ಗುರುವಾರ, ಜುಲೈ 15, 2021

ಮರೆವು (ಕವಿತೆ) - ಪುರುಷೋತ್ತಮ ಪೆಮ್ನಳ್ಳಿ

ಮರೆವು

ಮರೆವು ಎಂಬುದು ದೇವರು ಕೊಟ್ಟ ವರದಾನ
ನೋವುಗಳ ಮರಸಿ ಜೀವಕೆ ನೀಡಿದ ಬಹುಮಾನ
ಸವಿ ನೆನಪುಗಳು ಮರಳಿ ಮನದಿ ಮೂಡಲಿ
ಕಷ್ಟದ ಕ್ಷಣಗಳ ನೆನಪು ಮನದಿ
ಮರೆಯಾಗಲಿ...

ಮರೆವ ಅನುಗ್ರಹದಿ ಚಿಂತನೆಯು ಸಾಗುವುದು 
ಪ್ರಸ್ತುತ ದಿನದ ಅನುರಾಗದ ಕ್ಷಣದ ಕನಸಲ್ಲಿ
ಮರೆಯದೆ ಉಳಿದರೆ ಮನವು ಮಂಕಾಗುವುದು
ಸುಮಧುರ ನನಸ ಹಂಬಲದ ಮನಸಿನ ಅಳಿವಲ್ಲಿ...

ಧರ್ಮವ ಉಳಿಸಲು ಮರೆವ ಶಾಪದ ಮೊರೆಯ 
ಕಾಣುವೆವು ಪುರಾಣ ಯುಗದ ಕಥನಗಳಲ್ಲಿ
ಆದರು ಪ್ರಶ್ನೆಯಾಗಿಯೇ ಉಳಿದಿದೆ ಮರೆವು ಸರಿಯ
ಪ್ರೀತಿಯ  ಕ್ಷಣಗಳು ಮರೆತ ನೆನಪಿನ ನೋವಿನಲ್ಲಿ...

ಎಲ್ಲವು ನೆನಪಾಗಿ ಉಳಿದರೆ ಬದುಕಿಗೆ ಬೆಲೆಯಿಲ್ಲ
ಮರೆಯುತ್ತ ಸಾಗಿದರೆ ಚಿಂತೆಗೆ ಮನದಿ ಜಾಗವಿಲ್ಲ
ಮರೆಯುವುದ ಮರೆಯಲಿ ಮನವು ಖುಷಿಯಲ್ಲಿ
ನೆನಪ ಬಯಕೆಯಿರಲಿ ಸಂತಸದ ಅಲೆಯಲ್ಲಿ...
 - ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...