ಹಸಿವಿನಿಂದ ಬಲಿಯಾಗುತ್ತಿರುವ ಜನ
ನಾವೆಲ್ಲರೂ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯೆಂದರೆ ಕೋರೋನಾ. ಆದರೆ ಅದಕ್ಕಿಂತ ಭಯಾನಕ ರೋಗ ಅಥವಾ ವೈರಸ್ ಎಂದರೆ ಹಸಿವು. ಕೊರೋನಾ ಗಿಂತ ಹೆಚ್ಚು ಬಲಿಯಾಗುತ್ತಿ ರುವವರು ಬರಿ ಹಸಿವಿನಿಂದ. ಇತ್ತೀಚಿಗಷ್ಟೇ ವಿಶ್ವಮಟ್ಟದಲ್ಲಿ 'ಆಕ್ಸಫ್ಯಾಮ್' ಎಂಬ ಒಂದು ಸಂಸ್ಥೆ ಪ್ರಕಟಿಸಿದ ಮಾಹಿತಿ ಪ್ರಕಾರ ವಿಶ್ವದಾದ್ಯಂತ ಪ್ರತಿ ನಿಮಿಷಕ್ಕೆ ಹನ್ನೊಂದು ಜನ ಬರಿ ಹಸಿವಿನಿಂದ ಸಾಯುತ್ತಿದ್ದಾರೆ ಆದರೆ ಕೊರೊನಾದಿಂದ ಏಳು ಜನ ಸಾಯುತ್ತಿದ್ದಾರೆ ಕೊರೋನಾ ಮತ್ತು ಹಸಿವಿನ ಸಣಸಾಟದಲ್ಲಿ ಹಸಿವಿನಿಂದ ಹೆಚ್ಚು ಜನ ಸಾಯುತ್ತಿದ್ದಾರೆ ಎಂದರೆ ಕೋರೋನಾ ನಮಗೆ ಎಷ್ಟರಮಟ್ಟಿಗೆ ನಮಗೆ ಭಯ ಹುಟ್ಟಿಸಿದೆ ಎಂಬುದು ತಿಳಿದುಬರುತ್ತದೆ. ದೇಶದಲ್ಲಿ ಕೋರೋನಾಗಿಂತ ಹಸಿವಿನಿಂದ ಸಾಯುತ್ತಿದ್ದಾರೆ ಪ್ರತಿ ನಿಮಿಷಕ್ಕೆ ಹನ್ನೊಂದು ಜನ ಆದರೆ ದಿನದ ಲೆಕ್ಕದಲ್ಲಿ ನೋಡಿ ನಮಗೆ ಗೊತ್ತಾಗುತ್ತದೆ. ಬರೀ ಹಸಿವಿಂದ ಇಷ್ಟು ಜನ ಸಾಯುತ್ತಿದ್ದಾರೆ ಎಂದರೆ ನಂಬಲು ಸಾಧ್ಯವೇ ಆದರೆ ದಿನ,ತಿಂಗಳು,ವರ್ಷದ ಲೆಕ್ಕದಲ್ಲಿ ನೋಡಿ ಎಂತಹ ಭಯಾನಕವಾಗಿದೆ. ಹಸಿವಿನ ಮುಂದೆ ಕೊರೋನಾ ಯಾವ ಲೆಕ್ಕ. ಕೊರೋನಾ ಗೆ ಎಷ್ಟು ಜನ ಬಲಿಯಾಗಿದ್ದಾರೆ ಅದರಲ್ಲಿ ಮನೆಯಿಲ್ಲದವರು, ನಿರುದ್ಯೋಗಿಗಳು, ಅನಕ್ಷರತೆ ,ಬಡತನ ,ತಿನ್ನಲು ಗತಿಲ್ಲದವರು ಹೇಗೆ ಬದುಕಬೇಕು ಇದನ್ನೇ ನಾವು ವಿಶ್ವಮಟ್ಟದಲ್ಲಿ ನೋಡಿದಾಗ ಎಷ್ಟು ಜನ ಇದ್ದಾರೆ ಎಂಬುದು ನಂಬಲಾರವಾಗಿದೆ. ಇದನ್ನು ನಿವಾರಿಸಲು ಸೂಕ್ತವಾದ ಕ್ರಮ ಸರ್ಕಾರ ತೆಗೆದುಕೊಳ್ಳುತ್ತಾ ಇದೆಯಾ ಅಥವಾ ಇಲ್ವಾ ಎಂಬ ಪ್ರಶ್ನೆ ಕಾಡ್ತಾ ಇದೆ. ಹಸಿವು ನಿಯಂತ್ರಿಸುವುದು ಸಂಸ್ಥೆಯ ಮುಖ್ಯ ಗುರಿಯಾಗಬೇಕು,ಸೂಕ್ತ ಕ್ರಮ ತೆಗೆದುಕೊಂಡು ಹಸಿವು ತಡೆಗಟ್ಟುವಲ್ಲಿ ಯಶಸ್ವಿಯಾಗಲಿ.
- ಹಣಮಂತ ಪೂಜಾರಿ
ಕಾಲೇಜು ವಿದ್ಯಾರ್ಥಿ ವಿಜಯಪುರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ