ಶುಕ್ರವಾರ, ಜುಲೈ 16, 2021

ವಾಣಿವಿಲಾಸ ಸಾಗರ ನಿರ್ಮಾಣ ಸಂಧರ್ಭದ ರಹಸ್ಯಗಳು ಭಾಗ-೧ ಮತ್ತು ೨ (ಲೇಖನ) - ಶ್ರೀ ಮೋಹನ್ ಪ್ರಸಾದ್ ಎಸ್.

*ವಾಣಿ ವಿಲಾಸ ಸಾಗರ ನಿಮಾ೯ಣ ಸಂಧ೯ಭದ ರಹಸ್ಯಗಳು *
                             ಭಾಗ-೧

ವಿಷಯ ="1898ರಲ್ಲಿ ಕಾಲಾರ ರೋಗದ ರೋಚಕ ಸಂಗತಿ ಮತ್ತು ಸವಾಲುಗಳು"
2019ರ ಕೊವಿಡ್ ರೋಗವು ಎಲ್ಲಾ ರೀತಿಯಲ್ಲಿ ಜನರಿಗೆ ಸಮಸ್ಯೆಯ ಸರಮಾಲೆಯನ್ನೇ ತಂದಿದ್ದು ಹಲವಾರು ಅಭಿವೃದ್ಧಿ ಕಾಯ೯ಗಳು ಇಂತಿವೆ. ಹಾಗೇಯೇ 1898ರಲ್ಲಿ ಇಂತಹ ರೋಗವು (ಕಾಲರ) ಕಾಡಿತ್ತು. ವಾಣಿ ವಿಲಾಸ ಸಾಗರ ನಿಮಿ೯ಸಲು ಮೈಸೂರಿನ ಒಡೆಯರು 1898ರ ಆಗಸ್ಟ್ ತಿಂಗಳಿನಲ್ಲಿ "ದಿವಾನ್ ಶೇಷಾದ್ರಿ ಐಯ್ಯರ್. "ಮಾರ್ಗ ದಶ೯ನದಲ್ಲಿ. ಚೀಪ್ ಇಂಜಿನಿಯರ್ "ಕ್ಯಾಂಚಿಲ್" ಹಾಗೂ ಮೈಸೂರು ಲೋಕೋಪಯೋಗಿ ಇಲಾಖೆಯ "ಚುನ್ನಿಲಾಲ್ ತಾರಾಚಂದ್ ಲಾಲ್" ರನ್ನು ಯೋಜನೆಯ ಸೂಪರಿಡೆಂಡ್ ಇಂಜಿನಿಯರ್ ಆಗಿ ನೇಮಕ ಮಾಡಲಾಯಿತು.

 ಮದ್ರಾಸ್ ಅಧಿಪತ್ಯದಲ್ಲಿದ್ದ "ಕಡಪ. ಕನೂ೯ಲು. ಹಾಗೂ ಪೂನಾ.ಮತ್ತು ಮದ್ರಾಸ್. " ಸುತ್ತಮುತ್ತಲ ಜಿಲ್ಲೆಗಳಿಂದ ಡ್ಯಾಂ ನಿಮಾ೯ಣಕ್ಕೆ ಸುಮಾರು 5000 ಕೂಲಿ ಕಾರ್ಮಿಕರನ್ನು ಕರೆತರಲಾಯಿತು. 
ಹೀಗೆ ಸಮುದ್ರ ಮಟ್ಟದಿಂದ ಸುಮಾರು 6300 ಅಡಿ ಎತ್ತರವಿರುವ "ಬಾಬಾ ಬುಡನ್ ಗಿರಿಯಲ್ಲಿ "ಹುಟ್ಟುವ 'ವೇದಾವತಿ ' ನದಿಗೆ ಅಡಲಾಗಿ ಡ್ಯಾಂ ನಿಮಾ೯ಣ ಕಾರ್ಯ ಅಧಿಕೃತವಾಗಿ ಪ್ರಾರಂಭವಾಯಿತು.

*ತಾತ್ಕಾಲಿಕ ಸ್ಧಗಿತ*
   ಡ್ಯಾಂ ಕಾರ್ಯ ವು 1898ರ ನವಂಬರ್ ನಲ್ಲಿ  ಇದ್ದಕ್ಕಿದ್ದಂತೆ  ಸಂಪೂರ್ಣ ಸ್ಥಗಿತಗೊಂಡಿತು ಕಾರಣ ಈ ಒಂದು ಭಾಗದಲ್ಲಿ (ಹಿರಿಯೂರಿನ ಸುತ್ತಮುತ್ತ) "ಕಾಲರ" ರೋಗಕಾಣಿಸಿಕೊಂಡಿತು. ರೋಗದ ನಿಮಿತ್ತ 5000 ಜನ ಕೆಲಸಗಾರರು ಕೆಲಸ ಸ್ಥಗಿತಗೊಳಿಸಿದರು.      "ಕೊರೊನ " (2019.21) ಸಂಧ೯ಭದಲ್ಲಿ ಇದೆ ರೀತಿಯಲ್ಲಿ ಮೆಡಿಕಲ್ ಕಾಲೇಜು. ಮಠ. ತರಬೇತಿ ಶಾಲೆಗಳು. ಶಾಲಾ ಕಾಲೇಜುಗಳು. ಮುಂತಾದವುಗಳು ಕೇರ್ ಸೆಂಟರ್ ಆಗಿ ಬದಲಾದವೂ ಹಾಗೆ ಅ ಕಾಲದಲ್ಲಿ ಅಧಿಕಾರಿಗಳಿಗೆ. ಇಂಜಿನಿಯರುಗಳಿಗೆ. ನಿರ್ಮಿಸಲಾಗಿದ್ದ ವಸತಿ ಗೃಹಗಳು. ತನಿಖಾಮಂದಿರಗಳು. "ಕಾಲರ" ಆಸ್ಪತ್ರೆಗಳಾಗಿ ಪರಿವತಿ೯ಸಲಾಯಿತು. ಎಷ್ಟೇ ಜಾಗರೂಕತೆಯಿಂದ ನೋಡಿಕೊಂಡರೂ "ಕಾಲರಾ"ರೋಗಕ್ಕೆ ಸುಮಾರು 350(ಹಿರಿಯೂರು ಭಾಗದಲ್ಲಿ) ಮಂದಿ ಬಲಿಯಾದರು. 

ಇದಾದ ನಂತರ ತೀವ್ರ ಕಟ್ಟೆಚ್ಚರವಹಿಸಿ, ಲಸಿಕೆ. ಔಷಧ. ಶುದ್ದ ಕುಡಿವ ನೀರಿನ ಸರಬರಾಜು ಮಾಡಿ, ಕೆಲಸಗಾರರಿಗೆ 100 ಜನ ಇರುವ ತಂಡದಂತೆ ವಸತಿ ಕಲ್ಪಿಸಿದರು. ನಂತರದಲ್ಲಿ ರೋಗ ನಿಯಂತ್ರಣಕ್ಕೆ ಬಂದು ಕಾಮಗಾರಿ ಪುನಃ  ಪ್ರಾರಂಭಿಸಲಾಯಿತು. ಮಹಾರಾಣಿ ಮತ್ತು ಮಹಾರಾಜರ ಕಾರ್ಯ ಕ್ಕೆ ಒಂದು ಮೆಚ್ಚುಗೆ ಸೂಚಿಸಲೇಬೇಕು. 5ವಷ೯ಕ್ಕೆ ಮುಗಿಯುವ ಭರವಸೆ ಇದ್ದು ಈ ರೋಗ ಕಾರಣದಿಂದಾಗಿ  ಮತ್ತು ನೀರಾವರಿ ಚಾನಲ್ ನಿಮಾ೯ಣ ಕಾರ್ಯ ದಿಂದ 11 ವಷ೯ಕ್ಕೆ (1898ರಿಂದ 1901)ಕ್ಕೆಡ್ಯಾಂ ಕಾರ್ಯ ಪೂರ್ಣಗೊಂಡಿತ್ತು. 
ಇದು ಹಿರಿಯೂರಿನಿಂದ ಸುಮಾರು (ಪೂನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ) 18ಕೀ.ಮಿ ದೂರದಲ್ಲಿದೆ ಪ್ರವಾಸಿ ತಾಣವಾಗಿ ಮಾಪ೯ಟ್ಟಿದೆ. ಕೊರೊನ ಸಂಧ೯ಭ ದಿಂದ ಈಗ ಬಂದ್ ಮಾಡಲಾಗಿದೆ ಒಮ್ಮೆ ಭೇಟಿ ಕೊಡಿ. 

ಮುಂದುವರೆಯುತ್ತದೆ.........

*ವಾಣಿ ವಿಲಾಸ ಸಾಗರ  ನಿಮಾ೯ಣ ಸಂಧ೯ಭದ ರಹಸ್ಯಗಳು*
ಭಾಗ -೨
ವಿಷಯ:- "1901 ಮತ್ತು 1909 ರ ಎರಡು ಘಟನೆಗಳು"
ಮೊದಲನೆ ಘಟನೆ:-(1901) ಜಲಾಶಯ ನಿರ್ಮಾಣಕ್ಕೆ ಕಾರಣ ಕತ೯ರಾಗಿದ್ದ "ದಿವಾನ್ ಶೇಷಾದ್ರಿ ಅಯ್ಯರ್" ರವರಿಗೆ ಪೂಣ೯ಗೊಂಡ ಜಲಾಶಯ ನೋಡುವ ಯೋಗವಿರಲ್ಲಿಲ್ಲ. (ಮೂಲತಃ ಇವರು ತಮಿಳು ನಾಡಿನವರು) ಕಾರಣ  1901 ಸೆಪ್ಟೆಂಬರ್ 13ರಂದು ಅವರು ದೈವದೀನರಾದರು.  ನಂತರದಲ್ಲಿ ಚೀಫ್ ಇಂಜಿನಿಯರ್ ಆಗಿದ್ದ "ಕ್ಯಾಂಚಿಲ್" ನಿವೃತ್ತರಾದರು.ಆಗ ಎರಡು ರೀತಿಯ ಆಘಾತ ಉಂಟಾಗಿತ್ತು  ಅಬಿವೃದ್ಧಿಯ ಕಾರ್ಯ  ಕುಂಠಿತ  ಸಾಗುತ್ತಿತ್ತು ನಂತರ ಮಹಾರಾಜರು ಹೊಸದಾಗಿ, ಯೋಜನೆಯ ಸೂಪರಿಡೆಂಟೆಂಡ್ ಇಂಜಿನಿಯರ್,ಆಗಿದ್ದ "ಸಿ. ಟಿ. ದಲಾಲ್ " ರವರು 1905 ಮೇ ತಿಂಗಳಿನಿಂದ ಯೋಜನೆ ಪೂರ್ಣಗೊಳ್ಳುವವರೆಗೆ "ಎಚ್.ಡಿ.ರೈಸ್ "ರವರು ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ನೇಮಕಗೊಂಡರು.. 

ಎರಡನೆ ಘಟನೆ :-(1909)
ಮುಂಬೈನ ಲೋಕೋಪಯೋಗಿ  ಇಲಾಖೆಯಲ್ಲಿ ಸೂಪರಿಡೆಂಡ್ ಇಂಜಿನಿಯರ್ ಆಗಿ ಸೇವೆಯಲ್ಲಿದ್ದ

 " ಸರ್, ಎಂ, ವಿಶ್ವೇಶ್ವರಯ್ಯ "ನವರು 1909 ನವಂಬರ್ 15ರಂದು ಮೈಸೂರಿನ ಚೀಫ್ ಇಂಜಿನಿಯರ್ ಆಗಿ ನೇಮಕಗೊಂಡರು ನಂತರ ಮಾರಿಕಣಿವೆ ಕೆರೆಯ(ವಾಣಿ ವಿಲಾಸ ಸಾಗರ) ಭವಿಷ್ಯದ ಮುಂದಾಲೋಚನೆ ನಡೆಯಿತು. 1902 ರಿಂದ 1909 ರವರೆಗೆಅಣೆಕಟ್ಟಿಗೆ ಹರಿದು ಬಂದ ನೀರಿನ ಪ್ರಮಾಣವನ್ನು ಅಂದಾಜು ಮಾಡಿ ಪ್ರತಿ ವರ್ಷ ಈ ಜಲಾಶಯ ತುಂಬುವ ಸಾದ್ಯತೆ ಇದೆ. ಇಲ್ಲಿ ಇದರಿಂದ ನಿಗದಿತ ಉದ್ದೇಶ ಈಡೇರುವುದಿಲ್ಲ ಎಂದು ಭಾವಿಸಿದ (ವಿಶ್ವೇಶ್ವರಯ್ಯ) ರವರು "ವೇದಾವತಿ "ನದಿ ಹುಟ್ಟುವ ಬಾಬಬುಡನಾಗಿರಿಯಲ್ಲೇ ಜನ್ಮ ತಾಳುವ ಇನ್ನೊಂದು ನದಿಯಾದ  "ಯಗಚಿ"ಯನ್ನು ಮಳೆಗಾಲದಲ್ಲಿ ಮಾತ್ರ "ವೇದಾವತಿ " ನದಿಗೆ ಜೋಡಿಸಿದರೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಪ್ರತಿ ವರ್ಷವೂ 200 ದಿಂದ 300 ಮಿಲಿಯನ್ ಕ್ಯೂಸೆಕ್ ಅಡಿ ನೀರನ್ನು ಹೆಚ್ಚುವರಿಯಾಗಿ ಪಡೆಯಬಹುದು. ಇದರಿಂದ ಮಾರಿಕಣಿವೆ ಯಲ್ಲಿ (ವಿ ವಿ ಸಾಗರ) ವಿದ್ಯುತ್ ಉತ್ಪಾದನೆಯ ಜೊತೆಗೆ ಹೆಚ್ಚು ಭೂಮಿಗೆ ನೀರು ಹರಿಸಬಹುದು ಎಂಬ ಮುಂದಾಲೋಚನೆ ಮಾಡಿದ ಕೀರ್ತಿ ವಿಶ್ವೇಶ್ವರಯ್ಯ ರವರಿಗೆ ಸಲ್ಲುತ್ತದೆ.  ಆದರೆ ಸಾಧ್ಯದಲ್ಲಿ ಯಾವುದೇ ರೀತಿಯ ವಿದ್ಯುತ್ ಉತ್ಪಾದನೆ ನಡೆಯುತ್ತಿಲ್ಲ. 


ಮುಂದುವರಿಯುವುದು......... 


  
   ಲೇಖಕ:- ಮೋಹನ್ ಪ್ರಸಾದ. ಎಸ್ 
ಸ್ನಾತಕೋತ್ತರ ವಿದ್ಯಾರ್ಥಿ. (ಜಿ. ಆರ್. ಹಳ್ಳಿ. ಚಿತ್ರದುರ್ಗ.





( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...