ರೈತನ ಮಿತ್ರ ನೇಸರ
ಮುಂಜಾನೆಯ ಮಂಜ ಹನಿಯಲಿ
ಸಾಗಿದೆ ಅನ್ನದಾತನ ಕಾಯಕ
ಕಂಡು ಸಂತಸಗೊಂಡ ರವಿಯು
ನೀಡಿದ ಭೂರಮೆಗೆ ಬೆಚ್ಚನೆಯ ಶಾಖ...
ಹಸಿರ ಸಿರಿಯ ಒಡಲಲ್ಲಿ ಅವನ
ನೆಮ್ಮದಿಯ ಜೀವನದ ಪರಿಯು
ನೇಸರನ ರಶ್ಮಿಯ ಕಿರಣದ ಮುತ್ತಿಗೆ
ಮಳೆಯಾಗಿ ಸುರಿಯಿತು ಮೋಡವು...
ಮಳೆ ಕಂಡರೆ ಸಂತಸವು ರೈತನಿಗೆ
ಹಸಿರಾಗಿ ಕಂಗೊಳಿಸುವಳೆಂದು ಧರೆ
ಭೂತಾಯಿಯ ನಂಬಿ ದುಡಿವುದೆ
ಕಾಯಕಯೋಗಿಯ ನಿತ್ಯ ಕಾರ್ಯವು...
ಸಿರಿಧಾನ್ಯವು ಮೈತುಂಬಿದರೆ ತೆನೆಯಲ್ಲಿ
ಸಂತಸವು ತೇಲುವುದು ಮೊಗದಲ್ಲಿ
ಪರರ ಹಸಿವ ತಣಿಸುವ ಆಶಯದಿ
ದುಡಿದು ನೀಡುವನು ಜೀವಕೆ ಅಭಯ...
ಭೂತಾಯಿಯೇ ಅವನ ಸರ್ವಸ್ವವು
ನೇಸರನ ಹೊಂಗಿರಣವೆ ಅಭಯವು
ನಿರಂತರ ಕಾಯಕವು ಹೊಲದಲ್ಲಿ
ಫಸಲಿನ ಲಾಭವು ನಿರ್ಮಲ ಮನದಲ್ಲಿ...
ರೈತನು ಬಿಸಿಲಲಿ ದುಡಿದು ಹರಿಸಿದ
ಬೆವರಿಗೆ ಬೆಲೆಯಾಗಿ ಆದಿತ್ಯನು
ಮಳೆಯ ಹೊನ್ನ ಸುರಿಸುವನು
ಧರೆಯ ತಂಪು ಮಾಡಿ ಹರಿಸುವನು...
ಕೃಷಿ ಕಾಯಕವೇ ರೈತನ ಬದುಕಿನ ನೆಲೆ
ಯಾರಿಗೂ ಬರದು ಅವನ ಕಾಯಕ ಕಲೆ....
- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ : ೯೬೩೨೨೯೬೮೦೯.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
All the best brother.... U r doing good... Move ahead
ಪ್ರತ್ಯುತ್ತರಅಳಿಸಿGreat sir
ಪ್ರತ್ಯುತ್ತರಅಳಿಸಿSuper sir
ಪ್ರತ್ಯುತ್ತರಅಳಿಸಿಉತ್ತಮವಾದ ಸಾಹಿತ್ಯ ರಚನೆ ಪುರು
ಪ್ರತ್ಯುತ್ತರಅಳಿಸಿ