ಮಂಗಳವಾರ, ಜೂನ್ 15, 2021

ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ೨


ಮುಖ ಪುಟದ ಚಿತ್ರಗಳು : ೧ ನೇ ಚಿತ್ರ ಅಂತರ್ಜಾಲ ಸಂಗ್ರಹಿತ ೨ ನೇ ಚಿತ್ರ ಶ್ರೀಜನಕುಮಾರ ಶ್ರೀ ಶೈಲ ಸಂಗಮ, ಅಥಣಿ

 
Screenshot_20201019_130917.jpg

ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಗೌರವ ಸಲಹೆಗಾರರು.

ಡಾ. ದು ಸರಸ್ವತಿ           ಡಾ ಕೆ ವಿ ನೇತ್ರಾವತಿ                 ಡಾ. ನಾಗಮಣಿ ಸಿ ಎಂ         ಡಾ ಗಾಯಿತ್ರಿದೇವಿ         ಡಾ. ಮಾಲ ಬಿ ಎಂ.

ಡಾ ನಾ ಮುನಿರಾಜು     ಡಾ ಕೈಲಾಸ್‌  ಎಸ್‌ ಡೋಣಿ      ಶ್ರೀ ದಯಾನಂದ ಪಾಟೀಲ್‌        ಅನೂಷಾ ಆರ್‌

ವಿಚಾರ ಮಂಟಪ  ಸಾಹಿತ್ಯ ಪತ್ರಿಕೆ.

 ವೈಚಾರಿಕ ಹಾಗೂ ಸೃಜನಶೀಲ ಬರಹಗಳು , ಕಥೆ , ಕವನ , ಚುಟುಕು ಬರಹಗಳು, ಲೇಖನ , ಚಿತ್ರಕಲೆ, ಹಾಸ್ಯ ಬರಹಗಳು, ಪುಸ್ತಕ – ವ್ಯಕ್ತಿ ಪರಿಚಯ, ದಾರವಾಹಿ, ಮುಂತಾದ ನಾನಾ ಮುಖದ ಕಲೆಗಳ ಅಭಿವ್ಯಕ್ತಿಗೆ ವೇದಿಕೆ.

ವಿಚಾರ ಮಂಟಪ ಸಾಹಿತ್ಯ ಬಳಗವು ಪ್ರಾರಂಭಿಕ ಕವಿ, ವಿಮರ್ಶಕರನ್ನು ಪ್ರೋತ್ಸಾಹಿಸುವ ಹಾಗೂ ಮಾರ್ಗದರ್ಶನ ಮಾಡುವ ಸದ್ದುದ್ದೇಶದಿಂದ ಈ ಆನ್ಲೈನ್‌ ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದು. ಸಾಹಿತ್ಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹಾ ಅನುಕೂಲ ಆಗಬಹುದೆಂಬ ಸದಾಶಯವನ್ನು ಸಂಪಾದಕ ಮಂಡಳಿ ಹೊಂದಿದೆ.

ಪತ್ರಿಕೆ ಪ್ರತಿ ೧೫ ದಿನಕ್ಕೊಮ್ಮೆ ಪಿ ಡಿ ಎಪ್‌ ರೂಪದಲ್ಲಿ ಪ್ರಕಟವಾಗಲ್ಲಿದ್ದು.  ಪ್ರತಿ ತಿಂಗಳ ೫ ಮತ್ತು ೨೧ ನೇ ದಿನಾಂಕಗಳಲ್ಲಿ ಓದುಗರನ್ನು ತಲುಪಲಿದೆ.

ವಿಶೇಷ ಸೂಚನೆಗಳು :

·         ತಮ್ಮ ಬರಹಗಳನ್ನು ಪತ್ರಿಕೆ ಪ್ರಕಟವಾಗುವ ೫ ದಿನಗಳ  ಮುಂಚಿತವಾಗಿ ನಮಗೆ ಕಳುಹಿಸಬೇಕು. 

·         ತಾವು ಕಳುಹಿಸುವ ಬರಹ ತಮ್ಮ ಸ್ವಂತದೇ ಆಗಿದ್ದು, ಹಿಂದೆ ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗಿರಬಾರದು.

·         ಬರಹಗಳು ವೈಚಾರಿಕತೆ ಹಾಗೂ ವೈಜ್ಞಾನಿಕ ದೃಷ್ಠಿಕೋನದಿಂದ ರಚಿಸಲ್ಪಟ್ಟಿರಬೇಕು.

·         ಯಾವುದೇ ರೀತಿಯ ದ್ವೇಷ, ನಿಂದನೆ, ಅಪಪ್ರಚಾರ, ಹಾಗೂ ಅಶ್ಲೀಲ ಬರಹಗಳಿಗೆ ಅವಕಾಶವಿಲ್ಲ.

·         ಬರಹಗಾರರು ತಮ್ಮ ಮೊಬೈಲ್‌ ನಲ್ಲಿ ತಮ್ಮ ಬರಹಗಳನ್ನು ತಪ್ಪಿಲ್ಲದಂತೆ ಟೈಪಿಸಿ ನಮಗೆ ಕಳುಹಿಸಬೇಕು.

·         ಯಾವುದೇ ರೀತಿಯ ಪಿ ಡಿ ಎಪ್‌ , ಕ್ರಮವಿಲ್ಲದ ಟೈಪಿಂಗ್‌ , ಅಕ್ಷರ ,ವ್ಯಾಕರಣ ದೋಷಗಳಿಂದ ಕೂಡಿರುವ ಬರಹಗಳನ್ನು ಪರಿಗಣಿಸಲಾಗುವುದಿಲ್ಲ.

·         ನಿಮ್ಮ ಬರಹಗಳ ಪ್ರಕಟಣೆಗೆ ಸಂಭಂಧಿಸಿ ಸಂಪಾದಕ ಮಂಡಳಿಯ ತೀರ್ಮಾನವೇ ಅಂತಿಮವಾಗಿರುತ್ತೆ.

·         ಪತ್ರಿಕೆಯಲ್ಲಿ ಪ್ರಕಟವಾಗುವ ಬರಹಗಳಿಗೆ ಪತ್ರಿಕೆ ಹೊಣೆಯಲ್ಲ , ಪ್ರತಿ ಬರಹಕ್ಕೂ ಆಯಾ ಲೇಖಕರೇ ಹೊಣೆಯಾಗಿರುತ್ತಾರೆ.

·         ನಮ್ಮ ಪತ್ರಿಕೆಯು ಉಚಿತ ಪತ್ರಿಕೆ ಆಗಿದ್ದು, ಕೇವಲ ಆನ್‌ ಲೈನ್‌ನಲ್ಲಿ  ಮಾತ್ರ ಪ್ರಕಟವಾಗುತ್ತದೆ.

·         ನಮ್ಮ ಪತ್ರಿಕೆ ಯಾವುದೇ ರೀತಿಯ ಅಧಿಕೃತ ನೊಂದಣಿ ಇಲ್ಲದ,ಆಂಗ್ಲಭಾಷೆಯ  ʼನ್ಯೂಸ್‌ ಲೆಟರ್‌ʼ ಪರಿಭಾಷಗೆ ಹೊಂದುವ ಸಾಮಾನ್ಯ ಹಾಗೂ  ಲಾಭರಹಿತ ಪಾಕ್ಷಿಕ  ವಾರ್ತ ಪತ್ರವಾಗಿರುತ್ತದೆ.

·          ನಿಮ್ಮ ಬರಹಗಳನ್ನು ನಮಗೆ ತಲುಪಿಸಬೇಕಾದ ವಾಟ್ಸಪ್‌ ಸಂಖ್ಯೆ : ೮೨೧೭೭೪೪೮೮೬

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ವರುಣ್‌ರಾಜ್‌ ಜೀ                                                                                                                                              ಸಂಪಾದಕರು                                                                                                                                                              ವಿಚಾರ ಮಂಟಪ ಸಾಹಿತ್ಯ ಪತ್ರಿಕೆ

ಸಂ : 9448241450

ಮಿಂಚಂಚೆ : maharishivarunrajji@gmail.com

 

 



ಪರಿವಿಡಿ

·         ಸಂಪಾದಕರ ಮಾತು

·         ಕವಿತೆಗಳು :

·         ದೇವರಿದ್ದಾನೆ

·         ಜನನಾಯಕರು

·         ಆವರಣಗಳಲ್ಲಿ

·         ಅಪ್ಪ

·         ಕರೋನಾ

·         ಅರಿವಿನ ಪಯಣ

·         ಹೆಣ್ಣೋಟದ ಭಾಷಿಕ ಮುಖಾಮುಖಿ

·         ಕೃಷಿ ಬಿಕ್ಕಟ್ಟು ಮತ್ತು ಮಹಿಳೆ

·         ಕವಿತೆಗಳು

·         ಪರಿಸ್ಥಿತಿ

·         ಬಡವನ ಕೂಗು

·         ಯೌವ್ವನ

·         ಸೈಜು ಸರಿಯಿಲ್ಲ

·         ಲೇಖನ ಬರಹಗಳು

·         ಶಕ್ಷಕರ ದಿನಾಚರಣೆ ಮತ್ತು ಮಹಾಚೇತನ ಸಾವಿತ್ರಿಬಾ ಫೂಲೆ

·         ಕರೋನಾ ಮತ್ತು ಆರ್ಥಿಕ ಸಂಕಷ್ಟ

·         ಭೂತ-ಪ್ರೇತ

·         ಲಾಕ್‌ ಡೌನ್‌ ಒಂದು ಧನಾತ್ಮಕ ವಿಶ್ಲೇಷಣೆ

·         ಮುಪ್ಪಿನ ಮುದುಕಿ

·         ಕರೋನಾ ಕಾಲದ ಶಕ್ಷಕ

·         ಸಮಯ

·         ಚಿತ್ರಕಲೆ

·         ಸಾಹಿತ್ಯ ಸಂಚಯ

·         ಶರಣರ ಸೂಳ್ನುಡಿ

·         ಪ್ರಾಚೀನ ಕವಿ ಪರಿಚಯ : ಪೊನ್ನ

·         ಕವಿವಾಣಿ

·         ರಸ ಪ್ರಶ್ನೆಗಳು

·         ಪ್ರಕಟಣೆ

·         ವಿಚಾರ ಮಂಟಪ ವೆಬಿನಾರ್‌ ವರದಿ

·         ಪ್ರಕಟಣೆಗಳು

 

 

ಸಂಪಾದಕರ ಮಾತು

ಓದುಗ ಮಿತ್ರರೆಲ್ಲರಿಗೂ ಪ್ರೀತಿಯ  ನಮಸ್ಕಾರಗಳು,

ವಿಚಾರ ಮಂಟಪ ಸಾಹಿತ್ಯ ಬಳಗ ದ  ಪಾಕ್ಷಿಕ ಸಾಹಿತ್ಯ ಪತ್ರಿಕೆಯ ೨ ನೇ ಸಂಚಿಕೆ ಇಂದು ಬಿಡುಗಡೆಯಾಗುತ್ತಿದೆ, ಪ್ರಾರಂಭಿಕ ಯುವ ಕವಿ ವಿಮರ್ಶಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಈ ಪತ್ರಿಕೆಯನ್ನು ಪ್ರಾರಂಭ ಮಾಡಿದ್ದೇವೆ. ಹಲವಾರು ಯುವ ಕವಿ ಮನಸ್ಸುಗಳಿಗೆ ತಮ್ಮ ಕಲೆಯನ್ನು ಅಭಿವ್ಯಕ್ತಿಸುವ ಇಂದು ಸ್ಥಳೀಯ ವೇದಿಕೆಯ ಅವಶ್ಯಕತೆ ಕಂಡಿತಾ ಇರುತ್ತದೆ. ಇಂತಹಾ ವೇದಿಕೆಯ ಮೂಲಕ ಹಲವರು ಹೊಸ ರೀತಿಯ ಬರಹಗಳ ಪ್ರಯೋಗಗಳನ್ನು ಮಾಡಬಹುದಾಗಿದೆ ಎಂಬುದು ನಮ್ಮ ನಂಬಿಕೆ. ಬೇರೆಯವರಿಗೆ ಅನುಕೂಲವಾಗುವ ಉದ್ದೇಶ ಒಂದು ಕಡೆಯಾದರೇ, ಕಲಿಯುವ ಅವಕಾಶಗಳನ್ನು ನಮಗೆ ನಾವೇ ಸೃಷ್ಟಿಸಿಕೊಳ್ಳುವ ಒಂದು ಸಣ್ಣ ಪ್ರಯತ್ನವಾಗಿಯೂ ಸಹಾ ಈ ಪತ್ರಿಕೆ ನಮಗೆ ಉಪಯೋಗಿ ಆಗಿದೆ.

ನಮ್ಮ ಪ್ರಯತ್ನಕ್ಕೆ ಫಲವಾಗಿ ಕರ್ನಾಟಕದ ನಾನಾ ಭಾಗಗಳಿಂದ ಹಲವಾರು ಯುವ ಕವಿಗಳು ಕವಿತೆ ಹಾಗೂ ಲೇಖನಗಳನ್ನು ಪ್ರಕಟಣೆಗಾಗಿ ಕಳುಹಿಸುತ್ತಿರುವುದು ತುಂಬಾ ಸಂತೋಷದ ವಿಚಾರ. ಹೆಚ್ಚು ಕವಿತೆಗಳು ಹಾಗೂ ಲೇಖನಗಳು ವಿಚಾರವಂತಿಕೆ, ಹೊಸ ಆಲೋಚನಾ ವಿಧಾನ, ವೈಜ್ಞಾನಿಕ ದೃಷ್ಟಿಕೋನ ದಿಂದ ಕೂಡಿದ್ದು ಇದು ನಮ್ಮ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ.  ನಮಗೆ ತಲುಪಿರುವ ಬರಹಗಳಲ್ಲಿ ಆಯ್ದ ಬರಹಗಳನ್ನು ಮಾತ್ರ ಈ ಸಂಚಿಕೆಯಲ್ಲಿ ಪ್ರಕಟಿಸಿದ್ದು , ಉಳಿದವನ್ನು ಸೂಕ್ತ ಬದಲಾವಣೆಗಳ ನಂತರ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. ತಮ್ಮ ಬರಹಗಳನ್ನು ಕಳುಹಿಸಿಕೊಟ್ಟ ಎಲ್ಲಾ ಬರಹಗಾರರಿಗೆ ವಿಚಾರ ಮಂಟಪ ಬಳಗವು ಅಭಿನಂದನೆಗಳನ್ನು ಹಾಗೂ ಧನ್ಯವಾದಗಳನ್ನು ತಿಳಿಸುತ್ತದೆ.

ನಮ್ಮ ಪತ್ರಿಕಯ ಮೊದಲ ಸಂಚಿಕೆಗೆ ಓದುಗರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು ಮೆಸೇಜ್‌,ಕರೆಗಳ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಿದ್ದು ತುಂಬಾ ಸಂತೋಷದ ವಿಷಯವಾಗಿದೆ, ತಮ್ಮ ಸಹಕಾರ ಇದೇ ರೀತಿ ಮುಂದುವರೆಯಲಿ ಎಂದು ಆಶಿಸುತ್ತೇವೆ. ಯಾವುದೇ ರೀತಿಯ ಸಲಹೆ ಸೂಚನೆ ವಿಮರ್ಶೆಗಳಿಗೆ  ಸದಾ ಸ್ವಾಗತವನ್ನು ಕೊರುತ್ತೇವೆ.

ನಮ್ಮ ಪ್ರಯತ್ನಕ್ಕೆ ಸಹಕಾರಿಯಾಗಿರುವ ಗೌರವ ಸಲಹೆಗಾರರಾದ  ಡಾ.ದು ಸರಸ್ವತಿ , ಡಾ ಕೆ ವಿ ನೇತ್ರಾವತಿ,  ಸೇರಿದಂತೆ ಎಲ್ಲಾ ಗೌರವ ಸಲಹೆಗಾರರು ಹಾಗೂ ನಮ್ಮ ಜೊತೆ ಸಹಕರಿಸುತ್ತಿರುವ  ಸಂಪಾದಕ ಮಂಡಳಿ ಸದಸ್ಯರಿಗೆ ನಮ್ಮ ಅನಂತ ಧನ್ಯವಾದಗಳು. ನಮ್ಮ ಪತ್ರಿಕೆಯನ್ನು ಹೆಚ್ಚು ಹೆಚ್ಚು ಜನರಿಗೆ ಹಂಚುವುದರ ಮೂಲಕ ನಮ್ಮ ಪ್ರಯತ್ನಕ್ಕೆ ಮತ್ತಷ್ಟು ಬೆಂಬಲ ನೀಡಬೇಕಾಗಿ ಕೊರುವೆ. ಅದೇ ರೀತಿ  ನಮ್ಮ ಬಳಗದ ವತಿಯಿಂದ ನಡೆಯುವ ವಿವಿಧ ರೀತಿಯ ವೆಬಿನಾರ್ಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದರೊಂದಿಗೆ ನಿಮಗೆ ತಿಳಿದವರನ್ನು ಸಹಾ ಭಾಗವಹಿಸಿ ಇವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರೋತ್ಸಾಹಿಸ ಬೇಕಾಗಿ ಓದುಗ ಮಿತ್ರರನ್ನು ಕೋರುತ್ತಾ… ಸಹಕರಿಸಿದ ಎಲ್ಲರಿಗೂ ಮತ್ತೊಮ್ಮೆ ಅನಂತ ಧನ್ಯವಾದಗಳನ್ನು ತಿಳಿಸುವೆ.

ನಮಸ್ಕಾರಗಳು

ವರುಣ್‌ರಾಜ್‌ ಜೀ                                                                                                                                              ಸಂಪಾದಕರು                                                                                                                                                              ವಿಚಾರ ಮಂಟಪ ಸಾಹಿತ್ಯ ಪತ್ರಿಕೆ

ಸಂ : 9448241450

ಮಿಂಚಂಚೆ : maharishivarunrajji@gmail.com

ಕವಿತೆಗಳು


ದೇವರಿದ್ದಾನೆ

ಹೊತ್ತು ಹೊತ್ತಿನ ಊಟವಿರಲಿ

ಪ್ರತಿ ತುತ್ತಿಗೂ ತಾತ್ವಾರ

ಉಂಗುಟ ಕಿತ್ತ ಚಪ್ಪಲಿ

ಹರಿದು ಮಾಸಿದ ಬಟ್ಟೆ ಕಾಡುತ್ತದೆ ಬಡತನ

ಕಾಯಬೇಕು ಕಾಪಾಡಲು ದೇವರಿದ್ದಾನೆ||

ಕೈ ಬಿಡುತ್ತದೆ ನೆರಳು ಕೂಡ

ಬದುಕ ತುಂಬುತ್ತದೆ ಕತ್ತಲು

ಭಯವಾಗುತ್ತದೆ ಬದುಕಲು

ಸಂತೈಸುವ ಭುಜಗಳೂ ದೂರವಾಗುತ್ತವೆ ಒಮ್ಮೊಮ್ಮೆ

ಆದರೆ ಕಾಯಬೇಕು ಕಾಪಾಡಲು ದೇವರಿದ್ದಾನೆ.||

ದುಡ್ಡು ದೌಲತ್ತುಗಳೆಲ್ಲ ಮಣ್ಣಾಗುತ್ತವೆ ಒಮ್ಮೆ

ಕರಗುತ್ತದೆ ಯವ್ವನ ಸೊರಗುತ್ತದೆ ಸೌಂದರ್ಯ

ಅಳಿಯುತ್ತದೆ ಜನಪ್ರಿಯತೆ

ಕಾಯಬೇಕು ಕಾಪಾಡಲು ದೇವರಿದ್ದಾನೆ||

ಸೋಲು ಕೊಟ್ಟ ದೇವರು

ಗೆಲುವನ್ನೂ ಕೊಡುತ್ತಾನೆ!!

ನಗು ಕೊಟ್ಟ ದೇವರು ನೋವನ್ನೂ ಕೊಡುತ್ತಾನೆ!!

ಆದರೆ ಕಾಯಬೇಕು ಕಾಪಾಡಲು ದೇವರಿದ್ದಾನೆ||

ದೇವರಿದ್ದಾನೆ ಅನ್ನುವದಕ್ಕೆ ಸಾಕ್ಷಿಗಳಿವೆ ಇಲ್ಲಿ!!

 ಪ್ರೀತಿಸಬೇಕು ಎಲ್ಲರನ್ನೂ

ಸೋಲಬಾರದು ಬದುಕು ಚೆಲ್ಲಬಾರದು ಉಸಿರು!!

ಈ ಲೋಕ ನಮ್ಮನ್ನು ತಿರಸ್ಕರಿಸಿದರೂ

ಕಾಯಬೇಕು ಕಾಪಾಡಲು ದೇವರಿದ್ದಾನೆ||.

ದೇವರೆಂದರೆ ಜಠಾಧಾರಿಯಲ್ಲ

ವಿಷಾಹಾರಿಯೂ ಅಲ್ಲ  ಖಡ್ಗ,ತ್ರೀಷೂಲ,ಡಮರುಗ ಮತ್ತೇನೋ ಹಿಡಿದವನೂ ಅಲ್ಲ.

ಚಿತ್ರ ವಿಚಿತ್ರ ಆಕಾರ ಭಯ ಹುಟ್ಟಿಸುವ

ಉಡುಗೆ ತೊಡುಗೆಗಳೂ ಅವನಿಗಿಲ್ಲ||

ಆದರೆ ದೇವರು ನಮ್ಮೊಂದಿಗೆ ಇದ್ದಾನೆ ನಮ್ಮಂತೆಯೇ||

ಎದುರುಗೊಂಡವರ ನೋಡಿ ನಕ್ಕರಷ್ಟೇ ಸಾಕು

ಮತ್ತೆ ನಗುವಾಗಿ ಮರಳಿ ಕಣ್ಣಿಗೆ ಕಾಣುತ್ತಾನೆ.

ಬದುಕು ಸೋತವರನ್ನು ನಗುವಲ್ಲೇ ಸಂತೈಸುತ್ತಾನೆ||.

                                                           -ದೀಪಕ ಶಿಂಧೇ.

ಜನನಾಯಕರು

ಜನಸೇವೆಯೇ... ಜನಾರ್ದನ ಸೇವೆಯೆಂದು

ಕೈ ಕೈ ಮುಗಿದು ಮತಯಾಚಿಸಿದರು.

ಸುಳ್ಳಿನ ಸುರುಳಿ ಬಿಚ್ಚಿ ಮತ ಪಡೆದರು.

ದೇಶದ ನಾಯಕರಾದರು  ಈ ಜನ ನಾಯಕರು.||

ದೇಶ ಸೇವೆಯ ನೆಪದಲ್ಲಿ ವಂಚನೆ ಮಾಡಿದರು.

ಜನಗಳ ಹಣ ಕೊಳ್ಳೆ ಹೊಡೆದರು..

ದೇಶ ಭಕ್ತರಂತೆ ವೇಷವ ಹಾಕಿ ದೇಶ ಭಕ್ಷಣೆ ಮಾಡುತ ಹೊರಟರು..

ಬಡವರ ರಕ್ತವ ಹೀರಿ ರಕ್ಕಸರಂತೆ ಮೆರೆದಾಡಿದರು.

ಈ ನಮ್ಮ ಜನನಾಯಕರು..

                       - ವೀರಂತರೆಡ್ಡಿ ಜಂಪಾ ಹುಮನಾಬಾದ.

 

ಆವರಣಗಳಲ್ಲಿ

ನಡೆಯುತ್ತಿವೆ ಧರ್ಮಸಭೆಗಳು

ಮಠ ಮಂದಿರ ಮಸೀದಿಗಳಲ್ಲಿ

ಹಲ್ಲೆಗಳು ನಡೆಯುತ್ತಿವೆ ಆವರಣಗಳಲ್ಲಿ||.

ಸಂನ್ಯಾಸಿಗಳಿಗೂ ಸಂಸಾರಿಗಳಿಗೂ

ಮುಸುಕಿನ ಗುದ್ದಾಟ - ಬದುಕಿನ ಒದ್ದಾಟ

ತ್ಯಾಗ ಭೋಗಗಳ ಕೊಸರಿನಾಟ||

ಅನ್ನುವಂತಿಲ್ಲ ಅನುಭವಿಸುವಂತಿಲ್ಲ

ಪೂರ್ವಾಶ್ರಮಗಳು ಕಳಚಿಕೊಳ್ಳುತ್ತಿವೆ ಪೊರೆ

ಬೆಸೆದುಕೊಳ್ಳುತ್ತಿವೆ ನಿತ್ಯ ಸಂಬಂಧಗಳು||

ತೂಗುತ್ತಿವೆ ಮೌಢ್ಯತೆಯ ತೊಟ್ಟಿಲುಗಳು

ಜೋಗುಳ ಹಾಡುತ್ತಿವೆ ಮಂತ್ರ ತಂತ್ರಗಳು

ಸಾಗರ ಸೇರುತ್ತಿವೆ ಜೀವನದಿಗಳು ಹರಿದು

ತಮ್ಮ ಆಕಾರ ಗುಣ ಸ್ವಭಾವ ಕಳೆದುಕೊಂಡು||

                                      - ಲಿಂಗಾರೆಡ್ಡಿ ಶೇರಿ

ಅಪ್ಪ

ಒಡೆದ ಕಾಲ್ಗಳ ಮಧ್ಯೆ

ಬಿರುಕಾದ ಕೈಗಳ ನಡುವೆ

ಒತ್ತರಿಸಿದ ಕಣ್ಣೀರೊಳಗೆ

ಹೆಪ್ಪುಗಟ್ಟಿದ ಮೌನದಲಿ

ಭರವಸೆಯ ಹಂದರ|

ಬಡತನದ ಬೇಗುದಿಯಲಿ

ಮನದೊಳಗೆ ಅವಿತ ಕನಸು

ಕೂಡಿಟ್ಟ ಕಾಸಿನ ಲೆಕ್ಕದ

ಅರಿವಿನ ಭವಿಷ್ಯದ ಕಾತರ|

ಹರಿದ ಅಂಗಿಯನ್ನು ಹೊಲಿದು

ಮಕ್ಕಳಲಿ ಸಂತಸ ಬೆಸೆದು

ಕಣ್ಣಂಚಿನ ಧಾರೆಯ ಪನ್ನೀರು

ಸಂತೃಪ್ತಿಯ ನಿಟ್ಟುಸಿರು|

ಬಾಗಿದ ಶರೀರ - ಆಳಕ್ಕಿಳಿದ ಕಂಗಳು

ಸವೆದ ಅನುಭವಗಳ ಆಗರ

ಅನುರಾಗದ ಹಾದಿಯ ಸಾಗರ

ಕಲಿಸಿದ ಪಾಠ ಅಪಾರ.|

ತನ್ನೆಲ್ಲಾ ಕನಸು ಕನವರಿಕೆಗಳ

ಮೂಲೆಗೆಸೆದು ಬಾಳು ಬೆಳಗಿದ

ಅನನ್ಯ ಸರಳ ಅಮೋಘ ಧೀಮಂತ ಅಪ್ಪ....

        - ಹಂಸರಾಗ ಶೆಟ್ಟಿ ಗೋಳಿ ತೊಟ್ಟು ಪುತ್ತೂರು ದಕ.

ಕರೋನಾ

ಮಹಾಮಾರಿ ಬಂದು ತಿಂಗಳುಗಳೇ ಕಳೆದವು

ಸಂತೋಷ ಸಡಗರವ  ನಾವೆಲ್ಲ ಮರೆತವು

ಕೊರೋನಾಕ್ಕಿಲ್ಲ ನಮ್ಮಲ್ಲೀಗ ಔಷಧ

ನಮ್ಮನ್ನು ನಾವೇ ಕಾಪಾಡಿಕೊಳ್ಳಲು ಸದಾ ನಾವು ಸಿದ್ಧ||

ಮುಚ್ಚಿದ ಬಾಗಿಲು ತೆರೆದಿಲ್ಲ ಶಾಲಾ-ಕಾಲೇಜುಗಳು

ಅರ್ಥೈಸಲಾಗುವುದಿಲ್ಲ ಆನ್ಲೈನ್ ಪಾಠಗಳು

ಕೈಕಟ್ಟಿ ಕುಳಿತಿವೆ ನಮ್ಮ ಸರ್ಕಾರಗಳು||

ಬಡವರ ಪಾಲಿಗೆ  ಕೊರೋನಾ ಶವಪೆಟ್ಟಿಗೆ ಇದ್ದಂತೆ

 ಮೈಮರೆತು ಹೊರಹೋದರೆ ನೀ ಸತ್ತಂತೆ

ಏನಾದರೇನಂತೆ ಬಿಡುವುದಿಲ್ಲ ಕೊರೋನಾ

ನೀ ಇಟ್ಟಿದರೂ ನೋಟುಗಳ ಕಂತೆ ಕಂತೆ.....

         -ದರ್ಶನ್ ಕಾಳಿಂಗ  ವಿದ್ಯಾರ್ಥಿ ಕಾಳಿಂಗನಹಳ್ಳಿ.


ಅರಿವಿನ ಪಯಣ

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ - ಕೋಲಾರ

ನಮ್ಮ ಮಗಳು  ಜಗದ ಬೆಳಕು

(ದಿನಾಂಕ ೧೧\೧೦\೨೦೨೦ ರಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ –ಕೋಲಾರ ಇವರು ಏರ್ಪಡಿಸಿದ್ದ ನಮ್ಮ ಮಗಳು ಜಗದ ಬೆಳಕು ವಿಬಿನಾರ್‌ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಅನೂಷಾ ಆರ್‌ ರವರು ಮಂಡಿಸಿದ ಲೇಖನ )

 ಹೆಣ್ಣೋಟದ ಭಾಷಿಕ ಮುಖಾಮಖಿ.

             ‘ಅಂತರ್ರಾಷ್ಟ್ರೀಯ ಹೆಣ್ಣು ಮಗುವಿನ ದಿನ’ ಕೇವಲ ಆಚರಣೆಯಾಗಿಸಲಾರೆವು. ನಮ್ಮ ಬಗ್ಗೆ ನಾವು ಮಾತನಾಡುವ ದಿನವಾಗಿ ಭಾವಿಸುವೆ. ಹೀಗೆ ನನ್ನ ಬಾಲ್ಯ, ನನ್ನ ಸೋದರಿಯರು, ನನ್ನ ಮಗಳನ್ನು ಪ್ರತಿನಿಧಿಸಿಬೇಕಾಗಿದೆ. ಈಗೆ ಮಾತನಾಡಲು ಮುಂದಾದರೆ, ದುಃಖದೊಂದಿಗಿನ ಮೌನದ ಅಭಿವ್ಯಕ್ತಿ ನನ್ನೊಳಗೆ ಆವರಿಸಿಬಿಡುತ್ತದೆ. ಮತ್ತೊಂದು ಕಡೆ ನಮ್ಮೆಲ್ಲರ ನಾಳೆಗಳಿಗಾಗಿ ಜೀವನಪ್ರೀತಿಯ ಸಾಂಘಿಕತೆಯನ್ನೇ ಶಕ್ತಿಯಾಗಿಸಿಕೊಂಡು ಮಾತನಾಡಬೇಕಾಗಿದೆ. ಮಹಿಳಾ ದೌರ್ಜನ್ಯ ಒಕ್ಕೂಟ ಕೋಲಾರ ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಈ ವೇಬಿನಾರ್‍ನಲ್ಲಿ "ನಮ್ಮ ಮಗಳು ಈ ಜಗದ ಬೆಳಕು" ಎಂಬ ಲಿಂಗಸಂಬಂಧಿ ಹೇಳಿಕೆಯನ್ನು ಕಟ್ಟಿಕೊಂಡಿದ್ದೇವೆ. ನಮ್ಮ ಮಗಳು ಬೆಳೆಯುತ್ತಿದ್ದಂತೆ ನನ್ನ(ತಾಯಿ) ಹಾಗೂ ಮಗಳ ಸಂಬಂಧ 'ಸಹೋದರಿತ್ವ’ವಾಗಿ ಪಲ್ಲಟಗೊಳ್ಳುತ್ತಿದೆ. ಈ ಸಹೋದರಿತ್ವವು ರಕ್ತ ಸಂಬಂಧವನ್ನು ಮೀರಿ ಒಮ್ಮೆಗೆ ಸಾಂತ್ವಾನ ಕೇಂದ್ರಗಳಾಗಿಯೂ, ಸಂಘಟಿತ ಸಾಂಘಿಕ ಶಕ್ತಿಯಾಗಿಯೂ ಪುಟಿದೇಳುತ್ತದೆ.

            ನೋಡಿ, ಗೆಳೆತಿ/ಯರೇ, ನಾವು (ಹೆಣ್ಣು) ನಮ್ಮನ್ನೇ ಕುರಿತು ಮಾತನಾಡುವಾಗ, ತೀರಾ ತಾರ್ಕಿಕವಾಗಿ ಹಾಗೂ ಔಪಚಾರಿಕವಾಗಿ ಮಾತನಾಡುವುದನ್ನೇ ಮರೆತುಬಿಡುತ್ತೇವೆ. ನಮ್ಮ ಒಳಗೂ-ಹೊರಗೂ ಒಂದಾಗುವಂತೆ ಮಾತಾಡಬೇಕಲ್ವ. ನಮ್ಮೊಳಗೆ ಇಂತಹುದೇ 'ಭಾಷಿಕ ರಾಜಕಾರಣ’ ಸುಪ್ತವಾಗಿ ಅಡಗಿ ಕುಂತಿದೆಯೇನೊ ಅನ್ಸುತ್ತೆ. ಹಾಗೆಂದು ಈ ಜೀವನ ಪ್ರೀತಿಯಲ್ಲಿ ನಮ್ಮ ಸೋದರರನ್ನು ನಾವು ಮರೆಯಲಾರೆವು. ನಮ್ಮ ಕನ್ನಡ ಪ್ರಜ್ಞೆಯಲ್ಲಿ 'ಅಣ್ಣನ (ಸಹೋದರ) ಪರಿಕಲ್ಪನೆಗೆ ಸಾಂಸ್ಕೃತಿಕ ಗುರುತುಗಳಿವೆ. ಈ ನೆಲೆಯಲ್ಲಿ ಬಸವಣ್ಣನವರು ಸಮಷ್ಟಿಯ ಪ್ರಜ್ಞೆಯ ನಡೆಕಾರರಾಗಿ ನಿಲ್ಲುತ್ತಾರೆ. ಬಸವಣ್ಣನವರು ಅಣ್ಣನಾಗುವಿಕೆ ಅಂದರೆ ತಮ್ಮಲ್ಲಿ ಸಾಂಘಿಕವಾಗಿರುವ ವ್ಯಕ್ತಿ ಪ್ರಜ್ಞೆಯು ಸಮಷ್ಟಿ ಪ್ರಜ್ಞೆಯಾಗಿ ಪ್ರಕಟಗೊಂಡಿದೆ. ಅಂದರೆ ಜಾತಿ, ಲಿಂಗ, ವರ್ಗ ಎಲ್ಲರನ್ನೂ ಒಳಗೊಳ್ಳುತ್ತಲೇ, ಎಲ್ಲವನ್ನೂ ಮೀರಿ ಸಮಷ್ಟಿಯಾಗಿ ನಿಲ್ಲುವುದು. ನಮ್ಮ ಕೋಟಗಾನಹಳ್ಳಿ ರಾಮಯ್ಯ ಅವರು ಸಹ ಕೋಲಾರದ ಮಧ್ಯಮವರ್ಗದ ಹೆಣ್ಣು ಮಗಳ ಅತ್ಯಾಚಾರ ಕ್ರೌರ್ಯತೆಯಾದ ಸಂದರ್ಭದಲ್ಲಿ "ನನ್ನ ತಂಗಿ ಅನುಸೂಯ....” ಎಂಬ ಒಂದು ಕವಿತೆಯನ್ನು ಬರೆಯುತ್ತಾರೆ. ಈ ನಿರೂಪಣಾ ಪ್ರಜ್ಞೆಯು ಅವರ ವ್ಯಕ್ತಿತ್ವದ ಸಮಷ್ಟಿ ಪ್ರಜ್ಞೆಯ ರೂಪವೆಂದೇ ಭಾವಿಸುವೆ. ಈ ಸಮಷ್ಟಿ  ವ್ಯಕ್ತಿತ್ವವು ಯಾವುದೇ ಬಗೆಯ ಶೋಷಣೆ, ಹಿಂಸೆ, ಕ್ರೌರ್ಯಗಳ ಜೀವವಿರೋಧಿತನವನ್ನು ಪ್ರತಿರೋಧಿಸುವ ಆತ್ಮಸ್ಥೈರ್ಯವನ್ನು ಹೊಂದಿರುತ್ತದೆ.

            ಇಂತಹ ಅಣ್ಣಂದಿರು ಆಗದಿರುವ ಪುರುಷ ವರ್ಗದ ಬಗೆಗೆ ನೈತಿಕ ನಿಷ್ಠುರದ ನಡುವೆಯೂ ಬಿಟ್ಟುಕೊಡಲಾಗದ ನಮ್ಮೆಲ್ಲರ ತುಡಿತದ ಸಂವೇದನೆಗಳು ಮಾನವಕುಲದ ಜೀವನಪ್ರೀತಿಯ ನಡೆಯ ಕಡೆಗೆಯೇ ಆಗಿದೆ. ನಿಮ್ಮ ಪ್ರತಿರೊಧದ ನಡುವೆಯು ನಮ್ಮದೇ ಅಸ್ಮಿತೆಗಳು ಕಟ್ಟಿಕೊಳ್ಳುವಿಕೆ, ಕಾಯ್ದುಕೊಳ್ಳುವಿಕೆ ಮುಖ್ಯವಾಗುತ್ತಲೇ ಇದೆ. ಹಾಗಾಗಿ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಣೆಗಳ ಮೂಲಕ ನಮ್ಮನ್ನು ನಾವೇ ಗುರುತಿಸಿಕೊಳ್ಳಬೇಕಾದ ಅವಶ್ಯಕತೆಯೊಂದಿಗೆ ಎಚ್ಚರದ ಪ್ರಜ್ಞೆಯು ಮುಖ್ಯವಾದದ್ದು. ವಿಶ್ವಸಂಸ್ಥೆಯು ಅಕ್ಟೋಬರ್ 11, 2012 ಹೆಣ್ಣು ಮಗುವಿನ ದಿನವನ್ನಾಗಿ ಘೋಷಿಸಿದೆ. ಯುನೆಸ್ಕೋ ಈ ದಿನವನ್ನು ‘ಹುಡುಗಿಯರು ಎದುರಿಸುತ್ತಿರುವಂತಹ ಸವಾಲುಗಳನ್ನು ಪರಿಹರಿಸುವ ಅಗತ್ಯ ಮತ್ತು ಸಬಲೀಕರಣ, ಮಾನವ ಹಕ್ಕುಗಳನ್ನು ನೆರವೇರಿಸುವ ಹಿನ್ನೆಲೆಯಲ್ಲಿ ಆಚರಿಸುತ್ತಿದೆ. ಹಾಗೆಯೇ ಈ ವರ್ಷವೂ ಯುನೆಸೆಫ್ "ನನ್ನ ಧ್ವನಿ ನಮ್ಮ ಸಮಾನ ಭವಿಷ್ಯ" ಎಂಬ ಹೇಳಿಕೆಯೊಂದಿಗೆ ಹಕ್ಕುಗಳಿಗಾಗಿ ಧ್ವನಿಯೆತ್ತುವ ವಾರ್ಷಿಕೋತ್ಸವ ಅಭಿಯಾನವನ್ನು ಆರಂಭಿಸಿದೆ. ಉತ್ತಮ ಪ್ರಪಂಚವನ್ನು ನಿರೂಪಿಸುವ ಅವಕಾಶಗಳನ್ನು ನಾವು ಬಳಸಿಕೊಳ್ಳೋಣ ಎಂಬ ಉದ್ದೇಶ ಹೊಂದಿದೆ. ಈ ಎರಡು ಉದ್ದೇಶಿತ ವಾಕ್ಯಗಳನ್ನು ಗಮನಿಸಿದಾಗ, ತಲೆತಲಾಂತರದಿಂದ ನಮ್ಮನ್ನು ನಿರಾಕರಿಸಲಾಗಿದ್ದ ಪುರುಷ ವ್ಯವಸ್ಥೆಯು ಇಂದಿನ ಆಧುನಿಕೋತ್ತರದವಾದ ಸಂದರ್ಭದಲ್ಲಿ ನಮ್ಮ ಇರುವಿಕೆ(ಹೆಣ್ಣು)ಯನ್ನು ನಿರಾಕರಿಸಲಾಗದು. ಜಾಗತಿಕ ವ್ಯವಸ್ಥೆಯಲ್ಲಿ ಮಹಿಳೆಯ ಶ್ರಮಬಳಕೆಯ ಅಗತ್ಯತೆಯಿದೆ. ಆದ್ದರಿಂದಲೇ ಅನುತ್ಪಾದಕಳಾದ ಹೆಣ್ಣುಮಗುವಿನ ಬಗೆಗೆ ಧ್ವನಿಗೊಡುತ್ತಾ, ನಾಳಿನ ಉತ್ಪಾದಕಳಾಗಿಸುವ ನಿರೀಕ್ಷೆಯಲ್ಲಿ ನಮ್ಮ ಸೋದರಿಯರಿಗೆ ಶಿಕ್ಷಣದ ಬೇಡಿಕೆಯೂ ಹೆಚ್ಚುತ್ತಿದೆ. ಶಿಕ್ಷಣವು ನಮ್ಮೆಲ್ಲರ ಅಗತ್ಯವು ಹೌದು. ಈ ಶಿಕ್ಷಣವು ನಮ್ಮನ್ನು ಸಂಘಟಿಸಿಕೊಳ್ಳುವುದಕ್ಕಿಂತ ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಬೇರೊಂದು ನಿರೀಕ್ಷೆಯನ್ನು ರೂಪಿಸುತ್ತಿದೆ. ನಮ್ಮ ಧ್ವನಿ ಎತ್ತುವಿಕೆಯು ಈ ಕರ್ತೃತ್ವದ ನಿರೂಪಣೆಗಳ ಭಾಷಿಕ ರಾಜಕಾರಣವನ್ನು ಅರ್ಥೈಸಿಕೊಳ್ಳುವಿಕೆಯು ಮತ್ತಷ್ಟು ಮುಖ್ಯ. ಇಂತಹ ಭಾಷಿಕ ರಾಜಕಾರಣ ನಮ್ಮನ್ನು ಸುಪ್ತವಾಗಿ ಆಳ್ವಿಕೆಗೆ ಒಳಪಡಿಸುವ ಕೌಶಲ ತನ್ನೋಳಗಿರಿಸಿಕೊಂಡಿದೆ.

            ನಮ್ಮ ಹೆಣ್ಣು ಮಗುವಿನ ಬಗ್ಗೆ ಮತ್ತಷ್ಟು ನಿರ್ದಿಷ್ಟಗೊಳಿಸಿ ಹೊಣೆಗಾರಿಕೆಯಿಂದ ಮಾತನಾಡಬೇಕಾಗಿದೆ. ಅದರಲ್ಲೂ ಪೂರ್ವ ಬಾಲ್ಯ ವ್ಯವಸ್ಥೆಯಿಂದ ಉತ್ತರ ಬಾಲ್ಯವಸ್ಥೆ, ಹದಿಹರೆಯದ ಹಂತದಿಂದ ವಯಸ್ಕ ಹಂತದವರೆಗೂ ಎರಡು ಹಂತಗಳ ಬಗೆಗೆ. ಹೆಣ್ಣಿನ ಬಾಲ್ಯಾವಸ್ಥೆಯನ್ನು ಕೌಟುಂಬಿಕವಾಗಿಯೇ ಪಾಲಕ-ಪೋಷಣೆಯ ಬದ್ಧತೆಯ ರೂಪಿಸುವ ಹಕ್ಕು ಚಾಲನೆಯಿಂದ ‘ನಂಬಿಕೆ ದ್ರೋಹದ ಹಂತ'ವಾಗಿದೆ. ಹೆಣ್ಣು ಅಂದ ತಕ್ಷಣ 'ಹದಿಹರೆಯದ ಹಂತವು ಕೌಟುಂಬಿಕವಾಗಿ, ಸಾರ್ವಜನಿಕವಾಗಿ  ವ್ಯಾಖ್ಯಾನ, ಹೇಳಿಕೆಗಳ ಚೌಕಟ್ಟುಗಳಿಗೆ ಒಳಪಡಿಸಲಾಗುತ್ತದೆ. ಸಾಮಾಜಿಕ ವ್ಯವಸ್ಥೆಗಳು ಕಣ್ಗಾವಲಿನಲ್ಲಿ ಕಾಯುತ್ತವೆ. ಮನಃಶಾಸ್ತ್ರೀಯ ಅಧ್ಯಯನಗಳು ದೈಹಿಕ ಮತ್ತು ಮಾನಸಿಕವಾಗಿ ಹೆಣ್ಣು ಮತ್ತು ಗಂಡು ತೀವ್ರಗತಿಯಲ್ಲಿ ಮಾನೋವಿಕಾಸಗೊಳ್ಳುವ ಸಂದರ್ಭವಾಗಿಯೂ ಗುರುತಿಸುತ್ತದೆ. ಈ ಸಂದರ್ಭದಲ್ಲಿ "ನಾನು" ಎಂಬ ಉತ್ತಮ ವಾಚಕದ ಅಸ್ಮಿತೆಯ ಪ್ರಶ್ನೆಗೆ ಹೆಣ್ಣು ಮತ್ತು ಗಂಡು ಕೂಡ ಮುಖಾಮುಖಿಯಾಗುತ್ತಾರೆ. 'ನೀನೇನು ಹುಡುಗನ?' ಎಂಬ ದಿನನಿತ್ಯದ ನಡೆಯ ಹೇಳಿಕೆಗಳು ತನ್ನದಲ್ಲದ ಅಸ್ಮಿತೆಯ ಮಾನದಂಡಗಳು ‘ನಾನು’ ಅಂದರೇನು? ಎಂಬ ಪ್ರಶ್ನೆಯೇ ದ್ವಂದ್ವದಲ್ಲಿ ಸಿಲುಕಿಸುತ್ತದೆ. ನಾನು ಅಂದ್ರೆ ಗಂಡಲ್ಲದೆ ಇರುವಳು ಎಂಬ ಅಧೀನ ನೆಲೆಯ ಎಲ್ಲಾ ನಿರೂಪಣೆಗಳಲ್ಲಿಯೂ 'ಅಂಗ ಪ್ರಜ್ಞೆ' ಅಮೂರ್ತವಾಗಿ ಅಡಗಿದೆ. ಹೆಣ್ಣಿನಲ್ಲಿ ಜೈವಿಕವಾದ ದೈಹಿಕ ಪಲ್ಲಟಗಳನ್ನು ಅಸ್ಮಿತೆಯ ದಂದ್ವಗಳಿಗೆ ಕಾರಣವಾಗಿ ಬಿಂಬಿಸುವಿಕೆಯು ಅವಳನ್ನು ಮತ್ತಷ್ಟು ಗೊಂದಲಗಳಿಗೆ ನೂಕುತ್ತವೆ.

             ಜೈವಿಕವಾದ ಪಲ್ಲಟಗಳು ಮನೋ-ದೈಹಿಕ ಬೆಳವಣಿಗೆ ಎಂಬ ವಾಸ್ತವವನ್ನು ಮರೆಮಾಚುತ್ತವೆ. ಇದಕ್ಕೆ ಪೂರಕವಾಗಿ ತಂದೆಯಿಂದ ಅಂತರವನ್ನು ಕಾಯ್ದುಕೊಳ್ಳಬೇಕಾದ ಹಾಗೂ ತಂದೆಯ ಮಾತಿಗೆ ಬದ್ದಳಾಗಬೇಕಾದ ವಿರೋಧಾಭಾಸದ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕಾದ ಸಾಮಾಜಿಕ ಲಗಾಮಿಗೆ ಸಿಲುಕುತ್ತಾಳೆ. ತಂದೆಗೆ ಬದ್ಧತೆ ಕೊಳ್ಳಬೇಕಾದ ಕಾಂಪ್ಲೆಕ್ಸ್‍ಗೆ ಗಂಡು ಕೂಡು ಸಿಲುಕುತ್ತಾನೆ. ಗಂಡಿಗೆ ಇದು ಸಮಸ್ಯೆಯಾಗುವುದಕ್ಕಿಂತ ಬದಲಾಗಿ 'ಕರ್ತೃತ್ವದ' ನಿರೂಪಣಗೆ ಲಿಂಗ ಪ್ರಜ್ಞೆಯ ಖಚಿತತೆಯ ಸಾಮಥ್ರ್ಯವು ದಕ್ಕುತ್ತದೆ. ವ್ಯಕ್ತಿಗತವಾಗಿ ಮತ್ತು ಸಾರ್ವಜನಿಕವಾಗಿ ತನ್ನ ಲಿಂಗ ಪ್ರಜ್ಞೆಯು ಸಾರ್ವತ್ರೀಕರಣಕ್ಕೆ ಒಳಗಾಗಿಸುತ್ತದೆ. ಹೆಣ್ಣು ಮತ್ತು ಗಂಡಿನ ಮಾನಸಿಕ ವಿಕಾಸಕ್ಕೆ ಪೂರಕವಾಗಿ ನಿಲ್ಲಬೇಕಾದ  ತಂದೆ-ತಾಯಿಯ ಲಿಂಗ ಪ್ರಜ್ಞೆಗಳು ಭಿನ್ನ ಮನೋವ್ಯಾಪಾರವನ್ನು ಸೃಷ್ಟಿಸಿಬಿಡುತ್ತವೆ.  ಇಲ್ಲಿ ಹೆಣ್ಣನ್ನು ಕೇವಲ ಅಂಗ ಪ್ರಜ್ಞೆಯಲ್ಲಿ ಮಾತ್ರ ಗುರುತಿಸಲ್ಪಡುತ್ತಾರೆ. ಅವಳಲ್ಲಿ ಅಂಗ ಪ್ರಜ್ಞೆ ಮಾನಸಿಕವಾಗಿ ತನ್ನನ್ನು ತಾನು ನಿಭಾಯಿಸಲಾಗದ ಒಂದು ನಿಯಂತ್ರಿತ ಸ್ಥಿತಿಗೆ ತಲುಪುತ್ತಾಳೆ. ಇವು ಜೈವಿಕವಾಗಿ ಗೊಂದಲಗಳು ಎನ್ನುವುದಕ್ಕಿಂತ  ಸಾಮಾಜಿಕ ಗೊಂದಲಗಳೆಂದೆ ಹೇಳಬಹುದು.

ಹುಡುಗನ ಈ 'ಲಿಂಗ ಪ್ರಜ್ಞೆ' ಶಾಲೆ ಅಥವಾ ಕಾಲೇಜು ಹಂತದಲ್ಲಿ ಮತ್ತಷ್ಟು ಪ್ರಕಟಗೊಳ್ಳುತ್ತಾ ಸಾಗುತ್ತದೆ. ಹುಡುಗ-ಹುಡುಗಿ ಇರುವಂತಹ ಒಂದು ತರಗತಿಯಲ್ಲಿ ಶಿಕ್ಷಕಿಯು ಹೆಚ್ಚು ನಿಯಂತ್ರಿಸಬೇಕಾಗುವುದು ಹಾಗೂ ಕಲಿಕೆಯ ಕಡೆಗೆ ಹೆಚ್ಚು ಗಮನ ಸೆಳೆಯಬೇಕಾಗಿರುವುದು ಹುಡುಗರನ್ನೇ. ಹುಡುಗಿಯರು ಕಲಿಕೆಗೆ ಮೌನದಿಂದಲೇ ಸ್ಪಂದಿಸುತ್ತಾರೆ. ಆದರೆ ಪ್ರಶ್ನೆ ಕೇಳಿದಾಗ, ಹುಡುಗಿಯರು ಎದ್ದು ನಿಂತು ಉತ್ತರ ಕೊಡಲು ಅಂಜಿಕೆಗೆ ಒಳಗಾಗುತ್ತಾರೆ. ತಾವು ಹುಡುಗರಿಂದ ವ್ಯಂಗ್ಯಕ್ಕೆ, ಅಸಡ್ಡೆಗೆ ಒಳಗಾಗುವ ಆತಂಕವನ್ನು ಎದುರಿಸುತ್ತಾರೆ. ಹುಡುಗರು ಉತ್ತರದ ಅರಿವಿಲ್ಲದಿದ್ದರೂ, ಅಭಿವ್ಯಕ್ತಿ ಆಚರಣೆಗಳಲ್ಲಿ ತೊಡಗುವ ಮುಕ್ತತೆಯನ್ನು ಪ್ರರ್ದಶಿಸುತ್ತಾರೆ. ಕೆಲವು ಹೆಣ್ಣುಮಕ್ಕಳು ಎದ್ದು ನಿಂತು ಧೈರ್ಯವಾಗಿ ಉತ್ತರ ಕೊಟ್ಟರೂ, ಅವಳ ಅಭಿವ್ಯಕ್ತಿಗೆ ಹುಡುಗರು ಕೇಳುಗರು ಆಗಲು ನಿರಾಕರಿಸುತ್ತಾರೆ. ಇಲ್ಲವೇ ಹುಡುಗರ ಮೌನದ ಗಾಸಿಪ್ ಚಹರೆಗಳ ಮೂಲಕ ಅಮೂರ್ತ ಲಿಂಗ ಪ್ರಜ್ಞೆಯು ಸಾಮೂಹಿಕ ಶಕ್ತಿಯಾಗಿ ಮೇಲರಿಮೆಯನ್ನು ಗಳಿಸಲು ಸದಾ ಜಾಗೃತರಾಗುತ್ತಾರೆ. ಈ ಪ್ರಜ್ಞೆಯು ಇಡೀ ತರಗತಿಯ ಹುಡುಗಿಯರನ್ನ ಮೌನವಾಗಿಸುವಲ್ಲಿ ಎನ್ನುವುದಕ್ಕಿಂತ ಮ್ಯೂಟ್ ಮಾಡುವಲ್ಲಿ ನಿಯಂತ್ರಣವನ್ನು ಸಾಧಿಸುತ್ತದೆ. "ಹುಡುಗಿ ಎಂಬ ಕಾರಣಕ್ಕೆ ಅಂಗ ಪ್ರಜ್ಞೆಯ ಪರಿಣಾಮಗಳು ಎದುರಾಗುತ್ತವೆ."  ಹಾಗೆಯೇ ಹುಡುಗಿಯರೇ ಹೆಚ್ಚಾಗಿರುವ ಒಂದು ತರಗತಿಯಲ್ಲಿ ಹುಡುಗ ಇರುವಿಕೆಯೇ ಇಚ್ಚಿಸದ ಮನಸ್ಥಿತಿಗೆ ತಲುಪುತ್ತಾನೆ. ಈ ಮೂಲಕವಾಗಿ ಹುಡುಗರು ತಮ್ಮ ಲಿಂಗಪ್ರಜ್ಞೆಯ ಬಗೆಗೆ ಅಹಂಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಮುಂದಾಗುವ ತಂತ್ರಗಳಲ್ಲಿ ತೊಡಗುತ್ತಾರೆ. ಆದರೆ ಹೆಣ್ಣಿನ ಸಂಘಟಿತ ಶಕ್ತಿಯ ಬಗೆಗೆ ತಿರಸ್ಕಾರವಾಗಿ ಕಂಡರು, ಅವರೊಳಗೂ ಭಯ-ಆತಂಕವಿರುವುದು ನಮಗೆ ಖಚಿತವಾಗುತ್ತದೆ.

 ಹುಡುಗರು ಲಿಂಗ ಪ್ರಜ್ಞೆಯು ವಯಸ್ಕನಾದಂತೆಲ್ಲ ಸಾರ್ವಜನಿಕ ಆವರಣದಲ್ಲಿ ಪುರುಷ ವಲಯದೊಂದಿಗೆ ಗುರುತಿಸಿಕೊಳ್ಳುತ್ತಾ, ಸಂಘಟಿತ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಈ ಸಾಮಾಜಿಕ ಬದ್ಧತೆಯ ಕಾಂಪ್ಲೆಕ್ಸ್‍ಗಳ ಪರಿಣಾಮ ಸಾರ್ವಜನಿಕ ಆವರಣವನ್ನು ಗುತ್ತಿಗೆ ಪಡೆದು ಬಿಡುತ್ತಾರೆ. ಈ ಹಂತದಲ್ಲಿ ಸಾರ್ವಜನಿಕ ವಲಯದಲ್ಲಿ ಅಂಗ ಪ್ರಜ್ಞೆಯ ಗ್ರಹಿಕೆಗಳು ಅವಳ ಸಾರ್ವಜನಿಕ ಸ್ವೇಚ್ಛೆತೆಯನ್ನು ಮಾನಸಿಕವಾಗಿ ನಿಯಂತ್ರಿಸುತ್ತವೆ. ತಾನೇ ನಿಯಂತ್ರಣಕ್ಕೆ ಒಳಗಾಗುವಂತೆ ವ್ಯವಸ್ಥೆಯು ಕೂಡ ಪ್ರೇರಕವಾಗಿರುತ್ತದೆ. "ಹುಡುಗಿಯರು ಸಾರ್ವಜನಿಕ ಆವರಣದಲಿದ್ದಾಗ ಅವಳ ಮನಸ್ಸಿನಲ್ಲಿ ಒಬ್ಬ ಪುರುಷ ಕುಂತಿರುತ್ತಾನೆ”. ಅವರೆಲ್ಲಾ ಗ್ರಹಿಕೆಗಳು ಹುಡುಗಿಯರನ್ನು ನಿಯಂತ್ರಿಸುತ್ತಿರುತ್ತವೆ. ಪುರುಷ ಸಂಘಟಿತ ಸಾಮೂಹಿಕ ಶಕ್ತಿಗಳ "ತಮ್ಮ ಮನೋಬಲದ ಸಮರ್ಥನೆಗೆ" ಹುಡುಗಿಯರನ್ನು ಆಂಗಿಕವಾಗಿ ನಿಸ್ತೇಜಗೊಳಿಸುವ  ಪ್ರವೃತ್ತಿಗಳು ಕ್ರಿಯಾಶೀಲಗೊಳ್ಳುತ್ತವೆ. ಹಾಗೆಯೇ ಈ ಪುರುಷ ಸಂಘಟಿತ ಸಾಮೂಹಿಕ ಶಕ್ತಿಗೆ ಜಾತಿ ಪ್ರಜ್ಞೆಯ ಬಲ ಪ್ರಯೋಗದ ಪ್ರೇರಣೆಗೆ ಒಳಗಾದರೆ, ನಮ್ಮ ಸಹೋದರಿ ಮನಿಷಾ ದಂತಹ ತಳಜಾತಿ ಹುಡುಗಿಯರ ಮೇಲಿನ ಅತಿಮಾನುಷ ಕ್ರೌರ್ಯದ ಜೊತೆಗೆ ಹೆಣ್ಣು ಕುಲ ಜೀವನಪ್ರೀತಿಯನ್ನು ಕಸಿಯುವ ಶಕ್ತಿಕೇಂದ್ರಗಳಾಗುತ್ತವೆ. ಶಕ್ತಿ ಕೇಂದ್ರಗಳನ್ನು ನಿರಾಕರಿಸಲಾಗದ ರಾಜಕೀಯ ಪ್ರಜ್ಞೆಯು ಅಧಿಕಾರಿ ಶಕ್ತಿಗಳಿಗೆ ಪೋಷಕವಾಗಬೇಕಾದ ಒತ್ತಡಗಳಲ್ಲಿಯೇ ಕೈಜೊಡಿಸುತ್ತಿವೆ. ವ್ಯವಸ್ಥೆಯೇ ವ್ಯಕ್ತಿನಿಷ್ಟವಾಗಿ ಇಂತಹ ಕೃತ್ಯಗಳಿಗೆ ಜಾಲತಾಣವಾಗಿ ರೂಪುಪಡೆದಿದೆ.

ಸುಬ್ಬು ಹೊಲೆಯರ ರವರು ಮನಿಷಾ ದಂತಹ ಅಮಾನವೀಯ ಕೃತ್ಯಗಳ ಬಗ್ಗೆ ಬರೆಯುತ್ತಾ, “ನಿನ್ನನ್ನು ಎಚ್ಚರದೊಂದಿಗೆ ಕಾಯುತ್ತಿದ್ದೇವೆ ಮಗಳೇ, ಆದರೆ ಸಾಲದು ಮಗಳೇ ನಿನ್ನ ಈ ಎಚ್ಚರ” ಎಂಬ ನುಡಿಯನ್ನು ಬಳಸುತ್ತಾರೆ. ಅಂದರೆ ಪುರುಷ ಲಿಂಗ ಪ್ರಜ್ಞೆ ಹಾಗೂ ಸಾರ್ವಜನಿಕ ವಲಯ  ಕೊಂಡಿ ನಿರ್ಮಾಣವಾಗುವುದರ ಬಗೆಗೆ ಒಂದು ಭಾಷಿಕ ಎಚ್ಚರ ನಮ್ಮ ಎಲ್ಲಾ ಹುಡುಗಿಯರಿಗೂ ತೀರಾ ಅವಶ್ಯಕ. ಹಾಗೂ ಭಾಷಿಕ ಎಚ್ಚರದೊಂದಿಗೆ ನಾವು ನಮ್ಮದೇ ಕರ್ತೃತ್ವಗಳನ್ನು ಸ್ಥಾಪಿಸಿಕೊಳ್ಳಬೇಕಾಗಿದೆ. ಏಕೆಂದರೆ ಇಂತಹ ಪುರುಷ ಕರ್ತೃತ್ವ ರಾಜಕಾರಣವೇ ಭಾಷಿಕವಾಗಿ ನಮ್ಮ ಮನೋಗತವನ್ನು ಅಧಮಗೊಳಿಸುತ್ತಿದೆ. 

ಉದಾಹರಣೆಗೆ ಒಂದು ಜಾಹೀರಾತನ್ನು ಗಮನಿಸುವುದಾದರೆ. "ಹುಡುಗಿಯರ ಮೇಲೆ ಅತ್ಯಾಚಾರಕ್ಕೆ ತೊಡಗಲು ನಾಲ್ಕು ಪುರುಷರು ಪ್ರಯತ್ನಿಸುವಾಗ, ಪೋಲೀಸ್ ಅಧಿಕಾರಿ ಆಕೆಯನ್ನು ಅವರಿಂದ ಬಿಡಿಸಿ, ಹೀಗೆ ಹೇಳುತ್ತಾನೆ. "ನಿಮ್ಮನ್ನು ರಕ್ಷಿಸಲು ನಾವಿದ್ದೇವೆ." ನಿಮ್ಮ ಆರೋಗ್ಯಕ್ಕಾಗಿ ಕಾಪರ್ ವಾಟರ್ ಬಾಟಲ್ ಅನ್ನೇ ಬಳಸಿ.... ಇತ್ಯಾದಿ. ಇಂತಹ ಸಾರ್ವಜನಿಕ ಹೇಳಿಕೆಗಳು ಪೋಲೀಸ್ ಅಧಿಕಾರಿಯ ನುಡಿ ಬಳಕೆ ಹೆಣ್ಣಿಗೆ ದೈಹಿಕ ರಕ್ಷಣೆ ಅಗತ್ಯವನ್ನು ಹೇಳುತ್ತದೆ. ಅದಕ್ಕೂ ಮಿಗಿಲಾಗಿ ಸಾರ್ವಜನಿಕ ಆವರಣವು ಪುರುಷಕೇಂದ್ರಿತವೆಂದು, ಪುರುಷರ ಆಕ್ರಮಣಗಳು ಸಹಜವೆಂದು ನಿರೂಪಣೆಯು ಸಮರ್ಥಿಸುತ್ತಿದೆ. 'ಆಕ್ರಮಣ ಮತ್ತು ರಕ್ಷಣೆ' ಎರಡರ ಕರ್ತೃವು 'ಪುರುಷನೇ ಅನ್ನೋದಕ್ಕಿಂತ ಪುರುಷ ಪ್ರಜ್ಞೆ’ ಎನ್ನಬಹುದು. ಹಾಗಾಗಿ ನಮ್ಮ ಹೆಣ್ಣುಮಕ್ಕಳು ಕರ್ತೃತ್ವದ ಭಾಷಿಕ ರಾಜಕಾರಣದ ಪ್ರಜ್ಞೆಯ ಬಗೆಗೆ ಇಂದು ಜಾಗೃತಿ ಆಗಬೇಕಾಗಿದೆ. ಜೊತೆಗೆ ತನ್ನದೇ ಲಿಂಗಪ್ರಜ್ಞೆಯ ಕರ್ತೃತ್ವ ನೆಲೆಯಲ್ಲಿ ನುಡಿ ಬಳಕೆಯ ಅಭಿವ್ಯಕ್ತಿಗೊಳ್ಳಬೇಕಾಗಿದೆ. ಇಂತಹ ಮಾನಸಿಕ ರಾಜಕಾರಣದ ಅರಿವು ಈ ಹಂತದಲ್ಲಿ ನಮಗೆ, ನಮ್ಮ ಸಹೋದರಿಯರಿಗೆ, ನಮ್ಮ ಮಗಳಿಗೆ ದಕ್ಕಲೇ ಬೇಕು.

ಆಗ ನಮ್ಮ ನುಡಿಗಳಲ್ಲಿ ಕರ್ತೃತ್ವವನ್ನು, ಸಬ್ಜೆಕ್ಟ್‍ನಲ್ಲಿ ನಮ್ಮ ಇರುವಿಕೆ, ಸ್ಥಾನ, ಪ್ರಕ್ರಿಯೆ ಜಾಗೃತಗೊಳ್ಳುತ್ತದೆ. ಈ ಜಾಗೃತೆ ಪುರುಷ ಪ್ರಧಾನ ವ್ಯವಸ್ಥೆಯಿಂದ ಆಧುನಿಕೋತ್ತರ ಸಂದರ್ಭದ ಈವರೆಗೂ 'ಸಾರ್ವಜನಿಕ ಆವರಣಗಳಲ್ಲಿ' ಹೆಣ್ಣನ್ನು ಆಬ್ಜೆಕ್ಟ್ ಆಗಿ (ವಸ್ತುವಾಗಿ) ನೋಡುವ, ನಿರಾಕರಿಸುವ, ಎಚ್ಚರದಿಂದ ಕಾಯ್ದುಕೊಳ್ಳುತ್ತಿದೆ. ನಾವು ನಿರ್ದಿಷ್ಟಗೊಳಿಸಿ ಅಂದರೆ ಕರ್ತೃನಿಷ್ಟವಾಗಿ ಸಬ್ಜೆಕ್ಟಯಾಗಿ ನಿರೂಪಿಸುವಿಕೆ ಆಗಲೇಬೇಕು. ಆಗ ಅಂಗ ಪ್ರಜ್ಞೆಯು-ಲಿಂಗ ಪ್ರಜ್ಞೆಯಾಗಿ ಪಲ್ಲಟಗೊಳಬೇಕಾದ ತುರ್ತು ಎಲ್ಲಾ ಸೋದರಿಯರ ಜಾಗೃತ ರಾಜಕಾರಣವಾಗುತ್ತದೆ. ನುಡಿಗಳ ಮೂಲಕವೇ ವ್ಯವಸ್ಥೆ, ವ್ಯಕ್ತಿಯನ್ನು ಅರಿಯುವ  ಸಾಮಥ್ರ್ಯ ಸಾಧ್ಯವಾಗುತ್ತದೆ. ಇದಕ್ಕೆಲ್ಲ ಸಹಾಯಕವಾಗಿ ಹಿಂದಿನ ತಲೆಮಾರಿನ ಹೆಣ್ಣುಗಳು ಈಗಾಗಲೇ ಹೆಣ್ಣು ನೋಟದ ಚರಿತ್ರೆಯನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿದ್ದಾರೆ. ಈ ಚರಿತ್ರೆಯ ಬಗ್ಗೆ ಇನ್ನು ಹೆಚ್ಚು ಕ್ರಿಯಾಶೀಲವಾಗುತ್ತಾ, ಎಚ್ಚರದಿಂದಲೇ ವ್ಯಕ್ತಿತ್ವವನ್ನು ನಾವು ಕಟ್ಟಿಕೊಳ್ಳಬೇಕಾಗಿದೆ.

                                                                                            - ಅನುಷಾ ಆರ್  ಸಂಶೋಧನಾರ್ಥಿನಿ ಬೆಂಗಳೂರು ವಿ ವಿ.

ʼʼಕೃಷಿ ಬಿಕ್ಕಟ್ಟು ಮತ್ತು ಮಹಿಳೆʼʼ   ( ʼಅರಿವಿನ ಪಯಣʼದ ರೈತ ಮಹಿಳಾ ದಿನದ  ವೆಬಿನಾರ್‌ ವರದಿ)

ದಿನಾಂಕ ೧೫/೧೦/೨೦೨೦ ರಂದು ʼರಾಷ್ಟ್ರೀಯ ರೈತ ಮಹಿಳಾ ದಿನʼದ ಅಂಗವಾಗಿ ʼಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟʼದ ವತಿಯಿಂದ ನಡೆದ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರಿನ ರೈತ ಮಹಿಳಾ ಹೊರಾಟಗಾರರು ಹಾಗೂ ʼಸಾವಯವ ಸಹಜ ಕೃಷಿʼ ಪತ್ರಿಕೆಯ ಸಂಪಾದಕರಾದ ಗಾಯಿತ್ರಿ ವಿ ರವರು ಹಾಗೂ ಕೋಲಾರದ ರೈತ ಮಹಿಳಾ ಹೊರಾಟಗಾರ್ತಿ  ನಳೀನಿ ಗೌಡ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ʼʼಕೃಷಿ ಬಿಕ್ಕಟ್ಟು ಮತ್ತು ಮಹಿಳೆʼʼ  ಎಂಬ ವಿಷಯಕ್ಕೆ ಸಂಭಂಧಿಸಿ ಗಾಯಿತ್ರಿ ವಿ ರವರು ಚರ್ಚಿಸಿದ ಮುಖ್ಯಾಂಶಗಳು:

"ರೈತ ಮಹಿಳಾ ದಿನವೆಂದರೆ ಕೇವಲ ಶುಭಾಷಯಗಳನ್ನು ಕೊರುವುದಲ್ಲ,  ಹೋರಾಟಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಎಂದರೆ ಮಹಿಳೆಯರು ಕಳಶಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಹೊಗುವುದಲ್ಲ, ಬದಲಾಗಿ ಮಹಿಳೆಯರ ಅಸ್ತಿತ್ವ ಪ್ರತಿಪಾದನೆ ಆಗಬೇಕು. ಅವರ ಹಕ್ಕುಗಳ ಸ್ಥಾಪನೆ ಆಗಬೇಕು, ಮಹಿಳೆಯರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸುಸ್ಥಿರ ಕೃಷಿಗೆ ಮಹಿಳೆಯರ ಕೊಡುಗೆ ಹೆಚ್ಚಿನದಾಗಿದೆ. ರೈತ ಮಹಿಳೆಯರಿಗೆ ಕಿಸಾನ್ ಕಾರ್ಡ್ ನೀಡಬೇಕು, ಸ್ತ್ರೀಯರಿಗೆ ಭೂ ಒಡೆತನ ಸಿಗಬೇಕು, ಭೂಮಿಯ ಹೆಸರಿನಲ್ಲಿ  ಜಂಟಿ ಪಟ್ಟಾಗಳನ್ನು ನೀಡಬೇಕು. ಮಂಜೂರು ಭೂಮಿಗಳನ್ನು ಸ್ತ್ರೀಯರ ಹೆಸರಿಗೆ ನೀಡಬೇಕು.

 ಇಂದು ಒಂದು ತುಂಡು ಭೂಮಿ ಲಕ್ಷಾಂತರ ಮಹಿಳೆಯರ ಕನಸು ಆಗಿದೆ. ಮಹಿಳೆಯರೇ ಕೃಷಿಗೆ ಮೂಲ, ಮಿಶ್ರ ಕೃಷಿ , ಬೀಜೋತ್ಪಾದನೆ, ಬೀಜೋಪಚಾರ, ಹೀಗೆ ಕೃಷಿ ಚಕ್ರದ ಸಮಸ್ತ ಜ್ಞಾನ ಮಹಿಳೆಯರಿಗಿದೆ. ತುಂಡು ಭೂಮಿಯಲ್ಲಿಯೇ ಮಹಿಳೆಯರು ಅಚ್ಚುಕಟ್ಟಾಗಿ ಬದುಕನ್ನು ಕಟ್ಟಿಕೊಳ್ಳಬಲ್ಲವರಾಗಿದ್ದಾರೆ. ಕೃಷಿಗೆ ಸಂಭಂಧಿಸಿದ ಮಹಿಳೆಯರ ಜ್ಞಾನ ಮತ್ತು ವಿವೇಕವನ್ನು ಸಂಪೂರ್ಣವಾಗಿ ಬಳಸಿಕೊಂಡರೇ ಮಾತ್ರ ನಮ್ಮ ಮುಂದಿನ ಭವಿಷ್ಯ ಹಸನಾಗುತ್ತದೆ ಎಂದರು.

ಮುಂದುವರೆದು, ʼನಮ್ಮೂರ ಭೂಮಿ ನಮಗಿರಲಿʼ ಹೋರಾಟಕ್ಕೆ ಸಂಭಂಧಿಸಿ, ಸರ್ಕಾರಗಳು ಕೋವಿಡ್ ಲಾಕ್ ಡೌನ್ ಕಾಲದಲ್ಲಿ ಸಾಲು ಸಾಲು ಸುಗ್ರೀವಾಜ್ಞೆಗಳನ್ನು ತರುವ ಮೂಲಕ ಹಲವು ರೈತ ವಿರೋಧಿ, ಕಾರ್ಮಿಕ ವಿರೋಧಿ, ತಿದ್ದುಪಡಿ ಕಾಯ್ದೆಗಳನ್ನು ತಂದಿದೆ, ಮುಖ್ಯವಾಗಿ,ಭೂಸುಧಾರಣಾ ಕಾಯ್ದೆ, ಎ ಪಿ ಎಂ ಸಿ ಕಾಯ್ದೆ, ಕಾರ್ಮಿಕ ಕಾಯ್ದೆ, ವಿದ್ಯುತ್ ಕಾಯ್ದೆ, ಹಾಗೂ ಅಗತ್ಯ ವಸ್ತುಗಳ ಪಟ್ಟಿ ಬದಲಾವಣೆ ಸೇರಿದಂತೆ ಹಲವು ತಿದ್ದುಪಡಿಗಳನ್ನು ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಇವೆಲ್ಲವೂ ಜನ ವಿರೋಧಿ ಕಾಯ್ದೆಗಳಾಗಿವೆ.

ಎ ಪಿ ಎಂ ಸಿ ಖಾಸಗೀಕರಣಗೊಳ್ಳುತ್ತಿದೆ, ʼʼಕಾನ್ಟ್ ಟ್ರ್ಯಾಕ್ಟ್ ಫಾರ್ಮಿಂಗ್ʼʼ  ಜಾರಿಗೆ ಬರುತ್ತಿದೆ, ಇವರಲ್ಲವೂ ರೈತ ವಿರೋಧಿ ಪ್ರಕ್ರಿಯೆಗಳಾಗಿದ್ದರೂ ಸಹಾ, ಆಳುವ ಸರ್ಕಾರಗಳು ಇವೆಲ್ಲವೂ ರೈತರ ಅನುಕೂಲಕ್ಕಾಗಿಯೇ ಎಂದು ಸುಳ್ಳು ಹೇಳುತ್ತಾ, ಇದಕ್ಕೆ ಅಭಿವೃದ್ಧಿಯೆಂಬ ಹಣೆಪಟ್ಟಿಯನ್ನು ಕಟ್ಟುವ  ಪ್ರಯತ್ನ ಮಾಡುತ್ತಿವೆ, ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ದೇಶದ ಕೃಷಿ ಚಟುವಟಿಕೆಗಳಲ್ಲಾಗಿರುವ ಬದಲಾವಣೆಗಳು ಆ ಮೂಲಕ ಉಂಟಾಗಿರುವ ಬಿಕ್ಕಟ್ಟುಗಳನ್ನು ಗಮನಿಸಬೇಕು. ರೈತರ ಮನೆ ಬಾಗಿಲಿಗೇ ವ್ಯಾಪಾರಿಗಳು ಬಂದು ಬೆಳೆಗಳನ್ನು ಕೊಳ್ಳುತ್ತಾರೆ,  ಕೃಷಿ ಯಲ್ಲಿ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎನ್ನುತ್ತಾರೆ. ಆದರೇ ಇಂದಿನ ಕೃಷಿ ಚಟುವಟಿಕೆಗಳು ರೈತರನ್ನು ಮತ್ತಷ್ಟು ಕಷ್ಟಗಳಿಗೆ ದೂಡುತ್ತಿದೆಯೇ ವಿನಃ ಯಾವುದೇ ರೀತಿಯ ಅಭಿವೃದ್ಧಿಗೆ ಸಹಾಯಕವಾಗಿಲ್ಲವೆಂಬುದನ್ನು ನಾವು ಗಮನಿಸಬೇಕು, ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳು ಇದಕ್ಕೆ ಸ್ಪಷ್ಠ ನಿದರ್ಶನ.

ಇಂದು ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪುರೇಟ್ ಕಂಪನಿಗಳು ಕೃಷಿಯನ್ನು ಆಳುತ್ತಿವೆ, ೬-೭ ಕಾರ್ಪುರೇಟ್ ಕಂಪನಿಗಳು ಕೃಷಿಯನ್ನು ಸಂಪೂರ್ಣ ಹಾಳುಗೆಡವುತ್ತಿವೆ, ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು, ಹೈಬ್ರೀಡ್ ಬೀಜಗಳು ಇವುಗಳ ಹೆಚ್ಚು ಬಳಕೆಯಿಂದ ಕೃಷಿ ಭೂಮಿ ಭರಡಾಗುತ್ತಿರುವುದಲ್ಲದೇ,  ಕೃಷಿಯಲ್ಲಿ ಅಸ್ಥಿರತೆ ತಲೆದೋರಿದೆ. ಪಂಜಾಬ್ ಹರಿಯಾಣ ದಂತಹ ರಾಜ್ಯಗಳು ಇಡೀ ದೇಶಕ್ಕೇ ಬೇಕಾಗುವಷ್ಟು ಭತ್ತವನ್ನು ಬೆಳೆದುಕೊಡುತ್ತಿವೆ, ಆದರೆ ಅಲ್ಲಿನ ರೈತರ ಹಲವು ಕಾಯಿಲೆಗಳಿಗೆ ತುತ್ತಾಗಿ ತಮ್ಮ ಬದುಕುಗಳನ್ನು ಕಳೆದುಕೊಂಡಿದ್ದಾರೆ, ಇದಕ್ಕೆ ಕಾರ್ಪುರೇಟ್‌ ಕಂಪನಿಗಳು ಹಾಗೂ ಅವರು ನೀಡುವ ಗೊಬ್ಬರ ಮತ್ತು ಕೀಟನಾಶಕಗಳೇ ಕಾರಣ.

ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ನೀರು, ಮಣ್ಣು ಗಾಳಿ, ಆಹಾರ ಎಲ್ಲವನ್ನೂ ವಿಷಯುಕ್ತಗೊಳಿಸಲಾಗುತ್ತಿದೆ. ಕಾರ್ಪುರೇಟ್‌ ಕಂಪನಿಗಳು ಹಾಗೂ ಸರ್ಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ  ನೀರಿನ ಸ್ವಾಭಾವಿಕ ಸಂಪನ್ಮೂಲಗಳನ್ನು ಬರಿದಾಗಿಸುತ್ತಿದ್ದಾರೆ. ಒತ್ತುವರಿಗಳು ಹೆಚ್ಚಾಗುತ್ತಿವೆ. ಕಾರ್ಖಾನೆಗಳ ಹೆಸರಿನಲ್ಲಿ ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಳ್ಳಲಾಗುತ್ತಿದೆ. ಹಾಗೇ ಭೂಮಿ ಕಳೆದುಕೊಂಡ ರೈತರ ಪರಿಸ್ಥಿತಿ ಇಂದು ಏನಾಗಿದೆ ಎಂಬುದನ್ನು ನಾವು ಗಮನಿಸಬೇಕು, ಲಕ್ಷ ಲಕ್ಷ ಹೆಕ್ಟೇರ್ಗಳಷ್ಟು ಭೂಮಿ ನಮ್ಮಲ್ಲಿ ಖಾಲಿ ಇದೆ, ಅದನ್ನು ಕೃಷಿಗೆ ಬಳಸಿಕೊಳ್ಳಲು ಸರ್ಕಾರಗಳು ಮುಂದಾಗಬೇಕಿವೆ.

ರೈತಪರ ಮಂತ್ರಿಗಳು ಸಹಾ ಇಂದು ರೈತ ವಿರೋಧಿ ಕಾಯ್ದೆಗಳಿಗೆ ಬೆಂಬಲ ನೀಡುತ್ತಿದ್ದಾರೆ, ಇದಕ್ಕೆ ಕಾರ್ಪುರೇಟ್‌ ಕಂಪನಿಗಳ ಒತ್ತಡವೇ ಪ್ರಮುಖ ಕಾರಣ, ಸರ್ಕಾರಗಳನ್ನೇ ಉರುಳಿಸುವಷ್ಟು ಬಲಿಷ್ಟವಾಗಿ ಈ ಕಂಪನಿಗಳು ಇಂದು ಬೆಳೆದು ನಿಂತಿವೆ. ನಮ್ಮ ಸಂಪ್ರದಾಯಿಕ ಕೃಷಿ ಚಟುವಟಿಕೆಗಳು , ಸಂಪ್ರದಾಯಿಕ ಕೃಷಿಗೆ ಮೂಲವಾದ ನಾಟಿ  ಬೀಜಗಳು, ಒಂದು ಸಂಪೂರ್ಣವಾಗಿ ಇಲ್ಲವಾಗುವ ಸ್ಥಿತಿಗೆ ಬಂದಿವೆ.  ಕೃಷಿಗೆ ಮೂಲವಾದ ಮಹಿಳೆಯನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇವೆಲ್ಲದರ ವಿರುದ್ಧ ನಮ್ಮ ಹೊರಾಟ ಸದಾ ಕಾಲ ಮುಂದುವರೆಯಬೇಕು.

ಸ್ತ್ರೀಯರನ್ನು ರೈತರೆಂದು ಪರಿಗಣಿಸಿ ಅವರಿಗೆ ಕಿಸಾನ್‌ ಕಾರ್ಡ್ಗಳನ್ನು ನೀಡಬೇಕು, ಒಂಟಿ ಮಹಿಳೆಯರಿಗೆ, ಭೂಮಿ ಕಳೆದುಕೊಂಡಿರುವ ರೈತರಿಗೆ ಭೂಮಿ ಹಂಚಿಕೆ ಆಗಬೇಕು, ಕೃಷಿ ಭೂಮಿ ಪುರುಷ ಮಹಿಳೆಯರಿಬ್ಬರ ಹೆಸರಿನಲ್ಲೂ ರಿಜಿಸ್ಟರ್‌ ಆಗಬೇಕು, ಸ್ತ್ರೀಯರಿಗೆ ಭೂ ಒಡೆತನದ ಹಕ್ಕು ನೀಡಬೇಕು, ಆಗ ಮಾತ್ರ ಕೃಷಿಯಲ್ಲಿ ರೈತ ಮಹಿಳೆಯರಿಗೆ ಆದ್ಯತೆ ಆ ಮೂಲಕ ನಿಜವಾದ ಕೃಷಿ ಅಭಿವೃದ್ಧಿ ಸಾಧ್ಯ. ಇಂದು ರೈತರು ಭೂಮಿಯನ್ನು ಮಾರುವ ತುರ್ತಿನಲ್ಲಿ ಇಲ್ಲಿ ಬದಲಾಗಿ ಕೊಳ್ಳುವ ತುರ್ತಿನಲ್ಲಿ ಇದ್ದಾರೆ, ಇದನ್ನು ಸರ್ಕಾರಗಳು ಅರಿತು ಕಾಯ್ದೆಗಳನ್ನು ರೂಪಿಸಬೇಕು. ಸರ್ಕಾರಗಳಿಗಿಂತ ಮುಂಚೆ ಎಲ್ಲಾ ಪ್ರಗತಿಪರ ರೈತಪರ ಸಂಘಟನೆಗಳು ಒಂದಾಗಬೇಕು ಹಾಗೂ ರೈತ ಮಹಿಳೆಯರ ಹೊರಾಟ ಹಾಗೂ ಅವರ ಹಕ್ಕುಗಳಿಗೆ ಬೆಂಬಲ ನೀಡಬೇಕು. ಸರ್ಕಾರದ ಕಾಯ್ದೆಗಳು ಹಾಗೂ ಖಾಸಗೀಕರಣವೇ ಕೃಷಿ ಬಿಕ್ಕಟುಗಳಿಗೆ ಮುಖ್ಯ ಕಾರಣ , ಅವುಗಳನ್ನು ನಿವಾರಿಸುವತ್ತ ಸರ್ಕಾರಗಳು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಒಂದಾಗಿ ಯೋಚಿಸಬೇಕಾಗಿದೆ.” ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋಲಾರದ ರೈತ ಮಹಿಳಾ  ಹೊರಾಟಗಾರ್ತಿ ನಳಿನಿ ಗೌಡ ರವರು “ಕೃಷಿ ಮಹಿಳೆಯನ್ನೇ ಅವಲಂಭಿಸಿದೆ, ಸಾವಿರಾರು ಮಹಿಳೆಯರು ಇಂದು ರೈತರಾಗಿ ಸ್ವಾವಲಂಬೀ ಕೃಷಿ ಬದುಕು ನಡೆಸುತ್ತಿದ್ದರೂ ಅವರನ್ನು ರೈತರನ್ನಾಗಿ ಗುರುತಿಸಿವ ಕೆಲಸ ನಡೆಯಿತ್ತಿಲ್ಲ , ಮಹಿಳೆಯರನ್ನು ಒಂಟೀ ಆಗಿಸುವ ಹುನ್ನಾರಗಳು ನಡೆಯಿತ್ತಿವೆ. ಇದಕ್ಕೆ ಸರ್ಕಾರಗಳು ಹಾಗೂ ಪುರುಷ ಪ್ರಧಾನ ಮನಸ್ಥಿತಿಗಳೇ ಮುಖ್ಯ ಕಾರಣ, 

ಮಹಿಳೆಯರಲ್ಲಿ ನಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು,  ಹಾಗೂ ಸಂಘಟನೆಗಳಲ್ಲಿ ಮಹಿಳಾ ಪ್ರಾತಿನಿಧ್ಯತೆ ಹೆಚ್ಚಾಗಬೇಕು ಆ ಮೂಲಕ ಮಹಿಳೆಯರ ಹಕ್ಕುಗಳ ರಕ್ಷಣೆ ಆಗಬೇಕು,  ಇದಕ್ಕೆ ಸಂಭಂಧಿಸಿ ಹಲವು ಸರ್ಕಾರಿ ಆದೇಶಗಳು ಇದ್ದರೂ ಸಹಾ ಅವು ಕಾರ್ಯರೂಪಕ್ಕೆ ಬರುತ್ತಿಲ್ಲ , ರೈತರ ಆತ್ಮಹತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದು ಬಹು ದುಃಖದ ವಿಚಾರವಾಗಿದೆ, ಸರ್ಕಾರದ ನೀತಿಗಳೇ ಇದಕ್ಕೆ ಪ್ರಮುಖ ಕಾರಣ. ರೈತ ಸಂತ್ರಸ್ಥರಿಗೆ ಪರಿಹಾರದ ಹಣವು ಸಹಾ ಸರಿಯಾಗಿ ತಲುಪದೇ ಮಧ್ಯವರ್ತಿಗಳ ಪಾಲಾಗುತ್ತಿದೆ.

ಇಂದು ರೈತರು ಘನತೆಯಿಂದು ಬದುಕುವ ವಾತಾವರಣ ನಿರ್ಮಾಣವಾಗಬೇಕಿದೆ.  ನಗರೀಕರಣದ ಪರಿಣಾಮವಾಗಿ ರೈತ ಮಕ್ಕಳು ಕೃಷಿಗೆ ವಿಮುಖರಾಗುತ್ತಿದ್ದಾರೆ. ಇದು ತೀರ ಅನಾರೋಗ್ಯಕರ ಬೆಳವಣಿಗೆ,  ಕೃಷಿಯಲ್ಲಿ ಸಂಪ್ರದಾಯಿಕ ಹಾಗೂ ಸಾವಯವ ಕೃಷಿಗೆ ಆದ್ಯತೆ ನೀಡಬೇಕಾಗಿದೆ.  ರೈರ ಮಹಿಳೆಯರ ಪರಿಸ್ಥತಿಯು ಸಹಾ ಸುಧಾರಣೆ ಆಗಬೇಕಾಗಿದೆ. ಇಂದು ಮಹಿಳೆ ಕೃಷಿಯಲ್ಲಿ ಎಷ್ಟೇ ಕಷ್ಟಪಟ್ಡು ದುಡಿದರೂ ಸಹಾ ಆಕೆಗೆ ಸ್ವಾತಂತ್ರ್ಯವಿಲ್ಲ , ರೈತ ಮಹಿಳೆಯರಿಗೆ ಭೂ ಒಡೆತನ ಸಿಗಬೇಕು, ಆ ಮೂಲಕ ಸ್ತ್ರೀಯರು ಸ್ವಾವಲಂಭಿಗಳಾಗಬೇಕು,  ರೈತ ಮಹಿಳೆಯರ ಉದ್ದಾರ ಹಾಗೂ ಅವರ ಹಕ್ಕುಗಳ ಸಂರಕ್ಷಣೆಗಾಗಿ ನಾವು ಸದಾ ಹೋರಾಡಬೇಕಿದೆ.

ರೈರ ಮಹಿಳೆಯರ ಸಮಸ್ಯಗಳಿಗೆ ಪರಿಹಾರಗಳನ್ನು ನೀಡಬೇಕಾದ ಸರ್ಕಾರಗಳು ಇಂದು ಅದಕ್ಕೆ ವ್ಯತಿರಿಕ್ತವಾದ ಕಾಯ್ದೆಗಳನ್ನು ತರುತ್ತಿರುವುದು ವಿಷಾದನೀಯ. ಇದರ ಬಗ್ಗೆ ರೈತರಲ್ಲಿ , ರೈತ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು. ಸಂಪ್ರದಾಯಿಕ ಕೃಷಿಗೆ ಮರಳುವ ಮೂಲಕ ವಿಷಮುಕ್ತ ಆಹಾರ ಉತ್ಪಾದನೆ ಆಗಬೇಕು. ಹೈನುಗಾರಿಕೆಗೆ ಪ್ರೋತ್ಸಾಹ ಆಗಬೇಕು, ಹಲವಾರು ಕಾಯ್ದೆ ಹಾಗೂ ಯೋಜನೆಗಳು ಕೇವರ ಪುಸ್ತಕಗಳಲ್ಲಿದ್ದು ಅವು ನಿಜವಾಗಿ ಜಾರಿಯಾಗಲು ನಾವೆಲ್ಲರೂ ಶ್ರಮಿಸಬೇಕಾಗಿದೆ” ಎಂದು ಹೇಳಿದರು. ನಂತರದ ಸಂವಾದದಲ್ಲಿ, ಡಾ. ನೇತ್ರಾವತಿ ಕೆ ವಿ, ಮಲ್ಲಮ್ಮ ಹೆಳವಾರ್‌, ಮಂಜುಳ ಕೊಂಡರಾಜನಹಳ್ಳಿ, ಡಾ. ಸುಮಂಗಲಾ ಅತ್ತಿಗೇತಿ ಮುಂತಾದವರು ಪಾಲ್ಗೊಂಡಿದ್ದರು.

                                                                                                                         -  ಸಂಗ್ರಹ : ಸುಮಿತ್ರ ಎನ್‌ ಕೋಲಾರ

IMG-20201015-WA0014.jpgIMG-20201015-WA0013.jpg

 

                            ಛಾಯಾ ಚಿತ್ರ ಸೆರೆ : ಮೋಹನ್‌ ಎಂ ವಳ್ಳಿ, ಕನ್ನಡ ಉಪನ್ಯಾಸಕರು, ಬೆಂಗಳೂರು.

 

ಕವಿತೆಗಳು


ಪರಿಸ್ಥಿತಿ

ಇತ್ತ ಮತ್ತೆ ಪ್ರವಾಹದ ಭೀತಿ

ಅತ್ತ ನೋಡಲಾಗದಾ ಕರೊನಾ ಸ್ಥಿತಿ

ಜನರ ನೆಲೆಗೆ ಮನೆಯೇ ಗತಿ

ಬಂತು ನಮಗೆಲ್ಲಾ ಎಂಥಹ ಪರಿಸ್ಥಿತಿ||

ಇದ್ದವರು ಮಾಡಿದರೆ ಊಟ

ಇಲ್ಲದವರಿಗೆ ತುತ್ತು ಅನ್ನಕ್ಕಾಗಿ ಪರದಾಟ

ಇರುಳಲ್ಲೇ ಅವರ ಬದುಕಿನ ಆಟ

ಇರುವಿಕೆಯಲ್ಲೆ ಕಲಿತರು ಜೀವನ ಪಾಠ||

ನೆರಳಿಲ್ಲದ ಮನೆಯಲ್ಲಿ ಸಾಗಿದೆ ಬದುಕು

ನೆರವಿಗೆ ಬರುವವರ ದಿನ ಹುಡುಕು

ನೆನೆದು ಕೂತ ಹಸಿದ ಹೊಟ್ಟೆಗಿಲ್ಲೊಂದು ತುಣುಕು

ನೆನೆಪೊಂದೆ ಇವರ ಬಾಳಿನ ಬೆಳಕು||

ಬರುವ ನೋವುಗಳೆಲ್ಲಾ ಸಹಿಸಿದೆ ಮನವು

ಬಂದ ಸ್ಥಿತಿಗೆ ವಗ್ಗಿಕೊಂಡು ಹೋಗಲೇ ಬೇಕು ದಿನವು

ಬಂದದ್ದು, ಬರುವುದು ಒಳ್ಳೆಯದೆಂದು ಇರಲಿ ಅರಿವು

ಬರುವುದು ಬಾಳಿನಲ್ಲಿ ಬದಲಾವಣೆಯ ಸುಳಿವು||

ನಡೆಯಲೀಗ ಹೊಸದೊಂದು ಕ್ರಾಂತಿ

ಕಾಯೋಣ ನಾವೆಲ್ಲ ದಿನಂಪ್ರತಿ

ಈ ಬದುಕೆ ಒಂದು ಹೋರಾಟ ನಿನಗೇಕೆ ಚಿಂತೆ

ಹೋರಾಡಿ ಗೆದ್ದಾಗಲೆ ಸಿಗುವುದು ಮನಃಶಾಂತಿ||

      - ದ್ಯಾಮಣ್ಣ ಈರಪ್ಪ ತಳವಾರ. ಶಿಂಗಟಾಲೂರ, ಗದಗ .

 

ಬಡವನ ಕೂಗು

ಕೂಲಿ  ಮಾಡಿ  ಬದುಕುವ - ಬಡವನು  ನಾನು.  

ನನಗೂ  ಉಂಟು - ಒಂದು ಸಂಸಾರ.

ಲಾಕ್ ಡೌನ್ ನಿಂದ- ನೊಂದಿಹೆನು.

ಮೊದಲೇ  ಅರ್ಧ  ಸತ್ತಿಹೆನು.

ಮತ್ತೆ, ಮತ್ತೆ, ಮಾಡಿದರೆ - ಲಾಕ್ ಡೌನು.

ಬದುಕುವುದು ಹೇಗೆ  ನಾನು..?

ಸ್ವಾಭಿಮಾನಿ  ಬಡವನು  ನಾನು

ಬೇಡುವುದು  ತಪ್ಪೆಂದು - ಬಲ್ಲೆನು.

ನನ್ನ  ನಂಬಿದವರಿಗಾಗಿ - ನಾನಿನ್ನು  ಬದುಕಿಹೆನು,

ದುಡಿವ  ಕೈಗಳಿಗೆ - ಕೆಲಸವ  ಬೇಡುತಿಹೆನು||

ಮತ್ತೆ, ಮತ್ತೆ  ನೋಯಿಸ ಬೇಡಿ-

ಲಾಕ್ ಡೌನ್  ಎಂಬ - ನೆಪವನ್ನು  ಒಡ್ಡಿ,

ನೊಂದು ಬೆಂದಿರುವ - ಮನಸ್ಸನ್ನು.

ನನಗೂ  ಬದುಕಲು  ಬಿಡಿ, ದುರಾಸೆ

  ಪಡದ ಬಡವನು

ನನ್ನ  ಹೊಟ್ಟೆ ಮೇಲೆ - ಹೊಡೆಯ  ಬೇಡಿ ಇನ್ನು.

ಹೇ  ಕೊರೊನ,  ನನ್ನಿಂದ  ನಿನಗೊಂದು ಮನವಿ,

ಸರ್ಕಾರಕ್ಕೆ  ಕೇಳಿಸದೆನೊ -ನನ್ನ    ಕರುಳಿನ  ಕೂಗು,

ನಿನಾದರೂ  ಕೇಳು - ಈ  ಬಡವನ  ಕೂಗು,

ಇನ್ನಾದರೂ  ನೀನು - ಇಲ್ಲಿಂದ  ಹೊರಟು ಹೋಗು||

          - ಬಿ. ವೆಂಕಟೇಶ್. ಕಲಾವಿದರು,  ಬೆಂಗಳೂರು.

 



ಯೌವ್ವನ

ತಾರುಣ್ಯದ ಬದುಕಿನಲ್ಲಿ ಬಯಕೆ

ಗಳು ನೂರೆಂಟು ! ಕನಸುಗಳ ಕಲ್ಪನೆಯಲ್ಲಿ ನಗು ಮೊಗವ ಸವಿ   ಯುಂಟು !

ಬಾನಿನಂಗಳದಲ್ಲಿ ತಾರೆಯರು ಜೊತೆಗೂಡಿ

ಹುಣ್ಣಿಮೆಯ ಬೆಳದಿಂಗಳಲಿ ಚೆಲುವು ಬೀರಿದ ಹಾಗೆ !

ಕುಡಿಮೀಸೆ, ತಂತುಬೇರಿನಂತೆ ಗಡ್ಡವು ಚಿಗುರೊಡೆದು !

ಬಿದಿಗೆ ಚಂದ್ರನಂತೆ ದಿನವಿಡೀ ಬೆಳೆದು!

ಭಯ,ಭಕ್ತಿ, ಶ್ರದ್ಧೆ ಗಾಳಿಗೆ ತೂರಿ

ಚೆಲುವೆಗಾಗಿ ಬುದ್ಧಿ ಕ್ಷೀಣಿಸಿ !

ಬಾಲೆಯ ಉಡುಗೆ-ತೊಡುಗೆಗೆ ಮಾರುಹೋಗಿ,

 ಅದೇ ರಂಗಿನ  ಗುಂಗಿನಲ್ಲಿ ತೇಲಾಡಿ ಅಭ್ಯಾಸ

ಪೂಣ೯ಗೊಳ್ಳದೇ ನಪಾಸಾಗಿ!

ಕೊನೆಗೆ ಪಶ್ಚಾತ್ತಾಪಗೊಂಡು

ಸ್ನೇಹಿತರ ಮದ್ಯದಲ್ಲಿ ಮೊಗವ

ತೋರಿಸದೇ ಆತ್ಮಹತ್ಯೆಕ್ಕೆ ದಾರಿ

ಮಾಡಿಕೊಂಡು ಮಸಣ ಸೇರು

ವುದು ! ಯೌವನದ ಹಾದಿಯು

ಗುಲಾಬಿ ಹೂವನಲ್ಲಿಡಗಿರುವ

ಮುಳ್ಳುಗಳಂತೆ !ನೋಡಲು ಬಲು ಸುಂದರ !

ವಾಸನೆ ಅತೀ ಸುಮಧುರ ! ಅದನ್ನು ಕೀಳಲು

ಹೋದರೆ ಚುಚ್ಚುವುದು ಮುಳ್ಳಿನ ಹಂದರ !

ಎಚ್ಚರದಿಂದನಡೆದರೆ ಜೀವನವು ಬಲು ಸುಂದರ ||

                                        - ಅರ್ಜುನ ಬಿ ನಾಕಮಾನ.    

                                            ಶಿಕ್ಷಕರು,ಮಂದೇವಾಲ.

ಸೈಜು ಸರಿ ಇಲ್ಲ 

ಹಾರ್ಯಾಡಿ,ಜಿಗದಾಡಿ  ಮನಿಗಿ ಬರುವಾಗ                                                                                                                ಅದೆಂಥ ಸಂಭ್ರಮ,    ಮನೆಯವರ ಮಾತು                                                                                                                                                      ಕಿವಿಗೆ ತಾಕಿದರು ತಾಕದಂತೆ                                                                                                                                                ಮತ್ತೆ ಮತ್ತೆ ಹೋಗಿ                                                                                                                                                         ಗಿಡಕ್ಕೆ ಜೊತು ಬಿಳೋದು ,  ಎಷ್ಟು ಚಂದ....

ಅದೇನೊ ನೋಡು ಮಗಳೆ                                                                                                                                           ಏಳೊ ಏಂಟೊ ಸಾಲಿಗಿದ್ದ                                                                                                                                              ಬರಿ ಲಂಗ ಜಂಪರ್ ಉಟ್ಕೊಂಡು                                                                                                                                   ಚೆಡ್ಡಿ ಹಾಕೊಂಡು ತಿರುಗುವ                                                                                                                                     ಎಲ್ಲಿಂದ ಹುಟ್ತೊ,   ಆ ನೋವಾ....

ರಾತ್ರಿಯಾದರೆ ಸಾಕು                                                                                                                                              ಬಿರುಸುಗೊಂಡ ಕಲ್ಲಿನಂತೆ  - ಎದೆ ಒತ್ತಿದಂತೆ                                                                                                                                                         ಅಂಗಾತ ಮಲಗಿದರು                                                                                                                                                   ಬಾಳು ಮಲಗಿದರು ಕಷ್ಟ                                                                                                                                             ಇವೆಲ್ಲಿಂದ ಇಷ್ಟು ಉಬ್ಬಿ -ನೋವು ಕೊಡ್ತಾವು                                                                                                                                             ಹೋಳುವುದು ಇಲ್ಲ                                                                                                                                                 ಕೇಳುವರು ಇಲ್ಲ , ಅದೆಷ್ಟು ಆತಂಕ…….

ಆ.. ಒಂದು ದಿನ                                                                                                                                                  ಮಾರ್ಕೆಟಗೆ ಹೋದವ್ಳೆ                                                                                                                                                     ಅವ್ವ ಮೀರಿ ಮೀರಿ                                                                                                                                                         ಬಣ್ಣಗಳು ಕಣ್ಣಿಗೆ ರಾಚಿ                                                                                                                                                ಹಾಕಿದ ಪ್ಲೇಕ್ಸಗಳ ನೋಡಿ                                                                                                                                                  ಇದೇನ್ರಿ ಅಂತ ಕೇಳಿದೊಡನೆ                                                                                                                                      ಅಲ್ಲಿಯ ಹೆಂಗಸು , ಇವಕ್ಕೆ ಬ್ರಾ ಅಂತಾರಿ ಅವಾರಿ                                                                                                                                                ಮಗಳ ಹಾಳೇನು ಮನ್ಯಾಗ                                                                                                                                         ಇದಿಷ್ಟೇ ಗೊತ್ತು ನಮ್ಮವ್ವಗ , ತಗೊಂಡೆ ಬಂದ್ಳು                                                                                                                                                 

ಮರುದಿನ ಹಾಕೊಳೊದು ಗೊತ್ತಿಲ್ಲ                                                                                                                                     ಸೈಜು ಸರಿ ಇಲ್ಲ  - ಹಂಗೆ ಹಾಕೊಂಡ್ಳೆ...                                                                                                                                                  ರಾತ್ರಿನು ಬಿಚ್ಚಲಿಲ್ಲ                                                                                                                                                     ಮನ್ಯಾಗ ಹಾಕುವ ಜರೂರಿನು ಇರಲಿಲ್ಲ                                                                                                                          ಕಲ್ಲಂತ ಇದ್ದ ಮೊಲೆ  - ಕಡಿಗಿ ಕಲ್ಲಾಗೆ ಕುತ್ತು                                                                                                                                                ಮತ್ತೆಂದು ಬ್ರಾ ಹಾಕದಂಗೆ , ಸೌಂದರ್ಯದ ಮಾನಸಿಕತೆ                                                                                                                                     ಎದೆಯಿಲ್ಲದ ಎದೆಯಲ್ಲಿ , ಎದೆಹಾಲುಣುತ್ತಿತ್ತು....

              - ಪೂಜಾ ಸಿಂಗೆ


ಲೇಖನ ಬರಹ

ಶಿಕ್ಷಕರ ದಿನಾಚರಣೆ ಮತ್ತು ಮಹಾಚೇತನ ಸಾವಿತ್ರಿ ಬಾ ಫುಲೆ.

            ಶಿಕ್ಷಕರ ದಿನಾಚರಣೆ ಎಂದರೆ‌ ಸಾಕು ಕಣ್ಮುಂದೆ ಬಂದು ನಿಲ್ಲುವುದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರು. ಇವರು ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ತಿಳಿಸಿರುವುದು ಅವರ ವೃತ್ತಿ-ಬದ್ಧತೆಯನ್ನು ತೋರಿಸುತ್ತದೆ. ಒಂದು ರಾಷ್ಟ್ರ ಪ್ರಗತಿ ಹೊಂದಬೇಕಾದರೆ ಶಿಕ್ಷಣವು ಅಗತ್ಯ. ಶಿಕ್ಷಣದ ಆಧಾರ ಸ್ತಂಭಗಳು ಶಿಕ್ಷಕರೇ, ಒಂದು ಕಲ್ಲನ್ನು ಶಿಲ್ಪಿ ಹೇಗೆ ಸುಂದರವಾಗಿ ಶಿಲೆಯನ್ನಾಗಿಸುವನೋ ಹಾಗೆಯೇ ಒಂದು ಮಗುವಿಗೆ ಮೊದಲು ಅಕ್ಷರ ಜ್ಞಾನ ಕೊಡುವ ಮೊದಲ ಗುರು ಅಮ್ಮ,ನಂತರ ಗುರುಗಳು.  ಸರ್ವರ ಏಳಿಗೆಗೂ ಕಾರಣರಾಗುವ ಏಕೈಕ ವ್ಯಕ್ತಿ ಎಂದರೆ ಶಿಕ್ಷಕ. ತಮ್ಮ ವಿದ್ಯಾರ್ಥಿಗಳಿಗೆ ನಯ-ವಿನಯ, ಸೃಜನಶೀಲತೆ, ಚಿಂತನಶಕ್ತಿ ಎಂಬ ಜ್ಞಾನದ ಬೀಜವನ್ನು ಬಿತ್ತಿ ಕಲೆಯ ಹೆಮ್ಮರವಾಗಿಸಿ ಒಬ್ಬ ಅತ್ಯುತ್ತಮ ವ್ಯಕ್ತಿಯನ್ನಾಗಿಸುವವರು ಶಿಕ್ಷಕರುಗಳು.!

            ಡಾ.ರಾಧಾಕೃಷ್ಣನ್ ರವರ ಜನ್ಮದಿನವನ್ನೆ ಇಲ್ಲಿಯವರೆಗೂ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅದಕ್ಕೆ ಕೊಟ್ಟ ಕಾರಣ ರಾಧಾಕೃಷ್ಣನ್ ಅವರು ಆದರ್ಶ ಶಿಕ್ಷಕರಾಗಿದ್ದರು ಎಂಬುದು, ಆದರೆ ರಾಧಾಕೃಷ್ಣನ್ ಅವರು ಹುಟ್ಟುವುದಕ್ಕಿಂತ 40 ವರ್ಷಗಳ ಮುಂಚೆಯೇ ಎರಡು ಮಹಾನ ಚೇತನಗಳು ನೋವು, ಅವಮಾನ ಅನುಭವಿಸಿ ನೊಂದೂ ಭಾರತ ದೇಶದ ಎಲ್ಲಾ ನಿವಾಸಿಗಳಿಗೆ ಶಿಕ್ಷಣದ ಬಾಗಿಲನ್ನು ತೆರೆದು ಮಹಾ ಉಪಕಾರ ಮಾಡಿದ ಜ್ಯೋತಿಭಾ ಪುಲೆ ಮತ್ತು ಅವರ ಪತ್ನಿ ಸಾವಿತ್ರಿಭಾಯಿ ಪುಲೆಯವರ ಹೆಸರಿನಲ್ಲಿ ಶಿಕ್ಷಕರ ದಿನವನ್ನು ಆಚರಿಸುವುದು ಈ ಕಾಲಕ್ಕೆ ಎಲ್ಲ ರೀತಿಯಿಂದಲೂ ಸರಿಯಿದೆ.

            "ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಬೇಕು" ಎಂದು ರಾಧಾಕೃಷ್ಣನರು ಕರೆ ನೀಡಿದ್ದರು. ಭಾರತ ದೇಶದಲ್ಲಿ ಹುಟ್ಟಿ ಅದರಲ್ಲೂ ಬಡಕುಟುಂಬದಲ್ಲಿ ಜನಿಸಿ ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಇದ್ದರೆ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಿಲ್ಲುವ ಶಿಕ್ಷಕ, ಶಿಕ್ಷಣತಜ್ಞ, ತತ್ವಜ್ಞಾನಿ ಮತ್ತು‌ ಭಾರತ ಕಂಡ ಮೊದಲ ಉಪರಾಷ್ಟ್ರಪತಿ ರಾಧಾಕೃಷ್ಣನ್ ರವರು. ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ದುಡಿದ ಇವರು ಭಾರತೀಯರ ಮನದಲ್ಲಿ ಅಚ್ಚಳಿಯದೇ ಛಾಪೊತ್ತಿದ್ದಾರೆ.

            "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ" ಎಂಬ ಮಾತು ಅಂದಿಗೂ-ಇಂದಿಗೂ-ಎಂದೆಂದಿಗೂ ಪ್ರಸ್ತುತ ಎನ್ನುವುದನ್ನು ಸಾಬೀತುಪಡಿಸಿದ ಮಹಿಳೆಯರ ಪೈಕಿ ಅಗ್ರಸಾಲಿನಲ್ಲಿ ನಿಲ್ಲುವವರು ಸಾವಿತ್ರಿಭಾ ಪುಲೆ ಅವರು ನಮ್ಮ ಭಾರತ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿಯೂ ಹೌದು. ಇವರನ್ನು ಮರಾಠಿ‌ ಕಾವ್ಯದ ಪ್ರವರ್ತಕಿ ಎಂತಲೂ ಕರೆಯಲಾಗುತ್ತದೆ. ಐತಿಹಾಸಿಕ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡರೆ ಭಾರತದಲ್ಲಿ ಮೊಟ್ಟ ಮೊದಲ ಬಾರಿ (ಬ್ರಿಟಿಷ್ ಮಿಷನರಿಗಳನ್ನು ಹೊರತುಪಡಿಸಿ) ಪುಣೆಯಲ್ಲಿ ತಾತ್ಯಾ ಸಾಹೇಬ್ ಭೀಡೆ ಅವರ ಮನೆಯಲ್ಲಿ ಜ್ಯೋತಿಭಾ ಪುಲೆಯವರು 1848 ರಲ್ಲಿ ಶಾಲೆಯೊಂದನ್ನು ತೆರೆದರು. ಈ ಶಾಲೆ ಭಾರತದ ಪ್ರಪ್ರಥಮ ಖಾಸಗಿ ಮಹಿಳಾ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕೂಲಿ ಕಾರ್ಮಿಕರಿಗಾಗಿ 1855ರಲ್ಲಿ ರಾತ್ರಿಪಾಳಿ ಶಾಲೆಗಳನ್ನು ಸ್ಥಾಪಿಸಿದ್ದಾರೆ.

"ಸಾರ್ವಜನಿಕ ಶಿಕ್ಷಣ ನೀತಿ" ಕಾಯ್ದೆ ಜಾರಿಯಾಗಲಿ,(1835) ಸಾವಿತ್ರಿಭಾ ಪುಲೆಯವರು ಶಿಕ್ಷಕಿಯಾಗಿ ಕೆಲಸ ಮಾಡಿದಾಗ ಡಾ.ರಾಧಾಕೃಷ್ಣನ್ ಅವರಿರಲಿಲ್ಲ ಅಂದರೆ ಅವರು ಹುಟ್ಟಿದ್ದೆ, 1888 ಸೆಪ್ಟೆಂಬರ್ 5 ರಂದು.! ಅಂದು ಸಾವಿತ್ರಿಭಾ-ಪುಲೆ ಶಿಕ್ಷಕರಿಗೆ ಸಮಾಜದ ಹೆಣ್ಣು ಮಕ್ಕಳು ಶಿಕ್ಷಣ ಪಡೆದಾಗ ಮಾತ್ರ ನಮ್ಮ ದೇಶ ಪ್ರಗತಿ ಹೊಂದಲು ಸಾದ್ಯ ಎಂದು ಹೇಳಿದ್ದರು.

            ನಮ್ಮ ಭಾರತದಲ್ಲಿ ಗುರುಕುಲ ಪದ್ಧತಿ ವಿರುದ್ದ ಹೋರಾಡಿ ದೇಶದ ಪ್ರತಿಯೊಬ್ಬ ನಾಗರಿಕನು ಶಿಕ್ಷಣ ಕಲಿಯಬೇಕೆಂಬ ಮಹಾದಾಸೆ ಹೊತ್ತು, ಸ್ವತ: ತಾವೇ ಶಾಲೆಯ ಬಾಗಿಲು ತೆರೆದು ಮಹಿಳೆಯರಿಗೆ, ಶೋಷಿತರಿಗೆ, ಹಿಂದುಳಿದವರಿಗೆ 'ಅ' ಎಂಬ ಅಕ್ಷರ ಕಲಿಯಲು ಅವಕಾಶ ಕಲ್ಪಿಸಿಕೊಟ್ಟ, ರಾಷ್ಟ್ರಪಿತ ಮಹಾತ್ಮ ಜ್ಯೋತಿಭಾ ಪುಲೆ, ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿಯಾದ ತಾಯಿ ಸಾವಿತ್ರಬಾಯಿ ಪುಲೆ ಅವರು ಅನೇಕ ಅವಮಾನ, ಸಂಕಷ್ಟಗಳು ಎದುರಿಸಿ ಬಹುಜನರಿಗೆ ಅಕ್ಷರ ಕಲಿಸಿದ ಮಹಾ ತಂದೆ-ತಾಯಿಯಾಗಿದ್ದಾರೆ. ಈ ಮಹಾ ತಾಯಿ ಸಾವಿತ್ರಬಾಯಿ ಪುಲೆ  ದೇಶದ ನಿಜವಾದ ಅಕ್ಷರದ ಅವ್ವ ಆಗಿದ್ದಾರೆ.‌

            ಪ್ರತಿವರ್ಷ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪೂಜೆ ಮತ್ತು ನೆನೆಯುವಾಗ ಶ್ರೀಮತಿ ಸಾವಿತ್ರಿಭಾ-ಜ್ಯೋತಿಭಾ ಪುಲೆಯವರನ್ನು ಪೂಜಿಸಿ ನೆನೆದರೆ ಮಾತ್ರ ಶಿಕ್ಷಕರ ದಿನಾಚರಣೆ ಪೂರ್ಣವಾದಂತೆ. ಆದರೆ ಈ ಸಮಾಜ, ಜಗತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ತಿಳಿದುಕೊಂಡಷ್ಟು ಪುಲೆ-ದಂಪತಿಗಳ ಬಗ್ಗೆ ತಿಳಿಯದೇ ಇರುವುದು ಅತ್ಯಂತ ನೋವಿನ ಸಂಗತಿ,  ಸರ್ವಪಲ್ಲಿ ರಾದಾಕೃಷ್ಣನವರಿಗಿಂತಲೂ  ತೂಕದ ವ್ಯಕ್ತಿತ್ವ ಸಾವಿತ್ರಿಬಾಯಿ ಪುಲೆಯವರದು ಆದರೆ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗಿರುವ ಪ್ರಚಾರ, ಸಾವಿತ್ರಿ ಭಾ ಪುಲೆಯವರಿಗೆ ಇಲ್ಲದಿರುವ ಈ ಸಂದರ್ಭದಲ್ಲಿ ಅವರನ್ನು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ನಾವು ಹಾಗೂ ಎಲ್ಲ ವೇದಿಕೆಗಳೂ ನೆನೆಪಿಸಿಕೂಳ್ಳುವಂತಾಗಲಿ,  ಯಾರ ಹೆಸರಿನಲ್ಲಿ ಶಿಕ್ಷಕರ ದಿನವನ್ನು ಆಚರಿಸಬೇಕು.? ಸಾವಿತ್ರಿಭಾ-ಪುಲೆಯವರು 'ಮಹಿಳೆ' ಎನ್ನುವ ಕಾರಣಕ್ಕೆ ಕಡೆಗಣಿಸಲ್ಪಟ್ಟರೇ..?? ಇಂತಹ ಶ್ರೇಷ್ಟ ಭಾರತದ ಮೊದಲ ಮಹಿಳಾ ಶಿಕ್ಷಕಿಯ  ಜಯಂತಿಯನ್ನು ಜನವರಿ ಮೂರರಂದೂ, ಅನುದಿನವೂ ನಾವೆಲ್ಲರೂ ಆಚರಿಸುವ ಮೂಲಕ ಜನರಲ್ಲಿ ಶಿಕ್ಷಣದ ಮಹತ್ವವನ್ನು ತಿಳಿಸಬೇಕಾಗಿದೆ                                                                                           - ವೀರಂತರೆಡ್ಡಿ ಜಂಪಾ ಹುಮನಾಬಾದ.

ಕರೋನಾ ಮತ್ತು ಆರ್ಥಿಕ ಸಂಕಷ್ಟ

ಸೃಷ್ಟಿ  ಕಲ್ಪನೆಗೆ ಸವಾಲು ಎಸೆಯುತ್ತಿದ್ದ ಮಾನವನ ಅತೀರೆಕ ವರ್ತನೆಗೆ ತಕ್ಕ ಉತ್ತರ ವೆಂಬಂತೆ ಮನುಜನೇ ಸೃಷ್ಟಿಸಿದ ಅಗೋಚರ ಶಕ್ತಿಯ ನಡುವೆ ಅಘೋಷಿತ ಸಮರ ವಿಂದು ವಿಶ್ವದಾದ್ಯಂತ ಜನರ ಬದುಕನ್ನು ಏರುಪೇರು ಮಾಡಿ, ಸಾವು ನೋವುಗಳಿಂದ ನರಳುವಂತೆ ಮಾಡುತ್ತಿದೆ. ಎಲ್ಲಾ ಕ್ಷೆತ್ರಗ ಳಲ್ಲೂ ತನ್ನ ಕಭಂದ ಬಾಹುಗಳನ್ನು ಚಾಚಿ ಮಾನವನ ದೈನಂದಿನ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿ ಬದುಕಿನ ಸ್ವಾತಂತ್ರ್ಯನ್ನು ಕಸಿದುಕೊಂಡಿದೆ.

             ಪ್ರಗತಿಪರತೆಗೆ ಕಡಿವಾಣ, ಉದ್ಯಮಗಳಲ್ಲಿ ಉತ್ಪಾದನೆ ಸ್ಥಗಿತ, ನೌಕರಿ ವಲಯದಲ್ಲಿ ನೌಕರಿಗೆ ಕುತ್ತು, ಕೃಷಿವಲಯದಲ್ಲಿ ಕೆಲಸಗಾರರ ಕೊರತೆ, ಉದ್ಯೋಗಿಗಳ ಸಂಬಳದಲ್ಲಿ ಕಡಿತ,  ಉದ್ಯೋಗಾಕಾಂಕ್ಷಿಗಳಿಗೆ ನಿರಾಶೆ, ಸ್ಥಗಿತಗೊಂಡ ಕೆಲಸ ಕಾರ್ಯಗಳಿಂದ ಕಾರ್ಮಿಕ ವಲಯದಲ್ಲಿ ಹತಾಶೆ. ಮದುವೆ, ಮುಂಜು, ಇತರ ಎಲ್ಲ ಸಮಾರಂಭಗಳಿಗೆ ನಿಯಂತ್ರಣದ ಜೊತೆ  ವಿಧಿಸಿದ ಷರತುಗಳಿಂದ ಅವುಗಳನ್ನೆ ನಂಬಿ, ಅವಲಂಬಿಸಿ ಜೀವಿಸುತ್ತಿದ್ದ ಅನೇಕ ವರ್ಗದ ಕುಟುಂಬಗಳ,  ಬದುಕು ಬೀದಿಗೆ ಬಂದಿದೆ.ಹೀಗೆ ಎಲ್ಲಾ ಕ್ಷೇತ್ರಗಳ ಎಲ್ಲಾ ಕೋನಗಳಲ್ಲೂ ತನ್ನ ವಿಷಕಾರಿ ಪ್ರಭಾವವನ್ನು ಬೀರಿ ಪ್ರತಿಯೊಬ್ಬರ ಜೀವನದ ಮೇಲೆ ಆ ಸೂಕ್ಷ್ಮ ವೈರಾಣು ಪರಿಣಾಮವನ್ನು ಬೀರಿ,ಬೀರುತ, ಬೀರುತ್ತಲೆ ಎಲ್ಲರ ಬದುಕನ್ನು ಹೈರಾಣು ಮಾಡುತ್ತಿದೆ. ಶಿಕ್ಷಣ ಕ್ಷೇತ್ರಗಳಲ್ಲಿಂದು ಬಾನುಲಿಯಂತೆ ಅಂತರ್ಜಾಲದ ಬೋಧನೆ ಕ್ರಮವು ವಿದ್ಯಾರ್ಥಿ ದಿಶೆಯಲ್ಲಿ ಕಲೆತು ಬೆರೆತು ಆಡಿ ನಲಿದು  ಕಲಿಯುವ ಸುವರ್ಣಾವಕಾಶ ಸಧ್ಯಕ್ಕೆ ಕನಸಿನ ಮಾತಾಗಿದೆ.

             ಕೃಷಿವಲಯದಲ್ಲಿ ಈಗಾಗಲೇ ಹಣ್ಣುಹಂಪಲು ಹೂವು ಹಾಲು  ಮುಂತಾಗಿ ಬಹುಬೇಗನೆ ಕೊಳೆತುಹೋಗುವಂತ ವಸ್ತುಗಳು ಮಾರಾಟ ಮಾಡಲಾಗದೆ ನಿರುಪಯುಕ್ತವಾಗಿ ನಷ್ಟ ಕಷ್ಟವನ್ನುಅನುಭವಿಸಿ ಆರ್ಥಿಕವಾಗಿ ಚೇತರಿಸಿ ಕೊಳ್ಳಲಾಗದೆ ತತ್ತರಿಸಿ ಹೋಗಿದ್ದಾರೆ. ಎಲ್ಲಾ ಹಂತಗಳಲ್ಲಿರುವ ನೌಕರವರ್ಗ ಕೂಲಿ ಕಾರ್ಮಿಕರು ದುಡಿತವಿಲ್ಲದೆ ಕಷ್ಟದಿಂದ ದಿನ ನೂಕುವಂತಾಗಿದೆ. ಮತ್ತೊಂದೆಡೆ ಉತ್ಪಾದನೆಯಿಲ್ಲದೆ ಕೈಗಾರಿಕೊದ್ಯಮ ಕುಸಿದು ಬೀಳುತ್ತಿದ್ದರೆ  ವ್ಯಾಪಾರ  ವಹಿವಾಟುಗಳು ನಡೆಯದೆ ಆರ್ಥಿಕ ಸ್ಥಿತಿಗತಿ ಇಳಿಮುಖವಾಗುತ್ತ ಆರ್ಥಿಕ ಬಿಕ್ಕಟ್ಟಾಗಿದೆ.  ಕೈಗಾರಿಕೊದ್ಯಮ ಕೃಷಿ ವಲಯಗಳಿಗೆ ಪ್ರೋತ್ಸಾಹ ವನ್ನು ಕೊಡುತ್ತ ಆದಾಯ ಮೂಲಗಳನ್ನು  ಹೆಚ್ಚಿಸಬೇಕಾದಲ್ಲಿ ಕಾರ್ಮಿಕ ವಲಯಕ್ಕೆ ಉತ್ತೇಜನವನ್ನು ಕೊಡಬೇಕಾಗಿದೆ.

                                               - ಪೊಡನೋಲನ ಈಶ್ವರ ತಮ್ಮಯ್ಯ

 

ಭೂತ - ಪ್ರೇತ

             ತಂಗಾಳಿಯಲ್ಲಿ ನಾನು ತೇಲಿ ಬಂದೆ, ನಿನ್ನನ್ನು ಈಗ ಸೇರಲೆಂದೆ.....ಓ ಇನಿಯಾ......'* ಎಂಬ ಕನ್ನಡದ ಹಾಡು ಕೇಳಿದಾಗ ಒಂದರೆಕ್ಷಣ ಮನದಲ್ಲಿ ಮೂಡುವ ಭಯದ ಭಾವ ಭೂತದ ಕಲ್ಪನೆ. ಹೌದು ಈ ಹಾಡು ದೆವ್ವ, ಪಿಶಾಚಿಗೆಂದೆ ಮಾಡಿದಂತಹದು. ಅದೆಷ್ಟೊ ಮಂದಿ ಈ ಹಾಡು ದೂರದಿಂದ ಕೇಳಿದರು ನಡುಗುತ್ತಾರೆ, ಇನ್ನು ಅಪರಾತ್ರಿಯಲ್ಲಿ ಕೇಳಿದರೆ ಮುಗಿದೆ ಹೋಯಿತು. ಅಂದಹಾಗೆ ಇವೆಲ್ಲ ಹೇಳ ಹೊರಟಿರುವುದು ದೆವ್ವ ಅಥವಾ ಭೂತದ ಬಗ್ಗೆ. ಸಹೃದಯಿಗಳೆ ಭೂತ ಅಥವಾ ದೆವ್ವದ ಬಗೆಗಿನ ಹಿನ್ನಲೆ ಅದು ಜನರಲ್ಲಿ‌ ಮಾಡಿದ ಹೆದರಿಕೆಯ ಭಾವ ಹಾಗೂ ಅದರ ರೂಪಗಳು ಮತ್ತು ಮೂಢನಂಬಿಕೆಯಿಂದ ಅದನ್ನು ತೊಡೆದು  ಹಾಕುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಒಂದು ಸಣ್ಣ ವಿಶ್ಲೇಷಣೆ.

            ನಡುರಾತ್ರಿಯಲ್ಲಿ ನಿಶ್ಯಬ್ಧದ ವಾತಾವರಣದಲ್ಲಿ ಯಾವುದೆ ಒಂದು  ವಸ್ತುವಿನ ಸಪ್ಪಳವಾದರು ಕ್ಷಣಕಾಲ ಹೆದರಿಕೆ ಎಂಬುದು ಸುಳಿದು ಹೋಗುವುದು ಖಂಡಿತ. ಈ ಒಂದು ಭಯಕ್ಕೆ ಭೂತ/ದೆವ್ವ ಎಂಬ ಹಣೆಪಟ್ಟಿ ಕಟ್ಟಿ ಇಲ್ಲಿಯವರೆಗೂ ಕರೆತಂದಿರುವುದು  ವಿಪರ್ಯಾಸವೇ ಸರಿ. ಇನ್ನು ಈ ಭೂತಕ್ಕೆ ದೆವ್ವ, ಪಿಶಾಚಿ, ಸೈತಾನ್, ಅತೃಪ್ತ ಆತ್ಮ ಹೀಗೆ ನಾನಾ ಹೆಸರುಗಳು ಉಂಟು.ಸಾಮಾನ್ಯವಾಗಿ ಹೇಳುವುದಾದರೆ ಭೂತ/ದೆವ್ವ ಎಂಬುದು ಮನುಷ್ಯನ  ಅತೃಪ್ತ ಆತ್ಮ ಎಂದು ನಾವು ಕರೆಯಬಹುದು. ಆದರೆ ಮನೋವಿಜ್ಞಾನಿಯಾದ ಸಿಗ್ಮಂಡ್ ಫ್ರಾಯ್ಡ್ 'ಭೂತವೆಂದರೆ ಆ ವ್ಯಕ್ತಿಯ ಮನೋವಿಕಾಸದಲ್ಲಾದ ವೈಪಲ್ಯವೇ ಹೊರತು ಬೇರೆನು ಅಲ್ಲ' ಎಂದಿದ್ದಾರೆ. ಅದೇನೆ‌ ಇರಲಿ ಭೂತ ಇದೆಯೋ?ಇಲ್ಲವೊ ? ಎಂಬುದು ಇಂದಿಗೂ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇನ್ನು ಈ ದೆವ್ವಗಳ ಇತಿಹಾಸದ ಬಗ್ಗೆ ತಿಳಿಯುತ್ತಾ ಹೋದರೆ ಅದು ಮನುಕುಲದ ಇತಿಹಾಸದೊಟ್ಟಿಗೆ ಹುಟ್ಟಿಕೊಂಡ ಸಂಗತಿ ನಮಗೆ ಆಶ್ಚರ್ಯ ತರುವಂತಹದು.

 ಬೇತಾಳ ಎಂಬ  ಅತೃಪ್ತ ಆತ್ಮ ರಾಜನೊಬ್ಬನ ಬೆನ್ನು ಹತ್ತಿದ ಪರಿಯಿದೆಯಲ್ಲ ಅದಕ್ಕಿಂತಲೂ ಮೊದಲಿನಿಂದ ಈ ದೆವ್ವ/ಭೂತಗಳ ಇರುವಿಕೆ ನಮಗೆ‌ ಕಂಡು ಬರುತ್ತದೆ. ಎಲ್ಲ ಕಾಲ ಹಾಗೂ ಯುಗದಲ್ಲಿಯು ಜನರಲ್ಲಿ ಈ ದೆವ್ವಗಳ ಬಗ್ಗೆ ಅತೀವ ಭಯ.ಅವುಗಳು ಮನುಷ್ಯನನ್ನು ಕೊಂದು ಬಿಡುತ್ತವೆ ಎಂಬ ಹೆದರಿಕೆ. ಅದ್ಯಾಗೂ ಅವುಗಳು ಹೇಗಿರುತ್ತವೆ ಎಂಬುದರ ನಿರ್ದಿಷ್ಟ ಪರಿಕಲ್ಪನೆ‌ ಇಲ್ಲದಿದ್ದರೂ ಸಹ ಕೆಲವು ಮಂದಿ ಹೇಳುವ ಹಾಗೆ ಅವು ಬಿಳಿಯಾಗಿ ಮುಖದ ತುಂಬ ಬಿಳಿಯ ಛಾಯೆ, ಉದ್ದೂದ್ದ ಕೂದಲು, ಉಗುರುಗಳು , ಪಾದಗಳಿಲ್ಲದ ಹೀಗೆ ನಾನಾ ರೀತಿಯ ಕಲ್ಪನಾತ್ಮಕವಾಗಿ ವರ್ಣಿಸಿದ್ದಾರೆ. ಎಷ್ಟೊ ಕಾದಂಬರಿ, ಕಥೆಗಳಲ್ಲಿ ಅದನ್ನು ನಾವು ಕಾಣಬಹುದು ಸಹ.

ಈ‌ ಜನಪದರದಲ್ಲಿ ಇವುಗಳಿಗೆ ಅತೀವವಾದ ಸ್ಥಾನಮಾನವನ್ನು ನೀಡಿದ್ದಾರೆ. ಸಾಮಾನ್ಯವಾಗಿ ಹಳ್ಳಿಗರು ಏನನ್ನೆ ಆಗಲಿ ಬೇಗನೆ ನಂಬಿ ಬಿಡುತ್ತಾರೆ. ಅದಕ್ಕೆ ಉದಾ: ಹಳ್ಳಿಗಳಲ್ಲಿ ಯಾರಾದರೂ ಸತ್ತು ಕೆಲವು ದಿನಗಳಲ್ಲಿ ಆ ಊರಿನ ಯಾರೋ ಒಬ್ಬರು ಮಾನಸಿಕ ಅಸ್ವಸ್ಥರಾದರೆ ಅದಕ್ಕೆ ಆ ಸತ್ತ ವ್ಯಕ್ತಿಯ ಹೆಸರಿಟ್ಟು ಆತ /ಅವಳು ಇವರ ಮೈಯಲ್ಲಿ ಬಂದಿದ್ದಾನೆ ಎಂದು ಬಿಡುತ್ತಾರೆ. ಇದನ್ನು ಇಡೀ ಊರೆ ನಂಬುತ್ತದೆ ಕೂಡ!. ಆಧುನಿಕ ಯುಗದ ಈ ಕಾಲದಲ್ಲೂ  ಸಹ ಭೂತಗಳು ತಮ್ಮ ಇರುವಿಕೆಯನ್ನು ಸಾಬೀತು ಮಾಡಿವೆ ಎಂದು ಹೇಳುವರಾದರೂ ಅದಕ್ಕೆ ಯಾವುದೆ ಪುರಾವೆ ಲಭ್ಯವಿಲ್ಲ.

 ಈ ಭೂತಗಳ ಬಗ್ಗೆ ಅನೇಕ ಸಂಶೋಧನೆಗಳು ನಡೆಯುತ್ತಿದ್ದು ಸತ್ಯಾಸತ್ಯತೆಗಳ ಪರಾಮರ್ಶೆ ನಡೆಯುತ್ತಿದೆ. ದೈವಿಕ ಶಕ್ತಿ ಇದೆಯಂದಾದರೆ, ಈ ದುಷ್ಟ ಶಕ್ತಿಯು ಇದೆ ಎಂಬುದು ಕೆಲವರ ಅಂಬೋಣ. ನಾವು ನೋಡುವುದಾರೆ ತಮಿಳುನಾಡಿನ ತುಳುವರು ತಮ್ಮ ಸಂಸ್ಕೃತಿಯಲ್ಲಿ ಭೂತಗಳನ್ನು ಆರಾಧಿಸುತ್ತಾರೆ. ಇದರ ಬಗ್ಗೆ ಡಾ.ಎನ್ ಸುಧಾಕರ್ ಎನ್ನುವವರು ಸಂಶೋಧನೆ ಕೈಗೊಂಡು ಇದು ಇಲ್ಲಿನ ಜನರ ನಂಬಿಕೆ, ಆದರದು ಸಕರಾತ್ಮಕವಾಗಿದ್ದು ಅವರ ಜೀವನಕ್ಕೆ ಪೂರಕವಾಗಿದೆ ಎಂದಿದ್ದಾರೆ. ಇಷ್ಟೆ ಅಲ್ಲದೆ ಇತ್ತೀಚೆಗೆ ಅನೇಕ ಹಾರರ್ ಮೂವಿ, ಬ್ಲಾಗ್ ಗಳು ಹುಟ್ಟಿ ಇದರ ಬಗ್ಗೆ ಕೂತೂಹಲ ಕೆರಳಿಸುತ್ತಿವೆ. ಈಗೀಗ ದೆವ್ವ/ಭೂತಗಳು ಮೊದಲಿನಷ್ಟು ಭಯಾನಕ ಘಟನೆಗಳನ್ನು ತೋರ್ಪಡಿಸಿತ್ತಿಲ್ಲ.ಕೊನೆಯದಾಗಿ ದೆವ್ವ/ಭೂತ ಇದು ನಂಬಿಕೆಯಾಗಲಿ ಆದರೆ ಅದು ಮೂಡನಂಬಿಕೆಯಾಗದಿರಲಿ. ನಿಮ್ಮ ಮನೆ ಹಾಗೂ ಅಕ್ಕ-ಪಕ್ಕದಲ್ಲಿ ಈ ರೀತಿಯಲ್ಲಿ ದೆವ್ವ ಬಡಿದುಕೊಂಡಿದೆ ಎಂದು ಕರೆಯುತ್ತಿದ್ದರೆ, ಅವರನ್ನು ಮನೋವೈದ್ಯರಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ. ಅಲ್ಲಿ ಪರಿಹಾರ ಸಿಗಬಹುದು. ಇದಕ್ಕೂ ನಿವಾರಣೆಯಾರೆ ಅದು ತರ್ಕಕ್ಕೆ ನಿಲಕ್ಕದ್ದು ಎಂಬುದು ನನ್ನ ಅನಿಸಿಕೆ. ಇದಕ್ಕೆ ನೀವೇನಂತೀರಾ?...........                                                                        - ಸುರೇಶ ತಂಗೋಡ , ಕೊಪ್ಪಳ.

ಲಾಕ್‌ ಡೌನ್‌ : ಒಂದು ಧನಾತ್ಮಕ ವಿಶ್ಲೇಷಣೆ

            ಇಂದಿನ ಆಧುನಿಕ ನಾಗರಿಕರ ಬದುಕಿಗೆ ನಿರ್ಬಂಧ ವೆಂಬಂತೆ  ಜಾತಿ, ವರ್ಗ, ನೆಲ, ಜಲ, ರಾಜಕೀಯ ಹಿತಾಶಕ್ತಿಗಳು ಮತ್ತು ಬೆಲೆ ಏರಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಆಗಾಗ ಕೇವಲ ಸೀಮಿತ ದಿನಗಳ ಮಟ್ಟಿಗೆ ಮಾತ್ರ ಬಂದ್ ಎಂಬ ಪದ ಕೇಳಿಬರುತಿತ್ತು. ಆದರೆ, ಈ ಕರೋನಾ ಎಂಬ ಸಾಂಕ್ರಾಮಿಕ ಸೊಂಕಿಗೆ ತಿಂಗಳು  - ತಿಂಗಳುಗಳ ಮಟ್ಟಿಗೆ ಲಾಕ್‍ಡೌನ್‍  ಎನ್ನುವ ಪದ ಕೇವಲ ಒಂದು  ರಾಷ್ಟ್ರಕ್ಕೆ ಸೀಮಿತವಾಗದೆ ವಿಶ್ವವ್ಯಾಪಿಯಾಗಿ ಹರಡಿದ್ದು,  ಇಂತಹ ಬಂದ್ ಹಿಂದೆಂದೂ   ನೋಡಿರಲಿಲ್ಲವೆನ್ನಬಹುದಾಗಿದೆ.

            ಇದರ ಮೂಲ ಚೀನಾ ದೇಶವೆಂದಾದರೂ  ಅದರಿಂದ ಹಾನಿಗೊಳಗಾದ ಅನ್ಯ ದೇಶಗಳ ಪಟ್ಟಿ ಅಧಿಕವಾಗಿದೆ.  ಇಂದು ಪರಸ್ಪರ ಮನುಷ್ಯ ಮನುಷ್ಯರನ್ನೆ ಮುಟ್ಟುವುದು  ಅನುಮಾನ ಕೆಡೆಯಾಗಿದೆ.  ಮೇಲಾಗಿ ಸಾಮಾಜಿಕ  ಅಂತರ ಕಾಪಾಡಿಕೊಳ್ಳತ್ತಿರುವುದು ಪ್ರಜಾಪ್ರಭುತ್ವ ಮತ್ತುಇತರೆ ರಾಷ್ಟ್ರಗಳ ದುರಂತವಾಗಿ ಪರಿಣಮಿಸಿದೆ.  ಯಾವಾಗ ಇಂತಹ  ಕೆಟ್ಟ ಗಾಳಿಯಿಂದ ಮುಕ್ತಿ ಸಿಗುವುದೆಂಬ ಭಯದಲ್ಲಿ ದಿನೇ ದಿನೇ ಸಮಾಜವು ಅನುಮಾನದಲ್ಲಿ ಹೆಜ್ಜೆಇಡುತ್ತಿದೆ.

            ಕೋವಿಡ್-19ಗೆ ಮುಂಜಾಗರುಕತೆಯೆಂಬಂತೆ ಜಪಾನ್, ಭಾರತ, ಸಿಂಗಾಪೂರ ಮುಂತಾದ ರಾಷ್ಟ್ರಗಳು ಎಚ್ಚರಿಕೆಯಿಂದ ಸಂಪೂರ್ಣ ಬಂದ್‍ಗಳನ್ನು ಮೂರು ನಾಲ್ಕು ತಿಂಗಳುಗಳವರೆಗೆ ಲಾಕ್‍ಡೌನ್‍ಕೈ ಗೊಂಡು  ಕೊರೋನಾದಂತ  ಸಾಂಕ್ರಾಮಿಕ  ರೋಗವನ್ನು ತಡೆಗಟ್ಟಲು ಪ್ರಯತ್ನಿಸಿವೆ.ಆದರೆ, ಅಮೇರಿಕಾ, ಇಟಲಿ, ಬ್ರಿಟನ್, ರಷ್ಯ, ಇರಾಕ್, ಜರ್ಮನಿ, ಫ್ರಾನ್ಸ್ ಮುಂತಾದ ರಾಷ್ಟ್ರಗಳು ಈ ಸಾಂಕ್ರಾಮಿಕ ರೋಗಗಳಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಬಲಿಯಾಗಿರುವುದು ನಾವು ದಿನ ನಿತ್ಯ ಮಾಧ್ಯಮಗಳಿಂದ ತಿಳಿದುಕೊಂಡಿದ್ದೇವೆ.

            ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ವ್ಯಕ್ತಿ-ವ್ಯಕ್ತಿಗಳ ನಡುವಿನ ಸಾಮಾಜಿಕ ಅಂತರ ಎಂಬ ಪರಿಕಲ್ಪನೆಯಲ್ಲಿರು  ವಾಗಲೆ ಲಾಕ್‍ಡೌನ್ ಸಡಿಲಗೊಳಿಸುತ್ತಿರುವುದು ವಿಷಾದದ ಸಂಗತಿಯಾದರೂ ಅನಿವಾರ್ಯವೆಂಬಂತಾಗಿದೆ. ಏಕೆಂದರೆ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು ನಿರುದ್ಯೋಗ, ಬಡತನ ಮುಂತಾದ ಸಾಮಾಜಿಕ ಸಮಸ್ಯೆಗಳಿಂದ ನರಳುವಂತಾಗಿ ಆರ್ಥಿಕ ಮುಗ್ಗಟ್ಟನ್ನು  ಎದುರಿಸುವಂತಾಗಿ ಅನೇಕ ಜನರು ದೇಶ ವಿದೇಶಗಳಲ್ಲಿ ತಮ್ಮ  ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಗಿದೆ. ಹಾಗಾಗಿ ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿರುವುದು ಸ್ತುತ್ಯಾರ್ಹವಾದುದ್ದೆ.  ಆದರೆ ಸಮಾಜದಲ್ಲಿನ ಜನರೆಲ್ಲಾ ತಮ್ಮ  ತಮ್ಮ  ಆರೋಗ್ಯಕಾಪಾಡಿಕೊಳ್ಳುವುದು ಅವರಿಗೆ ಬಿಟ್ಟ ವಿಚಾರವಾಗಿದೆ.  ಹಾಗಾಗಿ ಪ್ರತಿಯೊಬ್ಬರು ಈ ಮಹಾಮಾರಿ  ಕರೋನಾದ ಮದ್ಯದಲ್ಲಿಯೇ ಎಚ್ಚರಿಕೆಯಿಂದ ಮುಖಗವಸು ಮತ್ತು ಸ್ಯಾನಿಟೈಜರ್‍ಗಳ ಬಳಕೆಯಿಂದ ಪ್ರತಿಯೊಬ್ಬರ ಆರೋಗ್ಯದ ಸುರಕ್ಷತೆ ಬಹುಮುಖ್ಯವೆನಿಸಿದೆ.

            ಅದಕ್ಕಾಗಿಯೆ ಜೂನ್ 18ರಂದು  ಕರ್ನಾಟಕದಲ್ಲಿ ಮುಖಗವಸು ದಿನ  ಎಂದು  ಆಚರಿಸಲಾಗಿದೆ.  ಅಲ್ಲದೆ ಲಾಕ್‍ಡೌನ್ ನಂತರದ ಸಂದರ್ಭವನ್ನು ನಿರ್ವಹಿಸುವ ಸಮಿತಿ  ಅಥವಾ ಕಾರ್ಯಪಡೆಯಾವುದು  ಎಂಬುವುದರ ಮಾಹಿತಿ ಅವಶ್ಯಕವಾಗಿರುತ್ತದೆ.  ಇದಕ್ಕೆ ಸಲಹೆ ನೀಡಲು ನಾಗರಿಕ ಸಮಾಜದ ಗಣ್ಯರು, ವೃತ್ತಿಕಾರರು ಮತ್ತು  ಅನುಭವಿ ತಜ್ಞರನ್ನು ನೇಮಿಸುವುದು, ಈ ಸಮಿತಿಗಳ ನಿರ್ಣಯಗಳುಸಾರ್ವಜನಿಕವಾಗಿ ತಿಳಿಸುವ ನಿಯಮಿತ ವ್ಯವಸ್ಥೆಯಾಗಿ ಅದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳುವಂತಾಗಬೇಕು.

            ಲಾಕ್‍ಡೌನ್‍ನಿಂದಾಗಿ ಸಮಾಜದ ಮೇಲೆ ಅನೇಕ ಪರಿಣಾಮಗಳು ಉಂಟಾಗಿವೆ. ಇಂದು ಪ್ರತಿಯೊಬ್ಬರಲ್ಲೂ  ಆರೋಗ್ಯ ಸುರಕ್ಷತೆಯ ಕಾಳಜಿ ಹೆಚ್ಚಾಗಿದೆ ಸಮಾಜಿಕ  ಅಂತರ, ಮಾಸ್ಕ್‍ ಧರಿಸುವಿಕೆ, ಸ್ಯಾನಿಟೈಜರ್, ಥರ್ಮಲ್ ಸ್ಕ್ರೀನಿಂಗ್ ಬಳಕೆ ಮಾಡುತ್ತಿರುವುದು ಅನಿವಾರ್ಯವಾಗಿದೆ. ಬಡತನ ಸಿರಿತನ ಯಾವುದು ಶಾಶ್ವತವಲ್ಲ ಎಂಬ ಅರಿವು ಮೂಡಿರುವುದಲ್ಲದೆ  ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಗಳಿಗೆ ವಲಸೆಯ ಪ್ರಮಾಣ  ಕಡಿಮೆಯಾಗಿ  ಅನವಶ್ಯಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿಕೊಳ್ಳಲಾಗಿದೆ.

            ಬೇರೆ ಬೇರೆ  ರಾಷ್ಟ್ರದಲ್ಲಿದ್ದವರು ಈ ಸಾಂಕ್ರಾಮಿಕರೋಗದ ಭಯದಿಂದ ‘ಮುತ್ತುಗಕ್ಕೆ ಮೂರೇ ಎಲೆ’ ಎಂಬ ಗಾದೆಯೆಂತೆ ತಮ್ಮ ಊರುಗಳಿಗೆ ವಾಪಸ್ಸಾಗುತ್ತಿರುವುದು ಮತ್ತು  ತಮ್ಮ ರಕ್ತ ಸಂಬಂಧಿಕರೊಟ್ಟಿಗೆ   ಕಾಲ ಕಳೆಯಬೇಕೆಂಬ ಮನಸ್ಥಿತಿಗೆ ಬರತೊಡಗಿದ್ದಾರೆ  ಇದರಿಂದ ಸಂಬಂಧಗಳ ಬೆಲೆ ಏನೆಂಬುದು ಅರಿವಿಗೆ ಬರತೊಡಗಿದೆ. ತಮ್ಮ ಮನೆಗಳಲ್ಲಿ ಮಕ್ಕಳ ಮತ್ತು ವಯಸ್ಕರನ್ನು  ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವ ಸ್ಥಿತಿ ಬಂದೊದಗಿದೆ.  ಅಲ್ಲದೆ ಅನೇಕ ಕುಟುಂಬಗಳಲ್ಲಿ ಕೂಡಿ  ಇರುವ ಸಾಮರಸ್ಯದ ಮತ್ತು ಸಂತೋಷದ ಗಳಿಗೆಗಳು ಬಂದೊದಗಿವೆ.

            ಲಾಕ್‍ ಡೌನ್‍ ನಿಂದಾಗಿ ಸಿನಿಮಾ, ಶಾಪಿಂಗ್ ಮಾಲ್‍ಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳವಂತಾಗಿ  ಶ್ರೀಸಾಮಾನ್ಯರ ವ್ಯಾಪಾರ ವಹಿವಾಟುಗಳು ಮಹತ್ವ ಪಡೆದುಕೊಂಡಂತಾಗಿದೆ. ಶಾಲಾ ಕಾಲೇಜು ಮತ್ತು ವಿಶ್ವ ವಿದ್ಯಾಲಯದ ಮಟ್ಟದಲ್ಲಿ  ಡಿಜಿಟಲ್ ಮತ್ತುಆನ್‍ಲೈನ್ ಶಿಕ್ಷಣಕ್ಕೆ ಮಹತ್ವ ಬಂದಂತಾಗಿದೆ.  ಇದರಿಂದಾಗಿ ಇಂದು ವಿದ್ಯಾರ್ಥಿಯಿಂದ ಹಿಡಿದು  ಉಪನ್ಯಾಸಕ ವೃಂದದವರೆಗೂ  ಈ-ಕಲಿಕೆಯ  ಬಳಕೆಗೆ ಪ್ರೋತ್ಸಾಹಿಸಿದಂತಾಗಿದೆ.  ಅಲ್ಲದೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಲಾಕ್‍ಡೌನ್ ಸಂದರ್ಭವು ಜ್ಞಾನಗಳಿಕೆಗೆ ಪ್ರತಿ ದಿನ ರಾಜ್ಯ, ರಾಷ್ಟ್ರ ಮತ್ತುಅಂತರ ರಾಷ್ಟ್ರೀಯ  ಆನ್‍ಲೈನ್ ಬೋಧನೆ, ರಸಪ್ರಶ್ನೆಗಳು, ಕಾರ್ಯಗಾರಗಳು ಮತ್ತುವಿಚಾರ ಸಂಕಿರಣದಂತಹ ವೆಬಿನಾರಗಳು ಉಪಯುಕ್ತವೆನಿಸಿವೆ. ಅಲ್ಲದೆ, ಪರಿಸರದ ಮೇಲೂ ಇದರ ಪ್ರಭಾವ ಉಂಟಾಗಿದೆ.    

                                                                                               - ಡಾ. ಸಿದ್ಧಲಿಂಗಪ್ಪ ಎಸ್. ದೇಶಮುಖ್

ಮುಪ್ಪಿನ ಮುದುಕಿ

            ಅದೊಂದು ದಿನ ಮಧ್ಯಾಹ್ನ ಚುರು ಚುರು ಬಿಸಿಲಿತ್ತು. ತರಗತಿಗಳನ್ನು ಮುಗಿಸಿಕೊಂಡು ಊಟ ಮಾಡಿ ಗೆಳೆಯನ ವಸತಿ ನಿಲಯ ದತ್ತ ಹೆಜ್ಜೆ ಹಾಕಿದೆ. ಕಲ್ಯಾಣ ನಗರ ಸಮೀಪಿಸುತ್ತಿದಂತೆ ಯಾರೋ ಒಬ್ಬ ಅಜ್ಜಿ ದೂರದಲ್ಲಿ ಬಸವಳಿದು ನಡೆದುಕೊಂಡು ಹೋಗುವ ದುಸ್ಥಿತಿಯನ್ನು ಕಂಡೆ, ಆ ದೃಶ್ಯವನ್ನು ಕಂಡು ನನ್ನ ಕೈಲಾದಷ್ಟು ಆ ಅಜ್ಜಿಗೆ ಸಹಾಯ ಮಾಡಬೇಕೆಂದು ಮನಸ್ಸಿಲ್ಲಿಯೇ ಅಂದುಕೊಂಡು ಮುಂದೆ ಸಾಗಿದೆ, ಅಜ್ಜಿಯನ್ನು ದೂರದಿಂದಲೇ ತಕ್ಷಣ ಕೂಗಿ ನಿಲ್ಲಿಸಿದೆ ,ಸಮೀಪ ಹೋದ ಮೇಲೆ ಅಜ್ಜಿ  ತನ್ನೆರಡು ಹೆಗಲ ಮೇಲೆ ಮಣಭಾರದಷ್ಟು ಹೊರುವ ತರಕಾರಿ ಚೀಲಗಳನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡಿ ತನ್ನ ಗುಡಿಸಲಿನತ್ತ ಹೊರಟಿರಬಹುದೆಂದು ಊಹಿಸಿದೆ. ಅಷ್ಟು ಭಾರವಾದ ಚೀಲಗಳನ್ನು ಹೊತ್ತು ಹೊರಟಿರುವ ಅಜ್ಜಿಯ ಸ್ಥಿತಿಯನ್ನು ನೋಡಿ ಮನಸ್ಸು ಅರೇಕ್ಷಣ ಮಮ್ಮಲ ಮರುಗಿತು. ಅಜ್ಜಿಗೆ ಸಹಾಯ ಮಾಡಬೇಕೆಂದು ಅಜ್ಜಿಯ ಕೈಯಲ್ಲಿರುವ ಚೀಲಗಳನ್ನು ನನ್ನ ಸೂಪರ್ದಿಗೆ ಪಡೆದುಕೊಂಡು ಅಜ್ಜಿ ನಾನು ಮಾತನಾಡುತ್ತಾ ಗುಡಿಸಲಿನತ್ತ  ಹೊರಟೆವು,, ಸು. 70 ಆಸುಪಾಸಿನ ಇಳಿ ವಯಸ್ಸಿನಲ್ಲಿರುವ ಅಜ್ಜಿ ಅಷ್ಟು ತೂಕದ  ತರಕಾರಿ ಚೀಲಗಳನ್ನು,  ದೂರದ ಸ್ಥಳದಿಂದ ಹೊತ್ತು ತರಲು ಕಾರಣವನ್ನು ತಿಳಿಯಲು ಮನಸ್ಸು ಹಪಾಹಪಿಸುತ್ತಿತ್ತು ಹೇಗೋ ಧೈಯ೯ ಮಾಡಿ ಅಜ್ಜಿಗೆ ಹೀಗೆ ಕೇಳಿದೆ ನಿಮಗೆ ಮಕ್ಕಳಿಲ್ಲವೇ?? ನೀವೇಕೆ ತರಕಾರಿಗಳನ್ನು ದೂರದ ಪ್ರದೇಶದಿಂದ ಹೊತ್ತು ತರುತ್ತಿದ್ದಿರಿ ಎಂದು ಕೇಳಿದಾಗ ಅಜ್ಜಿ ದುಃಖದಿಂದಲೇ  ಹೀಗೆ ಉತ್ತರಿಸಿದಳು “ ಮಗಾ ನನಗೆ ಇಬ್ಬರು ಗಂಡು ಮಕ್ಕಳ ಕಣಪ್ಪಾ ಇಬ್ಬರೂ ಕೆಲಸ ಮಾಡ್ತಾರೆ ಬೆಳಗ್ಗೆ ಕೆಲಸಕ್ಕೆ ಹೋದರೆ ಮರಳಿ ರಾತ್ರಿಯೇ ಮನಿಗೆ ಬರ್ತಾರೆ  ಅಷ್ಟರಲ್ಲಿ ನಾನು ಸಂತಿ ಮಾಡಿ ಅಡುಗೆ ಮಾಡಿದ್ರೆ ಮಾತ್ರ ಅವತ್ತು ನನಗೆ ಮಕ್ಕಳು ಊಟ ಕೊಡ್ತಾರೆ ಇಲ್ಲದಿದ್ದರೆ ನಾನು ರಾತ್ರಿಯಿಡೀ ಉಪವಾಸ ಮಲಗಬೇಕಾಪ್ಪಾ  ಅಂದಾಗ ಅಜ್ಜಿಯ ಮಾತುಗಳನ್ನು ಕೇಳಿ ನನ್ನ ಕಣ್ಣಲ್ಲಿ ನೀರು ಜೀನುಗಿತು. ಮಕ್ಕಳ ಬೆಳವಣಿಗೆಗಾಗಿ ತಂದೆ ತಾಯಿಗಳು ತಮ್ಮ ಸವ೯ಸ್ವವನ್ನೆ ಮುಡಪಿಡುವ ಇಂದಿನ ಸಂದಭ೯ದಲ್ಲಿ, ಒಂದು ಹೊತ್ತಿನ ಊಟಕ್ಕೆ  ಪರದಾಡುತ್ತಿರುವ ಅಜ್ಜಿಯ  ಪರಿಸ್ಥಿತಿ ಕಂಡಾಗ  ಅರಿಯದೆ ನನ್ನ ಕಣ್ಣಲ್ಲಿ ಕಣ್ಣಿರು ಹರಿದವು.  ಆಗ ನನಗೆ, ಜಗತ್ತಿನಲ್ಲಿ ಕೆಟ್ಟ ಮಕ್ಕಳಿದ್ದಾರೆಯೇ ಹೊರತು ,  ಕೆಟ್ಟ ತಂದೆ – ತಾಯಿಗಳಿಲ್ಲ , ಎಂದು ಅಥ೯ವಾಯಿತು. ಅಜ್ಜಿ ಮತ್ತು ನಾನು ಮಾತನಾಡುತ್ತಾ , ಅಜ್ಜಿಯ ಗುಡಿಸಲಿಗೆ ಬಂದು ತಲುಪಿದೇವು , ಅಜ್ಜಿಯನ್ನು ಅವಳ ಗುಡಿಸಲಿಗೆ ತಲುಪಿಸಿ ಬರುವಾಗ , ದಾರಿಯಲ್ಲಿ “ನೀನು ನನಗೆ ದೇವರ ಹಾಗೇ ಸಿಕ್ಕಿಯಪ್ಪಾ  ನೂರು ವಷ೯ ಬಾಳಪ್ಪಾ”  ಎಂದು ಅಜ್ಜಿ ನನಗೆ ಹರಿಸಿದಳು. ಅಜ್ಜಿ ಆಸ್ತಿಯಿಂದ ಮಾತ್ರ ಬಡವಳಾಗಿದ್ದಳು, ಆದರೆ ಮನಸ್ಸಿನಿಂದ ತುಂಬಾ ಶ್ರೀಮಂತಳಾಗಿದ್ದಳು. ನಂತರ ತಾನೇ ಮಾಡಿದ ಎರಡು ಚಕ್ಕಲಿಯನ್ನು  ನನಗೆ ತಿನ್ನಲು ಕೊಟ್ಟಳು ಅವುಗಳನ್ನು ತಿನ್ನುತ್ತಾ ಚಂದ್ರೋದಯ ಆಗುವುದರೊಳಗೆ ಅಜ್ಜಿ  ಹೇಳಿದ ಮಾತುಗಳನ್ನು ಮನಸ್ಸಿನಲ್ಲಿ ಗೊಣಗುತ್ತಾ ಹಾಸ್ಟೆಲ್ ನತ್ತ ಹೆಜ್ಜೆ ಹಾಕಿದೆ….

                                                                                            - ಕೊಟ್ರೇಶ ನಡುವಿನಮನಿ ಕರ್ನಾಟಕ ವಿ ವಿ ಧಾರವಾಡ

ಕರೋನಾ ಕಾಲದ ಶಿಕ್ಷಕ

            ಕರುಣೆ ಬಾರದ ಕೊರೊನಾ  ಜಗತ್ತಿನ ನಿದ್ಯೆಕೆಡಿಸಿದ ಕೊರೊನಾ  ತನ್ನ ಭಾವುಬಂದನದೊಳಗ   ಪ್ರಪಂಚವನ್ನೆ ತಬ್ಬಿ ಕೊಂಡಿರೆ ಟಿವಿ ಆನ್ ಮಾಡಿದರೆ ಸಾಕು  ಪತ್ರಿಕೆ ಪುಟ ತಿರುವಿದರೆ ಸಾಕು  ಪೋನ್ ಮಾಡಿದರೆ ಸಾಕು. ಜನ ಬಾಯ್ದೆರೆದರೆ ಕೊರೊನಾದ  ರೂಪ.ಚಿತ್ರ ವಿಚಿತ್ರವಾಗಿ. ಹರಡುವ ವೈರಸದ ಭಯಾನಕ ರೂಪ ಜನರನ್ನೂ  ಬೆಚ್ಚಿಬಿಳಿಸುವ ತಾಜಾ ಚಿತ್ರ  ಸುದ್ದಿಗಳು ಕಣ್ಮನದ ಮುಂದೆ ರೂಪ ತಾಳಿವೆ. ಎಲ್.ಕೆ.ಜಿ. ಯು.ಕೆ.ಜಿ. ಅ0ಗನವಾಡಿ ಶಾಲಾ ಕಾಲೇಜು ಗಳು ಮಕ್ಕಳಿ0ದ ಸದಾಕಾಲ ಚಿಲಿಪಿಲಿ ಇಂದು ಸದ್ದು ಗದ್ದಲ ವಿಲ್ಲದೇ. ಶಾ0ತಿಯ ಸಂದೇಶದಲ್ಲಿ  ಮೌನವಹಿಸಿವೆ.

            ನಾನು ಶಿಕ್ಷಕ ವೃತ್ತಿಯಲ್ಲಿ 23 ವರ್ಷಗಳಿಂದಲೂ ಸೇವೆ ಸಲ್ಲಿಸುತಿರುವೆ ಆದರೆ 2020- 21ನೇ ಶೈಕ್ಷಣಿಕ ವರ್ಷದಲಿ ನಿಸರ್ಗದ ಮಡಿಲಿನೊಳಗೆ ಮಹಾರೋಗ.ಕೊರೊನಾದ ಹೊಡೆತಕ್ಕೆ ಸಿಲುಕಿ.  ವಿದ್ಯಾರ್ಥಿಗಳಿಗೆ ಸರದಿ ಸಾಲಿನ ಪರೀಕ್ಷೆ ದಿನಗಳಲ್ಲಿ ಜನಜೀವನಕ್ಕ ಅಂಟು ರೋಗ ಗಂಟುಬಿದ್ದು ಎಲ್ಲ ಪರೀಕ್ಷೆಗಳು.ನಡಸದಂತೆ ಸರಕಾರದ ಆದೇಶ, ಮುಂದಿನ ಆದೇಶ ಬರುವರೇಗೆ ಧೈರ್ಯದಿಂದ ಅಭ್ಯಾಸ ಮಾಡಿರಿ ಎಂದ ಸರಕಾರ  ಕೊರೊನಾದ ಹೊಡೆತಕ್ಕೆ  ಬಾಲಕ+ಪಾಲಕ +ಶಿಕ್ಷಕರ ಮದ್ಯ ಇರುವ ಸೇತುವೆ ಶೀಥಿಲಾವಸ್ಥೆತಲುಪುವ ಮುನ್ನ ನಮ್ಮ ಗಣ ಸರಕಾರ  ವಿದ್ಯಾಗಮ ಎಂಬ ವಿನೂತನ ವಾದ ಕಾರ್ಯ ಕ್ರಮ ಜಾರಿಗೆ  ತಂದು ಮಕ್ಕಳಿರುವಲ್ಲಿಗೆ ತೆರಳಿ ಪಾಠ ಹೇಳಿ ವಿದ್ಯಾರ್ಥಿಗಳೊಂದಿಗೆ ನೀರಂತರ ಸಂಪರ್ಕದಲಿ ಉಳಿಯುವದಕಾಗಿ.

            ಶಿಕ್ಷಕರು  ಹಲವಾರು ರೀತಿಯ ತಮ್ಮ  ಕೌಶಲ್ಯಗಳನ್ನು ಉಪಯೋಗಿಸಿ  ಅವರ ವಿಚಾರ ಆಲೋಚನೆಗಳೊಂದಿಗೆ ಆನ್ ಲೈನ್  ಪಾಠ ಗಳು ಮೇಸ್ಜೆಜ ಕಳಿಸುವದರೊ0ದಿಗೆ ತಾ0ತ್ರಿಕ  ಸೌಲಭ್ಯ ವಿಲ್ಲದವರ ಮನೆ ಮನೆ  ಬೆಟ್ಟಿಯೊಂದಿಗೆ ವಿದ್ಯಾರ್ಥಿಗಳಿಗೆ  ಅಭ್ಯಾಸ ಹಂಚಿಕೆ ಮಾಡಿ ನಮಗೆ ವಹಿಸಿರುವ ವಠಾರದಲ್ಲಿ  ವಠಾರಶಾಲೆ ನಡೆಸಿ ವಿದ್ಯಾರ್ಥಿಗಳು ಮಾಡಿದ ಅಭ್ಯಾಸ ದ ಹಾಳೆಗಳಿಂದ ಕ್ರತಿ ಸಂಪುಟ ರಚನೆಯೊಂದಿಗೆ ನಿರಂತರವಾಗಿ ಈಗ ಸಾಗಿದೆ ಈ ವರುಷದ ಶಿಕ್ಷಕರ ದಿನಾಚರಣೆ ಯು ವಿದ್ಯಾರ್ಥಿಗಳೊ0ದಿಗೆ ಆಚರಿಸ ದೆ ಕೈ ತೊಳೆದು ಕೊ0ಡು ಸಾಮಾಜೀಕ ಅ0ತರ ಕಾಯ್ದುಕೊಂಡು ಮುಖಕ್ಕೆ  ಮಾಸ್ಕದರಿಸಿ ಜಗತ್ತಿಗೆ ಕ0ಟಕ ವಾಗಿರುವ ಮಹಾ ಮಾರಿ  ಹೆಮ್ಮಾರಿಯ ಭಯಾನಕ  ಭಯಕ್ಕೆ ಜೀವ ವನ್ನು ಕೈಯಲ್ಲಿ  ಹಿಡಿದು ಕೊ0ಡು ಪಾಲಕ + ವಿದ್ಯಾರ್ಥಿಗಳ ಮನೆಗೆ ತೆರಳಿ  ಅಭ್ಯಾಸ ನೀಡುತ್ತಾ ನಮ್ಮ  ವಿದ್ಯಾರ್ಥಿಗಳಿಗೆ ಪ್ರೋತ್ಸಾಹ  ನೀಡುತ್ತಾಸಾಗಿದೆ.

                                                                                                                   - ಸಂಜಯ.ಜಿ.ಕುರಣೆ ಶಿಕ್ಷಕರು ಐನಾಪುರ.

ಸಮಯ

            ನಾವು ಚಿಕ್ಕವರಿದ್ದಾಗ ನಮ್ಮ ಅಪ್ಪ-ಅಮ್ಮ ನಾವು ಬೇಕೆನ್ನುವ ಆಟಿಕೆಗಳನ್ನು ಬಟ್ಟೆಗಳನ್ನು ಕೊಡಿಸುತ್ತಿದ್ದರು ನಾವು ಕೇಳುವ ಪ್ರತಿಯೊಂದನ್ನು ಇಲ್ಲ ಎನ್ನದೆ ಕೊಡಿಸುತ್ತಿದ್ದರು ನಾವು ಅವು ಸಿಕ್ಕಿತು ಎಂದು ಖುಷಿ ಪಡುವಾಗ ನಮ್ಮ ಖುಷಿಯನ್ನು ನೋಡುತ್ತಾ ನಮ್ಮ ತಂದೆ-ತಾಯಿ ಖುಷಿ ಪಡುತ್ತಿದ್ದರು. ಆದರೆ ಯಾರಾದರೂ ಖುಷಿನ ಕೊಂಡುಕೊಳ್ಳಲು ಸಾಧ್ಯವೇ?  ಯಾರೇ ಆಗಲಿ ಖಷಿಯನ್ನು ಎಲ್ಲಿಂದಲಾದರು ಕೊಂಡುಕೊಳ್ಳಲು ಸಾಧ್ಯವೇ ಎಂದು  ನೋಡಿದಾಗ ಅದು ತುಂಬಾ ಅಸಾಧ್ಯವಾದುದಾಗಿದೆ. ಖುಷಿಯ ಬಗ್ಗೆ ದಲೈಲಾಮರವರು ಹೀಗೆ ಹೇಳಿದ್ದಾರೆ ಅದೇನೆಂದರೆ ಹ್ಯಾಪಿನೆಸ್ ಈಸ್ ನಾಟ್ ಸಮ್ಥಿಂಗ್ ರೆಡಿಮೇಡ್ ಇಫ್ ಕಮ್ಸ್ ಫ್ರಮ್ ಯುವರ್ ಓನ್ ಆಕ್ಷನ್

            (happiness is not something readymade if comes from your own actions) ಎಂದು ಹೇಳುತ್ತಾರೆ ನಾವು ಮಾಡುವ ಕಾರ್ಯಗಳಿಂದ ನಮಗೆ ಖುಷಿ ಸಿಗುತ್ತದೆ ವಿನಃಹ ಕೊಂಡುಕೊಳ್ಳಲು ಸಾಧ್ಯವಿಲ್ಲ.  ನಾವು ಈ ಖುಷಿಯನ್ನು ಹೇಗೆ ಪಡೆಯುತ್ತೇವೆ? Learn to enjoy little things ಅಷ್ಟೆ. ಮನುಷ್ಯ ಅಂದಮೇಲೆ ಒತ್ತಡ, ದುಃಖ, ಸಂಘರ್ಷ ಇದ್ದೇ ಇರುತ್ತದೆ ಯಾವ ವ್ಯಕ್ತಿಯಾಗಲಿ ನೋಡಲು ಎಷ್ಟೇ ಖುಷಿಯಿಂದ ಇದ್ದರೂ ಮುಖದಲ್ಲಿ ಖುಷಿ ಕಾಣಿಸಿದರು ಹೇಳಿಕೊಂಡರೂ ಆತ ಪ್ರಪಂಚದಿಂದ ರಹಸ್ಯವಾಗಿ ಒಂದಲ್ಲಾ ಒಂದು ನೋವು ದುಃಖವನ್ನು ಮುಚ್ಚಟ್ಟಿರುತ್ತಾನೆ. 

            ನಾವು ಈ ಆಧುನಿಕ ಜಗತ್ತಿನಲ್ಲಿ ದುಡಿಮೆಯ ಒತ್ತಡದಲ್ಲಿ ನಮಗಾಗಿ ಸ್ವಲ್ಪ ಸಮಯವನ್ನ ಕೊಡುವುದನ್ನ ಮರೆತುಬಿಡುತ್ತೇವೆ. ನಾವು ನಮ್ಮನ್ನ ನಾವು ಪ್ರೀತಿಸಿಕೊಳ್ಳುವಷ್ಟು ನಮ್ಮಲ್ಲಿ ಸಮಯ ಇಲ್ಲವೆಂದರೆ ನಾವು ಇತರರನ್ನು ಹೇಗೆತಾನೇ ಪ್ರೀತಿಸುತ್ತೇವೆ? ನಾವು ನಮಗೋಸ್ಕರ ಸಮಯ ನೀಡದಷ್ಟು ಬ್ಯುಸಿ (busy) ಆದರೆ ನಮ್ಮ ಪ್ರೀತಿ ಪಾತ್ರರಿಗೆ ಸಮಯ ನೀಡಲು ಹೇಗೆ ಸಾಧ್ಯ? ನಾವು ಖುಷಿ ನೆಮ್ಮದಿಯನ್ನು ಬೇಸಿಕ್ (basic)  ಅಂಶಗಳಿಂದ ಪಡೆಯಬಹುದು ಎಂದುಕೊಂಡಿದ್ದರೆ ನಮ್ಮ ಜೀವನದಲ್ಲಿ ಯಾವುದೇ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. 

             ಖುಷಿ ಅನ್ನೋದು ನಾವು ಈ ಸೋಷಿಯಲ್ ಮೀಡಿಯಾಗಳಿಂದಾಗಲಿ ಐಷರಾಮಿ ಜೀವನದಿಂದಾಗಲಿ ಪಡೆಯಲು ಸಾಧ್ಯವಿಲ್ಲ. ನಾವು ನಮ್ಮ ಖುಷಿಯನ್ನು ಇರುವುದರಲ್ಲಿ ಇರುವವರ ಜೊತೆಗೆ ಕಾಣಲು ಬಿಡುತ್ತೇವೆ. ಬೇರೊಂದರಲ್ಲಿ ಹುಡುಕಲು ಹೊರಡುತ್ತೇವೆ. ಮನುಷ್ಯನ ಕೆಟ್ಟ ಗುಣವೋ ಸಹಜ ಗುಣವೋ ನಾ ಕಾಣೇ ಏಕೆಂದರೆ ತಮ್ಮನ್ನ ತಾವು ಯಾವಾಗಲು ಇತರರೊಂದಿಗೆ ಹೋಲಿಸಿಕೊಳ್ಳುತ್ತಾರೆ ಈ ಹೋಲಿಸಿಕೊಳ್ಳುವ ಗುಣವೇ ಮನುಷ್ಯನ ಖುಷಿ, ನೆಮ್ಮದಿಯನ್ನ ಹಾಳು ಮಾಡುತ್ತಾ ಬಂದಿದೆ. 

            ನಮ್ಮವರಿಗಾಗಿ, ನಮಗಾಗಿ, ನಮ್ಮವರಿಗೋಸ್ಕರ ಬದುಕುವುದಾದರೆ ಅವರಿಗಾಗಿ ಸ್ವಲ್ಪ ಸಮಯ ನೀಡಬೇಕಾಗುತ್ತದೆ. ದಿನದ ೨೪ ಗಂಟೆಗಳಲ್ಲೂ ನಾವು ಬ್ಯುಸಿ ಇರುವುದಿಲ್ಲ ಆದರೆ ಈ ಬ್ಯುಸಿ ಎನ್ನುವ ಉತ್ತರ ಕೊಡುವುದರಲ್ಲಿ ನಾವು ಬ್ಯುಲಸಿಯಾಗುತ್ತೇವೆ. ಈ ರೀತಿಯ ಉತ್ತರ ಕೊಡುವುದನ್ನ ಮೊದಲು ನಾವು ನಿಲ್ಲಿಸಿದರೆ ಮುಂದೆ ಒಂದು ದಿನ ಸಾರಿ (sorry) ಎಂದು ಕೇಳಲು ಕೂಡ ನಮ್ಮ ಜೊತೆ ಯಾರು ಇರುವುದಿಲ್ಲ ನಮ್ಮವರಿಗೆ ಸಮಯ ನೀಡುವುದೆಂದರೆ ನಮ್ಮ ಆತ್ಮೀಯರಿಗೆ (ಅಪ್ಪ-ಅಮ್ಮ , ಮಕ್ಕಳು, ಅಕ್ಕ-ತಂಗಿ, ಅಣ್ಣ-ತಮ್ಮ, ಗೆಳಯ-ಗೆಳತಿ, ಗಂಡ-ಹೆಂಡತಿ) ಕೊನೆಗೆ ತಮಗಾಗಿ ಸ್ವಲ್ಪ ಸಮಯವನ್ನು ಕೊಡಲು ಅಭ್ಯಾಸವನ್ನು ಮಾಡಿಕೊಂಡರೆ ನಾವು ನಮ್ಮ ಜೀವನವನ್ನು ಸ್ವಲ್ಪ ತೃಪ್ತಿಯಿಂದ ಸಂತೋಷದಿಂದ ಕಳೆಯಲೂ ಬಹುದು ಹಾಗೆಯೇ ಕೊನೆಗೆ ನಮ್ಮ ಜೀವನವನ್ನು ತೃಪ್ತಿಯಿಂದ ಕಳೆದೆವು ಎಂಬ ಸಂತೃಪ್ತಿಯನ್ನಾದರು ಹೊಂದಬಹುದು.

                                                           - ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಸಂಶೋಧನಾರ್ಥಿ ಕನ್ನಡ ವಿ ವಿ ಹಂಪಿ.

IMG-20201019-WA0006.jpg     IMG-20201019-WA000ಹಗ.jpg

 

                  ಛಾಯಾ ಚಿತ್ರ : - ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಸಂಶೋಧನಾರ್ಥಿ ಕನ್ನಡ ವಿ ವಿ ಹಂಪಿ.

 

ಚಿತ್ರ ಕಲೆ

ಗಹಗಯ.jpg

                                         ಚಿತ್ರ ಕಲೆ :  ಶೌರ್ಯ ಹೆಗ್ಡೆ ೫ ನೇ ತರಗತಿ, ಬೆಳ್ಮಣ್‌ ಕಾರ್ಕಳ.

ದಹಗಗ.jpg

                                          ಚಿತ್ರ ಕಲೆ : ಆರುಷ್‌ ಹೆಗ್ಡೆ, ೯ ನೇ ತರಗತಿ, ಬೆಳ್ಮಣ್‌ ಕಾರ್ಕಳ.

ಗಹಗ.jpg

 

ಹಕ್ಹ್ಜ.jpg

                      ಚಿತ್ರ ಕಲೆ : ಶರಣ್ಯ ತಂತ್ರಿ. ೭ ನೇ ತರಗತಿ, ನಂದಳಿಕೆ.( ಮೇಲಿನ ಎರಡು ಚಿತ್ರಗಳು )

ಸಾಹಿತ್ಯ ಸಂಚಯ

ಶರಣರ ಸೂಳ್ನುಡಿ

 

" ಹಿಡಿವ ಕೈಯ ಮೇಲೆ ಕತ್ತಲೆ ಯಯ್ಯ

ನೋಡುವ ಕಂಗಳ ಮೇಲೆ ಕತ್ತಲೆಯಯ್ಯ

ನೆನೆವ ಮನದ ಮೇಲೆ ಕತ್ತಲೆ ಯಯ್ಯ

ಕತ್ತಲೆಯೆಂಬುದು ಇತ್ತಲೆಯಯ್ಯ

ಗುಹೇಶ್ವರನೆಂಬುದು ಅತ್ತಲೆಯಯ್ಯ."

 

 

" ದೇವಲೋಕದವರ ತೃಣವೆಂಬೆ

ಮರ್ತ್ಯಲೋಕದವರ ಕ್ಷಣವೆಂಬೆ

ಅಹಂಕಾರವೆಂಬ ಶೃಂಗಾರವ ಮಾಣೆ

ನಾನಲ್ಲದನ್ಯವನಲ್ಲೆಂಬೆ

ಗುಹೇಶ್ವರಲಿಂಗ ತಾನೆಯಾಗಿ."

 

 

" ಚರಾಚಾರವೆಂಬುದೊಂದು  ಕಿಂಚಿತ್

ಚತುರ್ಯುಗವೆಂಬುದೊಂದು ಕಿಂಚಿತ್

ಅಪ್ಪದೆಂಬುದೊಂದು ಕಿಂಚಿತ್

ಆಗದೆಂಬುದೊಂದು ಕಿಂಚಿತ್

ತಾನು ಶುದ್ಧವಾದ ಶರಣಂಗೆ

ಗುಹೇಶ್ವರನೆಂಬುದೊಂದು ಕಿಂಚಿತ್."

 

ಪ್ರಾಚೀನ ಕವಿ ಪರಿಚಯ

ಪೊನ್ನ

            ಪೊನ್ನ - ಸು. ೯೫೦. ಕನ್ನಡದ ಮೊಟ್ಟಮೊದಲ ಕವಿ ಚಕ್ರವರ್ತಿ. ರತ್ನತ್ರಯರಲ್ಲಿ ಎರಡನೆಯವನೆನಿಸಿಕೊಂಡ ಈತ ಕನ್ನಡ ಸಾಹಿತ್ಯೋತ್ಕರ್ಷಕ್ಕೆ ಕಾರಣರಾದ ಪ್ರಮುಖ ಕವಿಗಳಲ್ಲಿ ಒಬ್ಬ. ಹತ್ತನೆಯ ಶತಮಾನದ ಸಮೃದ್ಧ ಸಾಹಿತ್ಯ ಕೃಷಿಯಲ್ಲಿ ಪಾಲ್ಗೊಂಡ ಈತ ಜೈನ ಮತೀಯ. ಈತನಿಗೆ ಪೊನ್ನಿಗ, ಪೊನ್ನಮಯ್ಯ ಎಂಬ ಹೆಸರುಗಳೂ ಉಂಟು. ಸವಣ, "ಕುರುಳ್ಗಳ ಸವಣ "ಎಂದು ತನ್ನನ್ನು ಕರೆದುಕೊಂಡಿರುವುದರಿಂದ ಈತ ಜೈನವಿರಾಗಿಯಾಗಿರಬಹುದು. ಕವಿ ತನ್ನ ಕಾಲ, ದೇಶ ಮೊದಲಾದ ವೈಯಕ್ತಿಕ ವಿಚಾರಗಳನ್ನು ತನ್ನ ಕಾವ್ಯದಲ್ಲಿ ಪ್ರಸ್ತಾಪಿಸಿಲ್ಲ. ಬಾಹ್ಯಾಧಾರಗಳ ಮೇಲೆ ವಿಮರ್ಶಕರು ಕವಿಯ ಕಾಲವನ್ನು ಸು. 950 ಎಂದು ಪರಿಗಣಿಸಿದ್ದಾರೆ. ಇಂದ್ರನಂದಿಮುನಿ ತನ್ನ ವಿದ್ಯಾಗುರುವೆಂದೂ, ಜಿನಚಂದ್ರ ಮುನೀಂದ್ರ ಧಾರ್ಮಿಕ ಗುರುವೆಂದೂ ಶಾಂತಿಪುರಾಣದಲ್ಲಿ ಹೇಳಿಕೊಂಡಿದ್ದಾನೆ. ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿದ್ದು "ಉಭಯಕವಿ ಚಕ್ರವರ್ತಿ" ಎಂಬ ಬಿರುದನ್ನು ಪಡೆದಿದ್ದ.

            ಈತ ಕವಿ, ಗಮಕಿ, ವಾದಿ, ವಾಗ್ಮಿಯಾಗಿದ್ದನೆಂದೂ ಸರ್ವದೇವ ಕವೀಂದ್ರನೆಂಬ ಬಿರುದಿದ್ದುದಾಗಿಯೂ ತಿಳಿದುಬರುತ್ತದೆ. ಕವಿ ತನ್ನನ್ನು ಕುರುಳ್ಗಳ ಸವಣನೆಂದು ಸಂಭೋದಿಸಿಕೊಂಡಿರುವುದನ್ನು ಗಮನಿಸಿದರೆ ಕವಿಯ ನಿರ್ಲಿಪ್ತ ಮನೋಭಾವ ವ್ಯಕ್ತವಾಗುತ್ತದೆ. ಕೃಷ್ಣಚಕ್ರವರ್ತಿಯಿಂದ ಧನ, ಕನಕ, ಕೀರ್ತಿ, ಪ್ರತಿಷ್ಠೆಗಳನ್ನು ಗಳಿಸಿದ್ದರೂ ಲೌಕಿಕ ವ್ಯಾಮೋಹದಿಂದ ದೂರಾಗಿದ್ದ ಭವ್ಯ ವ್ಯಕ್ತಿತ್ವ ಈತನದಾಗಿರಬೇಕು. ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿ ಭುವನೈಕ ರಾಮಾಭ್ಯುದಯವನ್ನು ರಚಿಸಿದ ಈತ ಚಾಲುಕ್ಯ ಚಮೂಪತಿಗಳಾಗಿದ್ದ ಮಲ್ಲಪ್ಪಯ್ಯ ಪುನ್ನಮಯ್ಯರ ಆಶ್ರಯದಲ್ಲಿ ಶಾಂತಿಪುರಾಣವನ್ನು ಬರೆದಿದ್ದಾನೆ.

            ಶಾಂತಿಪುರಾಣ; ಭುವನೈಕ ರಾಮಾಭ್ಯುದಯ; ಜಿನಾಕ್ಷರ ಮಾಲೆ; ಗತಪ್ರತ್ಯಾಗತ; ಅಲಂಕಾರ; ಆದಿಪುರಾಣಮು; ವಿರಾಟಮು - ಇವು ಈತನ ಹೆಸರಿನಲ್ಲಿರುವ ಕೃತಿಗಳು. ಇವುಗಳಲ್ಲಿ ಶಾಂತಿಪುರಾಣ ಮತ್ತು ಜಿನಾಕ್ಷರ ಮಾಲೆಗಳೂ ಉಪಲಬ್ಧವಿದ್ದು ಉಳಿದವು ಕಾಲಗರ್ಭದಲ್ಲಿ ಅಡಗಿಹೋಗಿವೆ. ಭುವನೈಕರಾಮಾಭ್ಯುದಯವನ್ನು ಕುರಿತು ಕವಿ ತನ್ನ ಶಾಂತಿಪುರಾಣದಲ್ಲಿ ಪ್ರಸ್ತಾಪಿಸಿದ್ದಾನೆ. 14 ಭುವನಂಗಳಿಗೆ ಸರಿಸಮಾನವಾದಂಥ 14 ಆಶ್ವಾಸಗಳುಳ್ಳ ಭುವನೈಕ ರಾಮಾಭ್ಯುದಯದ ಕಥಾವಸ್ತು ರಾಮಕಥೆಯೆಂದು ಶಾಂತಿಪುರಾಣದಲ್ಲಿ ಹೇಳಲಾಗಿದೆ. ಕಾವ್ಯಾವಲೋಕನ, ಶಬ್ದಮಣಿದರ್ಪಣ, ಸೂಕ್ತಿಸುಧಾರ್ಣವ, ಕಾವ್ಯಸಾರಗಳಲ್ಲಿ ದೊರಕುವ ಕೆಲವು ಲಕ್ಷಪದ್ಯಗಳನ್ನು ಭುವನೈಕ ರಾಮಾಭ್ಯುದಯದಿಂದ ಆಯ್ದುವೆಂದು ಗುರುತಿಸಲಾಗಿದೆ.

            ಅವುಗಳ ಆಧಾರದ ಮೇಲೆ ಭುವನೈಕ ರಾಮಾಭ್ಯುದಯ ವೈದಿಕ ಸಂಪ್ರದಾಯದ ರಾಮಾಯಣವೆಂದು ಖಚಿತವಾಗುತ್ತದೆ. ಸಮಕಾಲೀನ ಸಂಪ್ರದಾಯದಂತೆ ಈ ಲೌಕಿಕ ಕೃತಿಯಲ್ಲಿ ಕಥಾನಾಯಕ ರಾಮನೊಡನೆ, ತನ್ನ ಆಶ್ರಯದಾತ ಕೃಷ್ಣನನ್ನು ತಗುಳ್ಚಿ (ಒಂದುಗೂಡಿಸಿ) ಹೇಳಿದ್ದಾನೆ. ಭುವನೈಕರಾಮ ಎಂಬ ಕೃಷ್ಣನ ಬಿರುದೇ ಕಾವ್ಯದ ಶಿರೋನಾಮೆಯಾಗಿದೆ. ತೆಕ್ಕೋಲ ಎಂಬ ಸ್ಥಳದಲ್ಲಿ ನಡೆದ ಯುದ್ಧದಲ್ಲಿ ಮೂವಡಿ ಚೋಳ ರಾಜಾದಿತ್ಯನ ಮೇಲೆ ರಾಷ್ಟ್ರಕೂಟ ಮುಮ್ಮಡಿ ಕೃಷ್ಣ ಸಾಧಿಸಿದ ವಿಜಯದ ಸ್ಮಾರಕವಾಗಿಯೇ ಈ ಕೃತಿ ಜನ್ಮ ತಳೆಯಿತು. ಭುವನೈಕ-ರಾಮಾಭ್ಯುದಯದವೆಂದು ಹೇಳಲಾದ ಲಕ್ಷ್ಯಪದ್ಯಗಳಲ್ಲಿ ಕವಿಯ ಪ್ರತಿಭೆಯ ಸೆಳಕುಗಳನ್ನು ಗುರುತಿಸಬಹುದಾದರೂ ನಿರ್ಣಾಯಕವಾಗಿ ಏನನ್ನೂ ಹೇಳಲಾಗುವುದಿಲ್ಲ. ಈತನ ಕಾವ್ಯಸಾಮಥ್ರ್ಯವನ್ನು ಅಳೆಯುವ ಮೂಲಮಾಪನವಾದ ಕೃತಿ ಕಣ್ಮರೆಯಾಗಿರುವುದರಿಂದ ಕವಿಯ ಸ್ಥಾನ ನಿರ್ದೇಶನದಲ್ಲಿ ತೊಡಕುಂಟಾಗಿದೆ.

            ಗತಪ್ರಗ್ಯಾಗತ ವೆಂಬ ಸಂಸ್ಕೃತ ಕೃತಿಯನ್ನು ರಚಿಸಿದುದಾಗಿಯೂ ಅದರಿಂದ ತನಗೆ ಉಭಯ ಕವಿ ಚಕ್ರವರ್ತಿ ಬಿರುದು ದೊರೆತುದಾಗಿಯೂ ಈತ ತನ್ನ ಶಾಂತಿಪುರಾಣದಲ್ಲಿ ಹೇಳಿಕೊಂಡಿದ್ದಾನೆ. ಸಂಸ್ಕøತ ಕಾವ್ಯ ರಚನೆಯಲ್ಲಿ ಕಾಳಿದಾಸನಿಗಿಂತ ನಾಲ್ಕು ಪಟ್ಟು ಹೆಚ್ಚು ಎಂದು ಹೇಳಿಕೊಂಡಿರುವುದನ್ನು ಗಮನಿಸಿದಾಗ ಈತನ ಪಾಂಡಿತ್ಯ ಉನ್ನತವಾದುದಿರಬೇಕೆನಿಸುತ್ತದೆ. ಈ ಕೃತಿಯ ವಿವರಗಳು ಎಲ್ಲೂ ದೊರೆತಿಲ್ಲ. ಗತಪ್ರತ್ಯಾಗತವೆಂಬ ಅಲಂಕಾರವನ್ನು ಕುರಿತು ಈ ಕೃತಿ ರಚಿತವಾಗಿದೆಯೋ ಇಲ್ಲವೇ ಯಾವುದೋ ಕಥಾವಸ್ತುವನ್ನು ಗತಪ್ರತ್ಯಾಗತ ಅಲಂಕಾರದಲ್ಲಿ ನಿರೂಪಿಸಿದ್ದಾನೆಯೋ ತಿಳಿಯದು. ಈತನದೆಂದು ಹೇಳುವ ಅಲಂಕಾರ ಕೃತಿಯೂ ಗತಪ್ರತ್ಯಾಗತವನ್ನೇ ಕುರಿತುದಾಗಿರಬಹುದು. ಎರಡೂ ಕೃತಿಗಳೂ ದೊರೆತಿಲ್ಲವಾದುದರಿಂದ ಏನನ್ನೂ ಹೇಳಲು ಸಾಧ್ಯವಿಲ್ಲ. ಆದಿಪುರಾಣಮು ಮತ್ತು ವಿರಾಟಮು ಎಂಬ ತೆಲುಗು ಕೃತಿಗಳನ್ನು ಸರ್ವದೇವನೆಂಬ ಕವಿ ರಚಿಸಿದನೆಂದು ತೆಲುಗು ಸಾಹಿತ್ಯ ಚರಿತ್ರಕಾರರು ಹೇಳುತ್ತಾರೆ; ಈ ಸರ್ವದೇವ ಮತ್ತು ಕನ್ನಡದ ಪೊನ್ನ ಅಭಿನ್ನೆಂದು ಅಭಿಪ್ರಾಯ-ಪಡುತ್ತಾರೆ. ಆದಿಪುರಾಣಮು ಮತ್ತು ವಿರಾಟಮು ಕೃತಿಗಳು ಕಣ್ಮರೆಯಾಗಿವೆ.

 

            ಲಕ್ಷಣಸಾರ ಎಂಬ ಛಂದೋಗ್ರಂಥ ಮತ್ತು ಪ್ರಬಂಧಮಣಿಭೂಷಣಮು ಎಂಬ ಸಂಕಲನ ಗ್ರಂಥಗಳಲ್ಲಿ ಸರ್ವದೇವನ ಕೃತಿಗಳಿಂದ ಆಯ್ದ ಕೆಲವು ಲಕ್ಷ್ಯಪದ್ಯಗಳು ದೊರೆಯುತ್ತವೆ. ಕನ್ನಡದ ಪೊನ್ನನೇ ತೆಲುಗಿನಲ್ಲಿ ಸರ್ವದೇವನೆಂಬ ಹೆಸರಿನಿಂದ ಕೃತಿರಚನೆ ಮಾಡಿರುವುದಾಗಿ ತೆಲುಗು ಸಾಹಿತ್ಯ ವಿದ್ವಾಂಸ ಎನ್. ವೆಂಕಟರಾವ್ ಅಭಿಪ್ರಾಯಪಡುತ್ತಾರೆ. ಕನ್ನಡದಲ್ಲಿಯಂತೆ ತೆಲುಗಿನಲ್ಲಿಯೂ ಆದಿಪುರಾಣಮು ಎಂಬ ಧಾರ್ಮಿಕ ಕಾವ್ಯವನ್ನೂ ವಿರಾಟಮು ಎಂಬ ಲೌಕಿಕ ಖಂಡಕಾವ್ಯವನ್ನೂ ಬರೆದು ಮಾರ್ಗದ್ವಯದಲ್ಲಿ ಮುನ್ನಡೆದಂತೆ ತೋರುತ್ತದೆ. ಮಲ್ಲಪಯ್ಯ ಪುನ್ನಮಯ್ಯರ ಆಶ್ರಯ ಪಡೆದು ಪುಂಗನೂರಿನಲ್ಲಿ ನೆಲಸಿದ ಈ ಕವಿ ತೆಲುಗು ಸಾಹಿತ್ಯವನ್ನು ಅಭ್ಯಸಿಸಿ ಕೃತಿರಚನೆ ಮಾಡಿರುವ ಸಾಧ್ಯತೆ ಉಂಟು. ಸಬಲ ಆಧಾರಗಳಿಲ್ಲದುದರಿಂದ ಪೊನ್ನನ ತೆಲುಗು ಸಾಹಿತ್ಯ ಸೇವೆ ಪ್ರಶ್ನೆಯಾಗಿಯೇ ಉಳಿದಿದೆ.

            ಜಿನಾಕ್ಷರ ಮಾಲೆ ಪೊನ್ನನ ಉಪಲಬ್ಧ ಕೃತಿಗಳಲ್ಲೊಂದಾಗಿದೆ. 39 ಕಂದಪದ್ಯಗಳ ಈ ಪುಟ್ಟ ಕೃತಿಯಲ್ಲಿ ಕವಿಯ ಚಮತ್ಕಾರಕ್ಕೆ ಸ್ಥಾನ ದೊರೆತಿದೆಯೇ ವಿನಾ ಪ್ರತಿಭೆಗಲ್ಲ. ಸ್ತೋತ್ರರೂಪದ ಈ ಕೃತಿಯಲ್ಲಿ 25 ವರ್ಗೀಯ ವ್ಯಂಜನಗಳು ಹಾಗೂ 12 ಆವರ್ಗೀಯ ವ್ಯಂಜನಗಳನ್ನು ಅಂತಾದಿಕ್ರಮದಲ್ಲಿ ಹೊಂದಿಸಲಾಗಿದೆ. ಕುರುಳ್ಗಳ ಸವಣ ಎಂಬ ನಾಮಾಂಕಿತದಲ್ಲಿಯೇ ಹೆಣೆಯಲಾದ ಈ ಕೃತಿಗಳಲ್ಲಿ ಕವಿಯ ಹೆಸರು ಎಲ್ಲಿಯೂ ಇಲ್ಲ.

            ಈ ಕವಿಯ ಮತ್ತೊಂದು ಉಪಲಬ್ಧ ಕೃತಿ ಶಾಂತಿಪುರಾಣ. ಹದಿನಾರನೆಯ ತೀರ್ಥಂಕರನೂ, ಐದನೆಯ ಚಕ್ರವರ್ತಿಯೂ ಆದ ಶಾಂತಿನಾಥನನ್ನು ಕುರಿತು ಕನ್ನಡದಲ್ಲಿ ರೂಪಿತವಾದ ಮೊದಲ ಕೃತಿ. ಈ ಕೃತಿಗೆ, ಆಕರ ಅಸಗ ಕವಿಯ ಸಂಸ್ಕøತ ಶಾಂತಿಪುರಾಣ. ಕನ್ನಡಗವಿತೆಯೊಳಗೆ ಅಸಗಂನ್ನೂರ್ಮಡಿ ರೇಖೆಗಗ್ಗಳಂ ಎಂದು ಆಸಗನನ್ನು ಕೀಳು ಮಾಡಿದರೂ ಆತನ ಶಾಂತಿಪುರಾಣವನ್ನೇ ಆಕರವಾಗಿಸಿಕೊಂಡ ಪೊನ್ನನ ರೀತಿ ವಿಚಿತ್ರ. 12 ಆಶ್ವಾಸಗಳುಳ್ಳ ಈ ಚಂಪೂ ಕೃತಿಯಲ್ಲಿ ಎಂಟು ಆಶ್ವಾಸಗಳು ಪೂರ್ವ ಭವ ಕಥನಕ್ಕೇ ಮೀಸಲಾಗಿದೆ. ಶ್ರೀಷೇಣ, ಭೋಗಭೂಮಿಜ, ಶ್ರೀದೇವ, ಅಮಿತತೇಜ, ಮಣಿಚೂಳ, ಅಪರಾಜಿತ, ಅಚ್ಯುತೇಂದ್ರ, ವಜ್ರಾಯುಧ, ಅಹಮಿಂದ್ರ, ಮೇಘರಥ, ಮಹೇಂದ್ರ-ಈ ಹನ್ನೊಂದು ಭವಗಳಲ್ಲಿ ತೊಳಲಿ ಬಂದ ಜೀವ ಶಾಂತಿನಾಥನಾಗಿ ಜಿನತ್ವವನ್ನು ಪಡೆಯುತ್ತದೆ.

 

            ಭವಾವಳಿ ಕಥನದಲ್ಲಿ ಕ್ರಮವಿಲ್ಲದೆ ಓದುಗನಿಗೆ ಭ್ರಮೆ ಹಿಡಿಸುತ್ತದೆ. ಕಥನಕ್ರಮದಲ್ಲಿ ಅಸಗನನ್ನೇ ಅನುಸರಿಸಿರುವ ಕವಿ ವರ್ಣನೆಗಳಲ್ಲಿ ಸ್ವಂತಿಕೆಯನ್ನು ಮೆರೆದಿದ್ದಾನೆ. ಪಾತ್ರಗಳಿಗೆ ಮಾನವೀಯತೆಯ ಮೆರುಗನ್ನಿತ್ತು ಸಜೀವವಾಗಿಸಿದ್ದಾನೆ. ಸನ್ನಿವೇಶಗಳಿಗೆ ನಾಟಕೀಯ ಹಿನ್ನೆಲೆಯನ್ನೊದಗಿಸಿದ್ದಾನೆ. ಜೈನಧರ್ಮ ಪ್ರಕ್ರಿಯೆಗಳ ಕ್ಲಿಷ್ಟತೆಯನ್ನು ಸರಳಗೊಳಿಸಿದ್ದಾನೆ. ದೇಸೀ ನುಡಿಗಟ್ಟುಗಳನ್ನು ಹೊಂದಿಸಿ ಕಳೆಕಟ್ಟಿದ್ದಾನೆ. ಜಿನ ಜನ್ಮಾಭಿಷೇಕದ ಭಾಗವನ್ನು ಪಂಪನಿಂದ ಸ್ವೀಕರಿಸಿದ್ದಾನೆ. ಜ್ಯೋತಿಃ ಪ್ರಭಾ ಸ್ವಯಂವರ ಸಂದರ್ಭವನ್ನು ಕಾಳಿದಾಸನ ರಘುವಂಶದಿಂದ ಭಾಷಾಂತರಿಸಿದ್ದಾನೆ. ಶಾಂತಿನಾಥನ ದಿಗ್ವಿಜಯ ವರ್ಣನೆಯಲ್ಲಿ ರಘುವಂಶದ ರಘು ಮಹಾರಾಜನ ದಿಗ್ವಿಜಯ ವರ್ಣನೆಯನ್ನು ಬಿಂಬಿಸಿದ್ದಾನೆ. ಸುಂದರ ವರ್ಣನೆಗಳಿಂದ ಕೂಡಿದ ಶಾಂತಿನಾಥ ಪುರಾಣ ಕೇವಲ ಧಾರ್ಮಿಕ ಪುರಾಣವಾಗಿರದೆ ಕಾವ್ಯವೂ ಆಗಿದೆ. ಧಾರ್ಮಿಕ ವಿಷಯಗಳ ನಿರೂಪಣೆಯಲ್ಲಿ ಸರಳತೆಯನ್ನಳವಡಿಸಿಕೊಂಡ ಶಾಂತಿಪುರಾಣ ಸಾಮಾನ್ಯನ ಕೈಗೆ ನಿಲುಕುವಂತಿದೆ.

            ಈತನ ಕೃತಿ ಸಮಸ್ತವೂ ದೊರೆಯುವಂತಿದ್ದರೆ ಕವಿಯ ಸ್ಥಾನವನ್ನು ನಿರ್ಧರಿಸಬಹುದಿತ್ತು. ಈಗ ದೊರೆತಿರುವ ಕೃತಿ ಧಾರ್ಮಿಕ ಕಾವ್ಯವಾಗಿದ್ದು ಕವಿಯ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದೆ. ಪರಂಪರೆಯ ಪೌಳಿಯನ್ನು ದಾಟಲಾರದೆ ಕವಿ ಅಸಹಾಯಕನಾಗುತ್ತಾನೆ. ಲೌಕಿಕ ಕೃತಿರಚನೆಯಲ್ಲಿ ಕವಿ ಸರ್ವತಂತ್ರ ಸ್ವತಂತ್ರ. ಇಂಥ ಲೌಕಿಕ ಕೃತಿ ಭುವನೈಕರಾಮಾಭ್ಯುದಯ ಕಣ್ಮರೆಯಾಗಿರುವುದರಿಂದ ಈ ಕವಿ ಸಾಧಾರಣ ಕವಿಯಾಗಿ ಪರಿಗಣಿತನಾಗಿದ್ದಾನೆ. ಉಪಲಬ್ಧ ಶಾಂತಿಪುರಾಣ ಧಾರ್ಮಿಕ ಕೃತಿಯಾದುದರಿಂದ ಸಹೃದಯರ ವಿಮರ್ಶಕರ ಗಮನ ಅದರತ್ತ ಹರಿಯಲಿಲ್ಲ.

                     

                                                                        (ಮಾಹಿತಿ ಮೂಲ - ಅಂತ್ರಜಾಲ ; ಸಂಗ್ರಹ – ಸುಮಿತ್ರ ಎನ್‌ ಕೋಲಾರ.)

 

 

                                                                     ಕವಿ ವಾಣಿ


ನಿಮ್ಮೊಡನಿದೂ ನಿಮ್ಮಂತಾಗದೆ


ನಿಮ್ಮೊಡನ್ದಿದೂ ನಿಮ್ಮಂತಾಗದೆ                                          ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲೆ ಬೇರೊತ್ತಿದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.|೧|

 

 

ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ
ಕುಣಿಕೆ ಎಸೆದ್ದಿದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.|೨|

 

 

ಒಳಗೊಳಗೇ ಬೇರು ಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತ್ಲಿಲದಂತೆ ನಟಿಸಿ
ಚಕಾರವೆತ್ತದ ನಿಮ್ಮೊಡನೆ ಕಾಫಿ ಹೀರಿ ಪೇಪರೋದಿ ಹರಟಿ
ಬಾಳ ತಳ್ಳುವುದಿದೆ ನೋಡಿ                                                                                                                                                           ಅದು ಬಲು ಕಷ್ಟದ ಕೆಲಸ.|೩|

 

 

 

ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು
ಸಂಶಯ ಪಂಜವೆತ್ತಿ
ನನ್ನ ನಂಬಿಕೆ ನೀಯತ್ತು ಹಕ್ಕು
ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ
ನೋವಿಗೆ ಕಣ್ಣು ತುಂಬ್ದಿದರೂ,
ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನ
ಹುಸಿನಗುತ್ತ ಎದುರಿಸುವುದಿದೆಯಲ್ಲ
ಅದು ಬಲು ಕಷ್ಟದ ಕೆಲಸ|೪|.

 

|154326.jpg

- ಕೆ ಎಸ್‌ ನಿಸ್ಸಾರ್‌ ಅಹಮದ್‌


 

ಯಾರಿಗೆ ಬಂತು ಎಲ್ಲಿಗೆ ಬಂತು..


 

ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು

 

 

ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಬಡವನ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ

 

 

ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಣವಂತರು ಕೈಸನ್ನೆ ಮಾಡಿದರೆ
ಕತ್ತಲೆಯಲ್ಲಿ ಬೆತ್ತಲೆಯಾಯಿತು
ಯಾರೂ ಕಾಣದ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

 

 

ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು
ಯಾರಿಗೆ ಬಂತು ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

 

 

 

 

 

ಪೋಲೀಸರ ಬೂಟಿಗೆ ಬಂತು
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ

 

 

ಪಾರ್ಲಿಮೆಂಟಿನ ಕುರ್ಚಿಯ ಮೇಲೆ
ವರ್ಷಗಟ್ಟಲೆ ಚರ್ಚೆಗೆ ಕೂತು
ಬಡವರ ಬೆವರು ರಕ್ತವ ಕುಡಿದು
ಏಳಲೇಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

 

ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?

230682-1580789460.gif

                                               - ಡಾ. ಸಿದ್ಧಲಿಂಗಯ್ಯ


ರಸಪ್ರಶ್ನೆಗಳು



೧.ಶಾಸನಗಳನ್ನು ಕನ್ನಡ ಸಾಹಿತ್ಯದ ತಲಕಾವೇರಿ ಎಂದವರು ಯಾರು  ?

೨.ಕನ್ನಡ ನಾಡು-ನುಡಿ ಜನರ ಬಗೆಗಿನ ಉಲ್ಲೇಖವಿರುವ ಪ್ರಾಚೀನ ಸಂಸ್ಕೃತ ನಾಟಕ ?

೩.ಪೂರ್ವದ ಹಳಗನ್ನಡಕ್ಕೆ  ಸೇರಿದ ಕನ್ನಡದ ಪ್ರಥಮ ಉಪಲಬ್ಧ ಶಾಸನ ?

೪.ವಡ್ಡಾರಾದನೆಯಲ್ಲಿ ಎಷ್ಟು ಕಥೆಗಳಿವೆ ?

೫.ಕನ್ನಡದ ಮೊದಲ ಗದ್ಯ ಗ್ರಂಥ ?

    ಮೇಲಿನ ಪ್ರಶ್ನೆಗಳಿಗೆ ಸರಿ ಉತ್ತರಗಳನ್ನು  ಮೊದಲು ಕಳುಹಿಸಿದ ಐದು ಜನರ ಹೆಸರುಗಳೊಂದಿಗೆ ಸರಿಯಾದ ಉತ್ತರಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. (ಸರಿ ಉತ್ತರಗಳನ್ನು ೮೨೧೭೭೪೪೮೮೬ ಸಂಖ್ಯೆಗೆ ವಾಟ್ಸಪ್‌ ಮಾಡಬೇಕು )  

 ಸಂಚಿಕೆ ೦೧ ರ ರಸಪ್ರಶ್ನೆಗಳು :

೧) ಪಂಪನ ತಂದೆಯ ಹೆಸರೇನು ?

೨) ಬೋಮ್ಮಲಗುಡ್ಡ ಶಾಸನದ ಲಿಪಿಕಾರ ಯಾರು ?

೩) ಪಿ ಲಂಕೇಶರ ಆತ್ಮ ಕಥನದ ಹೆಸರು ?

೪) ವಿಕ್ರಮಾರ್ಜುನ ವಿಜಯ ಕೃತಿಯ ಕಥಾನಾಯಕ ಯಾರು ?

೫) ಬಸವಣ್ಣನವರು ತಮ್ಮ ವಚನದಲ್ಲಿ ಅಂಬುಜಕ್ಕೆ ಯಾವುದರ ಚಿಂತೆ ಎಂದು ಹೇಳಿದ್ದಾರೆ? 

ಸಂಚಿಕೆ ೦೧ ರ ಸರಿ ಉತ್ತರಗಳು :

 ೧. ಭೀಮಪಯ್ಯ     ೨. ಎರೆಯಮ್ಮ    ೩. ಹುಳಿಮಾವಿನ ಮರ    ೪. ಅರ್ಜುನ       ೫. ಭಾನುವಿನ ಉದಯದ ಚಿಂತೆ.   

ಸಂಚಿಕೆ ೦೧ ರ ರಸ ಪ್ರಶ್ನೆಗಳಿಗೆ ಸರಿ ಉತ್ತರಗಳನ್ನು ಕಳುಹಿಸಿದವರು  : ಪವಿ ವಿ, ದೇವರಾಜ್‌ ಹೆಚ್ ಎಂ, ಸುಷ್ಮ ವಿ, ಸುಧಾಮ ಎಸ್‌, ರಾಗಿಣಿ.

ಸರಿ ಉತ್ತರಗಳನ್ನು ಕಳುಹಿಸಿದವರಿಗೆ  ಅಭಿನಂದನೆಗಳು

                                                                                         ರಸಪ್ರಶ್ನೆ ನಿರ್ವಹಣೆ : ಸುಮಿತ್ರ ಎನ್‌ ಕೋಲಾರ

ಪ್ರಕಟಣೆ : ವಾಟ್ಸಪ್ ಸಾಹಿತ್ಯ ಪತ್ರಿಕೆಯ ಮುಖಪುಟಕ್ಕಾಗಿ ತಾವೇ ಸೆರೆ ಹಿಡಿದ ಪ್ರಕೃತಿಯ , ಪ್ರಾಣಿ ಪಕ್ಷಿಗಳ, ಹಾಗೂ ಇತರೆ ಸುಂದರವಾದ, ಭಾವನಾತ್ಮಕವಾದ ಛಾಯಾಚಿತ್ರಗಳನ್ನು ಅಥವಾ ತಾವೇ ರಚಿಸಿರುವ ಚಿತ್ರಗಳನ್ನು ನಮಗೆ ಕಳುಹಿಸಬಹುದು...ಸೂಕ್ತವಾದ ಚಿತ್ರವನ್ನು ಸೂಕ್ತ ಸಮಯದಲ್ಲಿ ನಿಮ್ಮ ಹೆಸರಿನೊಂದಿಗೆ ಪತ್ರಿಕೆಯಲ್ಲ ಪ್ರಕಟಿಸಲಾಗುವುದು...       

ಪತ್ರಿಕೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಲಹೆ ಸೂಚನೆಗಳನ್ನು,ವಿಷಯ ವಿಮರ್ಶೆಯನ್ನು  ಮುಕ್ತವಾಗಿ ನಮಗೆ ಬರೆಯಬಹುದು. ಅದನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ.                                                                                                                 

ಪ್ರಕಟಣೆ : ನಮ್ಮ ಪತ್ರಿಕೆಗೆ  ಸಾಹಿತ್ಯ ಸೇವೆಗೆ ಮುಂದಾಗುವ ಸಂಪಾದಕರು ಬೇಕಾಗಿದ್ದಾರೆ.    ಆಸಕ್ತರು ಸಂಪಾದಕರನ್ನು ಸಂಪರ್ಕಿಸಿ.     

ಪ್ರಕಟಣೆ

ವಿಚಾರ ಮಂಟಪ ಸಾಹಿತ್ಯ ಬಳಗವು  ವೆಬಿನಾರ್‌ ಕಾರ್ಯಕ್ರಮಕ್ಕೆ ನಿಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತಿದೆ.

ವಿಷಯ : “ಕೆ ಬಿ ಸಿದ್ಧಯ್ಯನವರ ಕಾವ್ಯ ಮತ್ತು ಬದುಕು.”

ಮಾತನಾಡುವವರು : ಡಾ. ವಡ್ಡಗೆರೆ ನಾಗರಾಜಯ್ಯ , ಚಿಂತಕರು

ದಿನಾಂಕ : ೨೫/೧೦/೨೦೨೦ ಶುಕ್ರವಾರ. ಬೆಳ್ಳಿಗೆ ೧೧:೦೦ ಘಂಟೆಗೆ.

ಜೂಂ ಮೀಟಿಂಗ್‌ ನಲ್ಲಿ ( ಹೆಚ್ಚಿನ ವಿವರಗಳಿಗೆ ಸಂಪಾದಕರನ್ನು ಸಂಪರ್ಕಿಸಿ )

                                                                     ಸರ್ವರಿಗೂ ಸುಸ್ವಾಗತ   

ವಿಚಾರ ಮಂಟಪ ಸಾಹಿತ್ಯ ಬಳಗವೂ ಸರಣಿ ಆನ್ಲೈನ್‌ ವೆಬಿನಾರ್ಗಳನ್ನು ನಡೆಸುತ್ತಿದ್ದು, ಅದರ ಭಾಗವಾಗಿ ನಡೆಯಲಿರುವ “ಕೆ ಬಿ ಸಿದ್ಧಯ್ಯನವರ ಕಾವ್ಯ ಮತ್ತು ಬದುಕು.”ಎಂಬ ವಿಷಯದ ಮೇಲಿನ ವಿಶೇಷ ವಿಬಿನಾರ್ಗೆ ಓದುಗರನ್ನು ನಮ್ಮ ಬಳಗದ ಪರವಾಗಿ ಪ್ರೀತಿಯಿಂದ ಆಮಂತ್ರಿಸುತ್ತಿದ್ದೇವೆ.

ವಿಚಾರ ಮಂಡಪ ವೆಬಿನಾರ್‌ ವರದಿ

            ವಿಚಾರ ಮಂಟಪ ಸಾಹಿತ್ಯ ಬಳಗವು ದಿನಾಂಕ ೧೯\೧೦\೨೦೨೦ ರಂದು “ಸಾಂಸ್ಕೃತಿಕ ಅಧ್ಯಯನ” ದ ಪರಿಚಯಾತ್ಮಕ ಉಪನ್ಯಾಸ ದ ವೆಬಿನಾರ್‌ ಕಾರ್ಯಕ್ರಮವನ್ನು ಆಯೋಜಿಸಿತ್ತು , ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಡೋಮಿನಿಕ್‌ ಡಿ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಚಾರ ಮಂಡನೆ ಮಾಡಿದರು. ವೆಬಿನಾರ್‌ ಕಾರ್ಯಕ್ರಮದ ಮುಖ್ಯಾಂಶಗಳು ಈ ಮುಂದಿನಂತಿವೆ.

“ ನೋವಾ ಹರಾರೇ ಯವರು ಹೇಳುವ ಒಂದು ಪ್ರಸಂಗದಿಂದ ಈ ಚರ್ಚೆಯನ್ನು ಪ್ರಾರಂಭಿಸಬಹುದು, ಒಂದು ಚಿಂಪಾಂಜಿ ಯ ಮುಂದೆ ಒಂದು ಕೈಯಲ್ಲಿ ಬಾಳೆ ಹಣ್ಣು ಹಾಗೂ ಮತ್ತೊಂದು ಕೈಯಲ್ಲಿ ಎರಡು ಸಾವಿರದ ನೋಟೊಂದನು ಹಿಡಿದುಕೊಂಡರೇ, ಚಿಂಪಾಂಜಿಯು ಮೊದಲು ಬಾಳೆ ಹಣ್ಣನ್ನು ತೆಗೆದುಕೊಳ್ಳುತ್ತೆ. ಆದರೇ ಮಾನವರು ಮೊದಲು ಎರಡು ಸಾವಿರದ ನೊಟನ್ನು ತೆಗೆದುಕೊಳ್ತಾರೆ.   ಈ ಪ್ರಸಂಗದಿಂದಾ ನಮಗೆ ತಿಳಿಯುವುದು , ಚಿಂಪಾಂಜಿಗೆ ತನ್ನ ತಕ್ಷಣದ ಅಗತ್ಯತೆ ಏನು ಎಂಬುದು ತಿಳಿದಿದೆ. ಆದರೆ ನಾವು ಸಂಸ್ಕೃತಿ ಚಿಂತನೆಯಲ್ಲಿ ಇಷ್ಟೆಲ್ಲಾ ಮುಂದುವರೆದಿದ್ದರು ಸಹಾ ನಮಗೆ ನಮ್ಮ ತಕ್ಷಣದ ಅಗತ್ಯತೆಗಳು ಏನು ಎಂಬುದೇ ತಿಳಿದಿಲ್ಲವಲ್ಲ.

ಈ ಸಂಧರ್ಭದಲ್ಲಿ ಜನರು  ಕೋವಿಡ್‌ -೧೯, ಆರ್ಥಿಕತೆಗೆ ಪೆಟ್ಟು, ಪ್ರಕೃತಿಯ ಪುನಶ್ಚೇತನ, ಅತಿವೃಷ್ಠಿ, ಅನಾವೃಷ್ಠಿ, ಮುಂತಾದವುಗಳಿಂದ ಜರ್ಜರಿತರಾಗಿದ್ದಾರೆ, ಅದರ ಜೊತೆಗೆ ನಾವು ಈ ಆನ್ಲೈನ್‌ ಶಿಕ್ಷಣದ ಮೂಲಕ ಕಣ್ಗಾವಲಿಗೆ ಒಳಗಾಗುತ್ತಿದ್ದೇವೆ. ʼʼಡಾಟಾ ಕಾಲೋನೈಜೇಷನ್‌ “ ಮಾಹಿತಿ ವಸಾಹತೀಕರಣ ಇಂದು ಹೆಚ್ಚಾಗುತ್ತಿದೆ.  ಇಂದು ʼವೆಪೆನ್‌ ಇಂಡಸ್ಟ್ರೀʼ ಆಯುಧಗಳ ಕಾರ್ಖಾನೆಗಳು ಹೆಚ್ಚಾಗುತ್ತಿವೆ. ಜನರು ಹಸಿವಿನಿಂದ ಸಾಯುತ್ತಿದ್ದರೂ ಸಹಾ ,ಅದನ್ನು ಗಮನಿಸದೇ ಬಂಡವಾಳಶಾಹಿಯ ಮತ್ತೊಂದು ರೂಪವಾಗಿ ಇಂದು ವೆಪೆನ್‌ ಇಂಡಸ್ತ್ರೀ ಬೆಳೆಯುತ್ತಿದೆ. ಇಂತಹಾ ಸಂಧರ್ಭದಲ್ಲಿ ನಮ್ಮ ದೇಶ ನಮ್ಮ ಊರು ನಮ್ಮ ಆಸ್ತಿ ಇವನ್ನು ಹೇಗೆ ನಮ್ಮ ಆಪ್ತವಲಯ ಕಟ್ಟಿಕೊಡುತ್ತದೆ ಎಂಬುದನ್ನು ನಾವು ಗಮನಿಸಬೇಕಾಗಿದೆ.

ಇಂತಹಾ ಸಂಧರ್ಭದ ವರ್ತಮಾನ ವಿದ್ಯಮಾನಗಳಲ್ಲಿ ನಾವು ʼಕಲ್ಚರ್‌ʼ ಅನ್ನು ಹೇಗೆ ವಿವರಿಸಿಕೊಳ್ಳುತ್ತೇವೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ.  ೧೯೧೫ ರಲ್ಲಿ ಉತ್ತಂಗಿ ಚೆನ್ನಬಸಪ್ಪ ʼಸಂಸ್ಕೃತಿʼ ಎಂಬ ಪದವನ್ನು ಮೊದಲ ಭಾರಿ ಬಳಸಿದರು, ಅದು ಸಂಸ್ಕೃತದ ಪದ. ಇದಕ್ಕೆ ಸಂಯಕ್‌ ಕೃತಿ, ಎಲ್ಲರಿಗೂ ಒಳಿತಾಗುವ ಎಂಬ ಅರ್ಥವನ್ನು ಹೇಳಿರುವರು. ಆದರೆ ನಿಜವಾಗಿ ಅದು ಎಲ್ಲರಿಗೂ ಒಳಿತನ್ನು ಉಂಟು ಮಾಡುವುದೇ ಎಂದು ನಾವು ಪ್ರಶ್ನೆ ಮಾಡಿಕೊಳ್ಳ ಬೇಕಾಗಿದೆ. ಇಂದು ನಾವು ಹಲವು ತಾರತಮ್ಯಗಳ ನಡುವೆ ಬದುಕುತ್ತಿದ್ದೇವೆ. ನಾಳಿನ ಜರೂರಿನ ಬದುಕಿಗೆ ನಾವು ಕಾಯುತ್ತಾ ಇದ್ದೇವೆ.

ನಾವು ನಮ್ಮ ಬದುಕಿನ ದಿಕ್ಸೂಚಿಯಾಗಿ ʼಕಲ್ಚರ್‌ʼ ಅನ್ನು ನೊಡಬೇಕಾಗಿದೆ. ಭೂತವೇ ವರ್ತಮಾನದ ಪ್ರತಿಬಿಂಬ, ಕಲ್ಷರ್ನ ಕುರಿತಾದ ಹಳೆಯ ವ್ಯಾಖ್ಯಾನಗಳು ನಮ್ಮನ್ನು ಕಟ್ಟಿಹಾಕುತ್ತವೆ.  ವಸಾಹತ್ತು ಸಾಹಿ ಸಂಧರ್ಭದಲ್ಲಿ ಕನ್ನಡ ನುಡಿಯನ್ನು ಅನ್ಯೀಕರಿಸಲಾಗುತ್ತದೆ. ಶಿಕ್ಷಣ ಪಡೆದ ಮೊದಲ ತಲೆಮಾರಿನ ಗಂಡಸರು ಹೊಸ ಹೊಸ ವ್ಯಾಖ್ಯಾನ ಗಳನ್ನು ಕಲ್ಷರ್‌ ಗೆ ಕೊಡುತ್ತಾರೆ.  ʼಮಾನಸಿಕ ಸಂಸ್ಕಾರʼ ಎಂಬ ಪರಿಭಾಷೆಯನ್ನು ತರುತ್ತಾರೆ. ಡಿ ವಿ ಜಿ ರವರು ಸಂಸ್ಕೃತಿ ಯೆಂಬ ಪುಸ್ತಕವನ್ನು ಬರೆಯುತ್ತಾರೆ. ಈ ಪುಸ್ತಕ ಪ್ರತಿಭಟನೆ, ಬಂಡಾಯಗಳನ್ನು ವಿರೋಧಿಸುತ್ತೆ. ವಿಧೇಯತೆಯನ್ನು ಭೋಧಿಸುತ್ತೆ. ಹೀಗೆ ಭಾರತೀಯ ಸಂಸ್ಕೃತಿ, ಮಹಿಳಾ ಸಂಸ್ಕೃತಿ, ಕನ್ನಡ ಸಂಸ್ಕೃತಿ , ಮುಂತಾದ ಪದಗಳು ಬಳಕೆಗೆ ಬರ್ತಾವೆ.  

ಸಂಸ್ಕೃತಿ ಅಧ್ಯಯನಕ್ಕೆ ಸಂಭಂದಿಸಿ ರೆಮೆಂಡ್‌ ವಿಲಿಯಂಸ್‌ ರವರು ಮಾಡಿರುವ   ʼಸಂಸ್ಕೃತಿಯʼ ಅಕಾಡೆಮಿಕ್‌ ವ್ಯಾಖ್ಯಾನವನ್ನು ಮತ್ತು ವರ್ಗೀಕರಣವನ್ನು  ನೋಡುವುದಾದರೇ, ಇದು ಮೂರು ಹಂತಗಳನ್ನು ಒಳಗೊಂಡಿದೆ. ಮೊದಲನೆಯದಾಗಿ, ಸಂಸ್ಕೃತಿ ಒಂದು ಮೌಲ್ಯ ವ್ಯವಸ್ಥೆ, ನಮಗೆ ಬೇಕಾದ ರೀತಿಯ ಮಾದರಿಗಳಾಗಿ ಅವನ್ನು ಕಟ್ಟುವುದು ಸಂಸ್ಕೃತಿ, ಉಳ್ಳವರು ಉಳ್ಳವರಿಗಾಗಿ ಮಾಡಿದ ಮೌಲ್ಯ ವ್ಯವಸ್ಥೆ ಇದಾಗಿದೆ.

ಎರಡನೆಯದಾಗಿ, ಅಕಾಡೆಮಿಕ್‌ ಸಂಸ್ಕೃತಿಯನ್ನು ನೊಡುವುದಾದರೇ, ಸಂಶೋಧನೆಗೆ ಸಂಭಂಧಿಸಿ ʼಆದಿವಾಸಿ ಸಮುದಾಯ ನಿಷ್ಠ ಅಧ್ಯಾಯನಗಳು ನಡೆಯುತ್ತಿರುತ್ತವೆ, ಆದರೆ ಈ ಸಂಶೋಧನೆಗಳು ಆದಿವಾಸಿ ಸಮುದಾಯಗಳ ದನಿಯನ್ನು ನಿರಾಕರಿಸಿ, ತಮ್ಮದೇ ನಿರೂಪಣಾ ಕ್ರಮವನ್ನು ಕಟ್ಟಿಕೊಡುವುದರಿಂದ , ಇಂತಹಾ ಸಂಸ್ಕೃತಿ ಚಿಂತನೆಯ ವ್ಯವಸ್ಥೆ ಸಮಾಜದ ಯಥಾ ಸ್ಥಿತಿಯನ್ನೇ ಮುಂದುವರೆಸುತ್ತೆ.  ಮೂರನೆಯದಾಗಿ, ʼಕಲೆಕ್ಟೀವ್‌ ಕಾನ್ಸಿಯಸ್‌ ನೆಸ್‌ ʼಎಂದರೇ ಸಮುದಾಯಿಕ ಸಮಷ್ಠಿ ಪ್ರಜ್ಞೆ,  ಅಥವಾ ಸಾಮಾಜಿಕ ಜಾಗೃತಿ ನಾವು ಈ ಮೂರನೇ ಹಂತದಲ್ಲಿ ನಮ್ಮ ಮಾತು, ಕ್ರಿಯೆ ಎಲ್ಲವುಗಳ ಬಗ್ಗೆ ಜಾಗರೂಕರಾಗಿರಬೇಕು. ಆದರೆ ಇದಕ್ಕೆ ಎಲ್ಲರೂ ತಯಾರಿಲ್ಲ,

ಸಂಸ್ಕೃತಿ ಯೆಂಬುದು ಸರಳವಾದ ಪದವಲ್ಲ, ಅದೊಂದು ದೊಡ್ಡ ಪರಿಭಾಷೆ, ಇದು ನಮ್ಮ ಭವಿಷ್ಯದ ದಿಕ್ಸೂಚಿಯಾಗ ಬಲ್ಲುದು.

ಸಾಂಸ್ಕೃತಿಕ ಚೌಕಟ್ಟಿನ ನಿರೂಪಣಾ ಕ್ರಮ ಹೇಗಿದೆ ಎಂಬುದನ್ನು ಗಮನಿಸಿದರೆ,  ಯಾವುದೇ ಒಂದು ಪದ ಹಾಗೇ ಗಾಳಿಯಲ್ಲಿ ತೇಲಿ ಬರುವುದಿಲ್ಲ , ನಾವು ಸ್ಥಾಪಿತ ಸತ್ಯದ ಚಾರಿತ್ರಿಕ ನಿರೂಪಣಾ ಕ್ರಮಗಳನ್ನು ಗಮನಿಸಬೇಕು, ಸಂಸ್ಕೃತಿ ವ್ಯಾಖ್ಯಾನಗಳು ಸಾಧಿತ ಸತ್ಯಗಳಲ್ಲ, ಬದಲಾಗಿ ಸ್ಥಾಪಿತ ಸತ್ಯಗಳಾಗಿವೆ.  ನಮ್ಮ ನಾಳೆಗಳು ನಮಗೆ ದಕ್ಕಬೇಕು, ನಮ್ಮ ನಾಳೆಗಳು ಸುಧಾರಿಸಬೇಕು, ನಮ್ಮ ಸಮಾಜ ಸುದಾರಿಸಬೇಕು ಎಂದರೆ, ನಾವು ಸ್ಥಾಪಿತ ಸತ್ಯದ ಚಾರಿತ್ರಿಕ ನಿರೂಪಣಾ ಕ್ರಮಗಳನ್ನು ಹಾಗೂ ಅದರ ಹಿಂದಿನ ಹುನ್ನಾರಗಳನ್ನು ಅರಿಯಬೇಕು.

ನಮ್ಮ ಬದುಕು , ನಮ್ಮ ಊರು , ಜೀವಿಸುವ ಸ್ಥಳ ಕೆರೆ, ಗದ್ದೆ, ಕಾಡು, ಹೊಲ, ಸಮುದ್ರ ಇವುಗಳ ನಡುವೆ ನಮ್ಮ ನಿರಂತರ ವಹಿವಾಟು ಇರುತ್ತದೆ.  ಯುಗಾದಿ ಹಬ್ಬವು ಸುಗ್ಗೀ ಮೀರಿ ಬೇಸಿಗೆ ಎದುರಾದಾಗ ಯುಗಾದಿ ಹಬ್ಬ ಬರುತ್ತೆ, ನಾವು ಸಂಗ್ರಹಿಸಿದ ಎಲ್ಲಾ ಇಲ್ಲಿ ಕರ್ಚಾಗುತ್ತೆ, ಮುಂದೆ ಬೀಕರವಾದ ಬೇಸಿಗೆ. ನಂತರ ಜೂನ್‌ ನಲ್ಲಿ ಮತ್ತೆ ಮಳೆ ಪ್ರಾರಂಭವಾಗಿ, ಹೊಲಗದ್ದೆಗಳು ಹಸನಾಗುತ್ತವೆ. ಅದೇ ಕಾಲಕ್ಕೆ ಬರುವ ಆಷಾಡದಲ್ಲಿ ಹೆಣ್ಣನ್ನು ತನ್ನ ತವರು ಮನೆಗೆ ಕಳುಹಿಸುತ್ತಾರೆ.

ನಂತರ ನವರಾತ್ರಿ ಅಯುಧ ಪೂಜೆ , ಇದು ವಿಶ್ರಾಂತಿಯ ಕಾಲ, ಮದುವೆಗಳ ಕಾಲ, ಮುಂದೆ ಅಕ್ಟೋಬರ್‌ ನವೆಂಬರ್‌ ನಲ್ಲಿ ಬಯಲಾಟ ಜಾತ್ರೆಗಳು ನಡೆದು ಇವುಗಳ ಅಂತಿಮ ರೂಪವಾಗಿ ಸಂಕ್ರಾಂತಿ ಹಬ್ಬ ಬರುತ್ತೆ. ಹೀಗೆ ಒಂದು ಬಹುರೂಪಿ ಸಂಸ್ಕೃತಿ ಇಲ್ಲಿ ನಮಗೆ ಕಾಣಿಸುತ್ತೆ,  ಆದರೇ ಸಂಸ್ಕೃತಿ ಎಂಬುದು ಇದಕ್ಕೆ ಹೊರತಾಗಿ, ಉಳ್ಳವರ ಪರವಾಗಿ ಕಾರ್ಯ ನಿರ್ವಹಿಸುತ್ತೆ. ಕಾರ್ಮಿಕರು. ರೈತರು ಇವರೆಲ್ಲಾ ಸಂಸ್ಕೃತಿ  ಉತ್ಪಾದಕರು ಆಗಿದ್ದಾರೆ. ಆದರೇ ಇವರನ್ನು ಅನ್ಯೀಕರಿಸಿ , ಸಂಸ್ಕೃತಿ, ಇಂಡಸ್ಟ್ರೀ, ಡೆಮಾಕ್ರಸಿ ,ಕಲೆ, ಎಲ್ಲವೂ ಸಹಾ ಉಳ್ಳವರ ಪರವಾಗಿಯೇ ಕಾರ್ಯ ನಿರ್ವಹಿಸುವುದನ್ನು ನೊಡಬಹುದು. ಇದರ ಮುಂದುವರೆದ ಭಾಗವಾಗಿ  ನಗರೀಕರಣ ಬಂದಿದೆ.

ಮತ್ತೆ ಇವನ್ನೆಲ್ಲಾ ಒಡೆದು ಕಟ್ಟುವ ಕೆಲಸ ಆಗಬೇಕು, ತಮಿಳುನಾಡಿನಲ್ಲಿ ಸಂಸ್ಕೃತಿಗೆ ಕುಲಾಚಾರ ಹಾಗೂ ಕಲಾಚಾರ ಎಂಬ ಪದಗಳ ಬಳಕೆ ಇದೆ. ಸಂಸ್ಕೃತಿ ಯೆಂಬುದು ಸಮುದಾಯ ನಿಷ್ಠ ಆಗಬೇಕು. ನಮ್ಮ ಭವಿಷ್ಯವನ್ನು ನಾವೇ ಕಲ್ಪಿಸಿಕೊಳ್ಳಬೇಕು, ನಮ್ಮ ಸ್ಥಾಪಿತ ಸತ್ಯಗಳನ್ನು ನಿರಾಕರಿಸುತ್ತಾ, ನಮ್ಮ ಭವಿಷ್ಯದ ಮೌಲ್ಯ ವ್ಯವಸ್ಥೆಯ ದಿಕ್ಸೂಚಿಯ ನಿರೂಪಣೆಯಾಗಿ ನಾವು ಸಂಸ್ಕೃತಿಕ ಅಧ್ಯಾಯನವನ್ನು ನೋಡಬೇಕು. ಸಂಸ್ಕೃತಿ ಒಂದು ಜಾಗೃತಿಯು ಹೌದು, ಸಿದ್ಧಾಂತವೂ ಹೌದು. ನಮ್ಮ ಸಂಸ್ಕೃತಿ ಅಧ್ಯಯನ ಹಲವು ಕ್ರಾಂತಿಕಾರಕ ಪಲ್ಲಟಗಳಿಗೆ ಕಾರಣವಾಗಬೇಕು.

ನಮ್ಮ ಉತ್ಪಾದನಾ ಕ್ರಮಗಳು, ನನ್ನ ಬದುಕು, ಎಲ್ಲವೂ ಸಾಂಸ್ಕೃತಿಕ ಬಂಡವಾಳವಾಗುತ್ತೆ. ನಮ್ಮ ಬದುಕು ಮಾರ್ಕೆಟ್‌ ಆಗಿದೆ. ನಮ್ಮ ನೈಪುಣ್ಯತೆಯನ್ನು ಮಾರುಕಟ್ಟೆಯಲ್ಲಿಟು ಮಾರಲಾಗುತ್ತೆ. ನಮ್ಮ ಪ್ರತಿರೋಧದ ತಾಕತ್ತನ್ನು ಅವರು ಮಾಹಿತಿ ಆಗಿ ಬದಲಾಯಿಸಿ ನನ್ನನ್ನು ಮತ್ತೊಬ್ಬರ ಅಡಿ ಅಳಾಗಿಸುತ್ತಾರೆ. ಇದನ್ನೇ ಡಾಟಾ ಕಾಲೊನೈಜೇಷನ್‌ ಎಂದು ಕರೆಯುವುದು.

ನಮ್ಮ ಸಂಸ್ಕೃತಿಯ ಒಳಗೆ ಬಹುರೂಪಿ ಮಾದರಿಗಳ ನೆಲೆಗಳು ಇವೆ. ವೈವಿಧ್ಯತೆಗೂ ಬಹುರೂಪತೆಗೂ ವ್ಯತ್ಯಾಸವಿದ್ದಯ ಅದನ್ನು ನಾವು ಅರಿಯಬೇಕಾಗಿದೆ “ ಎಂದು ಹೇಳಿದರು. ಚರ್ಚೆಯ ನಂತರ ಡಾ ಕೆ ವಿ ನೇತ್ರಾವತಿ, ಪವಿ ವಿ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

                                                                                      ವರದಿ ಸಂಗ್ರಹ : ದೇವರಾಜ್‌ ಹೆಚ್‌ ಎಂ. ಚಿಕ್ಕಹೆಜ್ಜಾಜಿ.

 

 

 

 

 

ಪ್ರಕಟಣೆ : ವಿಚಾರ ಮಂಟಪ ಸಾಹಿತ್ಯ ಪತ್ರಿಕೆ                                                                                                ಪ್ರಾರಂಭಿಕ ಕವಿ ಲೇಖಕ ವಿಮರ್ಶಕ ರನ್ನು ಪ್ರೂತ್ಸಾಹಿಸುವ ಹಾಗೂ ಮಾರ್ಗದರ್ಶನ ನೀಡುವ ಸದ್ದುದ್ದೇಶದಿಂದ ಆನ್ ಲೈನ್ ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸುತ್ತಿದ್ದೇವೆ.

ಕವಿತೆಗಳು, ಚುಟುಕು ಬರಹಗಳು, ನಗೆಹನಿಗಳು, ಲೇಖನಗಳು, ಪ್ರಭಂಧಗಳು, ವಿಮರ್ಶೆ, ಹಾಗೂ ಅನುಭವ ಕಥನಗಳು , ಚಿತ್ರಕಲೆ, ವೈಚಾರಿಕ ಬರಹಗಳು , ಪ್ರಚಲಿತ ಘಟನೆಗಳ ಕುರಿತಾದ ಪ್ರತಿಕ್ರಿಯೆಗಳನ್ನು ಹಾಗೂ ಇನ್ನಿತರೇ ಸೃಜನಾತ್ಮಕ ಬರಹಗಳನ್ನು ದೇಶದ ಯಾವುದೇ ಮೂಲೆಯಿಂದಲಾದರೂ  ಬರೆದು ತಪ್ಪಿಲ್ಲದಂತೆ ಟೈಪಿಸಿ ನಮಗೆ ಕಳುಹಿಸಬಹುದು... ಸಂಪಾದಕ ಮಂಡಳಿಯಿಂದ ಮೆಚ್ಚುಗೆ ಪಡೆದ ಬರಹಗಳನ್ನು   ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ. ಪ್ರತಿ ತಿಂಗಳ  ೫ ಮತ್ತು ೨೧ ನೇ ದಿನಾಂಕಗಳಲ್ಲಿ ಪತ್ರಿಕೆ ಪಿ ಡಿ ಎಪ್ ರೂಪದಲ್ಲಿ ತಮ್ಮ ಕೈ ಸೇರುವುದು. ನಿಮ್ಮ ಬರಹಗಳು ೧ ಮತ್ತು ೧೫ ನೇ ತಾರೀಕಿನ ಒಳಗೆ ನಮಗೆ ತಲುಪಬೇಕು. ತಮ್ಮ ಬರಹಗಳನ್ನು ಕಡ್ಡಾಯವಾಗಿ ೮೨೧೭೭೪೪೮೮೬ ಈ ನಂಬರಿಗೆ ವಾಟ್ಸಪ್‌ ಮೂಲಕ ಕಳುಹಿಸಿಕೊಡಬೇಕು, ಬೇರೆ ಯಾವುದೇ ನಂಬರಿಗೆ ಕಳುಹಿಸಲಾಗುವ ಬರಹಗಳನ್ನು ಪ್ರಕಟಣೆಗೆ ಪರಿಗಣಿಸಲಾಗುವುದಿಲ್ಲ.

   ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಹಾಗೂ ಹೆಚ್ಚಿನ ಮಾಹಿತಿಗೆ ಸಂಪಾದಕರನ್ನು ಸಂಪರ್ಕಿಸಿ :

ವರುಣ್‌ರಾಜ್‌ ಜೀ                                                                                                                                      ಸಂಪಾದಕರು                                                                                                                                                     ವಿಚಾರ ಮಂಟಪ ಸಾಹಿತ್ರ ಪತ್ರಿಕೆ                                                                                                               9448241450. (ವಾಟ್ಸಪ್ ಸಂದೇಶ ಕಳುಹಿಸಿ ತಕ್ಷಣ ಪ್ರತಿಕ್ರಿಯೆ ಪಡೆಯಬಹುದು)

ಪ್ರಕಟಣೆ

 

ಕರುನಾಡ ಹಣತೆ ಕವಿ ಬಳಗ ಹಾಗೂ ವಿಚಾರ ಮಂಟಪ ಸಾಹಿತ್ಯ ಪತ್ರಿಕಾ ಬಳಗ ಇವರ ಜಂಟಿ ಸಹಯೋಗದಲ್ಲಿ

 *ಕವಿತೆ/ಕವನ ಸ್ಪರ್ಧೆ*

ಸ್ಪರ್ಧೆ ಪ್ರಾರಂಭದ ದಿನಾಂಕ : ೦೧/೧೧/೨೦೨೦

ವಿಷಯ : *ಕರೋನಾ ಲಾಕ್ ಡೌನ್*

ಸ್ಪರ್ಧೆಯಲ್ಲಿ ಭಾಗಿಯಾಗುವವರಿಗೆ ನಿಯಮಗಳು :

·         ಕವನ ಕಳುಹಿಸುವಾಗ ಮೇಲೆ "ಹಣತೆ ಕವಿ ಬಳಗ ಹಾಗೂ ವಿಚಾರ ಮಂಟಪ ಬಳಗದ ಕವನ ಸ್ಪರ್ಧೆಗೆ"  ಎಂದು ಬರೆಯಬೇಕು.

·         ಸ್ಪರ್ಧೆಗೆ ಕಳುಹಿಸುವ ಕವನ ಈ ಮುಂಚೆ  ಎಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು.

·         ಕವನಗಳಿಗೆ ೨೦ ರಿಂದ ೨೫ ಸಾಲುಗಳ ಮಿತಿ ಇರಲಿ,ಈ ನಿಯಮ ಕಡ್ಡಾಯವಾಗಿ ಪಾಲಿಸಬೇಕು.

·          ಕವನವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಟೈಪಿಸಿ  ಪೂರ್ಣ ಹೆಸರು , ದೂರವಾಣಿ ನಂಬರ್ ವಿಳಾಸ  ಮಾಹಿತಿಯೊಂದಿಗೆ ಹಾಕಬೇಕು

·          ಕೊಟ್ಟ ಸಮಯಕ್ಕೆ ಮೊದಲು ಮತ್ತು ಸಮಯದ ನಂತರ ಬಂದ ಕವನಗಳನ್ನು ಪರಿಗಣಿಸುವುದಿಲ್ಲ.

·          ಕನ್ನಡ ಅಕ್ಷರಗಳು ತಪ್ಪಾಗದಂತೆ ನೋಡಿ ಕೊಳ್ಳಿರಿ

·         ಈ  ಸ್ಪರ್ಧೆಯ ವಿಷಯಕ್ಕೆ ಸಂಬಂಧಿಸಿದ  ಕವನಗಳನ್ನು  ೦೧/೧೧/೨೦೨೦ ರ ನಂತರ ೮೨೧೭೭೪೪೮೮೬ ಈ ನಂಬರಿಗೆ ವಾಟ್ಸಾಆಪ್ ಮಾಡಬೇಕು.

·         ಪಿಡಿಎಪ್ ,ವರ್ಡ್ ಡಾಕುಮೆಂಟ್, ಪೋಟೋ ರೂಪದಲ್ಲಿ ಕಳುಹಿಸುವ ಬರಹಗಳನ್ನು ಸ್ವೀಕರಿಸುವುದಿಲ್ಲ.

·         ಕರೋನಾ ಲಾಕ್ ಡೌನ್ ನಿಂದ ಒದಗಿ ಬಂದ ಕಷ್ಟ ನಷ್ಟಗಳನ್ನು ತಮ್ಮದೇ ಅನುಭವಗಳ ಹಿನ್ನೆಲೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿ.

·         ತಮ್ಮ ಕವಿತೆಗಳಿಗೆ ಸಂಭಂದಿಸಿ ಎನಾದರೂ ವಿವರಗಳನ್ನು ಹೇಳಬೇಕಿದ್ದರೆ ಅದನ್ನು ೪-೫ ವಾಕ್ಯಗಳಲ್ಲಿ ತಿಳಿಸಬಹುದು.

·         ಕವನಗಳನ್ನು ಕಳುಹಿಸಲು ಕಡೆಯ ದಿನಾಂಕ : ೧೦/೧೧/೨೦೨೦.

·         ತೀರ್ಪುಗಾರರು ಉತ್ತಮವೆಂದು ಪ್ರಕಟಿಸಿದ ಕವಿತೆಗಳಿಗೆ ಪ್ರಮಾಣ ಪತ್ರ ಹಾಗೂ ಸೂಕ್ತ ಬಹುಮಾನ ನೀಡಲಾಗುತ್ತದೆ.

·         ವಿಜೇತರ ವಿವರಗಳನ್ನು ೨೦/೧೧/೨೦೨೦ ರಂದು ವಿಚಾರ ಮಂಟಪ ಸಾಹಿತ್ಯ  ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ.

·         ತಿರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.

·         ನಿರ್ವಾಹಕರು ವರುಣ್‌ ರಾಜ್‌ ಜೀ ,  ದೂರವಾಣಿ ಸಂಖ್ಯೆ : ೯೪೪೮೨೪೧೪೫೦.

·         ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಕನಕ ಪ್ರೀತೀಶ್‌ ಸಂಸ್ಥಾಪಕರು, ಕರುನಾಡ ಹಣತೆ ಕವಿ ಬಳಗ -೯೯೮೬೪೨೬೭೫೫ ರಾಜು ಸೂಲೇನಹಳ್ಳಿ,  ರಾಜ್ಯಾಧ್ಯಕ್ಷರು ಕರುನಾಡ ಹಣತೆ ಕವಿ ಬಳಗ  - ೯೭೪೧೫೬೬೩೧೩

                                                             ಧನ್ಯವಾದಗಳು

 

 

ಓದುಗ ಮಹಾಶಯರಿಗೆ ಅನಂತ ಧನ್ಯವಾದಗಳು

 

 

 

 

 

 

 

 

ವಿಚಾರ ಮಂಟಪ ಸಾಹಿತ್ಯಯ ಪತ್ರಿಕೆಯ ಸಂಪಾದಕ ಮಂಡಳಿ.


ಸುಮಿತ್ರ ಎನ್‌                                                 

ಲಕ್ಷ್ಮೀ ಕೆ ಬಿ           

 ಹರೀಶ ಪಿ ಎ    - ೮೮೮೪೮೭೮೦೬೯              

ರಾಜ್‌ ಕುಮಾರ್‌ ವಿ  - ೯೦೭೧೧೪೬೪೨೧

 ಮುತ್ಯಾಲಪ್ಪ ಎಂ ಎನ್‌   - ೯೧೪೧೮೦೭೦೪೩      

 ಧನಶೇಖರ ವಿ ಎನ್‌  – ೯೮೪೪೩೯೬೬೯೨          

 ಮೀನಾಕ್ಷಿ ರಾಜಣ್ಣ                                               

ಸುಧಾಮ ಎಸ್‌ -  ೯೯೧೬೭೯೪೩೩೭                 

ಗಂಗಾಧರ ಎಂ ಎ  – ೭೮೨೯೭೭೧೫೦೮              

ಯಶ್ವಂತ್‌ ಪಾಲ್‌ ಎ ಎನ್‌ - ೮೧೨೩೩೬೩೦೨೮

ಮುನಿರಾಜು ಟಿ ವಿ   – ೮೧೯೭೯೭೭೩೭೧                

ಮಹೇಶ ಎ   - ೯೯೧೬೪೧೬೮೮೨                      

ದೇವರಾಜ ಹೆಚ್‌ ಎಂ – ೯೮೮೦೫೯೬೨೮೦                 

ತೇಜಸ್‌ ಬಿ ಎಂ – ೯೭೪೩೦೫೮೬೫೯                

ಹೇಮಂತ್‌ ಹೆಚ್‌ ಎಂ – ೮೯೫೧೬೪೧೭೫೭        

ಪವಿ ವಿ                                                                      

ರಾಜು ಎಂ - ೯೫೯೧೫೨೦೨೮೨


      ರಾಮಣ್ಣ ಮಸರಕಲ್ - - 8546940040

      ಮಹಮ್ಮದ್ ಅಜರುದ್ದೀನ್, - 9606160571

      ಸುರೇಶ ತಂಗೋಡ -  8197531804

      ಅಮೀರ ಮುಲ್ತಾನಿ,  - 9743687706

     ಶೇಕಪ್ಪ ಸತ್ಯಪ್ಪನವರ-  9686751084

          ಮುಕ್ತಾಯ

 
     ಕೆಂಚಪ್ಪ ಎಮ್ ಎಸ್  - 9591778051


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...