ಚುಟುಕುಗಳು.
೧) ನಾಳಿನ ಒಳಿತಿಗಾಗಿ ಇಂದಿನ ಕೆಲ ಸಮಯವನ್ನು ಮೀಸಲಿಡುವದು ತಪ್ಪಲ್ಲ.
ಆದರೆ ಬರೀ ನಾಳಿನ ಚಿಂತೆಯಲ್ಲೇ ಇಂದಿನ ಸಂತೋಷ ಕಳೆದುಕೊಳ್ಳಬಾರದು.
ಪ್ರತಿದಿನ ನಾವೇಷ್ಟೇ ಒಳ್ಳಯ ಪಾಠ ಕಲಿತರೂ ಯಾರನ್ನ ನಂಬಬೇಕು ಯಾರನ್ನು ನಂಬಬಾರದು ಅನ್ನುವ ಪಾಠ ಮಾತ್ರ ಎಷ್ಟೇ ಪ್ರಯತ್ನ ಪಟ್ಟರೂ ಆಗದೆ ಮಾತು.
ಜೀವನದಲ್ಲಿ ಎಲ್ಲವನ್ನು ಎದುರಿಸುವ ಶಕ್ತಿ ಹೊಂದ ಬೇಕು ಯಾಕೆಂದರೆ ಜನರು ಯಾವಾಗ ಬದಲಾಗುವರೋ ಗಾಳಿ ಯಾವ ದಿಕ್ಕಿಗೆ ಹರಾಡುವದೋ ಹೇಳೋದಿಕ್ಕೆ ಆಗೋದಿಲ್ಲ.
೨) ತಂದೆಯ ಪಾದ ಸ್ಪರ್ಶ್ ಮಾಡಿದವನಿಗೆ ಯಾವತ್ತೂ ಸಂಪತ್ತಿನ ಬರವಿಲ್ಲ
ತಾಯಿಯ ಪಾದ ಸ್ಪರ್ಶ್ ಮಾಡಿದವನಿಗೆ ಎಂದೂ ಮಮತೆಯ ಕೊರಗಿಲ್ಲ.
ಅಣ್ಣನ ಪಾದ ಸ್ಪರ್ಶ್ ಮಾಡಿದವನಿಗೆ ಎಂದೂ ಶಕ್ತಿ ಯ ಕೊರತೆ ಇಲ್ಲಾ
ಸಹೋದರಿಯ ಪಾದ ಸ್ಪರ್ಶ್ ಮಾಡಿದವನಿಗೆ ಎಂದೂ ಚಾರಿತ್ರ ಹೀನನಾಗುವದಿಲ್ಲ
ಗುರುವಿನ ಪಾದ ಸ್ಪರ್ಶ್ ಮಾಡಿದವನು ಎಂದೂ ವಿದ್ಯಾ ಹೀನ ನಾಗುವದಿಲ್ಲ.
✍️ ಸವಿತಾ ಆರ್ ಅಂಗಡಿ ಮುಧೋಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ