ಗುರುವಾರ, ಜುಲೈ 15, 2021

ಚುಟುಕುಗಳು - ಶ್ರೀಮತಿ ರೇಣುಕಾ ಪವಾರ್

ಚುಟುಕುಗಳು

ಬೇಕೆನ್ನುವರು ಬಂಧು ಬಳಗ
ಬಳಗ ಇದ್ದರೆ ಬರೆ ಜಗಳ 
ಇರುಸು-ಮುರುಸು ಒಳಗೊಳಗ
ಒಬ್ಬರನ್ನೊಬ್ಬರು ನೋಡಿದರೆ ಧಗಧಗ
ಮಾತು ಮಾತಿಗೆ ಶುರು ಕಾಳಗ 
ಹಾಗಾದರೆ ಏಕೆ ಬೇಕು ಬಂಧು ಬಳಗ


ಅಂದು ಬೆಳದಿಂಗಳಿನ ಹುಣ್ಣಿಮೆ
ಬಂದಳಲ್ಲಿಗೆ ನನ್ನ ಪ್ರೀತಿಯ ಭಾಮೆ
ಗೊತ್ತಾಯಿತು ಅವಳಿಗೆ ನನ್ನ ಹಿರಿಮೆ
ನಾನು ರೈತ ಎನ್ನುವದು ಅವಳಿಗೆ ಹೆಮ್ಮೆ
ಮದುವೆಗೆ ಕೊಡುತ್ತಿರುವನು ಅವಳಪ್ಪ ಎಮ್ಮೆ
ಅದನ್ನು ಕೇಳಿ ನನಗಾಯಿತು ದಿಗ್ಭ್ರಮೆ 
 

ಹಿಂದೆ ಮಾಡಿದೆವೆಲ್ಲಾ ನಾವು ಪಟಪಟ ಜೋಳದ ರೊಟ್ಟಿ
ಬಡಿದು,ಬಡಿದು ಬಲಿಷ್ಟ ಆದವು ನಮ್ಮ ರಟ್ಟಿ
ಆರೋಗ್ಯದಿಂದ ಇರುತ್ತಿದ್ದೆವು ಘಟ್ಟಿಮುಟ್ಟಿ
ಏನೆ ಕಷ್ಟ ಬಂದರು ನಿಲ್ಲುತ್ತಿದ್ದೆವು ಮೆಟ್ಟಿ
ಆದರೆ ಈಗ ಯಂತ್ರೋಪಕರಣಗಳ ಮಸ್ತಿ
ಅದಕ್ಕೆ ಬಂದಿವೆ ಈಗ ರೋಗಗಳು ಜಾಸ್ತಿ

       - ಶ್ರೀಮತಿ ರೇಣುಕಾ ಪವಾರ್.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...