ಮುಖ ಪುಟದ ಚಿತ್ರಗಳು : ಕರಿಬಸವರಾಜ್
ಗಂಟಿ
ಸಂಪಾದಕರ
ಮಾತು
ಓದುಗ
ಮಿತ್ರರೆಲ್ಲರಿಗೂ ಪ್ರೀತಿಯ ನಮಸ್ಕಾರಗಳು,
ವಿಚಾರ
ಮಂಟಪ ಸಾಹಿತ್ಯ ಬಳಗದ ಪಾಕ್ಷಿಕ ಸಾಹಿತ್ಯ ಪತ್ರಿಕೆಯ
೪ ನೇ ಸಂಚಿಕೆ ಇಂದು ಬಿಡುಗಡೆಯಾಗುತ್ತಿದೆ, ಪ್ರಾರಂಭಿಕ
ಯುವ ಕವಿ ವಿಮರ್ಶಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಈ ಪತ್ರಿಕೆಯನ್ನು ಪ್ರಾರಂಭ ಮಾಡಿದ್ದೇವೆ. ಹಲವಾರು
ಯುವ ಕವಿ ಮನಸ್ಸುಗಳಿಗೆ ತಮ್ಮ ಕಲೆಯನ್ನು ಅಭಿವ್ಯಕ್ತಿಸುವ ಒಂದು ಸ್ಥಳೀಯ ವೇದಿಕೆಯ ಅವಶ್ಯಕತೆ ಖಂಡಿತಾ
ಇರುತ್ತದೆ. ಇಂತಹಾ ವೇದಿಕೆಯ ಮೂಲಕ ಹಲವರು ಹೊಸ ರೀತಿಯ ಬರಹಗಳ ಪ್ರಯೋಗಗಳನ್ನು ಮಾಡಬಹುದಾಗಿದೆ ಎಂಬುದು
ನಮ್ಮ ನಂಬಿಕೆ. ಬೇರೆಯವರಿಗೆ ಅನುಕೂಲವಾಗುವ ಉದ್ದೇಶ ಒಂದು ಕಡೆಯಾದರೇ, ಕಲಿಯುವ ಅವಕಾಶಗಳನ್ನು ನಮಗೆ
ನಾವೇ ಸೃಷ್ಟಿಸಿಕೊಳ್ಳುವ ಒಂದು ಸಣ್ಣ ಪ್ರಯತ್ನವಾಗಿಯೂ ಸಹಾ ಈ ಪತ್ರಿಕೆ ನಮಗೆ ಉಪಯೋಗಿ ಆಗಿದೆ.
ನಮ್ಮ
ಪ್ರಯತ್ನಕ್ಕೆ ಫಲವಾಗಿ ಕರ್ನಾಟಕದ ನಾನಾ ಭಾಗಗಳಿಂದ ಹಲವಾರು ಯುವ ಕವಿಗಳು ಕವಿತೆ ಹಾಗೂ ಲೇಖನಗಳನ್ನು
ಪ್ರಕಟಣೆಗಾಗಿ ಕಳುಹಿಸುತ್ತಿರುವುದು ತುಂಬಾ ಸಂತೋಷದ ವಿಚಾರ. ಹೆಚ್ಚು ಕವಿತೆಗಳು ಹಾಗೂ ಲೇಖನಗಳು ವಿಚಾರವಂತಿಕೆ,
ಹೊಸ ಆಲೋಚನಾ ವಿಧಾನ, ವೈಜ್ಞಾನಿಕ ದೃಷ್ಟಿಕೋನ ದಿಂದ ಕೂಡಿದ್ದು ಇದು ನಮ್ಮ ಸಂತೋಷವನ್ನು ಮತ್ತಷ್ಟು
ಹೆಚ್ಚಿಸಿದೆ. ನಮಗೆ ತಲುಪಿರುವ ಬರಹಗಳಲ್ಲಿ ಆಯ್ದ
ಬರಹಗಳನ್ನು ಮಾತ್ರ ಈ ಸಂಚಿಕೆಯಲ್ಲಿ ಪ್ರಕಟಿಸಿದ್ದು, ಉಳಿದವನ್ನು ಸೂಕ್ತ ಬದಲಾವಣೆಗಳ ನಂತರ ಮುಂದಿನ
ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. ತಮ್ಮ ಬರಹಗಳನ್ನು ಕಳುಹಿಸಿಕೊಟ್ಟ ಎಲ್ಲಾ ಬರಹಗಾರರಿಗೆ ವಿಚಾರ
ಮಂಟಪ ಬಳಗವು ಅಭಿನಂದನೆಗಳನ್ನು ಹಾಗೂ ಧನ್ಯವಾದಗಳನ್ನು ತಿಳಿಸುತ್ತದೆ.
ನಮ್ಮ
ಪತ್ರಿಕೆಗೆ ಓದುಗರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು,
ಹಲವರು ಮೆಸೇಜ್, ಕರೆಗಳ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಿದ್ದು ತುಂಬಾ ಸಂತೋಷದ ವಿಷಯವಾಗಿದೆ,
ತಮ್ಮ ಸಹಕಾರ ಇದೇ ರೀತಿ ಮುಂದುವರೆಯಲಿ ಎಂದು ಆಶಿಸುತ್ತೇವೆ. ಯಾವುದೇ ರೀತಿಯ ಸಲಹೆ ಸೂಚನೆ ವಿಮರ್ಶೆಗಳಿಗೆ ಸದಾ ಸ್ವಾಗತವನ್ನು ಕೊರುತ್ತೇವೆ.
ನಮ್ಮ
ಪ್ರಯತ್ನಕ್ಕೆ ಸಹಕಾರಿಯಾಗಿರುವ ಗೌರವ ಸಲಹೆಗಾರರಾದ
ಡಾ. ದು ಸರಸ್ವತಿ , ಡಾ ಕೆ ವಿ ನೇತ್ರಾವತಿ,
ಸೇರಿದಂತೆ ಎಲ್ಲಾ ಗೌರವ ಸಲಹೆಗಾರರು ಹಾಗೂ ನಮ್ಮ ಜೊತೆ ಸಹಕರಿಸುತ್ತಿರುವ ಸುಮಿತ್ರ ಎನ್
ಕೋಲಾರ, ಎಸ್ ಎನ್ ಪ್ರಮೀಳಾದೇವಿ, ಮೀನಾಕ್ಷಿ ರಾಜಣ್ಣ ಮುಂತಾದವರಿಗೆ ನಮ್ಮ ಅನಂತ ಧನ್ಯವಾದಗಳು.
ನಮ್ಮ ಪತ್ರಿಕೆಯನ್ನು ಹೆಚ್ಚು ಹೆಚ್ಚು ಜನರಿಗೆ ಹಂಚುವುದರ ಮೂಲಕ ನಮ್ಮ ಪ್ರಯತ್ನಕ್ಕೆ ಮತ್ತಷ್ಟು ಬೆಂಬಲ
ನೀಡಬೇಕಾಗಿ ಕೊರುವೆ. ಅದೇ ರೀತಿ ನಮ್ಮ ಬಳಗದ ವತಿಯಿಂದ
ನಡೆಯುವ ವಿವಿಧ ರೀತಿಯ ವೆಬಿನಾರ್ಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದರೊಂದಿಗೆ ನಿಮಗೆ ತಿಳಿದವರನ್ನು
ಸಹಾ ಭಾಗವಹಿಸಿ ಇವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರೋತ್ಸಾಹಿಸ ಬೇಕಾಗಿ ಓದುಗ ಮಿತ್ರರನ್ನು ಕೋರುತ್ತಾ…
ನಾಲ್ಕನೇ ಸಂಚಿಕೆ ತಡವಾದದಕ್ಕಾಗಿ ಕ್ಷಮೆ ಯಾಚಿಸುತ್ತಾ…..ಸಹಕರಿಸಿದ ಎಲ್ಲರಿಗೂ ಮತ್ತೊಮ್ಮೆ ಅನಂತ
ಧನ್ಯವಾದಗಳನ್ನು ತಿಳಿಸುವೆ.
ನಮಸ್ಕಾರಗಳು
ವರುಣ್‌ರಾಜ್ ಜೀ
ಸಂಪಾದಕರು ವಿಚಾರ
ಮಂಟಪ ಸಾಹಿತ್ಯ ಪತ್ರಿಕೆ
ಸಂ
: 9448241450
ಮಿಂಚಂಚೆ :
maharishivarunrajji@gmail.com
ಪರಿವಿಡಿ
·
ಸಂಪಾದಕರ ಮಾತು
·
ಅರಿವಿನ ಪಯಣ ವಿಶೇಷ.
·
ಕೋಲಾರ
ಜಿಲ್ಲೆಯ ಮಹಿಳಾ ಚರಿತ್ರೆ.
·
ಲೇಖನ ಬರಹ.
·
ಕರೋನಾ
ಲಾಕ್ ಡೌನ್
·
ಕೈಯಲ್ಲ
ಬಣ ಬಣ
·
ಶಿಕ್ಷಣದಲ್ಲಿ
ಸಮಸ್ಯೆ ಮತ್ತು ಪರಿಹಾರ
·
ಸಾಮಾಜಿಕ
ಕಳಕಳಿಯ ಆದರ್ಶ ಶಿಕ್ಷಕಿ ಹಸಿನಾ ಬೇಗಂ
·
ಬದುಕಿಗಾರು
ಆಸರೆ
·
ಸಾಧಕರ
ಪರಿಚಯ
·
ಕವಿತೆಗಳು
·
ನಾಡ
ಭಕ್ತಿ
·
ಇಂದಿನ
ಭಾರತ
·
ಮಹಾನಾಯಕ
·
ಅಭಿಮಾನ
·
ಸಮಾನತೆ
ಕಲಿಸಿದ ಕರೋನಾ
·
ದೇವರು
ಇದ್ದಾನೆ
·
ಮಾಯವಾಯಿತೆ
ಬನಗಳ ಬೆಡಗು
·
ಕೊನೆಯ
ಸತ್ಯ
·
ಚಿತ್ರಕಲೆ
·
ಪೋಟೋಗ್ರಫಿ
·
ಸಾಹಿತ್ಯ ಸಂಚಯ
·
ಶರಣರ
ಸೂಳ್ನುಡಿ
·
ಪ್ರಾಚೀನ
ಕವಿ ಪರಿಚಯ : ಜನ್ನ
·
ಕವಿವಾಣಿ
·
ನಾನು
ಬಡವಿ ಆತ ಬಡವ
·
ಬಿಕರಿಗಿಟ್ಟ
ಮೇಟಿ ವಿದ್ಯೆ ಮೇಣಿಹಾಲು !
·
ಪ್ರಕಟಣೆ
·
ಕರ್ನಾಟಕ
ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಬಿತ್ತಿ ಪತ್ರ
·
ಸ್ಪರ್ಧಾ ಫಲಿತಾಂಶಗಳು
·
ಮುಕ್ತಾಯ
ಅರಿವಿನ
ಪಯಣ
ಕರ್ನಾಟಕ
ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ.
ಕೋಲಾರ
ಜಿಲ್ಲೆಯ ಮಹಿಳಾ ಚರಿತ್ರೆ
ದಿನಾಂಕ
: ೦೧/೧೧/೨೦೨೦ ರಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ- ಕೋಲಾರದ ಕೋಲಾರ ಜಿಲ್ಲೆಯ
ಮಹಿಳಾ ಚರಿತ್ರೆ ಎಂಬ ವಿಷಯದ ಮೇಲೆ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದ ಮುಖ್ಯಾಂಶಗಳು. ವಿಚಾರ ಮಂಡನೆ
: ಡಾ ಅರಿವು ಶಿವಪ್ಪ ಇತಿಹಾಸ ಪ್ರಾಧ್ಯಾಪಕರು ಕೋಲಾರ. ಪ್ರತಿಕ್ರಿಯೆ : ಶಾಂತಮ್ಮ ಸೀಡ್ಸ್ ಸಂಸ್ಥೆ
ಕೋಲಾರ.
ʼʼಕೋಲಾರ
ವಿಭಜಿತ ಹೊಸ ಜಿಲ್ಲೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ
ವಿಭಜನೆಯಾದ ನಂತರ ಕೋಲಾರಕ್ಕೆ ೫ ತಾಲೂಕುಗಳು ಹಾಗೂ ಚಿಕ್ಕಬಳ್ಳಾಪುರಕ್ಕೆ ೬ ತಾಲೂಕುಗಳು ಸೇರಿವೆ.
ಕೋಲಾರ ಜಿಲ್ಲೆಯ ಅನೇಕ ಗುರುತುಗಳು ಈಗ ಚಿಕ್ಕಬಳ್ಳಾಪುರಕ್ಕೆ ಸೇರಿಹೋಗಿವೆ. ನಮ್ಮ ಕೋಲಾರ ಜಿಲ್ಲೆಯ ಗುರುತುಗಳನ್ನು ನಾವು ಪತ್ತೆ ಹಚ್ಚಬೇಕು.
ಹಲವು ಚರಿತ್ರೆಯಲ್ಲಿ ಕಾಣದ ಗುರುತುಗಳು ಇಲ್ಲಿವೆ. ಉದಾ : ಮಹಿಳೆಯರ ಬಗ್ಗೆ ನಮಗೆ ಏನೇನು ಚರಿತ್ರೆ
ಸಿಗುವುದಿಲ್ಲ. ಜಿಲ್ಲಾ ಗೆಜೆಟಿಯರ್ ಅನ್ನು ಗಮನಿಸಿದರೆ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಮಹಿಳೆಯರ
ಉಲ್ಲೇಖಗಳು ಮಾತ್ರ ಸಿಗುತ್ತವೆ. ಅಷ್ಟೇ ಹೊರತು ಮಹಿಳೆಯರ ಚರಿತ್ರೆ ನಮಗೆ ಅಲ್ಲಿ ಸಿಗುವುದಿಲ್ಲ .
ಕೋಲಾರ ಜಿಲ್ಲೆಯ ಮಹಿಳಾ ಚರಿತ್ರೆಯನ್ನ ನಾವು ಗಮನಿಸಿಬೇಕಾದರೆ ಮೊದಲು ನಾವು ದಾಖಲೆಗಳನ್ನ ನೋಡುತ್ತೇವೆ.
ಚರಿತ್ರೆ ನಂಬಿರುವುದು ದಾಖಲೆಗಳು ಮತ್ತು ಸಾಕ್ಷಿಗಳನ್ನು. ಇಂತಹಾ ದಾಖಲೆ ಮತ್ತು ಸಾಕ್ಷಿಗಳು ಎಲ್ಲರ
ಚರಿತ್ರೆಯನ್ನು ಕಟ್ಟುವುದಕ್ಕೆ ಸಿಗುತ್ತಿಲ್ಲ.
ಕರ್ನಾಟಕದಲ್ಲಿ
ಬ್ರಾಹ್ಮಣರಿಗೆ ಚರಿತ್ರೆ ಬಹು ಬೇಗ ಪ್ರಾರಂಭ ಆಗುತ್ತೆ. ಲಿಂಗಾಯುತರ ಚರಿತ್ರೆ ನಂತರ ಪ್ರಾರಂಭ ಆಗುತ್ತೆ.
ನಂತರ ಹಿಂದುಳಿದ ಸಮುದಾಯಗಳ ಚರಿತ್ರೆ ನಂತರ ಸ್ವಾತಂತ್ರೋತ್ತರದಲ್ಲಿ ದಲಿತರ ಚರಿತ್ರೆ ನಮಗೆ ಸಿಗುತ್ತದೆ.
ಹೀಗೆ ಒಂದೇ ಸಲ ಎಲ್ಲರ ಚರಿತ್ರೆ ನಮಗೆ ಸಿಗುವುದಿಲ್ಲ. ನಮಗೆ ಕೋಲಾರ ಜಿಲ್ಲೆಯಲ್ಲಿ ನಮಗೆ ಸಾವಿರಾರು
ಕಡೆ ಶಿಲಾಯುಗದ ಮಾನವನ ಕುರುಹುಗಳು ದೊರೆತಿವೆ. ಆ ಕುರುಹುಗಳ ಆಧಾರದಿಂದ ಹಾಗೂ ನಮ್ಮ ಸುತ್ತಮುತ್ತಲಿನ
ಜಿಲ್ಲೆಗಳ ಪೂರ್ವ ಇತಿಹಾಸಹ ಹಿನ್ನೆಲೆಯಲ್ಲಿ ಹೇಳುವುದಾದರೇ, ಕೋಲಾರ ಜಿಲ್ಲೆಗೆ ಸು ೨ ಲಕ್ಷ ವರ್ಷಗಳ
ಪೂರ್ವ ಇತಿಹಾಸವಿದೆ. ಪೂರ್ವ ಇತಿಹಾಸ ವೆಂದರೆ ಬರಹ ರೂಪದ
ದಾಖಲೆಗಳು ಸಿಗುವುದಕ್ಕೆ ಮುಂಚಿನ ಇತಿಹಾಸ. ಧರ್ಮಪುರಿ ಕರ್ನೂಲು ಚಿತ್ತೂರು ಈ ಭಾಗಗಳಿಗೂ
ಸಹಾ ಇಷ್ಟೇ ಪೂರ್ವ ಇತಿಹಾಸ ಇರುವುದನ್ನು ನೋಡಬಹುದ್ದು, ಈ ಪ್ರಾಂತ್ಯಗಳ ಮಧ್ಯದಲ್ಲಿ ಕೋಲಾರ ಇರುವುದರಿಂದ
ಕೋಲಾರಕ್ಕೂ ಅಷ್ಟೇ ಪೂರ್ವ ಇತಿಹಾಸ ಇದೆ ಅಂತ ಹೇಳಬಹುದು.
ಪೂರ್ವ
ಇತಿಹಾಸಕ್ಕೆ ಸಂಭಂಧಿಸಿದ ಶಿಲಾಯುಗದ ಸ್ಥಳ ಕುರುಹುಗಳನ್ನ ನಾವು ನೂರಾರು ಕಡೆ ಕಾಣಬಹುದು. ಕೋಲಾರದ
ಅಂತರಗಂಗೆ ಒಂದು ಶಿಲಾಯುಗ ಕಾಲದ ಒಂದು ನೆಲ. ಆದರೆ
ಈ ಕಾಲದ ಜಾತಿವಾರು ಲಿಂಗವಾರು ಸಾಕ್ಷಿಗಳು ನಮಗೆ ಹೆಚ್ಚಾಗಿ ಸಿಗುವುದಿಲ್ಲ. ಬಹುಷಃ ಸಿಕ್ಕಿರುವ ಎಲುಬುಗಳನ್ನು
ಪರೀಕ್ಷೆಮಾಡಿದರೆ ಮಹಿಳೆ ಪುರುಷರನ್ನು ಪತ್ತೆ ಹಚ್ಚಬಹುದು
ಆದರೆ ಬೇರೆ ಯಾವುದೇ ವಿವರಗಳು ಸಿಗುವುದಿಲ್ಲ. ಇತಿಹಾಸಕಾರಕ್ಕೆ ನೋಡುವುದಾದರೇ, ನಮಗೆ ಅತಿ ಪ್ರಾಚೀನ
ಉಲ್ಲೇಖವಾಗಿ ಕ್ರಿ ಶ ೯೦೦ ರ ಕಾಲದ ಸಾವಿನಿರ್ಮಿಡಿ ಎಂಬ ಸರ್ವ ಶಾಸ್ತ್ರ ಸಿದ್ದಿ ಪಡೆದ ಮಹಿಳೆಯೊಬ್ಬಳ
ಉಬ್ಬು ಶಿಲ್ಪ ನಮಗೆ ಬಂಗಾರಪೇಟೆ ಸಮೀಪದ ಕಾರಿಬೆಲೆ ಗ್ರಾಮದಲ್ಲಿ ಸಿಗುತ್ತೆ. ಶಲ್ಪ ಹಾಗೂ ಅದರ ಜೋತೆಗೆ ಶಾಸನವೂ ಇದ್ದು, ಈಗ ಅದು ಬೆಂಗಳೂರಿನ
ವಸ್ತುಸಂಗ್ರಹಾಲಯದಲ್ಲಿದೆ. ಇದು ನಮಗೆ ಮಹಿಳೆಯರಿಗೆ ಸಂಭಂಧಿಸಿದ ಮೊದಲ ಶಾಸನ ಉಲ್ಲೇಖ ಕೋಲಾರದಲ್ಲಿ.
ನಂದಿಗಬ್ಬೆ ಮತ್ತು ನಾಗಾರ್ಜುನಯ್ಯನ ಮಗಳು ಒಂದು ಕೈಯಲ್ಲಿ ಲೇಖನಿ ಮತ್ತೊಂದು ಕೈಯಲ್ಲಿ ತಾಳಪತ್ರವನ್ನು
ಹಿಡಿದಿರುವಂತಹ ಒಂದು ಶಿಲ್ಪ ಈ ಶಾಸನದಲ್ಲಿ ಸಿಗುತ್ತೆ.
ಅನೇಕ
ಇತಿಹಾಸಕಾರರ ಪ್ರಕಾರ ಕರ್ನಾಟಕದಲ್ಲಿಯೇ ಆ ಕಾಲಕ್ಕೆ ಈ ರೀತಿಯ ಶಿಲ್ಪ ದೊರೆತಿರುವುದು ಇದೊಂದೇ, ಇದಕ್ಕಿಂತ
ಹಿಂದೆಯೂ ಸಹಾ ಈ ರೀತಿಯ ಸರ್ವ ಶಾಸ್ತ್ರ ಸಿದ್ದಧಿಯನ್ನ ಪಡೆದ ಮಹಿಳೆಯ ಸಶಾಸನ ಬೇರೆಲ್ಲಿಯೂ ದೊರೆತಿಲ್ಲ.
ಅಂದರೆ ಕೋಲಾರ ಜಿಲ್ಲೆಗೆ ಮಹಿಳೆಯರಿಗೆ ಸಂಭಂಧಿಸಿದ ಒಂದು ಗುರುತು ನಮಗಿಲ್ಲಿ ಸಿಗುವುದು. ಆ ಕಾಲಕ್ಕೆ
ಸರ್ವಶಾಸ್ತ್ರಗಳಲ್ಲಿ ಸಿದ್ಧಿಯನ್ನ ಪಡೆಯುವ ಅವಕಾಶ ಸ್ವಲ್ಪ ಹೆಚ್ಚು ಕಡಿಮೆ ಬ್ರಾಹ್ಮಣರಿಗೆ ಮಾತ್ರವೇ
ಸಿಗುತ್ತಿತ್ತು ಎಂದು ದಾಖಲೆಗಳ ಪ್ರಕಾರ ಹೇಳಬಹುದು. ಅದಕ್ಕೆ ನಂತರ ಕ್ಷತ್ರಿಯ ಮಹಿಳೆಯರಿಗೆ ಸಹಾ ಇಂತಹಾ
ಅವಕಾಶಗಳು ಸಿಗುತ್ತಿದ್ದುದನ್ನು ನಾವು ಗಮನಿಸಬಹುದು.
ಎರಡನೇಯದಾಗಿ
ಕೋಲಾರದ ಆವಣಿನಾಡು ಎಂದು ಕರೆಯಲ್ಪಡುತ್ತಿದ್ದ ಆವಣಿಯಲ್ಲಿ ರಾಮಲಿಂಗೇಶ್ವರ ದೇವಾಲಯ ಸಮ್ಮುಚ್ಛಯದಲ್ಲಿ
ಒಂದು ಕಂಬ ಶಾಸನವಿದ್ದು ಅದರಲ್ಲಿ ನೊಳಂಬ ದೋರೆ ೨ ನೇ ಪೋಳಲ್ ಚೋರನ ರಾಣಿ ದೀವಬ್ಬರಸಿಯ ಉಲ್ಲೇಖವಿದೆ.
ಈಕೆ ರಾಜನ ಪರೋಕ್ಷದಲ್ಲಿ ದೇವಾಲಯವನ್ನು ಮತ್ತು ತಟಾಕವನ್ನು ನಿರ್ಮಿಸಿದಳೆಂಬ ಉಲ್ಲೇಖವಿದೆ.
ಅದರ
ನಂತರ ೧೩೬೦ ರ ಕಾಲಘಟ್ಟದಲ್ಲಿ ಮುಳುವಾಯಿ ರಾಜ್ಯ ಎಂಬ ಒಂದು ರಾಜ್ಯ ವಿತ್ತು. ಅದೇ ಈಗಿನ ಮುಳಬಾಗಿಲು.
ಇದು ಮುಳಬಾಗಿಲನ್ನ ಕೇಂದ್ರವಾಗಿಟ್ಟುಕೊಂಡು ಇಡೀ ಕೋಲಾರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಆಂಧ್ರ ಸೇರಿದಂತೆ
ಇಂದು ರಾಜ್ಯವಾಗಿ ವಿಜಯನಗರ ಕಾಲದಲ್ಲಿ ಇತ್ತು, ಈ ರಾಜ್ಯವನ್ನು ಅಳುತ್ತಿದ್ದಂತಹಾ ೧ ನೇ ಬುಕ್ಕರಾಯನ
ಮಗ ಕಂಪನರಾಯನ ಹೆಂಡತಿ ಗಂಗಾಂಭಿಕೆ ಬರೆದಿರುವ ʼಮಧುರ ವಿಜಯಂʼಎಂಬತಹಾ ಸಂಸ್ಕೃತ ಕಾವ್ಯ ಉಪಲಬ್ಧವಿದೆ.
ಸಾಹಿತ್ಯದಲ್ಲಿ ಸಾಧನೆ ಮಾಡಿರುವ ಕೋಲಾರ ಪ್ರಾಂತ್ಯದ ಮಹಿಳೆಯ ಉಲ್ಲೇಖ ಇದಾಗಿದೆ. ಈಕೆ ತನ್ನ ಚಿಕ್ಕ
ವಯಸ್ಸಿನಿಂದಲೇ ಅಕ್ಷರಾಭ್ಯಾಸ ಮಾಡಿರುವಂತೆ ತಿಳಿದುಬರುತ್ತದೆ. ಈಕೆ ಕಾಳಿದಾಸ ಭಾರವಿ ದಂಡಿ ಮೊದಲಾದವರಿಂದ
ತಾನು ಪ್ರಭಾವಿತಳಾಗಿರುವುದಾಗಿ ತನ್ನ ಕೃತಿಯಲ್ಲಿ ಹೇಳಿಕೊಂಡಿದ್ದಾಳೆ. ಹಾಗೂ ವಿಶ್ವನಾಥ ಎಂಬವರು ಈಕೆಗೆ
ಗುರುವಾಗಿದ್ದರೆಂದು ತಿಳಿದುಬರುತ್ತದೆ.
ಹೀಗೆ
ಸಾವಿನಿರ್ಮಿಡಿ, ದೀವಬ್ಬರಸಿ, ಗಂಗಾಂಬಿಕೆ ಈ ಮೂರು ಜನ ಮಹಿಳೆಯರು ಕೋಲಾರ ಮಹಿಳಾ ಚರಿತ್ರೆಯಲ್ಲಿ ನಮಗೆ
ಚಾರಿತ್ರಿಕವಾಗಿ ಉಲ್ಲೇಖಗೊಂಡಿರುವ ಮಹಿಳೆಯರು. ಇದರಲ್ಲಿ ಇಬ್ಬರು ರಾಣಿಯರಾದರೇ ಮತ್ತೊಬ್ಬರು ಸರ್ವ
ಶಾಸ್ತ್ರ ಸಿದ್ಧಿಯನ್ನು ಪಡೆದವರು. ಇದಲ್ಲದೇ, ಕೋಲಾರ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಸಾವಿರಾರು
ವೀರಗಲ್ಲುಗಳನ್ನು ಕಾಣಬಹುದು. ಇವುಗಳ ವಿಶೇಷ ಏನೆಂದರೇ ಬಹುತೇಕ ವೀರಗಲ್ಲುಗಳು ಬರಿ ವೀರಗಲ್ಲುಗಳಷ್ಟೇ
ಅಲ್ಲದೇ ಸತಿ ಕಲ್ಲುಗಳು ಸಹಾ ಆಗಿವೆ. ವೀರಗಲ್ಲುಗಳ ಪಕ್ಕದಲ್ಲಿಯೇ ಸತಿಕಲ್ಲುಗಳು ಸಹಾ ಸಾಕಷ್ಟು ದೊರೆತಿವೆ.
ಅಂದರೆ ಪುರುಷ ಸತ್ತ ಮೇಲೆ ಅವನ ಹೆಂಡತಿ ಅವನ ಜೊತೆಯಲ್ಲಿಯೇ ಸತಿ ಹೊಂದಿರುವುದನ್ನು ಗಮನಿಸಬಹುದು. ಬರಿಯ ಮೇಲ್ವರ್ಗದ ಮಹಿಳೆಯರು ಅಷ್ಟೇ ಅಲ್ಲದೇ ಇತರೆ ಹಿಂದುಳಿದ
ವರ್ಹಗಳ ಮಹಿಳೆಯರು ಸಹಾ ಸತಿ ಆಗಿರುವುದನ್ನು ನಾವು ಗಮನಿಸಬಹುದು. ದಲಿತ ಸಮುದಾಯಗಳವರು ಹೆಚ್ಚಾಗಿ
ಸೈನ್ಯಕ್ಕೆ ಸೇರುತ್ತಿರಲಿಲ್ಲ. ಹೈದರಾಲಿ, ಟಿಪ್ಪು ಸುಲ್ತಾನರ ಕಾಸಲದಲ್ಲಿಯೇ ದಲಿತರು ಸೈನಿಕರಾಗಿ
ಸೇರುವ ಅವಕಾಶವನ್ನು ಪಡೆದಿದ್ದರು.
ಇನ್ನು
ಆಧುನಿಕ ಕಾಲದಲ್ಲಿ ರಾಜಕೀಯವಾಗಿ ಸಾಮಾಜಿಕವಾಗಿ ಮಹಿಳೆಯರ ಚರಿತ್ರೆಯನ್ನು ಗಮನಿಸುವುದಾದರೇ, ೭೦ ವರ್ಷಗಳ
ಅವಿಭಜಿತ ಕೋಲಾರದ ೧೧ ತಾಲೂಕುಗಳ ಎಂ ಎಲ್ ಎ ಗಳ ಪೈಕಿ ೧೯೭೨ ರಲ್ಲಿ ಭಾಗೇಪಲ್ಲಿಯ ರೇಣುಕಾ ರಾಜೇಂದ್ರನ್
ರವರು ಎಂ ಎಲ್ ಎ ಆಗಿದ್ದರು ಹಾಗೂ ರೇಷ್ಮೇ ಹಾಗೂ ಸಣ್ಣ ಕೈಗಾರಿಕಾ ಮಂತ್ರಿ ಸಹಾ ಆಗಿದ್ದರು. ನಂತರ೧೯೯೪
ರಲ್ಲಿ ಗೌರಿಬಿದನೂರಿನಲ್ಲಿ ಜ್ಯೋತಿ ರೆಡ್ಡಿರವರು ಎಂ ಎಲ್ ಎ ಆಗಿದ್ದರು , ಇನ್ನು ೧೯೬೨-೬೮ ರ ಅವಧಿಯಲ್ಲಿ
ಲಕ್ಷಮ್ಮ ಎಂಬವರು ವಿಧಾನ ಪರಿಷತ್ತ ಗೆ ನೇಮಕವಾಗಿದ್ದನ್ನು ನೊಡಬಹುದು. ಇನ್ನು ರಾಜ್ಯ ಸಭೆಗೆ ೧೯೫೮-೭೦ ಅನ್ನಪೂರ್ಣಾದೇವಿ ತಿಪ್ಪಾರೆಡ್ಡಿಯವರು
ನೇಮಕವಾಗಿದನ್ನು ಗಮನಿಸಬಹುದು. ಹೀಗೆ ಕೇವಲ ನಾಲ್ಕು ಮಂದಿ ಮಹಿಳೆಯರು ಮಾತ್ರ ಇಲ್ಲಿ ಸಿಗುತ್ತಾರೆ. ಹಾಗೇ ಆಡಳಿತದಲ್ಲಿ
ಜಿಲ್ಲಾಧಿಕಾರಿಗಳಾಗಿದ್ದವರು ಈಗ ಸತ್ಯಭಾಮ ಎಂಬವರು ಹಾಗೇ ಹಿಂದೆ ರೇಣುಕಾ ಚಿದಂಬರಂ ಎಂಬವರು ಜಿಲ್ಲಾಧಿಕಾರಿಗಳಾಗಿದ್ದನು
ನಾವು ನೊಡಬಹುದು.
ಇನ್ನು
ಶಿಕ್ಷಣಕ್ಕೆ ಬಂದರೆ ಕೇವಲ ಮೇಲ್ವರ್ಗದವರು ಮಾತ್ರ ಹಿಂದೆ ಶಿಕ್ಷಣದ ಅವಕಾಶಗಳನ್ನು ಪಡೆದಿದ್ದರು. ಮೇಲ್ವರ್ಗದ
ಸ್ತ್ರೀಯರಿಗೆ ಆಗ ಶಕ್ಷಣ ಪಡೆಯುವ ಅವಕಾಶ ಇರುತ್ತತ್ತು. ಇನ್ನು ಆಧುನಿಕ ಕಾಲಕ್ಕೆ ಬಂದರೆ ಕಮೀಷನರುಗಳ
ಆಳ್ವಿಕೆಯ ಕಾಲಕ್ಕೆ ೧೮೩೧- ೮೧ ರ ನಡುವುನ ೫೦ ವರ್ಷಗಳ ಅವಧಿಯಲ್ಲಿ ನಾವು ಆಧುನಿಕ ಶಕ್ಷಣದ ಪ್ರಾರಂಭವನ್ನು
ಗುರುತಿಸಬಹುದು ೧೯೫೪ ರಲ್ಲಿ ವುಡ್ಸ ವರದಿ ಪ್ರಕಟವಾದ
ನಂತರ ಇಲ್ಲಿ ಶಕ್ಷಣ ಶಾಲೆ ಕಾಲೇಜು ಪ್ರಾರಂಭವಾಗುತ್ತೆ. ವೆಸ್ಲಿಯನ್ ಮಿಷನ್ ಬೆಂಗಳೂರಿನಲ್ಲಿ ಆಂಗ್ಲ
ಶಾಲೆಯನ್ನು ಪ್ರಾರಂಭ ಮಾಡುತ್ತೆ. ನಂತರ ರಾಜ್ಯದ ಬೇರೆ
ಬೇರೆ ಕಡೆಯು ಸಹಾ ಪ್ರಾರಂಭವಾಗುತ್ತೆ. ಬೋರಿಂಗ್ ರವರು ಕಮೀಷನರಾಗಿ ಬಂದ ಮೇಲೆ ಬಿ ಎಲ್ ರೈಸ್ ರವರು ಹೋಬಳಿ ಶಾಲೆಯ ಒಂದು ಕಾನ್ಸೆಪ್ಟ್
ಬರುತ್ತೆ. ಹೀಗೆ ಹೋಬಳಿ ಪ್ರಾಥಮಿಕ ಶಾಲೆಗಳು, ತಾಲೂಕು ಮಟ್ಟದ ಶಾಲೆಗಳು ಬರುತ್ತವೆ. ಹಾಗೇ ಸೆಂಟ್ರಲ್
ಕಾಲೇಜ್ , ಗ್ರಂಥಾಲಯಗಳು ಪ್ರಾರಂಭವಾಗುತ್ತವೆ.
೧೦
ನೇ ಚಾಮರಾಜೇಂದ್ರ ಒಡೆಯರ್ ರವರು ಅಧಿಕಾರಕ್ಕೆ ಬಂದಾಗ
ಮೈಸೂರಿನ ಮಹಾರಾಣಿ ಶಾಲೆ ಮಹಾರಾಣಿ ಕಾಲೇಜ್ ಆಗುತ್ತೆ . ಹಾಗೇ ಬೆಂಗಳೂರು, ತುಮಕೂರು, ಮೈಸೂರುಗಳಲ್ಲಿ
ಹೆಣ್ಣು ಮಕ್ಕಳ ಶಾಲೆಗಳು ಪ್ರಾರಂಭ ವಾಗುತ್ತವೆ. ಹಾಗೇ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ
ಸಿಗುತ್ತೆ. ನಂತರದಲ್ಲಿ ನಾಲ್ವಡಿಯವರ ಕಾಲದಲ್ಲಿ ಮೈಸೂರು ಶೈಕ್ಷಣಿಕವಾಗಿ ತುಂಬಾ ಮುಂದುವರೆಯುತ್ತೆ.
ಆಗ ಕಡ್ಡಾಯ ಪ್ರಾಥಮಿಕ ಶಕ್ಷಣ ಜಾರಿಯಾಗುತ್ತೆ. ಪ್ರತಿಭಾವಂತರಿಗೆ ಶಿಷ್ಯವೇತನ, ಎಸ್ ಎಸ್ ಎಲ್
ಸಿ ಸ್ಕೀಂ, ವಿದೇಶಿ ಶಿಕ್ಷಣಕ್ಕೆ ಹೋಗುವವರಿಗೆ ಪ್ರೋತ್ಸಾಹ ಧನ, ಜಿಲ್ಲೆಗೊಂದು ಐ ಟಿ ಐ ಕಾಲೇಜು,
ಮೈಸೂರು ವಿ ವಿ ಪ್ರಾರಂಭವಾಗುತ್ತವೆ.
೧೯೦೧
ರ ಸಮೀಕ್ಷೆಯಲ್ಲಿ ಲಿಟ್ರೇಟ್ಸ ಮತ್ತು ಇಲಿಟ್ರೇಟ್ಸ ಎಂಬ ಎರಡು ಕಾಲಂಗಳು ಇರ್ತಾವೆ. ೧೯೧೧ ರಿಂದ ನಮಗೆ
ಒಂದಷ್ಟು ಅಂಕಿ ಅಂಶಗಳು ಸಿಗುತ್ತವೆ. ಕೋಲಾರದ ಕೇ ಜಿ ಎಫ್ ಬಹಳ ಬೇಗನೇ ಆಧುನಿಕ ಶಿಕ್ಷಣಕ್ಕೆ ತೆರೆದುಕೊಳ್ಳುತ್ತದೆ.
೧೯೧೧ ರಲ್ಲಿ ಕೋಲಾರದಲ್ಲಿ ೫.೮ % ಜನ ವಿದ್ಯೆ ಪಡೆದವರಿದ್ದರೆ, ಕೆ ಜಿ ಎಫ್ ನಲ್ಲಿ ೮.೬% ಜನ ಶಕ್ಷಿತರಿದ್ದರು. ೩೦ ವರ್ಷಗಳ ನಂತರ ಕೋಲಾರ ೮.೧ % ಆದರೆ, ಕೇ ಜಿ ಎಪ್ ನಲ್ಲಿ
೨೨% ಆಗುತ್ತೆ ಆಧುನಿಕ ಶಕ್ಷಣವನ್ನು ಪಡೆದವರ ಅಂಕಿ ಅಂಶಗಳು. ೧೯೫೧ ರ ನಂತರದಲ್ಲಿ ನಮಗೆ ಮಹಿಳೆಯ ಶಕ್ಷಣದ
ಬಗ್ಗೆ ಮಾಹಿತಿ ಸಿಗುತ್ತೆ. ೧೯೫೧ ರಜನಗಣತಿಯ ಪ್ರಕಾರ ಕೋಲಾರ ಜಿಲ್ಲೆಯಲ್ಲಿ ೨೪ % ಗಂಡಸರು , ೭.೮
% ಹೆಂಗಸರು ಶಿಕ್ಷಿತರಿದ್ದರು.
ಇನ್ನು
ಕೆ ಜಿ ಎಪ್ ನಲ್ಲಿ ೪೩% ಗಂಡಸರು ಹಾಗೂ ೧೭.೨ % ಮಹಿಳೆಯರು ಶಕ್ಷಿತರಾಗಿದ್ದರು ೧೯೬೧ ರ ವೇಳೆಗೆ ಸ್ನಾತಕೋತ್ತರ
ಪದವಿ ಪಡೆದವರು ೮೨೭ ಮಂದಿ ಇದ್ದು ಅದರಲ್ಲಿ ಕೇವಲ ೭೦ ಮಂದಿ ಮಹಿಳೆಯರು ಮಾತ್ರ ಶಿಕ್ಷಣ ಪಡೆದಿದ್ದರು.
೪೭ ಪುರುಷ ವೈಧ್ಯರು, ೧೪ ಮಂದಿ ಮಹಿಳಾ ವೈಧ್ಯರು.
೧೦೬ ಜನ ಪುರುಷ ಇಂಜಿನಿಯರ್ಗಳು ೦ ಮಹಿಳಾ ಒಂಜಿನಿಯರ್
ಗಳು ಇದ್ದರೆ , ೧೯೬೧ ರಲ್ಲಿ ಶಕ್ಷಕರು ೧೨೭ ಮಂದಿ ಪುರುಷ ಶಿಕ್ಷಕರು, ೨೭ ಮಂದಿ
ಮಹಿಳಾ ಶಕ್ಷಕಿಯರು ಇದ್ದರು. ಮುಂದೆ ಈ ದಶಕದಲ್ಲಿ ಬಾಲವಾಡಿಗಳು ಪ್ರಾರಂಭವಾದಾಗ ಹೆಚ್ಚು ಮಂದಿ ಮಹಿಳೆಯರು
ಶಿಕ್ಷಕರಾಗಿ ಇರ್ತಾರೆ. ಈ ಸಂಧರ್ಭದಲ್ಲಿ ಗಂಡು ಮತ್ತು
ಹೆಣ್ಣು ಮಕ್ಕಳು ಸಮಾನ ಸಂಖ್ಯೆಯಲ್ಲಿ ಕಲಿಯುತ್ತಿದ್ದುದನ್ನು ನಾವು ನೊಡಬಹುದಾಗಿದೆ. ಹಾಗೇ ಶಿಕ್ಷಕರು ಪುರುಷರಿಗಿಂತ ಹೆಚ್ಚು ಇದದ್ದು ಇಲ್ಲಿ
ಕಂಡು ಬರುತ್ತೆ. ೧೯೬೦ ರ ದಶಕದಲ್ಲಿ ಮಹಿಳಾ ಶಿಕ್ಷಕರು ಹೆಚ್ಚಾಗುವುದಕ್ಕೆ ಪ್ರಾರಂಭವಾಯಿತು.
೧೮೭೬
ರ ಸಂಧರ್ಭದಲ್ಲಿ ಒಂದು ಭೀಕರ ಬರಗಾಲ ಪ್ರಾರಂಭವಾಗುತ್ತದೆ.
ಆಗ ಲಂಡನ್ ಮಿಷನ್ ಮೊದಲ ಹೆಣ್ಣುಮಕ್ಕಳ ಶಾಲೆಯನ್ನು ಪ್ರಾರಂಭಿಸಿ ಮುಂದೆ ಅದು ಮೆತಡಿಸ್ಟ್
ಸಾಲೆ ಆಗಯತ್ತೆ , ಈ ಶಾಲೆಯಲ್ಲಿ ರೀಡಿಂಗ್, ರೈಟಿಂಗ್ ಮತ್ತು ಅರ್ಥಮಿಟಿಕ್ಸ ಅನ್ನು ಇಲ್ಲಿ ಕಲಿಸಲಾಗುತ್ತದೆ.
೨೦೦೪ ರ ಸುಮಾರಿಗೆ ಈ ಸಂಸ್ಥೆಯಲ್ಲಿ ೩೦೦೦ ಹೆಣ್ಣು ಮಕ್ಕಳು ೭೦ ಮಂದಿ ಭೋಧಕ ವರ್ಗ ಇದ್ದದನ್ನು ಗಮನಿಸಬಹುದು.
೧೯೬೭
ರಲ್ಲಿ ಕೇ ಜಿ ಎಪ್ ನ ಪಸ್ಟ್ ಗ್ರೇಡ್ ಕಾಲೇಜ್ , ಹಾಗೂ ಕೋಲಾರದಲ್ಲಿ ೧೯೪೮ ರಲ್ಲಿ ಇಂಟರ್ಮೀಡಿಯೇಟ್
ಕಾಲೇಜಾಗಿ ಪ್ರಾರಂಭವಾಗಿ ೧೯೫೭-೫೮ ರ ಸುಮಾರಿಗೆ ಪಿ ಯು ಕಾಲೇಜ್ ಆಗಿ ೧೯೬೧ ರಲ್ಲಿ ಪ್ರಥಮ ದರ್ಜೆ
ಕಾಲೇಜಾಗಿ ಪ್ರಾರಂಭ ಆಗುತ್ತೆ ಕೋಲಾರದ ಪ್ರಥಮ ದರ್ಜೆ ಕಾಲೇಜು. ಇದರ ಮೊದಲ ಬ್ಯಾಚ್ ಪ್ರಾರಂಭವಾದದ್ದು ೧೯೬೧ ರಲ್ಲಿ, ಆಗ
ಕಲಾ ವಿಭಾಗದಲ್ಲಿ ಒಟ್ಟು೬೪ ರಲ್ಲಿ ಗಂಡು ಮಕ್ಕಳು ೭೫ ಹಾಗೂ
೧೯ ಜನ ಹೆಣ್ಣು ಮಕ್ಕಳು . ವಿಜ್ಞಾನ ವಿಭಾಗದಲ್ಲಿ ೩೩೦ ಜನರಲ್ಲಿ ೨೮೦ ಗಂಡು ಹಾಗೂ ೪೭ ಹೆಣ್ಣು ಮಕ್ಕಳು ಪದವಿ ಪಡೆಯುತ್ತಾರೆ. ಇನ್ನು ೧೯೧೦ ರ ದಶಕದಿಂದಲೇ ವಯಸ್ಕರ ಶಿಕ್ಷಣ ಪ್ರಾರಂಭ ಆಗುತ್ತೆ.
ಗ್ರಂಥಾಲಯಗಳು, ಸಾಕ್ಷರತಾ ಸಮಿತಿಗಳು ಸಹಾ ಪ್ರಾರಂಭವಾಗುತ್ತವೆ. ೨೦೦೫ ರ ವೇಳೆಗೆ ೮೦ % ರಷ್ಟು ಮಂದಿ
ಸಾಕ್ಷರತೆ ಪಡೆದಿದ್ದವರು ಆಗಿದ್ದರು.
ಇನ್ನು
ಕ್ರೀಡೆಯಲ್ಲಿ ಗಮನಿಸಿದರೆ ಮಹಿಳೆಯರಲ್ಲಿ ಉಷಾ, ಗಾಯಿತ್ರಿ, ಜಯಂತಿ, ಪರ್ವತಿ, ಲಕ್ಕೂರು ಮಂಜುಳ ಇವರ
ಹೆಸರುಗಳು ನಮಗೆ ಸಿಗುತ್ತವೆ. ಇನ್ನು ಸಾಹಿತ್ಯ ಕ್ಷೇತ್ರದಲ್ಲಿ ಗಮನಿಸುವುದಾದರೆ, ಮಧುರವಿಜಯಂ ರಚಿಸಿದ
ಗಂಗಾಂಭಿಕೆ ಇಂದ ಮುಂದೆ ಆಧುನಿಕವಾಗಿ ಚಿಂತಾಮಣಿಯ ಜೀವು ಬಾಯಿ ಕೀರ್ತನೆಗಳನ್ನು ರಚಿಸಿದ್ದಾರೆ, ಹಾಗೇ
ಉತ್ತನೂರು ರಾಜಮ್ಮ , ಇವರು ಲಂಕೇಶ್ ಪತ್ರಿಕೆ, ಕೋಲಾರ ಪತ್ರಿಕೆ ಮುಂತಾದ ಪ್ತರಿಕೆಗಳಲ್ಲಿ ಲೇಖನಗಳನ್ನ
ಬರೆಯುತಿದ್ದವರು ಹಾಗೆ ಹಲವಾರು ಕೃತಿಗಳನ್ನು ಸಹಾ ರಚಿಸಿದ್ದಾರೆ. ಇವರು ೨೦೦೩ ರ ಜಿಲ್ಲಾ ಸಾಹಿತ್ಯ
ಸಮ್ಮೇಳನದ ಅಧ್ಯಕ್ಷರು ಸಹಾ ಆಗಿದ್ದರು. ಹಾಗೇ ಕೆ ಜಿ ಎಪ್ ನ ಸರಿತಾ ಜ್ಞಾನಾನಂದ ಇವರು ಕನ್ನಡ ಸಾಹಿತ್ಯ
ಪರಿಷತ್ತಿನ ಜಿಲ್ಲಾ ಅಧ್ಯಕ್ಷರು ಆಗಿದ್ದು. ಹಲವು ಕಾದಂಬರಿಗಳನ್ನು ಬರೆದಿದ್ದು ಅನುವಾದಗಳನ್ನು ಸಹಾ
ಮಾಡಿದ್ದಾರೆ. ಮಾಲೂರಿನ ಲೀಲಾ , ಕೇ ಜಿ ಎಪ್ ನ ರಾಧಾ ಪ್ರಕಾಶ್ , ಕೋಲಾರದ ಹೇಮಾವತಿ, ತಿಮ್ಮಸಂದ್ರದ
ಕಮ್ಮಲಮ್ಮ ರಾಜು ರವರು. ಮಹಿಳಾ ಸಾಹಿತಿಗಳಾಗಿ ಸಿಗುತ್ತಾರೆ.
ಇದು
ಕೋಲಾರ ಜಿಲ್ಲೆಯ ಮಹಿಳಾ ಚರಿತ್ರೆಯನ್ನು ಹುಡುಕುವ ಮೊದಲ ಹೆಜ್ಜೆ ಅಷ್ಟೇ ಆಗಿದೆ. ಇದರ ಕುರಿತಾಗಿ ಇನ್ನು
ಹಲವಾರು ಅಧ್ಯಾಯನಗಳು ಆಗಬೇಕಿವೆ. ಮಹಿಳೆಯರು ಮಹಿಳೆಯರಾಗಿ ಹುಟ್ಟಿಲ್ಲ ಅವರನ್ನು ಹಾಗೆ ಮಾಡಲಾಗಿದೆ ಎಂಬ ಸಿಮೊಂದಿ ಬವ ರವರ ಮಾತಿನಂತೆ
ಮಹಿಳೆಯರು ನಾವು ಮುನ್ನುಗ್ಗಿ ನಮ್ಮ ಹೆಜ್ಜೆ ಗುರುತುಗಳನ್ನು ಹುಡುಕಬೇಕಾಗಿದೆ. ಈ ಚರಿತ್ರೆಯನ್ನು
ಹುಡುಕಿ ಕಟ್ಟುವ ಕೆಲಸವನ್ನು ನಾವು ಮುಂದೆ ಮಾಡಬಹುದು. ʼʼ
ಎಂದು
ಡಾ ಅರಿವು ಶಿವಪ್ಪನವರು ಸುದೀರ್ಘವಾಗಿ ಕೋಲಾರ ಜಿಲ್ಲೆಯ ಮಹಿಳಾ ಚರಿತ್ರೆಯ ಕುರಿತಾಗಿ ವಿಚಾರ ಮಂಡನೆ
ಮಾಡಿದರು ಅದಕ್ಕೆ ಪ್ರತಿಕ್ರಿಯೆಯಾಗಿ ಶಾಂತಮ್ಮನವರು
ʼʼಹಲವಾರು ಮಹಿಳೆಯರು ನಮಗಾಗಿ ಹೋರಾಟದ ಬದುಕನ್ನು ನಡೆಸಿದ್ದಾರೆ ಅದರೆ ಅವರೆಲ್ಲರೂ ಚರಿತ್ರೆಯಲ್ಲಿ
ದಾಖಲಾಗಿಲ್ಲ. ಹಳ್ಳಿಯ ಮಹಿಳೆಯರಿಗೆ ಮನೆ, ಗಂಡ, ಮಕ್ಕಳು, ಅಷ್ಟೇ ಅಲ್ಲದೇ, ಜೀವ ಜಗತ್ತು, ಮಣ್ಣು,
ಇತ್ಯಾದಿ ಜವಾಬ್ದಾರಿಗಳು ಇದ್ದವು ಅವನ್ನೆಲ್ಲಾ ಪೋಷಣೆ ಮಾಡುವ ಜವಾಬ್ದಾರಿಯನ್ನು ಆಕೆ ಹೊತ್ತಿದ್ದಳು.
ಕೋಲಾರ
ಜಿಲ್ಲೆಯ ಮೇಡಿಹಾಳ ಗೇಟ್ ಬಳಿ ಅಕ್ಕಲಮ್ಮನ ಕುಂಟೆ ಇದೆ. ಅದರ ಹಿನ್ನೆಲೆಯನ್ನು ಗಮನಿಸಿದರೆ ಅಕ್ಕಲಮ್ಮ
ಎಂಬ ಮಹಿಳೆ ತಾನು ಬೆಳೆದಿದ್ದ ರಾಗಿಯಲ್ಲಿ ಮುದ್ದೆ ಮಾಡಿ ಕೂಲಿಯವರಿಗೆ ಊಟ ನೀಡಿ ಜನರಿಗಾಗಿ ಜಾನುವಾರುಗಳಿಗಾಗಿ
ಈ ಕುಂಟೆಯನ್ನು ಕಟ್ಟಿಸಿದಳೆಂದು ತಿಳಿದುಬರುತ್ತೆ. ಈಕೆ ಒಬ್ಬ ಅನಕ್ಚರಸ್ಥೆ, ಯಾವ ಕಾಲೇಜಿನಲ್ಲಿಯೂ
ಈಕೆ ಒದಲಿಲ್ಲ, ಈಕೆ ಯಾವ ರಾಜ್ಯದ ರಾಣಿಯೂ ಆಗಿರಲಿಲ್ಲ ಅದರೂ ಸಹಾ ಜನರಿಗಾಗಿ ಕುಂಟೆ ನಿರ್ಮಿಸಿದಳು.
ಇಂತಹಾ ಸಾವಿರಾರು ಕುಂಟೆಗಳು ಕೆರೆಗಳು ಇವೆ. ಆದರೆ ಅದರ ನಿರ್ಮಾತೃಗಳ್ಯಾರು ಸಹಾ ಚರಿತ್ರೆಯಲ್ಲಿ ದಾಖಲಾಗಿಲ್ಲ.
ಇನ್ನು
ಎಂ ಎಸ್ ಸೀತಮ್ಮ ಇವರು ಉತ್ತನೂರು ರಾಜಮ್ಮನ ನೆಂಟರು. ಈಕೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
ವಿಜೇತರು, ಈಗ ೭೦ ವರ್ಷ ವಯಸ್ಸಿನವರು. ೧೦೦ ಎಕ್ಕರೆ
ಜಮೀನ್ದಾರರ ಮನೆಯ ಮಗಳು, ಸ್ವತಃ ಓದು ಬರಹ ಕಲಿತು
ಲಲಿತ ಕಲಾ ಸಂಘವನ್ನು ಸ್ಥಾಪಿಸಿ ಸಾವಿರಾರು
ಮಹಿಳೆಯರಿಗೆ ಲಲಿತ ಕಲೆಗಳನ್ನು ಕಲಿಸಿದರು ಇವರಲ್ಲಿರುವ ಕಲೆ ಹಾಗೂ ಜ್ಞಾನ ಅಪಾರವಾದ್ದು. ಇವರು ಈಗಲೂ ಸಹಾ ಬಾಡಿಗೆ ಮನೆಯಲ್ಲಿ ವಾಸಿಸುತ್ತದ್ದಾರೆ
ಹಾಗೂ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೋಳ್ಳುತ್ತಾರೆ. ಇಂತಹವರನ್ನು ಚರಿತ್ರೆಯಲ್ಲಿ ದಾಖಲಿಸುವ ಕೆಲಸ ಆಗಬೇಕಾಗಿದೆ,
ಹೀಗೆ ಮುಳಬಾಗಲಿನ ಪಾಪಮ್ಮನಂತವರು ಹಾಗೇ ಹಲವಾರು ಜನ ಮಹಿಳೆಯರು ಇದ್ದಾರೆ. ನಮ್ಮ ವಿಮೋಚನ ಸಂಸ್ಥೆಗೆ ಸಾವಿರಾರು ಹೆಣ್ಣು ಮಕ್ಕಳು ತಮ್ಮ
ಕಥೆಗಳನ್ನು ಹೊತ್ತು ತರುತ್ತಾರೆ. ಇವರಲ್ಲಿ ಹಲವಾರು
ರೀತಿಯ ಹೋರಾಟಗಳನ್ನು ಮಾಡುವವರು ಸಹಾ ಇದ್ದಾರೆ.
ಅನಾದಿಕಾಲದಿಂದಲೂ
ಬೀಜ ಸಂರಕ್ಷಣೆ ಮಾಡುತ್ತಿರುವವರು ಮಹಿಳೆಯರು. ನಾಟಿ ವೈಧ್ಯ , ಕೃಷಿಗೆ ಸಂಭಂಧಿಸಿದ ಉಪಚಾರ ಇಂತಹವುಗಳಲ್ಲಿನ
ಮಹಿಳೆಯರ ವಿವೇಕಲ ಹಾಗೂ ಜ್ಞಾನ ಅಪಾರವಾದ್ದು. ಪ್ರತಿ ಮಹಿಳೆಯು ಸಹಾ ತನ್ನದೇ ಆದ ಹೋರಾಟವನ್ನು ಮಾಡುತ್ತಿದ್ದಾಳೆ.
ಅದು ಚರಿತ್ರೆಯಲ್ಲಿ ದಾಖಲಾಗಬೇಕು. ಜಾತಿ, ಸುರಕ್ಷತೆ,
ಸಂಸ್ಕೃತಿಗಳ ಹೆಸರಿನಲ್ಲಿ ಮಹಿಳೆಯರನ್ನು ಕಟ್ಟಿಹಾಕಲಾಗುತ್ತಿದೆ. ಅನುಸೂಯಮ್ಮನ ಕಾಲದಿಂದಲೂ ಮಹಿಳೆಯರ ಮೇಲೆ ಶೋಷಣೆಗಳು ಆಗುತ್ತಲೇ
ಇವೆ. ಮಹಿಳೆಯರು ಇದನ್ನು ಮೀರಿ ಮೇಲೆ ಬರಬೇಕಾಗಿದೆ. ಇಂದು ಮಹಿಳೆಯರ ಮೇಲಿನ ದೌರ್ಜನ್ಯ , ಬಾಲ್ಯ ವಿವಾಹಗಳು ಹೆಚ್ಚುತ್ತಿವೆ,
ಕರೋನಾ ಲಾಲದಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆದಿವೆ. ಮಹಿಳೆಯರ ಮೇಲಿನ ದೌರ್ಜನ್ಯದ
ನೊಂದವರ ನೋವಿನ ದಾಖಲೆ ಆಗಬೇಕಾಗಿದೆ. ಆದರೆ ಅಯ ಸಾಧ್ಯವೇ ?
ನಾವು
ಮಹಿಳೆಯರು ಅಡ್ಜೆಸ್ಟ ಮೆಂಟ್ ಅನ್ನು ಮೀರಬೇಕಾಗಿದೆ.
ನಮಗೆ ಸೀತೆಯ ಗಟ್ಸ ಬೇಕಾಗಿದೆ. ಒಮ್ಮೆ ಅನುಮಾನಿಸಿದ ಗಂಡ ಮತ್ತೆ ವಾಪಸ್ಸ ಕರೆದಾಗ ನಾನು ಬರುವುದಿಲ್ಲ
ಎಂದು ಹೇಳುವ ಸೀತೆಯ ಗಟ್ಸ ನಮ್ಮೆಲ್ಲ ಹೆಣ್ಣು ಮಕ್ಕಳಿಗೆ ಬೇಕಾಗಿದೆ. ನಮಗೆ ಸಮಾನತೆ ಬೇಕಾಗಿದೆ. ಕೇವಲ
ನದಿಗಳು, ದೇವರುಗಳಿಗೆ ಮಹಿಳೆಯರ ಹೆಸರುಗಳನ್ನು ಇಡುವುದಲ್ಲ ಬದಲಾಗಿ ಸ್ತ್ರೀಯರನ್ನು ಸಮಾನವಾಗಿ ಕಾಣಬೇಕಾಗಿದೆ.
ಆಗ ಮಾತ್ರ ನಿಜವಾದ ಸಮಾಜ ಸುಧಾರಣೆ ಸಾಧ್ಯ. ʼʼ ಎಂದು ಹೇಳಿದರು.
ನಿರೂಪಣೆ
: ವರುಣ್‌ರಾಜ್ ಜೀ
ಲೇಖನ
ಬರಹ
ಕರೋನಾ
ಲಾಕ್ ಡೌನ್
ಇಡೀ ದೇಶಕ್ಕೆ ದೇಶವೇ ಲಾಕ್ಡೌನ್ ನಿಂದ
ಪೇಚಾಡುತ್ತಿದ್ದರೆ ಹಲವರು ಮನೆಯಲ್ಲಿ ನೆಮ್ಮದಿ ನಿಟ್ಟುಸಿರು ಬಿಟ್ಟದ್ದು ಸುಳ್ಳಲ್ಲ. ಅದರಂತೆ
ನಾನೂ ಕೂಡ ಆಗದ ಅದೆಷ್ಟೋ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಿದ್ದುಂಟು. ಹದಿನೈದು ದಿನದಲ್ಲೇ ಒಂದು
ಸುಂದರ ಕೃತಿ ರಚನೆಯಾಯಿತು, ಅದೆಷ್ಟೋ ವರ್ಷಗಳಿಂದ ಕಲಿಯಬೇಕೆಂದಿದ್ದ ಡ್ರೈವಿಂಗ್ ಕಲಿತ ನನ್ನ
ಖುಷಿಗೆ ಪಾರವೇ ಇರಲಿಲ್ಲ, ಹತ್ತಾರು ವರ್ಷಗಳಿಂದ
ಹೋಗದ ನನ್ನ ಹುಟ್ಟೂರಿನ ಹಳ್ಳಿಗೆ ಹೋಗಿ ಬಾಲ್ಯದ ಸವಿ ಮೆಲುಕು ಹಾಕಿಯಾಯಿತು, ಕುಟುಂಬದೊಂದಿಗೆ
ಹಳ್ಳಿ, ಹೊಲ, ಗದ್ದೆ, ನಮ್ಮೂರಿನ ಸುತ್ತಲಿನ ಕೆರೆ, ಹಳ್ಳ, ಜಲಪಾತಗಳೊಂದನ್ನು ಬಿಡದೆ
ಸಾಕಾಗುವಷ್ಟು ಸುತ್ತಿದ್ದಿದೆ, ಮನೆಯಲ್ಲಿ ಮಾಡದ ತಿಂಡಿ, ತೀರ್ಥಗಳೇ ಇಲ್ಲ, ಫೋಟೋ ಶೂಟ್ಗಳಿಗೆ
ಲೆಕ್ಕವಿಲ್ಲ, ನಮ್ಮ ಕುಟುಂಬದ ವಾಹನ ಲಾಕ್ ಡೌನ್ ಕಾಲದಲ್ಲಿಯೇ ಹೆಚ್ಚು ಸಂಚರಿಸಿರಬೇಕು, ಹಬ್ಬ
ಹರಿದಿನಗಳನ್ನಂತೂ ನಿರಾತಂಕವಾಗಿ ಆಚರಿಸಿದೆವು.
ಮಕ್ಕಳೊಂದಿಗಿನ
ಆರಾಮ ದಾಯಕ ಖುಷಿಯ ದಿನಗಳು, ಶಾಲೆ, ಬಸ್ಸು ಹೋಂ ವರ್ಕ , ಕಿರಿಕಿರಿ ಇಲ್ಲದ ಸೊಗಸಾದ
ದಿನಗಳು, ಮನುಷ್ಯನ ವೇಗದ ಓಟಕ್ಕೆ ನಿಜಕ್ಕೂ
ಬ್ರೇಕ್ ಬಿದ್ದ ಹಾಗಿತ್ತು, ಬದುಕಿನಲ್ಲಿ ಬಾಂಧವ್ಯಗಳ ಅರಿವುಆದ ಕ್ಷಣಗಳು , ಯಾವುದೇ ಒತ್ತಡ,
ಆತಂಕ ಓಟಗಳಿಲ್ಲದ ಇಪ್ಪತ್ತು ವರ್ಷದ ಹಿಂದಿನ
ಬದುಕು ಇದಾಗಿತ್ತು, ಜನಜಂಗುಳಿ ಕಿರಿಕಿರಿ, ಕ್ಯೂ ಕಾಣಲೇ ಇಲ್ಲ. ತರಕಾರಿ ಇಲ್ಲದೆ ಅಡುಗೆ
ಮಾಡಿದೆವು, ಕೇಕ್ , ಪಾನಿ ಪುರಿ ಪಾರ್ಲರ್ ಇಲ್ಲದ
ಬದುಕೂ ಎಷ್ಟು ಚಂದ, ಸಿನಿಮಾ ನಟ,
ಕ್ರಿಕೆಟಿಗರಿಗಿಂತ, ವೈದ್ಯರು, ಪೌರಕಾರ್ಮಿಕರೇ
ಮೇಲು ಎನಿಸಿದರು.
ಆಸ್ಪತ್ರೆಗಳಿಲ್ಲದೆ ಮನೆಮದ್ದು ಮೇಲೆಂದು ಕಂಡಿತು, ಪ್ರತಿವರ್ಷ ವಾಕರಿಕೆ ಎನಿಸುವಷ್ಟು
ಮದುವೆ ಮುಂಜಿಗಳಿಗೆ ಹೋಗಿ ಸಾಕಾಗಿತ್ತು. ಒಂದೆರಡು ಸಮಾರಂಭಗಳಂತೂ ಅಪ್ಯಾಯಮಾನ ಎನಿಸಿದವು. ದಿನಗೂಲಿಯವರಿಗೂ
ಒಂದಷ್ಟು ಉಳಿತಾಯ ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತು, ಹಣವೊಂದೇ ಮುಖ್ಯ ಅಲ್ಲ . ಸುಂದರ ಸುಖಕರ ಆರೋಗ್ಯ ವೇ
ಭಾಗ್ಯ ಎಂಬ ಮಾತು ಮತ್ತೆ ಮತ್ತೆ ಮೊಳಗಿತು. ಹುಟ್ಟಿದ
ಊರನ್ನು ಬಿಟ್ಟು ಬಂದವರಿಗೆ ಅದೇ ಗತಿಯಾಯಿತು. ಮಾನವನಿಲ್ಲದೆ ಪ್ರಾಣಿಗಳು ನಿಟ್ಟುಸಿರುಬಿಟ್ಟವು,
ನಮ್ಮ ವಾಹನವಿಲ್ಲದೆ ಪರಿಸರ ಪೂರ್ತಿ ಸ್ವಚ್ಛ ವೆನಿಸಿತು. ಬಡವರಿಗೆ ಬದುಕು ಭಾರವಾಯಿತು.
-
ಪೂಜಾ ಬಂಕಲಗಿ ಚಿತ್ತಾಪುರ
ಕೈಯಲ್ಲಾ
ಬಣ ಬಣ
ಚೀನಾ ಕೊಟ್ಟ ಉಡುಗೊರೆ ಕೊರೊನ.ಇದು ದೇಶ
ವಿದೇಶಗಳಿಗೆ ಒಂದು ಮರೆಯಲಾಗದ ನೆನಪು.ಮರೆಯಲು ಪ್ರಯತ್ನ ಪಟ್ಟರೂ ಅಸಾಧ್ಯ,ಶೋಚನೀಯ ಸಂಗತಿ.
ರಸ್ತೆಯಲ್ಲಿ ಸಂಚಾರಕ್ಕೆ ಕಡಿವಾಣ.ಅತ್ತ ಕೈಗೆ ಕೆಲಸವೂ ಇಲ್ಲ,ಇತ್ತ ಬದುಕು ಸಾಗಿಸಲು ಸಂಪಾದನೆಯೂ
ಇಲ್ಲ. ಕೂಡಿಟ್ಟ ಹಣವೂ ಬರಿದಾಗಿದೆ.
ಮುಂಬಯಿಯಲ್ಲಿ ರೂಮಿನ ಒಳಗೆ ಕುಳಿತು ಬೋರಾಗಿ ಊರಿಗೆ ಹೋಗಿ
ಗಾಳಿ,ನೀರು,ಊಟತಿಂಡಿ ಬದಲಾವಣೆ ಬಯಸಿ ಹಲವರು ಹೋಗಿರುತ್ತಾರೆ.ಕೆಲವರು ಮಕ್ಕಳಿಗೆ ಶಾಲೆ ಇಲ್ಲದ
ಕಾರಣ ಕುಟುಂಬದವರ ಜೊತೆ ಒಂದುಗೂಡಿ ಇದ್ದಾರೆ. ಮುಂಬಯಿಗೆ ವಾಪಸು ಬಂದು ಸಣ್ಣ ಪುಟ್ಟ ಕೆಲಸ
ಮಾಡುತ್ತಾ ಬದುಕು ಸಾಗುತ್ತಿರುವರು.ತೊಂಬತ್ತು ಸಾವಿರ ಸಂಬಳದವ ಹದಿನೈದು ಇಪ್ಪತ್ತು ಸಾವಿರಕ್ಕೆ
ಬೇಕಾದರೆ ಕೆಲಸ ಮಾಡಬೇಕು,ಇಲ್ಲವಾದರೆ ಆ ಕೆಲಸವು ಇಲ್ಲದಾಗಿದೆ.ಇಂದು ಕೆಲಸದ ಯಾಜಮಾನರು ಕೊಟ್ಟ
ಸಂಬಳವನ್ನು ಬಾಯಿ ಮುಚ್ಚಿ ತೆಗೆದು ಕೊಳ್ಳಬೇಕು. ವಾದಕ್ಕೆ ಇಳಿದರೆ ಹೊಟ್ಟೆಗೆ ತಣ್ಣಿರೇ ಗತಿ.
ಇನ್ನೂ ಕೂಲಿ ಮಾಡುವವರ ಪರಿಸ್ಥಿತಿ ಹೇಳತೀರದು.ಮನೆಕೆಲಸ ಮಾಡುವ ಹೆಂಗಸರು ಮನೆಯೊಡತಿ
ಯಾವಾಗ ಕರೆಯುವರು ಎಂದು ಚಾತಕ ಪಕ್ಷಿಯಂತೆ ಕುಳಿತು ಕಾಯುತ್ತಾ ಕುಳಿತ್ತಿದ್ದಾರೆ.. ಇನ್ನು ಗಲ್ಲಿ
ಗಲ್ಲಿ ವ್ಯಾಪಾರ ಮಾಡುವವರು ಈಗ ಸ್ವಲ್ಪ ಧೈರ್ಯ
ಮಾಡಿ ತಮ್ಮ ದಿನಚರಿಗೆ ಹೊರಟಿರುವರು. ಇನ್ನು ಕೆಲವು ಹೆಂಗಸರು,ಗಂಡಸರು ಕೈಗೆ ಕೆಲಸ ಇಲ್ಲದ ಕಾರಣ
ಸ್ವಲ್ಪ ಸ್ವಲ್ಪ ತರಕಾರಿ,ಬಟ್ಟೆಯನ್ನು ಮಾರುತ್ತಿದ್ದಾರೆ.
ಹೋಟೆಲ್,ರೆಸ್ಟರೊಂಟ್ ನಲ್ಲಿ ಕೆಲಸ ಮಾಡುವವರು ರೈಲು ಸಂಚಾರ ಇಲ್ಲದ ಕಾರಣ ಹೋಟೆಲಿನಲ್ಲಿಯೇ ತಂಗುವ
ಪರಿಸ್ಥಿತಿಯಾಗಿದೆ.ಯಾಜಮಾನನಿಗೆ ಗಿರಾಕಿಗಳು ಯಾವಾಗ ದರುಶನ ನೀಡುವವರು ಎಂಬ ಕಾಯುವ ಸ್ಥಿತಿ
ಅವನದು.
ಶಾಲಾ ಕಾಲೇಜು ಮಕ್ಕಳಿಗೆ ರಜೆಯಾದರೂ ಕಲಿಕೆಗೆ ರಜೆ ಇಲ್ಲ.ಹಾಗೂ ಹೀಗೂ ಹಣ ಹೊಂದಿಸಿ ಮೊಬೈಲ್ ತೆಗೆಸಿಕೊಟ್ಟು ಪಾಲಕರು ಮಕ್ಕಳನ್ನು
ಓದಲು ಒತ್ತಾಯಿಸುವರು. ಅದರ ಜೊತೆ ಜೊತೆಗೆ ಪರೀಕ್ಷೆಗೆ ಬರೆಯಬೇಕು.ಇನ್ನೂ ಶಿಕ್ಷಕರು ಪಾಠವನ್ನು
ಕಲಿಸುತ್ತಾ,ಮನೆಯ ಖರ್ಚುನ್ನು ಸರಿದೂಗಿಸುತ್ತಾ ದಿನ ಕಳೆಯುತ್ತಿದ್ದಾರೆ.ಅವರ ಸಂಬಳಕ್ಕೆ ಕತ್ತರಿ
ಬಿದ್ದು ಸಿಕ್ಕ ಸಂಬಳದಲ್ಲಿ ಹೇಗೋ ಕಾಲ ಕಳೆಯುವ ಅವಸ್ಥೆ ಅವರದ್ದು.
ಹೀಗೆ ಸಮಾಜದ ಪ್ರತಿಯೊಂದು ವರ್ಗದ ಜನರು ಸಂಕಷ್ಟದಿಂದ ತತ್ತರಿಸಿ ಹೋಗಿದ್ದಾರೆ.ಬಣ್ಣದ
ಜಗತ್ತು ಸ್ತಬ್ಧವಾಗಿದೆ.ನಟ ನಟಿಯರು ಯಾರಿಗೂ ತಮ್ಮ ದುಃಖವನ್ನು ಹೇಳಲೂ ಆಗದೆ ,ನುಂಗಲೂ ಆಗದೆ
ಒದ್ದಾಡುತ್ತಿರುವರು. ಸಮಾಜದ ಎಲ್ಲಾ ವರ್ಗದವರು ಒಳ್ಳೆಯ ದಿನಕ್ಕಾಗಿ ಕಾಯುತ್ತಾ ಇರುವರು.ಎಂದೂ ಈ
ಪರಿಸ್ಥಿತಿ ತಿಳಿ ಆಗುವುದೂ ಕಾದು ನೋಡೋಣ.ಅಲ್ಲಿಯವರೆಗೆ ಹಾಸಿಗೆ ಇದ್ದಷ್ಟು ಕಾಲು ಚಾಚಿ
ಬದುಕನ್ನು ಧೈರ್ಯದಿಂದ ಸಾಗಿಸೋಣ.ಎಲ್ಲರಿಗೂ ಒಳ್ಳೆಯದಾಗಲಿ.
- ಅನಿತಾ.ಎಸ್.ಶೆಟ್ಟಿ – ಮುಂಬಯಿ
ಶಿಕ್ಷಣದಲ್ಲಿ
ಸಮಸ್ಯೆ ಮತ್ತು ಪರಿಹಾರ
ಕರ್ನಾಟಕ ಸರ್ಕಾರ ಸುಮಾರು ವರ್ಷಗಳಿಂದ ಆರ್
ಟಿ ಇಕಾಯ್ದೆ ಜಾರಿಗೆ ತಂದಿದೆ ಆದರೆ ಈ ಕಾಯ್ದೆ ಕನ್ನಡ ಶಾಲೆಗಳು ಮಕ್ಕಳು ಇಲ್ಲದೆಮುಚ್ಚಿವೆ
ಸರ್ಕಾರವು ಖಾಸಗಿ ಶಾಲೆಗೆ ಸೇರುವ ಮಕ್ಕಳಿಗೆ ಸಾವಿರಾರು ಕೋಟಿ ಖರ್ಚು ಮಾಡುತ್ತಿದೆಶಾಲೆಗಳಿಗೆ
ಸುಣ್ಣ-ಬಣ್ಣ ಇಲ್ಲದೆ ಸುಂದರತೆ ಕಳೆದುಕೊಳ್ಳುತ್ತೇವೆ ಶಿಕ್ಷಕರ ಸಂಖ್ಯೆ ಕಡಿಮೆ ಇರುವುದರಿಂದ
ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ
ಕೆಲವು ಶಿಕ್ಷಕರು ವಿದ್ಯಾರ್ಥಿಗಳ ಕಡೆಗೆ ಗಮನ ನೀಡದೆ
ವಿದ್ಯಾರ್ಥಿಗಳ ಪಾಲಿಗೆ ಶನಿಯಾಗಿ ಕಾಡುತ್ತಿದ್ದಾರೆ ಇದು ನಿಜಕ್ಕೂ ಖಂಡನೀಯ ಸಮಾಜದಲ್ಲಿ
ಗುರುವಿಗೆ ಉನ್ನತ ಸ್ಥಾನಮಾನ ನೀಡಿದೆ ಆದರೆ ಕೆಲವು ಶಿಕ್ಷಕರು ಗುರುವಿನ ಹೆಸರಿಗೆ ಕಪ್ಪುಮಸಿ
ಕಾರಣೀಭೂತರಾಗಿದ್ದಾರೆ.
ವಿದ್ಯಾರ್ಥಿಗಳ ಪಾಲಿಗೆ ಆದರ್ಶಪ್ರಾಯ ಆಗದೆ ಇರುವುದು
ನಿಜಕ್ಕೂ ವಿಷಾದನೀಯ ಮಿರ್ಜಿ ಅಣ್ಣಾರಾಯರು ವಿಕೃ
ಗೋಕಾಕ್ ಸರ್ವಪಲ್ಲಿ ರಾಧಾಕೃಷ್ಣನ್ ದರಾ ಬೇಂದ್ರೆ ಕೆವಿ ಪುಟ್ಟಪ್ಪ ಹೀಗೆ ಹಲವು ಮೇಧಾವಿ
ಶಿಕ್ಷಕರು ಲಕ್ಷಾಂತರ ವಿದ್ಯಾರ್ಥಿಗಳ ಪಾಲಿಗೆ ದಾರಿ ತೋರಿಸಿದ ಜ್ಞಾನಯೋಗಿಗಳು ಇಂಥವರ ಸಾಲಿಗೆ
ಸೇರುವ ಪ್ರಯತ್ನ ಮಾಡಬೇಕು ಶಿಕ್ಷಕ ಅಂದರೆ ಒಂದು ಕಲ್ಲನ್ನು ಬಡಿದು ಬಡಿದು ಸುಂದರಮೂರ್ತಿ ಮಾಡುವ
ಶಿಲ್ಪಿ ಸರ್ಕಾರವು ಶಿಕ್ಷಕರ ಸಮಸ್ಯೆ ಪರಿಹಾರ ಮಾಡಬೇಕು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸರಿಯಾದ
ವೇಳೆಗೆ ತಲುಪಿಸುವ ಕೆಲಸ ಆಗಬೇಕು ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ ಅವರನ್ನು ಶಿಕ್ಷಣದಲ್ಲಿ
ಪ್ರೀತಿ ಹುಟ್ಟುವಂತೆ ಮಾಡಬೇಕು ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಬಾಂಧವ್ಯ ಬೆಸೆಯುವ ಕೆಲಸ
ಮಾಡಬೇಕಿದೆ ಶಿಕ್ಷಕರು ಕಲಿಕೆ ಅಲ್ಲದೆ ಆಟ ಚಿತ್ರಕಲೆ ಪರಿಸರ ಮಾನವೀಯತೆ ದಯೆ ಅನುಕಂಪ ಹಿರಿಯರ
ಬಗ್ಗೆ ಒಳ್ಳೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು.
ವಿದ್ಯಾರ್ಥಿಗಳು ಬತ್ತದ ಚೀಲ ಆಗಬಾರದು ಜ್ಞಾನದ ಹೊಳಿ
ಹರಿ ಬೇಕು ನಾಡಿನ ಜ್ಞಾನಪೀಠ ಪ್ರಶಸ್ತಿ ವಿಜೇತರು ರಾಷ್ಟ್ರಕವಿ ಕುವೆಂಪು ಆಡಿದ ಮಾತು ಇದು ಜೀವನದ
ಮೂಲ ಆಗಬೇಕು ಜ್ಞಾನದ ದೀವಿಗೆ ಆಗಬೇಕು ಸರ್ಕಾರ ಶಿಕ್ಷಣ ಕಡೆಗೆ ಗಮನ ಹರಿಸಲು ಪ್ರಯತ್ನ ಮಾಡಬೇಕು ಕಟ್ಟಡ ಶೌಚಾಲಯ ಶಿಕ್ಷಕರ ಹೆಚ್ಚಳ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಿ ಶಿಕ್ಷಣ
ಜೀವನದ ಅಂಗವಾಗಬೇಕು ಪ್ರತಿಯೊಬ್ಬ ವಿದ್ಯಾರ್ಥಿ ಗೆ ಮಾರ್ಗದರ್ಶನ ನೀಡುವ ಕೆಲಸ ಆಗಬೇಕು ಕನಸು
ನನಸಾಗಲಿ,
- ದಯಾನಂದ ಪಾಟೀಲ
ಸಾಮಾಜಿಕ
ಕಳಕಳಿಯ ಆದರ್ಶ ಶಿಕ್ಷಕಿ ಹಸಿನಾ ಬೇಗಂ
ಇತ್ತೀಚಿನ ದಿನಗಳಲ್ಲಿ ಗುರುಶಿಷ್ಯರ ಸಂಬಂಧ
ಮೊದಲಿನಂತಿಲ್ಲ. ಗುರವಿನ ಬಗ್ಗೆ ಜನಸಮುದಾಯಕ್ಕೆ ಇದ್ದ ಗೌರವಾದರಗಳು ಸಹ ಕಡಿಮೆಯಾಗುತ್ತಿವೆ
ಎಂದರೆ ತಪ್ಪಾಗಲಾರದು. ಆದರೂ ಸಹ ಬೆರಳೆಣಿಕೆಯಷ್ಟು ಮಂದಿ ಶಿಕ್ಷಕರು ತಮ್ಮ ಸ್ಥಾನದ ಗೌರವವನ್ನು
ಉಳಿಸಿಕೊಂಡು ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಇಂತಹವರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ
ಹಸೀನಾ ಬೇಗಂರವರು ಒಬ್ಬರಾಗಿದ್ದಾರೆ. ಹಸೀನಾ ಬೇಗಂ ರವರು ತಾಲ್ಲೂಕಿನ ಮೈಲಾಂಡ್ಲಹಳ್ಳಿ ಗ್ರಾಮದ
ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ
ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು ೩೫ ವರ್ಷಗಳಿಂದ ಶಿಕ್ಷಕಿಯಾಗಿ ವಿವಿಧ ಶಾಲೆಗಳಲ್ಲಿ ಸೇವೆ
ಸಲ್ಲಿಸಿರುವ ಇವರು ಎಲ್ಲೂ ಸಹ ಕರ್ತವ್ಯ ಲೋಪವನ್ನು ಎಸಗದೆ ಕರ್ತವ್ಯ ನಿಷ್ಠೆ ತೋರಿದ್ದು, ಶಿಕ್ಷಣ
ಇಲಾಖೆಯ ವಿದ್ಯಾರ್ಥಿಗಳ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಹುತೇಕ
ಕಡೆಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚಲ್ಪಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ
ಹಾಜರಾತಿ ಮತ್ತು ದಾಖಲಾತಿ ಕ್ಷೀಣಿಸುತ್ತಿರುವುದು ಕಾಣಬಹುದಾಗಿದೆ.ಪರಿಸ್ಥಿತಿ ಹೀಗಿರುವಾಗ
ಮೈಲಾಂಡ್ಲಹಳ್ಳಿಯ ಈ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅತ್ಯಧಿಕವಾಗಿರುವುದು
ಗಮನಾರ್ಹವಾಗಿದೆ.ಇದಕ್ಕೆ ಹಸೀನಾ ಬೇಗಂರವರ ಕಾರ್ಯವೈಖರಿಯೇ ಕಾಣವೆಂದರೆ ತಪ್ಪಾಗಲಾರದು. ಸುಮಾರು ೫
ವರ್ಷಗಳಿಂದ ಸದರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಸೀನಾ ರವರು ಶಾಲಾ ಮಕ್ಕಳಿಗೆ ಪ್ರೀತಿಯ
ಶಿಕ್ಷಕಿಯಾಗಿದ್ದಾರೆ. ತಾನು ಕೆಲಸ ನಿರ್ವಹಿಸುತ್ತಿರುವ ಶಾಲೆಯನ್ನು ಖಾಸಗಿ ಶಾಲೆಗಳನ್ನು
ಮೀರಿಸುವಂತೆ ಮಾಡಿರುವುದು ಗಮನಾರ್ಹ ಅಂಶವಾಗಿದೆ. ಮಕ್ಕಳೊಂದಿಗೆ ಮಗುವಂತೆ ಬೆರೆತು ಮಕ್ಕಳ
ಮನಮುಟ್ಟುವಂತೆ ಸರಳವಾಗಿ ಪಾಠಪ್ರವಚನಗಳನ್ನು ಕಲಿಸುತ್ತಿದ್ದಾರೆ.ಈ ಶಾಲೆಗೆ ಸುತ್ತಮುತ್ತಲ ಐದಾರು
ಗ್ರಾಮಗಳ ಮಕ್ಕಳ ಸಹ ದಾಖಲಾಗುತ್ತಿದ್ದು ಇವರಲ್ಲಿ ಅನೇಕ ಮಂದಿ ಕಡುಬಡವರಾಗಿದ್ದಾರೆ.ಈ ಶಾಲೆಯಲ್ಲಿ
ಕಲಿತ ಹಲವಾರು ಮಕ್ಕಳು ಮುಂದಿನ ಶಾಲಾ ಕಾಲೇಜುಗಳಲ್ಲೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ
ಹೊಂದುತ್ತಿದ್ದಾರೆ.
ಹಸೀನಾ
ಬೇಗಂ ರವರು ತನ್ನ ಸೇವೆಯನ್ನು ಶಿಕ್ಷಣ ಕ್ಷೇತ್ರಕ್ಕೆ ಸೀಮಿತಗೊಳಿಸದೆ ಇತರೆ ಸಮಾಜ ಸೇವಾ
ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ತನಗೆ ಬರುವ ಸಂಬಳದಲ್ಲಿ ಸ್ವಲ್ಪಭಾಗ ಸಮಾಜಸೇವಾ
ಕಾರ್ಯಕ್ರಮಗಳಿಗೆ, ಕನ್ನಡ ಕಾರ್ಯಕ್ರಮಗಳಿಗೆ ಖರ್ಚು ಮಾಡುತ್ತಿರುವುದು ಅಚ್ಚರಿಯಾದರೂ ನಿಜ ಸಂಗತಿಯಾಗಿದೆ.
ಇಷ್ಟೇ ಅಲ್ಲದೆ ಎಲ್ಲಾದರೂ ಬಾಲ್ಯವಿವಾಹಗಳು ನಡೆದರೆ ಧೈರ್ಯದಿಂದ ಅಧಿಕಾರಿಗಳಿಗೆ, ಪೋಲಿಸರಿಗೆ
ತಿಳಿಸಿ ಆ ಬಾಲ್ಯವಿವಾಹವನ್ನು ತಡೆಯುತ್ತಾರೆ.
ಈಗಾಗಲೇ ಅನೇಕ ಬಾಲ್ಯವಿವಾಹಗಳನ್ನು ತಡೆದು ಆಮಾಯಕ ಹೆಣ್ಣುಮಕ್ಕಳನ್ನು ಅಪಾಯದಿಂದ ರಕ್ಷಿಸಿ ಅವರ
ಬಾಳಿಗೆ ಬೆಳಕಾಗಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಬಡತನದಿಂದ ಶಾಲೆ ಬಿಟ್ಟರೆ ಅವರ ಮನೆಗೆ
ತೆರಳಿ ಅವರ ಪೋಷಕರಿಗೆ ಬುದ್ಧಿ ಹೇಳಿ ಬಡತನ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ ಎಂದು ಮನವರಿಕೆ
ಮಾಡಿಕೊಟ್ಟು ಅಂತಹ ವಿದ್ಯಾರ್ಥಿಗಳ ವ್ಯಾಸಂಗದ ಜವಾಬ್ದಾರಿಯನ್ನು ತಾನೇ ವಹಿಸಿದ್ದಾರೆ.
ಹೀಗೆ ನಡೆದಿರುವ ಒಂದು
ಪ್ರಸಂಗವನ್ನು ತಿಳಿಸಲೇಬೇಕು ಅದು ತಾನು ಕಾರ್ಯನಿರ್ವಹಿಸುತ್ತಿರುವ ಶಾಲೆಯ ವಿದ್ಯಾರ್ಥಿನಿ ೭ನೇ
ತರಗತಿ ಉತ್ತೀರ್ಣಳಾದ ನಂತರ ಅವಳ ತಂದೆ ತಾಯಿಗಳು ಬಡತನದ ಕಾರಣದಿಂದ ಅವಳನ್ನು ಮುಂದಿನ ತರಗತಿಗೆ
ಕಳುಹಿಸದೇ ಕುರಿ ಮೇಯಿಸಲು ಕಳುಹಿಸಿದ್ದರು.ಈ ವಿಷಯವನ್ನು ಗ್ರಾಮದ ಜನರಿಂದ ತಿಳಿದ ಹಸೀನಾ ಬೇಗಂ
ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ ಅವರೊಂದಿಗೆ ಅವರ ಮನೆಗೆ ತೆರಳಿ ಪೋಷಕರಿಗೆ
ಬುದ್ಧಿವಾದ ಹೇಳಿ ಆ ವಿದ್ಯಾರ್ಥಿನಿಯ ಶೈಕ್ಷಣಿಕ ಖರ್ಚನ್ನು ತಾನೇ ಭರಿಸುವುದಾಗಿ ಭರವಸೆ ನೀಡಿ
ಮರಳಿ ಆ ವಿದ್ಯಾರ್ಥಿಯನ್ನು ಶಾಲೆಗೆ ಕರೆತಂದಿದ್ದು ಗಮನಾರ್ಹ ವಿಷಯವಾಗಿದೆ. ಹೀಗೇ ಹತ್ತು ಹಲವಾರು ಹೆಣ್ಣು ಮಕ್ಕಳ ಬಾಳಿಗೆ
ಬೆಳಕಾಗಿದ್ದಾರೆ.ಜೊತೆಗೆ ಕೌಟುಂಬಿಕ ಕಲಹಗಳು ನಡೆದಾಗ ಅವುಗಳನ್ನು ಪರಿಹರಿಸಿ ಅವರನ್ನು ಒಳ್ಳೆಯ
ಮಾರ್ಗದಲ್ಲಿ ನಡೆಯುವಂತೆ ತಿಳಿಹೇಳುತ್ತಾರೆ.ಹೀಗಾಗಾಗಿ ಹಲವಾರು ಮಂದಿ ಇಂದು ಸುಖವಾಗಿ
ಬಾಳುತ್ತಿದ್ದಾರೆ.ಆದ್ದರಿಂದ ಹಸೀನಾ ಬೇಗಂ ರವರು ಮಹಿಳೆಯರ ಆಶಾಕಿರಣವೆಂದೇ ಖ್ಯಾತರಾಗಿದ್ದಾರೆ.
ಈ
ಹಿಂದೆ ಸರ್ಕಾರದ ಸಾಕ್ಷರ ಆಂದೋಲನ ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಯೋಜಕಿಯಾಗಿ ಸುಮಾರು ೧೦
ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿ ತಾಲ್ಲೂಕಿನಲ್ಲಿ ಸಾಕ್ಷರತಾ ಕಾರ್ಯಕ್ರಮದ ಯಶಸ್ವಿಗೆ
ಶ್ರಮಿಸಿದ್ದಾರಲ್ಲದೆ, ಅನೇಕ ಅನಕ್ಷರಸ್ಥರಿಗೆ ಅಕ್ಷರವನ್ನು ಕಲಿಸಿ ಅವರನ್ನು ವಿದ್ಯಾವಂತರನ್ನಾಗಿ
ಮಾಡುವ ನಿಟ್ಟಿನಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.ಅಷ್ಟೇ ಅಲ್ಲದೆ ಗಂಡನಿಂದ
ದೂರವಾಗಿರುವ, ವಿಚ್ಛೇದನ ಪಡೆದಿರುವ ಅಸಹಾಯಕ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಇತರೆ ಬಡ ಹೆಣ್ಣು
ಮಕ್ಕಳಿಗೆ ಮೇಣದ ಬತ್ತಿ, ಅಗರ ಬತ್ತಿ ತಯಾರಿಕೆ, ಟೈಲರಿಂಗ, ಲಲಿತ ಕಲೆ ಹೀಗೇ ಹಲವಾರು ವೃತ್ತಿ
ತರಬೇತಿಗಳನ್ನು ಉಚಿತವಾಗಿ ನೀಡಿ ಅವರನ್ನು ಸಬಲರನ್ನಾಗಿಸಿ ಅವರ ಕಾಲ ಮೇಲೆ ಅವರು ನಿಲ್ಲುವಂತೆ
ಮಾಡಿದ್ದಾರೆ.ಇಂದು ಇವರಿಂದ ತರಬೇತಿ ಪಡೆದ ಹಲವಾರು ಹೆಣ್ಣುಮಕ್ಕಳು ತಮ್ಮ ಭವಿಷ್ಯವನ್ನು
ರೂಪಿಸಿಕೊಂಡಿದ್ದಾರೆ.
ಬರೀ ಇಷ್ಟೇ ಅಲ್ಲದೇ ಹಸೀನಾ ಬೇಗಂ ಸಾಹಿತ್ಯ ಕೃಷಿಯಲ್ಲೂ
ತೊಡಗಿರುವುದು ಸಂತೋಷದ ಸಂಗತಿಯಾಗಿದೆ. ಹಸೀನಾ ರವರು ವಿಚಾರ ಪೂರ್ಣ, ಪ್ರಚಲಿತ, ಸಾಮಾಜಿಕ
ಸಮಸ್ಯೆ, ಮಹಿಳೆಯ ದೌರ್ಜನ್ಯ, ವರದಕ್ಷಿಣೆ, ಬಾಲ್ಯ ವಿವಾಹ ಸೇರಿದಂತೆ ಹಲವಾರು ವಿಚಾರ ಪೂರ್ಣ
ಲೇಖನಗಳಿಂದ ಪ್ರಸಿದ್ದಿಯಾಗಿದ್ದಾರೆ. ಇವರ ಹಲವು ಬರಹಗಳು ಈಗಾಗಲೇ ನಾಡಿನ ಹಲವು ಪತ್ರಿಕೆಗಳಲ್ಲಿ,
ನಿಯತಕಾಲಿಕೆಗಳಲ್ಲಿ, ಕವನಸಂಕಲನಗಳಲ್ಲಿ ಹಾಗೂ ಸ್ಮರಣ ಸಂಚಿಕೆಗಳಲ್ಲಿ ,ವಾರಪತ್ರಿಕೆ
,ಮಾಸಪತ್ರಿಕೆಗಳಲ್ಲಿ ಬೆಳಕು ಕಂಡಿವೆ.ಹಲವು ಮಂದಿ ಉದಯೋನ್ಮುಖ ಬರಹಗಾರರ ಕೃತಿಗಳಿಗೆ
ಮುನ್ನುಡಿ,ಆಶಯ ನುಡಿಗಳನ್ನು ಬರೆದುಕೊಟ್ಟು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.
ಮಾತೃಭಾಷೆ ಉರ್ದು ಆಗಿದ್ದರೂ, ಹಿಂದಿ
ಪದವೀಧರೆಯಾಗಿದ್ದರೂ ಸಹ ಅಪ್ಪಟ ಕನ್ನಡ
ಪ್ರೇಮಿಯಾಗಿರುವ ಇವರು ಕನ್ನಡದಲ್ಲಿ ಸಾಕಷ್ಟು ಪರಿಣಿತಿಯನ್ನು ಪಡೆದವರಾಗಿದ್ದು, ಉತ್ತಮ
ವಾಗ್ಮಿಗಳೂ ಆಗಿದ್ದಾರೆ.ವಿವಿಧ ಕನ್ನಡ ಹಾಗೂ ಇತರೆ ಕಾರ್ಯಕ್ರಮಗಳಿಗೆ ಇವರನ್ನು ಮುಖ್ಯ
ಭಾಷಣಕಾರರನ್ನಾಗಿ ಆಹ್ವಾನಿಸುತ್ತಾರೆ. ಸರಳ ಸಜ್ಜನಿಕೆಯ, ನೇರ ನುಡಿ, ಮೃದು ಸ್ವಭಾವದ, ಹಸನ್ಮುಖಿ
ವ್ಯಕ್ತಿಯಾಗಿರುವ ಹಸೀನಾ ಬೇಗಂ ರವರಿಗೆ ಅವರ ಸಾಹಿತ್ಯ ಮತ್ತು ಸಾಮಾಜ ಸೇವೆಯನ್ನು ಗುರುತಿಸಿ
ಹಲವಾರು ಕನ್ನಡ ಪರ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿದೆ.
ಇಷ್ಟೆಲ್ಲಾ ಸೇವೆಯನ್ನು ಮಾಡುತ್ತಿರುವ ಹಸೀನಾ ಬೇಗಂ
ರವರು ಎಂದೂ ಪ್ರಶಸ್ತಿ ಪುರಸ್ಕಾರಗಳನ್ನು ಬಯಸಿದವರಲ್ಲ. ಪ್ರಶಸ್ತಿಗಾಗಿ ಅರ್ಜಿ ಹಾಕಿದವರಲ್ಲ,
ಅರ್ಜಿ ಹಾಕಿ ನಿಮಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಕೊಡಿಸುತ್ತೇವೆ ಎಂದಾಗಲೂ ತಾನು
ಅರ್ಜಿ ಹಾಕುವುದಿಲ್ಲ ಎಂದು ಪ್ರಶಸ್ತಿ ನಿರಾಕರಿಸಿದ ಆದರ್ಶ ಶಿಕ್ಷಕಿಯಾಗಿದ್ದಾರೆ.ಹಸೀನಾ ಬೇಗಂ
ರವರ ಈ ಎಲ್ಲಾ ಆದರ್ಶ ಕಾರ್ಯಗಳನ್ನು ತಿಳಿದುಕೊಂಡ ಬೀದರ್ ನ ದೇಶಪಾಂಡೆ ಸಾಹಿತ್ಯ ಮತ್ತು
ಸಾಂಸ್ಕೃತಿಕ ಪ್ರತಿಷ್ಠಾನದವರು ಕಳೆದ ವರ್ಷ ರಾಜ್ಯಮಟ್ಟದ “ಸಮಾಜ ಜ್ಯೋತಿ” ಪ್ರಶಸ್ತಿಯನ್ನು
ಪ್ರದಾನ ಮಾಡಿದ್ದಾರೆ. ಮುಖ್ಯಶಿಕ್ಷಕಿಯಾದರೂ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರೊಂದಿಗೆ
ಬೆರೆಯುತ್ತಾ, ಗರ್ವದಿಂದ ಮೆರೆಯದೆ ಸರಳ ಜೀವನ ನಡೆಸುತ್ತಿರುವ ಸಾಮಾಜಿಕ ಕಳಕಳಿಯ ಹೊಂದಿರುವ
ಆದರ್ಶ ಶಿಕ್ಷಕಿ ಹಸೀನಾ ಬೇಗಂ ರವರ ಬದುಕು ಸಾಧನೆ ಇತರರಿಗೆ ಮಾದರಿಯಾಗಿದೆ.
- ಕೆ.ಎನ್.ಅಕ್ರಂಪಾಷ ಚಿಂತಾಮಣಿ.
ಬದುಕಿಗ್ಯಾರು
ಆಸರೆ
ರಾತ್ರಿ
ಎಂಟೂವರೆ, ನಡುಬಾಗಿದ, ಬದುಕಿನಾನುಭವ ಉಂಡ ಸುಕ್ಕುಗಟ್ಟಿದ ಚರ್ಮದ ಅಜ್ಜಿಯೊಬ್ಬಳು
ಮನೆಮುಂದಿನ ಮೆಟ್ಟಿಲ ಬಳಿ ಕೈಯೂರಿ ಕುಂತಳು.
ಅಜ್ಜಿ ಯಾರ ನೀವು, ಯಾರ ಬೇಕಿತ್ತ ಅಂತ ಸಹಜವಾಗಿ ಕೇಳಿದ್ಲು ಅಕ್ಕ. ‘ಮಗನ ಮನಿಗ ಬಂದಿದ್ದೆ ವಾಪಸ್ ಹೋಗೊಷ್ಟ್ರಾಗ ಕತ್ಲಾತ, ಹೆದರಿಕಿ ಆಗ್ತದ
ಹೋಗಾಕ, ಈ ರಾತ್ರಿ ಇಲ್ಲೆ ಇದ್ದ ಮುಂಜಾನೆ ಮನಿಗ ಹೋಗ್ತಿನಿ’ ಅಂತಾ ನಡಗುವ ದನಿಯಲ್ಲಿ ಹೇಳಿದ
ಅಜ್ಜಿ, ‘ನಿಮ್ ಅವ್ವನ ಕರಿವಾ ಅವರಿಗ ಕೇಳಿ ಇರ್ತಿನಿ’ ಅಂದ್ಲು.
ಅಕ್ಕ
ಗಾಬರಿಯಾದ್ಲ. ಹಂಗಲ್ಲ ಅಜ್ಜಿ, ನಿಮ್ಮನಿ ಎಲ್ಲಿ? ಇಷ್ಟೊತ್ನಾಗ ಯಾಕ ಬಂದ್ರಿ? ಮಗನ ಮನ್ಯಾಗ ಇದ್ದ
ಮುಂಜಾನೆ ಮನಿಗ ಹೋಗಬೇಕಿಲ್ಲ ಅಂದೆ. ಇಲ್ಲ ಮಗಳ, ಹೊಸಾ ಬಸ್ಟ್ಯಾಂಡ್ ಕಡೆ ಮನಿ ಐತಿ. ಹೋಗಬೇಕಂದ್ರ
ಹೊತ್ತಾತ ಅದಕ ಇಲ್ಲೆ ಉಳ್ಕೊಂಡ ಮುಂಜಾನೆ ಮನೀಗ ಹೋಗ್ತಿನಿ ಅಂದ್ರು. ಅಜ್ಜಿ ನಿಮ್ ಮಗನ ಫೋನ್
ನಂಬರ್ ಕೊಡ್ರಿ, ಮಾತಾಡ್ತಿನಿ ಅಂದೆ. ಇಲ್ಲ ನನ್ ಕಡೆ ಅನ್ನೊ ಉತ್ತರ ಸಿಕ್ತು.
ನಾ
ನಿಮ್ಮನಿಗ ಬಿಟ್ಟ ಬರ್ತಿನಿ ನನ್ ಕಡೆ ಗಾಡಿ ಐತಿ ಬರ್ರಿ ಅಂದೆ. ಬ್ಯಾಡವಾ ಹೊತ್ತಾಗೇತಿ, ಕತ್ಲಾನೂ
ಆಗೇತಿ ನೀ ವಾಪಸ್ ಬರೋಷ್ಟ್ರಾಗ ಮತ್ತಷ್ಟ ತಡ ಆಗ್ತದ ಅಂತು ಹಿರಿಜೀವ. ನಿಮ್ ಮಗ ಹುಡಕಾಕತ್ರ ಏನ್
ಮಾಡ್ತಿರಿ, ಗಾಬರಿ ಆಗ್ತಾರ, ಬರ್ರಿ ಮನೀಗ ಬಿಡ್ತಿನಿ ಅಂದೆ. ಹಂಗಾದ್ರ ಇಲ್ಲೆ ಸಮೀಪ ಮಗನ ಮನಿ
ಐತಿ ಅಲ್ಲಿಗ ಬಿಡವಾ ಅಂದ್ರು ತಡವರಿಸ್ಕೋತ. ಆತಜ್ಜಿ ಈಗ ಊಟದ ಟೈಮ್ ಬಿಸಿ ರೊಟ್ಟಿ ಮಾಡೇನಿ ಊಟ
ಮಾಡ್ರಿ, ಬಿಟ್ಟ ಬರ್ತಿವಿ ಅಂದ್ಲು ದೊಡ್ಡಕ್ಕ.
ಮಗನ
ಮನ್ಯಾಗ ಮಾಡ್ತಿನಿ, ಈಗ ಅಲ್ಲಿತನ ಕರ್ಕೊಂಡ ಹೋಗ್ರಿ ಅಷ್ಟ ಸಾಕ ಮಕ್ಳಾ ಅಂದ್ರು. ಅಜ್ಜಿ ಹೇಳಿದ
ಅಡ್ರೆಸ್ ಮನಿಗ ಸಮೀಪ ಇತ್ತ. ಅಜ್ಜಿಗ
ಕುಂದ್ರಸ್ಕೊಂಡ ಗಾಡಿ ಮ್ಯಾಲ ಮೂರ ಮಂದಿ ಹೋಗಾಕ ಆಗಲ್ಲ, ಕಾರಣ ಹದಗೆಟ್ಟಿರೋ ರೋಡು! ಅಜ್ಜಿ ನಡಕೋತ
ಹೋಗೊಣ್ರಿ ಅಂತಿದ್ದಂಗ ಹ್ಞಾಂ ನಡೀರಿ ಅಂತ ಒಪ್ಪಿಗೆ ಕೊಟ್ರು. ಎಡಕ- ಬಲಕ್ಕ, ನಾನು-ಅಕ್ಕ ಕೈ
ಹಿಡಿದು ಜೊತೆಯಾದ ಕತ್ತಲ ನಡಿಗೆಯೊಟ್ಟಿಗೆ ಅಜ್ಜಿ ಕತೆಯೂ ಶುರುವಾತ. ಅಲ್ಲಜ್ಜಿ ಇಷ್ಟೊತ್ನಾಗ
ಒಬ್ಬೊಬ್ರ ಹೊರಗ ಬರಬಾರದ. ಮನ್ಯಾಗ ಆರಾಮ ಇರೋದಲಾ ಅಂದೆ. ಈಗ ನಿಮ್ ಮಕ್ಕಳ ಗಾಬರಿಯಾಗಿ
ಹುಡುಕಾಕತ್ತಿದ್ರ ಏನ್ ಮಾಡ್ತಿರಿ, ಪಾಪ ಎಷ್ಟ ಹೆದರ್ಯಾರೋ ಅಂದೆ. ಬ್ರೇಕ್ ಹಾಕುವಂಗ ಪಟ್ಟಂತ
ನಿಂತ ಆ ಅಜ್ಜಿ, ‘ಹೊಡದ ಮನಿಯಿಂದ ಹೊರಗ ಹಾಕಿದವರ ಹುಡುಕೋ ಪ್ರಯತ್ನ ಮಾಡ್ತಾರ ಮಗಳ’...
ನೊಂದ್ಕೋತ ಹೇಳಿದ್ರು. ಇನ್ನಷ್ಟು ಬಿಗಿಯಾದ್ವು ಅಂಗೈಗಳು.
ಯಾಕಜ್ಜಿ,
ಯಾರ ಹೊಡದ್ರ? ಮಗಳ ವಾ. ಆಕಿನ ಮಗನ ನೋಡ್ಕೋತ ಅಲ್ಲೆ ಇದ್ದೆ. ನಿನಗ ಬರೋ ಪೆನ್ಶನ್ ಯಾರಿಗ
ಕೊಡಾಕತ್ತಿ, ನನಗ ಬೇಕದ ಅಂತ ಹಿಂಸೆ ಮಾಡ್ತಿದ್ಲ. ಮುಪ್ಪಾದ ಕಾಲಕ ನಂಗೂ ಒಂಚೂರ ಖರ್ಚ ಇರ್ತಾವಲಾ.
ಆ ರೊಕ್ಕ ಕೊಡಲಾರದಕ ಹೊಡದ ಹೊರಗ ಹಾಕ್ಯಾಳ. ಮಗನ ಮನೀಗ ಹೋಗಬೇಕಂದ್ರ ಕತ್ಲಾತ. ಸೊಸಿಗ ಗೊತ್ತಾದ್ರ
ಆಡಕೊಂಡ ನಗ್ತಾಳ ಅಂತ ಕಣ್ಣೀರಾದ್ಲು ಅಜ್ಜಿ.
ಮತ್ತ
ಈಗ ಎಲ್ಲಿಗ ಹೋಗ್ತಿರಿ? ಅವರ ನೋಡ್ಕೋತಾರ? ಮಗನ ಮನಿಗ...ಅಷ್ಟ ಮಾತು ಮುಂದುವರಿಲಿಲ್ಲ. ತುಸು
ಹೊತ್ತು ಮೂವರ ಮಧ್ಯೆಯೂ ಮೌನ ಮಾತಾಗಿತ್ತ. ಇವತ್ತ ನೀವ ನನ್ ಪಾಲಿಗ ದೇವರ ಸಿಕ್ಕಂಗ ಸಿಕ್ರಿ,
ಇಲ್ಲಾಂದ್ರ ಎಲ್ಲಿಗ ಹೋಗಬೇಕಿತ್ತ? ಅಂತ ಕೈ ಜೋಡಿಸಿ ನಿಂತ್ರು. ಅಜ್ಜಿ ಮಕ್ಕಳಿಗ ಬೆಳೆಸಾಕ
ಸಣ್ಣವರಿದ್ದಾಗ ನೀವ ಎಷ್ಟ ತ್ರಾಸ ತಗೊಂಡಿರ್ತಿರಿ, ಅವಾಗ ನೀವ ಕಷ್ಟ ಪಟ್ಟಿದಕ ನಾವೀಗ ಆರಾಮ
ಇರೋದ. ಇನ್ನೇನ ಮನಿ ಬಂತಲಾ, ಬರ್ರಿ ಮನಿತನಾ ಬರ್ತಿವಿ ಅಂದ್ಲ. ಬ್ಯಾಡ ಮಗಳ, ಸೊಸಿ ಆಡಕೊತಾಳ ನನ್ ಪರಿಸ್ಥಿತಿ ನೋಡಿ, ನಾ ಹೋಗ್ತಿನಿ
ಇಲ್ಲಿತನ ಕರ್ಕೊಂಡ ಬಂದಿರಲಾ ಬಾಳ ಉಪಕಾರಾತ. ನಾ ಹೋಗ್ತಿನಿ ದೇವರ ನಿಮಗ ಚೊಲೊ ಇಟ್ಟಿರ್ಲಿ...
ಎಂದು ಕೈಮುಗಿದು ನಿಂತ ಆ ಕ್ಷಣ...ಏನ್ ಮಾತಾಡಬೇಕಂತ ತೋಚಲಿಲ್ಲ. ಅವರ ಹೋಗೋತನ ಅಲ್ಲೆ ನಿಂತ್ವಿ. ನಾ ಹೋಗ್ತಿನಿ ನೀವ
ಹೋಗ್ರಿ ಅಂತ ನಡಗೋ ಕೈ ಎತ್ತಿ ಟಾಟಾ ಮಾಡಿದ್ರು. ಮತ್ಮತ್ತ ಹಿಂದ ನೋಡ್ಕೋತ ವಯಸ್ಸಾದವರಗ
ಬಗ್ಗೆ ಯಾಕೀಷ್ಟ ಅಲಕ್ಷ್ಯ ಮುಪ್ಪಾದ ಕಾಲಕ ಮಕ್ಕಳ ಆಸರೆ ಆಗಬೇಕು...ಇವರ್ಯಾಕ ಹಿಂಗ್
ಮಾಡ್ತಾರೋ ಅಂತ ಮಾತಾಡ್ಕೋತ ಮನಿ ಮುಟ್ಟಿದ್ವಿ. ಆಸ್ತಿ ಬೇಕಂತ ಹೊಡದಾಡೋ ಮಗ ಮತ್ತು ಮಗಳ, ಸಂಗಾತಿ
ಕಳ್ಕೊಂಡ ಮುಪ್ಪಾದ ಹಿರಿಜೀವಕ ಆಸರೆ ಕೊಡಾಕ ಯಾಕ ಮುಂದಾಗಲ್ಲ? ಮುಪ್ಪನ್ನೋದ ನಮಗೂ, ನಿಮಗೂ ಬಂದ
ಬರ್ತದ ಅಲಾ!
- ಗೌರಿ ಭೀ.
ಕಟ್ಟಿಮನಿ ದಾರವಾಡ.
ಸಾಧಕರ
ಪರಿಚಯ
"ಬಡತನ
ಸಾಧನೆಗೆ ಅಡ್ಡಿಯಾಗದು" ಎಂಬ ಮಾತು *ಡಾ. ಮಹೇಶ ಎಸ್. ರುದ್ರಕರ್* ರವರ ಸಾಹಿತ್ಯ ಸಾಧನೆಯಲ್ಲಿ
ಮತ್ತೊಮ್ಮೆ ನಿಜ ಸಾಬೀತಾಗಿದೆ. ಹಾಗೂ ಅವರ ಸಾಹಿತ್ಯಿಕ ಸಾಧನೆ ನಿಜಕ್ಕೂ ಸ್ತುತ್ಯಾರ್ಹ.! ಸಾಹಿತ್ಯ
ದೇವತೆಯನ್ನು ಪ್ರಾಮಾಣಿಕ ಶ್ರದ್ದೆಯಿಂದ ಆರಾಧಿಸಿ ಒಲಿಸಿಕೊಂಡಿರುವ ಡಾ. ಮಹೇಶ ರುದ್ರಕರ್ ರವರು ಸಾಹಿತ್ಯ
ದೇವತೆಯ ಮಡಿಲೊಳಗೆ ಜನಿಸಿ ಬೆಳೆಯುತ್ತಿರುವ ಭವಿಷ್ಯತ್ತಿನ ಮಹಾ ಕವಿ, ಲೇಖಕ ಎಂಬುದರಲ್ಲಿ ಎರಡು
ಮಾತಿಲ್ಲ...
ಬುದ್ದ,
ಮಹಾವೀರ, ಬಸವಣ್ಣ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ತಮ್ಮ ಬರವಣಿಗೆಯ ಮೂಲಕ ಮಹಾನಾಯಕರ
ವಿಚಾರಗಳನ್ನು ಹಾಗೂ ನೊಂದವರ ಅಳಲನ್ನು ಮನ ಮನ ಮುಟ್ಟಿಸುತ್ತಿರುವ "ಜನಪರ" ನೊಂದವರ ಕವಿ.
ಡಾ. ಮಹೇಶ ಎಸ್ ರುದ್ರಕರ್ ರವರು ಬಡತನದಲ್ಲಿ ಹುಟ್ಟಿ ಬೆಳೆದು ಬಡತನ ಬದುಕಿನ ಎಲ್ಲಾ ಬವಣೆಗಳನ್ನು
ಅನುಭಾವಿಸಿ, ಬಡವರ ಮನೆಯ ಸರಸ್ವತಿಯ ಮಗನಾಗಿ, ಶೋಷಿತರ, ನೊಂದವರ ಸಾಹಿತ್ಯ ದನಿಯಾಗಿ ದಿನಾಂಕ
01-06-1985ರಂದು ಕಲಬುರ್ಗಿ ಜಿಲ್ಲೆಯ ತಾಜ ಸುಲ್ತಾನಪೂರದಲ್ಲಿ ಜನಿಸಿದರು.
ಇವರ
ತಂದೆ ಶಾಂತಪ್ಪ, ತಾಯಿ ಲಕ್ಷ್ಮೀಬಾಯಿಯವರು. ತಮ್ಮ ಬಾಲ್ಯ ಜೀವನದಿಂದಲೇ ಜನಪರರಾಗುತ್ತ, ನೊಂದವರ
ನೋವನ್ನು ಅರ್ಥೈಸಿಕೊಳ್ಳುತ್ತ ಸಂವೇದನಾಶೀಲರಾಗುತ್ತ ಬೆಳೆದವರು. ಬಡತನವನ್ನು ಮೆಟ್ಟಿ ನಿಂತರೆ ಅದೇ
ಸಾಧನೆ ಎನ್ನುವಂತೆ, ಬಡತನದಲ್ಲಿ ಹುಟ್ಟಿದರೂ ಇವರ ಕಲಿಯುವಿಕೆಗೆ ಬಡತನ ಎಂದೂ ಅಡ್ಡಿಯಾಗಲಿಲ್ಲ.
ತೊಂದರೆ ಸಮಸ್ಯೆಗಳು ಬಂದರೂ ಎದೆಗುಂದದೇ ಎದುರಿಸಿ, ಶಿಕ್ಷಣವು ಎಲ್ಲಾ ಸಮಸ್ಯೆಗಳಿಗೆ ಪರಿಹಾರ, ದಲಿತರಿಗೆ
ಅಂಟಿರುವ ಅಸ್ಪೃಶ್ಯತೆಯ ಸಾಂಕ್ರಾಮಿಕ ರೋಗವನ್ನು ಶಿಕ್ಷಣದಿಂದ ವಾಸಿ ಮಾಡಬಹುದೆಂಬ ವಿಶ್ವರತ್ನ ಡಾ.
ಬಿ. ಆರ್. ಅಂಬೇಡ್ಕರರವರ ಆಶಯದಂತೆ ಉನ್ನತ ಶಿಕ್ಷಣವನ್ನು ಪೂರೈಸಿ, ಈಗ ಕಾಲೇಜಿನಲ್ಲಿ ಅರೆ
ಕಾಲಿನ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಬಡತನ ಬಂಡಿಯನ್ನು ಎಳೆಯುತಿದ್ದಾರೆ. ಸಾಹಿತ್ಯವನ್ನು
ಒಂದು ಪ್ರವೃತ್ತಿಯನ್ನಾಗಿ ಸ್ವೀಕರಿಸಿ, ಲೇಖನಿಯನ್ನು ಸಮಾಜದ ಅಂಕುಡೊಂಕುಗಳನ್ನು ತಿದ್ದಲು,
ನೊಂದವರಿಗೆ ನೇರಳಾಗಿಸಲು ಬಳಸುತಿದ್ದಾರೆ.
ಕನ್ನಡ
ವಿಷಯದಲ್ಲಿ ಎಂ.ಎ, ಮಾಡಿ ಬಿ. ಇಡ್. ಶಿಕ್ಷಣ ಪೂರ್ಣಗೊಳಿಸಿ, "ರಂಗಕರ್ಮಿ ಡಿ. ಎಸ್. ಕುಮಾರ
ಅವರ ಸಮಗ್ರ ಸಾಹಿತ್ಯ : ಒಂದು ಅಧ್ಯಯನ" ಎನ್ನುವ ವಿಷಯದಲ್ಲಿ ಮಹಾಪ್ರಬಂಧವನ್ನು ಮಂಡಿಸಿ ಗುಲ್ಬರ್ಗಾ
ವಿವಿ ಯಿಂದ ಪಿಎಚಡಿ ಪದವಿ ಪಡೆದಿದ್ದಾರೆ. ಜೊತೆಗೆ ನೆಟ್, ಸೆಟ್ ಗಳನ್ನು ಉತ್ತೀರ್ಣರಾಗಿದ್ದಾರೆ.
ಇವರು
ಇಲ್ಲಿಯವರೆಗೆ ವಿವಿದ ಪತ್ರಿಕೆಗಳಿಗೆ ಹತ್ತಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. "ಭೀಮಪ್ರೀಯ"
ಕಾವ್ಯನಾಮದಿಂದ 500ಕ್ಕಿಂತಲೂ ಹೆಚ್ಚು ಆಧುನಿಕ ವಚನಗಳನ್ನು ಬರೆದು, ಬಸವಣ್ಣನವರಂತೆಯೇ ಸಮಾಜದ ಒರೆಕೋರೆಗಳನ್ನು
ತಿದ್ದಲು ಶ್ರಮಿಸುತಿದ್ದಾರೆ. "ರೆಕ್ಕೆ ಇಲ್ಲದ ಹಕ್ಕಿ" ಎನ್ನುವ ಇವರ ವಚನ ಸಂಕಲನ ಪ್ರಕಟವಾಗುವ
ಹಂತದಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಓದುಗರ ಕೈ ಸೇರಲಿದೆ. ಇವರು ಈ ಮೊದಲು 2009ರಲ್ಲಿ
"ನೀಲಿ ನಕ್ಷತ್ರ" 2018ರಲ್ಲಿ "ಕಾವ್ಯ ಚಿಗುರು" ಮತ್ತು "ಕಾವ್ಯ ಖಡ್ಗ"ಎನ್ನುವ
ಕವನ ಸಂಕಲನಗಳನ್ನು ಪ್ರಕಟಿಸಿ ಕಾವ್ಯಾಸಕ್ತರಿಗೆ ಸಾಹಿತ್ಯ ಉಣಬಡಿಸಿದ್ದಾರೆ.
"ಬಣ್ಣದ
ನಾಲಿಗೆ" ಕಥಾ ಸಂಕಲನ ಹಾಗೂ "ಅರಸನಿಲ್ಲದ ಅರಮನೆ" ನಾಟಕ ಇವೆರಡೂ ಮುದ್ರಣ ಹಂತದಲ್ಲಿವೆ.
ಬರವಣಿಗೆಯಲ್ಲಿ ಅಷ್ಟೇ ಅಲ್ಲದೆ ಕಾವ್ಯ ವಾಚನದಲ್ಲೂ ಸಾಧಕರಾಗಿ ನಿಲ್ಲುವ ಇವರು, ಸುಮಾರು 200ಕ್ಕಿಂತಲೂ
ಹೆಚ್ಚು ವೇದಿಕೆಗಳಲ್ಲಿ ತಮ್ಮ ಸ್ವರಚಿತ ಕವನಗಳನ್ನು ವಾಚನ ಮಾಡಿ ಕಾವ್ಯಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿಗಳ
ಹಂಗಿಗೆ ಒಳಗಾಗದೇ, ತಮ್ಮ ಪ್ರವೃತ್ತಿಯನ್ನು ಪ್ರಾಮಾಣಿಕವಾಗಿ ದಿಟ್ಟತನದಿಂದ ಪೂರೈಸುತ್ತಿರುವ ಇವರಿಗೆ
ಹಲವಾರು ರಾಷ್ಟ್ರ ಮಟ್ಟದ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಒಲಿದು ಬಂದಿವೆ.
1.ಕರುನಾಡು
ಹಣತೆ ಕವಿ ಬಳಗ ಚಿತ್ರದುರ್ಗದವರು ಕೊಡ ಮಾಡುವ "ಕರುನಾಡ ಕುವೆಂಪು ರತ್ನ" 2018ರ ರಾಜ್ಯ
ಮಟ್ಟದ ಪ್ರಶಸ್ತಿ.
2.ಕವಿವೃಕ್ಷ
ಬಳಗ, ಬೆಂಗಳೂರು ಇವರ ರಾಜ್ಯ ಮಟ್ಟದ 2019ರ "ಸಾಹಿತ್ಯ ಕಲಾ ಸಾಮ್ರಾಟ" ಪ್ರಶಸ್ತಿ.
3.ಪಂಚ
ಜಿಲ್ಲಾ ಬೆಳಕು ಸಾಂಸ್ಕೃತಿಕ ಟ್ರಸ್ಟ್ ಮಂಡ್ಯದವರು ಕೊಡುವ ರಾಜ್ಯ ಮಟ್ಟದ "ಕುವೆಂಪು ಪ್ರಶಸ್ತಿ".
4.ಸಮಾಜ
ಕಲ್ಯಾಣ ಸಂಸ್ಥೆ,ಬೆಂಗಳೂರು ಕೊಡುವ 2019ರ ರಾಷ್ಟ್ರ ಮಟ್ಟದ "ಸಿರಿಗನ್ನಡ ಸಾಹಿತ್ಯ ರತ್ನ"
ಪ್ರಶಸ್ತಿ.
5.ಭಾರತೀಯ
ಕಲಾ ಸಾಂಸ್ಕೃತಿಕ ಅಕಾಡೆಮಿ, ದಾವಣಗೆರೆಯಿಂದ 2019ರ "ಭಾರತ ಸೇವಾ ರತ್ನ" ರಾಷ್ಟ್ರ ಮಟ್ಟದ
ಪ್ರಶಸ್ತಿ.
6.ಡಾ.ವ್ಹಿ.ಬಿ.ಹಿರೇಮಠ
ಮೆಮೋರಿಯಲ್ ಪ್ರತಿಷ್ಠಾನ, ಗದಗ ರವರು ನೀಡುವ ರಾಜ್ಯ ಮಟ್ಟದ "ಶ್ರೀ ಡಾ. ಪಂಡಿತ ಪುಟ್ಟರಾಜ ಸಾಹಿತ್ಯ
ಚೇತನ" ಪ್ರಶಸ್ತಿ.
7.
ಡಾ. ಬಿ. ಆರ್. ಅಂಬೇಡ್ಕರ್ ಬಾಬು ಜಗಜೀವನರಾಂ ಗ್ರಾಮೀಣಾಭಿವೃದ್ಧಿ ಸಂಸ್ಥೆ(ಪಜಾ/ಪಪಂ) ದಾವಣಗೆರೆಯವರು
ನೀಡುವ ರಾಷ್ಟ್ರ ಮಟ್ಟದ "ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ".
ಹೀಗೆ
ಹಲವಾರು ಪ್ರಶಸ್ತಿ, ಪ್ರಮಾಣಪತ್ರ ಗೌರವಗಳಿಗೆ ಭಾಜನರಾಗಿರುವ ಇವರಿಗೆ ಒಂದು ಸುಸಜ್ಜಿತ ಮನೆಯೂ ಇಲ್ಲ
ಎಂಬುದು ಅತೀ ದುಃಖದಾಯಕ. ಇವರ ಸಾಹಿತ್ಯ ಕೃಷಿ ಹೀಗೇ ಮುಂದುವರಿಯಲಿ. ಇವರ ಆಶೆ ಆಕಾಂಕ್ಷೆಗಳೆಲ್ಲವೂ
ಈಡೇರಿ ಉನ್ನತ ಮಟ್ಟದಲ್ಲಿ ಹೆಸರು ಮಾಡಲಿ, ಸಾಹಿತ್ಯ ರಸಿಕರಿಗೆ ರಂಜಿಸುತ್ತ ಲೇಖನಿಯ ಮೂಲಕ
ಸಮಾಜವನ್ನು ಸರಿ ದಾರಿಗೆ ತರುವ ಪ್ರಯತ್ನ ಸಫಲಗೊಳ್ಳಲಿ ಎಂಬ ಹಾರೈಕೆಗಳ ಜೊತೆ ಸಾಧನೆಗೆ ಅಭಿನಂದನೆಗಳು....
ಮಹೇಶ ಅಶೋಕ
ಶಿಂಗೆ.
ಪೋಟೋಗ್ರಫಿ
- ಷಕೀಬ್ ಎಸ್ . ಕಣದ್ಮನೆ ನವಿಲೇಹಾಳ್ .
ಕವಿತೆಗಳು
ನಾಡ
ಭಕ್ತಿ
ವೀರ
ಕಲಿಗಳ ಭವ್ಯ ಪರಂಪರೆಯ ಕರುನಾಡು
ಗತ
ವೈಭವ ಶಿಲ್ಪಕಲೆಯ ಚಮತ್ಕಾರಗಳ ಕೋಡು
ಗಂಧದ
ಕಂಪಿನ ಖನಿಜ ಸಂಪತ್ತುಗಳ ಕಾಡುಮೇಡು
ಜನ್ನ,
ಪೊನ್ನ, ಪಂಪ ರನ್ನ...ಕವಿವರ್ಯರ ನಲ್ಮೆಯ ಬೀಡು
ಕಾವೇರಿ,
ತುಂಗೆ, ಶರಾವತಿ...ಜೀವನದಿಗಳ ತವರೂರು
ವರ್ಣಬಣ್ಣಪರ್ಣಗಳ
ನಡುವೆ ಸೌಹಾರ್ದದ ಬೇರು
ಶುಭಬಣ್ಣದ
ಪತಾಕೆಯ ಸೌಜನ್ಯದ ಕನ್ನಡ ತೇರು
ಸಿರಿಗನ್ನಡ
ಐಕ್ಯತೆಯ ನಾಡ ಭಕ್ತಿ, ನಮ್ಮಯ ಶಕ್ತಿ
- ಪೊಡನೋಲನ ಈಶ್ವರ ತಮ್ಮಯ್ಯ
ಇಂದಿನ
ಭಾರತ
ಬದುಕಿನಾಂಗಳದಲಿ
ಹೂನಗೆಚೆಲ್ಲಿ
ಪ್ರೇಮ
ರಂಗೋಲಿಹಾಕಿ
ಕಿಲಕಿಲನೆ
ನಗುವವಳು
ಇರಬೇಕಾಗೀತು..........೧
ಆದರೆ, ಬಡತನ,
ಲಂಚಗೊಳಿತನ
ಭ್ರಷ್ಠಾಚಾರಗಳ
ತಡೆಹಿಡಿವೆ
ನೆಮ್ಮದಿಯ
ಬದುಕಿನ ಆಶಾಕಿರಣಗಳು
ನಾಗಾಲೋಟದಿ ಓಡುತಿರುವ
ಬೆಲೆಗಳು......೨
ಅವುಗಳನು
ತಡೆಯಲು ಹೋಗಿ
ಮುಗ್ಗರಿಸಿ
ಬೀಳುತಿರುವ ಪ
ಜನ
ಸಾಮಾನ್ಯರು.....೩
ಕನಸಿನ
ಕಲ್ಪನೆಯನು ಮಾಡಲು
ಹಿಂಜರಿಯುತಿರುವ ಯುವ
ನಯನಗಳು
ಚಿಂತೆಯ ಚಿತೆಯಲ್ಲಿ
ಬೇಯುತ್ತಿರುವರು.....೪
ಜನಸಾಮಾನ್ಯರ
ಜೀವನಕ್ಕೆ
ಬೆಲೆಯಿಲ್ಲದಂತಾಗಿದೆ
ಹಿಂದೆ ನಡೆದಿತು
ಒಂದೇ ಒಂದು
ಜಾಲಿಯನ
ವಾಲಾ ಹತ್ಯಾಕಾಂಡ.....೫
ಆದರೆ
ಈಗ ಪರಿಚಿತ ನೆಲದಲ್ಲಿ
ಅಪರಿಚಿತವಾಗಿ ಹರಿಯುತ್ತಿದೆ
ರಕ್ತ
ಇಲ್ಲಿ ಪ್ರತಿನಿತ್ಯ .......೬
ನಿತ್ಯ
ಉದಯಿಸುತಿರು ಭವ್ಯ ದೇಶದಲ್ಲಿ
ಒಂದಿಲ್ಲೊಂದು
ಸಮಸ್ಯೆಯೊಂದಿಗೆ
ಉದಯಿಸಿ ಸಮಸ್ಯೆಯೊಂದಿಗೆ
ಮುಳುಗುತಿದೆ........೭
ಗಾಂಧಿ
ದೇಶದಲ್ಲಿ ಹಿಂಸೆಯ
ತಾಂಡವ
ನೃತ್ಯ ಎಲ್ಲಿ ನೋಡಿದರಲ್ಲಿ
ಮೋಸ,
ವಂಚನೆ, ಕ್ರೌರ್ಯದ ಅಟ್ಟ ಹಾಸ
- ಶಿರಭಾ ಭಾಗ್ಯಶ್ರೀ ಎಸ್
ರಜಪೂತ ಧಾರವಾಡ
ಮಹಾನಾಯಕ
ಅಂಬೆವಾಡದಲ್ಲಿ
ಜನಿಸಿ
ಅಂಬೇಡ್ಕರಯೆಂಬ
ಬಿರುದು ಗಳಿಸಿ
ಸಮಾಜದಲ್ಲಿ
ತಮ್ಮದೇಯಾದ ಛಾಪು ಮೂಡಿಸಿ
ನೀನಾದೆ
ಮಹಾನಾಯಕ ೧
ಜಾತೀಯತೆಯನ್ನು
ಹೋಗಲಾಡಿಸುವುದು ನಿನ್ನ
ಕಾಯಕ
ದಲಿತ ವರ್ಗದಲ್ಲಿ ಜನಸಿದ ನಾಯಕ
ಅಸ್ಪೃಶ್ಯತೆ
ವಿರುದ್ಧ ಹೋರಾಡಿದ ಧೀಮಂತ ನಾಯಕ
ಮನೆಯ
ಪ್ರೀತಿಯ ಮುದ್ದು ಮಗ
ಸಂವಿಧಾನದಿಂದಲೇ
ಹುಟ್ಟುಹಾಕಿದರು ಹೊಸ ಯುಗ
ಮೀರಾ
ಅತ್ತೆಯಲ್ಲಿ ತಾಯಿಯ ಪ್ರೀತಿ ಕಂಡು
ನೋವು
ಅವಮಾನಗಳನ್ನು ಸಹಿಸಿಕೊಂಡು
ಅನುಭವಗಳಿಂದಲೇ
ಎಚ್ಚೆತ್ತುಕೊಂಡು
ಜಾತೀಯತೆಗೆ
ಹಚ್ಚಿದರು ಅರಿವಿನ ಕಿಚ್ಚು ೩
ಜಾತಿಯ
ಕೆಂಡದಲ್ಲಿ ಬೆಂದು
ನೀನಾದೆ
ಸಮಾನತೆಯ ಅಮೃತ ಬಿಂದು
ತಲೆಯೆತ್ತಿ
ನಡೆಯುವೆವು ಇಂದು
ದೀನದಲಿತರ
ಮಹಾಬಂಧು
ಜಾತಿಯ
ಕಿಚ್ಚು ಆರಿಸಿ ಜ್ಞಾನದ ಜ್ಯೋತಿಯ ಬೆಳಗಿಸಿ
ಸಂವಿಧಾನ
ರೂಪಿಸಿ ನೀನಾದೆ ಸಂವಿಧಾನದ ಶಿಲ್ಪಿ ೫
ಮೇಲುಕೀಳೆಂಬ
ಅಂಧಕಾರ ಶಿಕ್ಷಣದಿಂದಲೇ ಸತ್ಕಾರ
ಜ್ಞಾನದ
ಮೂಲಕ ಸೆದೆಬಡೆದರು ಅಹಂಕಾರ
ಅಂಬೇಡ್ಕರ್
ಅವರಿಗೆ ನಮ್ಮದೊಂದು ಜೈಕಾರ
- ಸುಮಂಗಲಾ ರಾಚಯ್ಯನವರ ಧಾರವಾಡ.
ಅಭಿಮಾನ
ಕನ್ನಡವನ್ನು
ಮಾಡಬೇಡಿ ತಾತ್ಸಾರ
ತೋರಿ
ಕನ್ನಡದ ಮೇಲೆ ಮಮಕಾರ
ಕನ್ನಡ
ಭಾಷೆ ಎಷ್ಟು ಸುಂದರ
ಕಲಿತರೆ
ನಿಮ್ಮ ಬಾಳು ಸುಮಧುರ !!
ಎನ್ನಡ
ಎಕ್ಕಡ ಗಳ ದೂರತಳ್ಳಿ
ಕನ್ನಡವನ್ನು
ಅಪ್ಪಿಕೊಳ್ಳಿ
ಹಬ್ಬಿಸಿ
ಎಲ್ಲೆಲ್ಲೂ ಕನ್ನಡದ ಬಳ್ಳಿ
ಬೆಳಗಿಸಿ
ಕನ್ನಡ ದೀಪ ಮನೆ-ಮನದಲ್ಲಿ ಮನೆಯಲ್ಲಿ !!
ಕಲಿಯಲಿ
ಎಲ್ಲರೂ ಕನ್ನಡ ಭಾಷೆ
ಅದುವೇ
ಎಲ್ಲರ ಅಭಿಲಾಷೆ
ವಿಶ್ವಮಟ್ಟಕ್ಕೆರಲಿ
ಕನ್ನಡ ಭಾಷೆ
ಇದು
ಕನ್ನಡಿಗರ ಅಭಿಲಾಷೆ !!
ಹೆಚ್ಚುತ್ತಿದೆ
ಆಂಗ್ಲ ಭಾಷೆಯ ವ್ಯಾಮೋಹ
ಆಗುತ್ತಿದೆ
ಕನ್ನಡ ಭಾಷೆಗೆ ದ್ರೋಹ
ಬಿಡಿ
ಇಂಗ್ಲೀಷಿನ ಮೋಹ
ಕನ್ನಡವೇ
ನೀಗಿಸುವುದು ನಿಮ್ಮದಾಹ!!
ಗೌರವಿಸಿ
ಇತರೆ ಭಾಷೆಗಳನ್ನು
ಪ್ರೀತಿಸಿ
ಕನ್ನಡವನ್ನು ಕಲಿಯಿರಿ ಕನ್ನಡವನ್ನು
ನುಡಿಯಿರಿ
ಕನ್ನಡವನ್ನು ಕಲಿಸಿರಿ ಕನ್ನಡವನ್ನು !!
- ಕೆ ಎನ್ ಅಕ್ರಂಪಾಷ ಚಿಂತಾಮಣಿ
ಸಮಾನತೆ
ಕಲಿಸಿದ ಕರೋನ
ಯಾರಿಗೆ ಬಂತು ಎಲ್ಲಿಂದ ಬಂತು
ಕಣ್ಣಿಗೆ ಕಾಣದ
ಕರೋನ//
ಚೀನಾದಿಂದ ಒತ್ತು ತಂತು
ಮನುಕುಲಕ್ಕೆ ಕುತ್ತು ತಂತು
ಕರುಣೆ ಇಲ್ಲದ ಕರೋನ
2020 ಕರಾಳ ವರ್ಷದ ಕರೋನ ೧
ಸರ್ಕಾರದ ಖಜಾನೆ
ಖಾಲಿ ಮಾಡಿತು
ಮಂತ್ರಿ ಮಹನೀಯರ
ಜೇಬು ತುಂಬಿತು
ಸುಳ್ಳಿನ ಫೈಲು
ಸೃಷ್ಟಿಮಾಡಿತು
ಕ್ಯಾಮೆರಾ ಮುಂದೆ
ಬರ್ಜರಿ ಪೋಸಿಗೆ ಕಾರಣವಾದ ಕರೋನ ೨
ಲಾಕ್ಡೌನ್ ಎಂಬ ಹೆಸರಿನಲ್ಲಿ
ಇಡೀ ವಿಶ್ವವೇ ಮೌನವಾಯಿತು
ಸೀಲ್ ಡೌನ್ ಎಂಬ ಹೆಸರಿನಲ್ಲಿ
ಕೋಟಿ ಕೋಟಿ ಹಣ ಖರ್ಚಾಯಿತು
ಖರ್ಚಿಗೆ ಸುಳ್ಳು ಲೆಕ್ಕ ಕೊಟ್ಟಿತು ೩
ಅಸೆಂಬ್ಲಿ ಚರ್ಚೆಯಲ್ಲಿ
ಬೆತ್ತಲೆಗೊಳಿಸಿತು ಕರೋನ
ಸಾವಿರಾರು ಮಂದಿ
ಪ್ರಾಣ ಬಿಟ್ಟರು
ನೂರಾರು ಮಂದಿ
ಬೂಟು ಲಾಠಿಗೆ ಜೀವ ಕೊಟ್ಟರು
ಅನ್ನ ನೀರಿಗಾಗಿ
ಕಣ್ಣೀರು ಇಟ್ಟರು
ಕನಿಕರ ತೋರದ
ಕರೋನ ೪
ರಾಜಕೀಯ ವಲಯದಲ್ಲಿ ನಾಟಕ ಸೃಷ್ಟಿಮಾಡಿತು
ಅಬ್ಬರದ ಭಾಷಣದಲ್ಲಿ ತೇಲಿ ಹೋಯಿತು
ಬಡವರ ಒಡಲಿನ ಹಸಿವು ತುಂಬಿಸಲಿಲ್ಲ
ತುತ್ತಿನ ಕಿಟ್ಟು ಹಗರಣಕ್ಕೆ ನಾಂದಿ ಹಾಡಿತು
ಸರ್ಕಾರಕ್ಕೆ ಸಪೋರ್ಟ್ ಮಾಡಿತು ಕರೋನ ೫
ರೈತ ಕೂಲಿ ಕಾರ್ಮಿಕರ
ಬದುಕು ಅತಂತ್ರಗೊಳಿಸಿತು
ಆರ್ಥಿಕ ವ್ಯವಸ್ಥೆ
ದಿವಾಳಿ ಗೊಳಿಸಿ ಬೀದಿಗೆ ತಂತು
ತಿಂಗಳುಗಟ್ಟಲೆ
ದಿಗ್ಬಂಧನ ಹೇರಿ ಮನೆಯಲ್ಲೇ ಕೂಡಿಹಾಕಿತು ಮಹಾ ಮಾರಿ ಕರೋನ ೬
ಗತಕಾಲದ ಜಾತಿ ರೋಗಕ್ಕೆ
ಸಮಾನತೆಯ ಮದ್ಧಿನ ಔಷಧಿ ಹರಿದಿತ್ತು
ಬಡವ ಬಲ್ಲಿದರೆನ್ನದೆ ಸಮಾನತೆ
ನೀಡಿತು
ಮನುಷ್ಯ
ಪ್ರೇಮದಿ ಮಾನವೀಯ ಮೌಲ್ಯ ಕಲಿಸಿತು...
- ಶಿವಾನಂದ ಕಲಬುರಗಿ ಸಂಶೋಧಕರು
ದೇವರು
ಇದ್ದಾನೆ
ದೇವರು ಇದ್ದಾನೆ
! ಎಲ್ಲಿದ್ದಾನೆ ?
ಗುಡಿಯಲ್ಲಿ
? ಮಂದಿರ, ಮಸೀದಿಯಲ್ಲಿ ? ಇಲ್ಲ ಅವನು ಅಲಿಲ್ಲ !
ತಿರುಪತಿ, ಕಾಶಿ
, ಅಯೋಧ್ಯಗಳಲ್ಲಿ ? ಇಲ್ಲ ಅವನು ಇಲ್ಲೆಲ್ಲಿಯೂ ಇಲ್ಲ !
ರಾಮ ಕೃಷ್ಣರ
ಅವತಾರಗಳಲ್ಲಿ ? ಇಲ್ಲ, ದೇವರು ಖಂಡಿತಾ ಇಲ್ಲಿಯೂ ಇಲ್ಲ !
ಮತ್ತೆ ಎಲ್ಲಿದ್ದಾನೆ
? ದೇವರು ಇದ್ದಾನೆ !
ಅವನು ಕರುಣೆ
ಪ್ರೀತಿ ದಯೆ ಸಾಮರಸ್ಯ ದಲ್ಲಿ, ಧೀನ ದುರ್ಭಲರ ಹೃದಯ ಮಂದಿರಗಳಲ್ಲಿ
ಸತ್ಯ ರೂಪನಾಗಿ
ನಿತ್ಯವೂ ನೆಲೆಸಿದ್ದಾನೆ. ದೇವರು ಇದ್ದಾನೆ !
- ಮಹರ್ಷಿ ಕೋಲಾರ
ಮಾಯವಾಯಿತೆ
ಬನಗಳ ಬೆಡಗು ?
ಮಾಯವಾಯಿತೇ
ಬನಗಳ ಬೆಡಗು ?
ನಾಶವಾಯಿತೇ
ಹೂಗಳ ಸೊಬಗು ? ಪ
ಹಸಿರು ವನಸಿರಿ ಹಾಳಾಗಿ
ದಟ್ಟ
ಕಾಡುಗಳು ಬೀಳಗಿ
ಬರಡಾಯಿತೇ
ಪಚ್ಚೆಯ ಒಡಲು ?
ಬರಿದಾಯಿತೇ
ತಾಯಿಯ ಮಡಿಲು ? ೧
ಭೂಮಿಯ
ಮೇಗಡೆ ವಿಪಿನಗಳಿರದೆ
ಬಾನಲಿ
ಬಣ, ಬಣ, ಮೇಘಗಳಿರದೆ
ಬಂಜರವಾಯಿತೇ
ಪ್ರಕೃತಿ ಸಿರಿಯು ?೨
ಕಾಡರೆ
ನಾಡು ಸಗ್ಗದ ಬೀಡು
ಕಾಡುಗಳಲಿಯಲು
ಸುಡುಗಾಡು
ಕಾಡರೆ
ಮಳೆಯು ಚೆಲುವಿನ ಇಳೆಯು
ಮಳೆಯಿರೆ
ಬೆಳೆಯು ಬದುಕಿನ ನಗೆಯು ೩
ಮನುಜನ
ಕಾಡಿದೆ ಧನ ಪಿಶಾಚಿ
ದಿನ
ದಿನ ಕೊಡಲಿಯು ಮರಗಿಡ ಕೊಚ್ಚಿ
ಇಂಗಿದೆ
ವನ್ಯಶ್ರೀ ಸಂಪದ ಬತ್ತಿ
ಕಟ್ಟಿದೆ
ತಾಯಿಯ ಶಾಪದ ಬುತ್ತಿ...!!೪
- ಬುಸಣ್ಣ ವ್ಹಿ ಯಾದವ್. ೧೦ ನೇ ತರಗತಿ
ಕೊನೆಯ
ಸತ್ಯ
ಹಸಿವು,ದಾಹ,ಹೊಟ್ಟೆ
ಬಟ್ಟೆಗಳಷ್ಟೇ ನಿತ್ಯದ ಸತ್ಯವಿಲ್ಲಿ.ದ್ವೇಷ ಅಸೂಯೆ ರಾಗಗಳನ್ನೇ ಸೂಸುತ್ತಾರೆ ಎಲ್ಲ ಬಡವನಾಗಿದ್ದರೆ
ನೀನು... ೧
ಮನೆ
ಎದುರು ನಾಯಿಗಳಿವೆ ಅನ್ನುವ ಬೋರ್ಡಿಗೆ ಬೆಲೆ ಇರುವ ಕಾಲವಿದು ಮಾಲೀಕ ಬಂದರೆ ಸೆಕ್ಯೂರಿಟಿ ಅವನದ್ದೂ
ಈಗೀಗ ಗೊಡ್ಡು ಸಲಾಮು...೨
ಹಣವಷ್ಟೇ
ಮಾತನಾಡುತ್ತದೆ ಗೆಳೆಯಾ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕಿಲ್ಲಿ. ದೈರ್ಯದ ಮಂತ್ರದಂಡವನ್ನೂ ಬಳಸಬೇಕು
ಬಡತನವ ಮೆಟ್ಟಿ ನಿಲ್ಲುವದಕ್ಕೆ ಇಲ್ಲಿ.೩
ಒಳ್ಳೆಯದು
ಮಾಡ ಹೊರಟವರಿಗೂ ಕಾಲೆಳೆವ ಕಾಲವಿದು. ಇರಲಿ ಎಚ್ಚರ ಗೆಳೆಯ ಹುಚ್ಚರ ಸಂತೆ ಇದು. ಬೆನ್ನಿಗೆ ನಿಂತವರೇ
ಇರಿಯುತ್ತಾರೆ ಆಗಾಗ. ಒಡಹುಟ್ಟಿದವರಷ್ಟೇ ಅಲ್ಲ. ೪
ಮಡದಿ
ಮಕ್ಕಳೂ ದೂರವಾಗುತ್ತಾರೆ. ಕಾಲ ನಗುತ ನಿಂತು ಕೈಯ್ಯ ಕೊಟ್ಟಾಗ. ದುಡಿಮೆ ದುಡ್ಡಿನ ತಾಯಿ ನಿಜ ಧರ್ಮದ
ಹಾದಿ ಬಲು ಕಷ್ಟ ಗೆಳೆಯ.ನಿಷ್ಟರಾಗುವ ನಾವು ನಿಷ್ಠೂರವೂ ಆಗುತ್ತೇವೆ. ೫
ಸೂಳೆಯರ
ಸಂತೆಯಲ್ಲಿ ಗರತಿ ಬೆತ್ತಲೆ ಅಷ್ಟೇ.. ಇರಲಿಬಿಡು ಲೋಕದ ಹಾದಿ ಬೇರೆಯಾಗಿರಬಹುದು ಬೆರೆತು ನಡೆಯುವ ಕಾಲ
ದೂರವಾಗಿರಬಹುದು.ಆತ್ಮ ವಿಮರ್ಷೆಗೂ ಸಮಯ ಮೀರಿ ಹೋಗಿರಬಹುದು. ೬
ಸತ್ಯ
ಮರೆತಿದೆ ಲೋಕ ನೆನಪಿಸುವೆನಷ್ಟೇ. ಗೋರಂಟಿ ಹಚ್ಚುವ ಕೈಗೂ ಗ್ಯಾರಂಟಿ ಇಲ್ಲದ ಕಾಲ. ಪುಣ್ಯ ಡೆಪಾಜಿಟ್
ಆದರೆ ಪಾಪ ಮಾಡಿದ ಸಾಲ. ೭
ಬೆರೆತು
ಸವಿಯಬೇಕಿದೆ ಬದುಕ. ದ್ವೇಷ ಕಾರುವವರು ಕಾರುತಿರಲಿ ಕಿಚ್ಚ ಹೊತ್ತಿಸುವ ಜನ ನೂರು ಸಾವಿರ ಬರಲಿ.ಒಲವ
ಹಣತೆಯೊಂದು ಎದೆಯ ಗೂಡಿನಲ್ಲಿ ಉಸಿರು ಇರುವ ತನ ಉರಿಯುತಿರಲಿ..
- ದೀಪಕ ಶಿಂಧೇ.
ಪೋಟೋಗ್ರಫಿ
- ಶ್ರೀಮತಿ
ಚೈತ್ರಾ ಆರ್ ಕೆ
ಚಿತ್ರಕಲೆ
- ಯಶೋಧ ಗಾಣಿಗ
ಕುಂದಾಪುರ.
- ವೈಷ್ಣವಿ ರಾಜ್ ಕುಮಾರ್
- ಬಿ ವೆಂಕಟೇಶ್ ಬೆಂಗಳೂರು
- ವೈಷ್ಣವಿ ರಾಜ್ ಕುಮಾರ್
ಪೋಟೋಗ್ರಫಿ
- ಪೂಜಾ ಬಂಕಲಗಿ ಚಿತ್ತಾಪುರ.
- ಯಶೋದ ಗಾಣೀಗ ಕುಂದಾಪುರ
- ಮೀನಾಕ್ಷಿ ರಾಜಣ್ಣ ರಾಮಸಂದ್ರ
ಸಾಹಿತ್ಯ
ಸಂಚಯ
ಶರಣರ
ಸೂಳ್ನುಡಿ
ಕಾಮವ ತೊರೆದಾತ, ಹೇಮವ ಜರೆದಾತ,
ಭಾನುವಿನ ಉದಯಕ್ಕೆ ಒಳಗಾಗದ ಶರಣನು.
ಆಗಳೂ ನಿಮ್ಮ ಮಾಣದೆ ನೆನೆವರ ಮನೆಯಲು ಶ್ವಾನನಾಗಿರಿಸು,
ಮಹಾದಾನಿ ಕೂಡಲಸಂಗಮದೇವಾ.
ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಗಿತ್ತು,
ಆಚಾರವೆಂಬ ಕಾಯಾಗಿತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.
ನೀರ ಕಂಡಲ್ಲಿ ಮುಳುಗುವರಯ್ಯಾ,
ಮರನ ಕಂಡಲ್ಲಿ ಸುತ್ತುವರಯ್ಯಾ.
ಬತ್ತುವ ಜಲವ, ಒಣಗುವ ಮರನ
ಮಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವಾ.
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕೆ ಭಾನುವಿನ ಉದಯದ ಚಿಂತೆ,
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ,
ಎನಗೆ ನಮ್ಮ ಕೂಡಲಸಂಗನ ಶರಣರ ನೆನೆವುದೆ ಚಿಂತೆ.
ಪ್ರಾಚೀನ
ಕವಿ ಪರಿಚಯ
ಜನ್ನ
ಕನ್ನಡದ ಪ್ರಸಿದ್ಧ ಜೈನಕವಿ.
12ನೆಯ ಶತಮಾನದ ಉತ್ತರಾರ್ಧ ಮತ್ತು 13ನೆಯ ಶತಮಾನದ ಪೂರ್ವಾರ್ಧದಲ್ಲಿ ಕೃತಿರಚನೆ ಮಾಡಿದವ. ಹಳೆಯಬೀಡು
ಪ್ರಾಂತದವನಾದ ಈತನ ತಂದೆ ಸುಮನೋಬಾಣನೆಂಬ ಬಿರುದು ಪಡೆದಿದ್ದ ಶಂಕರ. ತಾಯಿ ಗಂಗಾದೇವಿ ಹೆಂಡತಿ ಲಕುಮಾದೇವಿ.
ಧರ್ಮಗುರು ರಾಮಚಂದ್ರ ದೇವ ಮುನಿ, ಉಪಾಧ್ಯಾಯ ಇಮ್ಮಡಿ ನಾಗವರ್ಮ. ಹೊಯ್ಸಳ "ಬಲ್ಲಾಳನಿಂದ
"ಈತ ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದು, ಅನಂತರ ನರಸಿಂಹನಲ್ಲಿ ದಂಡಾಧಿಪತಿಯೂ ಮಂತ್ರಿಯೂ
ಆಗಿದ್ದ. ನಾಭುಜನಾರ್ಧನದೇವ ಎಂದು ತನ್ನನ್ನು ಕರೆದುಕೊಂಡಿದ್ದಾನೆ. ಒಟ್ಟಿನಲ್ಲಿ ಈತ ಪಂಪನಂತೆ ಬಹುಮುಖ
ವ್ಯಕ್ತಿತ್ವವುಳ್ಳವ.
"ಅನುಭವಮುಕುರ"ವೆಂಬ
ಕಾಮಶಾಸ್ತ್ರ ಸಂಬಂಧವಾದ ಕೃತಿಯನ್ನೂ ಯಶೋಧರ ಚರಿತೆ, ಅನಂತನಾಥಪುರಾಣ ಎಂಬ ಎರಡು ಕಾವ್ಯಗಳನ್ನೂ ಬರೆದಿದ್ದಾನೆ.
ಜನ್ನ. ಕೆಲವು ಶಾಸನಗಳೂ ಈತನಿಂದ ರಚಿತವಾಗಿವೆ. ಯಶೋಧಚರಿತೆ, ಅನಂತನಾಥ ಪುರಾಣ ಎರಡೂ ಧಾರ್ಮಿಕ ಕೃತಿಗಳು.
ಆದರೆ ಯಶೋಧರಚರಿತೆಯಲ್ಲಿ ಲೌಕಿಕದ ನೆಲೆಗಟ್ಟು ಇಲ್ಲದಿಲ್ಲ. ಯಶೋಧರಚರಿತೆ ಬಹುಸುಂದರವಾದ ಪುಟ್ಟಕಾವ್ಯ.
ಕೇವಲ ನಾಲ್ಕು ಅವತಾರಗಳೂ 310 ಪದ್ಯಗಳೂ ಇದರಲ್ಲಿವೆ. ಬರಿಯ ಕಂದಪದ್ಯಗಳಿಂದಲೇ ರಚಿತವಾಗಿರುವುದು ಈ
ಕೃತಿಯ ವಿಶಿಷ್ಟತೆ. ಇದಕ್ಕೆ ಮೂಲ, ಸಂಸ್ಕøತದಲ್ಲಿ ವಾದಿರಾಜ (11ನೆಯ ಶ.) ಬರೆದಿರುವ ಯಶೋಧರಚರಿತ.
ಅದಕ್ಕಿಂತಲೂ ಹಿಂದೆ ಪ್ರಭಂಜನ, ಹರಿಭದ್ರ, ಸೋಮದೇವ ಮುಂತಾದ ಪ್ರಾಕೃತ ಸಂಸ್ಕøತ ಕವಿಗಳು ಯಶೋಧರನ ಕತೆಯನ್ನು
ನಿರೂಪಿಸಿದ್ದರು. ಮೂಲತಃ ಅದೊಂದು ಜನಪದ ಕತೆಯಿರಬೇಕು. ಹಿಂದಿನವರಲ್ಲಿ ಬಹುಮಟ್ಟಿಗೆ ಧಾರ್ಮಿಕ ಸ್ವರೂಪದ
ಕತೆಯಷ್ಟೆ ಆಗಿದ್ದ ಯಶೋಧರಾಖ್ಯಾನವನ್ನು ತೆಗೆದುಕೊಂಡು ಆದರೆ ಅಸಂಗತಾಂಶಗಳನ್ನು ನಿವಾರಿಸಿ ಉಚಿತ ಮಾರ್ಪಾಡುಗಳನ್ನು
ಮಾಡಿಕೊಂಡು ಅದನ್ನೊಂದು ಸರಳರಮ್ಯವಾದ, ಮಾನವೀಯ ಸ್ವಾರಸ್ಯವುಳ್ಳ ಕಾವ್ಯವನ್ನಾಗಿ ಪರಿವರ್ತಿಸಿದವ ವಾದಿರಾಜ.
ಅವನ ಕಾವ್ಯಕ್ಕೆ ಸಂಸ್ಕøತದಲ್ಲಿ ಯಾವ ವೈಶಿಷ್ಟ್ಯವಿದೆಯೋ ಅದೇ ವೈಶಿಷ್ಟ್ಯ ಕನ್ನಡದಲ್ಲಿ ಜನ್ನನ ಕೃತಿಗಿದೆ.
ಜನ್ನ ವಾದಿರಾಜನನ್ನು ಹೆಜ್ಜೆಹೆಜ್ಜೆಗೂ
ಅನುಸರಿಸಿದ್ದಾನಾದರೂ ತನ್ನ ಸ್ವಂತ ಪ್ರತಿಭೆಯನ್ನು ಸಾಕಷ್ಟು ತೋರಿದ್ದಾನೆ. ಕೆಲವೆಡೆ ಮೂಲವನ್ನು ಸೊಗಸಾಗಿ
ಅನುವಾದಿಸಿ ತನ್ನ ಭಾಷಾಂತರ ಶಕ್ತಿಯನ್ನು ಮೆರೆದಿದ್ದಾನೆ; ಕೆಲವೆಡೆ ಮೂಲದ ಚೆಲುವನ್ನು ಹೆಚ್ಚಿಸಿದ್ದಾನೆ;
ಎಷ್ಟೋ ಕಡೆ ಮೂಲವನ್ನು ಅಂದವಾಗಿ ಸಂಗ್ರಹಿಸಿದ್ದಾನೆ. ಕತೆಗೆ ಕೆಲವು ಅಂಶಗಳು ಹೊಸದಾಗಿ ಸೇರಿವೆ. ಅನೇಕ
ಕಡೆ ಸೂಕ್ಷ್ಮವಾದ ಕೆಲವು ಮಾರ್ಪಾಟುಗಳಾಗಿವೆ. ಮೂಲದ ಕೆಲವು ಅನೌಚಿತ್ಯಗಳು ಹೋಗಿವೆ. ಅಲ್ಲದೆ, ಜನ್ನ
ದೇಸಿಯ ಸೊಬಗನ್ನು ತನ್ನ ಕೃತಿಯಲ್ಲಿ ಸೂರೆಮಾಡಿದ್ದಾನೆ; ಅನ್ಯಭಾಷಾಕೃತಿಯೊಂದನ್ನು ತಾಯ್ನುಡಿಯಲ್ಲಿ
ಎಷ್ಟು ಚೆನ್ನಾಗಿ ನಿರ್ವಹಿಸಬಹುದೊ ಅಷ್ಟೂ ಚೆನ್ನಾಗಿ ನಿರ್ವಹಿಸಿ ಯಶಸ್ವಿಯಾಗಿದ್ದಾನೆ.
ಜೇವದಯೆ ಜೈನಧರ್ಮಂ ಎಂಬ ಸಂದೇಶವನ್ನು
ಬಿತ್ತರಿಸಿ, ಅಹಿಂಸೆಯ ಪಾರಮ್ಯವನ್ನು ಎತ್ತಿಹಿಡಿಯುವುದು ಯಶೋಧರಚರಿತೆಯ ಉದ್ದೇಶ. ಹಿಂಸೆಯಿಮದಾಗುವ
ಘೋರ ದುರಂತವನ್ನು ಕವಿ ಮನಮುಟ್ಟುವಂತೆ ಚಿತ್ರಿಸಿದ್ದಾನೆ. ಯಶೋಧರ ಮತ್ತು ಚಂದ್ರಮತಿಯರು ಒಂದು ಹಿಟ್ಟಿನ
ಕೋಳಿಯನ್ನು ಕೊಂದು ಸಂಕಲ್ಪ ಹಿಂಸೆಯನ್ನೆಸಗಿದ ಮಾತ್ರದಿಂದಲೇ ಹಲವಾರು ಜನ್ಮಗಳನ್ನೆತ್ತಿ ವಿವಿಧ ತಿರ್ಯಗ್ಗತಿಗಳಲ್ಲಿ
ತೊಳಲಿ ಕಡೆಗೆ ಕರ್ಮದಿಂದ ಬಿಡುಗಡೆಗೊಳ್ಳುವುದನ್ನು ಇಲ್ಲಿ ನೋಡುತ್ತೇವೆ. ಈ ಕೃತಿಯಲ್ಲಿ ವ್ಯಕ್ತವಾಗುವ
ಅಹಿಂಸಾತತ್ತ್ವ ಜೈನಧರ್ಮಕ್ಕೇ ಸೀಮಿತವಾದುದಲ್ಲ, ಅದು ಇಡೀ ಮಾನವ ಧರ್ಮದ ಸಂದೇಶವಾಗಿ ನಿಲ್ಲುತ್ತದೆ.
ಅದನ್ನು ಕವಿ ಕಲಾವಿಲಾಸಪೂರ್ವಕವಾಗಿ ಪ್ರತಿಪಾದಿಸಿದ್ದಾನೆ.ಯೋಶೋಧರಚರಿತೆಯಲ್ಲಿ ಅಮೃತಮತಿಯ ಅಧಾರ್ಮಿಕ
ವಿಕೃತ ಪ್ರಣಯದ ಕತೆಯೊಂದು ಪೂರಕವಾಗಿ ಸೇರಿಕೊಂಡಿದೆ. ಅದರಲ್ಲಿ ಬರುವ ಸಮಸ್ಯೆ ಸಾಮಾಜಿಕವಾದುದು, ನಿತ್ಯನೂತನವಾದುದು,
ಕವಿ ಅದನ್ನು ವೈರಾಗ್ಯಪ್ರಚೋದನೆಗೆ, ಧರ್ಮ ಬೋಧನೆಗೆ ಬಳಸಿಕೊಂಡಿದ್ದಾನಾದರೂ ಅದನ್ನು ಪ್ರತ್ಯೇಕಿಸಿ
ನೋಡುವುದು ಸಾಧ್ಯ. ಮನಸಿಜನ ಮಾಯೆ ವಿಧಿವಿಳಸನದ ನೆರಂಬಡೆಯೆ ಕೊಂದು ಕೂಗದೆ ನರರಂ- ಎಂಬುದು ಇಲ್ಲಿ
ಜನ್ನನ ಕಾಣ್ಕೆ.
ಒಟ್ಟಿನ ಮೇಲೆ ಮಾನವ ಸ್ವಭಾವದ
ಸಂಕೀರ್ಣತೆಯ ಅರಿವು, ಸ್ವಾರಸ್ಯಪೂರ್ಣವೂ ಸಂಕ್ಷಿಪ್ತವೂ ಆದ ನಿರೂಪಣೆ, ಸರಳ ಸಮುಚಿತವಾದ ಅಲಂಕಾರಗಳು,
ದೇಸಿಯ ಬೆಡಗು ಬಿನ್ನಾಣಗಳು-ಈ ಗುಣಗಳಿಂದ ಕೂಡಿರುವ ಯಶೋಧರಚರಿತೆ ಕನ್ನಡದಲ್ಲಿ ಒಂದು ವಿರಳವರ್ಗದ ಕಾವ್ಯವಾಗಿದೆ;
ಧರ್ಮ, ಕಾವ್ಯಧರ್ಮಗಳ ಸಮನ್ವಯಕ್ಕೆ ಒಳ್ಳೆಯ ನಿದರ್ಶನವಾಗಿದೆ. ಅನಂತನಾಥಪುರಾಣ 14ನೆಯ ತೀರ್ಥಂಕರನಾದ
ಅನಂತನಾಥನ ಕತೆಯನ್ನು ಬಣ್ಣಿಸುವ 14 ಆಶ್ವಾಸಗಳ ಪ್ರೌಢ ಚಂಪೂ ಕಾವ್ಯ. ಇದಕ್ಕೆ ಮುಖ್ಯವಾದ ಆಕರ ಗುಣಭದ್ರಾಚಾರ್ಯರು
ಸಂಸ್ಕøತದಲ್ಲಿ ರಚಿಸಿರುವ ಉತ್ತರಪುರಾಣ. ಅಲ್ಲಿ ಕಿರಿದಾಗಿ ಬರುವ ಅನಂತನಾಥನ ಕತೆಯನ್ನು ಜನ್ನ ಎಳೆದು
ಹಿಗ್ಗಲಿಸಿ 14 ಆಶ್ವಾಸಗಳಷ್ಟು ದೊಡ್ಡದು ಮಾಡಿದ್ದಾನೆ. ಈ ಕಾವ್ಯ ಸಂಪ್ರದಾಯದ ಪ್ರಭಾವಕ್ಕೆ ವಿಶೇಷವಾಗಿ
ಪಕ್ಕಾಗಿದೆ. ವಿದ್ವತ್ತಿನ ಪ್ರದರ್ಶನ, ಮಾತಿನ ಆಡಂಬರ, ಅಲಂಕಾರಗಳ ಜಟಿಲತೆ, ಮತೀಯ ಪ್ರಕ್ರಿಯೆಗಳ ಆಧಿಕ್ಯ,
ಅನಾವಶ್ಯಕ ವರ್ಣನೆಗಳು, ಔಚಿತ್ಯ ಪ್ರಜ್ಞೆಯ ಕೊರತೆ-ಇವು ಇದರಲ್ಲಿ ಎದ್ದುಕಾಣುವ ಲಕ್ಷಣಗಳು. ಹೀಗಾಗಿ
ಈ ಕೃತಿ ರಸವತ್ತಾದ ಕವಿತೆಯಾಗುವುದರ ಬದಲು ಬಹುಮಟ್ಟಿಗೆ ಶುಷ್ಕವಾದ ಪುರಾಣವಾಗಿ ಪರಿಣಮಿಸಿದೆ. ಆದರೆ
ಇದರಲ್ಲಿ ಅಂರರ್ಗತವಾಗಿರುವ ಚಂಡಶಾಸನನ ಉಪಾಖ್ಯಾನ ಒಂದು ಹೃದಯಂಗಮವಾದ ಭಾಗ. ಪ್ರತ್ಯೇಕಿಸಿದರೆ ಅದೊಂದು
ಉಜ್ಜ್ವಲವಾದ ಖಂಡಕಾವ್ಯವಾಗುತ್ತದೆ. ಜಿನಕಥೆಗೂ ಅದಕ್ಕೂ ಸಾವಯವ ಸಂಬಂಧವೇನೂ ಇಲ್ಲ. ಉತ್ತರ ಪುರಾಣದಲ್ಲಿ
ಬಿಂದುರೂಪವಾಗಿ ಬರುವ ಕತೆಯನ್ನು ಇಲ್ಲಿ ಜನ್ನ ಸೊಗಸಾಗಿ ವಿಸ್ತರಿಸಿದ್ದಾನೆ.
ಯಶೋಧರಚರಿತೆಯಲ್ಲಿ ಹೆಣ್ಣಿನ
ನಿಷಿದ್ಧಕಾಮ ಚಿತ್ರಿತವಾಗಿದ್ದರೆ ಚಂಡಶಾಸನ ವೃತ್ತಾಂತದಲ್ಲಿ ಗಂಡಿನ ದುರಂತ ವ್ಯಾಮೋಹ ನಿರೂಪಿತವಾಗಿದೆ.
ಸುಮಾರು 80 ಪದ್ಯಗಳಷ್ಟು ಚಿಕ್ಕದಾದರೂ ಈ ಉಪಾಖ್ಯಾನ ಸಹೃದಯರ ಚಿತ್ತದ ಮೇಲೆ ಅಳಿಸಲಾಗದ ಮುದ್ರೆಯೊತ್ತುತ್ತದೆ.
ಯಶೋಧರಚರಿತೆ ಹಾಗೂ ಅನಂತನಾಥಪುರಾಣದ ಚಂಡಶಾಸನ ಕಥೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆಯುತ್ತವೆ.
ಸಂಪ್ರದಾಯಬದ್ಧವೂ ಚಿರಪರಿಚಿತವೂ ಆದ ವಸ್ತುವನ್ನು ಬಿಟ್ಟು, ಕವಿ ವಿಷಮಪ್ರಣಯದ ಎರಡು ದಿಕ್ಕುಗಳನ್ನು
ಚಿತ್ರಿಸಿ ಬದುಕಿನ ವಾಸ್ತವಿಕತೆಗೆ ಕನ್ನಡಿ ಹಿಡಿದಿದ್ದಾನೆ. ವಿಮರ್ಶಕರೊಬ್ಬರು ಹೇಳುವಂತೆ ಅದಮ್ಯವಾದ
ಕಾಮದ, ಧರ್ಮವಿರುದ್ಧ ಪ್ರಣಯದ ಸ್ತ್ರೀಮುಖ ಪುರಷ ಮುಖಗಳನ್ನು ಉಜ್ಜ್ವಲವಾಗಿ ಕ್ರಾಂತಿಕಾರಕ ರೀತಿಯಲ್ಲಿ
ಚಿತ್ರಿಸ ಕನ್ನಡ ಸಾಹಿತ್ಯಕ್ಕೆ ಸ್ವಂತ ಕಾಣಿಕೆ ಸಲ್ಲಿಸಿದ್ದಾನೆ. ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ,
ಜಾಗತಿಕ ಸಾಹಿತ್ಯಕ್ಕೂ ಬೆಲೆಯುಳ್ಳ ಕಾಣಿಕೆ ಸಲ್ಲಿಸಿದ್ದಾನೆಂದರೆ ತಪ್ಪಲ್ಲ. ಮಹಾಕಾವ್ಯದ ಔನ್ನತ್ಯ,
ಭವ್ಯತೆಗಳು ಆಂಶಿಕವಾಗಿಯಾದರೂ ಅವನ ಎರಡು ಕಿರುಗಬ್ಬಗಳಲ್ಲಿ ತಲೆದೋರಿವೆ. ಆದ್ದರಿಂದ, ಜನ್ನ ಮಹಾಕವಿಗಳ
ಸಾಲಿನಲ್ಲಿ ನಿಲ್ಲಲಾರನಾದರೂ ಮಧ್ಯಮವರ್ಗದ ಕವಿಗಳ ಪಂಕ್ತಿಯಲ್ಲಿ ಅಗ್ರಸ್ಥಾನಕ್ಕೆ ನಿಸ್ಸಂದೇಹವಾಗಿ
ಅರ್ಹನಾಗುತ್ತಾನೆ. ನೇಮಿಜನ್ನಮರಿರ್ವರೆ ಕರ್ಣಾಟಕೃತಿಗೆ ಸೀಮಾಪುರುಷರ್ ಎಂಬ ಮಧೂರ ಕವಿಯ ಪ್ರಶಂಸೆ
ಉತ್ಪ್ರೇಕ್ಷೆಯಾದರೂ ಭಾಗಶಃ ಸತ್ಯವೆನ್ನಬಹುದು.
ಕವಿ ವಾಣಿ
- ದ ರಾ ಬೇಂದ್ರೆ
ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡವದನೆ ನಾವು
ಅದಕು ಇದಕು ಎದಕು
ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕುಟುಕುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ
ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ ನನಗೆ
ನವಿರು ಬಟ್ಟೆ
ಆತ ಕೊಟ್ಟ ವಸ್ತು ವಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ
ಕೆನ್ನೆ ತುಂಬ ಮುತ್ತು
ಕುಂದು ಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ ತುಟಿಗೆ
ಹಾಲು ಜೇನು .
- ಡಾ ವಡ್ಡಗೆರೆ ನಾಗರಾಜಯ್ಯ
ಬಿಕರಿಗಿಟ್ಟ
ಮೇಟಿವಿದ್ಯೆ ಮೇಣಿಹಾಲು!
ನನ್ನ ಅಪ್ಪ ನೇಗಿಲಿಡಿದು
ಬಯಲುಕ್ಕೆಯ
ಉಳುತ್ತಿರುವಾಗ
ಅಲ್ಲೊಬ್ಬ
ಬದುವಿನಗುಂಟ
ನಡೆದು ಹೋಗುತ್ತಿದ್ದ
ಹಾಲುಗಲ್ಲದ
ಹುಡುಗನನ್ನು
ಕೂಗಿ ಕರೆವುದನ್ನು
ನಾನು ಕಂಡಿದ್ದೆ,
"ಅಪ್ಪದೋ
ಕಂದಾ...!
ನಿಂಗೆ
ಮೇಣಿಹಾಲು ಕುಡಿಸ್ತೀನಿ ಬಾರೋ...!"
ಆ ಹುಡುಗನ ಕೈಹಿಡಿದ
ನನ್ನಪ್ಪ ಅವನ
ಅಂಗೈಗಳಿಂದ ನೇಗಿಲ
ಮೇಣಿ ಹಿಡಿಸಿ
ಸೀಳುಕ್ಕೆಯಲ್ಲಿ
ಮೂಡಿದ
ಕುಳದ ಗೆರೆಗುಂಟ
ಹಸಿರು
ಅಕ್ಷರದ ಮೇಣಿಹಾಲನೆರೆಯುತ್ತಿದ್ದ!
ಎತ್ತುಗಳ ಹೆಗಲಿಗೆ
ನೊಗವೂಡಿ
ನೇಗಿಲ ಮೇಣಿ
ಹಿಡಿದು
ಮೇಟಿ ವಿದ್ಯೆಯ
ಕಲಿವುದನ್ನು
'ಮೇಣಿಹಾಲು ಕುಡಿಯುವುದು'
ಎಂದು
ಭೂಸ್ತನ್ಯ ಜನನಿಗೆ
ಹೋಲಿಸಿರುವ ಸೋಜಿಗದ
ವಿದ್ಯೆ ಇದು!
ನನಗೂ ಹೀಗೆಯೇ
ನಮ್ಮೂರ ತಿಗಳರ
ಬಯಲಪ್ಪ ಮೇಣಿಹಾಲು ಕುಡಿಸಿ ಮೇಟಿ ವಿದ್ಯೆಯ
ಪ್ರಥಮ ಪಾಠಗಳನ್ನು
ಕಲಿಸಿದ್ದ ನೆನಪಾಯಿತು.
ನೇಗಿಲಿಡಿದು
ಉಳುವ ಗಂಡು ಕೂಡಾ
ಮೇಣಿಹಾಲು ಕುಡಿಸುವ
ಹೆಣ್ಣಾಗುವ ತಾಯ್ತನದ
ಬೆಡಗನ್ನು ಕಂಡು
ಬೆರಗಾದೆ!
ಬಯಲ ಬದುವಿನಗುಂಟ
ನಡೆಯುತ್ತಿದ್ದ
ಆ ಹುಡುಗ
ನನ್ನಪ್ಪ ಕುಡಿಸಿದ
ಮೇಣಿಹಾಲು ಕುಡಿದು ಅವನ
ಅಂಗೈನಲ್ಲಿ ಪರಂಜ್ಯೋತಿ
ಉರಿದಿತ್ತು!
ಆ ಹುಡುಗನ ಬದುಕಿನ
ಬಯಲುಕ್ಕೆ ಹಸಿರು
ಪತ್ತಲವನುಟ್ಟು ನಕ್ಕಿತ್ತು.
ಲಾಭನಷ್ಟ ಕ್ರಯ
ವಿಕ್ರಯಗಳ
ಬಾಬತ್ತಿಲ್ಲದೆ
ಜೀವರಸದ ಬಾಳುವೆಗೆ ಅನ್ನರಸವನೀಯುವ
ವಿದ್ಯೆಯ ಕಲಿಸುವ
ರೈತನ ಬೆನ್ನೆಲುಬ
ಬೆವರ ಬೇಗುದಿಯ ಮೇಣಿಹಾಲು
ಇಂದು ಕಾರ್ಪೊರೇಟ್
ಬಂಡವಾಳಿಗರ
ಚಕ್ಕಂದಾಟದಲ್ಲಿ
ವಿಶ್ವಮಾರುಕಟ್ಟೆಯ
ಸರಕು!
ರೈತರ ಕಳೇಬರಗಳ
ಮೇಲೆ
ಮೇಟಿ ವಿದ್ಯೆಯ
ಮೇಣಿಹಾಲಿನ
ಸರಕು ಮಾರಾಟಕ್ಕಿದೆ
ಕೊಳ್ಳಿರೋ... ಕೊಳ್ಳಿರೋ...!
- ಡಾ. ವಡ್ಡಗೆರೆ ನಾಗರಾಜಯ್ಯ
ಪ್ರಕಟಣೆ : ವಾಟ್ಸಪ್
ಸಾಹಿತ್ಯ ಪತ್ರಿಕೆಯ ಮುಖಪುಟಕ್ಕಾಗಿ ತಾವೇ ಸೆರೆ ಹಿಡಿದ ಪ್ರಕೃತಿಯ , ಪ್ರಾಣಿ ಪಕ್ಷಿಗಳ, ಹಾಗೂ
ಇತರೆ ಸುಂದರವಾದ, ಭಾವನಾತ್ಮಕವಾದ ಛಾಯಾಚಿತ್ರಗಳನ್ನು ಅಥವಾ ತಾವೇ ರಚಿಸಿರುವ ಚಿತ್ರಗಳನ್ನು ನಮಗೆ
ಕಳುಹಿಸಬಹುದು...ಸೂಕ್ತವಾದ ಚಿತ್ರವನ್ನು ಸೂಕ್ತ ಸಮಯದಲ್ಲಿ ನಿಮ್ಮ ಹೆಸರಿನೊಂದಿಗೆ ಪತ್ರಿಕೆಯಲ್ಲ
ಪ್ರಕಟಿಸಲಾಗುವುದು...
ಪತ್ರಿಕೆಯ
ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಲಹೆ ಸೂಚನೆಗಳನ್ನು,ವಿಷಯ ವಿಮರ್ಶೆಯನ್ನು ಮುಕ್ತವಾಗಿ ನಮಗೆ ಬರೆಯಬಹುದು. ಅದನ್ನು ಪತ್ರಿಕೆಯಲ್ಲಿ
ಪ್ರಕಟಿಸುತ್ತೇವೆ.
ಪ್ರಕಟಣೆ : ವಿಚಾರ ಮಂಟಪ ಸಾಹಿತ್ಯ ಪತ್ರಿಕೆ
ಪ್ರಾರಂಭಿಕ ಕವಿ ಲೇಖಕ ವಿಮರ್ಶಕ ರನ್ನು ಪ್ರೂತ್ಸಾಹಿಸುವ ಹಾಗೂ ಮಾರ್ಗದರ್ಶನ ನೀಡುವ ಸದ್ದುದ್ದೇಶದಿಂದ
ಆನ್ ಲೈನ್ ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸುತ್ತಿದ್ದು, ಕವಿತೆಗಳು, ಚುಟುಕು ಬರಹಗಳು, ನಗೆಹನಿಗಳು,
ಲೇಖನಗಳು, ಪ್ರಭಂಧಗಳು, ವಿಮರ್ಶೆ, ಹಾಗೂ ಅನುಭವ ಕಥನಗಳು , ಚಿತ್ರಕಲೆ, ವೈಚಾರಿಕ ಬರಹಗಳು , ಪ್ರಚಲಿತ
ಘಟನೆಗಳ ಕುರಿತಾದ ಪ್ರತಿಕ್ರಿಯೆಗಳನ್ನು ಹಾಗೂ ಇನ್ನಿತರೇ ಸೃಜನಾತ್ಮಕ ಬರಹಗಳನ್ನು ದೇಶದ ಯಾವುದೇ ಮೂಲೆಯಿಂದಲಾದರೂ
ಬರೆದು ತಪ್ಪಿಲ್ಲದಂತೆ ಟೈಪಿಸಿ ನಮಗೆ ಕಳುಹಿಸಬಹುದು... ಸಂಪಾದಕ ಮಂಡಳಿಯಿಂದ ಮೆಚ್ಚುಗೆ ಪಡೆದ ಬರಹಗಳನ್ನು
ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ. ಪ್ರತಿ ತಿಂಗಳ ೫-೧೦ ಮತ್ತು ೨೦-೨೫ ನೇ ದಿನಾಂಕಗಳಲ್ಲಿ
ಪತ್ರಿಕೆ ಪಿ ಡಿ ಎಪ್ ರೂಪದಲ್ಲಿ ತಮ್ಮ ಕೈ ಸೇರುವುದು. ನಿಮ್ಮ ಬರಹಗಳು ೧ ಮತ್ತು ೧೫ ನೇ ತಾರೀಕಿನ
ಒಳಗೆ ನಮಗೆ ತಲುಪಬೇಕು. ತಮ್ಮ ಬರಹಗಳನ್ನು ಕಡ್ಡಾಯವಾಗಿ ೮೨೧೭೭೪೪೮೮೬ ಈ ನಂಬರಿಗೆ ವಾಟ್ಸಪ್ ಮೂಲಕ
ಕಳುಹಿಸಿಕೊಡಬೇಕು, ಬೇರೆ ಯಾವುದೇ ನಂಬರಿಗೆ ಕಳುಹಿಸಲಾಗುವ ಬರಹಗಳನ್ನು ಪ್ರಕಟಣೆಗೆ ಪರಿಗಣಿಸಲಾಗುವುದಿಲ್ಲ.
ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಹಾಗೂ ಹೆಚ್ಚಿನ ಮಾಹಿತಿಗೆ
ಸಂಪಾದಕರನ್ನು ಸಂಪರ್ಕಿಸಿ :
ವರುಣ್‌ರಾಜ್ ಜೀ
ಸಂಪಾದಕರು ವಿಚಾರ
ಮಂಟಪ ಸಾಹಿತ್ರ ಪತ್ರಿಕೆ
9448241450. (ವಾಟ್ಸಪ್ ಸಂದೇಶ ಕಳುಹಿಸಿ
ತಕ್ಷಣ ಪ್ರತಿಕ್ರಿಯೆ ಪಡೆಯಬಹುದು)
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ
ವಿರೋಧಿ ಒಕ್ಕೂಟ – ಕೋಲಾರ
ಬಿತ್ತಿ ಪತ್ರ
ಆತ್ಮೀಯರೆ
ಬನ್ನಿ..ಹಿಂಸೆ
ದೌರ್ಜನ್ಯಗಳಿಲ್ಲದ ನೆಮ್ಮದಿಯ ಸಮಾಜವನ್ನು ಕಟ್ಟುವ ಪ್ರಯತ್ನಕ್ಕೆ ಕೈ ಜೋಡಿಸೋಣ.
ಹತ್ರಾಸ್‍ನಲ್ಲಿ
ಗುಂಪು ಅತ್ಯಾಚಾರವೆಸಗಿ, ಸಾಕ್ಷಿ ಹೇಳದಂತೆ ಸಂತ್ರಸ್ತಳ ನಾಲಿಗೆ ಕತ್ತರಿಸಲಾಯಿತು.
ಕೋಲಾರ
ಜಿಲ್ಲೆ ಬೇತಮಂಗಲ ತಾಲೂಕಿನಲ್ಲಿ ಬಾಲಕಿಯ ಮೇಲೆ ಯುವಕರು ಗುಂಪು ಅತ್ಯಾಚಾರವೆಸಗಿದ್ದಾರೆ.
ಉತ್ತರ
ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅವಳ ಶ್ವಾಸಕೋಶವನ್ನು
ಬಗೆದು ಕೊಲೆ ಮಾಡಲಾಗಿದೆ. ಇದೇ ರಾಜ್ಯದ ಫತೇಪುರ ಜಿಲ್ಲೆಯಲ್ಲಿ ಇಬ್ಬರು ದಲಿತ ಸೋದರಿಯರ ಹತ್ಯೆ ಮಾಡಲಾಗಿದೆ.
ಬಿಹಾರದಲ್ಲಿ
ಮಹಿಳೆಯೊಬ್ಬರನ್ನು ಬಹಿರಂಗವಾಗಿ ಸಜೀವ ದಹನ ಮಾಡಲಾಗಿದೆ.
ಹೀಗೆ
ಹಸುಳೆ-ವೃದ್ಧೆ, ಅಕ್ಷರಸ್ಥೆ-ಅನಕ್ಷರಸ್ಥೆ, ಉದ್ಯೋಗಸ್ಥೆ-ಗೃಹಿಣಿ ಮುಂತಾದ ಭೇದಗಳಿಲ್ಲದೆ ಅತ್ಯಾಚಾರ,
ದೌರ್ಜನ್ಯಗಳು ನಡೆಯುತ್ತಲೇ ಇವೆ. ಇವುಗಳಲ್ಲಿ ಅತಿ ಹೆಚ್ಚಿನ ದೌರ್ಜನ್ಯಕ್ಕೆ ದಲಿತ ಮಹಿಳೆಯರು ಒಳಗಾಗುತ್ತಿದ್ದಾರೆ.
ದಲಿತ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆಂದೋ, ಹೊಸದೊಂದು ಮನೆ ಕಟ್ಟಿಸಿಕೊಂಡರೆಂದೋ,
ಉತ್ತಮ ಬಟ್ಟೆ ಹಾಕಿಕೊಂಡರೆಂದೋ, ಚುನಾವಣೆಯಲ್ಲಿ ಗೆದ್ದರೆಂದೊ ಮಟ್ಟ ಹಾಕುವ ಸಲುವಾಗಿ ಅವರ ಮೇಲೆ ಅತ್ಯಾಚಾರಗಳು
ನಡೆಯುತ್ತಿವೆ.
ನ್ಯಾಷನಲ್
ಕ್ರೈಮ್ ರೆಕಾಡ್೯ ಬ್ಯೂರೋ ಪ್ರಕಾರ 2019 ರ ವರ್ಷದಲ್ಲಿ ಮಹಿಳೆಯರ ಮೇಲೆ 4,05,861 ರಷ್ಟು ದೌರ್ಜನ್ಯ
ಪ್ರಕರಣಗಳು ದಾಖಲಾಗಿವೆ. ದಾಖಲಾಗದೆ ಉಳಿದ ಪ್ರಕರಣಗಳೆಷ್ಟೋ?ಪ್ರತಿ ದಿನ 87 ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ.
ದಲಿತ ಮಹಿಳೆ ಎನ್ನುವ ಕಾರಣಕ್ಕಾಗಿಯೇ ಪ್ರತಿದಿನ 8 ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ.
ಇಂತಹ ದೌರ್ಜನ್ಯ ಎಸಗುತ್ತಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮುಂದಿದೆ.ಮಹಿಳೆ ಮೇಲೆ ನಡೆಯುವ ದೌರ್ಜನ್ಯಗಳು
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 7.3 ರಷ್ಟು ಹೆಚ್ಚಾಗಿದೆ...ಇದೆಲ್ಲಾ ಏನನ್ನು
ಹೇಳುತ್ತದೆ????
ಸಹ
ಜೀವಿಯಾಗಿ, ಸಹಪಯಣಿಗಳಾಗಿ ತನ್ನ ದುಡಿಮೆ ಮತ್ತು ಅರಿವಿನ ಮೂಲಕ ಅಪಾರವಾದ ಕೊಡುಗೆಯನ್ನು ನೀಡಿ ಸಮಾಜವನ್ನು
ಪೋಷಿಸುತ್ತಿರುವ ಹೆಣ್ಣಿನ ಮೇಲೆ ದೌರ್ಜನ್ಯಗಳು ನಿತ್ಯವೂ ನಡೆಯುತ್ತಿವೆ. ಯಾವುದೇ ಅಪರಾಧದಲ್ಲಿ ಆರೋಪಿ
ಶಿಕ್ಷೆ/ಪಶ್ಚಾತಾಪಕ್ಕೆ ಒಳಪಡುವುದು ನ್ಯಾಯಸಮ್ಮತ. ಆದರೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಸಂದರ್ಭದಲ್ಲಿ
ಆರೋಪಿಗಿಂತ ಸಂತ್ರಸ್ತೆಯೇ ಶಿಕ್ಷೆಗೆ ಒಳಪಡುವಂತಹ ಊಹಾತೀತ, ದುರ್ಬರ ಪರಿಸ್ಥಿತಿಯು ನಮ್ಮ ಸಮಾಜದಲ್ಲಿದೆ.
ದೌರ್ಜನ್ಯಕ್ಕೆ ಈಡಾಗುವುದರ ಜೊತೆಗೆ ದೌರ್ಜನ್ಯ ಎಸಗುವುದಕ್ಕೆ ಮಹಿಳೆಯರೇ ಕಾರಣರೆಂದು ಕಲ್ಪಿಸುವ ಹಲವಾರು
ಮಿಥ್ಯೆಗಳು ಕೂಡ ನಮ್ಮ ಸಮಾಜದಲ್ಲಿ ಕಾನೂನಿಗಿಂತ ಪ್ರಬಲವಾಗಿ ಜಾರಿಯಲ್ಲಿವೆ. ‘ಅವಳು ಉಡುಪು ಸರಿಯಾಗಿ
ಧರಿಸಿರಲಿಲ್ಲ, ಅವಳ ನಡತೆ ಸರಿ ಇಲ್ಲ, ಅವಳ್ಯಾಕೆ ಅಷ್ಟು ಹೊತ್ತಿನಲ್ಲಿ ಒಬ್ಬಳೇ ಓಡಾಡಬೇಕು’ ಎಂಬ
ಮಾತುಗಳು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಸಂದರ್ಭಗಳಲ್ಲಿ ಹರಿದಾಡುತ್ತವೆ.
ಸಂತ್ರಸ್ತೆಯ
ನಾಲಿಗೆ ಕತ್ತರಿಸುವುದು, ಮೊಲೆಗಳನ್ನು ಕತ್ತರಿಸುವುದು, ಯೋನಿ ಹರಿಯುವುದು, ಶ್ವಾಸಕೋಶ ಬಗೆಯುವುದು,
ಜೀವಂತ ಸುಟ್ಟು ಹಾಕುವುದು... ಹೀಗೆ ಗಂಡಿನ ಸ್ವೇಚ್ಛೆಗೆ ಹೆಣ್ಣು ಬಂಧಿಯಾಗಬೇಕು ಇಲ್ಲವೇ ಬಲಿಯಾಗಬೇಕು.
ಅವಳ ಪರಿಸ್ಥಿತಿ ಯಾಕೆ ಹೀಗೆ?
ಮಹಿಳೆಯರ
ಮೇಲೆ ನಡೆಯುವ ಅತ್ಯಾಚಾರ ಮತ್ತು ದೌರ್ಜನ್ಯಗಳಿಗೆ ಅವಳು ದ್ವಿತೀಯ ದರ್ಜೆಯವಳು, ಕಾಮದ ಗೊಂಬೆ, ಕೀಳು
ಎಂಬ ಭಾವನೆಗಳ ಜೊತೆಗೆ ಅವಳ ಪರವಾಗಿ ದನಿ ಎತ್ತುವವರು ಯಾರು ಇಲ್ಲ ಎಂಬ ನಿಲುವುಗಳು ಕಾರಣವಾಗಿವೆ.
ದುಡಿಯುವ, ಬಳಸುವ ಮತ್ತು ಭೋಗಿಸುವ ದೇಹವಾಗಷ್ಟೇ ಸಾಮಾಜಿಕರು ಹೆಣ್ಣನ್ನು ಪರಿಗಣಿಸಿರುವುದೂ ಕಾರಣವಾಗಿದೆ.
ಹಾಗಾಗಿಯೇ ಹೆಣ್ಣು - ಬೇಲಿ ಹಾಕಬೇಕಾದ ಆಸ್ತಿ, ಕಾವಲಿಟ್ಟು ಕಾಯಬೇಕಾದ ಸಂಪತ್ತು, ವಶಪಡಿಸಿಕೊಳ್ಳಬೇಕಾದ
ಚಂಚಲೆ, ಗೆಲ್ಲಬೇಕಾದ ಮಾಯೆ ಎನಿಸಿದ್ದಾಳೆ. ದೇಹ-ಮನಸ್ಸು-ಆತ್ಮಗಳಿರುವ ಸಹಜ ಮನುಷ್ಯಳಾಗಿಲ್ಲ. ಗಂಡಸು
ಸಹ ಸಹಜಜೀವಿಯಾಗದೆ ಮಾಲಿಕ, ಕಾವಲುಗಾರ, ಆಕ್ರಮಣಕಾರನಾಗಿ ರೂಪಾಂತರಗೊಂಡಿದ್ದಾನೆ; ದಮನ ಮಾಡಿಯೇ
ತನ್ನ ಅಸ್ತಿತ್ವವನ್ನು ಆತ ಸಾಬೀತು ಪಡಿಸಿಕೊಳ್ಳಬೇಕಾದ ವ್ಯಕ್ತಿಯಾಗಿದ್ದಾನೆ. ಇದರ ಮೂಲವಿರುವುದು
ಮನುಷ್ಯ ಕುಲವನ್ನು ಒಡೆದು ಹಾಕಿರುವ, ಸಮಾಜದಲ್ಲಿ ಬಲವಾಗಿ ಬೇರುಬಿಟ್ಟಿರುವ ಲಿಂಗ, ಜಾತಿ, ಮತ, ಧರ್ಮ
ಇತ್ಯಾದಿ ತಾರತಮ್ಯಗಳು. ಈ ಒಡಕನ್ನೇ ಬಳಸಿಕೊಂಡು ಹಸಿವು, ನಿಟ್ಟುಸಿರು, ರಟ್ಟೆಬಲ ಎಲ್ಲವನೂ ಮಾರಾಟದ
ಸರಕಾಗಿಸಿ ಲಾಭ ದೋಚುವ ಮಾರುಕಟ್ಟೆ ಆರ್ಥಿಕತೆಯು ಮನುಷ್ಯರನ್ನು ಸಹಜ ಜೀವಿಗಳಾಗಿ ಬದುಕಲು ಬಿಟ್ಟಿಲ್ಲ.
ಲಾಭಾಧಾರಿತ ಮಾರುಕಟ್ಟೆ ವಿದ್ಯಮಾನಗಳೇ ಕೇಂದ್ರವಾಗಿರುವ ಶಿಕ್ಷಣ ವ್ಯವಸ್ಥೆ; ಹಿಂಸೆ ಮತ್ತು ಕ್ರೌರ್ಯವನ್ನೇ
ವಿಜೃಂಭಿಸಿ ಟಿಆರ್‍ಪಿ ರೇಟ್ ಹೆಚ್ಚಿಸಿಕೊಳ್ಳುವ ಮಾಧ್ಯಮ ಉದ್ದಿಮೆಗಳು ಈ ಕೇಡನ್ನು ಉದ್ದೀಪಿಸಿವೆ.
ಲಾಭಕೋರ ಆರ್ಥಿಕತೆ, ಅಸಮಾನತೆ, ತಾರತಮ್ಯಗಳನ್ನೇ ತಳಪಾಯವಾಗಿಸಿಕೊಂಡಿರುವ ಸಮಾಜ ಮನುಷ್ಯರನ್ನು ಲಾಭದ
ಸರಕುಗಳಾಗಿಯೂ, ಸರಕುಗಳ ಮಾಲಿಕರಾಗಿಯೂ ಮಾಡಿದೆ. ಇದು ಬದಲಾಗದೆ ಸ್ವಸ್ಥ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ.
ಸಹಜ
ಜೀವಿಗಳಾಗಿ ಮತ್ತು ಸಹ ಜೀವಿಗಳಾಗಿ ಬದುಕುವಂತಹ ಸ್ವಸ್ಥ ಸಮಾಜವನ್ನು ಕಟ್ಟಲು ಸರ್ವರಿಗೂ ಸಮಾನತೆ,
ಸಮಪಾಲು ಮತ್ತು ಸಮಬಾಳನ್ನು ಖಾತ್ರಿಪಡಿಸುವ ಸಂವಿಧಾನದ ಆಶಯಗಳನ್ನು ಬಿತ್ತಿ ಬೆಳಸುವುದು ಭಾರತೀಯರಾದ
ನಮ್ಮೆಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಹೆಣ್ಣಿನ ಮೇಲಾಗುತ್ತಿರುವ ಅತ್ಯಾಚಾರ, ದೌರ್ಜನ್ಯಗಳನ್ನು
ತಡೆಯುವ ಪ್ರಯತ್ನಗಳನ್ನು ನಾವೆಲ್ಲ ಮಾಡುವ ಜರೂರಿದೆ. ಸಂತ್ರಸ್ತೆಗೆ ಸ್ಥೈರ್ಯ ತುಂಬುವುದರ ಜೊತೆಗೆ
ನ್ಯಾಯಕ್ಕಾಗಿ ಅವರು ನಡೆಸುವ ಹೋರಾಟದಲ್ಲಿ ಕೈ ಜೋಡಿಸಬೇಕಾಗಿದೆ.
ಇಂತಹ ಕೆಲಸವನ್ನು ಮಥುರಾದ ಅತ್ಯಾಚಾರ ಪ್ರಕರಣದಿಂದ ಹಿಡಿದು ಮಹಿಳೆಯರ ಘನತೆಯನ್ನು
ಎತ್ತಿ ಹಿಡಿದ ನ್ಯಾಯಮೂರ್ತಿ ವರ್ಮಾ ಸಮಿತಿ ವರದಿಯವರೆಗೂ, ನಂತರವೂ ಮಹಿಳಾ ಚಳುವಳಿ ಸತತವಾಗಿ ಮಾಡುತ್ತಲೇ
ಬಂದಿದೆ. ಸಮಾನಮನಸ್ಕ ಪುರುಷರು ನಿರಂತರವಾಗಿ ಇಂಥ ಹೋರಾಟವನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ.
ಈ ಹೋರಾಟಕ್ಕೆ ಕೈ ಜೋಡಿಸೋಣ.
ಪ್ರೀತಿ,
ಕರುಣೆ ಬೆಳಗಲಿ; ದ್ವೇಷ ಹಿಂಸೆ ಅಳಿಯಲಿ.
ಅಸಮಾನತೆ,
ತಾರತಮ್ಯ ಕೊನೆಯಾಗಲಿ. ಮೈತ್ರಿ, ಸಮತೆ ಅರಳಲಿ.
ಗಂಡಿನ
ಅಹಂ ಅನ್ನು ತೊಲಗಿಸುವ, ಹೆಣ್ಣಿನ ಕೀಳರಿಮೆಯನ್ನು ಅಳಿಸುವ ಅರಿವು ಎಲ್ಲರಿಗೂ ಸಿಗಲಿ.
ಸತ್ಯದ
ನಾಲಿಗೆಯನ್ನೆಂದೂ ಕತ್ತರಿಸಲಾಗದು,
ನಿರ್ಭಯದ
ಬೆನ್ನೆಲುಬನ್ನೆಂದೂ ಮುರಿಯಲಾಗದು,
ಘನತೆ-ಸಮತೆಯ
ಬದುಕೇ ಗುರಿ.
ಅಹಿಂಸೆಯೇ
ದಾರಿ, ಪ್ರೀತಿಯೇ ದಾರಿ ದೀಪ !
ನಿಮಗೆ
ದೌರ್ಜನ್ಯವಾಗಿದ್ದರೆ ಸರ್ಕಾರದ 1091 ಹಾಗೂ 181 ಮಹಿಳಾ ಸಹಾಯವಾಣಿಗೆ ಕರೆ ಮಾಡಿ..ಹಾಗೆಯೇ ನಮ್ಮ ಒಕ್ಕೂಟದ
ಗೆಳತಿಯರಿಗೂ ಕರೆ ಮಾಡಿ ಸಹಾಯ/ ಸಲಹೆ ಕೇಳಬಹುದು.
ಶಾಂತಮ್ಮ- 9448249371.
ಗೀತ- 9448446659.
ಗೌರಮ್ಮ- 9880852772,
ಪಾಪಮ್ಮ- 9880020039
ಸ್ಪರ್ಧಾ ಫಲಿತಾಂಶಗಳು
*ಕರುನಾಡು ಸಾಹಿತ್ಯ ಪರಿಷತ್ತು (ರಿ)*
ಕೋಲಾರ ಮತ್ತು ಮಂಡ್ಯ ಜಿಲ್ಲಾ ಘಟಕಗಳ
ಜಂಟಿ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ
ರಾಜ್ಯ ಮಟ್ಟದ ಮಕ್ಕಳ ಸ್ಪರ್ಧಾ ಕಾರ್ಯಕ್ರಮ.
ಸ್ಪರ್ಧೆಗಳ ವಿವರ
:
೧. ಫ್ರಬಂಧ ಸ್ಪರ್ಧೆ
ವಿಷಯ : ಜೀವನದಲ್ಲಿ
ಉತ್ತಮ ಹವ್ಯಾಸಗಳು
೨. ಭಾಷಣ ಸ್ಪರ್ಧೆ
ವಿಷಯ: ಕರೋನಾ
ಲಾಕ್ ಡೌನ್ ಪರಿಣಾಮಗಳು
೩. ಗಾಯನ ಸ್ಪರ್ದೆ
(ಜನಪದ ಗೀತೆ, ಭಾವಗೀತೆ, ಚಲನಚಿತ್ರಗೀತೆ)
ಸ್ಪರ್ಧೆಯು ನಡೆದ
ಕಾಲಾವದಿ : ದಿನಾಂಕ ೧೧/೧೧/೨೦೨೦ - ೧೬/೧೧/೨೦೨೦ ರ ವರೆಗೆ.
*ಸ್ಪರ್ಧೆಯ ಫಲಿತಾಂಶ*
:
*ಚಿತ್ರಗೀತೆ
ಸ್ಪರ್ಧೆ*
ಹಿರಿಯರ ವಿಭಾಗ
ಪ್ರಥಮ ಸ್ಥಾನ.
*ಲೇಖ ಎನ್ ಶ್ರೀನಿವಾಸಪುರ
೧೩ ವರ್ಷ*
ದ್ವಿತೀಯ ಸ್ಥಾನ
*ಕೆ ಭಾವನಾ ಕಲ್ಯಾಣ್
ಚಿಂತಾಮಣಿ ೧೬ ವರ್ಷ*
ತೃತೀಯ ಸ್ಥಾನ
*ಕೆ ಮಂಜುಶ್ರೀ
ಕಾಚಿಂತಾಯ*
ಸಮಾಧಾನಕರ ಸ್ಥಾನ
*ಮಾನಸ ಕೆ ಸಿ
ಮಡಿಕೇರಿ ೧೪ ವರ್ಷ*
*ಸಾಕ್ಷಿ ಬಿಳಗಿ
೧೩ ವರ್ಷ್*
*ತಾರಕೇಶ್ವರ್
ಚಿಂತಾಮಣಿ ೧೬ ವರ್ಷ*
*ಮಂಥನ್*
ಕಿರಿಯರ ವಿಭಾಗ
ಪ್ರಥಮ ಸ್ಥಾನ
*ಅಧಿತಿ ಲೀಲಾದರ್
ಮೊಗೇರ್ ೩ ನೇ ತರಗತಿ*
ದ್ವಿತೀಯ ಸ್ಥಾನ
*ಪ್ರತೀಕ್ಷಾ
೧೦ ವರ್ಷ*
*ಆರಾಧನಾ ೨ ನೇ
ತರಗತಿ*
ತೃತೀಯ ಸ್ಥಾನ
*ಕೆ ಮಧುಶ್ರೀ
ಕಾಚಿಂತಾಯ*
ಸಮಾಧಾನಕರ ಸ್ಥಾನ
*ಯಶಶ್ರೀ ೬ ನೇ
ತರಗತಿ*
*ಭಾವ ಗೀತೆ ಸ್ಪರ್ಧೆ*
(ಹಿರಿಯರ ವಿಭಾಗ
)
ಪ್ರಥಮ ಸ್ಥಾನ
*ಶ್ರೇಯಸ್ ತಂತ್ರಿ
ನಂದಳಿಕೆ ೧೮ ವರ್ಷ*
*ಶರಣ್ಯ ತಂತ್ರಿ
ನಂದಳಿಕೆ ೧೫ ವರ್ಷ*
*ಶ್ರೀವಿದ್ಯಾ
ಹೊಳ್ಳ ೧೫ ವರ್ಷ*
ದ್ವಿತೀಯ ಸ್ಥಾನ
*ಅಕ್ಷತಾ ವಿ
ಶಾನ್ ಬಾಗ್ ೧೫ ವರ್ಷ*
*ಕಾವ್ಯ ೧೫ ವರ್ಷ*
*ಧನಶ್ರೀ ಮಂಗಳೂರು
೧೩ ವರ್ಷ*
ತೃತೀಯ ಸ್ಥಾನ
*ಕೆ ಭಾವನಾ ಕಲ್ಯಾಣ್
ಚಿಂತಾಮಣಿ ೧೬ ವರ್ಷ*
*ದೀಪಾಲಿ ಮಂಗಳೂರು
೧೪ ವರ್ಷ*
ಸಮಾಧಾನಕರ ಸ್ಥಾನ
*ಪೂರ್ವಿಕ ಡಿ
೧೪ ವರ್ಷ*
*ದಿಶಾ ಕೆ ಪಿ
೧೫ ವರ್ಷ*
ಕಿರಿಯರ ವಿಭಾಗ.
ಪ್ರಥಮ ಸ್ಥಾನ
*ಶಾಶ್ವತ್ ತಂತ್ರಿ
ನಂದಳಿಕೆ ೯ ವರ್ಷ*
ದ್ವಿತೀಯ ಸ್ಥಾನ.
*ಪೂಜಾ ಬಳಿಗಾರ್
ಕಂಕನವಾಡಿ ೧೨ ವರ್ಷ*
ತೃತೀಯ ಸ್ಥಾನ
*ಪನಗ್ ವಿನಾಯಕ್
ಶಾನ್ ಬಾಗ್*
*ಜನಪದ
ಗೀತ ಗಾಯನ ಸ್ಪರ್ಧೆ*
ಹಿರಿಯರ ವಿಭಾಗ
ಪ್ರಥಮ ಸ್ಥಾನ
*ವೈಷ್ಣವಿ ಆರ್
ಹೆಗ್ಗಡೆ*
ದ್ವಿತೀಯ ಸ್ಥಾನ
*ಶ್ರೀ ಲಕ್ಷ್ಮೀ
ಚಿಂತಾಮಣಿ*
ತೃತೀಯ ಸ್ಥಾನ
*ಸುರಭಿ ಎಸ್*
ಸಮಾಧಾನಕರ ಸ್ಥಾನ
*ಅಲ್ಪ್ಯಾನಾಜ್*
ಕಿರಿಯರ ವಿಭಾಗ
ಪ್ರಥಮ ಸ್ಥಾನ
*ಸಿಂಚನಾ ಎಸ್
ಶಂಕರ್*
*ಅಧಿತಿ ಲೀಲಾಧರ್
ಮೊಗೇರ್*
ದ್ವಿತೀಯ ಸ್ಥಾನ
*ಶಿಲ್ಪಾ ವಿ
ಮುರಗೋಡ್*
*ನಿಧಿ ನಾಯ್ಕ*
*ನಿನಾದ ಕೆ*
ತೃತೀಯ ಸ್ಥಾನ
*ಸಿಂಚಲ್ ಆರ್
ಪಿ*
*ಪ್ರತೀಕ್ಷಾ*
*ಶ್ರೀನಿಧಿ ಸತ್ಯನಾರಾಯಣ
ಜೋಷಿ*
ಸಮಾಧಾನಕರ ಸ್ಥಾನ
*ಶ್ರೇಯಸ್ಸ್
ಪೈ*
*ಸುಷ್ಮ ಪೈ*
*ಸಮರ್ಥ ಕೈಂತಜೆ
ಮಾಣಿ*
*ದಿಗಂತ್ ರಾವ್
ಚಿಂತಾಮಣಿ*
*ಕೀರ್ತನಾ*
*ಹಿರಣ್ಯ*
*ಶ್ರದ್ಧಾ ದೀಪಕ್
ಸಾಮಂತ್*
*ಭಾಷಣ ಸ್ಪರ್ಧೆ*
ಹಿರಿಯರ ವಿಭಾಗ
ಪ್ರಥಮ ಸ್ಥಾನ
*ವಾಣೀಶ್ರೀ ಕಳ್ಳೀಮಠ
*ಕೀರ್ತಿ ವಿಠ್ಠಲ್
ಪಾಮದಿನ್ನಿ*
ದ್ವಿತೀಯ ಸ್ಥಾನ
*ಪ್ರಸನ್ನ ಮರಾಠಿ
ದೂಳಳ್ಳಿ*
*ಅಂಜನಾ ಸಿದ್ದಪ್ಪ
ಸೈದಾಪುರ*
*ಹರ್ಷಿತಾ*
ತೃತೀಯ ಸ್ಥಾನ
*ಸುರಭಿ ಎಸ್*
*ಪ್ರಿಯಾ ರಮೇಶ್*
ಸಮಾಧಾನಕರ ಸ್ಥಾನ
*ಸಾಕ್ಷಿ ಬಿಳಗಿ*
*ಕೀರ್ತನ*
*ವಿದ್ಯಾ ಬಳಿಗಾರ್*
ಕಿರಿಯರ ವಿಭಾಗ
ಪ್ರಥಮ ಸ್ಥಾನ
*ಪ್ರತೀಕ್ಷಾ
ಬಿಳಗಿ*
ದ್ವಿತೀಯ ಸ್ಥಾನ
*ಚಿರಂತ್ ವಿ*
*ದೀಪ್ತಿ ವಿ*
ಪ್ರಬಂಧ ಸ್ಪರ್ಧೆ
ಹಿರಿಯರ ವಿಭಾಗ
ಪ್ರಥಮ ಸ್ಥಾನ
*ದೀಕ್ಷಿತ್ ಕುಮಾರ್
ಕೆ ಎಂ*
*ವಿಘ್ನೇಶ್ ರಾಘವೇಂದ್ರ
ಕಾಮತ್*
*ಪ್ರಸನ್ನ ಮರಾಠಿ
ದೂಳಳ್ಳಿ*
*ದಿಶಾ ಕೆ ವಿ*
ದ್ವಿತೀಯ ಸ್ಥಾನ
*ಅಕ್ಷತಾ ವಿನಾಯಕ್
ಶಾನ್ ಭಾಗ್*
ತೃತೀಯ ಸ್ಥಾನ
*ಶಿವು ಸೊಂದ*
*ದೀಪಕ್ ಡಿ ಆರ್*
ಸಾಮಾಧಾನಕರ ಸ್ಥಾನ
*ಅನರ್ಘ್ಯ ಜೆ*
*ಅರ್ಚನ ಕೆ*
*ಸ್ಪಂದನ ಕೆ
ಎಸ್*
*ಸಾಕ್ಷಿ ದೀಪಕ್
ಸಾಮಂತ್*
*ಸಾಕ್ಷಿ ವೀರಭದ್ರಪ್ಪ
ಬಿಳಗಿ*
*ಸಂತೋಷ್ ಕಾಡಯ್ಯ
ಚಿಕ್ಕಮಠ*
*ಕಾರ್ತಿಕ್*
*ವಿದ್ಯಾ ಬಳಿಗಾರ್*
*ಕೀರ್ತಿ ವಿಠ್ಠಲ
ಪಾಮದಿನ್ನಿ*
*ಭಾರ್ಗವಿ*
ಕಿರಿಯರ ವಿಭಾಗ
ಪ್ರಥಮ ಸ್ಥಾನ
*ಅದಿತಿ ಲೀಲಾದರ್
ಮೋಗೇರ್*
ದ್ವಿತೀಯ
ಸ್ಥಾನ
*ಭೂಮಿಕ ಶ್ರೀಕಾಂತ್
ವೈಧ್ಯ*
ತೃತೀಯ ಸ್ಥಾನ
*ಸಿಂಚನ ಎಸ್
ಶಂಕರ್*
*ಸಿದ್ವಿಕ್ ಪೂಜಾರಿ*
ಸಮಾಧಾನಕರ ಸ್ಥಾನ
*ಶಿಲ್ಪಾ ವಿ
ಮುರಗೋಡ್*
೭೦ ಕ್ಕೂ ಹೆಚ್ಚು
ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು, ತಮ್ಮ ಭಾಗವಹಿಸುವಿಕೆಯ ಕಾರಣದಿಂದಾಗಿ ತೀರ್ಪುಗಾರರು
ಹಾಗೂ ಸ್ಪರ್ಧೆಯ ನಿರ್ವಾಹಕರಿಗೆ ಅತ್ಯಂತ ಆನಂದ ಉಂಟಾಗಿದೆ. ಹೆಚ್ಚು ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು
ಸ್ಪರ್ಧೆಯಲ್ಲಿ ಪಾಲ್ಗೊಂಡ ಕಾರಣದಿಂದ ಎಲ್ಲರನ್ನೂ ಮೌಲ್ಯಮಾಪನ ಮಾಡಿ ತೀರ್ಪು ನೀಡುವುದು ತಡವಾಯಿತು.
ಫಲಿತಾಂಶ ತಡವಾದದಕ್ಕಾಗಿ ಕ್ಷಮೆ ಇರಲಿ. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು
ಹಾಗೂ ಶುಭಹಾರೈಕೆಗಳು.
ವರುಣ್ ರಾಜ್
ಜೀ
ಡಾ ಮಾಲ ಬಿ ಎಂ
ಅಧ್ಯಕ್ಷರು ಅಧ್ಯಕ್ಷರು
ಕರುನಾಡು ಸಾಹಿತ್ಯ
ಪರಿಷತ್ತು
ಕರುನಾಡು ಸಾಹಿತ್ಯ ಪರಿಷತ್ತು
ಜಿಲ್ಲಾ ಘಟಕ
ಕೋಲಾರ. ಜಿಲ್ಲಾ
ಘಟಕ ಮಂಡ್ಯ
*🥁
ಫಲಿತಾಂಶ ಪ್ರಕಟಣೆ🥁*
*_ಕರುನಾಡ ಹಣತೆ ಕವಿ ಬಳಗ ಹಾಗೂ ವಿಚಾರ ಮಂಟಪ
ಸಾಹಿತ್ಯ ಬಳಗ ಇವರ ಜಂಟಿ ಸಹಯೋಗದಲ್ಲಿ _*
*ಕವಿತೆ/ಕವನ ಸ್ಪರ್ಧೆಯ ಫಲಿತಾಂಶ* (ಕರೋನಾ ಲಾಕ್ ಡೌನ್ )
*_ಪ್ರಥಮ ಸ್ಥಾನ ವಿಜೇತರು_*
1. ಅಶ್ವಿನಿ
ಎಸ್.ಎ
2. ವಾಣಿ ರಾವ್
ಕಿನ್ನಿಗೋಳಿ
3. ಡಾ.ಸುರೇಶ್
ನೆಗಳಗುಳಿ
*_ದ್ವಿತೀಯ ಸ್ಥಾನ ವಿಜೇತರು
1.ಅಕ್ಷತಾ ಶಿ
ಕುಬ್ಯಾಳ
2. ಆರ್. ಫಣಿಶ್ರೀ
3. ಎಸ್ ಶ್ರೀಧರಮೂರ್ತಿ
4. ಶಿವಾನಂದ
ಕಲಬುರಗಿ
*_ ತೃತೀಯ ಸ್ಥಾನ ವಿಜೇತರು_*
1. ಯಮನೂರಪ್ಪ
ಶಂ ಅರಬಿ
2.ಅಮೃತ. ಎಂ.ಡಿ.
3. ವೈಷ್ಣವಿ
ರಾಜಕುಮಾರ್
4. ಜಯಸುಧಾ ಕುಲ್ಕರ್ಣಿ
ಓದುಗ
ಮಹಾಶಯರಿಗೆ ಅನಂತ ಧನ್ಯವಾದಗಳು
ಮುಕ್ತಾಯ ಮುಕ್ತಾಯ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ