ಪರಿಸರವೇ ನಮ್ಮ ಉಸಿರು
ಆ ತಿಳಿಯಾದ ಬಾನಂಗಳದಲಿ
ಹೊರಸೂಸುವ ಕಿರಣಗಳಲಿ
ರವಿ ಮೂಡಿ ಬಂದನು ಉದಯದಲಿ
ಗರಿ ಬಿಚ್ಚಿ ಕುಣಿದವು ಪಕ್ಷಿಗಳು ಸಂತಸದಲಿ.
ಎದೆ ತುಂಬಿ ಹಾಡಿದವು ಪಕ್ಷಿಗಳು
ಗಿಡಮರಗಳ ಅಡಿಯಲಿ,
ದುಂಬಿಗಳು ಕಾರ್ಯನಿರತವಾದವು ಜೇನು,
ಸಂಗ್ರಹಣೆಯ ಕಾರ್ಯದಲಿ.
ಬೇಟೆಗಾರ ಎದ್ದು ಬಂದನು ಪಕ್ಷಿ ಹಿಡಿಯುವ ತವಕದಲಿ.
ತಂಪಾದ ಗಾಳಿಯಲಿ ಕೋಗಿಲೆಯ ಇಂಪಾದ ಸ್ವರವು ಕೇಳುತ್ತಿತ್ತು.
ನವಿಲು ಕುಣಿಯುತಿತ್ತು ಸುಂದರವಾದ ಮೈಕಟ್ಟಿನಲಿ.
ನೀರಿನ ಝರಿ ಹರಿಯುತ್ತಿತ್ತು ಜುಳುಜುಳು ಶಬ್ದದಲ್ಲಿ
ಇದನ್ನು ಕಂಡು ಕವಿ ಬೆರಗಾಗಿ ನಿಂತನು ಪ್ರಕೃತಿಯ ಮಡಿಲಲಿ.......
-ಅಂಬರೀಶ್ ನಾಯ್ಕೋಡಿ. ಎಸ್.ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ..
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
Super💙
ಪ್ರತ್ಯುತ್ತರಅಳಿಸಿSuper 💙
ಪ್ರತ್ಯುತ್ತರಅಳಿಸಿ