ಶುಕ್ರವಾರ, ಜುಲೈ 16, 2021

ಸಾಹಿತ್ಯ ಸಂಘಟನೆಯ ಮಹಾ ನಾಯಕಿಯ ಹಿಂದಿರುವ ಮಹಾ ಗುರು - (ಲೇಖನ) - ಶ್ರೀ ರಾಹುಲ್ ಮರಳಿ ವಿಜಯಪುರ.

ಸಾಹಿತ್ಯ ಸಂಘಟನೆಯ ಮಹಾ ನಾಯಕಿಯ ಹಿಂದಿರುವ ಮಹಾ ಗುರು

                     ಜಗತ್ತಿನಲ್ಲಿ ಪ್ರತಿ ದಿನ ಸಾಕಷ್ಟು ಜನ ಹುಟ್ಟುತ್ತಾರೆ ಸಾಕಷ್ಟು ಜನ ಮರಣ ಹೊಂದುತ್ತಾರೆ. ಈ ಹುಟ್ಟು ಸಾವು ಎನ್ನುವುದು ನಿರಂತರವಾಗಿ ನಡೆಯುವ ಕ್ರಿಯೆ ಆದರಿಲ್ಲಿ ಇವೆರೆಡರ ಮಧ್ಯೆ ನಾವು ಹೇಗೆ ಬದುಕಿದೆವು ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಬದುಕು ಆ ಭಗವಂತ ನೀಡಿರುವ ಒಂದೆ ಒಂದು ಅವಕಾಶವಾಗಿದೆ. ಇದನ್ನು ಚೆನ್ನಾಗಿ ಸದುಪಯೋಗ ಮಾಡಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಬದುಕುವುದು ಅದು ಅವರವರಿಗೆ ಬಿಟ್ಟುಕೊಟ್ಟ‌ವಿಚಾರ. ಉತ್ತಮ ರೀತಿಯಲ್ಲಿ ಬದುಕನ್ನು ಕೊಂಡೊಯ್ಯಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಈ ಸುದಿನ 
ಶ್ರೀ ನಾನಾ ಗೌಡ ಮಾಲಿ ಪಾಟೀಲ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಇವರ ಜನ್ಮ ದಿನವಾಗಿದ್ದು ಅವರ ಕುರಿತು ಒಂದೆರಡು ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುವೆ.ಪ್ರತಿಯೊಬ್ಬ ಸಾಧಕ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವ ಮಾತು ನೀವೆಲ್ಲಾ ಕೇಳಿರುತ್ತೀರಿ ಆದರಿಲ್ಲಿ ಒಬ್ಬ  ಮಹಿಳೆಯ ಸಾಧನೆಯ ಹಿಂದೆ ಪುರುಷನಿದ್ದಾನೆ. ಹೌದು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಅವರ ಸಾಧನೆಯ ಹಿಂದೆ ಇರುವುದು ಅವರ ಪತಿ ನಾನಾ ಗೌಡ ಮಾಲಿ ಪಾಟೀಲರು. 
ಮಹಾ ನಾಯಕಿಯ ಹಿಂದಿರುವ ಮಹಾ ಗುರು ಇವರು. ಮೇ ೧೩, ೨೦೧೧  ರಂದು ಜೊತೆಯಾಗಿ ದಾಂಪತ್ಯಕ್ಕೆ ಕಾಲಿಟ್ಟ ಈ ಜೋಡಿಯ ಕತೆ ತುಂಬಾ ರೋಚಕವಾದದು. ವೈಯ್ಯಕ್ತಿಕ ಬದುಕಿನಲ್ಲಿ ತುಂಬಾ ಆದರ್ಶವನ್ನು ಇಟ್ಟುಕೊಂಡ ನಾನಾಗೌಡ ಮಾಲಿ ಪಾಟೀಲರು ನಾನು ನೋಡಿದ ಪ್ರಕಾರ ಗಿರಿಜಾ ಮೇಡಂ ಅವರಿಗೆ ಸರಿಯಾದ ದಾರಿಯಲ್ಲಿ ಹೋಗಲು ಮಾರ್ಗದರ್ಶಕರಷ್ಟೆ ಅಲ್ಲದೆ ಬೆಂಗಾವಲಾಗಿ ನಿಂತು ರಕ್ಷಣೆಯನ್ನು ಒದಗಿಸುತ್ತಾರೆ.
 ಅವರ ಪ್ರಕಾರ ಸಾಧನೆಯೆಂದರೆ ಬರಿ ಮಾತಲ್ಲ, ತೋರಿಕೆಯಲ್ಲ, ಮತ್ತೊಬ್ಬರನ್ನು ತುಳಿದು ಅವರ ಸ್ಥಾನಕ್ಕೆ ನಿಲ್ಲುವುದಂತು ಅಲ್ಲವೆ ಅಲ್ಲ. ಅವರ ಪ್ರಕಾರ ಸಾಧನೆ ಎಂದರೆ ಮೌನ ಧ್ಯಾನ, ಪರಿಶ್ರಮ, ಶ್ರದ್ದೆಯಿಂದ ಕೃತಿಯಲ್ಲಿ ತೋರುವುದು. ಸಾಧನೆ ಎಂದರೆ ಯಾವುದೇ ನಕಾರಾತ್ಮಕ ಸೆಳೆತಗಳಿಗೆ ಒಳಗಾಗದೆ ತನ್ನಷ್ಟಕ್ಕೆ ತಾನೇ ಕ್ರಿಯಾಶೀಲನಾಗಿ, ಚೈತನ್ಯ ಮೂರ್ತಿಯಾಗಿ ಸಕಾರಾತ್ಮಕ ಚಟುವಟಿಕೆಗಳಲ್ಲಿ ತಲ್ಲೀನನಾಗಿಬಿಡುವುದು ಎಂದು ಹೇಳುತ್ತಾರೆ. ಹಾಗೆಯೆ ಆರೋಗ್ಯಕರವಾದ ಬದುಕಿಗೆ ತಾಳ್ಮೆ ಬಹಳ ಮುಖ್ಯ ಎನ್ನುವುದು ಇವರ ಬಲವಾದ ಧೋರಣೆ ಹೌದು ಮಂಕುತಿಮ್ಮನ ಕಗ್ಗದ ಸಾಲೊಂದು ಇಲ್ಲಿ ನೆನಪಿಗೆ ಬರುತ್ತದೆ.".     ಹೌದು ಬದುಕಿನಲ್ಲಿ ಸಹನೆ ಬಹಳ ಮುಖ್ಯವಾದ ಅಂಶ ಸಹನೆ ಇದ್ದರೆ ಮಾತ್ರ ನಾವು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ನಾನಾ ಗೌಡ ಮಾಲಿ ಪಾಟೀಲರ ಮೂಲ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕೋರವಾರ ರಾಯಚೂರು,ಕಲ್ಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ ತೆರೆದು ಅತ್ಯುತ್ತಮ ಭೋದಕರೆಂದು ಅಲ್ಲಿ ಮನೆಮಾತಾಗಿದ್ದರು. 

ಪ್ರಸ್ಥುತ ಅಜಿಂ ಪ್ರೇಮಜಿ ಸಂಸ್ಥೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಸಾಕಷ್ಟು ಜನ ಶಿಕ್ಷಕರಿಗೆ ಕಾರ್ಯಾಗಾರಗಳ ಮೂಲಕ ತರಬೇತಿಯನ್ನು ನೀಡುತ್ತಾರೆ. ಹಾಗೆಯೇ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ರಾಜ್ಯದಾದ್ಯಂತ ವೇದಿಕೆ ಬೆಳಸಲು ಗಿರಿಜಾ ಮಾಲಿ ಪಾಟೀಲ ಅವರಿಗೆ ಸಹಾಯಕರಾಗಿ ಎಲೆ ಮರೆಯ ಕಾಯಿಯಂತೆ ಶ್ರಮಿಸುತ್ತಿದ್ದಾರೆ. ಇವರ ನೆರವಿನಿಂದ ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿದ ಗಿರಿಜಾ ಮೇಡಂ ಈಗ ಉತ್ತಮವಾದ ಸರ್ಕಾರಿ ನೌಕರಿ ಪಡೆದಿರುವುದಲ್ಲದೆ. ಸಾಹಿತ್ಯವನ್ನು ಅಧ್ಯಯನ ಮಾಡುತ್ತಾ ಹಲವು ಕೃತಿಗಳನ್ನು ಹೊರ ತರುವ ಮೂಲಕ ಹೆಸರಾಂತ ಸಾಹಿತಿಗಳಾಗಿ ಹೊರಹೊಮ್ಮಿದ್ದಾರೆ. ನಾನು ಹತ್ತಿರದಿಂದ ನೋಡಿದ ಪ್ರಕಾರ ತುಂಬಾ ಸರಳ ಸ್ವಭಾವದ ಇವರು ನೋಡಲು ಗಂಭೀರವಾಗಿ ಕಂಡರೂ ತುಂಬಾ ಸ್ನೇಹಮಯಿ ವ್ಯಕ್ತಿತ್ವದವರು. ಮಾತನಾಡಲು ಶುರು ಮಾಡಿದರೆ ಗಂಟೆ ಗಟ್ಟಲೆ ಹರಟುತ್ತಾರೆ. ಹಲವಾರು ಸ್ಪರ್ಧಾತ್ಮಕ ಸ್ಪರ್ಧೆಗಳಿಗೆ ತರಬೇತಿ ನೀಡಿದ ಇವರು ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ, ಮಾನಸೀಕ ಸಾಮರ್ಥ್ಯ ಹೀಗೆ ಹಲವು ವಿಷಯಗಳಲ್ಲಿ ಪರಿಣತಿ ಹೊಂದಿದ್ದು ಉತ್ತಮ ವಾಗ್ಮಿಗಳೂ ಆಗಿದ್ದಾರೆ. ಇತ್ತೀಚಿಗೆ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಅವರ ಸಾಹಿತ್ಯದ ವೈವಿಧ್ಯಮಯ ರೂಪಗಳು ಕೃತಿ ಲೋಕಾರ್ಪಣೆ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರನ್ನು ಕರೆಸಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಿ ಎಲ್ಲರೊಂದಿಗೆ ಬಲೆ ಎನ್ನಿಸಿಕೊಂಡ ಕೀರ್ತಿ ಇವರಿಗೆ ಸಲ್ಲುತ್ತದೆ.
ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದರು. ತಮ್ಮ ಸ್ವಂತ ಹಣದಿಂದ ಸಮಾಜಕ ಕಾರ್ಯಗಳನ್ನು ಮಾಡುವವ ವಿರಳ. ಇವರು ಯಾವುದೇ ಸಾಮಾಜಿಕ ಕೆಲಸ ಕಾರ್ಯಗಳಿಗೆ ತಮ್ಮ ಸ್ವಂತ ಹಣ ಖರ್ಚು ಮಾಡುವುದು ವಿಶೇಷವಾಗಿದೆ. ಮತ್ತು ಇವರ ಉದಾರತೆಗೆ ಹಿಡಿದ ಕನ್ನಡಿಯಾಗಿದೆ. ಇವರು ನಾಡಿನಾದ್ಯಂತ ಹಲವಾರು ಸಾಹಿತಿಗಳಗೆ ಪ್ರೋತ್ಸಾಹ ನೀಡುವ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ರುವಾರಿಗಳೂ ಆಗಿದ್ದಾರೆ. ಇವರ ಒಳ್ಳೆಯ ಭಾವನೆಗೆ ಆ ದೇವರು ಇವರಿಗೆ ಸಕಲ ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ಬಯಸುತ್ತೇನೆ. ವೈಯ್ಯಕ್ತಿಕ ಬದುಕಿನಲ್ಲೂ ಸಾಕಷ್ಟು ಆದರ್ಶಗಳನ್ನು ಇವರು ಪಾಲಿಸುತ್ತಿರುವುದರಿಂದಲೆ ಗಿರಿಜಾ ಮಾಲಿ ಪಾಟೀಲ ಮೇಡಂ ಅವರು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಲ್ಲದೆ ಸಾಹಿತ್ಯ ಹಾಗೂ ಸಂಘಟನಾತ್ಮಕ ವಿಷಯದಲ್ಲಿ ನಾಡಿನಾದ್ಯಂತ ಸಾಕಷ್ಟು ಹೆಸರು ಮಾಡಿ ಬೆಳೆದು ನಿಂತಿದ್ದಾರೆ.
 ಇಬ್ಬರೂ ದಂಪತಿಗಳು  ಸಂತೋಷದಿಂದ ಬಾಳಲಿ ಎನ್ನುವ ಹಾರೈಕೆಯಿಂದ ಈ ಲೇಖನ ಬರೆಯಲು ಲೇಖನಿಯನ್ನು ಕೈಗೆತ್ತಿಕೊಂಡಿದ್ದೆ. ಅವರಿಗೆ ಶುಭವಾಗಲಿ ಹಾಗೂ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ರಾಷ್ಟ್ರವ್ಯಾಪಿ ಬೆಳೆದು ನಿಲ್ಲಲಿ.     

  - ರಾಹುಲ್ ಮರಳಿ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ವಿಜಯಪುರ.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...