ಶೀರ್ಷಿಕೆ :- ಕರುಳ ಕತ್ತರಿಸಿ ಮೂರೆ ವರುಷ
ಹಸಿರು ತೋರಣವಿಲ್ಲ,
ಸೊಪ್ಪಿನ ಚಪ್ಪರವಿಲ್ಲ,
ನೆಂಟರೆಲ್ಲ ಬಂದಿಹರು ಹಳೆಯ ಬಟ್ಟೆಯ ತೊಟ್ಟು.
ದೂರವೇ ನಿಂತಿಹರು ಜನರೆಲ್ಲ,
ಮಾತಿಲ್ಲ ಕಥೆಯಿಲ್ಲ,
ಹಾರ್ಮೋನಿಯಂ ತಬಲಗಳ ಸದ್ದಿಗೆ ಇತ್ತ ನಾಯಿಯೂ ಸುಳಿಯಲಿಲ್ಲ.
ಅಷ್ಟಕ್ಕೂ ಅದು ಮಂಗಳಕಾಯ೯ಕ್ಕೆ ಅಣಿಯಾದ ಮನೆಯಲ್ಲ,
ಅಂಗಳದಿ ನಿಂತು ಚಂದಿರನ ತೋರಿಸಿ,
ಕಂಗಳಿಗೆ ಮುತ್ತಿಟ್ಟು ತುತ್ತು ಉಣಿಸಿದ,
ಸತ್ತತಾಯಿಯ ಮನೆಯದು.
ಕರುಳ ಕತ್ತರಿಸಿ ಮೂರೆ ವರುಷ,
ಮೊದಲೇ ಅಪ್ಪನಿಲ್ಲದ ಮನೆ ಒಪ್ಪತ್ತಿಗು ಗತಿಯಲ್ಲ,
ಸುತ್ತಲಿನ ಜನಕೆ ಅನ್ನವಿಕ್ಕುವ ಮನಸಿಲ್ಲ,
ಯಾಕೆಂದರೆ ಅಂಕೆ ಇಲ್ಲದ ಕೊರೋನಕ್ಕೆ ಬಲಿಯಾದ ಆ ತಾಯಿಯ ಮಗುವಿಗು ಸೋಂಕು ತಗುಲಿರುವ ಬೀತಿಯಿಂದಿರುವರೆಲ್ಲ.
ಹಸಿವಿನ ಅರಿವಿಲ್ಲ,
ನಿದಿರೆಗು ಬರವಿಲ್ಲ,
ಹಾಡಿಬಾ ಎನಲು ತಾಯಿಯ ಸ್ವರವಿಲ್ಲ.
ಮಗುವ ಕಂಡೊಡನೆ ಓಡೋಡಿ ಹೋಗುವರು ಗೆಳೆಯರೆಲ್ಲ,
ಅಪ್ಪ ಕಟ್ಟಿದ ಮನೆಗೇ ಬಾಗಿಲೇ ಇಲ್ಲ.
ಊರಿನವರೆಲ್ಲ ತೇರಿಗೆ ಹೊರಟರು ಈ ಮನೆಯ ಹೊಳಗೆ ತವರಿಲ್ಲ,
ಕಾಯಿಲೆಯ ಭಯಕೆ ನೆರೆಹೊರೆಯವರ ನೆರಳು ಸುಳಿಯಲಿಲ್ಲ,
ಮಡಿದ ಹಡೆದವ್ವನಿಗೆ ಮುಡಿ ಮಾಡಿದ ಮಗುವಿಂದ ಹನ್ನೊಂದನೆ ದಿನದ ಪೂಜೆ ಇಲ್ಲ.
- ಕಿರಣ್ ಕುಮಾರ್ ಬಿ.
ಎಂ ಎಫ್ ಎ,
ದನಗಳ್ಳಿ ಪೋಸ್ಟ್ ,
ಜೈಪುರ ಹೋಬಳಿ , ಮೈಸೂರ್ ತಾಲೂಕ್ , ಮೈಸೂರ್ ಜಿಲ್ಲೆ .
570008
+91-7411943688
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241459 ಸಂಪಾದಕರು ವಿ ಮ ಸಾ ಪತ್ರಿಕೆ)
ನೊಂದ ಕಂದನ ಅಳಲು ಕವಿತೆಯಲ್ಲಿದೆ.ಕೊರನಾ ಮಾರಿಯಿಂದ ಅದೆಷ್ಟೋ ಸಂಸಾರಗಳ ನೋವು ನೋವಿನ ಕಥೆ ಕಣ್ಮುಂದೆ ಬಂದಂತಾಗುವುದು.
ಪ್ರತ್ಯುತ್ತರಅಳಿಸಿNice one👍
ಪ್ರತ್ಯುತ್ತರಅಳಿಸಿNice one 👍
ಪ್ರತ್ಯುತ್ತರಅಳಿಸಿ