ಅಶ್ಲೀಲ ಚಿತ್ರಗಳ ಸುಳಿಯಲಿ ಯುವಪೀಳಿಗೆ
ಪೋರ್ನ್ ವಿಡಿಯೋ ಅಂದರೇ ಯಾರಿಗೆ ಇಷ್ಟವಿಲ್ಲ ಹೇಳಿ, ಯಾರಿಗೆ ಗೊತ್ತಿಲ್ಲ ಹೇಳಿ ಚಿಕ್ಕವರಿಂದ ದೊಡ್ಡವರಿಗೆ ಇದರ ಬಗ್ಗೆ ಕೇಳಿದ್ರೆ ಗೊತ್ತಿಲ್ಲ ಅಂತಾನೆ ಹೇಳೋದು ಆದ್ರೆ ತಮ್ಮ ಸಬ್ಜೆಕ್ಟ್ಸ್ ಗಳಿಗಿಂತ ಆಳವಾದ ಅಧ್ಯಯನದ ಮಾಹಿತಿ ಪ್ರತಿಯೊಬ್ಬರಿಗೂ ಇರುತ್ತೆ.
ಹೌದು ಇತ್ತೀಚಿಗಂತೂ ಈ ಅಶ್ಲೀಲ ವಿಡಿಯೋಗಳ ಹಾವಳಿ ವಿಜೃಂಭಣೆಯಿಂದ ಜರುಗುತ್ತಿದ್ದು " ಬೆಳೆಯುವ ಪೈರು ಮೊಳಕೆಯೆಲ್ಲಿಯೇ '' ಅನ್ನೋ ಹಾಗೆ " ಇಂದಿನ ಮಕ್ಕಳೇ ನಾಳೆಯ ದೇಶದ ಭವಿಷ್ಯಗಳು" ಅನ್ನೋ
ಹಿರಿಯರ ಮಾತುಗಳಿಗೆ ಧಕ್ಕೇಯನ್ನುOಟುತರುತ್ತಿವೆ ಬೆಳೆದು ಸಾಧಿಸಿ ಬಾಳಬೇಕಾಗಿರುವ ನಮ್ಮೆಲ್ಲ ಯುವಕರ ಮನಸ್ಸಿನ ಬುಡದಲ್ಲಿ ಈ "PORNOGRAPHY "( ಅಶ್ಲೀಲತೆ ) ಬೇರುರಿ ಅವರ ಏಕಾಗ್ರತೆ ಧ್ಯಾನದ ಗುರಿಗೆ ಕುಂದುಕೊರತೆಯನ್ನು ಉಂಟು ಮಾಡುತ್ತಿದೆ.
ನಿಮಗೆಲ್ಲ ಇದು ತಿಳಿಯಬೇಕೆಂದರೆ ಒಂದು ಡೇಟಾ ಮಾಹಿತಿಯೊಂದಿಗೆ ವಿವರಿಸುತ್ತೇನೆ ಜಗತ್ತಿನ ಅತೀ ದೊಡ್ಡ ಅಶ್ಲೀಲ ಕಾರ್ಖಾನೆ "PORN INDUSTRY " ಹೇಗೆ ನಮ್ಮಲ್ಲಿ ನಮ್ಮ ಚಿತ್ರಮಂಜರಿಗಳಾದ ಸ್ಯಾಂಡಲ್ವುಡ್, ಹಾಲಿವುಡ್, ಬಾಲಿವುಡ್, ಟೋಲಿವುಡಗಳಿವೆಯೋ ಹಾಗೆ ಇವ್ವುಗಳಿಗಿಂತ ಹೆಚ್ಚಿನ ಹಣ ಸಂಪಾದನೆ ಮಾಡುವ ಬಹುದೊಡ್ಡ ಅಶ್ಲೀಲ ಕಾರ್ಖಾನೆಯೇ ಈ ಪೋರ್ನ್ ಇಂಡಸ್ಟ್ರಿ.
ಈ ಪೋರ್ನ್ ಇಂಡಸ್ಟ್ರಿಯಲ್ಲಿ ಅತ್ಯಂತ ದೊಡ್ಡದಾದ ಪೋರ್ನ್ ಸೈಟ್ ಅಂದರೇ ಅದು " PORN HUB " ಈ ಸೈಟ್ ಪ್ರತಿ ವರ್ಷ "PORNOGRAPHY REPORT "( ಅಶ್ಲೀಲತೆಯ ವರದಿ) ಒಂದು ದಿನದಲ್ಲಿ ಎಷ್ಟು ಜನ ಅಶ್ಲೀಲ ವಿಡಿಯೋಗಳನ್ನ, ಫೋಟೋಗಳನ್ನ, ಯಾವ ಯಾವ ವಯಸ್ಸಿನವರು, ಯಾವ ಯಾವ ದೇಶದವರು ಅತೀ ಹೆಚ್ಚಾಗಿ ನೋಡುತ್ತಾರೆ ಎನ್ನುವ ಎಲ್ಲಾ ಮಾಹಿತಿಗಳನ್ನು ಒಳಗೊಂಡ ವರದಿಯನ್ನು ಬಿಡುಗಡೆ ಮಾಡುತ್ತದೆ.
ಈ "PORN HUB " ಸೈಟ್ 2018 ರ ವರದಿಯ ಪ್ರಕಾರ ಅತೀ ಹೆಚ್ಚು ಪೋರ್ನನ್ನು ನೋಡುವುದರಲ್ಲಿ ಮೊದಲು U.S ಎರಡನೆಯದಾಗಿ U. K, ಮತ್ತೆ ಮೂರನೇಯ ಸ್ಥಾನದಲ್ಲಿ ನಮ್ಮ ಭಾರತ ದೇಶವಿತ್ತು ಆದರೇ ಕಳೆದ ವರ್ಷ
"PORN HUB " ಸೈಟ್ 2019-20 ರ ವರದಿಯನ್ನು ಬಿಡುಗಡೆ ಮಾಡಿದೆ ಈ ವರದಿಯ ಪ್ರಕಾರ ನಮ್ಮ ಭಾರತ ದೇಶ ಉಳಿದ ದೇಶಗಳನ್ನು ಹಿಂದಕ್ಕಿಟ್ಟಿ ಅಗ್ರಸ್ಥಾನದಲ್ಲಿ ಮಿಂಚುತ್ತಿದೆ ದಿನಕ್ಕೆ 70 % ಜನರು ಪೋರ್ನ ಅನ್ನು ವೀಕ್ಷಿಸುತ್ತಿದ್ದರು ಆದರೇ ಈ ಕೋರೋನ ಲಾಕಡೌನ್ ನಿಂದ ಮನೆಯಲ್ಲಿ ಬಿಡುವು ಇದ್ದ ಮಕ್ಕಳು, ಯುವಕರು ದಂಪತಿಗಳು ಸೇರಿದಂತೆ ಎಲ್ಲಾರು ಹೆಚ್ಚು ಹೆಚ್ಚು ಪೋರ್ನನ್ನು ವೀಕ್ಷಿಸುವುದರಿಂದ ನಮ್ಮ ದೇಶದ ಜನರು ಲಾಕಡೌನಲ್ಲಿ ದಿನಾಲೂ ವೀಕ್ಷಿಸುವವರ ಸಂಖ್ಯೆ 70% ರಿಂದ 95% ವರೆಗೂ ಬಂದು ತಲುಪಿದೆ.
ನಮ್ಮ ದೇಶದಲ್ಲಿ ಸುಮಾರು 70 % ಗಂಡುಮಕ್ಕಳು 30% ಹೆಣ್ಣುಮಕ್ಕಳು ಅದರಲ್ಲಿ 18-24 ವಯಸ್ಸಿನವರು 30%, 24-34 ವಯಸ್ಸಿನವರು 40% , ಇನ್ನು 40 ವಯಸ್ಸು ಮೇಲ್ಪಟ್ಟವರು 20 % ಜನರು ಅಶ್ಲೀಲವನ್ನು ನೋಡುತ್ತಾರೆ ಇದರಲ್ಲಿ ಅತೀ ಹೆಚ್ಚು ಸಂಖ್ಯೆ ಯುವಜನಗಳದ್ದೆ ಇದೆ.
" ಮುಟ್ಟಿ ನೋಡು ಅಂದರೇ ಚುಚ್ಚಿ ನೋಡೋ ಕಾಲ ಇದು " ಇನ್ನು ಆನ್ಲೈನನಲ್ಲಿ ಮಕ್ಕಳು ಓದಲಿ ಎಂದು ಮೊಬೈಲನ್ನು ಕೊಟ್ಟರೆ ಬಿಸಿರಕ್ತದ ಮನಸ್ಸಿನ ಮಕ್ಕಳು, ಯುವಕರು ಅಶ್ಲೀಲವನ್ನು ನೋಡದೆ ಇರುತ್ತಾರಾ...... ನೀವೇ ಹೇಳಿ ಚಿಕ್ಕ ಮಕ್ಕಳ ಮನಸ್ಸು ಕೇಸರಿನOತೆ ಅದರಲ್ಲಿ ಏನು ಬಿತ್ತುತ್ತಿರೋ ಅದೇ ಅವರ ಮುಂದಿನ ಜೀವನದ ಮರವಾಗಿ ಹೋಮ್ಮತ್ತದೆ ಆ ಕೆಸರಿನಲ್ಲಿ ಅವರು ಅಶ್ಲೀಲವನ್ನು ಬಿತ್ತುಕೊಂಡರೆ ಮುಂದೆ ಅದು ಹೆಮ್ಮರವಾಗಿ ಬೆಳೆಯುತ್ತ ಹೋಗುತ್ತದೆ ಮುಂದೆ ಹೋದಂತೆ ಅಶ್ಲೀಲವನ್ನು ನೋಡುವ ಕೆಲಸ ಹೆಚ್ಚಾಗುತ್ತಾ ಹೋಗುತ್ತದೆ, ಸಂಭೋಗದ ಒತ್ತಡವನ್ನು ತಡೆಯಲು ಆಗದೆ ಇನ್ನು ಸರಿಯಾಗಿ ಮೀಸೆ ಬಂದಿರಲ್ಲ ಆವಾಗಲೇ "MANSTRUBATION"( ಹಸ್ತ ಮೈಥುನ ) ಮಾಡಿಕೊಳ್ಳೋದನ್ನ ರೂಢಿಮಾಡಿಕೊಳ್ಳುತ್ತಾರೆ ಮುಂದೆ ತಮ್ಮ ತಮ್ಮ ಸಂಗಾತಿಯ ಜೊತೆಗೆ ಸೆಕ್ಸ್ ಮಾಡೋದು ಇದ್ದೆ ಇರುತ್ತೆ ಆದರೇ ಈವಾಗ ಅವರ ಮನಸ್ಸಿಗೆ ಬೇಕಾದವರನ್ನ,ಸಂಭಂದಗಳ ಅರಿವಿಲ್ಲದೆ, ಹೆಣ್ಣುಮಕ್ಕಳ ಮೇಲೆ ಗೌರವ ಕಡಿಮೆಯಾಗಿ ಅವರನ್ನೆಲ್ಲ ಕೆಟ್ಟ ದೃಷ್ಟಿಯಿಂದ ನೋಡುವ ಆಸೆ ಮನಸಲ್ಲಿ ಸೃಷ್ಟಿಯಾಗುತ್ತದೆ, ತಮ್ಮ ಮನಸ್ಸಿನ ಲೋಕದಲ್ಲಿಯೇ ಸಂಭೋಗವನ್ನು ಅನುಭವಿಸುತ್ತ ಕೊನೆಗೆ "ಆಪ್ತಮಿತ್ರಾ ಚಿತ್ರದಲ್ಲಿ ಗಂಗಾ ನಾಗವಲ್ಲಿಯಾಗಿ ಬದಲಾಗೋ ಹಾಗೆ ಈ ಮಕ್ಕಳು, ಯುವಕರು, ಯುವತಿಯರು ಈ ಅಶ್ಲೀಲಕ್ಕೆ ಅಡಿಕ್ಟ್ ಆಗಿ ಚಟಗಾರರಾಗಿ ಬದಲಾಗುತ್ತಾರೆ" .
ಜೀವನದಲ್ಲಿ ಸೆಕ್ಸ್ ಒಂದು ಭಾಗ ಅಷ್ಟೇ ಆದರೇ ಇವರ ಮನಸ್ಸಿನಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಸೇಕ್ಸೆ ಇಡೀ ಜೀವನ ಅನ್ನೋ ಭಾವನೆ ಶುರುವಾಗುತ್ತದೆ. ದಿನಕ್ಕೆ 5- 6, ಇನ್ನು ಹೆಚ್ಚಾದರೆ 10 ಸಲ ಹಸ್ತಮೈಥುನ ಮಾಡಿಕೊಂಡು ಖಿನ್ನತೆಗೆ ಒಳಗಾಗುತ್ತಾರೆ,ಮಾನಸಿಕವಾಗಿ ಕುಗ್ಗುತ್ತಾರೆ, ಒಂಥರಾ ಡ್ರಗ್ಸ್ ಗಳಿಗೆ ಅಡಿಕ್ಟ್ ಆದವರ ಹಾಗೆ ಈ ಪೋರ್ನ್ ವೀಡಿಯೋಸ್ ನ್ನು ನೋಡೋದು ತಮಗೆ ಅರಿವಿಲ್ಲದೆ ತಮ್ಮ ಬುದ್ದಿ, ದೇಹ ಬೆಳವಣಿಗೆಯ,ಮೌಲ್ಯದ ವೀರ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ ಇಷ್ಟೆಲ್ಲ ಆದ ಮೇಲೆ ತಮ್ಮ ಓದುವಿನ ಕಡೆಗೆ ತಮ್ಮ ನಿರ್ದಿಷ್ಟವಾದ ಗುರಿಗಳ ಕಡೆಗೆ ಲಕ್ಷ್ಯ ಕಡಿಮೆಯಾಗುತ್ತಾ ಹೋಗುತ್ತದೆ ತಮ್ಮ ತಾಯಿ ತಂದೆಯರು ನಮ್ಮ ಬಗ್ಗೆ ಕಂಡ ಕನಸುಗಳೆಲ್ಲವೂ ಹಾಳಾಗುತ್ತಾ ಹೋಗುತ್ತೇವೆ.
ನಮ್ಮ ಭಾರತದ ಬಹುತೇಕ ಅಶ್ಲೀಲ ವೆಬ್ಸೈಟನ್ನು 2 ವರ್ಷಗಳ ಹಿಂದೆ ನಮ್ಮ " ಮೋದಿಜಿಯವರ ಸರ್ಕಾರ ಬ್ಯಾನ್ ಮಾಡಿತ್ತು " ಆದರೇ ಮತ್ತೆ ಲಾಕಡೌನಲ್ಲಿ ಓಪನ್ ಆಗಿವೆ ನಮ್ಮ ಯುವಜನರ ಮೇಲೆ ಈ ಪೋರ್ನೋಗ್ರಾಫಿ ಗಾಢವಾದ ಪರಿಣಾಮ ಬೀಳುತ್ತದೆ ಆದರೆ ಅವರಿಗೆ ಇದರ ಬಗ್ಗೆ ಅರಿವೇ ಇರುವುದಿಲ್ಲ.
🔸ಗಾಂಜ, ಮಧ್ಯಾಪಾನ, ಧುಮಪಾನಕ್ಕಿಂತ ದೊಡ್ಡ ಚಟಗಾರರು ಆಗುತ್ತಾರೆ.
🔹ಹೆಣ್ಣುಮಕ್ಕಳ ಮೇಲೆ ಗೌರವ ಕಡಿಮೆಯಾಗಿ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ.
🔸ಖಿನ್ನತೆ, ಆತಂಕ, ವ್ಯಾಕುಲತೆ, ಕೋಪಿಷ್ಠರಾಗುತ್ತಾರೆ.
🔹ಹಸ್ತಮೈಥುನಕ್ಕೆ ಅಡಿಕ್ಟ ಆಗುತ್ತಾರೆ.
🔸ತಮ್ಮ ಸಂಗಾತಿಯನ್ನು ತೃಪ್ತಿಪಡಿಸಲು ಸಾಧ್ಯವಾಗುವುದಿಲ್ಲ.
🔹ಪೋರ್ನ್ ವಿಡಿಯೋದಲ್ಲಿ ಇದ್ದ ಯುವತಿ / ಯುವಕನ ಹಾಗೆಯೇ ತಮ್ಮ ಜೀವನದ ಸಂಗಾತಿಯನ್ನು ಬಯಸುತ್ತಾರೆ,ಪೋರ್ನ್ಗಳಲ್ಲಿ ಇದ್ದ ಭಂಗಿಗಳಂತೆಯೇ ಸಂಭೋಗಿಸಲು ಇಷ್ಟಪಡುತ್ತಾರೆ,ನಿಜಜೀವನದಲ್ಲಿ ಹಾಗೆಲ್ಲ ಸಾಧ್ಯವಾಗದಿದ್ದಾಗ ಮಾನಸಿಕವಾಗಿ ಹಾಳಾಗುತ್ತಾರೆ ತಮ್ಮ ದಂಪತಿಗಳ ಸಂಭಂದವನ್ನು ಕಳೆದುಕೊಳ್ಳುತ್ತಾರೆ.
ಬೇರೆ ಬೇರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ರತಿಯೊಬ್ಬರೂ ಸೆಕ್ಸ್ ಬಗ್ಗೆ ನಿಸ್ಸOಕೋಚವಾಗಿ ಮಾತನಾಡುತ್ತಾರೆ ಕಾರಣ ಆ ದೇಶದಲ್ಲಿ ಜಾರಿಇರುವ ಲೈಂಗಿಕ ಶಿಕ್ಷಣ ಪದ್ಧತಿ ಈ ಲೈಂಗಿಕ ಶಿಕ್ಷಣ ಪದ್ಧತಿ ನಮ್ಮ ಭಾರತ ದೇಶದಲ್ಲಿ ಜಾರಿ ಮಾಡಿ ಅದರ ಮಹತ್ವ ಅದರ ಅನುಕೂಲ ಅದರ ಅನಾನುಕೂಲಗಳನ್ನು ಒಳ್ಳೆ ರೀತಿಯಲ್ಲಿ ವಿವರಿಸುತ್ತ ಹೋಗಬೇಕು ಪ್ರತಿಯೊಬ್ಬರೂ ಇದರ ಬಗ್ಗೆ ಯಾವುದೇ ಮುಜುಗರವಿಲ್ಲದೆ ಮಾತನಾಡಬೇಕು.
ಇನ್ನು ತುಂಬಾ ಇವೆ ಆದರೇ ತಂದೆ ತಾಯಿಯರಿಗೆ ನನ್ನದೊಂದು ಮನವಿ ನಿಮ್ಮ ಮಕ್ಕಳ ಅಭ್ಯಾಸಕ್ಕೆ ಫೋನ ಎಷ್ಟು ಆಗತ್ಯವಿದೆಯೋ ಅಷ್ಟೇ ಕಾಲ ಅವರ ಕೈಯಲ್ಲಿ ಕೊಡಿ, ನಾನು ಪೋರ್ನ ವಿಡಿಯೋ ನೋಡೋದನ್ನ, ಹಸ್ತಮೈಥುನ ಮಾಡಿಕೊಳ್ಳೋದನ್ನ ತಪ್ಪು ಅಂತಾ ಹೇಳ್ತಾಇಲ್ಲ ಆದರೇ ಅದು ಒಂದು ಇತಿ ಮಿತಿ ಗತಿಯಲ್ಲಿರಬೇಕು ಯಾಕೆಂದರೆ ಹೆಚ್ಚಾದರೆ ಅಮೃತ ಕೂಡ ವಿಷವಾಗುತ್ತದೆ ,ನಿಮ್ಮಲ್ಲಿ ಫೋನ ಇದ್ದವರು ನಿಮಗೆ ಎಷ್ಟು ಅಗತ್ಯವಿದೆಯೋ ಅಷ್ಟೇ ನೋಡಿ, ಸಾಧ್ಯವಾದಷ್ಟು ಬೆಳಗ್ಗೆ ರನ್ನಿಂಗ, ವ್ಯಾಯಾಮ, ಧ್ಯಾನ ಮಾಡಿ, ವೀರ್ಯದ ಮೌಲ್ಯವನ್ನು ಅರಿಯಿರಿ ಅನಾವಶಕವಾಗಿ ಅದನ್ನು ಹಾಳು ಮಾಡದಿರಿ,ಜಾಸ್ತಿ ಒಂಟಿಯಾಗಿ ಇರಬೇಡಿ ಒಂಟಿಯಾಗಿದ್ದಾಗಲೇ ಪೋರ್ನನ್ನು ನೋಡಬೇಕು, ಹಸ್ತಮೈಥುನವನ್ನು ಮಾಡಿಕೊಳ್ಳಬೇಕು ಅಂತಾ ಯೋಚನೆ ಬರುತ್ತೆ ಆಥರ ನಿಮಗೆ ಯೋಚನೆ ಬಂದಾಗ ನೀವು ಕುಳಿತ ಸ್ಥಳವನ್ನು ಮೊದಲು ಬದಲಾಯಿಸಿ ನಿಮ್ಮ ಫೋನನಲ್ಲಿ ಇದ್ದ ಅಶ್ಲೀಲ ವಿಡಿಯೋಗಳನ್ನೆಲ್ಲ ಡಿಲೀಟ ಮಾಡಿ, ಆದಷ್ಟು ಪುಸ್ತಕಗಳನ್ನು ಓದುವ ರೂಢಿ ಮಾಡಿಕೊಳ್ಳಿ ನಿಮ್ಮ ತಂದೆತಾಯಿಯ ಕನಸು ನಿಮ್ಮ ಭವಿಷ್ಯದ ಆಸೆಗಳ ಕಡೆಗೆ ಗುರಿಯನ್ನು ಹೊಂದಿ.
- ಅಜೇಯ್. ಪಿ. ಎಸ್ ಬೀದರ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ