ಶನಿವಾರ, ಜೂನ್ 19, 2021

ಆಪದ್ಭಾಂದವ ಆರಕ್ಷಕ (ಕವಿತೆ). - ದಿವ್ಯಾ ಪಿ ಎಂ.

ಆಪದ್ಭಾಂದವ ಆರಕ್ಷಕ 

ರಕ್ಷಕ ನೀ ರಕ್ಷಕ ಓ ಆರಕ್ಷಕ
ಕಾಯುತ್ತಿರುವೆ ಹಗಲಿರುಳು ನೀ ಆಗಿ ಸಮಾಜ ಸೇವಕ 
ನೀನಾಗಿರುವೆ ಜಗತ್ತಿಗೆ ಬೆಳಕ
ನೀಡಿರುವೆ ನಮಗೆಲ್ಲ ಸ್ಥೈರ್ಯದ ಸೂಚಕ

ರಕ್ಷಕ ಓ ರಕ್ಷಕ ಸವೆಸುತ್ತಿರುವ ಜಗಕ್ಕಾಗಿ ಶ್ರಮಿಕ
ಮರೆತಿರುವೆ ನಿನ್ನ ಕುಟುಂಬವ ನೀಡಲು ಜಗಕ್ಕೆ
ಮರೆಯಾಗಿರುವ ಮೆಲುಕ ಕಾರಣ 
ನೀ ಆಗಿರುವೆ ಜಗತ್ತಿಗೆ ದಿಕ್ ಸೂಚಕ

ಪೊಲೀಸರು ಹೊಡೆದರು ತಪ್ಪು 
ಹೊಡೆಯದಿದ್ದರು ತಪ್ಪು
ಏನಾದರೂ ಆದರು ಇವರ ಮೇಲೆ 
ಇರುವುದು ದೂರದರ್ಶನದವರ ಕಣ್ಣು

ಒಂದು ಬಾರಿ ಹೇಳಬೇಕು ನೀತಿಯ
ಎರಡನೇ ಬಾರಿ ನೀಡಬೇಕು ಲಾಠಿಯ ಸವಿಯ
ಮೂರನೇ ಬಾರಿ ಹಾಕಬೇಕು ಸಂಕೋಲೆಯ 
ಆಗ ತಿಳಿಯುವುದು ಜಗತ್ತಿನ ವಾಸ್ತವದ ಸ್ಥಿತಿಯ. 

ದಿವ್ಯ ಪಿ ಎಮ್ 
ದಾವಣಗೆರೆ 577006 
7338576998



( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...