ಬುಧವಾರ, ಜೂನ್ 16, 2021

ದೇವರು ತೀರಿಕೊಂಡಿದ್ದಾನೆ ?. ಕವಿತೆ. - ಸದಾಶಿವ ಎಂ ಮರಡಿ.


*ದೇವರು ತೀರಿಕೊಂಡಿದ್ದಾನೆ* ?

ದೇವರು ತೀರಿಕೊಂಡಿದ್ದಾನೆ ! ನಿಜವಾಗಿಯೂ
ಬಾಗಿಲು ಮುಚ್ಚಿಕೊಂಡು ಶ್ರಾದ್ಧ ಆಚರಿಸುತ್ತಿದ್ದಾರೆ
ಹೂವಿನಂಗಡಿ ಕಾಯಿ ಅಂಗಡಿಯವ ದಿನನಿತ್ಯ
ಸತ್ತ ದೇವರಿಗೆ ಮಾಲೆ ಕಾಯಿ ತಾಂಬೂಲ
ಕೊಟ್ಟು ಕಣ್ಣೀರೆ ಇಲ್ಲದಂತಾಗಿದೆ ಅವರಿಗೆಲ್ಲ //

ಹೆಣ್ಣ ದೇವರಿಗೆ ಮುತ್ತೈದೆ ಸೀರೆ ಕುಂಕುಮ
ಬಳಿ ಕೊಟ್ಟ ಅಂಗಡಿಯವಳಿಗೆ ಗೊತ್ತು ಸತ್ತಿದ್ದು
ಮರಣ ಹೊಂದಿದ ಭಗವಂತನಿಗೆ ಕುರಿ ಮೇಕೆ
ಟಗರು ಬಲಿ ಕೊಡುವರನ್ನು ನೋಡಿ ದಲ್ಲಾಳಿಗೆ
ಹುಚ್ಚರಿದ್ದಾರೆಂದು ಮನದೊಳಗೆ ನಗುತ್ತಿದ್ದಾನೆ //

ಜನ ಮರುಳೊ ಜಾತಕ ಮರುಳೊ
ಗೊತ್ತಿಲ್ಲ ! ಜಾತ್ರೆಯಲ್ಲಿ ಎಲ್ಲರೂ ಮುಂದು
ಹೆತ್ತವರನ್ನೆ ದಿಕ್ಕರಿಸಿ ! ಪ್ರಕೃತಿ ನಾಶ ಮಾಡಿ
ಇಲ್ಲದ ದೇವರ ಹುಡುಕುತ್ತ ಹೊರಟಿರುವ
ಬುದ್ದಿಗೇಡಿ ಮನುಜನಿಗೆ ಮೆದುಳೆ ಸತ್ತಿದೆ //

ತನ್ನೊಳಗಿನ ಆತ್ಮ ದೇವರನ್ನು ಸಾಯಿಸಿ
ಜೀವವಿರದ ಕಲ್ಲು ದೇವರಿಗೆ ನಮಸ್ಕರಿಸಿ
ಸ್ವಾರ್ಥದ ಶಾಸನ ಕೆತ್ತಿಸಿದ್ದು ಸಾಕು-ಸಾಕು
ನೆಲಕ್ಕೊರಗಿದೆ ! ತಾತ್ವಿಕ-ಸಾತ್ವಿಕ ನಿಸರ್ಗ
ಮನುಷ್ಯತ್ವವಿಲ್ಲದ ಮನುಷ್ಯರ ಕಂಡು ಮರಗುತ್ತಿದ್ದಾಳೆ //

  - ಸದಾಶಿವ ಎಂ. ಮರಡಿ
ಸಾಹಿತಿಗಳು. ಬಾದಾಮಿ.
: 6360001032.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...