ಶುಕ್ರವಾರ, ಜೂನ್ 18, 2021

ತವರೂರ ಓಡವೆ (ಕವಿತೆ) - ಅಂಜನ್ ಕುಮಾರ್

*ತವರೂರ  ಓಡವೆ*


ತವರೂರ ಬಾಗಿನ
ಮಡಿಲಕ್ಕಿ ಬೆಲ್ಲದಚ್ಚು
ಯಾಲಕ್ಕಿ ಬಾಳೆ ತಂಬಿಟ್ಟು
ತಂದುಕೊಡುತ್ತಾನೆ ಅಣ್ಣಯ್ಯ.

ಮಾರನಾಮಿ ಕಳೆದು
ಗೌರಿಗೆ ಮೂರು ದಿವಸ
 ತಂಗಿಯ ನೋಡಲಿಕ್ಕೆಂದು
ಅಣ್ಣ ಬರುತ್ತಾನಾ  ಆ ದಿವಸ

ಹಸಿರು ಸೀರೆಯ
ಕಪ್ಪು ಬಳೆ ಯ
 ಅರಿಶಿಣ ಕುಂಕುಮ
ದುಂಡು ಮಲ್ಲಿಗೆ  ಸುಮಾ

ಕನ್ನಡಿ ಕಾಡಿಗೆ
ಘಂ ಎಂದ ಸಂಪಿಗೆ
ತಾಂಬೂಲ ಸಕ್ಕರೆ
ಅಣ್ಣನ ಸಿಹಿ ಪ್ರೀತಿ ಅಕ್ಕರೆ

 

  - ಅಂಜನ್ ಕುಮಾರ್ 
ಪುರ ಹಾಗಲವಾಡಿ
ಗುಬ್ಬಿ ತಾ 
ತುಮಕೂರು ಜಿಲ್ಲೆ.
ದೂ: 7483146697.


(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪ )

21 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...