ಬುಧವಾರ, ಜೂನ್ 16, 2021

ಬಣ್ಣವೇ ಬದಲಾಗಿ ಹೋಯಿತು. (ಸಣ್ಣ ಕತೆ) - ವೈಷ್ಣವಿ ಪುರಾಣಿಕ್

ಬಣ್ಣವೇ ಬದಲಾಗಿ ಹೋಯಿತು


ಅಲ್ಲಿ ಸಾವಿರಾರು ಹಳ್ಳಿ ಪ್ರದೇಶ ಕಂಡು ಬರುತ್ತಾ ಇದ್ದವು. ಅಲ್ಲಿಗೆ ಪ್ರವೇಶ ಇಲ್ಲ ಎಂದು ಊರಿನ ಜನರು ಹೇಳುತ್ತಾ ಇದ್ದರು.ಅವರುಗಳು ನಮ್ಮ ಹಾಗೆ ಮನುಷ್ಯ ಜೀವಿ ಎಂದು ದೊಡ್ಡವರು ಒಬ್ಬರು ಪದೇ ಪದೇ ಪ್ರಶ್ನೆ ಮಾಡುತ್ತ ಇದ್ದರು...........
             ಅದೇ ಸಂದರ್ಭದಲ್ಲಿ ನಮ್ಮ ಸಮಾಜದಲ್ಲಿ ಅವರಿಗೆ ಬಣ್ಣದ ಲೋಕದವರು ಎಂದು ಕರೆಯುತ್ತಾರೆ  ಅವರು ನಮ್ಮ ಬಳಿಗೆ ಸುಳಿಯಬಾರದು ಎಂದು ನಿರ್ಧಾರಕ್ಕೆ ಬಂದಿದ್ದೇವೆ ಎಂದು ನುಡಿದಾಗ........ 

ಅವರಲ್ಲಿ ಅಲ್ಲಿ ಸಣ್ಣ ಹುಡುಗಿ ಸ್ವಾಮಿ ನನಗೆ ಒಂದು ರೀತಿಯ ಕುತೂಹಲ ಉಂಟಾಗುತ್ತಾ ಇದೆ ತನಗೆ ಸಹ ಅವರ ಬದುಕು ನೋಡಬೇಕು ಎಂದಾಗ ಪುಟ್ಟಿ ನೀನು ಇನ್ನೂ ಸಣ್ಣವಳು ನಿನಗೆ ಈ ವಿಷಯಕ್ಕೆ ತಲೆಯನ್ನು ಹಾಕಬೇಡ ಎಂದು ಹೇಳಿದಾಗ ನೀವು ಒಪ್ಪಿಗೆಯನ್ನು ನೀಡಿ ಅಲ್ಲಿಗೆ ಹೋಗಿ ಬರುತ್ತೇನೆ ದಯವಿಟ್ಟು ಒಂದು ಅವಕಾಶಗಳು ಕೊಡಿ ಎಂದು ತಿಳಿಸಿದಾಗ......... 

ಆ ಊರಿನವರು ಅವಳನ್ನ  ಅವಳ ಪಾಡಿಗೆ ಬಿಟ್ಟು ಯಾರು ಆಕೆಯನ್ನು ಮತ್ತು ಸ್ವಾಮಿಯನ್ನು ಮಾತಾಡಿಸಲಿಲ್ಲ..ಆಕೆಯು ಮೆಲ್ಲನೆ ಅವರ ಮನೆಗೆ ಹೋದಳು ಅವಾಗ ಅಲ್ಲಿ ನೆರೆದಿದ್ದ ಜನರು ಆಕೆಯ ವಿವರಗಳನ್ನು ಕೇಳಿ ನಿನಗೆ ಸಹ ಎಷ್ಟಾಯಿತೇ ಎಂದು ಕೇಳಿದಾಗ ಹೌದು ಎಂದು ಸಂತೋಷದಿಂದ ನುಡಿದು......... 

ಅವರಿಂದ ಆಕೆಯು ಬಣ್ಣ ಲೋಕದಲ್ಲಿ ಸೇರಿಕೊಂಡರು. ಅದರಲ್ಲಿ ಒಬ್ಬರಿಗೆ ಒಂದು ರೀತಿಯ ಮನಸಿನಲ್ಲಿ ಗೊಂದಲ ಕೂಡ ಆಯಿತು. ಯಾಕೆ ನಮಗೆ  ನಮ್ಮ ಸಮಾಜದಲ್ಲಿ ಎಲ್ಲರ ಹಾಗೆ ಅವಕಾಶ ದೊರಕುತ್ತಾ ಇಲ್ಲ ಎಂದು ಕೇಳಿದಾಗ ಅಲ್ಲಿ ಇದ್ದ ದೊರೆ ಎಂಬ ಹೆಸರಿನವರು ನೋಡಿ  ನಮ್ಮ ಅವಕಾಶಗಳನ್ನು ದೊಡ್ಡವರಿಗೆ ಸಿಕ್ಕಿದೆ  ಆದರೆ ಅದನ್ನು  ಶ್ರೀಮಂತವರ್ಗವರು ಪಡೆದುಕೊಳ್ಳುತ್ತಾ ಇದ್ದಾರೆ ಎಂದು ಹೇಳಿದಾಗ ಅವರಿಗೆ ಮತ್ತು ಅಲ್ಲಿ ನೆರೆದಿದ್ದ ಜನರಿಗೆ ಕಣ್ಣಿನ ಅಂಚಿನಲ್ಲಿ ನೀರು ಬಂತು....... 

ಹೀಗೆ ಕಾಲಗಳು ಕಳೆದಂತೆ, ಆ ಬಣ್ಣ ಲೋಕದಲ್ಲಿ ಕೆಟ್ಟ ಛಾಯೆಯಾಗಿ ಪ್ರೇಮ ಎಂಬ ಹೆಣ್ಣುಮಕ್ಕಳು ಪ್ರಾಯಕ್ಕೆ ಬಂದಾಗ ಆಕೆಯನ್ನು ನಾವು ಮದುವೆಯಾಗುತ್ತೇವೆ ಎಂದು ಶ್ರೀಮಂತ ಮನೆತನ ಬಂದಿತು ಅವಾಗ ಎಲ್ಲರೂ ಸಹ ಬೇಡ ಎಂದು ನುಡಿದಾಗ......... 
    
ಆಕೆಯ ಅಭಿಪ್ರಾಯಗಳನ್ನು ಕೇಳಿದಾಗ ಇಲ್ಲವೆಂದು ನುಡಿದಾಗ, ಅವರು ಬಲವಂತವಾಗಿ ಮದುವೆಯನ್ನು ಮಾಡಿಕೊಂಡು ಆಕೆಗೆ ಶೋಷಣೆಯನ್ನು ನೀಡಿದನ್ನು ಕಂಡು ಅಲ್ಲಿ ಇದ್ದ ದೊಡ್ಡವರು ಅವರ ಬಣ್ಣದ ಲೋಕದಕ್ಕೆ ಮರಳಿ ತಂದರು....... 

ಹೀಗೆ ಮುಂದುವರೆದು, ಆಕೆಯು ಜೀವನದ ಘಟನೆಯನ್ನು ಎಣಿಸಿ ಆತ್ಮಹತ್ಯೆಯನ್ನು ಮಾಡಿಕೊಂಡಳು ಆಕೆಯ ಕೈನಲ್ಲಿ ಇದ್ದ ಪತ್ರದಲ್ಲಿ ಬಣ್ಣವೇ ಮಾಯವಾಯಿತು ಎಂದು ಬರೆದಿದ್ದನ್ನು ಕಂಡು ಎಲ್ಲರಿಗೆ ಸಹ ದುಃಖ ಸಾಗರದಲ್ಲಿ ತೇಲಿಹೋದರು. 


ವಿಳಾಸ -

ವೈಷ್ಣವಿ ಪುರಾಣಿಕ್
D/0 ಲಕ್ಷೀನಾರಾಯಣ ಪುರಾಣಿಕ್
ಸೋದೆ ವಾದಿರಾಜಾ ಮಠ ಹರಿಹರ ದೇವಸ್ಥಾನ
ಹತ್ತಿರ ಕುಂಭಾಸಿ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ -576257.
ದೂರವಾಣಿ -8197160551





ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು, ವಿಚಾರ ಮಂಟಪ ಬಳಗ.

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...