![]()
ವಿಚಾರ
ಮಂಟಪ ಸಾಹಿತ್ಯ ಪತ್ರಿಕೆಯ ಗೌರವ ಸಲಹೆಗಾರರು.
ಡಾ. ದು ಸರಸ್ವತಿ ಡಾ ಕೆ ವಿ ನೇತ್ರಾವತಿ ಡಾ. ನಾಗಮಣಿ ಸಿ ಎಂ ಡಾ ಗಾಯಿತ್ರಿದೇವಿ ಡಾ. ಮಾಲ ಬಿ ಎಂ.
ಡಾ ನಾ ಮುನಿರಾಜು
ಡಾ ಕೈಲಾಸ್ ಎಸ್ ಡೋಣಿ ಶ್ರೀ ದಯಾನಂದ ಪಾಟೀಲ್ ಅನೂಷಾ ಆರ್ ಕೆ ಎನ್ ಅಕ್ರಂಪಾಷ
ವಿಚಾರ
ಮಂಟಪ ಸಾಹಿತ್ಯ ಪತ್ರಿಕೆ.
ವೈಚಾರಿಕ ಹಾಗೂ ಸೃಜನಶೀಲ ಬರಹಗಳು
, ಕಥೆ , ಕವನ , ಚುಟುಕು ಬರಹಗಳು, ಲೇಖನ , ಚಿತ್ರಕಲೆ, ಹಾಸ್ಯ ಬರಹಗಳು, ಪುಸ್ತಕ – ವ್ಯಕ್ತಿ ಪರಿಚಯ,
ದಾರವಾಹಿ, ಮುಂತಾದ ನಾನಾ ಮುಖದ ಕಲೆಗಳ ಅಭಿವ್ಯಕ್ತಿಗೆ ವೇದಿಕೆ.
ವಿಚಾರ ಮಂಟಪ ಸಾಹಿತ್ಯ ಬಳಗವು ಪ್ರಾರಂಭಿಕ ಕವಿ, ವಿಮರ್ಶಕರನ್ನು ಪ್ರೋತ್ಸಾಹಿಸುವ
ಹಾಗೂ ಮಾರ್ಗದರ್ಶನ ಮಾಡುವ ಸದ್ದುದ್ದೇಶದಿಂದ ಈ ಆನ್ಲೈನ್ ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದು.
ಸಾಹಿತ್ಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹಾ ಅನುಕೂಲ ಆಗಬಹುದೆಂಬ ಸದಾಶಯವನ್ನು
ಸಂಪಾದಕ ಮಂಡಳಿ ಹೊಂದಿದೆ.
ಪತ್ರಿಕೆ ಪ್ರತಿ ೧೫ ದಿನಕ್ಕೊಮ್ಮೆ ಪಿ ಡಿ ಎಪ್ ರೂಪದಲ್ಲಿ ಪ್ರಕಟವಾಗಲ್ಲಿದ್ದು. ಪ್ರತಿ ತಿಂಗಳ ೫-೧೦ ಮತ್ತು ೨೦-೨೫ ನೇ ದಿನಾಂಕಗಳಲ್ಲಿ ಓದುಗರನ್ನು
ತಲುಪಲಿದೆ.
ವಿಶೇಷ ಸೂಚನೆಗಳು :
·
ತಮ್ಮ ಬರಹಗಳನ್ನು ಪತ್ರಿಕೆ ಪ್ರಕಟವಾಗುವ ೫ ದಿನಗಳ ಮುಂಚಿತವಾಗಿ ನಮಗೆ ಕಳುಹಿಸಬೇಕು.
·
ತಾವು ಕಳುಹಿಸುವ ಬರಹ ತಮ್ಮ ಸ್ವಂತದೇ ಆಗಿದ್ದು, ಹಿಂದೆ
ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗಿರಬಾರದು.
·
ಬರಹಗಳು ವೈಚಾರಿಕತೆ ಹಾಗೂ ವೈಜ್ಞಾನಿಕ ದೃಷ್ಠಿಕೋನದಿಂದ
ರಚಿಸಲ್ಪಟ್ಟಿರಬೇಕು.
·
ಯಾವುದೇ ರೀತಿಯ ದ್ವೇಷ, ನಿಂದನೆ, ಅಪಪ್ರಚಾರ, ಹಾಗೂ
ಅಶ್ಲೀಲ ಬರಹಗಳಿಗೆ ಅವಕಾಶವಿಲ್ಲ.
·
ಬರಹಗಾರರು ತಮ್ಮ ಮೊಬೈಲ್ ನಲ್ಲಿ ತಮ್ಮ ಬರಹಗಳನ್ನು
ತಪ್ಪಿಲ್ಲದಂತೆ ಟೈಪಿಸಿ ನಮಗೆ ಕಳುಹಿಸಬೇಕು.
·
ಯಾವುದೇ ರೀತಿಯ ಪಿ ಡಿ ಎಪ್ , ಕ್ರಮವಿಲ್ಲದ ಟೈಪಿಂಗ್
, ಅಕ್ಷರ ,ವ್ಯಾಕರಣ ದೋಷಗಳಿಂದ ಕೂಡಿರುವ ಬರಹಗಳನ್ನು ಪರಿಗಣಿಸಲಾಗುವುದಿಲ್ಲ.
·
ನಿಮ್ಮ ಬರಹಗಳ ಪ್ರಕಟಣೆಗೆ ಸಂಭಂಧಿಸಿ ಸಂಪಾದಕ ಮಂಡಳಿಯ
ತೀರ್ಮಾನವೇ ಅಂತಿಮವಾಗಿರುತ್ತೆ.
·
ಪತ್ರಿಕೆಯಲ್ಲಿ ಪ್ರಕಟವಾಗುವ ಬರಹಗಳಿಗೆ ಪತ್ರಿಕೆ ಹೊಣೆಯಲ್ಲ
, ಪ್ರತಿ ಬರಹಕ್ಕೂ ಆಯಾ ಲೇಖಕರೇ ಹೊಣೆಯಾಗಿರುತ್ತಾರೆ.
·
ನಮ್ಮ ಪತ್ರಿಕೆಯು ಉಚಿತ ಪತ್ರಿಕೆ ಆಗಿದ್ದು, ಕೇವಲ ಆನ್
ಲೈನ್‌ನಲ್ಲಿ ಮಾತ್ರ ಪ್ರಕಟವಾಗುತ್ತದೆ.
·
ನಮ್ಮ ಪತ್ರಿಕೆ ಯಾವುದೇ ರೀತಿಯ ಅಧಿಕೃತ ನೊಂದಣಿ ಇಲ್ಲದ,ಆಂಗ್ಲಭಾಷೆಯ ʼನ್ಯೂಸ್ ಲೆಟರ್ʼ ಪರಿಭಾಷಗೆ ಹೊಂದುವ ಸಾಮಾನ್ಯ ಹಾಗೂ ಲಾಭರಹಿತ ಪಾಕ್ಷಿಕ ವಾರ್ತಾ ಪತ್ರವಾಗಿರುತ್ತದೆ.
·
ನಿಮ್ಮ
ಬರಹಗಳನ್ನು ನಮಗೆ ತಲುಪಿಸಬೇಕಾದ ವಾಟ್ಸಪ್ ಸಂಖ್ಯೆ : ೮೨೧೭೭೪೪೮೮೬
ಹೆಚ್ಚಿನ
ಮಾಹಿತಿಗಾಗಿ ಸಂಪರ್ಕಿಸಿ:
ವರುಣ್‌ರಾಜ್ ಜೀ
ಸಂಪಾದಕರು ವಿಚಾರ
ಮಂಟಪ ಸಾಹಿತ್ಯ ಪತ್ರಿಕೆ
ಸಂ : 9448241450
ಮಿಂಚಂಚೆ :
maharishivarunrajji@gmail.com
ಪರಿವಿಡಿ
·
ಸಂಪಾದಕರ ಮಾತು
·
ವಿಚಾರ ಮಂಟಪ ವೆಬಿನಾರ್ ವಿಶೇಷ.
·
ಸ್ವಾತಂತ್ರ್ಯೋತ್ತರ
ಕರ್ನಾಟಕ ಜಾನಪದ ಅಧ್ಯಯನ ಭಾಗ ೧ ಮತ್ತು ೨
·
ಲೇಖನ ಬರಹ.
·
ಕರೋನಾ
ಅನಾಹುತ
·
ಕವಿತೆಗಳು
·
ಮರೆದ
ಮರ
·
ಅತ್ಯಾಚಾರ
·
ಹೇಳುವುದಾದರೂ
ಏನಿದೆ ?
·
ಕನ್ನಡದ
ತೇರು
·
ಮುಖವಾಡ
·
ನನ್ನವ್ವ
·
ಅಮ್ಮ
·
ಪ್ಲಾಸ್ಟಿಕ್
ಬಾಟಲ್
·
ಬೇಲಿ
ಬದಿಯ ಬದುಕು
·
ಮಕ್ಕಳ ಕವಿತೆಗಳು
·
ಕರೋನಾ
·
ನಾನು
ಎಂಬ ಅಹಂಕಾರ
·
ಚಿತ್ರಕಲೆ
·
ಪೋಟೋಗ್ರಫಿ
·
ಸಾಹಿತ್ಯ ಸಂಚಯ
·
ಶರಣರ
ಸೂಳ್ನುಡಿ
·
ಪ್ರಾಚೀನ
ಕವಿ ಪರಿಚಯ : ರನ್ನ
·
ಕವಿವಾಣಿ
·
ವಿಶ್ವವಿನೂತನ
ವಿದ್ಯಾಚೇತನ……
·
ಸದ್ದಿರದ
ಪಸುರೊಡೆಯ ಮಲೆನಾಡ ಬನಗಳಲ್ಲಿ……
·
ರಸ ಪ್ರಶ್ನೆಗಳು
·
ಪ್ರಕಟಣೆ
·
ಕವನ
ಸ್ಫರ್ಧೆ
·
ಕರ್ನಾಟಕ
ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪರಿಚಯ .
ಸಂಪಾದಕರ
ಮಾತು
ಓದುಗ ಮಿತ್ರರೆಲ್ಲರಿಗೂ ಪ್ರೀತಿಯ ನಮಸ್ಕಾರಗಳು,
ವಿಚಾರ
ಮಂಟಪ ಸಾಹಿತ್ಯ ಬಳಗದ ಪಾಕ್ಷಿಕ ಸಾಹಿತ್ಯ ಪತ್ರಿಕೆಯ
೩ ನೇ ಸಂಚಿಕೆ ಇಂದು ಬಿಡುಗಡೆಯಾಗುತ್ತಿದೆ, ಪ್ರಾರಂಭಿಕ
ಯುವ ಕವಿ ವಿಮರ್ಶಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಈ ಪತ್ರಿಕೆಯನ್ನು ಪ್ರಾರಂಭ ಮಾಡಿದ್ದೇವೆ. ಹಲವಾರು
ಯುವ ಕವಿ ಮನಸ್ಸುಗಳಿಗೆ ತಮ್ಮ ಕಲೆಯನ್ನು ಅಭಿವ್ಯಕ್ತಿಸುವ ಒಂದು ಸ್ಥಳೀಯ ವೇದಿಕೆಯ ಅವಶ್ಯಕತೆ ಖಂಡಿತಾ
ಇರುತ್ತದೆ. ಇಂತಹಾ ವೇದಿಕೆಯ ಮೂಲಕ ಹಲವರು ಹೊಸ ರೀತಿಯ ಬರಹಗಳ ಪ್ರಯೋಗಗಳನ್ನು ಮಾಡಬಹುದಾಗಿದೆ ಎಂಬುದು
ನಮ್ಮ ನಂಬಿಕೆ. ಬೇರೆಯವರಿಗೆ ಅನುಕೂಲವಾಗುವ ಉದ್ದೇಶ ಒಂದು ಕಡೆಯಾದರೇ, ಕಲಿಯುವ ಅವಕಾಶಗಳನ್ನು ನಮಗೆ
ನಾವೇ ಸೃಷ್ಟಿಸಿಕೊಳ್ಳುವ ಒಂದು ಸಣ್ಣ ಪ್ರಯತ್ನವಾಗಿಯೂ ಸಹಾ ಈ ಪತ್ರಿಕೆ ನಮಗೆ ಉಪಯೋಗಿ ಆಗಿದೆ.
ನಮ್ಮ
ಪ್ರಯತ್ನಕ್ಕೆ ಫಲವಾಗಿ ಕರ್ನಾಟಕದ ನಾನಾ ಭಾಗಗಳಿಂದ ಹಲವಾರು ಯುವ ಕವಿಗಳು ಕವಿತೆ ಹಾಗೂ ಲೇಖನಗಳನ್ನು
ಪ್ರಕಟಣೆಗಾಗಿ ಕಳುಹಿಸುತ್ತಿರುವುದು ತುಂಬಾ ಸಂತೋಷದ ವಿಚಾರ. ಹೆಚ್ಚು ಕವಿತೆಗಳು ಹಾಗೂ ಲೇಖನಗಳು ವಿಚಾರವಂತಿಕೆ,
ಹೊಸ ಆಲೋಚನಾ ವಿಧಾನ, ವೈಜ್ಞಾನಿಕ ದೃಷ್ಟಿಕೋನ ದಿಂದ ಕೂಡಿದ್ದು ಇದು ನಮ್ಮ ಸಂತೋಷವನ್ನು ಮತ್ತಷ್ಟು
ಹೆಚ್ಚಿಸಿದೆ. ನಮಗೆ ತಲುಪಿರುವ ಬರಹಗಳಲ್ಲಿ ಆಯ್ದ
ಬರಹಗಳನ್ನು ಮಾತ್ರ ಈ ಸಂಚಿಕೆಯಲ್ಲಿ ಪ್ರಕಟಿಸಿದ್ದು, ಉಳಿದವನ್ನು ಸೂಕ್ತ ಬದಲಾವಣೆಗಳ ನಂತರ ಮುಂದಿನ
ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. ತಮ್ಮ ಬರಹಗಳನ್ನು ಕಳುಹಿಸಿಕೊಟ್ಟ ಎಲ್ಲಾ ಬರಹಗಾರರಿಗೆ ವಿಚಾರ
ಮಂಟಪ ಬಳಗವು ಅಭಿನಂದನೆಗಳನ್ನು ಹಾಗೂ ಧನ್ಯವಾದಗಳನ್ನು ತಿಳಿಸುತ್ತದೆ.
ನಮ್ಮ
ಪತ್ರಿಕಯ ಮೊದಲ ಮತ್ತು ಎರಡನೇ ಸಂಚಿಕೆಗಳಿಗೆ ಓದುಗರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು
ಮೆಸೇಜ್, ಕರೆಗಳ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಿದ್ದು ತುಂಬಾ ಸಂತೋಷದ ವಿಷಯವಾಗಿದೆ, ತಮ್ಮ
ಸಹಕಾರ ಇದೇ ರೀತಿ ಮುಂದುವರೆಯಲಿ ಎಂದು ಆಶಿಸುತ್ತೇವೆ. ಯಾವುದೇ ರೀತಿಯ ಸಲಹೆ ಸೂಚನೆ ವಿಮರ್ಶೆಗಳಿಗೆ ಸದಾ ಸ್ವಾಗತವನ್ನು ಕೊರುತ್ತೇವೆ.
ನಮ್ಮ
ಪ್ರಯತ್ನಕ್ಕೆ ಸಹಕಾರಿಯಾಗಿರುವ ಗೌರವ ಸಲಹೆಗಾರರಾದ
ಡಾ. ದು ಸರಸ್ವತಿ , ಡಾ ಕೆ ವಿ ನೇತ್ರಾವತಿ,
ಸೇರಿದಂತೆ ಎಲ್ಲಾ ಗೌರವ ಸಲಹೆಗಾರರು ಹಾಗೂ ನಮ್ಮ ಜೊತೆ ಸಹಕರಿಸುತ್ತಿರುವ ಸುಮಿತ್ರ ಎನ್
ಕೋಲಾರ, ಎಸ್ ಎನ್ ಪ್ರಮೀಳಾದೇವಿ, ಮೀನಾಕ್ಷಿ ರಾಜಣ್ಣ ಮುಂತಾದವರಿಗೆ ನಮ್ಮ ಅನಂತ ಧನ್ಯವಾದಗಳು.
ನಮ್ಮ ಪತ್ರಿಕೆಯನ್ನು ಹೆಚ್ಚು ಹೆಚ್ಚು ಜನರಿಗೆ ಹಂಚುವುದರ ಮೂಲಕ ನಮ್ಮ ಪ್ರಯತ್ನಕ್ಕೆ ಮತ್ತಷ್ಟು ಬೆಂಬಲ
ನೀಡಬೇಕಾಗಿ ಕೊರುವೆ. ಅದೇ ರೀತಿ ನಮ್ಮ ಬಳಗದ ವತಿಯಿಂದ
ನಡೆಯುವ ವಿವಿಧ ರೀತಿಯ ವೆಬಿನಾರ್ಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದರೊಂದಿಗೆ ನಿಮಗೆ ತಿಳಿದವರನ್ನು
ಸಹಾ ಭಾಗವಹಿಸಿ ಇವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರೋತ್ಸಾಹಿಸ ಬೇಕಾಗಿ ಓದುಗ ಮಿತ್ರರನ್ನು ಕೋರುತ್ತಾ…
ಸಹಕರಿಸಿದ ಎಲ್ಲರಿಗೂ ಮತ್ತೊಮ್ಮೆ ಅನಂತ ಧನ್ಯವಾದಗಳನ್ನು ತಿಳಿಸುವೆ.
ನಮಸ್ಕಾರಗಳು
ವರುಣ್‌ರಾಜ್ ಜೀ
ಸಂಪಾದಕರು ವಿಚಾರ
ಮಂಟಪ ಸಾಹಿತ್ಯ ಪತ್ರಿಕೆ
ಸಂ
: 9448241450
ಮಿಂಚಂಚೆ
: maharishivarunrajji@gmail.com
ವಿಚಾರ ಮಂಟಪ ವಿಬಿನಾರ್ ವಿಶೇಷ
ಸ್ವಾತಂತ್ರ್ಯೋತ್ತರ ಕರ್ನಾಟಕದ
ಜಾನಪದ ಅಧ್ಯಯನಗಳು
ಭಾಗ-1
ಕರ್ನಾಟಕ
ಜಾನಪದ ಅಧ್ಯಯನದ ವ್ಯಾಪ್ತಿ ವಿಸ್ತಾರವಾಗಿರುವ ಕಾರಣಕ್ಕೆ ಅಧ್ಯಯನದ ದೃಷ್ಟಿಯಿಂದ ಇದನ್ನು ನಾವು ಸ್ವತಂತ್ರ್ಯ
ಪೂರ್ವದ ಜಾನಪದ ಅಧ್ಯಯನ ಮತ್ತು ಸ್ವತಂತ್ರ್ಯೋತ್ತರ ಜಾನಪದ ಅಧ್ಯಯನ ಎಂದು ನೋಡುತ್ತೇವೆ. ಇದನ್ನೆ ಇನ್ನೊಂದು
ಬಗೆಯಲ್ಲೂ ನೋಡಬಹುದು; ಕರ್ನಾಟಕ ಜಾನಪದ ಅಧ್ಯಯನಕ್ಕೆ ಪಾಶ್ಚಾತ್ಯ ವಿದ್ವಾಂಸರ ಕೊಡುಗೆ ಏನು ?, ದೇಸೀಯ
ವಿದ್ವಾಂಸರ ಕೊಡುಗೆ ಏನು ? ಹಾಗೂ ವಿವಿಧ ಸಂಘ ಸಂಸ್ಥೆಗಳ ಕೊಡುಗೆ ಏನು ? ಎಂದು ಈ ಮೂರು ನೆಲೆಯಲ್ಲಿಯೂ
ಕರ್ನಾಟಕ ಜಾನಪದದ ಅಧ್ಯಯನದ ಇತಿಹಾಸವನ್ನು ಅಥವಾ ಅದು ನಡೆದು ಬಂದ ದಾರಿಯನ್ನು ಗಮನಿಸಬಹುದು.
ಸ್ವಾತಂತ್ರ್ಯ
ಪೂರ್ವದ ದಿನಗಳಲ್ಲಿ ಪಾಶ್ಚಾತ್ಯ ವಿದ್ವಾಂಸರಷ್ಟೇ ಅಲ್ಲದೆ ದೇಸೀಯ ವಿದ್ವಾಂಸರೂ ಜಾನಪದ ಕ್ಷೇತ್ರದಲ್ಲಿ
ಕಾರ್ಯನಿರ್ವಹಿಸಿದ್ದಾರೆ. ಅಂತವರಲ್ಲಿ ಹಲಸಂಗಿ ಗೆಳೆಯರು, ಗೋರೂರು ರಾಮಸ್ವಾಮಿ, ದೇವುಡು, ಅರ್ಚಕ
ರಂಗಸ್ವಾಮಿ, ಬೆಟಗೇರಿ ಕೃಷ್ಣಶರ್ಮ, ಮಾಸ್ತಿ, ಬಿ.ಎಂ.ಶ್ರೀ., ತೀ.ನಂ.ಶ್ರೀ., ಎಸ್.ವಿ.ರಂಗಣ್ಣ ಇವರುಗಳನ್ನು
ನಾವು ಮರೆಯುವಂತಿಲ್ಲ.
ಸ್ವಾತಂತ್ರ್ಯೋತ್ತರ
ಕಾಲದ ಆರಂಭದ ದಿನಗಳಲ್ಲಿ ಜನಪದ ಗೀತೆಗಳ ಕ್ಷೇತ್ರಕ್ಕೆ ಸಂಬಂದಿಸಿದಂತೆಯೇ ಹೆಚ್ಚು ಸಂಗ್ರಹ ಸಂಪಾದನೆ
ಮತ್ತು ಅಧ್ಯಯನಗಳು ನಡೆದಿವೆ. ಈ ಹಿನ್ನಲೆಯಲ್ಲಿ ಸ್ವಾತಂತ್ರ್ಯೋತ್ತರದ ನಂತರ ಜಾನಪದ ಅಧ್ಯಯನವನ್ನು
ಯಶಸ್ವಿಯಾಗಿ ಮುಂದುವರೆಸಿಕೊಂಡು ಬಂದವರೆಂದರೆ, ಉತ್ತರ ಕರ್ನಾಟಕದಲ್ಲಿ ಬಿ.ಎಸ್. ಗದ್ದಗೀಮಠರು ಹಾಗೂ
ದಕ್ಷಣ ಕರ್ನಾಟಕದಲ್ಲಿ ಜೀ.ಶಂ.ಪ ಮತ್ತು ಕ.ರಾ.ಕೃಷ್ಣಸ್ವಾಮಿ ಮುಂತಾದ ಪ್ರಮುಖರು.
ಬಿ.ಎಸ್.
ಗದ್ದಗೀಮಠರು ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಸಂಚರಿಸಿ ಜನಪದ ಗೀತೆಗಳನ್ನು ಸಂಗ್ರಹಿಸಿದರು. ಜೊತೆಗೆ
ಅಲ್ಲಿನ ಸಂಪ್ರದಾಯಗಳನ್ನು ಜಾನಪದದ ಹಿನ್ನಲೆಯಲ್ಲಿ ಅಧ್ಯಯನ ಮಾಡಿದರು. “ಕನ್ನಡ ಜನಪದ ಗೀತೆಗಳು” ಎಂಬ
ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಜಾನಪದ ಕ್ಷೇತ್ರದಲ್ಲಿ
ಕೆಲಸ ಮಾಡಿ ಡಾಕ್ಟರೇಟ್ ಪದವಿ ಪಡೆದ ಮೊದಲಿಗರು ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಇದಲ್ಲದೆ
ನಾಲ್ಕು ನಾಡಪದಗಳು(1952), ಜನತಾ ಗೀತೆಗಳು(1959),ಕುಮಾರರಾಮನ ದುಂದುಮೆ(1955), ಮಲ್ಲ ಮಲ್ಲಾಣಿ
(1959), ಲೋಕಗೀತೆಗಳು ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ.
ದಕ್ಷಿಣ
ಕರ್ನಾಟಕದಲ್ಲಿ ಜೀ.ಶಂ.ಪರಮಶಿವಯ್ಯನವರು ಕ್ಷೇತ್ರಕಾರ್ಯ ನಡೆಸಿ ಅಲ್ಲಿನ ಜನಪದ ಗೀತೆ, ಲಾವಣಿ, ಕಥೆಗಳ
ಜೊತೆಗೆ ದಕ್ಷಿಣ ಕರ್ನಾಟಕದ ವೃತ್ತಿಗಾಯಕ ಪರಂಪರೆಗಳನ್ನು ಗುರುತಿಸಿ ಅವುಗಳ ಬಗೆಗೆ ವಿಶೇಷವಾಗಿ ವ್ಯವಸ್ಥಿತ
ರೀತಿಯಲ್ಲಿ ಅಧ್ಯಯನ ನಡೆಸಿದ್ದಾರೆ. “ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು” ಎಂಬುದು ಇವರ
ಪಿ.ಎಚ್‍ಡಿ ಮಹಾಪ್ರಬಂಧ. ಇದರಲ್ಲಿ ಹಳೆ ಮೈಸೂರು ಭಾಗದ ಎಲ್ಲ ಜನಪದ ಕಾವ್ಯ ಸಂಪ್ರದಾಯಗಳನ್ನು ಪರಿಚಯಿಸಿದ್ದಾರೆ.
ಇದಲ್ಲದೆ ಜೀ.ಶಂ.ಪ. ಅವರು ಜಾನಪದಕ್ಕೆ ಸಂಬಂಧಿಸಿದಂತೆ ಇನ್ನು ಅನೇಕ ಕೃತಿಗಳನ್ನು ಹೊರತಂದಿದ್ದಾರೆ.
ಅವುಗಳೆಂದರೆ; ಜಾನಪದ ಸಾಹಿತ್ಯ ಸಮೀಕ್ಷೆ, ಜಾನಪದ ಕೆಲವು ಮುಖಗಳು, ಜಾನಪದ ಸಂಗಮ, ಕಂಸಾಳೆಯವರು, ನೀಲಗಾರರು,
ಹೆಂಗಸರ ಜನಪದ ಗೀತೆಗಳು, ಗಂಡಸರ ಜನಪದ ಗೀತೆಗಳು, ಕಿನ್ನರಿ ಜೋಗಿಗಳು, ಜನಪದ ವಾದ್ಯಗಳು, ಮಂಟೆಸ್ವಾಮಿ
ಕಾವ್ಯ, ದೊಂಬಿದಾಸರ ಲಾವಣಿಗಳು, ಹೆಳವರ ಕಾವ್ಯಗಳು, ಅವರ ನೆನೆದೇವು, ಪಿರಿಯಾ ಪಟ್ಟಣದ ಕಾಳಗ, ದಕ್ಷಿಣ
ಕರ್ನಾಟಕದ ಜನಪದ ಕಥೆಗಳು, ಕನ್ನಡ ಜನಪದ ಕಥೆಗಳು, ಜನಪದ ವೀರ ಕಾವ್ಯಗಳು, ಎರಡು ಜನಪದ ಖಂಡ ಕಾವ್ಯಗಳು
ಮುಂತಾದವು.
ಇನ್ನು
ದಕ್ಷಿಣ ಕರ್ನಾಟಕದಲ್ಲಿ ಜನಪದ ಗೀತೆಗಳ ಸಂಗ್ರಹಕಷ್ಟೆ ಗಮನ ಕೇಂದ್ರೀಕರಿಸಿ ಸಮೃದ್ದ ಸಂಗ್ರಹ ಹಾಗೂ
ಪ್ರಕಟಣೆ ಮಾಡಿದ ಕೀರ್ತಿ ಕ.ರಾ.ಕೃ ಅವರಿಗೆ ಸಲ್ಲುತ್ತದೆ. 1975 ರಲ್ಲಿ “ಜೇನ ಹನಿಗಳು” ಎಂಬ ಇವರ
ಮೊದಲ ಸಂಕಲನ ಪ್ರಕಟಣಾ ಕಾರ್ಯದ ನಂತರ ಒಂದಾದ ಮೇಲೆ ಒಂದರಂತೆ ಒಟ್ಟು ಇಪ್ಪತ್ತೈದಕ್ಕು ಹೆಚ್ಚು ಸಂಕಲನಗಳನ್ನು
ಪ್ರಕಟಿಸಿದ್ದಾರೆ. ಜಾನಪದ ಪ್ರೇಮಗೀತೆಗಳು, ಅಂಬಿಗರ ಗಂಗ ಮತ್ತು ಇತರ ಹಾಡುಗಳು, ಆಯ್ದ ನಾಡ ಹಾಡುಗಳು,
ಮಲ್ಲಿಗೆ ನಗತಾವೆ, ಶ್ರೀ ಆದಿ ಚುಂಚನಗಿರಿ, ಕೋಲು ಮಲ್ಲಿಗೆ ಕೋಲೆ, ಸೂಸಿ ಹರಿದಾಳೆ ಶಿವಗಂಗೆ, ಜನಪದ
ಗೀತೆಗಳಲ್ಲಿ ಮಹಾಭಾರತ, ಮಲೆಮಾದೇವ, ಚನ್ನಿಗ ಚಲುವಯ್ಯ, ಗಿರಿಕಾಣೆ ಮೂಡಲಗಿರಿ, ಹಣತೆ ಉರಿಯುತ್ತಿದೆ,
ಜಾನಪದ ಕಥನಗೀತೆಗಳು, ಪಾಳೆಗಾರರ ಪದಗಳು, ಹಚ್ಚ ಹೊಂಬಾಳೆ ಕುಣಿದಾವೆ ಮುಂತಾದವು ಕ.ರಾ.ಕೃ ಅವರ ಸಂಗ್ರಹದ
ವಿಸ್ತಾರವನ್ನು ಸೂಚಿಸುತ್ತವೆ.
ಇದಲ್ಲದೆ
ಸ್ವಾತಂತ್ರ್ಯೋತ್ತರ ಆರಂಭ ಕಾಲದಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ಪ್ರಕಟವಾದ ಕೆಲವು ಮುಖ್ಯ ಕೃತಿಗಳೆಂದರೆ;
*
ಶಿವರಾಮ ಕಾರಂತರ “ಯಕ್ಷಗಾನ ಬಯಲಾಟ” ಈ ಕೃತಿಗೆ 1959 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಲಭಿಸಿದೆ, 1966 ರಲ್ಲಿ ಪ್ರಕಟವಾದ ಕಾರಂತರ ಮತ್ತೊಂದು ಕೃತಿ- “ಜಾನಪದ ಗೀತೆಗಳು” ಎಂಬ ಉಪನ್ಯಾಸ ಕೃತಿ.
*
ಚಿಕ್ಕಮಗಳೂರು ಜಿಲ್ಲೆಯ ವೈಶಿಷ್ಟ್ಯಗಳನ್ನು ಪ್ರತಿನಿಧಿಸುವ ಗೋ. ರು. ಚನ್ನಬಸಪ್ಪನವರ - ಬಾಗೂರು ನಾಗಮ್ಮ ಮತ್ತು ಇತರ ಹಾಡುಗಳು, ಮೈದುನ ರಾಮಣ್ಣ
ಎಂಬ ಗೀತ ಸಂಕಲನಗಳು.
*
ಶಿವಮೊಗ್ಗ ಜಿಲ್ಲೆಯ ಸಾಗರ ಪ್ರಾಂತ್ಯದ ಜನಪದ ಗೀತೆಗಳ ಸಂಗ್ರಹದೊಂದಿಗೆ ಮಲೆನಾಡಿನ ಜೀವನ ಕ್ರಮದ ಒಳನೋಟಗಳನ್ನು
ತಿಳಿಸುವ ಕೆ.ವಿ. ಸುಬ್ಬಣ್ಣ ಅವರ “ಅವರು ನೀಡಿದ ದೀಪ” ಕೃತಿ.
*
ಮೈಸೂರು ಪ್ರದೇಶದ ಜನಪದ ಗೀತೆಗಳನ್ನು ಪರಿಚಯಿಸುವ ಸಾ. ಚ. ಮಹದೇವ ನಾಯಕರ- “ಹಳ್ಳಿಯ ಹಾಡುಗಳು”
*
ಎಸ್. ಕೆ. ಕರೀಂಖಾನ ಅವರ – “ಜಾನಪದ ಗೀತ ಸಂಗ್ರಹಗಳು”
*
ಕೆ. ಆರ್. ಲಿಂಗಪ್ಪ ಅವರ – “ಮಾನೌಮಿಯ ಪದಗಳು”
*ಆರ್.
ಎಸ್. ಪಂಚಮುಖಿ ಅವರು ಸಂಪಾದಿಸಿದ “ಕರ್ನಾಟಕ ಜನಪದ ಗೀತೆಗಳು”
*
ದೊಡ್ಡ ಭಾವೆಪ್ಪ ಮೂಗಿ ಅವರ – “ಕಿತ್ತೂರು ಕಾಳಗ”
ಇತ್ಯಾದಿ ಇವು ಸ್ವಾತಂತ್ರ್ಯೋತ್ತರ ಆರಂಭದ ಕಾಲದಲ್ಲಿ
ಬಂದ ಜಾನಪದ ಕೃತಿಗಳಾಗಿವೆ. ಹೀಗೆ ಸುಮಾರು 1950 ರಿಂದ 1965 ರ ಅವಧಿಯಲ್ಲಿ ನಡೆದ ಗೀತ ಸಾಹಿತ್ಯದ
ಅಧ್ಯಯನದಲ್ಲಿ ಲಾವಣಿಗಳು, ತತ್ವಪದಗಳು, ಗೀಗೀ ಪದಗಳಂತಹ ಅನೇಕ ಕಿರು ಸಂಕಲನಗಳು ಸೇರುತ್ತವೆ.
ಹೀಗೆ 1960 ರ ದಶಕದವರೆಗೆ ಕನ್ನಡ ಜಾನಪದ ಕ್ಷೇತ್ರದಲ್ಲಿ
ನಡೆದ ಅಧ್ಯಯನಗಳು ಸ್ವಂತ ಆಸಕ್ತಿಯಿಂದ ನಡೆದವುಗಳೇ ಹೊರತು ಆ ಸಂಗ್ರಹಕಾರರಿಗೆ ಯಾವುದೇ ವ್ಯವಸ್ಥಿತ
ತರಬೇತಿ ಇರಲಿಲ್ಲ. ಹಳ್ಳಿಯ ಜನರಲ್ಲಿ ಅಡಗಿರುವ ಈ ಶ್ರೀಮಂತ ಜನಪದ ಸಂಪತ್ತು ಅಳಿದು ಹೋಗಬಾರದು ಎಂಬ
ಆತಂಕ ಮತ್ತು ಅದನ್ನು ಉಳಿಸುವ ಕಳಕಳಿಯ ಹಿನ್ನಲೆಯಲ್ಲಿ ಆರಂಭದ ಸಂಗ್ರಹ ಕಾರ್ಯಗಳು ನಡೆದದ್ದಾದರೂ ಸಾಹಿತ್ಯಿಕ
ದೃಷ್ಟಿಯಿಂದ ಅತ್ಯುತ್ತಮ ಎನ್ನಬಹುದಾದ ಸಂಕಲನಗಳು 1960 ರ ದಶಕದಲ್ಲಿ ಪ್ರಕಟವಾಗಿವೆ.
1960 ರ ನಂತರ ಹೊಸ ಪೀಳಿಗೆಯ ವಿದ್ಯಾವಂತರು ಮತ್ತು
ತಜ್ಞರು ಜಾನಪದದಲ್ಲಿ ಪ್ರವೇಶ ಪಡೆದರು ಜೊತೆಗೆ ಜಾನಪದದ ಪೂರ್ಣಾವಧಿಯ ಅಧ್ಯಯನ ಮತ್ತು ಸಂಶೋಧನಾ ಕಾರ್ಯಗಳು
ನಡೆಯ ತೊಡಗಿದವು. ಹಾಗಾಗಿ ಜಾನಪದ ಅಧ್ಯಯನ ಮತ್ತಷ್ಟು ವೈಜ್ಞಾನಿಕವಾಗಿ ವಿಸ್ತೃತವಾಗಿ ನಡೆಯತೊಡಗಿತು.
1966 ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ
ಜಾನಪದ ಸಾಹಿತ್ಯವನ್ನು ಕನ್ನಡ ಎಂ.ಎ., ತರಗತಿಗಳಿಗೆ ಐಚ್ಚಿಕ ವಿಷಯವಾಗಿ ಗೊತ್ತು ಮಾಡಲಾಯಿತು. ನಂತರ
1972 ರಿಂದ ಸ್ನಾತಕೊತ್ತರ ಜಾನಪದ ಡಿಪ್ಲೋಮಾ ಶಿಕ್ಷಣವನ್ನು ಜಾರಿಗೆ ತರಲಾಯಿತು. 1974 ರಿಂದ ಜಾನಪದ
ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾಯಿತು. ಹೀಗೆ ಕ್ರಮವಾಗಿ
ಜಾನಪದ ಅಧ್ಯಯನವು ಈ ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸ್ಥಾನ ಪಡೆದುಕೊಂಡು
ಜಾನಪದ ಸಂಬಂಧವಾದ ಚಟುವಟಿಕೆಗಳಿಗೆ ಪ್ರೇರಣೆ ನೀಡಿತು. ಈ ಹಿನ್ನಲೆಯಲ್ಲಿ ಜಾನಪದ ವಸ್ತು ಸಂಗ್ರಹಾಲಯ
ಪ್ರಾರಂಭವಾಯಿತು. ಮೈಸೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಿಂದ “ಜಾನಪದ ಮಾಲೆ” ಎಂಬ ಹೆಸರಿನಲ್ಲಿ
75 ಕ್ಕೂ ಹೆಚ್ಚಿನ ಜಾನಪದ ಗ್ರಂಥಗಳು ಪ್ರಕಟಗೊಂಡವು. ಇದಲ್ಲದೆ ಜನಪದ ಕಲಾ ಮಹೋತ್ಸವಗಳು, ಕಾರ್ಯಾಗಾರಗಳು,
ವಿಚಾರ ಸಂಕಿರಣಗಳನ್ನು ನಡೆಸುತ್ತಾ ಬರಲಾಗಿದೆ. ಹೀಗೆ ಕರ್ನಾಟಕ ಜಾನಪದ ಅಧ್ಯಯನಕ್ಕೆ ಮೈಸೂರು ವಿಶ್ವವಿದ್ಯಾಲಯ
ಒಳ್ಳೆಯ ಸ್ಪೂರ್ತಿಯನ್ನು ನೀಡಿತು.
ನಂತರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ
ವಿಶ್ವವಿದ್ಯಾಲಯ ಧಾರವಾಡ, ಗುಲ್ಬರ್ಗಾ ವಿಶ್ವವಿದ್ಯಾಲಯಗಳು ಕೂಡಾ ಜನಪದ ಸಾಹಿತ್ಯದಲ್ಲಿ ಎಂ.ಎ. ಶಿಕ್ಷಣವನ್ನು
ಪ್ರಾರಂಭಿಸಿದವು. ಕರ್ನಾಟಕ ವಿಶ್ವವಿದ್ಯಾಲಯದಿಂದ ಜಾನಪದ ಸಮ್ಮೇಳನಗಳು ನಡೆಯುತ್ತಿದ್ದು ಜಾನಪದದ ಚಟುವಟಿಕೆಗಳಿಗೆ
ಒಳ್ಳೆಯ ಚಾಲನೆ ನೀಡಿವೆ. ಅದೇರೀತಿ ಕನ್ನಡ ವಿಶ್ವವಿದ್ಯಾಲಯ ಹಂಪಿ ಅಲ್ಲಿಯೂ ಪ್ರತ್ಯೇಕ ಜಾನಪದ ಅಧ್ಯಯನ
ವಿಭಾಗವಿದ್ದು ಅದರಡಿಯಲ್ಲಿ ದೇಸಿ ಸಮ್ಮೇಳನಗಳು ಮತ್ತು ಜಾನಪದ ಸಂಶೋಧನೆಯ ಕಾರ್ಯ ನಡೆಯುತ್ತಿದೆ. ಇತ್ತೀಚಿಗೆ
2011 ರಲ್ಲಿ ವಿಶ್ವದಲ್ಲಿಯೇ ಪ್ರಥಮ ಜಾನಪದ ವಿಶ್ವವಿದ್ಯಾಲಯವೆನಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗೊಟಗೋಡಿಯಲ್ಲಿ ಸ್ಥಾಪನೆಯಾಗಿದ್ದು ಜಾನಪದ ಅಧ್ಯಯನಕ್ಕೆ ಇನ್ನಷ್ಟು
ಪುಷ್ಟಿಬಂದಿದೆ.
70 ರ ದಶಕದಲ್ಲಿ ಅತ್ಯಂತ ಮಹತ್ವದ ಅಧ್ಯಯನ ನಡೆದಿರುವುದು
ವೃತ್ತಿಗಾಯಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಹಿನ್ನಲೆಯಲ್ಲಿ ಪಿ.ಕೆ. ರಾಜಶೇಖರ ಅವರು ಮಲೆಯ ಮಾದೇಶ್ವರ
ಎಂಬ ಎರಡು ಬೃಹತ್ ಸಂಪುಟಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. 1973 ರಲ್ಲಿ ಇವರ ಮೊದಲ ಸಂಪುಟ ಪ್ರಕಟವಾಗಿದೆ.
ಇವು ಕಂಸಾಳೆ ಗಾಯಕ ಸಂಪ್ರದಾಯದ ಸುದೀರ್ಘ ಮಹಾಕಾವ್ಯಗಳಾಗಿವೆ. 1973 ರಲ್ಲಿಯೇ ಕನ್ನಡ ಜಾನಪದದ ಇನ್ನೊಂದು
ಮಹಾಕಾವ್ಯವಾದ ಮಂಟೇಸ್ವಾಮಿ ಕಾವ್ಯವನ್ನು ಜೀ.ಶಂ.ಪ. ಅವರು ಸಂಪಾದಿಸಿದರು. ಅದೇ ರೀತಿ ಕನ್ನಡ ವಿಶ್ವವಿದ್ಯಾಲಯದಲ್ಲಿ
ನಡೆದ ಮಲೇಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಕುಮಾರರಾಮ ಮತ್ತು ಕೃಷ್ಣಗೊಲ್ಲರ ಮಹಾಕಾವ್ಯ ಇವು ವಿವಿಧ
ವೃತ್ತಿಗಾಯಕರ ಪರಂಪರೆ ಮತ್ತು ಕಾವ್ಯ ಸ್ವರೂಪವನ್ನು ಪರಿಚಯಿಸುವ ಅಧ್ಯಯನಗಳಾಗಿದ್ದು, ಜಾನಪದ ಅಧ್ಯಯನಕ್ಕೆ
ಹೊಸ ಆಯಾಮವನ್ನು ತಂದು ಕೊಟ್ಟಿವೆ.
ಅಂತೆಯೇ ಜಾನಪದೀಯ ಹಾಗೂ ಸಾಹಿತ್ಯ ದೃಷ್ಟಿಯಿಂದ
ಉತ್ತಮವೆನಿಸುವ ಅನೇಕ ಗೀತೆ, ಲಾವಣಿ, ಕಥನ ಕವನ ಕಾವ್ಯ ಸಂಗ್ರಹಗಳು ಈ ಅವಧಿಯಲ್ಲಿ ಪ್ರಕಟವಾದವು. ಈ
ಹಿನ್ನಲೆಯಲ್ಲಿ ಎಚ.ಎಲ್. ನಾಗೇಗೌಡರ ನೋಬಾನೆ ಚಿಕ್ಕಮ್ಮನ ಪದಗಳು, ಪ್ರೊ. ಡಿ. ಲಿಂಗಯ್ಯ ಅವರ ಬಯಲು
ಸೀಮೆಯ ಜನಪದ ಗೀತೆಗಳು, ಡಾ.ಚಂದ್ರಶೇಖರ ಕಂಬಾರ ಅವರ ಬಯಲು ಸೀಮೆಯ ಲಾವಣಿಗಳು, ಡಾ. ಮರುಳಸಿದ್ಧಪ್ಪನವರ
“ಲಾವಣಿಗಳು”, ಕ್ಯಾತನಹಳ್ಳಿ ರಾಮಣ್ಣರ “ಪ್ಲೀಟರು ಸಂಗ್ರಹಿಸಿದ ಐದು ಲಾವಣಿಗಳು” ಈ ಸಂಕಲನಗಳು ಹೊರಬಂದಿರುವುದನ್ನು
ಗಮನಿಸಬಹುದು.
“ಸುವರ್ಣ ಸಂಚಯ” ಹಾಗೂ “ಹೊನ್ನ ಬಿತ್ತೇವು ಹೊಲಕೆಲ್ಲ”
ಈ ಎರಡು ಬೃಹತ್ ಗ್ರಂಥಗಳು ಜಾನಪದ ಅಧ್ಯಯನಕ್ಕೆ ಹೊಸ ಚಾಲನೆಗ ನೀಡಿದವು. ಸುವರ್ಣ ಸಂಚಯ ಎಂಬುದು ಮೈಸೂರು
ವಿಶ್ವವಿದ್ಯಾಲಯದ ಸಯವರ್ಣ ಮಹೋತ್ಸವದ ಅಂಗವಾಗಿ ನಡೆದ “ ಕನ್ನಡ ಲೇಖಕರ ಸಮ್ಮೇಳನದ ಕಾರ್ಯರೂಪಗಳ ಫಲಶೃತಿ.
ಈ ಸಮ್ಮೇಳನದ ಕನ್ನಡ ಜನಪದ ಸಾಹಿತ್ಯದ ವಿವಿಧ ಮುಖಗಳು ಎಂಬ ಗೋಷ್ಠಿಂiÀiಲ್ಲಿ ಮಂಡಿಸಲಾದ ಪ್ರಬಂಧಗಳಲ್ಲಿ
ಡಾ. ಹಾ.ಮಾ. ನಾಯಕರ ಜನಪದ ಸಾಹಿತ್ಯ ಮತ್ತು ಅದರ ಸ್ವರೂಪ ಎಂಬ ಲೇಖನವು ಜನಪದ ಮತ್ತು ಜಾನಪದದ ಬಗ್ಗೆ
ಒಂದು ಖಚಿತ ಪರಿಕಲ್ಪನೆ ನೀಡಿತು ನಂತರ ಜಾನಪದ ಅಧ್ಯಯನಗಳಿಗೆ ಒಂದು ಶಾಸ್ತ್ರೀಯ ಚೌಕಟ್ಟನ್ನು ಹಾಕಿಕೊಟ್ಟಿತು.
ಅಲ್ಲದೆ ಈoಟಞಟoಡಿeಪದಕ್ಕೆ ಸಂವಾದಿಯಾಗಿ ಜಾನಪದ ಎಂಬ ಪದವನ್ನು ಹಾ.ಮಾ.ನಾಯಕರು ಟಂಕಿಸಿದರು.
ನಂತರ
1971 ರಲ್ಲಿ ಪ್ರಕಟವಾದ ಹಾ.ಮಾ.ನಾ. ಅವರ ಜಾನಪದ ಸ್ವರೂಪ
ಕೃತಿ ಮತ್ತು ಕನ್ನಡ ಜಾನಪದಗ್ರಂಥಸೂಚಿ ಎಂಬ ಗ್ರಂಥಗಳು ಜಾನಪದ ಅಧ್ಯಯನದ ಮೈಲುಗಲ್ಲುಗಳೆನ್ನಬಹುದು.
“ಜಾನಪದ ಸ್ವರೂಪ”ದಲ್ಲಿ 4 ಮಹತ್ವದ ಲೇಖನಗಳಿದ್ದು, ಅಲ್ಲಿ ಜಾನಪದ ಪರಿಕಲ್ಪನೆ, ಅಧ್ಯಯನದ ಇತಿಹಾಸ,
ಜಾನಪದ ಒಳಗೊಳ್ಳುವ ವಿಷಯಗಳು, ಜಾನಪದ ವರ್ಗೀಕರಣ ಮೊದಲಾದ ಉಪಯುಕ್ತ ವಿಷಯಗಳನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ.
“ಕನ್ನಡ ಜನಪದ ಗ್ರಂಥಸೂಚಿ”ಯಲ್ಲಿ 1974 ರ ವರೆಗೆ ಕನ್ನಡದಲ್ಲಿ ಪ್ರಕಟವಾದ ಪ್ರತಿಯೊಂದು ಜನಪದ ಕೃತಿಯ
ಪರಿಚಯವನ್ನು ಸಂಕ್ಷಿಪ್ತವಾಗಿ ತಿಳಿಸಲಾಗಿದೆ. ಇದರಲ್ಲಿ ಒಟ್ಟು 532 ಜಾನಪದೀಯ ಗ್ರಂಥಗಳ ಸ್ತೂಲ ಪರಿಚಯ
ದೊರೆಯುತ್ತದೆ.
ಗೋ.ರು.ಚ.
ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ “ಹೊನ್ನಬಿತ್ತೇವು ಹೊಲಕೆಲ್ಲ” ಕೃತಿಯು 1967 ರಲ್ಲಿ ತರೀಕೆರೆಯಲ್ಲಿ
ನಡೆದ ಮೊದಲನೆಯ ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನದ ಸ್ಮರಣ ಗ್ರಂಥ. ಈ ಕೃತಿಯ 9 ಭಾಗಗಳಲ್ಲಿ
58 ಲೇಖನಗಳಿವೆ. ತರಿಕೇರಿಯ ಇತಿಹಾಸ, ಅಲ್ಲಿನ ಪಾಳೆಗಾರರ ಜೀವನ ಪರಿಚಯದ ಲೇಖನಗಳೊಂದಿಗೆ ಜನಪದ ಸಾಹಿತ್ಯವನ್ನು
ವಿವಿಧ ನಿಟ್ಟಿನಿಂದ ವಿವೇಚಿಸುವ ಅಪೂರ್ವ ಲೇಖನಗಳಿದ್ದು, ಇವು ಜನಪದ ಸಾಹಿತ್ಯದ ಒಂದು ಸಮಗ್ರ ನೋಟವನ್ನು
ನೀಡುತ್ತವೆ.
ದೇಜಗೌ
ಅವರು 1966 ರ ಸುಮಾರಿಗೆ ಪ್ರಕಟಿಸಿದ “ಜನಪದ ಸಾಹಿತ್ಯ ಸಮೀಕ್ಷೆ” ಎಂಬ ಗ್ರಂಥಕ್ಕೆ ವಿಸ್ತೃತ ಮುನ್ನುಡಿ
ಬರೆಯುವ ಮೂಲಕ ಜಾನಪದದ ಸಮಗ್ರ ಸ್ವರೂಪವನ್ನು ಸಮರ್ಥವಾಗಿ ವಿವರಿಸಿದ್ದಾರೆ. ಜನ ಜೀವನದಲ್ಲಿ ಜಾನಪದ
ಹೇಗೆ ಹಾಸುಹೊಕ್ಕಾಗಿದೆ?, ಜಾನಪದ ಸಂಗ್ರಾಹಕಾರರು
ಹೇಗೆ ಸಮಸ್ತ ವಸ್ತು ವಿಷಯ ಸಂಗ್ರಹಿಸಬೇಕು?, ಹಾಗೆ ಸಂಗ್ರಹಿಸುವ ಮಹತ್ವವೇನು ಎಂಬ ಅಂಶಗಳನ್ನು ಚರ್ಚಿಸಿ
ಜಾನಪದ ಅಧ್ಯಯನಕ್ಕೆ ಹೊಸ ಸ್ಪೂರ್ತಿ ತುಂಬಿದ್ದಾರೆ.
ಅದೇ
ರೀತಿ ಎಂ. ಚಿದಾನಂದ ಮೂರ್ತಿ ಅವರ ಬರಹಗಳು ಜಾನಪದವನ್ನು ಯಾವುದಾದರು ಒಂದು ಅಂತರ್ ಶಿಸ್ತೀಯ ದೃಷ್ಟಿಯಿಂದ
ಅಧ್ಯಯನ ಮಾಡುವುದಕ್ಕೆ ಮಾದರಿಯಾದವು. ಜಾನಪದಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಎಂಬ ಕೃತಿಯನ್ನು ಚಿದಾನಂದ
ಮೂರ್ತಿ ಬರೆದಿದ್ದಾರೆ.
ಜೀ.ಶಂ.ಪ.,
ಕ.ರಾ.ಕೃ ಅವರಂತೆಯೇ ಜಾನಪದದಲ್ಲಿ ಸಮೃದ್ಧವಾದ ಕ್ಷೇತ್ರಕಾರ್ಯ ಮಾಡಿ ವೈವಿಧ್ಯ ಪೂರ್ಣವಾದ ಜನಪದ ಸಾಹಿತ್ಯವನ್ನು
ಬೆಳಕಿಗೆ ತರಲು ವಿಷೇಶವಾಗಿ ಶ್ರಮಿಸಿದವರಲ್ಲಿ ಎಲ್.ಆರ್. ಹೆಗಡೆಯವರು ಮುಖ್ಯರು. ಇವರು ಒಟ್ಟು 32
ಜಾನಪದ ಗ್ರಂಥಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ತಿಮ್ಮಕ್ಕನ ಪದಗಳು, ಕೆಲವು ಲಾವಣಿಗಳು,
ನಮ್ಮ ಜನಪದ ಕತೆಗಳು, ಮಲೆನಾಡಿನ ಕತೆಗಳು, ಪರಮೇಶ್ವರಿಯ ಪದಗಳು, ಗುಮ್ಮಟೆ ಪದಗಳು, ಉತ್ತರ ಕನ್ನಡ
ಜನಪದ ಕತೆಗಳು, ಹಾಲಿನ ತೆನೆ, ಮೂಢನಂಬಿಕೆಗಳು, ಜಾನಪದ ಕಥೆಗಳು, ಜನಪದ ಸಾಹಿತ್ಯದಲ್ಲಿ ಮದುವೆ, ಹಾಡುಂಟೆ
ನನ್ನ ಮಡಿಲಲ್ಲಿ, ಮುಕರಿ ಮತ್ತು ಹೊಲೆಯರ ಪದಗಳು, ಜನಪದ ಸಾಹಿತ್ಯ, ಗೊಂಡರ ಪದಗಳು ಸುವಿಸುವ್ವಿ ಸುವ್ವಾಲೆ
ಮುಂತಾದವು ಇವರ ಮುಖ್ಯ ಕೃತಿಗಳಾಗಿವೆ.
ಇದಲ್ಲದೆ
ಉತ್ತರ ಕರ್ನಾಟಕದಲ್ಲಿ ಜನಪದ ಸಾಹಿತ್ಯ ಸಂಗ್ರಹ ಮತ್ತು ವಿಶ್ಲೇಷಣೆಯ ಕ್ಷೇತ್ರದಲ್ಲಿ ದುಡಿದವರಲ್ಲಿ
ಎಂ.ಎಸ್.ಲಠ್ಠೆ, ಜಿ.ಬಿರಾದಾರ, ಎಂ.ಎಂ. ಕಲಬುರ್ಗಿ, ಸೋಮಶೇಖರ ಇಮ್ರಾಪೂರ, ಚನ್ನಣ್ಣ ವಾಲೀಕಾರ, ದೇವೇಂದ್ರ
ಕುಮಾರ ಹಕಾರಿ, ವೃಷಬೇಂದ್ರ ಸ್ವಾಮಿ, ಶಿವಾನಂದ ಗುಬ್ಬಣ್ಣನವರ್, ಎಂ.ಎಸ್. ಸುಂಕಾಪುರ, ಹೀರೇಮಠ ಮೊದಲಾದ
ವಿದ್ವಾಂಸರು ಮುಖ್ಯರಾಗುತ್ತಾರೆ.
ಭಾಗ -2
ಸ್ವತಂತ್ರ್ಯೋತ್ತರ ಆರಂಭದ ದಿನಗಳಲ್ಲಿ ನಡೆದ
ಜಾನಪದ ಅಧ್ಯಯನಗಳು ಬಹುಪಾಲು ಜನಪದ ಸಾಹಿತ್ಯದ ಅದರಲ್ಲೂ ವಿಶೇಷವಾಗಿ ಜನಪದ ಗೀತ ಪ್ರಕಾರಕ್ಕೆ ಸಂಬಂಧಿಸಿದಂತೆಯೇ
ನಡೆದಿವೆ. ಆದರೆ ಜಾನಪದ ಕ್ಷೇತ್ರದಲ್ಲಿ ವಿದ್ವಾಂಸರ ಆಸಕ್ತಿ ನೆಲೆಗೊಂಡ ನಂತರ ಜನಪದ ಗೀತೆಗಳ ಜೊತೆಗೆ
ಜನಪದ ಸಾಹಿತ್ಯದ ಇನ್ನಿತರ ಪ್ರಕಾರಗಳಾದ ಜನಪದ ಕಥೆ, ಗಾದೆ,ಒಗಟು, ಒಡಪುಗಳ ಬಗೆಗೆ ಹಾಗೂ ಜಾನಪದದ ಇನ್ನಿತರ
ವಿಷಯಗಳಾದ ಜನಪದ ವೈದ್ಯ, ನಂಬಿಕೆ ಆಚರಣೆ-ಸಂಪ್ರದಾಯಗಳ ಬೆಗೆಗೆ, ಜನಾಂಗಗಳ ಬಗೆಗೆ ಹೀಗೆ ಇನ್ನು ಮುಂತಾದ
ವಿಷಯಗಳ ಬಗ್ಗೆ ಗಮನ ಹರಿಸಲಾಗಿದೆ.
ಜನಪದ
ಕಥೆಗಳನ್ನು ಕುರಿತ ಅಧ್ಯಯನಗಳು:
ಅಲ್ಲೊಂದು ಇಲ್ಲೊಂದರಂತೆ ಕಾಣಿಸಿಕೊಳ್ಳುತ್ತದ್ದ
ಕಥಾ ಸಂಗ್ರಹಗಳು 70 ರ ದಶಕದಲ್ಲಿ ವಿಫುಲವಾಗಿ ಕನ್ನಡ ಜನಪದ ಕಥೆಗಳು ಪ್ರಕಟವಾದವು. ಈ ಕಥೆಗಳ ಸಂಗ್ರಹದಲ್ಲಿ
ಏನೇ ಲೋಪದೋಷಗಳಿದ್ದರೂ ಜಾನಪದ ಅಧ್ಯಯನದ ದೃಷ್ಟಿಯಿಂದ ಇವೆಲ್ಲಕ್ಕೂ ಒಂದು ಮೌಲ್ಯವಿದೆ.
ಕಥಗಳ ಸಂಗ್ರಹಕ್ಕೆ ಜೀ.ಶಂ.ಪ ಅವರ “ಕನ್ನಡ ಜನಪದ
ಕಥಗಳು” ಎಂಬ ಕೃತಿ ಉತ್ತಮ ತಳಹದಿಯನ್ನು ಒದಗಿಸಿತು. ಜೀ.ಶಂ.ಪ ಅವರಿಗೂ ಮೊದಲೇ ಉತ್ತಮ ಕಥಾ ಸಂಗ್ರಹಗಳನ್ನು
ಪ್ರಕಟಿಸಿದ ಕೀರ್ತಿ ದವಳಶ್ರೀಯವರಿಗೆ ಸಲ್ಲುತ್ತದೆ. “ಜನಪದ ಕಥಾಮೃತ” ಎಂಬ ಎರಡು ಸಂಪುಟಗಳಲ್ಲಿ ದವಳಶ್ರೀ
ಅವರು ಕನ್ನಡದ ಅತ್ಯುತ್ತಮ ಕಥಾ ಮಾದರಿಯನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಜನಪದ ಕಥೆಗಳ ಸಂಗ್ರಹಕ್ಕೆ ಸಂಬಂಧಿಸಿದರಂತೆ
ನಡೆದ ಅಧ್ಯಯನಗಳ ಒಂದು ದೊಡ್ಡ ಪಟ್ಟಿಯನ್ನೆ ಕೊಡಬಹುದು.
ರಾಗೌ
ಅವರ – “ಕರ್ನಾಟಕ ಜಾನಪದ ಕಥೆಗಳು,
ಬಳದರೆ
ಬೋರೇಗೌಡರ – “ಗ್ರಾಮಾಂತರ ಕಥೆಗಳು”
ಎಚ್.
ಜೆ. ಲಕ್ಕಪ್ಪಗೌಡರ – “ಜನಪದ ಕಥಾವಳಿ”
ಪ್ರೊ,
ಡಿ. ಲಿಂಗಯ್ಯ ಅವರ – ಪಡಿನೆರೆಳು, ಮಣ್ಣಿನ ಮಿಡಿತ, ಜನಪದ ಕಥಾ ಸಂಗಮ ಎಂಬ ಮೂರು ಸಂಗ್ರಹಗಳು.
ಜಿ.ವಿ.ದಾಸೇಗೌಡ
- ಹಾವಾಗಿ ಹರಿದ ಅಣ್ಣಯ್ಯ
ಸಿಂಪಿ
ಲಿಂಗಣ್ಣ ಅವರ - ಉತ್ತರ ಕರ್ನಾಟಕದ ಜನಪದ ಕತೆಗಳು,
ಕೆ.
ವಿರೂಪಾಕ್ಷಗೌಡ ಮತ್ತು ಕಲ್ಲೇಶ ಇಟ್ಟಗಿಯವರ - ನಮ್ಮ ಹಳ್ಳಿಯ ಕಥಗಳು.
ಎಲ್.
ಆರ್. ಹೆಗಡೆ ಅವರ – ಉತ್ತರ ಕನ್ನಡ ಜನಪದ ಕಥೆಗಳು, ನಮ್ಮ ಜನಪದ ಕಥೆಗಳು, ಜನಪದ ಮತ್ತು ಗಿರಿಜನ ಕಥೆಗಳು,
ಸಿದ್ದಿಯರ ಕಥೆಗಳು.
ಇನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ
ಗಮನ ಸೆಳೆಯುವಂತಹ ಕಥಾ ಸಂಗ್ರಹಗಳು ಪ್ರಕಟವಾಗಿಲ್ಲವಾದರೂ ಅಲ್ಲಿಯ ಸಂಸ್ಕøತಿಗೆ ವಿಶಿಷ್ಟವಾದ ತುಳು
ಪಾಡ್ದನದ ಕಥೆಗಳು, ಭೂತಾರಾಧನೆಯ ಕಥೆಗಳು ಇಂತವುಗಳು ಪ್ರಕಟವಾಗಿವೆ. ಇವು ಜನಪದ ಕಥೆಗಳಾಗಿರದೆ ಐತಿಹ್ಯದ
ಗುಂಪಿಗೆ ಸೇರುವ ಕಥೆಗಳೆಂದು ಇವುಗಳನ್ನು ಗುರುತಿಸಲಾಗಿದೆ.
70 ರ ದಶಕದಲ್ಲಿ ಜನಪದ ಕಥೆಗಳನ್ನು ದೊಡ್ಡ ಪ್ರಮಾಣದಲ್ಲಿ
ಸಂಗ್ರಹಿಸಿ ಸಂಕಲನಗಳಲ್ಲಿ ಹೊರ ತಂದವರ ಪೈಕಿ ಸಿ.ವೀರಣ್ಣ ಮತ್ತು ಕೆ.ವೈ ಶಿವಕುಮಾರ ಪ್ರಮುಖರು. ಶಿವಕುಮಾರ
ಅವರು– 1976 ರಲ್ಲಿ “ಎಪ್ಪತ್ತೊಂದು ಜನಪದ ಕಥೆಗಳು” ಹಾಗೂ ಸಿ.ವೀರಣ್ಣ ಅವರು - “ಒಬ್ಬನೇ ಹೇಳಿದ ಇಪ್ಪತ್ತೆರೆಡು
ಜನಪದ ಕಥೆಗಳೂ” ಎಂಬ ಹೆಸರಿನಲ್ಲಿ ಸಂಕಲನವನ್ನು ಹೊರತಂದಿದ್ದಾರೆ.
ಅದೇ
ರೀತಿ, 1981 ರಲ್ಲಿ ಬಂದ ಜೀನಹಳ್ಳಿ ಸಿದ್ಧಲಿಂಗಪ್ಪ ಅವರ – “ಕಥೆ ಕೇಳೇ ಗಬಲಾಡಿ”
ಎಂ.ಎ.
ಜಯಚಂದ್ರರ - ಸಂಸಾರಿ ಹೇಚ್ಚೋ ಸನ್ಯಾಸಿ ಹೆಚ್ಚೋ
ಕುರುವ
ಬಸವರಾಜ್ ಅವರ - ಗುಲಗಂಜಿ ಮಾದೇವಿ
ಶಾಂತಿ
ನಾಯಕರ - ಉತ್ತರ ಕನ್ನಡದ ಹವ್ಯಕರ ಜನಪದ ಕಥೆಗಳು.
ಸುಧಾಕರ
ಅವರ - ಶಿವಗಂಗೆ ಸುತ್ತಿನ ಜನಪದ ಕಥೆಗಳು
ಬಸವರಾಜ
ನೆಲ್ಲಿಸರ ಅವರ - “ಹಠಮಾರಿ ಹೆಣ್ಣು ಮತ್ತು ಇತರ ಜನಪದ ಕಥೆಗಳು
ಪುಟ್ಟ
ಸೋಮರಾಧ್ಯರ - ತಳಗವಾದಿ ಮಲ್ಲವ್ವ ಹೇಳಿದ ಪರಸಮಗಳು (1982)
ಎಲ್.ಆರ.
ಹೆಗಡೆ ಅವರ - ಮಲೆನಾಡಿನ ಸೆರಗಿನ ಕಥೆಗಳು
ಜಿ.ವಿಶ್ವೇಶ್ವರಪ್ಪ
ಅವರ – ಚಿತ್ರದುರ್ಗ ಜಿಲ್ಲೆಯ ಜನಪದ ಕಥೆಗಳು
ಮೈಲಹಳ್ಳಿ
ರೇವಣ್ಣ ಅವರ - ಅಡವಿಗುಮಾರ ಮತ್ತು ಇತರ ಜನಪದ ಕಥೆಗಳು (1985)
ಮಲ್ಲಿಕಾರ್ಜುನ
ಅವರ – ಕಲಮರ ಹಳ್ಳಿಯ ಕಥೆಗಳು
ವೈ.ಸಿ.
ಭಾನುಮತಿ ಅವರ – ಇಬ್ಬೀಡಿನ ಜನಪದ ಕಥೆಗಳು (1989)
ಇದಲ್ಲದೆ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ
ಸಂಸ್ಥೆಯು ಕೆಲವು ಕಥಾಸಂಕಲನಗಳನ್ನು ಪ್ರಕಟಿಸುವ ಮೂಲಕ ಕನ್ನಡ ಜನಪದ ಕಥೆಗಳ ಅಧ್ಯಯನಕ್ಕೆ ಉತ್ತಮ ಪ್ರವೇಶವನ್ನು
ದೊರಕಿಸಿಕೊಟ್ಟಿದೆ. ಹೀಗೆ ಮೈಸೂರು ವಿವಿಯಿಂದ ಪ್ರಕಟಗೊಂಡ ಕಥಾ ಸಂಕಲನಗಳೆಂದರೇ; ಕನ್ನಡ ಜನಪದ ಕಥೆಗಳು, ಆಯ್ದ ಜನಪದ ಕಥೆಗಳು, ಸಂಕೀರ್ಣ ಜನಪದ
ಕಥೆಗಳು, ಬೆಳಗಾಂ ಜಿಲ್ಲೆಯ ಜನಪದ ಕಥೆಗಳು, ಬೀದರ ಜಿಲ್ಲೆಯ ಜನಪದ ಕಥೆಗಳು ಈ ರೀತಿಯ ಮುಂತಾದ ಕಥಾ
ಸಂಕಲನಗಳನ್ನು ಮೈಸೂರು ವಿ.ವಿ.ಯಿಂದ ಪ್ರಕಟಗೊಂಡಿವೆ.
ಇದಲ್ಲದೆ ಅನುವಾದದ ಹಿನ್ನಲೆಯಲ್ಲಿಯೂ ಜನಪದ ಕಥಾ
ಸಂಕಲನಗಳು ಪ್ರಕಟವಾಗಿವೆ. ಈ ಹಿನ್ನಲೆಯಲ್ಲಿ
1.
ಶಿವರಾಮ ಕಾರಂತರ ಅನುವಾದಿಸಿದ – ಕಥೆಗಳ ಕೊಪ್ಪರಿಗೆ (1969); ಮೂಲ: ಜೆ.ಸಿ.ಜೈನ್
2.
ದೇ.ಜ.ಗೌ ಅವರು ಅನುವಾದಿಸಿದ - ಭಾರತದ ಜನಪದ ಕಥೆಗಳು (1971)
3.
ಹ.ಕ. ರಾಜೇಗೌಡರ – “ಜಗತ್ತಿನ ಜನಪದ ಕಥೆಗಳು” (1980)
4.
ಗೌರಮ್ಮ ಕೆ. ಬಸವಯ್ಯನವರ – “ದೇಶವಿದೇಶದ ಜನಪದ ಕಥೆಗಳು”
ಈ ಅನುವಾದ ಸಂಕಲನಗಳು ಗಮನಾರ್ಹ
ಪ್ರಯತ್ನಗಳಾಗಿವೆ.
ಹೀಗೆ
ಜನಪದ ಕಥೆಗಳ ಕುರಿತಂತೆ ವ್ಯಾಪಕ ನೆಲೆಯಲ್ಲಿ ಸಂಗ್ರಹ ಸಂಪಾದನೆಯ ಕಾರ್ಯಗಳು ನಡೆದಿದ್ದು ಸಾಕಷ್ಟು
ಜನಪದ ಕಥಾ ಸಂಕಲನಗಳು ಬಂದಿವೆ.
ಜನಪದ
ಗಾದೆಗಳನ್ನು ಕುರಿತ ಅಧ್ಯಯನಗಳು: ಗಾದೆಗಳಿಗೆ ಸಂಬಂಧಿಸಿದಂತೆಯೂ ಜನಪದ ಸಾಹಿತ್ಯದ ಅಭ್ಯಾಸದ ಆರಂಭದಿಂದಲೂ
ಸಾಕಷ್ಟು ಆಸಕ್ತಿ ವ್ಯಕ್ತವಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಗಾದೆಗಳ ಸಂಗ್ರಹಗಳು ಪ್ರಕಟವಾಗಿವೆ.
ಈ ಹಿನ್ನಲೆಯಲ್ಲಿ ನೋಡುವುದಾದರೆ;
*
ಎಚ್.ಎಸ್. ಅಚ್ಚಪ್ಪನವರ –“ಗ್ರಂಥಸ್ತ ಗಾದೆಗಳು” ಎಂಬ ಪುಸ್ತಕದಲ್ಲಿ 165 ಕ್ಕು ಹೆಚ್ಚಿನ ಗ್ರಂಥಗಳಿಂದ
ಆಯ್ದ 10.000 ಕ್ಕೂ ಹೆಚ್ಚು ಗಾದೆಗಳಿವೆ.
*
ರಾಗೌ ಹಾಗೂ ಸುಧಾಕರ ಅವರ- “ನಾಲ್ ನುಡಿ-ನಾಣ್ ನುಡಿ” ಎಂಬ ಸಂಗ್ರಹದಲ್ಲಿ ಕನ್ನಡ ತೆಲಗು ಮಲಯಾಳಂನ
ಸಮಾನ ಗಾದೆಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ.
*ಎ.ಕೆ.ರಮಾನುಜನ್
ಅವರ – “ಗಾದೆಗಳು” ಎಂಬ ಪ್ರಸಾರೋಪನ್ಯಾಸ ಮಾಲೆಯ ಪುಸ್ತಕದಲ್ಲಿ ಗಾದೆಗಳ ಉಗಮ, ವಿಕಾಸ, ಸ್ವರೂಪ ಮತ್ತು
ಅವುಗಳ ಪ್ರಾಚೀನತೆ ಮುಂತಾದವುಗಳ ಬಗ್ಗೆ ಖಚಿತ ಅಭಿಪ್ರಾಯ ನೀಡಿದ್ದಾರೆ. ಅದೇರೀತಿ;
*
ರಾಗೌ ಅವರ- ನಮ್ಮ ಗಾದೆಗಳು(1973)
*
ಬಿ.ಎ. ವಿವೇಕ ರೈ ಅವರ – ತುಳುಗಾದೆಗಳು (1971)
*
ಸುಧಾಕರ ಅವರ - ನಮ್ಮ ಸುತ್ತಿನ ಗಾದೆಗಳು (1973)
*
ಲಠ್ಠೆ ಅವರ – ಉತ್ತರ ಕರ್ನಾಟಕದ ಗಾದೆಗಳು
*
ಕಾಳೇಗೌಡ ನಾಗವಾರ ಅವರ - ಬೀದಿ ಮಕ್ಕಳು ಬೆಳದೊ
*
ಬಿ.ಕೃಷ್ಣಪ್ಪರೆಡ್ಡಿ ಅವರ – ಗ್ರಾಮೀಣ ಗಾದೆಗಳು (1981)
*
ಸಣ್ಣರಾಮ ಅವರ - ಲಂಬಾಣಿ ಗಾದೆಗಳು (ಲಿಪಿಯೇ ಇರದ ಲಂಬಾಣಿಗರ 200 ಕ್ಕೂ ಹೆಚ್ಚಿನ ಗಾದೆಗಳನ್ನು ಕನ್ನಡ
ಅನುವಾದದೊಡನೆ ಸಣ್ಣರಾಮ ಅವರು ಈ ಕೃತಿಯಲ್ಲಿ ನೀಡಿದ್ದಾರೆ.)
*
ಪಿ.ಕೆ. ರಾಜಶೇಖರ ಅವರ - ಭೂಮಿ ತೂಕದ ಮಾತು(1991). ಇದು 1,501 ಗಾದೆಗಳನ್ನು ಒಳಗೊಂಡ ಒಂದು ದೊಡ್ಡ
ಸಂಗ್ರಹ.
*
ಮೈಲಹಳ್ಳಿ ರೇವಣ್ಣ ಅವರ - ದೀಪದ ಕೆಳಗೆ ಕತ್ತಲು (2003)
ಗಾದೆಗಳ ಸಂಗ್ರಹಗಳನ್ನು ಕುರಿತಂತೆ ಮೇಲಿನ ಈ
ಎಲ್ಲ ಕೃತಿಗಳು ಬಂದಿರುವುದನ್ನು ನಾವು ಗಮನಿಸಬಹುದು.
ಜನಪದ
ಒಗಟುಗಳ ಕುರಿತ ಅಧ್ಯಯನಗಳು:
ಜಾನಪದ ಭಾಷಿಕ ಬಗೆಗಳಲ್ಲಿ ಗಾದೆಗಳಂತೆ ಒಗಟುಗಳ
ಬಗೆಗೂ ಕೆಲವು ಸಂಗ್ರಹಕಾರ್ಯಗಳು ನಡೆದಿವೆ. ಸ್ವತಂತ್ರ್ಯ ಪೂರ್ವ ಕಾಲಕ್ಕಿಂತ ಸ್ವಾತಂತ್ರ್ಯೋತ್ತರ
ಕಾಲದಲ್ಲಿಯೇ ಒಗಟುಗಳ ಸಂಗ್ರಹಗಳು ಹೆಚ್ಚು ಸಂಖ್ಯೆಯಲ್ಲಿ ಬಂದಿವೆ. ಕನ್ನಡದಲ್ಲಿ ಒಗಟುಗಳ ಸಂಗ್ರಹಕ್ಕೆ
ಹೊಸ ತುರುವು ಕೊಟ್ಟಿದ್ದು ಜೀ.ಶಂ.ಪ ಅವರ – ಕನ್ನಡ ಒಗಟುಗಳು(1967) ಎಂಬ ಕೃತಿ. ಈ ಕೃತಿ ಪ್ರಕಟವಾದ
ನಂತರ ಒಗಟಿನ ಅನೇಕ ಸಂಕಲನಗಳು ಬಂದಿವೆ. ಅವು ಈ ಕೆಳಗಿನಂತೆವೆ;
*
ಎಚ್.ಜೆ. ಲಕ್ಕಪ್ಪಗೌಡರ – ಒಗಟುಗಳು (1973)
*
ಬಿ.ಎ. ವಿವೇಕ ರೈ ಅವರ – ತುಳು ಒಗಟುಗಳು (1971)
*
ರಾಗೌ ಅವರ - ನಮ್ಮ ಒಗಟುಗಳು
*
ಸೋಮಶೇಖರ ಇಮ್ರಾಪುರ ಅವರ - ಸಾವಿರ ಒಗಟುಗಳು (1976)
*
ಸುಧಾಕರ ಅವರ – ಜನಪದ ಬೆಡಗಿನ ವಚನಗಳು
*
ನಂ ನಾರಾಯಣಗೌಡರ – ಜನಪದ ಒಗಟುಗಳು
*
ಎಂ. ಎಸ್. ಲಠೆ ಅವರ – ಉತ್ತರ ಕರ್ನಾಟಕದ ಒಗಟುಗಳು
*
ವೀರಣ್ಣ ರಾಜೂರು ಮತ್ತು ಇತರರು ಪ್ರಕಟಿಸಿದ – ಜಾನಪದ ಜಾಣ್ಮೆ 1981)
*
ಜೀನಹಳ್ಳಿ ಸಿದ್ದಲಿಂಗಪ್ಪ ಅವರ – “ಜಾನಪದ ಜಾಣಗಣಿತ ಮತ್ತು ಭಾಷಾ ಚಮತ್ಕಾರ”
*
ನಂ. ತಪಸ್ವಿ ಕುಮಾರ ಅವರ – ಕನ್ನಡ ಒಗಟುಗಳ ಸಮೀಕ್ಷೆ (1979)
ಇದಲ್ಲದೆ ಸೋಮಶೇಖರ ಇಮ್ರಾಪೂರ ಅವರು ಜಾನಪದ ಒಗಟುಗಳನ್ನು
ಕುರಿತು ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಜನಪದ
ಒಡಪುಗಳ ಕುರಿತ ಅಧ್ಯಯನಗಳು :
ಜಾನಪದದ ಭಾಷಿಕ ಬಗೆಗಳಲ್ಲಿ ಗಾದೆ, ಒಗಟುಗಳಂತೆ
“ಒಡಪು”ಗಳು ಒಂದು ಬಗೆ. ಒಡಪುಗಳೆಂದರೆ; ಪತಿ-ಪತ್ನಿಯರ ಹೆಸರುಗಳನ್ನು ಹೇಳುವಾಗ ಬಳಸುವ ಪದ್ಯ ರೂಪದ
ಅಥವಾ ಪ್ರಾಸ ರೂಪದ ರಚನೆಗಳು. ಈ ಒಡಪುಗಳನ್ನು ಕುರಿತಂತೆಯೂ ಕೆಲವು ಸಂಗ್ರಹಕಾರ್ಯಗಳು ನಡೆದಿವೆ. ಈ
ಹಿನ್ನಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಒಡಪುಗಳನ್ನು ಸಂಗ್ರಹಿಸಿದವರು ಜ್ಯೋತಿ ಹೊಸೂರ ಅವರ – “ಹೇಳ್ತಿನಿ
ಒಡಪುಕಟ್ಟಿ” (1971) ಎಂಬ ಸಂಗ್ರಹ ಗಮನಾರ್ಹವಾದದ್ದು.
*
ಎಂ.ಎಸ್. ಲಠೆಯವರ – ಉತ್ತರ ಕರ್ನಾಟಕದ ಒಡಪುಗಳು (1974)
*
ಸತ್ಯಾನಂದ ಉಲ್ಲಾಸರ – ಜನಪದ ಒಡಪುಗಳು
*
ಮೈಲಹಳ್ಳಿ ರೇವಣ್ಣ ಅವರ - ನಮ್ಮ ಒಡಪುಗಳು (1991) & ಜಂಬು ನೇರಲೆ ಹಣ್ಣು (1992).
ಇವೆಲ್ಲವು ಜನಪದರ ಜಾಣ್ಮೆ, ಕೌಶಲ್ಯ ಚತುರತೆಯನ್ನು
ತಿಳಿಸುವ ಒಡಪುಗಳ ಬಗೆಗೆ ನಡೆದ ಅಧ್ಯಯನಗಳು.
ಸಾಹಿತ್ಯೇತರ
ಜಾನಪದ ಅಧ್ಯಯನಗಳು :
ಜಾನಪದ ಸಾಹಿತ್ಯೇತರ ಪ್ರಕಾರಗಳ ಬಗ್ಗೆಯೂ ಇತ್ತೀಚಿಗೆ
ಸಾಕಷ್ಟು ಅಧ್ಯಯನಗಳು ನಡೆದಿವೆ. ಜನಪದ ನಂಬಿಕೆ, ಸಂಪ್ರದಾಯ, ಆಚರಣೆ, ಜನಪದ ವೈದ್ಯ ಇತ್ಯಾದಿಗಳ ಬಗೆಗೆ
ಅಧ್ಯಯನಗಳು ನಡೆದಿರುವುದನ್ನು ನಾವು ಗಮನಿಸಬಹುದು. ಈ ಹಿನ್ನಲೆಯಲ್ಲಿ ಬಂದ ಕೃತಿಗಳೆಂದರೆ ;
*
ಜಿ.ವಿ. ದಾಸೇಗೌಡರ - ನಮ್ಮ ಜನಪದ ನಂಬಿಕೆಗಳು
*
ರಾಗೌ ಮತ್ತು ವಸಂತ ಕುಮಾರ ಅವರ – ಜನಪದ ನಂಬಿಕೆಗಳು
*
ಪ್ರೊ. ಡಿ. ಲಿಂಗಯ್ಯ ಅವರ – ಕೊಂತಿಪೂಜೆ, ಬೋರೆ ದೇವರು.
*
ಅಂಬಳಿಕೆ ಹಿರಿಹಣ್ಣ ಅವರ – ಮಲೆನಾಡ ಜನಪದ ಸಂಪ್ರದಾಯಗಳು
*
ತ.ಚಿ. ಚಲುವೇಗೌಡರ – ಕೆಲವು ಜನಪದ ಸಂಪ್ರದಾಯಗಳು
*
ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರ – ಉಜ್ಜನಿ ಚೌಡಮ್ಮ
*
ಎಚ್. ಎಸ್. ಸಿದ್ಧಗಂಗಪ್ಪ ಅವರ – ವಿಧಿಕ್ರಿಯೆಗಳು ಮತ್ತು ಆಚರಣೆಗಳು
*
ನಲ್ಲೂರು ಪ್ರಸಾದ ಅವರ – ದೊರೆ ಕಾಳಿ”
ಇವು ಜನಪದ ಸಂಬಿಕೆ, ಆಚರಣೆ, ಸಂಪ್ರದಾಯಗಳಿಗೆ
ಸಂಬಂಧಿಸಿದಂತೆ ನಡೆದ ಅಧ್ಯಯನಗಳಾಗಿವೆ. ಇದೇ ರೀತಿ ಕೆಲವು ಜಾತಿ,ಜನಾಂಗ, ಬುಡಕಟ್ಟುಗಳ ಬಗೆಗೂ ಅಧ್ಯಯನಗಳು
ನಡೆದಿವೆ.
ಉದಾ:
ಅರವಿಂದ ಮಾಲಗತ್ತಿ ಅವರ – ಕೊರಗ ಜನಾಂಗದ ವಿಶ್ಲೇಷಣಾತ್ಮಕ ಅಧ್ಯಯನ
ವೈ.ಸಿ.
ಭಾನುಮತಿ ಅವರ- ಮಲೆನಾಡ ಶೈವ ಒಕ್ಕಲಿಗರು : ಜಾನಪದೀಯ ಅಧ್ಯಯನ (1994)
ತೀ.ನಂ.ಶಂಕರನಾರಾಯಣರ–“ಕಾಡುಗೊಲ್ಲರ
ನಂಬಿಕೆ ಮತ್ತು ಸಂಪ್ರದಾಯಗಳು”
ಎನ್.ಪಿ.ಶಂಕರನಾರಾಯಣರಾವ್
ಅವರ - ಪಣಿಯವರ ಸಮಾಜ ಮತ್ತು ಜಾನಪದ ಇತಿಹಾಸ,
ಕ್ಯಾತನಹಳ್ಳಿ
ರಾಮಣ್ಣನವರ – ಗೊಂದಲಿಗರ ಅಧ್ಯಯನ
ಅಂಬಳಿಕೆ
ಹಿರಿಯಣ್ಣನವರ – ಕಚ್ಚೆಗೌಳಿಗರ ಅಧ್ಯಯನ
ಮುಂತಾದ ಕೃತಿಗಳು ಕನಾಟಕದ ಬೇರೆ ಬೇರೆ ಭಾಗದ
ಜನ ಸಮೂಹಗಳ ಜೀವನ ವಿಧಾನವನ್ನು ತಿಳಿಯಲು ಸಹಾಯಕವಾಗಿವೆ. ಅದೇ ರೀತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು
ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದಲ್ಲಿ ಹೊರತಂದ ಉಪಸಂಸ್ಕøತಿಗಳ ಅಧ್ಯಯನ ಮಾಲೆಯಲ್ಲಿ ಪ್ರಕಟಿಸಿದ
ಗ್ರಂಥಗಳು ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಬುಡಕಟ್ಟು ಗಿರಿಜನರ ಸಂಸ್ಕೃತಿಯ ವಿಸ್ತೃತ ಅಧ್ಯಯನಗಳಾಗಿವೆ.
ಅಂತೆಯೇ ಇತ್ತೀಚಿಗೆ 2008 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರೊ. ಎಸ್.ಜಿ. ಸಿದ್ದರಾಮಯ್ಯ
ಅವರ ಪ್ರಧಾನ ಸಂಪಾದಕತ್ವ ಮತ್ತು ಡಾ. ಕೆ. ಎಂ. ಮೈತ್ರಿ ಅವರ ಸಂಪಾದಕತ್ವದಲ್ಲಿ ಪ್ರಕಟಿಸಿದ ಅಲೆಮಾರಿ
ಸಮುದಾಯಗಳ ಅಧ್ಯಯನ ಮಾಲೆಯಲ್ಲಿ 21 ಅಲೆಮಾರಿ ಸಮುದಾಯಗಳ ಬಗೆಗೆ ಆಯಾ ಸಮುದಾಯದಿಂದ ಬಂದ ವಿದ್ಯಾವಂತರಿಂದಲೇ
ಅವರ ಸಮುದಾಯಗಳ ಅಧ್ಯಯನ ನಡೆಸಿರುವುದು ಗಮನಾರ್ಹ. ಇವು ಜನಾಂಗೀಯ ಹಿನ್ನಲೆಯ ಜಾನಪದೀಯ ಅಧ್ಯಯನದ ಕೃತಿಗಳಾಗಿವೆ.
ಜನಪದ
ವೈದ್ಯ ಪದ್ಧತಿಗೆ ಸಂಬಂಧಿಸಿದಂತೆ ಬಂದ ಕೃತಿಗಳು :
ಪಿ.ವಿ.
ನಾಯಕ ಅವರ – ಅಳಲೆಕಾಯಿ
ಬೋಳೂರು
ಎಸ್. ರಾವ್ ಅವರ –“ಊರ ಔಷಧಿಗಳು ಮತ್ತು ಇತರ ಉಪಯುಕ್ತ ಸೂಚನೆಗಳು”
ಬಳ್ಳೂರು
ಸುಬ್ರಾಯ ಅಡಿಗರ – ಗೃಹ ವೈದ್ಯ
ಕೊರಡ್ಕಲ್
ವೆಂಕಟರಾವ್ ಅವರ – ಮನೆಮದ್ದು
ಎಂ.ಜಿ.
ಮತ್ತೂರ ಬ್ರದರ್ಸ ಅವರ - ಹಳ್ಳಿಯ ವೈದ್ಯ
ಜಿ.ಎಸ್.ಭಟ್ಟ್‍ರು
ರಚಿಸಿದ “ಜನಪದ ಪಶುವೈದ್ಯ”
ಜನಪದ
ಕಲಾ ಪ್ರಕಾರಗಳನ್ನು ಕುರಿತಂತೆ ನಡೆದ ಅಧ್ಯಯನಗಳು :
ಜಾನಪದ ಕಲಾಪ್ರಕಾರಗಳಲ್ಲಿ ಯಕ್ಷಗಾನ ಬಯಲಾಟಕ್ಕೆ
ಸಂಬಂಧಿಸಿದಂತೆ ಗಮನಾರ್ಹ ಕೆಲಸಗಳಾಗಿವೆ. ಯಕ್ಷಗಾನ ಕಲೆ ಕುರಿತಂತೆ ಒಂದಷ್ಟು ಗ್ರಂಥಗಳು ಬಯಲು ಸೀಮೆಯ
ರಂಗಭೂಮಿ ಪ್ರಕಾರಗಳ ಬಗ್ಗೆ ಬಂದಿರುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತರು ಯಕ್ಷಗಾನ ಪ್ರಸಂಗಗಳನ್ನು
ಸಂಪಾದಿಸಿ ಪ್ರಕಟಿಸಿರುದಷ್ಟಲ್ಲದೇ, ಅಲ್ಲಿನ ಅಭಿನಯ, ವೇಷಭೂಷಣ, ಸಂಗೀತ ಪಾತ್ರಗಳು, ಯಕ್ಷಗಾನದ ಹೆಸರಾಂತ
ಕಲಾವಿದರ ಬಗೆಗೂ ಅಧ್ಯಯನ ನಡೆಸಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಈ ಹಿನ್ನಲೆಯಲ್ಲಿ ;
ಶಿವರಾಮ
ಕಾರಂತರ – ಯಕ್ಷಗಾನ ಬಯಲಾಟ
ಕುಕ್ಕಿಲ
ಕೃಷ್ಣಭಟ್ಟರ - ಪಾರ್ತಿಸುಬ್ಬನ ಯಕ್ಷಗಾನಗಳು (1975)
ಕು.ಶಿ.
ಹರಿದಾಸ ಭಟ್ಟರು ಸಂಪಾದಿಸಿರುವ - ಸಮಗ್ರ ಯಕ್ಷಗಾನ ಪರಂಪರೆ ಮತ್ತು ಪ್ರಯೋಗ (1978)
ಡಿ.ಕೆ.
ರಾಜೇಂದ್ರ ಅವರ – ದಕ್ಷಿಣ ಕರ್ನಾಟಕದ ರಂಗಭೂಮಿ (1980)
ಜಿ.ಎಸ್.
ಭಟ್ಟ್‍ರ – ಯಕ್ಷಗಾನ ಪರಿಶೀಲನ (1995)
ಜಿ.ಎಸ್.
ಹೆಗಡೆಯವರ – ಯಕ್ಷಗಾನ ಹಸ್ತಾಭಿನಯ ದರ್ಪಣ
ಸಂಗಮೇಶ
ಸವದತ್ತಿ ಮಠ ಅವರ – ದುರದುಂಡೀಶನ ಎರಡು ಯಕ್ಷಗಾನಗಳು(1997)
ಪ್ರಭಾಕರ
ಜೋಶಿಯವರ – ಜಾಗರ(1984) ಮತ್ತು ಕೇದಿಗೆ (1985)
ಕೃಷ್ಣಭಟ್ಟರ
– ಯಕ್ಷಗಾನದಲ್ಲಿ ಅರ್ಥಗಾರಿಕೆ(1990) .... ಮುಂತಾದವು
ಯಕ್ಷಗಾನ ಬಯಲಾಟಗಳನ್ನು ಕುರಿತು ಬಂದಿರುವ ಮಹತ್ವದ ಗ್ರಂಥಗಳು.
ಅದೇ ರೀತಿ, ಚಂದ್ರಶೇಖರ ಕಂಬಾರ ಅವರು “ಉತ್ತರ
ಕರ್ನಾಟಕದ ಜಾನಪದ ರಂಗಭೂಮಿ” ಎಂಬ ಗ್ರಂಥದಲ್ಲಿ ಬಯಲಾಟದ ಪ್ರಕಾರಗಳು ಮತ್ತು ಅವುಗಳ ತಂತ್ರ ಶೈಲಿ ಇತ್ಯಾದಿಗಳ
ಬಗ್ಗೆ ವಿವೇಚಿಸಿದ್ದಾರೆ.
ಬಸವರಾಜ
ಮಲ್ಲಶೆಟ್ಟಿಯವರು – “ಉತ್ತರ ಕರ್ನಾಟಕದ ಬಯಲಾಟಗಳು” (1983)
ಕೆ.ಆರ್.
ದುರ್ಗಾದಾಸ್ ಅವರ – “ಬಳ್ಳಾರಿ ಜಿಲ್ಲೆಯ ಬಯಲಾಟಗಳು”
ಎನ್.ಆರ್.
ನಾಯಕ ಅವರ – “ಕನ್ನಡ ಬಯಲಾಟ ಪರಂಪರೆ”
ಆರ್.
ಜಿ. ಕುಲಕರ್ಣಿ ಅವರ ಸಂಪದಕತ್ವದಲ್ಲಿ – ಅಪರಾಳ ತಮ್ಮಣ್ಣ ರಚಿಸಿದ ಶ್ರೀ ಕೃಷ್ಣ ಪಾರಿಜಾತ ಎಂಬ ಸಣ್ಣಾಟದ
ಕೃತಿ ಪ್ರಕಟಗೊಂಡಿದೆ. ಇತ್ತಿಚಿಗೆ ದೊಡ್ಡಾಟ ಪರಂಪರೆ ಮತ್ತು ಪ್ರಯೋಗಗಳು ಎಂಬ ಅಧ್ಯಯನವನ್ನು ಡಾ.
ಶ್ರೀಶೈಲ ಹುದ್ದಾರ ಅವರು ನಡೆಸಿದ್ದಾರೆ. ಅದೇರೀತಿ, ಡಾ.ಸುಜಾತಾ ಅಕ್ಕಿ ಅವರು – “ಬಯಲಾಟದ ಸಾರಥಿ”
ಎಂಬ ಕೃತಿಯನ್ನು ಬರೆದಿದ್ದಾರೆ. ಇದಲ್ಲದೆ ಕನ್ನಡ ವಿಶ್ವವಿದ್ಯಾಲಯದಿಂದ “ಕರ್ನಾಟಕ ಜನಪದ ಕಲೆಗಳ ಕೋಶ(1996)
ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ. ಹಾಗೇ; ಎಸ್.ಸಿ. ಪಾಟೀಲ್ ಅವರ – ಕರ್ನಾಟಕ ಜನಪದ ಚಿತ್ರಕಲೆ(1993)
ಮತ್ತು ವಿ.ಎಂ.ಚಂದ್ರಶೇಖರಯ್ಯನವರ – “ಕರ್ನಾಟಕ ಕರಕುಶಲ ಕಲೆಗಳು” ಹಾಗೂ
ಡಾ.
ಚಂದ್ರಪ್ಪ ಸೊಬಟಿಯವರು ಡೊಳ್ಳು ಕಲೆಯ ಸಾಂಸ್ಕೃತಿಕ ಅಧ್ಯಯನವನ್ನು ಮಾಡಿದ್ದಾರೆ. ಒಟ್ಟಾರೆಯಾಗಿ ರಂಗಭೂಮಿಯನ್ನು ಬಿಟ್ಟು ಇತರ
ಕಲಾ ಪ್ರಕಾರಗಳ ಬಗ್ಗೆ ಅಮೂಲಾಗ್ರವಾದ ಅಧ್ಯಯನಗಳು ನಡೆದಿಲ್ಲ.
ಕನ್ನಡದಲ್ಲಿ 1975 ರಿಂದ 2000 ಜನವರಿ ವರೆಗೆ
ಪ್ರಕಟವಾದ ಜನಪದ ಗ್ರಂಥಗಳ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡ ಗ್ರಂಥ “ಕನ್ನಡ ಜಾನಪದ ಗ್ರಂಥಸೂಚಿ”(2000)
ಎಂಬ ಕೃತಿಯನ್ನು ಡಾ. ಗುರುಪ್ರಸಾದ ಅವರ ಸಂಪಾದಕತ್ವದಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದೆ.
ಇತ್ತಿಚಿಗೆ
ಜಾನಪದ ವಿಶ್ವವಿದ್ಯಾಲಯದಿಂದ ‘ಗ್ರಾಮಚರಿತ್ರ ಕೋಶ” ಎಂದು ಆಯಾ ಜಿಲ್ಲೆಯ ಸಂಪುಟಗಳು ಪ್ರಕಟವಾಗಿವೆ.
ಇವು ಗ್ರಾಮಾಧ್ಯಯನದ ಕೃತಿಗಳಾಗಿದ್ದು ಗ್ರಾಮದ ಸ್ತೂಲ ಪರಿಚಯ,ಅಲ್ಲಿನ ಪ್ರಮುಖ ಕಲೆ ಮತ್ತು ಕಲಾವಿದರ
ಬಗೆಗಿನ ಸುಳಿವು ನೀಡುತ್ತವೆ. ಅಲ್ಲದೆ ಅದೇ ವಿ.ವಿಯಿಂದ “ದಕ್ಷಿಣ ಬಾರತೀಯ ದೇಶಿ ಕೃಷಿ ವಿಜ್ಞಾನ ಕೋಶ”
ಎಂಬ ಎರಡು ಬೃಹತ್ ಸಂಪುಟಗಳು ಬಂದಿವೆ. ಇದರೊಂದಿಗೆ ಕೆಲವು ಪ್ರಮುಖ ಕಲಾವಿದರ ಕಲೆ ಮತ್ತು ಜೀವನ ಕುರಿತ
ಅಧ್ಯಯನಾತ್ಮಕ ಕೃತಿಗಳು ಪ್ರಕಟಗೊಂಡಿವೆ. ಒಟ್ಟು ಜಾನಪದ ವಿಶ್ವವಿದ್ಯಾಲಯದಿಂದ ಇಲ್ಲಿಯವರೆಗೆ ಸುಮಾರು
129 ಕೃತಿಗಳು ಪ್ರಕಟವಾಗಿವೆ.
ಅದೇ
ರೀತಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ದ್ರಾವಿಡ ವಿಶ್ವವಿದ್ಯಾಲಯದ ಜೊತೆಗೂಡಿ “ದಕ್ಷಿಣ ಭಾರತ ಜಾನಪದ
ಕೋಶ” ಎಂಬ ಎರಡು ಸಂಪುಟಗಳನ್ನು ಹೊರತಂದಿದೆ. ಇದರಲ್ಲಿ ದಕ್ಷಿಣ ಭಾರತದ 4 ರಾಜ್ಯಗಳ ಜಾನಪದವನ್ನು ತಿಳಿದುಕೊಳ್ಳಬಹುದು.
ಅದೇರೀತಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪ್ರಸಾರಾಂಗದಿಂದ ಪ್ರಕಟಣೆಗೊಂಡ ಜಾನಪದ ಸಾಹಿತ್ಯ ದರ್ಶನದ
ಸಂಪುಟಗಳು ಕೂಡಾ ಜಾನಪದ ಅಧ್ಯಯನಕ್ಕೆ ಉತ್ತಮ ಕೊಡುಗೆಯನ್ನು ನೀಡಿವೆ.
ಜಾನಪದ
ಒಂದು ಜಾಗತಿಕ ಸಾಮ್ಯತೆಯನ್ನುಳ್ಳ ವಿಷಯ. ಭಾಷಾ ತೊಡಕಿನಿಂದ ಬೇರೆ ಬೇರೆ ದೇಶದ ಜಾನಪದದ ಬಗ್ಗೆ ಅಧ್ಯಯನ
ಕಷ್ಟವಾಗುತ್ತದೆ. ಆದರೆ ಅನುವಾದಗಳು ಅಂತಹ ಒಂದು ತೊಂದರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿವೆ.
ಈ ದೆಸೆಯಲ್ಲಿ ಕುಮಾರ ವೆಂಕಣ್ಣನವರ - ಭಾರತೀಯ ಜನಪದ ನೃತ್ಯಗಳು, ಹ.ಕ.ರಾಜೇಗೌಡ ಅವರ- ಜಗತ್ತಿನ ಜಾನಪದ
ಕಥೆಗಳು, ಎಚ್.ಎಲ್. ನಾಗೇಗೌಡರ ವೆರಿಯರ್ ಎಲ್ವಿನ್ನರ “ಗಿರಿಜನ ಪ್ರಪಂಚ”, ಸಿ.ಪಿ.ಕೆ.ಯವರ – “ರಾಜಸ್ಥಾನದ
ಜಾನಪದ” ಮುಂತಾದ ಅಧ್ಯಯನಗಳು ಮುಖ್ಯವಾದವುಗಳು.
ಇತ್ತೀಚಿಗೆ
ಜಾನಪದವನ್ನು ವಿಭಿನ್ನ ನೆಲೆಯಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗುತ್ತಿದೆ. ಉದಾ: ಡಾ. ಹಂಪಾ ನಾಗರಾಜಯ್ಯ
ಅವರ – ಆಕಾಶ ಜಾನಪದ, ಡಾ. ಎಸ್.ಪಿ. ಪದ್ಮ ಪ್ರಸಾದರ – ಮಳೆ: ಒಂದು ಜಾನಪದೀಯ ಅಧ್ಯಯನ, ರಂಗಾರೆಡ್ಡಿ
ಕೊಡಿರಾಂಪುರ ಅವರ - ಬಂಡಾಯ ಜಾನಪದ, ಎಂ.ಜಿ. ಈಶ್ವರಪ್ಪ ಅವರ – ವ್ಯವಸಾಯ ಜಾನಪದ(1995) ಇತ್ಯಾದಿ.
ಅದೇ
ರೀತಿ ಮಹಿಳಾ ಹಿನ್ನಲೆಯಲ್ಲಿ ಜಾನಪದ ಅಧ್ಯಯನಗಳು ನಡೆಯುತ್ತಿರುವುದು ಗಮನಾರ್ಹ. ಸುನಂದ ಎಂ ಅವರ “ನಿಷೇಧಗಳು
ಮತ್ತು ಲಿಂಗವ್ಯವಸ್ಥೆ” ಸುಮಂಗಲಾ ಅತ್ತಿಗೇರಿ ಅವರ – ಕೃಷಿ ಜಾನಪದ ಮತ್ತು ಮಹಿಳೆ, ಕೆ.ವಿ. ನೇತ್ರಾವತಿಯವರ
– ದಲಿತ ಮಹಿಳಾ ಸಂಕಥನ ಎಂಬ ಅಧ್ಯಯನಗಳು ನಡೆದಿವೆ. ಅದೇರೀತಿ ಕೆ.ಸೌಭಾಗ್ಯವತಿಯವರ ಮೈಸೂರು ನಗರದ ಜನಪದ
ಆಭರಣಗಳ ಅಧ್ಯಯನ(2000), ಹೇಮಲತಾ ಅವರ ಸೌಭಾಗ್ಯ ಚಿಹ್ನೆಗಳು, ಸವಿತಾ ನಾಯಕ ಅವರ ಉತ್ತರ ಕನ್ನಡ ಜಿಲ್ಲೆಯ
ಬುಡಕಟ್ಟು ಪ್ರಸಾಧನಗಳು. ಎನ್ನುವ ಅಧ್ಯಯನಗಳು ಸಾಹಿತ್ಯೇತರ ವಸ್ತು ವಿಷಯವನ್ನು ಒಳಗೊಂಡಂತೆ ನಡೆದಿರುವುದನ್ನು
ಗಮನಿಸಬಹುದು.
ಒಟ್ಟಿನಲ್ಲಿ
ಇತ್ತೀಚಿನ ದಿನಗಳಲ್ಲಿ ಕನ್ನಡ ಜಾನಪದ ಅಧ್ಯಯನ ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿವಿಧ ಆಯಾಮದಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ.
ಹೀಗೆ
ಸ್ವತಂತ್ರ್ಯೋತ್ತರವಾಗಿ ನಡೆದ ಜಾನಪದ ಅಧ್ಯಯನದ ವ್ಯಾಪ್ತಿ ಸುದೀರ್ಘವಾಗಿದೆ. ಆಗ್ಯಾವ ನಮಜೋಳ ಉಳಿದಾವ
ನಮ ಹಾಡ ಎನ್ನುವ ಜನಪದರ ಗೀತೆಯಂತೆ ಇಲ್ಲಿ ಸ್ವಾತತ್ರ್ಯೋತ್ತರ ಜಾನಪದ ಅಧ್ಯಯನ ನಡೆದು ಬಂದ ದಾರಿಯನ್ನು
ಅವಲೋಕಿಸುವಾಗ ಎಲ್ಲವನ್ನು ವಿವರಿಸಲು ಸಾಧ್ಯವಾಗಿರಲಿಕ್ಕಿಲ್ಲ ಆದರೂ ಸ್ತೂಲವಾಗಿ ವಿವರಿಸಲು ಪ್ರಯತ್ನಿಸಲಾಗಿದೆ.
ಡಾ.ಸುಮಂಗಲಾ
ಅತ್ತಿಗೇರಿ
ಪೋಸ್ಟ್
ಡಾಕ್ಟರಲ್ ಫೆಲೊ
ಎಸ್.ಆರ್.ಜೆ.ವ್ಹಿ.
ಕಲಾ ಮತ್ತು ವಾಣಿ
ಮಹಾವಿದ್ಯಾಲಯ ಶಿಗ್ಗಾಂವ. ಹಾವೇರಿ ಜಿಲ್ಲೆ.
ಲೇಖನ
ಬರಹ
ಕೊರೋನಾದ
ಅನಾಹುತ
ಚೀನಾ ಕೊಟ್ಟ ಉಡುಗೊರೆ ಕೊರೊನ. ಇದು ದೇಶ ವಿದೇಶಗಳಿಗೆ ಒಂದು ಮರೆಯಲಾಗದ
ನೆನಪು. ಮರೆಯಲು ಪ್ರಯತ್ನ ಪಟ್ಟರೂ ಅಸಾಧ್ಯ,ಶೋಚನೀಯ ಸಂಗತಿ. ರಸ್ತೆಯಲ್ಲಿ ಸಂಚಾರಕ್ಕೆ ಕಡಿವಾಣ. ಅತ್ತ
ಕೈಗೆ ಕೆಲಸವೂ ಇಲ್ಲ, ಇತ್ತ ಬದುಕು ಸಾಗಿಸಲು ಸಂಪಾದನೆಯೂ ಇಲ್ಲ. ಕೂಡಿಟ್ಟ ಹಣವೂ ಬರಿದಾಗಿದೆ.
ಮುಂಬಯಿಯಲ್ಲಿ ರೂಮಿನ ಒಳಗೆ
ಕುಳಿತು ಬೋರಾಗಿ ಊರಿಗೆ ಹೋಗಿ ಗಾಳಿ, ನೀರು, ಊಟತಿಂಡಿ ಬದಲಾವಣೆ ಬಯಸಿ ಹಲವರು ಹೋಗಿರುತ್ತಾರೆ.
ಕೆಲವರು ಮಕ್ಕಳಿಗೆ ಶಾಲೆ ಇಲ್ಲದ ಕಾರಣ ಕುಟುಂಬದವರ ಜೊತೆ ಒಂದುಗೂಡಿ ಇದ್ದಾರೆ. ಮುಂಬಯಿಗೆ ವಾಪಸು
ಬಂದು ಸಣ್ಣ ಪುಟ್ಟ ಕೆಲಸ ಮಾಡುತ್ತಾ ಬದುಕು ಸಾಗುತ್ತಿರುವರು. ತೊಂಬತ್ತು ಸಾವಿರ ಸಂಬಳದವ ಹದಿನೈದು
ಇಪ್ಪತ್ತು ಸಾವಿರಕ್ಕೆ ಬೇಕಾದರೆ ಕೆಲಸ ಮಾಡಬೇಕು, ಇಲ್ಲವಾದರೆ ಆ ಕೆಲಸವು ಇಲ್ಲದಾಗಿದೆ. ಇಂದು ಕೆಲಸದ
ಯಾಜಮಾನರು ಕೊಟ್ಟ ಸಂಬಳವನ್ನು ಬಾಯಿ ಮುಚ್ಚಿ ತೆಗೆದು ಕೊಳ್ಳಬೇಕು.
ವಾದಕ್ಕೆ ಇಳಿದರೆ ಹೊಟ್ಟೆಗೆ ತಣ್ಣಿರೇ
ಗತಿ.
ಇನ್ನೂ ಕೂಲಿ ಮಾಡುವವರ
ಪರಿಸ್ಥಿತಿ ಹೇಳತೀರದು. ಮನೆಕೆಲಸ ಮಾಡುವ ಹೆಂಗಸರು ಮನೆಯೊಡತಿ ಯಾವಾಗ ಕರೆಯುವರು ಎಂದು ಚಾತಕ ಪಕ್ಷಿಯಂತೆ
ಕುಳಿತು ಕಾಯುತ್ತಾ ಕುಳಿತ್ತಿದ್ದಾರೆ.. ಇನ್ನು ಗಲ್ಲಿ ಗಲ್ಲಿ ವ್ಯಾಪಾರ ಮಾಡುವವರು ಈಗ ಸ್ವಲ್ಪ
ಧೈರ್ಯ ಮಾಡಿ ತಮ್ಮ ದಿನಚರಿಗೆ ಹೊರಟಿರುವರು. ಇನ್ನು ಕೆಲವು ಹೆಂಗಸರು, ಗಂಡಸರು ಕೈಗೆ ಕೆಲಸ ಇಲ್ಲದ
ಕಾರಣ ಸ್ವಲ್ಪ ಸ್ವಲ್ಪ ತರಕಾರಿ, ಬಟ್ಟೆಯನ್ನು ಮಾರುತ್ತಿದ್ದಾರೆ. ಹೋಟೆಲ್, ರೆಸ್ಟರೊಂಟ್ ನಲ್ಲಿ ಕೆಲಸ
ಮಾಡುವವರು ರೈಲು ಸಂಚಾರ ಇಲ್ಲದ ಕಾರಣ ಹೋಟೆಲಿನಲ್ಲಿಯೇ ತಂಗುವ ಪರಿಸ್ಥಿತಿಯಾಗಿದೆ. ಯಾಜಮಾನನಿಗೆ
ಗಿರಾಕಿಗಳು ಯಾವಾಗ ದರುಶನ ನೀಡುವವರು ಎಂದು ಕಾಯುವ ಸ್ಥಿತಿ ಅವನದು.
ಶಾಲಾ ಕಾಲೇಜು ಮಕ್ಕಳಿಗೆ
ರಜೆಯಾದರೂ ಕಲಿಕೆಗೆ ರಜೆ ಇಲ್ಲ. ಹಾಗೂ ಹೀಗೂ ಹಣ ಹೊಂದಿಸಿ ಮೊಬೈಲ್ ತೆಗೆಸಿಕೊಟ್ಟು ಪಾಲಕರು
ಮಕ್ಕಳನ್ನು ಓದಲು ಒತ್ತಾಯಿಸುವರು. ಅದರ ಜೊತೆ ಜೊತೆಗೆ
ಪರೀಕ್ಷೆಗೆ ಬರೆಯಬೇಕು. ಇನ್ನೂ ಶಿಕ್ಷಕರು ಪಾಠವನ್ನು ಕಲಿಸುತ್ತಾ,ಮನೆಯ ಖರ್ಚುನ್ನು ಸರಿದೂಗಿಸುತ್ತಾ
ದಿನ ಕಳೆಯುತ್ತಿದ್ದಾರೆ. ಅವರ ಸಂಬಳಕ್ಕೆ ಕತ್ತರಿ ಬಿದ್ದು ಸಿಕ್ಕ ಸಂಬಳದಲ್ಲಿ ಹೇಗೋ ಕಾಲ ಕಳೆಯುವ
ಅವಸ್ಥೆ ಅವರದ್ದು. ಹೀಗೆ ಸಮಾಜದ ಪ್ರತಿಯೊಂದು ವರ್ಗದ ಜನರು ಸಂಕಷ್ಟದಿಂದ ತತ್ತರಿಸಿ ಹೋಗಿದ್ದಾರೆ.ಬಣ್ಣದ
ಜಗತ್ತು ಸ್ತಬ್ಧವಾಗಿದೆ. ನಟ ನಟಿಯರು ಯಾರಿಗೂ ತಮ್ಮ ದುಃಖವನ್ನು ಹೇಳಲೂ ಆಗದೆ , ನುಂಗಲೂ ಆಗದೆ ಒದ್ದಾಡುತ್ತಿರುವರು.
ಸಮಾಜದ ಎಲ್ಲಾ ವರ್ಗದವರು ಒಳ್ಳೆಯ ದಿನಕ್ಕಾಗಿ ಕಾಯುತ್ತಾ ಇರುವರು. ಎಂದೂ ಈ ಪರಿಸ್ಥಿತಿ ತಿಳಿ ಆಗುವುದೂ
ಕಾದು ನೋಡೋಣ. ಅಲ್ಲಿಯವರೆಗೆ ಹಾಸಿಗೆ ಇದ್ದಷ್ಟು ಕಾಲು ಚಾಚಿ ಬದುಕನ್ನು ಧೈರ್ಯದಿಂದ ಸಾಗಿಸೋಣ.
- ಅನಿತಾ.ಎಸ್.ಶೆಟ್ಟಿ
ಮುಂಬಯಿ
ಕವಿತೆಗಳು
ಮರೆದ
ಮರ
ಜೀವರಾಶಿಗಳಿಗೆ ನೆರಳ ಕೊಡುವ ಮರ
ಉರುಳಿ ಬಿದ್ದರೂ ಕೊಡಬಲ್ಲುದು ವರ
ತನ್ನ ಬೇರುಗಳು ಅದೆಷ್ಟು ಗಟ್ಟಿ
ಏನೇ ಬಂದರೂ ಎದುರಿಸುವುದು ಮೆಟ್ಟಿ\\
ಜೀವವಿರುವವರೆಗೂ ಹಸಿರು ಉಸಿರಾಗಿರುವ ಮರ
ಜೀವ ಜಂತುಗಳಿಗೆ ವಾಯುವಿನ ವರ
ತಾ ಸತ್ತು ಹೋದರು ಭಯವಿಲ್ಲ ಅದಕೆ
ನಾ ಬಿಟ್ಟ ಬೇರು ಒಡೆಯಿತಲ್ಲ ಮೊಳಕೆ\\
ನಾ ಉಪಯುಕ್ತವಾಗುವೆ ಹಲವು ರೀತಿಯಲ್ಲಿ
ನನ್ನ ದೂಷಿಸುವವರಾದರೂ ಯಾರು ಇಲ್ಲಿ
ಹಬ್ಬಿ ನಗುತಿರುವೆ ನಾನು ಎಲ್ಲರ ನೆನಪಲ್ಲಿ
ನನ್ನ ಮರೆತು ಬಾಳಿದರೆ ಉಳಿವರೇ ಇಲ್ಲಿ \\
ಭೂಮಿಗೆ
ನೆರಳ ಕೊಟ್ಟ ನಾನು
ಮುರಿದು ಬಿದ್ದರೂ ವಾಸಕ್ಕೆ ಸೂರಾದೆ ನಾನು
ಭೂಮಿಯಲ್ಲಿ ಬೆಳೆದು ಆಕಾಶದಲಿ ನಿಂತೆ
ನನ್ನ ಬದುಕಿನ ರೀತಿ ಕಂಡಿತು ಸಾರ್ಥಕತೆ\\
ಮೂರು ವರ್ಷ ಬೆಳೆದ ನಾನು ನೂರು ವರ್ಷ ಬಾಳುವೆ
ನಾ ಸತ್ತರೂ ಸರಿಯೇ, ಬದುಕಿದರೂ ಸರಿಯೇ
ಜೀವ ಜಗಕೆಲ್ಲ ನೆರಳಾಗಿರುವೆ.....
-ಶ್ರೀ ಮತಿ ಮಂಗಳ ಗೌರಿ ಅರುಣ್ ದಾವಣಗೆರೆ
ಅತ್ಯಾಚಾರ
ಹಳ್ಳಿಯಿಂದ ದಿಲ್ಲಿಯ ವರೆಗೂ
ನಡೆಯುತ್ತಿದೆ ಹಾಡೇ ಹಗಲು ಅತ್ಯಾಚಾರ.
ಹಸುಳೆ ವೃದ್ಧೆಯನ್ನದೆ ....
ಈ
ವಿಕೃತ ಕಾಮಿಗಳು.\\
ಪುರುಷ ಪ್ರಧಾನ ಸಮಾಜ ಇದಕ್ಕೆ ಕಾರಣವೇ?
ನ್ಯಾಯದೇವತೆ ಮೊರೆ ಹೊಕ್ಕರೆ
ಮಾನ ಹರಾಜು ಆಗುವದಿಂದು
ನ್ಯಾಯ ದೇವತೆಯೂ ಹೆಣ್ಣಲ್ಲವೇ
ಅದಕಾಗಿಯೇ ಕಟ್ಟಿಹಳು ಕಣ್ಣಿಗೆ
ಕರಿಬಿಟ್ಟೆ \\
ಹೆಣ್ಣನ್ನು ಮಹಾದೇವಿಯೆಂಬೆ
ಎಂದು ಗೌರವಿಸಿದರು ಶರಣರು ಅಂದು.
ಹೆಣ್ಣನ್ನು ಕಂಡು ಜೊಲ್ಲು
ಸುರಿಸುತಿಹರು ಕಾಮಿಗಳಿಂದು
ಗಾಂಧಿ ಕಂಡ ಕನಸು
ನನಸಾಗುವದೆಂದು.\\
-ದಯಾನಂದ
ಪಾಟೀಲ,
ಹೇಳುವುದಾದರೂ
ಏನಿದೆ ?
ಕೆಲವರು ಹಣ ಹೆಂಡ ಸೀರೆಗೆ
ವೋಟು ಮಾರಿಕೊಳ್ಳುತ್ತಾರೆ.
ಇನ್ನುಳಿದವರು ಪ್ರತಿಷ್ಟೆಗಾಗಿ
ಮನುಷ್ಯತ್ವವನ್ನೂ ಮಾರಿಕೊಳ್ಳುತ್ತಾರೆ.
ಅಂಥವರಿಗೆ ಹೇಳುವದಾದರೂ ಏನಿದೆ ಮಾಮೂಲಿ
ಮಾತಿನಲ್ಲಿ??
ಈಗೀಗ ಭಾವನೆಗಳ ಜೊತೆ ಆಟ ಆಡುವವರೇ
ಹೆಚ್ಚಾಗಿದ್ದಾರೆ ಇಲ್ಲಿ.
ಜೂಜಾಟದಲ್ಲಿ ಪಾಂಚಾಲಿಯ
ಪಣಕ್ಕಿಟ್ಟ ಕತೆಗಳೇ ಹಿಡಿಸುತ್ತವೆ ಅವರಿಗೆ.
ಊರ ಉಸಾಬರಿ ಮಾಡದಿದ್ದರೆ ಪಾಪ
ತಿಂದ ಅನ್ನವೂ ಅರಗಲಿಕ್ಕಿಲ್ಲ!
ಅಂಥವರಿಗೆ ಹೇಳುವದಾದರೂ ಏನಿದೆ ಮಾಮೂಲಿ
ಮಾತಿನಲ್ಲಿ..
ಒಬ್ಬರ ತುಳಿದು,ನಿಂದಿಸಿ,
ಅಪಮಾನ ಮಾಡಿ ಚುಚ್ಚು ಮಾತುಗಳನ್ನಾಡಿ
ಬದುಕುವದೇ
ಶ್ರೇಷ್ಠ ಎಂದುಕೊಂಡವರಿಗೆ ಹೇಳುವದಾದರೂ ಏನಿದೆ
ಮಾಮೂಲಿ ಮಾತಿನಲ್ಲಿ??
ನಂಜು ಹೊತ್ತಿಸಿ ನಗುವ
ಜನರಿದ್ದಾರೆ ಇಲ್ಲಿ
ನಾನು ತೆರೆದಿಟ್ಟ ಪುಸ್ತಕವಷ್ಟೇ..
ತಪ್ಪು ನನ್ನಿಂದಲೂ ಆಗಿರಬಹುದು ಆದರೆ
ಎಲ್ಲರ ಮನೆಯ ತಾಯಿ ತಂಗಿ ಅಕ್ಕ ನನಗೂ ಅಷ್ಟೇ...
ಇನ್ನೊಬ್ಬರ ಬಗ್ಗೆ ಕೀಳು
ಕತೆಗಳ ಕಟ್ಟುವವರಿಗೆ ಹೇಳುವದಾದರೂ ಏನಿದೆ ಮಾಮೂಲಿ
ಮಾತಿನಲ್ಲಿ??
ಮಾನ,ಪ್ರಾಣದ ಪ್ರಶ್ನೆ ಬಂದಾಗ
ಸಿಟ್ಟು ಸೆಡವು ನನ್ನಲ್ಲೂ ಹುಟ್ಟಿಕೊಳ್ಳುತ್ತದೆ.
ಹಗೆಯ ಸಾಧಿಸುವದಿಲ್ಲ ನಾನು!!
ಕನ್ನಡಿಯನ್ನಷ್ಟೇ ಹಿಡಿಯುತ್ತೇನೆ.
ಅವರವರ ಮುಖಗಳನ್ನವರು ನೋಡಿ ಕೊಳ್ಳಲಿ ಅಷ್ಟೇ...
ಎಷ್ಟು ಏನೆಲ್ಲ ತಿಳಿಸಿ ಹೇಳಿದರೂ
ಸುಧಾರಿಸಿಕೊಳ್ಳದವರಿಗೆ ಹೇಳುವದಾದರೂ ಏನಿದೆ ಮಾಮೂಲಿ
ಮಾತಿನಲ್ಲಿ??
- ದೀಪಕ ಶಿಂಧೇ
ಕನ್ನಡದ
ತೇರು
ಎಳೆಯೋಣ ಬನ್ನಿ ಕನ್ನಡದ ತೇರು.
ಕಿತ್ತು ಬಿಸಾಡೋಣ ನಮ್ಮ ಕನ್ನಡಿಗರಿಗಂಟಿ ಕೊಂಡ
ಆಂಗ್ಲಾ ಭಾಷೆಯ ನಾರು.
ಕನ್ನಡ ಭಾಷೆ ನಶಿಸದಂತೆ ಶಾಶ್ವತವಾಗಿ ಉಳಿಸೋಣ
ನಾವು ನಮ್ಮ ಕನ್ನಡಿಗರು.\\
ಬೆಳಗಲಿ ಕನ್ನಡದ ಹಣತೆ
ಕನ್ನಡ ನಾಡಲ್ಲಿ ಸ್ಥಿರವಾಗಿ ನೆಲೆಸಲಿ ಕನ್ನಡದ
ಭಾಷೆ.
ನಾವೆಲ್ಲರೂ ಕೂಡಿ ಒಮ್ಮನಸ್ಸಿನಿಂದ ನೀಡೋಣ ಕನ್ನಡಕ್ಕೆ
ಆಧ್ಯತೆ.
ಜಾತಿ ಮತ ಪಂಥ ಬೇದ ಭಾವಗಳನ್ನು ತೊರೆದು
ಕನ್ನಡಕ್ಕಾಗಿ ಹೋರಾಡೋಣ ಸರ್ವರೂ ಒಂದಾಗಿ ನಾವು
ನಮ್ಮ ಜನತೆ.\\
ಬನ್ನಿ ನಾವೆಲ್ಲರೂ ಸಾಮೂಹಿಕವಾಗಿ ಹಚ್ಚೋಣ ಕನ್ನಡದ ಹಣತೆ.
ಅದು
ನಾಡಿನಾಧ್ಯಂತ ಬೆಳಗಿ ಬದುಕಿನ ಬೆಳಕಾಗುವಂತೆ.
- ಕೆ ಹೆಚ್ ಜಯಪ್ರಕಾಶ್ ,ಚಿತ್ರದುರ್ಗ.
ಮುಖವಾಡ
ಹಸಿದ ಹೊಟ್ಟೆಯನ್ನು ಕಂಡು ಕಾಣದಂತೆ
ಕಸದ ತೊಟ್ಟಿಗೆ ಎಸೆವರೆಲ್ಲ ಅನ್ನ ಬಟ್ಟೆ
ಹಸುಳೆಗಿಲ್ಲದಾ ಹಾಲು ಜೇನು ಹಸಿ ಹಸಿ
ಯಾದ ಹುಸಿ ಕಂದಚಾರಗಳ ಮಡಿಲಿಗೆ\\
ಸುರಿವರೆಲ್ಲ ಮೌಢ್ಯತೆಯ ಹುತ್ತಕೊ
ಕಲ್ಪಿತ ಶಿಲಾಕಲ್ಲು ಮೂರ್ತಿಗಳಿಗೊ
ಕುರುಡು ಅಭಿಮಾನದ ಚಿತ್ರ ಪಟಗಳಿಗೊ
ಎಲ್ಲ ಆಡಂಬರದ ಚೇಲಾಟ ಚೆಲ್ಲಾಟಗಳು\\
ಡಂಭಚಾರದ ವೈಭವಗಳ ಗಳಿಕೆಗೆ
ಹುಸಿ ನಗೆಯ ಬೀರಿ ಮೋಸಗೈವ ಕಪಟ
ವಂಚನೆಯ ಸಾಧಕರು ಬೆಳಕಿಗೆ ಅಡ್ಡಲಾಗಿ
ಯವನಿಕೆ ಹಿಡಿದು ಮೆರೆಯುತ್ತಿರುವರು\\
ಕಪಟಿ ವೇಷದಾರಿಗಳಿಗೆ ಪುಷ್ಪಮಾಲೆ
ಷಡ್ಯಂತರ ತಂತ್ರಿಗಳಿಗೆ ವೇದಾಂತ ಬೆಲೆ
ವೇದಿಕೆಯಲ್ಲಿ ಮಾತ್ರ ಆದರ್ಶದ ನುಡಿಗಳು
ವಾಸ್ತವದಲ್ಲಿ ಮುಖವಾಡದ ನಡೆಗಳು\\
- ಪೊಡನೋಲನ ಈಶ್ವರ
ತಮ್ಮಯ್ಯ
ನನ್ನವ್ವ
ನನ್ನವ್ವ ಬಲವಂತೆ , ಅಷ್ಟೇ ಗುಣವಂತೆ
ನೋಡಲು ಕಪ್ಪು ಮಣ್ಣು , ಬಿತ್ತಲು ಜೊನ್ನ ಹೊನ್ನು
ಮಳೆಯಲ್ಲಿ ಭಾರೀ ಜಿಗಿ , ಬೇಸಿಗೇಲಿ ಅಷ್ಷೇ ಬಿಗಿ
ಕೋಪವೆ ಇರದ ಕರುಣಾಮಯಿ\\
ಎದ್ದರೂ ಬಿದ್ದರೂ ಅವಳ ಮಡಿಲಲ್ಲೆ
ಇಡಿ ಹಾಕಿ ಬಾಚಿದ್ದು ಅವಳ ಒಡಲಲ್ಲೆ
ಜೋಡೆತ್ತು ಕಟ್ಟಿ ಉದರವೇ ಬಗೆದರು
ಬಗೆಯದೇ ನೀಡುವಳು ಇಡಿ ಅನ್ನ ನೀರು\\
ಬೆಳೆಸುವಳು ಅವಳೆ , ಇಳಿಸುವಳು ಅವಳೆ
ಮೈ
ದಣಿಸಿ , ಬೆವರರಿಸಿ , ಅಪ್ಪುವಳು ಬಾಗಿ
ಹಸಿರಾಸಿ ಮೇಲೊದಿಸಿ ಮಲಗಿಸಿದ ಮಾಯಿ
ಗಾಳಿಯನು ಕರೆ ಕರೆದು ತೂಗಿದಳು ಹಾಡಿ\\
ಕೋಟೆಯಲು ಅವಳೆ , ಗೂಡಿನಲು ಅವಳೆ
ಮೋಹದ ಸಿರಿಯಲ್ಲಿ ಪ್ರತಿರೂಪ ಅವಳೆ
ಆ ಮಗ ಈ ಮಗ ಭೇದ ಭಾವವೆ ಇಲ್ಲ
ಅವ ಬಡವ ಇವ ಗಡವ ಎಂಬುದೇ ಇಲ್ಲ\\
ಬರೆದರು ಬಲ್ಲವರು ಇನ್ನು ಮುಗಿದಿಲ್ಲ
ಯುಗ ಯುಗವೆ ದೋಚಿದರು ಕೊಂಚ ಸವೆದಿಲ್ಲ
ಹಗಲಿಲ್ಲ ಇರುಳಿಲ್ಲ ಕೊಡುವುದೊಂದೇ ಕಾರ್ಯ
ತಲೆಮಾರು ಉರುಳಿದರು ಮುಗಿಯದ ಔದಾರ್\\
- ಕರಿಬಸವರಾಜ್ ಗಂಟಿ
ಅಮ್ಮ
ನನ್ನಮ್ಮ ನನ್ನ ಜನ್ಮದಾತೆ
ಕಡಲು- ಆಕಾಶದಷ್ಟು ವಿಶಾಲ ಅವಳ ಒಡಲು
ಪ್ರೀತಿ ಪ್ರೇಮ ಮಮತೆಯ ಸಾಕಾರ ಮೂರ್ತಿ
ಎಷ್ಟು ಹೊಗಳಿದರೂ ಸಾಲದು ಅವಳ ತ್ಯಾಗದ ಕೀರ್ತಿ\\
ಅಪ್ಪ ನನ್ನನ್ನು ಗದರಿದಾಗ ಭಯಗೊಂಡವಳು ಅಮ್ಮ
ಮೈಮೇಲಿನ ಹೊಡೆತದ ಏಟುಗಳಿಗೆ ತನ್ನ ಕಣ್ಣೀರಿನ
ಅಭಿಷೇಕ
ಅವಳ ಕೋಮಲ ಸ್ಪರ್ಶ ಒಂದೇ ಸಾಕು
ಯಾವ ಮದ್ದು ಬೇಕಿಲ್ಲ ನನಗೆ\\
ಮಗುವಿನ ಎಲ್ಲ ಕೆಲಸಗಳು ಅಮ್ಮನಿಗೆ ಮುದ್ದು
ಅಪ್ಪ ಎದೆಗುಂದಿದಾಗಲೂ ಧೈರ್ಯ ಹೇಳುವ ಧಿಟ್ಟೇ
ನನ್ನಮ್ಮ
ಯಾರಿಗೂ ಕಮ್ಮಿ ಇಲ್ಲದಂತೆ ಬಾಳಿದವಳು
ಬಾಳುವಂತೆ ದಾರಿ ತೋರಿದವಳು ನನ್ನಮ್ಮ\\
ಎಲ್ಲರನ್ನೂ ಸಮನಾಗಿ ಪ್ರೀತಿಸಿದಳು
ಎಲ್ಲರ ಬಾಯಲ್ಲೂ ಹಸಿರಾಗಿ ಉಳಿದಳು
ನಮ್ಮೇಲ್ಲರನ್ನು ಸಲುಹಿದವಳು
ಜೊತೆಗೆ ಎಲ್ಲವನ್ನು ಸಹಿಸಿಕೊಂಡವಳು\\
ಅಮ್ಮ ಈಗ ಶಾಶ್ವತವಾಗಿ ದೂರವಾದವಳು
ಅನಾಮಿಕ ದೈವದ ಕರೆಗೆ ಓಗೊಟ್ಟವಳು
ಹೊರಡುವ ಮುನ್ನ ಕಣ್ತೇರೆದು ನೋಡಿದವಳು
ನಮ್ಮನ್ನೆಲ್ಲಾ ಹರಸಿ ಮಾಯವಾದವಳು\\
ಜನುಮದಾತೆಯ ಜನ್ಮ ಅಂತ್ಯವಾಯಿತು
ನಮ್ಮೇಲ್ಲರ ಪೂಣ್ಯವೆಲ್ಲ ಕಳೆದುಹೋಯಿತು
ಈಗಿರುವುದು ಕೇವಲ ಸೂತಕದ ಮನೆ
ಅಜ್ಞಾನ ಅಂಧಕಾರದ ಕಾರ್ಮುಗಿಲು\\
ಇದ್ದಾಗ ಅಮ್ಮನ ಬೆಲೆ ಗೊತ್ತಾಗಲಿಲ್ಲ
ಕಳೆದು ಹೋದ ಮೇಲೆ ತಿಳಿಯಿತು ಅಮ್ಮನಿಗೆ ಅಮ್ಮನೇ
ಸಾಟಿ
ಅಮ್ಮ ನಿನ್ನ ನೆನಪಲ್ಲೇ ನನ್ನ ಪಯಣ
ತಾಯಿಯಾಗಿ ಸಾರ್ಥಕ ಮಾಡಿಕೊಂಡೆ ನಿನ್ನ ಜೀವನ.\\
- ಮಲ್ಲಿಕಾರ್ಜುನ ಕೆ ಕಕಮರಿ ,ಅಡಹಳಟ್ಟಿ.
ಪ್ಲಾಸ್ಟಿಕ್ ಬಾಟಲ್
ಬಾಟಲೀ ನಾನು
ಪ್ಲಾಸ್ಟಿಕ್ಕಿನ
ಬಾಟಲೀ ನಾನು
ಪರಿಸರಕ್ಕೆ ಮಾರಕ
ನಾನು.
ಗೌಡರ ಮನೆಗೆ
ಕೆಲಸ
ಕೂಲಿ ಆಳುಗಳ
ದಂಡು
ಬಹುತ್ವದ ಸಂಗಡ
ಬಹುಜನ ಸಮುದಾಯ
ಹೊಲಯ ಮಾದಾರ
ಅಗಸ
ನಾಯಕ ಕುಂಬಾರ
ಸಾಬರ ಸಂಗಡ
ಗೌಡರ
ಸ್ಟೀಲು ಲೋಟಕ್ಕೆ
ಇಲ್ಲ
ಭಾಗ್ಯ ಆದರೆ
ನನಗೆ
ಇದೆ!ಬಾಟಲೀ ನಾನು.
ಗೌಡರ ಲೋಟ ನೀಡಿಲ್ಲ
ನೀರು;
ಕೂಲಿಗಳು ಕುಡಿದರು
ನನ್ನ ನೀರು
.
- ಹರೀಶ ಪಿ
ಎ ಪಾಳ್ಯಕೆರೆ.
ಬೇಲಿ ಬದಿಯ ಬದುಕು
ಮನವಿಲ್ಲಿ ಹೊಲ
ಬಿತ್ತಿದಂತೆ
ಬೆಳೆ
ಸುತ್ತ ಕುರುಚಲು
ತುಂಬಿಕೊಂಡು
ನಡುವೆ ಒಂಟಿ
ಹೂ ನಗುತ್ತದೆ
ಒಳಗೊಳಗೇ ಬಿಕ್ಕುತ್ತದೆ!
ಅಲ್ಲಿ ಸರ್ಪಗಳು
ಸುತ್ತುವರಿದು
ಹಿಂಡುತ್ತಿವೆ
ಜೀವ
ಆದರೂ ಸಮಾಧಾನ
ಕಳೆದುಕೊಳ್ಳದು
ತನ್ನ ಪಾಡಿಗೆ
ತಾ ನಿಂತು ಎಲ್ಲರ
ಮನ ಸೆಳೆಯುತ್ತದೆ!
ಬೀಸುವ ಗಾಳಿಗೆ
ಈ ಹೂವ ಮಾತನಾಡಿಸುವ
ಬಯಕೆ
ಆಗಾಗ್ಗೆ ಮೈ
ಸವರಿ ಬೇಕೆಂದೇ ಕಾಡಿಸುವುದುಂಟು
ಆದರೂ ಹೂ ಮಾತನಾಡುವುದಿಲ್ಲ!
ಅದು ಬಿಕ್ಕುವ
ಸದ್ದು ಕೇಳುವುದಿಲ್ಲ ಮುಂಜಾನೆ
ಕಣ್ಣೀರ ಹನಿ
ಪ್ರತಿ ಎಲೆಯ ಮೇಲೆ
ರಾತ್ರಿಯೆಲ್ಲ
ಅಳುವುದ ಕಂಡ ಮುಗಿಲು ಮುಂಜಾನೆ
ಹನಿಯ ಚೆಲ್ಲಿ ತಣ್ಣಗೆ ಮಾಡುತ್ತಿದೆ
ಲೋಕಕಿಲ್ಲಿ ಇದೊಂದು
ಬೆರಗು!
- ಸಿಪಿಲೆ.
ಮಕ್ಕಳ
ಕವಿತೆ
ಕರೋನಾ
ಜನರ ಉಸಿರು ಹಾರಿದೆ ಗಾಳಿಯಲ್ಲಿ ಪ್ರಾಣವ ಕೊಟ್ಟಿದೆ ಇಲ್ಲಿ
ಜನರ ಜೊತೆ ಪ್ರಾಣದ ಆಟ
ಜೀವನದ ಉಳಿಯುವಿಗಾಗಿ ಪಾಠ \\
ಕೊರೊನಾದಿಂದ ಸತ್ತವರು ಪ್ರಾಣವನ್ನು ಕಳೆದುಕೊಂಡವರು
ಜನರೆಲ್ಲಾ ಭಯದಿಂದ ತುಂಬಿ
ನರಳಾಡುತ್ತಿದ್ದಾರೆ ದುಃಖದಿಂದ ತುಂಬಿ \\
ದೇಶದ ರಕ್ಷಣೆಗಾಗಿ ಜನರ ರಕ್ಷಣೆ ಜನರ
ರಕ್ಷಣೆಗಾಗಿಯೇ ಪ್ರಾಣ ರಕ್ಷಣೆ
ದೇಶದ ನಿರ್ಮಾಣಕ್ಕಾಗಿ ಜನರು
ಬದುಕಲೇಬೇಕು ಇಲ್ಲಿ ಮನುಜರು \\
ಹೊರಗಡೆ ಓಡಾಡದೇ ಊರಿನಲ್ಲಿ ಕೊರೊನಾ ಬಂದಿದೆ ಇಲ್ಲಿ
ರೋಗದ ಸಲುವಾಗಿ ತಂದೆ ತಾಯಿ ಮುಖ
ಕೊರೊನದಿಂದ ಸತ್ತವರನು ನೋಡದೆ ಮುಖ\\
ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆ ಪಾಲಕರಿಗೆ ಹಣದ ಕೊರತೆ
ಎಲ್ಲಾ ಲಾಕಡೌನ್ ದಲ್ಲಿ ಆಹಾರವು ಇಲ್ಲದೆ
ಹಸಿವು ತಡೆಯಲಾರದೆ ಪ್ರಾಣವೇ ಉಳಿಯಲಾರದೆ\\
- ಕೀರ್ತಿ ವಿಠ್ಠಲ ಪಾಮದಿನ್ನಿ 9
ನೇ ತರಗತಿ ಕಂಕಣವಾಡಿ.
ನಾನು
ಎಂಬುದು ಅಹಂಕಾರ
ನಾನು ಎಂಬುದು ಅಹಂಕಾರ
ನಾವೆಲ್ಲಾ ಎಂಬುದು ಮಮಕಾರ
ನಾನು ಎನ್ನುವವರು ಎಂದು ಹಿಂದೆ
ಹಾಗಾಗದೇ ನಾವು ಇರಬೇಕು ಮುಂದೆ\\
ನಾನು ಮಾತ್ರ ಇದನ್ನು ಬಿಡಿ
ಅದರಿಂದ ನಮ್ಮಯ ನಾಶವ ನೋಡಿ
ಎಲ್ಲರೂ ಸೇರಿ ಬೆಳೆಯಿರಿ \\
ನನ್ನಿಂದಲೇ ಎಲ್ಲ ಅನ್ನುವುದು ಏಕೆ
ಎಲ್ಲರ ಮೇಲೆ ಇರಲಿ ನಂಬಿಕೆ
ನಾನು ನಾನು ಅದೇ ನಾಶ
ಕೊನೆಗೆ ಅದೇ ನಮಗೆ ಪಾಶ\\
ನಾನು ಎನ್ನುವುದ ಮೆಟ್ಟಿ ನಿಲ್ಲಿ
ನಿಮಗೆ ಒಳ್ಳೆಯ ಬದುಕು ಸಿಗುವುದಿಲ್ಲಿ
ಅಹಂಕಾರವು ಇರಬಾರದು
ಅಹಂ ನಮ್ಮನ್ನು ಕೆಳಕ್ಕೆ ಬಿಳಿಸುವುದು\\
ಅಹಂವನ್ನು ಕಾಲ ಕೆಳಗೆ ಇಡಿ
ಆಗ ನಿಮಗೆ ಸಿಗುವುದು ಮುನ್ನುಡಿ
ನಾನೇ ಎಂಬುದು ಮರೆತು ಬಿಡಿ
ಎಲ್ಲರೊಂದಿಗೆ ಇರಬೇಕು ಕೂಡಿ\\
- ವಿದ್ಯಾ ಬಳಿಗಾರ 9ನೇ ತರಗತಿ ಕಂಕಂಣವಾಡಿ.
ಚಿತ್ರಕಲೆ

ರಾಜ್
ಕುಮಾರ್ ವಿ. ಒಳಗೇರನಹಳ್ಳಿ.

ಮೀನಾಕ್ಷಿ
ರಾಜಣ್ಣ, ರಾಮಸಂದ್ರ.

ಶ್ರೀದೇವಿ ಬಿ ಚಿಲಗೌಡ್ರು. ಮೋರನಹಳ್ಳಿ, ಕೊಪ್ಪಳ.

ಪ್ರಗತಿ ಗಿರೀಶ್ ಆರ್ ೧೦ ನೇ ತರಗತಿ, ಕಲ್ಬುರ್ಗಿ.
ಪೋಟೋಗ್ರಫಿ


ಛಾಯಾ ಚಿತ್ರ: ಮೋಹನ್ ಎಂ ವಳ್ಳಿ, ಕನ್ನಡ ಉಪನ್ಯಾಸಕರು,
ಬೆಂಗಳೂರು. ( ಮೇಲಿನ ಎರಡು ಚಿತ್ರಗಳು )

ಛಾಯಾ ಚಿತ್ರ : ಮೀನಾಕ್ಷಿ ರಾಜಣ್ಣ , ರಾಮಸಂದ್ರ.
ಸಾಹಿತ್ಯ ಸಂಚಯ
ಶರಣರ ಸೂಳ್ನುಡಿ
ಸಾರ: ಸಜ್ಜನರ ಸಂಗವ ಮಾಡೂದು,
ದೂರ ದುರ್ಜನರ ಸಂಗ ಬೇಡವಯ್ಯಾ.
ಆವ ಹಾವಾದಡೇನು:ವಿಷವೊಂದೆ,
ಅಂತವರ ಸಂಗ ಬೇಡವಯ್ಯಾ.
ಅಂತರಂಗ ಶುದ್ಧವಿಲ್ಲದವರ ಸಂಗವು
ಸಿಂಗಿ, ಕಾಳಕೂಟ ವಿಷವೊ, ಕೂಡಲಸಂಗಯ್ಯಾ.
ಸಾರ ಸಜ್ಜನರ ಸಂಗ ಲೇಸು
ಕಂಡಯ್ಯಾ,
ದೂರ ದುರ್ಜನರ ಸಂಗವದು ಭಂಗವಯ್ಯಾ.
ಸಂಗವೆರಡುಂಟು:ಒಂದ ಹಿಡಿ, ಒಂದ ಬಿಡು,
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರ.
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದಡೆ ನಡೆಯೆಂಬರು,
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ.
ನಾದಪ್ರಿಯ ಶಿವನೆಂಬರು,
ನಾದಪ್ರಿಯ ಶಿವನಲ್ಲಯ್ಯಾ.
ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯಾ.
ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾುತ್ತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.
ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.
ಪ್ರಾಚೀನ
ಕವಿ ಪರಿಚಯ
ರನ್ನ
ರನ್ನ ಸು.
949-1020. ಹತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಕವಿ ರತ್ನತ್ರಯಲ್ಲಿ ಒಬ್ಬ. ಹಳಗನ್ನಡದ ಮಹತ್ತ್ವದ
ಕವಿ. ಪಂಪನ ಕಿರಿಯ ಸಮಕಾಲೀನ ಅಜಿತತೀರ್ಥಂಕರಪುರಾಣತಿಲಕ, ಸಾಹಸಭೀಮವಿಜಯ (ಗದಾಯುದ್ಧ) ಎಂಬ ಕಾವ್ಯಗಳ
ಕರ್ತೃ. ಶಕ್ತಿಕವಿ ಎಂದೇ ಖ್ಯಾತನಾಗಿರುವ ಈತ ರನ್ನನಿರುವ
ಕನ್ನಡಕ್ಕೆ ಅನ್ಯರಿಂದ ಬಹುದೆ ಧಕ್ಕೆ? ಬರಿಯ ಕವಿಯೆ ಸಿಡಿಲ ಚಕ್ಕೆ ಎಂಬ ಹೊಗಳಿಕೆಗೂ (ಕುವೆಂಪು) ಪಾತ್ರನಾಗಿದ್ದಾನೆ.
ರನ್ನನ ಜೀವನ ಚರಿತ್ರೆಗೆ ಸಂಬಂಧಿಸಿದ ಅನೇಕ ವಿಚಾರಗಳು
ಇವನ ಎರಡೂ ಕೃತಿಗಳಿಂದ ದೊರೆಯುತ್ತವೆ. ಘಟಪ್ರಭಾ ಮತ್ತು ಕೃಷ್ಣಾ ನದಿಗಳು ಹರಿಯುವಲ್ಲಿ ತದ್ದವಾಡಿಗೆ
ದಕ್ಷಿಣಕ್ಕೂ ತೊರಗಲಿಗೆ ಉತ್ತರಕ್ಕೂ ಬೆಳುಗಲಿ ದೇಶವಿದೆ. ಈ ಬೆಳುಗುಲಿ 500ರಲ್ಲಿ ಅಗ್ಗಳವೆನಿಸುವ
ಜಂಬುಖಂಡಿ ಎಂಬ ಪ್ರಾಂತ್ಯವಿದೆ. ಇದಕ್ಕೆ ತಿಲಕಪ್ರಾಯವಾಗಿ ಪ್ರಸಿದ್ಧಿ ಪಡೆದ ಮುದುವೊಳಲ್ (ಈಗಿನ ಮುಧೋಳ)
ಎಂಬುದೇ ರನ್ನನ ಜನ್ಮಸ್ಥಳ. ತಾಯಿ ಅಬ್ಬಲಬ್ಬೆ; ತಂದೆ ಜಿನವಲ್ಲಭ; ಅಣ್ಣಂದಿರು ರೇಚಣ ಮತ್ತು ಮಾರಯ್ಯ.
ರನ್ನನ ಸಾಂಸಾರಿಕ ಜೀವನ ಕೂಡ ಚೆನ್ನಾಗಿತ್ತು. ಇವನಿಗೆ ಶಾಂತಿ ಮತ್ತು ಜಕ್ಕಿ ಎಂಬ ಇಬ್ಬರು ಹೆಂಡತಿಯರು.
ಧರ್ಮದಲ್ಲಿ ನಿಷ್ಠೆಯುಳ್ಳವರೆಂದು ಇವರ ವರ್ಣನೆ. ಇವರಿಗೆ ರಾಯ ಮತ್ತು ಅತ್ತಿಮಬ್ಬೆ ಎಂಬ ಇಬ್ಬರು ಮಕ್ಕಳಿದ್ದರು.
ತನ್ನ ಮಕ್ಕಳಿಗೆ ಚಾವುಂಡರಾಯ ಮತ್ತು ಅತಿಮಬ್ಬೆಯರ ಹೆಸರುಗಳನ್ನು ಇಡುವುದರ ಮೂಲಕ ಕವಿ ಅವರ ಉಪಕಾರಕ್ಕೆ
ಗೌರವವನ್ನು ತೋರಿದ್ದಾನೆ.
ರನ್ನ ಜೈನಧರ್ಮೀಯನಾದರೂ
ವೈಶ್ಯ ಪಂಗಡದವನೆಂದು ಹೇಳಲಾಗಿದೆ. ಕವಿ ತನ್ನ ಕಾವ್ಯಗಳಲ್ಲಿ ಪುಟ್ಟಿದ ಬಳೆಗಾರ ಕುಲದೊಳ್ ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ.
ಜೊತೆಗೆ ವೈಶ್ಯಧ್ವಜ, ವಣಿಕ್ಕುಳಾರ್ಕ ಎಂಬ ಪದಗಳನ್ನು ಪದೇ ಪದೇ ಬಳಸಿದ್ದಾನೆ. ಇಂತಹ ವರ್ಗವೊಂದರಿಂದ
ಬಂದ ವ್ಯಕ್ತಿಯೊಬ್ಬ ಕವಿಯಾದದ್ದು ವಿಶೇಷ. ಆದರೂ ಈ ವರ್ಗಸಂವೇದನೆ ಇವನ ಕಾವ್ಯಗಳಲ್ಲಿ ಇಲ್ಲ. ಅಷ್ಟರಮಟ್ಟಿಗೆ
ಜೈನಧರ್ಮ ಇವನನ್ನು ಆವರಿಸಿದೆ.
ರನ್ನನಿಗೆ ತಂದೆಯಿಂದ ಬಳುವಳಿಯಾಗಿ ಬಂದದ್ದು
ಬಳೆಗಾರವೃತ್ತಿ. ಆದರೆ ರನ್ನ ಪ್ರತಿಕೂಲ ಪರಿಸ್ಥಿತಿಯೊಡನೆ ಹೋರಾಡಿ ಕವಿಯಾದವನು. ಚಿಕ್ಕಂದಿನಿಂದಲೂ
ಓದಿನಲ್ಲಿ ಆಸಕ್ತನಾಗಿದ್ದ ಈತ ತನ್ನ ಆಸಕ್ತಿಯನ್ನು ಪೂರೈಸಿಕೊಳ್ಳಲು ದಕ್ಷಿಣದ ಗಂಗರಾಜ್ಯಕ್ಕೆ ಬರಬೇಕಾಯಿತು.
ಇದಕ್ಕೆ ಆ ಕಾಲದಲ್ಲಿ ಶ್ರವಣಬೆಳಗೊಳ ಜೈನ ಸಂಸ್ಕøತಿಯ ಕೇಂದ್ರವಾಗುತ್ತಿದ್ದುದ್ದು ಕಾರಣವಿರಬೇಕು.
ಜೊತೆಗೆ ಚಾವುಂಡರಾಯನ ವ್ಯಕ್ತಿತ್ವ ಕೀರ್ತಿಗಳೂ ಸೇರಿರಬೇಕು. ಪುಣ್ಯ ವಿಶೇಷದಿಂದ ಇವನಿಗೆ ಗಂಗಮಂತ್ರಿ
ಚಾಮುಂಡರಾಯನ ಆಶ್ರಯ ಸಿಕ್ಕಿತು. ಗಂಗರಾಜರ ಗುರುಗಳಾದ ಅಜಿತಸೇನಾಚಾರ್ಯರು ಇವನಿಗೆ ಗುರುಗಳಾಗಿ ದೊರೆತಂದು
ಇವನಲ್ಲಿದ್ದ ಧಾರ್ಮಿಕ ಆಸಕ್ತಿ ಬೆಳೆಯಲು ಅನುಕೂಲವಾಯಿತು. ಈ ಸನ್ನಿವೇಶದಲ್ಲಿ ರನ್ನ ಕವಿಯಾಗಿಯೂ ವಿದ್ವಾಂಸನಾಗಿಯೂ
ಹೊರಹೊಮ್ಮಲು ಸಾಧ್ಯವಾಯಿತು.
ಚಾವುಂಡರಾಯನ ನೆರವಿನಿಂದ ಸಕಲ ವಿದ್ಯಾಪಾರಂಗತನಾದ
ರನ್ನ ಗಂಗರಾಜ್ಯದಿಂದ ಹಿಂದಿರುಗಿ ಚಾಳುಕ್ಯ ತೈಲಪನಲ್ಲಿ ಆಶ್ರಯ ಪಡೆದ. ತೈಲಪನ ಮಗನಾದ ಸತ್ಯಾಶ್ರಯ
ಇರಿವಬೆಡಂಗ ಈತನಿಗೆ ಆಶ್ರಯ ನೀಡಿದ. ಹೀಗೆ ರನ್ನ ಗಂಗರಾಜ್ಯದಿಂದ ಹಿಂದಿರುಗಲು ಅತ್ತಿಮಬ್ಬೆಯ ಪ್ರಭಾವಿ
ವ್ಯಕ್ತಿತ್ವ ಕಾರಣವಿರಬೇಕು. ಅತ್ತಿಮಬ್ಬೆ ಶ್ರವಣಬೆಳಗೊಳಕ್ಕೆ ಬಂದು ಗೊಮ್ಮಟದರ್ಶನ ಪಡೆದ ವಿಚಾರ ಅಜಿತಪುರಾಣದಲ್ಲಿ
ಬಂದಿದೆ. ಹಾಗೆ ಬಂದಿದ್ದಾಗ ರನ್ನ ಅವಳ ವ್ಯಕ್ತಿತ್ವಕ್ಕೆ ಆಕರ್ಷಿತನಾಗಿ ತನ್ನ ರಾಜ್ಯಕ್ಕೆ ಮರಳಲು
ಮನಸ್ಸುಮಾಡಿರಬೇಕು. ಕವಿ ಇದ್ದಕ್ಕಿದ್ದಂತೆ ಮೇಲೇರಿದವನಲ್ಲ; ಹಂತ ಹಂತವಾಗಿ ಮುಂದೆ ಬಂದವನು. ಇದನ್ನು
ತಿಳಿಸುವ ಪದ್ಯವೊಂದು 'ಗದಾಯುದ್ಧ ದಲ್ಲಿದೆ. ಆರಂಭಕ್ಕೆ ಸಾಮಂತರ ನೆರವು ದೊರೆತ್ತಿದ್ದು, ಇವರಾರೆಂಬುದರ
ಬಗ್ಗೆ ಚರ್ಚೆಯಿದೆ. ಆದರೆ ಕವಿಗೆ ನೆರವಾದ ಈ ಸಾಮಂತ ರಟ್ಟರಾಜ ಒಂದನೆಯ ಕಾರ್ತವೀರ್ಯನಿರಬೇಕೆಂಬ ಊಹೆಯಿದೆ.
ಮುಂದೆ ಅಭ್ಯುದಯಕ್ಕೆ ಕಾರಣನಾದವನು ಮಂಡಲೇಶ್ವರನಾದ ಚಾವುಂಡರಾಯನೆಂಬುದು ಸ್ಪಷ್ಟ. ಗಂಗದಂಡನಾಯಕನಾದ
ಚಾವುಂಡರಾಯನಿಂದ ತಾನು 'ರತ್ನವಾಗಿ ರೂಪುಗೊಂಡೆನೆಂದು ಈತನೇ ಹೇಳಿಕೊಂಡಿದ್ದಾನೆ. ಹೀಗೆ ಬೆಳೆದ ರನ್ನ
ಚಕ್ರವರ್ತಿ ತೈಲಪನಲ್ಲಿ 'ಮಹಿಮೋನ್ನತಿ'ಯನ್ನೇ ಪಡೆದ. ಅವನಿಂದ 'ಕವಿಚಕ್ರವರ್ತಿ ಎಂಬ ಬಿರುದನ್ನೂ ಗಳಿಸಿದ.
'ಗದಾಯುದ್ಧ ವನ್ನು ದಂಡನಾಯಕ ಕೇಶಿ ತಿದ್ದಿದವನೆಂದು ಹೇಳಿಕೊಂಡಿರುವುದರಿಂದ, ಈ ಕೇಶಿಯೇ ರನ್ನನನ್ನು
ಚಕ್ರವರ್ತಿಗೆ ಪರಿಚಯಿಸಿರಬೇಕೆಂದು ತೋರುವುದು.
ರನ್ನನ ಪೋಷಕರಲ್ಲಿ ಚಾವುಂಡರಾಯ, ತೈಲಪರಂತೆಯೇ
ಅತ್ತಿಮಬ್ಬೆಯೂ ಮುಖ್ಯಳಾಗಿದ್ದಾಳೆ. ಚಕ್ರವರ್ತಿಗಳಲ್ಲಿ ತೈಲಪ ಶ್ರೇಷ್ಠನಾಗಿರುವಂತೆ ದಾನದಲ್ಲಿ ದಾನಚಿಂತಾಮಣಿ
ಅತ್ತಿಮಬ್ಬೆ ಹಾಗೆ ಎಂಬುದು ಕವಿಯ ಹೇಳಿಕೆ. ರನ್ನನಿಂದ ಅಜಿತಪುರಾಣವನ್ನು ಹೇಳಿಸಿದವಳು ಅತ್ತಿಮಬ್ಬೆ.
ಆದಿಪುರಾಣ, ಶಾಂತಿಪುರಾಣಗಳಿಗೆ ಸಮಾನವಾದ ಈ ಕೃತಿಯನ್ನು 'ಆಶ್ರಿತ ಚಿಂತಾಮಣಿಗತ್ತಿಮಬ್ಬೆಗರ್ತಿಯೆ
ಪೇಳ್ದಂ' ಎಂದಿದ್ದಾನೆ. ಕವಿ. ಇದರಿಂದ ಅತ್ತಿಮಬ್ಬೆ ಪರವಾಗಿರುವ ಇವನ ಗೌರವ ವ್ಯಕ್ತವಾಗುತ್ತದೆ. ಹೀಗಾಗಿ
ರನ್ನ ಪ್ರತಿಭಾವಂತನಾಗಿದ್ದು, ಅದನ್ನು ಗುರುತಿಸುವ ಜನರ ಸಹವಾಸ ದೊರಕಿದ್ದರಿಂದ ಸುಲಭವಾಗಿ ಮೇಲೇರಲು
ಸಾಧ್ಯವಾಯಿತು. ಕವಿ ತಾನು ಸೌಮ್ಯ ಸಂವತ್ಸರದಲ್ಲಿ ಹುಟ್ಟಿದವನೆಂದು ಹೇಳಿಕೊಂಡಿದ್ದಾನೆ. ಇದು 949
ಆಗುತ್ತದೆ. ಆದ್ದರಿಂದ ರನ್ನ ಹುಟ್ಟಿದ್ದು 949ರಲ್ಲಿ ಎನ್ನುವುದು ಖಚಿತ. ರನ್ನನ ಕಾಲವನ್ನು ಸಾಮಾನ್ಯವಾಗಿ
993 ಎಂದು ನಿಗದಿಪಡಿಸುವುದು ವಾಡಿಕೆ. ಇದಕ್ಕೆ ಅಜಿತಪುರಾಣದ ಕಾಲ 993 ಎಂದು ಸ್ಪಷ್ಟವಾಗಿರುವುದೇ
ಕಾರಣ. ರನ್ನ ಅಜಿತಪುರಾಣವನ್ನು ಅತ್ತಿಮಬ್ಬೆಯ ಆಶ್ರಯದಲ್ಲಿ ಬರೆದಿರುವನಾದರೂ ಒಂದು ರೀತಿಯಲ್ಲಿ ಬರೆದನೆಂದು
ಹೇಳಬಹುದಾಗಿದೆ. ಆದ್ದರಿಂದ ರನ್ನನ ಕಾಲಗ್ರಹಿಕೆಯಲ್ಲಿ ತೈಲಪನ ಆಳ್ವಿಕೆಯ ಕಾಲ ಸಹಜವಾಗಿಯೇ ಗಮನಕ್ಕೆ
ಬರುತ್ತದೆ. ಸತ್ಯಾಶ್ರಯವನ್ನು ಸಮೀಕರಿಸಿ ಗದಾಯುದ್ಧವನ್ನು ಬರೆದಿದ್ದರಿಂದ ಈ ಕಾವ್ಯದ ಕಾಲ ಸತ್ಯಾಶ್ರಯನ
ಕಾಲಕ್ಕಿಂತ ಬೇರೆಯಾಗುವುದು ಸಾಧ್ಯವಿಲ್ಲ. ಈ ಕಾರಣದಿಂದ ಗದಾಯುದ್ಧದ ಕಾಲವನ್ನು 1005 ಎಂದು ಗುರುತಿಸಲಾಗಿದೆ.
ಕವಿ 1020ರಲ್ಲಿ ತೀರಿಕೊಂಡಿರಬೇಕೆಂದು ಅಭಿಪ್ರಾಯವಿದೆ.
ರನ್ನನಿಗೆ ಕವಿರತ್ನ,
ಕವಿಮುಖಚಂದ್ರ, ಕವಿಚಕ್ರವರ್ತಿ, ಕವಿರಾಜಶೇಖರ, ಕವಿಜನಚೂಡಾರತ್ನ, ಕವಿಚರ್ತುಮುಖ, ಉಭಯಕವಿ ಮೊದಲಾದ
ಬಿರುದುಗಳಿವೆ. 'ಉಭಯ ಕವಿನ ಎಂದಿರುವುದರಿಂದ ಸಂಸ್ಕøತದಲ್ಲಿಯೂ ಬರೆದಿರಬಹುದೆ ಎಂಬ ಅನುಮಾನ ಬರುವುದು
ಸಹಜ. ಆದರೆ ಅದಕ್ಕೆ ಆಧಾರಗಳಿಲ್ಲ. ರನ್ನ ತನ್ನನ್ನು 'ಉಭಯ ವ್ಯಾಕರಣ ಪಂಡಿತ ಎಂದು ಹೇಳಿಕೊಂಡಿರುವುದರಿಂದ,
ಇವನಿಗೆ ವ್ಯಾಕರಣದಲ್ಲಿಯೂ ಪ್ರವೇಶವಿದ್ದಿರಬೇಕೆಂದು ತೋರುವುದು. ರನ್ನನು 'ರನ್ನಂವೈಯಾಕರಣಂ ಎಂದು ಹೇಳಿರುವುದರಿಂದ ಇದು ಮತ್ತಷ್ಟು ಬಲಪಡುವುದು.
ಈತ 'ರನ್ನ ನಿಘಂಟು ರಚಿಸಿರುವ ಹಿನ್ನೆಲೆಯಲ್ಲಿ ನೋಡಿದರೆ, ಇಂತಹ ಪ್ರಯೋಗವನ್ನು ಇವನು ಮಾಡಿರಲೂಬಹುದು.
ರನ್ನ ತನ್ನ ಕಾವ್ಯದಲ್ಲಿ
ವ್ಯಾಸ ವಾಲ್ಮೀಕಿಯರನ್ನೂ ಕಾಳಿದಾಸ ಬಾಣವನ್ನೂ ನೆನೆದಿದ್ದಾನೆ. 'ಗದಾಯುದ್ಧ ದ ಮೇಲೆ ಪ್ರಭಾವ ಬೀರಿದ
ಪಂಪ, ಭಾಸ, ಭಟ್ಟ ನಾರಾಯಣರನ್ನು ನೆನೆಯದಿರುವುದು ಆಶ್ಚರ್ಯ. ಆದರೆ ಅಜಿತಪುರಾಣದಲ್ಲಿ ಪಂಪನ ಸ್ಮರಣೆಯಿದೆ.
ಪಂಪ, ಪೊನ್ನ, ರನ್ನ-ಈ ಮೂವರು ಜಿನ ಸಮಯ
ದೀಪಕರ್ ಎಂದು ಹೇಳುತ್ತಾನೆ. ಕವಿಗಳಲ್ಲಿ ಪುಣ್ಯವಂತರೂ ಕೃತಾರ್ಹರೂ ಸೊಬಗರೂ ಆದವರು ಇಬ್ಬರೇ; ಕವಿತಾಗುಣಾರ್ಣದ
ಮತ್ತು ಕವಿರತ್ನ ಎಂದು ಹೇಳುವಲ್ಲಿಯೂ ಪಂಪನ ಉಲ್ಲೇಖವಿದೆ. ರನ್ನ ತನ್ನ ಕಾವ್ಯಶಕ್ತಿಯನ್ನು ಕುರಿತು
ಅನೇಕ ಮಾತುಗಳಲ್ಲಿ ಹೇಳಿಕೊಂಡಿದ್ದಾನೆ. ಅವುಗಳಲ್ಲಿ ವಾಗ್ದೇವಿಯ ಭಂಡಾರದ ಮುದ್ರೆಯ
ನೋಡೆದಂಎಂಬುದು ಒಂದು; ತನ್ನ ಕೃತಿಯನ್ನು ಪರೀಕ್ಷಿಪಂಗೆಂಟೆರ್ದೆಯೇ
ಎಂಬುದು ಮತ್ತೊಂದು. ಇದು ತನ್ನ ಕಾವ್ಯಶಕ್ತಿಯ ಬಗ್ಗೆ ಪೂರ್ಣ ವಿಶ್ವಾಸವಿರುವ ಕವಿಯ ಸವಾಲು.
ರನ್ನ ಬರೆದಿರುವ ಕೃತಿಗಳು ಎಷ್ಟು ಎಂಬ ಬಗ್ಗೆ
ಜಿಜ್ಞಾಸೆಯಿದೆ. ಕವಿಯೇ ಹೇಳಿರುವಂತೆ ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ, ಅಜಿತಪುರಾಣ, ಸಾಹಸಭೀಮವಿಜಯ,
ರನ್ನಕಂದ-ಈ ಐದು ಕೃತಿಗಳನ್ನು ರಚಿಸಿರುವಂತೆ ತೋರುತ್ತದೆ. ಮೊದಲೆರಡು ಕೃತಿಗಳು ದೊರೆಯದಿರುವುದರಿಂದ,
ಅನೆಕ ಊಹೆಗಳಿಗೆ ಎಡೆಮಂಡಿ ಕೊಟ್ಟಿದೆ. ಪರಶುರಾಮಚರಿತ, ಚಾವುಂಡರಾಯನನ್ನು (ಸಮರ ಪರಶುರಾಮ ಎಂಬ ಬಿರುದಾಂಕಿತ)
ಕುರಿತ ಕೃತಿಯಾಗಿರಬೇಕು. ರನ್ನನಿಗೆ ಮೊದಲು ಆಶ್ರಯ ಕೊಟ್ಟವನು ಚಾವುಂಡರಾಯನಾದುದರಿಂದ, ತನ್ನ ಮೊದಲ
ಕೃತಿಯನ್ನು ಅವನ ಪರವಾಗಿ ಬರೆದಿರಬೇಕು. ಇದರಲ್ಲಿ ಚಾವುಂಡರಾಯನ ಚರಿತೆಯಂತೆಯೇ ಪುರಾಣ ಪರಶುರಾಮನ ಕಥೆಯೂ
ಸೇರಿರಬೇಕು. 'ಚಕ್ರೇಶ್ವರಚರಿತ ತೈಲಪ ಚಕ್ರವರ್ತಿಯನ್ನು ಕುರಿತದ್ದೆಂಬುದಕ್ಕೆ ಆಧಾರಗಳಿವೆ. ರನ್ನನಿಗೆ
ತೈಲಪ ಪ್ರಮುಖ ಆಶ್ರಯದಾತ; 'ಕವಿಚಕ್ರವರ್ತಿ ಬಿರುದನ್ನು ಕೊಟ್ಟವನು. ಆದ್ದರಿಂದ 'ಚಕ್ರೇಶ್ವರ ಚರಿತ
ತೈಲಪನನ್ನು ಕುರಿತದ್ದೆಂಬುದು ಸ್ಪಷ್ಟ. ಇದು ಪೂರ್ಣ ಐತಿಹಾಸಿಕ ಕಾವ್ಯವಾಗಿರುವ ಸಾಧ್ಯತೆಯೂ ಇದೆ.
'ರನ್ನಕಂದ ಒಂದು ನಿಘಂಟು. ಪದಗಳಿಗೆ ಅರ್ಥವನ್ನು ಕಂದಪದ್ಯ ರೂಪದಲ್ಲಿ ಬರೆದಿರುವುದ ಇದರ ವಿಶೇಷ. ನಿಘಂಟುಗಳಲ್ಲಿ
ಇದು ಪ್ರಾಚೀನವಿರಬೇಕೆಂದು ತೋರುವುದು. ಅಸಮಗ್ರವಾಗಿ ದೊರೆತಿರುವುದರಿಂದ ಕವಿ, ಕೃತಿ ವಿಷಯವಾಗಿ ಹೆಚ್ಚಿನ
ವಿಚಾರಗಳು ತಿಳಿಯುವುದಿಲ್ಲ. ದೊರೆತಿರುವ ಪದ್ಯಗಳಲ್ಲಿ ಕವಿರತ್ನ ಎಂದಿರುವುದರಿಂದ ಇದು ರನ್ನನ ಕೃತಿ
ಎಂದು ಭಾವಿಸಲು ಯಾವ ಅಡ್ಡಿಯೂ ಇಲ್ಲ.
ಅಜಿತತೀರ್ಥಂಕರಪುರಾಣ ಧಾರ್ಮಿಕ ಕಾವ್ಯ. ಎರಡನೆಯ
ತೀರ್ಥಂಕರನ ಕಥೆ ಇದರ ವಸ್ತು. ಇದನ್ನು 'ಪುರಾಣ ತಿಲಕ ಎಂದು ಕವಿಯೇ ಹೇಳಿಕೊಂಡಿದ್ದಾನೆ. ಆದಿಪುರಾಣ
ಮತ್ತು ಶಾಂತಿಪುರಾಣಗಳಿಗೆ ಸಮಾನವಾದ ಕೃತಿಯೆಂದು ಇದರ ಅಭಿಪ್ರಾಯ. 'ಆದಿಪುರಾಣ' ದ ಕಥಾವೈಭವ ಇದಕ್ಕಿಲ್ಲದಿರುವುದರಿಂದ,
ಅದರ ಎತ್ತರಕ್ಕೆ ಏರಲಾರದೆಂದೇ ತೋರುತ್ತದೆ. ಆದರೆ ಪೊನ್ನನ ಶಾಂತಿಪುರಾಣಕ್ಕಿಂತ ಇದು ಉತ್ತಮ ಕೃತಿ
ಎಂದು ದೃಢವಾಗಿ ಹೇಳಬಹುದು. ಇದರಲ್ಲಿ ಹನ್ನೆರಡು ಆಶ್ವಾಸಗಳಿದ್ದು, ಮೊದಲನೆಯ ಆಶ್ವಾಸ ಪೂರ್ಣವಾಗಿ
ಆಶ್ರಯದಾತೆ ಅತ್ತಿಮಬ್ಬೆಯ ಚಿತ್ರಣಕ್ಕೆ ಮೀಸಲಾಗಿದೆ. ಕೊನೆಯ ಆಶ್ವಾಸದಲ್ಲಿ ಗ್ರಂಥಸಮಾಪ್ತಿ. ಕವಿಕಾವ್ಯ
ಆಶ್ರದಾತರ ವಿಚಾರವಿದೆ. ಇನ್ನುಳಿದ ಹತ್ತು ಆಶ್ವಾಸಗಳಲ್ಲಿ ಏಳರಲ್ಲಿ ಅಜಿತತೀರ್ಥಂಕರನ ಕಥೆಯೂ ಆಮೇಲಿನ
ಮೂರರಲ್ಲಿ ಸಾಗರ ಚಕ್ರವರ್ತಿಯ ಕಥೆಯೂ ಬಂದಿದೆ. ಭವಾವಳಿಯ ಗೊಂದಲವಿಲ್ಲದಿರುವುದು ಈ ಕೃತಿಯ ವಿಶೇಷ.
ಗ್ರಂಥದ ರಸವತ್ತಾದ ಭಾಗಗಳೆಂದರೆ ಅತ್ತಿಮಬ್ಬೆ ಮತ್ತು ಸಾಗರಚಕ್ರವರ್ತಿ ಕಥೆಗಳ ಭಾಗಗಳೆ ಆಗಿವೆ. ಜೈನಧರ್ಮಕ್ಕೆ
ಸಂಬಂಧಿಸಿದ ವಿಷಯಗಳನ್ನು ತೊಡಕಿಲ್ಲದೆ ನಿರೂಪಿಸಿರುವುದರಿಂದ ಆ ಕುರಿತು ಒಂದು ಶಾಸ್ತ್ರೀಯ ಗ್ರಂಥವೂ
ಆಗಿದೆ.
ರನ್ನನ ಕೃತಿಗಳಲ್ಲಿ
ಸಾಹಸಭೀಮವಿಜಯ ಅತಿ ಮುಖ್ಯವಾದುದು. ಇವನ ಲೌಕಿಕ ಕೃತಿಗಳಲ್ಲಿ ಉಪಲಬ್ಧವಿರುವಂಥದು ಇದೊಂದೇ. ಗದಾ ಸೌಪ್ತಿಕ
ಪರ್ವಗಳ ಕಥೆಯೇ ಇದರ ವಸ್ತು. ಸಂದರ್ಭ ಒದಗಿದಾಗಲೆಲ್ಲಾ ಹಿಂದಿನ ಕಥೆಯನ್ನು ಸೂಚಿಸುವ ವಿಧಾನವನ್ನು
ಅನುಸರಿಸುವುದರಿಂದ (ಸಿಂಹಾವಲೋಕನ) ಕಾವ್ಯಕ್ಕೆ ಸಮಗ್ರತೆ ಪ್ರಾಪ್ತವಾಗಿದೆ. ಹತ್ತು ಆಶ್ವಾಸಗಳಲ್ಲಿ
ಹರಡಿಕೊಂಡಿರುವ ಈ ಕಾವ್ಯದಲ್ಲಿ ಭೀಮ-ದುರ್ಯೋಧನರ ಗದಾಯುದ್ಧವೇ ಕೇಂದ್ರಬಿಂದು. ಅದರ ಕಾರಣ ಮತ್ತು ಪರಿಣಾಮಗಳನ್ನು
ಕೃತಿ ಆದ್ಯಂತ ಸೂಚಿಸುತ್ತದೆ. ಕೃತಿಗೆ 'ಸಾಹಸಭೀಮವಿಜಯ ಎಂದು ಹೆಸರಿದ್ದರೂ ಗದಾಯುದ್ಧ ಎಂದೇ ಇದರ ಖ್ಯಾತಿ.
ಮಹಾಭಾರತದ ಭೀಮನೊಡನೆ ಆಶ್ರದಾತನಾದ ಸತ್ಯಾಶ್ರಯ ಚಕ್ರವರ್ತಿಯಾದ ಮೇಲೆಯೇ ರನ್ನ ಈ ಕಾವ್ಯವನ್ನು ಬರೆದಿರಬೇಕೆನಿಸುತ್ತದೆ.
ಪುರಾಣಕಥೆಯಲ್ಲಿ ಸಮಕಾಲೀನ ಇತಿಹಾಸವನ್ನು ಸಮೀಕರಿಸುವುದರ ಮೂಲಕ ಕಾವ್ಯದಲ್ಲಿ ಹೊಸಧ್ವನಿಯನ್ನು ಉಂಟುಮಾಡಬೇಕೆಂಬ
ರನ್ನನ ಧೋರಣೆಗೆ ಪಂಪನೇ ಆದರ್ಶ. ಕಥಾನಾಯಕ ಭೀಮನಾದರೂ ದುರ್ಯೋಧನನ ಪಾತ್ರವೇ ಹೆಚ್ಚು ಜೀವಂತವಾಗಿ ಚಿತ್ರಣಗೊಂಡಿದೆ.
ಈತ ಕಾವ್ಯದಲ್ಲಿ ದುರಂತನಾಯಕನಾಗಿ ಕಂಡರಣೆಗೊಂಡಿದ್ದಾನೆ. ಪಂಪನನ್ನು ಅನುಸರಿಸಿಯೂ ಅವನಿಗೆ ಸಾಕಷ್ಟು
ಋಣಿಯಾಗಿಯೂ ರನ್ನ ಮಹತ್ವದ ಕಾವ್ಯ ನಿರ್ಮಿಸಿದ ಎಂಬುದು ಮುಖ್ಯ ವಿಚಾರ.
ಸಂಗ್ರಹ : ಸುಮಿತ್ರ ಎನ್. ( ಮೈಸೂರು ವಿಶ್ವವಿದ್ಯಾಲಯದ
ವಿಶ್ವಕೋಶದಿಂದ)
ಕವಿ
ವಾಣಿ

ವಿಶ್ವ ವಿನೂತನ ವಿದ್ಯಾ ಚೇತನ
ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯ ಸಂಸ್ಕಾರಿ
ಜಯಭಾರತಿ ಕರುನಾಡ ಸರಸ್ವತಿ
ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ, ತುಂಗೆ, ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ
ವಿಶ್ವವಿನೂತನ ||೧||
ಗಂಗ, ಕದಂಬಾ, ರಾಷ್ಟ್ರಕೂಟ ಬಲ
ಚಲುಕ್ಯ, ಹೊಯ್ಸಳ, ಬಲ್ಲಾಳ
ಹಕ್ಕ-ಬುಕ್ಕ, ಪುಲಕೇಶಿ, ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ
ವಿಶ್ವವಿನೂತನ ||೨||
ಆಚಾರ್ಯತ್ರಯ ಮತಸಂಸ್ಥಾಪನ
ಬಸವಾಲ್ಲಮ ಅನುಭಾವ ನಿಕೇತನ
ಶರಣ, ದಾಸ, ತೀರ್ಥಂಕರ ನಡೆ-ನುಡಿ ವಿಶ್ವತಮೋಹಾರಿ
ವಿಶ್ವವಿನೂತನ ||೩||
ಪಂಪ, ರನ್ನ, ನೃಪತುಂಗ, ಹರೀಶ್ವರ
ರಾಘವಾಂಕ, ಸರ್ವಜ್ಞ, ಪುರಂದರ
ಕುವರವ್ಯಾಸ, ರತ್ನಾಕರ, ಜನಪದ ಕಾವ್ಯ ಸಮುದ್ರವಿಹಾರಿ
ವಿಶ್ವವಿನೂತನ ||೪||
ಸಾಯಣ, ವಿದ್ಯಾರಣ್ಯ, ಭಾಸ್ಕರ
ಮಹಾದೇವಿ, ಮುಕ್ತಾಯಿ, ಮಹಂತರ
ಕಂತಿ-ಹಂಪ, ಸುಮನೋರಮೆ-ಮುದ್ದಣ
ಸರಸ ಹೃದಯ ಸಂಚಾರಿ
ವಿಶ್ವವಿನೂತನ ||೫||
ತ್ಯಾಗ-ಭೋಗ-ಸಮಯೋಗದ ದೃಷ್ಟಿ
ಬೆಳುವೊಲ, ಮಲೆ, ಕರೆ, ಸುಂದರ ಸೃಷ್ಟಿ
ಜ್ಞಾನದ, ವಿಜ್ಞಾನದ, ಕಲೆಯೈಸಿರಿ
ಸಾರೋದಯ ಧಾರಾನಗರಿ
ವಿಶ್ವವಿನೂತನ ||೬||
ಅರಿವೇ ಗುರು, ನುಡಿ ಜ್ಯೋತಿರ್ಲಿಂಗ,
ದಯವೇ ಧರ್ಮದ ಮೂಲ ತರಂಗ
ವಿಶ್ವಭಾರತಿಗೆ ಕನ್ನಡದಾರತಿ
ಮೊಳಗಲಿ ಮಂಗಲ ಜಯಭೇರಿ
ವಿಶ್ವವಿನೂತನ ||೭||
ಸಾಹಿತ್ಯ: ಚೆನ್ನವೀರ ಕಣವಿ

ಸದ್ದಿರದ
ಪಸುರುಡೆಯ ಮಲೆನಾಡ ಬನಗಳಲಿ
ಸದ್ದಿರದ ಪಸುರುಡೆಯ
ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ.
ಅಲ್ಲಿ ಗಿಳಿ
ಗೊರವಂಕ ಕೋಗಿಲೆಗಳಿಂಚರವು
ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ.
ಅಲ್ಲಿ ಬಳಿ ಪಸಲೆಯಲಿ
ದನಗಳಂಬಾ ಎಂಬ
ದನಿಯು ದನ ಕಾಯುವವನ ಕೊಳಲೊಡನೆ ಬರಲಿ.
ಅಲ್ಲಿ ಸಿರಿಗನ್ನಡದ
ಕಬ್ಬಗಳ ಹಬ್ಬಗಳು
ದಿನ ದಿನವು ಸವಿಯೂಟವಿಕ್ಕುತಿರಲೆನಗೆ.
ಬಾಂದಳದಿ ಹಾರಿದರು
ಬುವಿಯಲ್ಲಿ ಜಾರುತಿಹ
ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ.
ಬೈಗಾಗೆ ನಮ್ಮೊಡನೆ
ಗಳಪಿಯಲೆದಡ್ಡಾಡೆ
ಗೋಪಾಲನಾಗಿರುವ ತಿಮ್ಮನೆನಗಿರಲಿ!
ಮೇಲೆ ಬಾಳನು
ಬಿಟ್ಟು ನಾನಳಿದು ಮರೆಯಾಗೆ
ನನ್ನಾಸೆ ಏನೆಂದು ಎಲ್ಲರರಿತಿರಲಿ:
ಸಗ್ಗವಿವನೊಳಗೊಂಡಿರಲು
ಸಗ್ಗವೆನಗಿರಲಿ;
ನರಕವಿವನೊಳಗೊಂಡಿರಲು ನರಕವಿರಲಿ!
- ಕುವೆಂಪು
ರಸಪ್ರಶ್ನೆಗಳು
೧.ಬಸವ ಯುಗ ಎಂಬುವುದಕ್ಕೆ ಬದಲಾಗಿ ಹರಿಹರ ಯುಗ ಎಂದು ಕರೆದವರು ?
೨.ಕನ್ನಡದ ಚಂಪೂವಿನಲ್ಲಿ ಕೃತಿ ರಚನೆ ಮಾಡಿದ ಮೊದಲ ಕವಿ ?
೩.ಯಶಸ್ತಿಲಕ ಕೃತಿಯ ಕರ್ತೃ ?
೪.ವಸ್ತುಕ ವರ್ಣಕ ಎಂಬ ಲೇಖನ ಬರೆದವರು ?
೫.ಸಂಸ್ಕೃತದಲ್ಲಿ ಚಂಪೂವಿನ ಲಕ್ಷಣವನ್ನು ಮೊದಲು ಹೇಳಿದವನು ?
ಮೇಲಿನ
ಪ್ರಶ್ನೆಗಳಿಗೆ ಸರಿ ಉತ್ತರಗಳನ್ನು ಮೊದಲು ಕಳುಹಿಸಿದ
ಐದು ಜನರ ಹೆಸರುಗಳೊಂದಿಗೆ ಸರಿಯಾದ ಉತ್ತರಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. (ಸರಿ
ಉತ್ತರಗಳನ್ನು ೮೨೧೭೭೪೪೮೮೬ ಸಂಖ್ಯೆಗೆ ವಾಟ್ಸಪ್ ಮಾಡಬೇಕು )
ಸಂಚಿಕೆ ೦೨ ರ ರಸಪ್ರಶ್ನೆಗಳು :
೧.ಶಾಸನಗಳನ್ನು
ಕನ್ನಡ ಸಾಹಿತ್ಯದ ತಲಕಾವೇರಿ ಎಂದವರು ಯಾರು ?
೨.ಕನ್ನಡ
ನಾಡು-ನುಡಿ ಜನರ ಬಗೆಗಿನ ಉಲ್ಲೇಖವಿರುವ ಪ್ರಾಚೀನ ಸಂಸ್ಕೃತ ನಾಟಕ ?
೩.ಪೂರ್ವದ
ಹಳಗನ್ನಡಕ್ಕೆ ಸೇರಿದ ಕನ್ನಡದ ಪ್ರಥಮ ಉಪಲಬ್ಧ ಶಾಸನ
?
೪.ವಡ್ಡಾರಾದನೆಯಲ್ಲಿ
ಎಷ್ಟು ಕಥೆಗಳಿವೆ ?
೫.ಕನ್ನಡದ
ಮೊದಲ ಗದ್ಯ ಗ್ರಂಥ ?
ಸಂಚಿಕೆ ೦೨
ರ ಸರಿ ಉತ್ತರಗಳು : ೧) ಎಂ ಚಿದಾನಂದ ಮೂರ್ತಿ ,೨) ಮೃಚ್ಛಕಟಿಕ ,೩)ಹಲ್ಮಿಡಿ ಶಾಸನ ೪) ೧೯ ೫) ವಡ್ಡಾರಾಧನೆ.
ಸಂಚಿಕೆ ೦೨
ರ ರಸ ಪ್ರಶ್ನೆಗಳಿಗೆ ಸರಿ ಉತ್ತರಗಳನ್ನು ಕಳುಹಿಸಿದವರು
: ಚಂದ್ರಶೇಖರ ವಿ, ಹರೀಶ ಪಿ ಎ , ಸುಷ್ಮ
ವಿ, ಸುಧಾಮ ಎಸ್, ನರೇಶ ಆರ್.
ಸರಿ ಉತ್ತರಗಳನ್ನು ಕಳುಹಿಸಿದವರಿಗೆ ಅಭಿನಂದನೆಗಳು
ರಸಪ್ರಶ್ನೆ ನಿರ್ವಹಣೆ : ಸುಮಿತ್ರ
ಎನ್ ಕೋಲಾರ
ಪ್ರಕಟಣೆ : ವಾಟ್ಸಪ್
ಸಾಹಿತ್ಯ ಪತ್ರಿಕೆಯ ಮುಖಪುಟಕ್ಕಾಗಿ ತಾವೇ ಸೆರೆ ಹಿಡಿದ ಪ್ರಕೃತಿಯ , ಪ್ರಾಣಿ ಪಕ್ಷಿಗಳ, ಹಾಗೂ
ಇತರೆ ಸುಂದರವಾದ, ಭಾವನಾತ್ಮಕವಾದ ಛಾಯಾಚಿತ್ರಗಳನ್ನು ಅಥವಾ ತಾವೇ ರಚಿಸಿರುವ ಚಿತ್ರಗಳನ್ನು ನಮಗೆ
ಕಳುಹಿಸಬಹುದು...ಸೂಕ್ತವಾದ ಚಿತ್ರವನ್ನು ಸೂಕ್ತ ಸಮಯದಲ್ಲಿ ನಿಮ್ಮ ಹೆಸರಿನೊಂದಿಗೆ ಪತ್ರಿಕೆಯಲ್ಲ
ಪ್ರಕಟಿಸಲಾಗುವುದು...
ಪತ್ರಿಕೆಯ
ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಲಹೆ ಸೂಚನೆಗಳನ್ನು,ವಿಷಯ ವಿಮರ್ಶೆಯನ್ನು ಮುಕ್ತವಾಗಿ ನಮಗೆ ಬರೆಯಬಹುದು. ಅದನ್ನು ಪತ್ರಿಕೆಯಲ್ಲಿ
ಪ್ರಕಟಿಸುತ್ತೇವೆ.
ಪ್ರಕಟಣೆ : ವಿಚಾರ ಮಂಟಪ ಸಾಹಿತ್ಯ ಪತ್ರಿಕೆ
ಪ್ರಾರಂಭಿಕ ಕವಿ ಲೇಖಕ ವಿಮರ್ಶಕ ರನ್ನು ಪ್ರೂತ್ಸಾಹಿಸುವ ಹಾಗೂ ಮಾರ್ಗದರ್ಶನ ನೀಡುವ ಸದ್ದುದ್ದೇಶದಿಂದ
ಆನ್ ಲೈನ್ ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸುತ್ತಿದ್ದು, ಕವಿತೆಗಳು, ಚುಟುಕು ಬರಹಗಳು, ನಗೆಹನಿಗಳು,
ಲೇಖನಗಳು, ಪ್ರಭಂಧಗಳು, ವಿಮರ್ಶೆ, ಹಾಗೂ ಅನುಭವ ಕಥನಗಳು , ಚಿತ್ರಕಲೆ, ವೈಚಾರಿಕ ಬರಹಗಳು , ಪ್ರಚಲಿತ
ಘಟನೆಗಳ ಕುರಿತಾದ ಪ್ರತಿಕ್ರಿಯೆಗಳನ್ನು ಹಾಗೂ ಇನ್ನಿತರೇ ಸೃಜನಾತ್ಮಕ ಬರಹಗಳನ್ನು ದೇಶದ ಯಾವುದೇ ಮೂಲೆಯಿಂದಲಾದರೂ
ಬರೆದು ತಪ್ಪಿಲ್ಲದಂತೆ ಟೈಪಿಸಿ ನಮಗೆ ಕಳುಹಿಸಬಹುದು... ಸಂಪಾದಕ ಮಂಡಳಿಯಿಂದ ಮೆಚ್ಚುಗೆ ಪಡೆದ ಬರಹಗಳನ್ನು
ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ. ಪ್ರತಿ ತಿಂಗಳ ೫-೧೦ ಮತ್ತು ೨೦-೨೫ ನೇ ದಿನಾಂಕಗಳಲ್ಲಿ
ಪತ್ರಿಕೆ ಪಿ ಡಿ ಎಪ್ ರೂಪದಲ್ಲಿ ತಮ್ಮ ಕೈ ಸೇರುವುದು. ನಿಮ್ಮ ಬರಹಗಳು ೧ ಮತ್ತು ೧೫ ನೇ ತಾರೀಕಿನ
ಒಳಗೆ ನಮಗೆ ತಲುಪಬೇಕು. ತಮ್ಮ ಬರಹಗಳನ್ನು ಕಡ್ಡಾಯವಾಗಿ ೮೨೧೭೭೪೪೮೮೬ ಈ ನಂಬರಿಗೆ ವಾಟ್ಸಪ್ ಮೂಲಕ
ಕಳುಹಿಸಿಕೊಡಬೇಕು, ಬೇರೆ ಯಾವುದೇ ನಂಬರಿಗೆ ಕಳುಹಿಸಲಾಗುವ ಬರಹಗಳನ್ನು ಪ್ರಕಟಣೆಗೆ ಪರಿಗಣಿಸಲಾಗುವುದಿಲ್ಲ.
ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಹಾಗೂ ಹೆಚ್ಚಿನ ಮಾಹಿತಿಗೆ
ಸಂಪಾದಕರನ್ನು ಸಂಪರ್ಕಿಸಿ :
ವರುಣ್‌ರಾಜ್ ಜೀ
ಸಂಪಾದಕರು
ವಿಚಾರ
ಮಂಟಪ ಸಾಹಿತ್ರ ಪತ್ರಿಕೆ
9448241450. (ವಾಟ್ಸಪ್ ಸಂದೇಶ ಕಳುಹಿಸಿ ತಕ್ಷಣ ಪ್ರತಿಕ್ರಿಯೆ ಪಡೆಯಬಹುದು)
ಪ್ರಕಟಣೆ
ಕರುನಾಡ
ಹಣತೆ ಕವಿ ಬಳಗ ಹಾಗೂ ವಿಚಾರ ಮಂಟಪ ಸಾಹಿತ್ಯ ಪತ್ರಿಕಾ ಬಳಗ ಇವರ ಜಂಟಿ ಸಹಯೋಗದಲ್ಲಿ
*ಕವಿತೆ/ಕವನ
ಸ್ಪರ್ಧೆ*
ಸ್ಪರ್ಧೆ ಪ್ರಾರಂಭದ ದಿನಾಂಕ :
೦೧/೧೧/೨೦೨೦ ಮುಕ್ತಾಯ : ೧೫/೧೧/೨೦೨೦.
ವಿಷಯ : *ಕರೋನಾ ಲಾಕ್ ಡೌನ್*
ಸ್ಪರ್ಧೆಯಲ್ಲಿ ಭಾಗಿಯಾಗುವವರಿಗೆ ನಿಯಮಗಳು
:
·
ಕವನ
ಕಳುಹಿಸುವಾಗ ಮೇಲೆ "ಹಣತೆ ಕವಿ ಬಳಗ ಹಾಗೂ ವಿಚಾರ ಮಂಟಪ ಬಳಗದ ಕವನ
ಸ್ಪರ್ಧೆಗೆ" ಎಂದು ಬರೆಯಬೇಕು.
·
ಸ್ಪರ್ಧೆಗೆ
ಕಳುಹಿಸುವ ಕವನ ಈ ಮುಂಚೆ ಎಲ್ಲಿಯೂ ಸಾಮಾಜಿಕ
ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು.
·
ಕವನಗಳಿಗೆ
೨೦ ರಿಂದ ೨೫ ಸಾಲುಗಳ ಮಿತಿ ಇರಲಿ,ಈ ನಿಯಮ ಕಡ್ಡಾಯವಾಗಿ ಪಾಲಿಸಬೇಕು.
·
ಕವನವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಟೈಪಿಸಿ ಪೂರ್ಣ ಹೆಸರು , ದೂರವಾಣಿ ನಂಬರ್ ವಿಳಾಸ ಮಾಹಿತಿಯೊಂದಿಗೆ ಹಾಕಬೇಕು
·
ಕೊಟ್ಟ ಸಮಯಕ್ಕೆ ಮೊದಲು ಮತ್ತು ಸಮಯದ ನಂತರ ಬಂದ
ಕವನಗಳನ್ನು ಪರಿಗಣಿಸುವುದಿಲ್ಲ.
·
ಕನ್ನಡ ಅಕ್ಷರಗಳು ತಪ್ಪಾಗದಂತೆ ನೋಡಿ ಕೊಳ್ಳಿರಿ
·
ಈ
ಸ್ಪರ್ಧೆಯ ವಿಷಯಕ್ಕೆ ಸಂಬಂಧಿಸಿದ ಕವನಗಳನ್ನು
೦೧/೧೧/೨೦೨೦ ರ ನಂತರ ೮೨೧೭೭೪೪೮೮೬ ಈ ನಂಬರಿಗೆ ವಾಟ್ಸಾಆಪ್ ಮಾಡಬೇಕು.
·
ಪಿಡಿಎಪ್
,ವರ್ಡ್ ಡಾಕುಮೆಂಟ್, ಪೋಟೋ ರೂಪದಲ್ಲಿ ಕಳುಹಿಸುವ ಬರಹಗಳನ್ನು ಸ್ವೀಕರಿಸುವುದಿಲ್ಲ.
·
ಕರೋನಾ
ಲಾಕ್ ಡೌನ್ ನಿಂದ ಒದಗಿ ಬಂದ ಕಷ್ಟ ನಷ್ಟಗಳನ್ನು ತಮ್ಮದೇ ಅನುಭವಗಳ ಹಿನ್ನೆಲೆಯಲ್ಲಿ ಹಿಡಿದಿಡುವ
ಪ್ರಯತ್ನ ಮಾಡಿ.
·
ತಮ್ಮ
ಕವಿತೆಗಳಿಗೆ ಸಂಭಂದಿಸಿ ಎನಾದರೂ ವಿವರಗಳನ್ನು ಹೇಳಬೇಕಿದ್ದರೆ ಅದನ್ನು ೪-೫ ವಾಕ್ಯಗಳಲ್ಲಿ
ತಿಳಿಸಬಹುದು.
·
ಕವನಗಳನ್ನು
ಕಳುಹಿಸಲು ಕಡೆಯ ದಿನಾಂಕ : ೧೫/೧೧/೨೦೨೦.
·
ತೀರ್ಪುಗಾರರು
ಉತ್ತಮವೆಂದು ಪ್ರಕಟಿಸಿದ ಕವಿತೆಗಳಿಗೆ ಪ್ರಮಾಣ ಪತ್ರ ಹಾಗೂ ಸೂಕ್ತ ಬಹುಮಾನ ನೀಡಲಾಗುತ್ತದೆ.
·
ವಿಜೇತರ
ವಿವರಗಳನ್ನು ೨೫/೧೧/೨೦೨೦ ರಂದು ವಿಚಾರ ಮಂಟಪ ಸಾಹಿತ್ಯ
ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ.
·
ತಿರ್ಪುಗಾರರ
ನಿರ್ಣಯವೇ ಅಂತಿಮವಾಗಿರುತ್ತದೆ.
·
ನಿರ್ವಾಹಕರು
ವರುಣ್ ರಾಜ್ ಜೀ , ದೂರವಾಣಿ ಸಂಖ್ಯೆ :
೯೪೪೮೨೪೧೪೫೦.
·
ಹೆಚ್ಚಿನ
ಮಾಹಿತಿಗೆ ಸಂಪರ್ಕಿಸಿ : ವರುಣ್ ರಾಜ್ ಜೀ, ವಿಚಾರ ಮಂಟಪ ಸಾಹಿತ್ಯ ಬಳಗ.- ೯೪೪೮೨೪೧೪೫೦, ಕನಕ ಪ್ರೀತೀಶ್ ಸಂಸ್ಥಾಪಕರು, ಕರುನಾಡ ಹಣತೆ ಕವಿ
ಬಳಗ -೯೯೮೬೪೨೬೭೫೫ ರಾಜು ಸೂಲೇನಹಳ್ಳಿ,
ರಾಜ್ಯಾಧ್ಯಕ್ಷರು ಕರುನಾಡ ಹಣತೆ ಕವಿ ಬಳಗ - ೯೭೪೧೫೬೬೩೧೩
---------------------------------------------------------------------------------------------------------------

ಪ್ರಿಯ
ಸಂಗಾತಿಗಳೆ,
ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಪರಿಚಯ.
ಸ್ವಾತಂತ್ರ್ಯ ಸಮಾನತೆ,ಬಂಧುತ್ವ
ಜೀವಾಳವಾದ ನಮ್ಮ ಸಂವಿಧಾನದಲ್ಲಿ ಶ್ರದ್ದೆ, ನಂಬಿಕೆಗಳನ್ನು ಇರಿಸಿರುವ ಎಲ್ಲರೂ ಕರ್ನಾಟಕ ರಾಜ್ಯ ಮಹಿಳಾ
ದೌರ್ಜನ್ಯ ವಿರೋಧಿ ಒಕ್ಕೂಟದ ಸಂಗಾತಿಗಳು. ಒಕ್ಕೂಟವು ಒಂದು ಸಂಘವಲ್ಲ, ಸಂಸ್ಥೆಯಲ್ಲ,ಸಂಘಟನೆಯಲ್ಲ,
ಬದಲಿಗೆ ಹಲವು ಜನಪರ, ಜೀವಪರ, ಪ್ರಜಾಸತ್ತಾತ್ಮಕ ಸಂಘಟನೆಗಳ ಒಗ್ಗಟ್ಟಿನ ಜಾಲ. ಸಮಾನತೆ,ಸ್ವಾತಂತ್ರ್ಯ,
ಸೋದರಿತ್ವ, ಪ್ರಜಾಸತ್ತಾತ್ಮಕ ಮೌಲ್ಯ ಮತ್ತು ಸಾಮಾಜಿಕ ನ್ಯಾಯ ಗಳಲ್ಲಿ ನಂಬಿಕೆ ಇರುವವರೆಲ್ಲಾ ಇದರ
ಸದಸ್ಯರು. ಪ್ರೀತಿ ಮತ್ತು ನಿರ್ಭೀತಿಯೇ ಪ್ರವೇಶ ಶುಲ್ಕ. ಈ ನೆಲ, ಜನ, ಭಾಷೆ, ಅಭಿಪ್ರಾಯಗಳನ್ನು ಸಮಾನ
ಗೌರವದಲ್ಲಿ ಕಾಣುವುದೇ ಒಕ್ಕೂಟದ ಧರ್ಮ. ಲಿಂಗ,
ಲಿಂಗತ್ವ, ಜಾತಿ, ವರ್ಗ, ಮತ,
ಧರ್ಮ, ಸಂಸ್ಕೃತಿ ಜನಾಂಗ, ಯುದ್ಧ,
ಸಿದ್ಧಾಂತ ,ಗಡಿ ,ಭಾಷೆಗಳ ಹೆಸರಿನಲ್ಲಿ ನಡೆಯುವ ಹಿಂಸೆ ತಾರತಮ್ಯ ದೌರ್ಜನ್ಯಗಳನ್ನು ವಿರೋಧಿಸುತ್ತದೆ.,
ಮಹಿಳೆಯರ ಆತ್ಮ ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ವ್ಯವಸ್ಥೆಯನ್ನು
ರೂಪಿಸಲು ಮನಸ್ಸುಗಳನ್ನು ಕಟ್ಟಲು ದುಡಿಯುತ್ತದೆ. ಎಲ್ಲಾ ಸಮಾನ ಮನಸ್ಕ ಸಂಗಾತಿಗಳನ್ನು
ಒಟ್ಟುಗೂಡಿಸಿ ಸೋದರಿತ್ವದ ನೆಲೆಯಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ.
ಮಂಗಳೂರಿನಲ್ಲಿ ಪಬ್ ಮೇಲೆ ದಾಳಿ
ಯಾಗಿ ಸಾರ್ವಜನಿಕವಾಗಿ ಮಹಿಳೆಯರ ಮೇಲೆ ಅನಾಗರಿಕವಾಗಿ ದಾಳಿ ನಡೆದಾಗ ಅಲ್ಲಿನ ಜೀವಪರ ಮಹಿಳಾ
ಗುಂಪುಗಳು ಕರ್ನಾಟಕದ ಇತರ ಸಮಾನ ಮನಸ್ಕ ಸಂಗಾತಿಗಳನ್ನು ಸೇರಿಸಿಕೊಂಡು ಮಹಿಳಾ ದೌರ್ಜನ್ಯವನ್ನು
ದೃಡವಾಗಿ ನಾವು ವಿರೋಧಿಸುತ್ತೇವೆ ಎಂದು ಗಟ್ಟಿ ಧನಿಯಲ್ಲಿ ಹೇಳಲು ಮಹಿಳಾ ದೌರ್ಜನ್ಯ ವಿರೋಧಿ
ಒಕ್ಕೂಟವನ್ನು ಕಟ್ಟಿಕೊಂಡಿತು. 2014 ರಲ್ಲಿ ಇಂತಹ ದೌರ್ಜನ್ಯದ ವಿರುದ್ಧ ಅರ್ಥಪೂರ್ಣವಾದ ಕಾರ್ಯಕ್ರಮವನ್ನು
ದೊಡ್ಡ ಮಟ್ಟದಲ್ಲಿ ಮಾಡಲಾಯಿತು. ನಂತರ ದಿನಗಳಲ್ಲಿ ಒಕ್ಕೂಟದ ಕಾರ್ಯಕ್ರಮಗಳು ಪ್ರತಿವರ್ಷ ಪ್ರತಿ ಜಿಲ್ಲೆಯಲ್ಲಿಯೂ
ಆಯಾ ಜಿಲ್ಲೆಗಳ ಮಹಿಳೆಯರ ಸಮಸ್ಯೆಗಳನ್ನು ಮುಖ್ಯವಾಗಿರಿಸಿಕೊಂಡು ಮಾಡಬೇಕು ಎಂದು ನಿರ್ಧರಿಸಲಾಯಿತು.
ಇದರ ಮುಂದುವರೆದ ಭಾಗವಾಗಿ ಮೈಸೂರು ಬೆಂಗಳೂರು ಬಿಜಾಪುರ ,ಕೊಪ್ಪಳ ,ಶಿವಮೊಗ್ಗ, ಧಾರವಾಡ ,ಮಂಡ್ಯ
ಜಿಲ್ಲೆಗಳಲ್ಲಿ ಒಕ್ಕೂಟದ ಕಾರ್ಯಕ್ರಮಗಳಾದ ಅರಿವಿನ ಪಯಣ, ಬಿಳಿ ಉಡುಪಿನಲ್ಲಿ ಮಹಿಳೆಯರು, ಅಧ್ಯಯನ
ಶಿಬಿರಗಳು ತುಂಬಾ ಅರ್ಥಪೂರ್ಣವಾಗಿ ನಡೆದುಕೊಂಡು ಬಂದಿವೆ ಸಮಾನ ಮನಸ್ಕರೆಲ್ಲರನ್ನು
ಸೇರಿಸಿಕೊಂಡು ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾ ಬರುತ್ತಿದೆ.
ಮುಂದುವರೆದ ಭಾಗವಾಗಿ ನಾವು ಈ ಬಾರಿಯ ಮಹಿಳಾ ಒಕ್ಕೂಟದ ಕಾರ್ಯಕ್ರಮವನ್ನು ಕೋಲಾರದಲ್ಲಿ
ಮಾಡಲು ನಿರ್ಧರಿಸಿದ್ದೇವೆ. ಕರೋನಾ ಈಗಲೂ ಹೆಚ್ಚಾಗುತ್ತಲೇ ಇದೆ. ಇಂತಹ ಸಂದರ್ಭದಲ್ಲಿ
ಕೋಲಾರದಲ್ಲಿ ಮಹಿಳಾ ಒಕ್ಕೂಟ ಕಾರ್ಯಕ್ರಮಗಳನ್ನು ಮಾಡುವುದು ಸವಾಲಿನ ಕೆಲಸವೂ ಆಗಿದೆ.
ಪ್ರಚಾರದ ದೃಷ್ಟಿಯಿಂದ ಮೂರು ವೆಬಿನಾರ್ಗಳನ್ನು ಮಾಡಲಾಗಿದೆ. ಕರೋನಾದ ಸಂದಿಗ್ಧ ಪರಿಸ್ಥಿತಿಯಲ್ಲಿ
ಕೋಲಾರದಲ್ಲಿ ಒಕ್ಕೂಟದ ಕಾರ್ಯಕ್ರಮಗಳನ್ನು ಪೂರ್ವ ತಯಾರಿ ಮಾಡುವ, ಕಾರ್ಯಕ್ರಮಗಳನ್ನು ಪ್ರಚಾರ
ಮಾಡುವ ,ಕಾರ್ಯಕ್ರಮಗ ಸಿದ್ಧತೆಗೆ ಸಲಹೆಗಳನ್ನು ಪಡೆದುಕೊಳ್ಳುವ ,ಯಾವ ವಿಷಯಗಳಿಗೆ ಆದ್ಯತೆ ಕೊಡಬೇಕು
ಎಂಬುದಾಗಿ ಚರ್ಚಿಸುವ ದೃಷ್ಟಿಯಿಂದ ಎಲ್ಲಾ ಸಮಾನ ಮನಸ್ಕ ರನ್ನು ನವೆಂಬರ್ 8 ನೇ ತಾರೀಖು
ಭಾನುವಾರ ದಂದು ಪತ್ರಕರ್ತರ ಭವನದಲ್ಲಿ ಮೀಟಿಂಗ್ ಕರೆಯಲಾಗಿದೆ. ದಯವಿಟ್ಟು ಬನ್ನಿ ಈ ಬಾರಿಯ ಮಹಿಳಾ
ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ.
ಕೈ ಕೈ ಹಿಡಿದು ನಡೆಯೋಣ……. ಗಟ್ಟಿದನಿ
ದಿಟ್ಟ ಹೆಜ್ಜೆ ಇಡುತ್ತಾ ……..ನಮ್ಮ ಮಗಳನ್ನು ಜಗದ ಬೆಳಕು ಮಾಡೋಣ.
ಓದುಗ
ಮಹಾಶಯರಿಗೆ ಅನಂತ ಧನ್ಯವಾದಗಳು
![]()

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ