುಡದ ದುಮ್ಮಾನಗಳ ಬಂಡಾಯ ಬರಹ ಕವಿತೆಗಳ ಮುಖಾಂತರ ವೃಕ್ತಪಡಿಸಿದ್ದಾರೆ.
ಹಕ್ಕಿಯ ಹಾಡಿಗೆ
ನಗುವ ಮಗುವಿಗೆ
ಯಾವ ಧರ್ಮದ ಮುದ್ರೆಯಿದೆ?
ದಯವಿಲ್ಲದ ಧರ್ಮಕ್ಕೆ ಯಾವ
ಎದೆ ಅರಳುತ್ತದೆ?
ಆಕಾಶದೆತ್ತರಕ್ಕೆ ಹಾರಾಡುವ ಹಕ್ಕಿಗಳ ಹಾಡಿಗೆ ಬಂಧನ ಇರುವುದಿಲ್ಲ ವಿಶ್ವಮಾನವನಾಗಿ ಹುಟ್ಟಿದ ಮಗುವಿಗೆ ಹತ್ತಾರು ಬಂಧನದ ಕಟ್ಟಳೆಗಳ ಬೇಲಿ ನಿಮಿ೯ಸುತ್ತೇವೆ.
ಹರಿದಾಸ ಬಿ.ಸಿ.ರಾವ್ ಶಿವಪುರ ಇವರ ಅಂತರಾಳದ ನುಡಿ ವಿಚಾರ ರಶ್ಮಿ ಕೃತಿ ಅನೇಕ ವಿಚಾರಗಳನ್ನು ವ್ಯಕ್ತ ಪಡಿಸಿದ್ದಾರೆ. ಬಾಳಿಗೊಂದು ಗುರಿಯಿರಲಿ ಪ್ರಾಣಿಗಳೇ ಗುಣದಲ್ಲಿ ಮೇಲು.ಶಿಕ್ಷಕನೇ ಶಿಕ್ಷಣದಶಕ್ತಿ ಬದುಕುವ ಕಲೆ ಸಂಕಲ್ಪ ಶಕ್ತಿ ದೇವರು ಇಂತಹ ಹಲವಾರು ವಿಷಯಗಳ ಬಗ್ಗೆ ವಿವರಿಸಿದ್ದಾರೆ.
ಎಂ.ಕೆ.ಶೇಖ್ ಯವರು ಬರೆದ ನೂಲು ಕಥಾಹಂದರ ಹದಿನೆಂಟು ಕಥೆಗಳು ಮೂಡಿಬಂದಿವೆ ಸಮಾಜಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ ಗಟ್ಟಿ ಧ್ವನಿಯಾಗಿ ಸಾಗುವ ಕಥೆಗಳಾಗಿವೆ.
ಬದುಕಿನ ಕವಲು ದಾರಿಯಲ್ಲಿ ನಮ್ಮ ನಮ್ಮ ದಿಕ್ಕು ಬದಲಾದರೂ ಈ ರಾಖಿ ಮಾತ್ರ ನಮ್ಮ ಬಾಂಧವ್ಯಗಟ್ಟಿಗೊಳಿಸುತ್ತದೆ. ರಕ್ಷಾಬಂಧನದ ರಾಖಿಯೊಂದಿಗೆ ಕೆಟ್ಟ ಗಳಿಗೆ ಮರೆತು ಸಹೋದರತೆಯ ಭಾವದಲ್ಲಿ ತೇಲಿ ಬರುವ ರೀತಿಯಲ್ಲಿ ಕಥೆ ಸಾಗುವುದು.
ಶ್ರೀಮತಿ ಶೃತಿ ಹೆಗ್ಗೆಯವರು ಬರೆದ ಬಣ್ಣದ ಗರಿ ಕವನ ಸಂಕಲನ ಸುಂದರವಾಗಿ ಮೂಡಿಬಂದಿದೆ ಸೋತೆ ಎಂದು ನೀ ಮುಂದಿನ ಹೆಜ್ಜೆ ಹಿಂದಿಡಬೇಡ ಏಕೆಂದರೆ ಯಾರಿಗೂ ಗೊತ್ತು ಆ ಹೆಜ್ಜೆ ನಿನ್ನ ಇತಿಹಾಸವನ್ನೇ ಸೃಷ್ಟಿ ಮಾಡುವ ಹೆಜ್ಜೆಯಾಗಿರಬಹುದು.
ಆದೆಷ್ಟೋ ನನಸಾಗದ ಕನಸುಗಳು
ಹಿಡಿದು ಸಾಗುತಲಿವೆ ಕಣ್ಣುಗಳು.
ಏರು ತಗ್ಗುಗಳಿರುವ ಪಯಣಗಳು ತೋಚಿದ ಕಡೆ ನಡೆಯುತ್ತಾ ಕಾಲುಗಳು.
ಕನಸಿನ ಲೋಕದ ಮೆಟ್ಟಲುಗಳು ಜೀವನದ ಏರುತಗ್ಗುಗಳಲ್ಲಿ ಪಯಣದ ದಾರಿ ತೋಚಿದ ಹಾಗೆ ಸಾಗುತ್ತಿವೆ.
ಶ್ರೀಶೈಲಸಂಗಮ ಯವರು ಬರೆದ ಹೊನ್ನಸಿರಿ ಧಾರೆ ಕೃತಿಯಲ್ಲಿ ಮೂಡಿ ಬಂದ ಕವಿತೆ.
ಸುಖ-ದುಃಖದ ಸಾಲಿನಲ್ಲಿ ಬಾಳ ಪಯಣ ಸಾಗುವಲ್ಲಿ ಪ್ರೀತಿ ಭಾವ ಬೆಳಗಿಸು ಮನುಕುಲದ ರೀತಿಯಲ್ಲಿ
ಸತಿಪತಿಯ ಬಾಳಪಯಣದೊಳಿಗೆ ನೋವು ಮತ್ತು ಸುಖದ ಚಕ್ರವು ಸತತ ತಿರುಗುವುದು. ಒಮ್ಮೆ ಸುಖ ಬಂದರೆ ಅದರ ಹಿಂದೆ ದುಃಖ ಬರಬಹುದಲ್ಲವೆ?
ಶ್ರೀ ಜಯನಂದ ಮಾದರ ಪುಂಡಿ ಪಲ್ಲೆ ಕಥಾ ಸಂಕಲನದಲ್ಲಿ ಒಟ್ಟು ಇಪ್ಪತ್ತು ಎರಡು ಕಥೆಗಳು ಹಳ್ಳಿ ಬದುಕಿನ ಹಲವು ವಿಷಯ ವಸ್ತು ತೆಗೆದುಕೊಂಡು ಉತ್ತಮ ಕಥೆ ರಚಿ ನೆ ಮಾಡಿದ್ದಾರೆ. ಕಥೆಯೊಂದಿಗೆ ಪ್ರಾರಂಭಗೊಂಡು ಓಣಿಯೊಳಗೆ ತಿರುಗಾಡಿ ತರಕಾರಿ ಮಾರುವ ನಿತ್ಯದ ವ್ಯವಹಾರದೊಳಗ ತಂಗೆವ್ವನ ಪಾತ್ರ ಹಾಗೂ ತರಕಾರಿ ತೆಗೆದುಕೊಳ್ಳುವವರ ಸಂಭಾಷಣೆ ಚಿತ್ರಣ ಹಾಗೂ ತರಕಾರಿ ಕದ್ದ ಮಲ್ಲವ್ವನ ಮಗನ ಪ್ರಾಮಾಣಿಕತೆಯ ಕಥೆ
 ಚೆನ್ನಾಗಿ ಮೂಡಿಬಂದಿದೆ.
ಕೈಲಾಸ ಮದಬಾವಿ ಯವರು ಕಾಲದ ಕುಣಿತ ಕವನ ಸಂಕಲನ ಇಂದಿನ ವಾತಾವರಣಕ್ಕೆ ಹೋಲಿಸಿಕೊಂಡು ಬರೆದಿರುವುದು ವಿಶೇಷವಾದದು.
ಬೇಡ ಮಹಡಿ ಮನೆ
ಗುಡಿಸಲಾಗಲಿ ಅರಮನೆ.
ಚಿನ್ನ ಬೆಳ್ಳಿ ಏಕೆ ಬೇಕು?
ತೃಪ್ತಿ ಸಿಗಲಿ ಪ್ರಾರ್ಥನೆ.
ಸಂತೃಪ್ತಿಯ ಕವಿತೆಯೊಳಗೆ ಇರುವುದರಲ್ಲಿ ತೃಪ್ತಿಪಡು ಇರದೇ ಇರುವುದಕ್ಕೆ ಆಶೆ ಪಡದ ಸುಖ ಶಾಂತಿ ನೆಮ್ಮದ್ಧಿ ಇರುವ ಸೌಲಭ್ಯದಲ್ಲಿ ಪಡೆದು ಅದನ್ನು ಸಂತೃಪ್ತಿಯಿಂದ ಅನುಭವಿಸುವ ನೀತಿ ನಿತ್ಯದಾಗಲಿ.
ಶ್ರೀ ಎಲ್.ಎಸ್. ಚೌರಿಯವರು ಚೌರೀಶನ ಕಥೆವಿಶೇಷ ಎಂದು ಹೇಳಬಹುದು ಒತ್ತಕ್ಷರವಿಲ್ಲದ ಕಥಾ ಸಂಕಲನ ಯಾರು ಮಾಡದ ಸಾಹಸ ಚೌರಿಯವರು ಮಾಡಿದ್ದಾರೆ.
ಶ್ರೀ ವಡಗೋಲ ಶಿವಾನಂದ ಭಾಗಾಯಿ ಯವರು ಬರೆದ ಬಡವನ ಬುತ್ತಿ ಬಿಚ್ಚಿದಾಗ ಕವನ ಸಂಕಲನದಲ್ಲಿ ಮೂಡಿ ಬಂದ ಕವನ . ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ
ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ.
ಪುಸ್ತಕವಿಲ್ಲದ ಮನೆ
ಆತ್ಮವಿಲ್ಲದ ಶರೀರ.
ಬರಹಗಾರನ ಅಂತರಾಳದೊಳಗ ಅಡಗಿರುವ ವಿಚಾರ ಕ್ರಮಬದ್ಧತೆ ಬರಹ ರೂಪ ತಾಳಿದಾಗ ಮಾತ್ರ ಒಂದು ಸುಂದರ ಕವನವಾಗಬಲ್ಲದು.
ಕಲಾವಿದೆ ವಿಜಯಲಕ್ಷ್ಮಿ ಕುರುಣೆಯುವ ಪ್ರತಿಭೆ ರಂಗೋಲಿ ಕಲೆಗಾರಿಕೆ ಜೊತೆ ಬರೀ ಪೆನ್ಸಿಲ್ ದಿಂದ ಚಿತ್ರ ಸುಂದರವಾಗಿ ಮೂಡಿಬಂದಿವೆ. ಮೆಹಂದಿ ತೆಗೆಯುವುದು ಇಂತಹಉತ್ತಮ ಗುಣಗಳನ್ನು ಅಳವಡಿಸಿಕೊಂಡು ಹೋಗುತ್ತಿರುವುದು ಸಂತೋಷದ ಸಂಗತಿ. ಹೀಗೆ ಪ್ರಯತ್ನ ಸದಾ ನಿರಂತರವಾಗಿರಲಿ.
ಸಾಹಿತಿಗಳಾದ ಸಂಜಯ ಕುರಣೆಯವರ ಸಾಹಿತ್ಯ ಕೃಷಿ ಹೀಗೆ ನಿರಂತರವಾಗಿರಲಿ. ಹರಿಯುವ ಗಂಗೆಯಾಗಿ ಮಿನುಗುವ ನಕ್ಷತ್ರಗಳಂತೆ ಹಾಗೆ ಗಡಿನಾಡಿನ ಅಕ್ಷರ ಸಂತ ಸಂಜಯ ಕುರಣೆಯವರಿಗೆ ತುಂಬು ಹೃದಯದ ಅಭಿನಂದನೆಗಳು. .

ದಯಾನಂದ ಪಾಟೀಲ (ಲೇಖಕರು )
ಭಾರತೀಯಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ..

ಪ್ರೇಮವಿರಾಮ...


ಪ್ರೇಮವಿರಾಮ...

ಬೆಳ್ಮುಗಿಲಾಗದೆ,
ಕಾರ್ಮೋಡವಾದರೂ 
ಸುರಿದೆ ನೀನು, ಪ್ರೀತಿ 
ಹಸಿರಾಗಲು, ಹಸನಾಗಲು...

ಕಣ್ಣ ಬಿಂದುವಾಗಿ 
ಜಾರಿದರೂ, ಕಾರಣಳಾದೆ 
ಕಣ್ಣೋಳು ಹೊಕ್ಕ ಕಣಗಳು,
ಹೊರಬರಲು.. ಹೊರಬರಲು...

ಹಿಡಿದ ತುತ್ತನು,
ನಿತ್ಯವು ಕೈ ಜಾರಿಸಿದೆ,
ಅಗುಳು ಬೆಂದಿದೆ ಇಲ್ಲವೋ ಎಂದು,
ಪರೀಕ್ಷಿಸಲು...ಪರೀಕ್ಷಿಸಲು..

ನಿನ್ನ ಅಗಲಿಕೆಯಲ್ಲೂ 
ತುಂಬಿದೆ ಕಾಳಜಿಯ ಬಿಂದು,
ಸಿಕ್ಕು ಸಿಗಲಾರದ ನೀನು,
ನಗುತಿರು ಎಂದೆಂದು...
ಬಿ ಎಂ ಮಹಾಂತೇಶ
ಕ್ಯಾಸನಕೆರೆ, ಕೂಡ್ಲಿಗಿ ತಾ. ವಿಜಯನಗರ ಜಿ.

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...