ಕಾಲ ಮತ್ತು ಮನುಷ್ಯನ
ಪ್ರತಿದಿನ ನಾವು ಸಮಯದೊಂದಿಗೇ ನಿರಂತರವಾದ ಚಲನಶೀಲವಾಗುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವ ಮನೋಭಾವವನ್ನು ಹೊಂದಬೇಕಾಗುತ್ತದೆ .
ಸಮಯವೂ ಒಂದು ಜೀವನದ ದೊಡ್ಡ ಸಂಪತ್ತು ಆಗಿರುತ್ತದೆ . ಯಾರು ಸಮಯದ ಬಗ್ಗೆ ಅರಿವು ಉಳ್ಳವರಾಗಿರುತ್ತಾರೂ ಅವರು ಸಮಯದೊಂದಿಗೆ ನಿರಂತರವಾಗಿ ಚಲನಶೀಲ ರಾಗುತ್ತಾರೆ .ಅವರ ಜೀವನದ ಏರುಪೇರುಗಳು ಸರಾಗವಾಗಿ ಮುಂದೆ ಸಾಗುತ್ತವೆ .ಅವರ ಜೀವನದ ಅನೇಕ ಅನುಭವಗಳ ಜೊತೆ ಮುಂದಕ್ಕೆ ಸಾಗುವ ಛಲ ಹೊಂದಿರುತ್ತಾರೆ .
ಮನುಷ್ಯನ ಶ್ರೇಯಸ್ಸು ಯಾವುದರಲ್ಲಿದೆ? ಅವರ ಆ ಶ್ರೇಯಸ್ಸು ಯಾರಿಂದ ಆಗಿದೆ?ಎಂಬುದನ್ನು ತನ್ನ ಅರಿವು ತನಗೆ ಮುಖ್ಯವಾಗಿರುತ್ತದೆ .ಮನುಷ್ಯ ಯಾತರಿಂದ ಮನುಷ್ಯನಾದ ?ಮನಸ್ಸಿನಿಂದ ಮನುಷ್ಯ ನೆಲೆಸಿದ .ಮನಸ್ಸಿನ ಉದ್ಭವ ಫಲವೇ ಪ್ರಜ್ಞೆ . ಪ್ರಜ್ಞೆಯ ಅಧಿಕಾರಿಯಾದ ಮನುಷ್ಯ ಬೆಳಕನ್ನು .ಬೆಳಕಿನ ಭೌತಿಕ ಮೂಲವಾದ ಸೂರ ್ಯನನ್ನು ತನ್ನ ಸಂಕೇತವಾಗಿ ಮಾಡಿಕೊಂಡ .ಅದರೊಡನೆ ಅವನ ಇತಿಹಾಸ ಆರಂಭವಾದುದು .ನಿನ್ನೆ ಇಂದು ನಾಳೆ ಯ ಕಲ್ಪನೆ ಉಳ್ಳದ್ದು .ಮನಸ್ಸು ಮತ್ತು ಪ್ರಜ್ಞೆ ಇತಿಹಾಸವಿಲ್ಲ .ಅವನ ಆರಾಧನೆಯ ವಸ್ತುವಾಗಿ ಇದ್ದಷ್ಟು ಕಾಲ ಅವನು ತನ್ನನ್ನು ಪ್ರಜ್ಞೆಯ ಅಧೀನದಲ್ಲಿಟ್ಟುಕೊಂಡು ನಡೆಯುತ್ತಾನೆ . ಅದು ಶ್ರೇಯಸ್ಸಿನ ದಾರಿ ,ಮನುಷ್ಯತ್ವದ ದಾರಿ , ಬೆಳಕಿನ ದಾರಿ ,ಅದೇ ಅವನ ಧ್ಯೇಯವನ್ನು ಸರಿಯಾದಾರಿಯಲ್ಲಿ ಪ್ರಚೋದಿಸುತ್ತದೆ .
ಮನುಷ್ಯನ ನರ ನರತ್ವದಿಂದ ಮೇಲೇರಿ ತಾನೇ ಮನುಷ್ಯನಾದವನು ?ಮನುಷ್ಯತ್ವ ಅವನನ್ನು ಬೆಳಕಿನತ್ತ ಪ್ರಚೋದಿಸುತ್ತದೆ .ನರತ್ವ ಅವನನ್ನು ಕತ್ತಲೆಯತ್ತ ಜಗ್ಗುತ್ತದೆ .ಈ ಜಗ್ಗಾಟದಲ್ಲಿ ಪಂಚೇಂದ್ರಿಯ ವೇ ಪ್ರಧಾನವಾಗಿ ಉಳ್ಳ ಇಂದ್ರಿಯಗಳ ಸ್ವೇಚ್ಛಾ ಪೇಕ್ಷಾ ಕೆಲಸ ಮಾಡುತ್ತದೆ .ಮಾಡುತ್ತಲೇ ಇರುತ್ತದೆ .ಇದರಿಂದ ಮುಕ್ತನಾಗಿ ಹೊರಬಂದವನೇ ಮನುಷ್ಯತ್ವಕ್ಕೆ ಏರುತ್ತಾನೆ . ಮನಸ್ಸಿನ ನಿಗ್ರಹವೇ ಯಶಸ್ಸಿನ ಕೊಂಡಿ .ನಮ್ಮ ಬೆಳಕನ್ನು ನಾವು ಬೇಡವೆಂದು ಬಿಟ್ಟುಬಿಡಬಾರದು .ಕೈ ದೀಪದೊಂದಿಗೆ ಹೋಗುವ ನಾವು ತುಂಬಾ ಬೆಳಕಿರುವ ಜಾಗಕ್ಕೆ ಬಂದಾಗ ಅದನ್ನುಬಿಡಬಾರದು . ಪುನಃ ಅದರ ಅಗತ್ಯ ಬೀಳಬಹುದೆಂದು ಇಟ್ಟುಕೊಳ್ಳುತ್ತೇವೆ .ಅಂತೆಯೇ ಮನಸ್ಸು ಪ್ರಕಾಶಮಾನವಾದ ಆ ಪ್ರಕಾಶವನ್ನು ಹಿಡಿದುಕೊಟ್ಟ ಕೊಳ್ಳಬೇಕು .ಹಾಗೆಯೇ ಹಿಡಿದಿಟ್ಟುಕೊಂಡ ಅಂಥ ಕ್ಷಣಗಳೇ ಬೆಳಕೂ ನಮಗೆ ಕತ್ತಲೆಯ ದಾರಿಯಲ್ಲಿ ಆಧಾರವಾಗುವುದು .
ಸಮಯಕ್ಕೆ ಸರಿಯಾಗಿ ನಮ್ಮ ದಾರಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ನಮ್ಮದು .ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯವೂ ನಮ್ಮದು .ಆದರೆ ನಮ್ಮ ಶತ್ರುಗಳು ನಾವೇ .ತೊಂದರೆಯನ್ನು ನಾವೇ ಅವುಗಳ ಆಹ್ವಾನಿಸದಿದ್ದರೆ .ಪ್ರಪಂಚ ನಮಗೇನು ತೊಂದರೆ ಮಾಡದು .ಜೀವನದಲ್ಲಿ ನಮಗೊಂದು ಗುರಿ ಇರಬೇಕು .ಆತ್ಮನ ಗುರಿಯೆಂದರೆ ದಿವ್ಯತೆಯ ಜೊತೆಗೆ ತನಗಿರುವ ನಿಚ್ಛಳ ಸಂಬಂಧವನ್ನು ಕಂಡುಕೊಳ್ಳುವುದು .ಎರವಲು ಜ್ಞಾನವು ಏರುಪೇರಾಗುತ್ತದೆ .ಪಲ್ಲಟಗೊಳ್ಳುತ್ತಿರುತ್ತಾರೆ .ಅದನ್ನು ನಮ್ಮದೇ ಅನುಭವದ ಆಧಾರದ ಮೇಲೆ ನಮ್ಮದನ್ನಾಗಿಸಿ ಕೊಳ್ಳಬೇಕು .ನಾವು ಯಾವಾಗ ಕಲಿಯಲು ಇನ್ನೊಂದೆಡೆ ಹೋಗಬೇಕಾಗುತ್ತದೆಯೋ ,ಆಗ ಅದು ನಮಗೆ ಸೇರಿದ್ದಲ್ಲ. ನಮ್ಮೊಡನೆ ಇದ್ದು ನಮ್ಮೊಂದಿಗೆ ಬರುವುದೇ ನಿಜವಾದ ಜ್ಞಾನ .ಅದೇ ನಾವು ಶ್ರೇಯಸ್ಸು ಎಂದು ಹೇಳಬಹುದಾಗಿದೆ .ನಮ್ಮ ದೃಷ್ಟಿಯನ್ನು ಪೂರ್ತಿಯಾಗಿ ಮುಚ್ಚಿಹಾಕುವುದು ಅಜ್ಞಾನ .ವಿವೇಕವೇ ಅದರಿಂದ ಹೊರಬರುವ ಮಾರ್ಗ .ಪ್ರಮಾದ ಮಾಡದಂತೆ ನಮ್ಮನ್ನು ರಕ್ಷಿಸುವುದೇ ವಿವೇಕ .
ವಿರೋಧವಿಲ್ಲದೆ ಯಾವುದೇ ಶ್ರೇಯಸ್ಸು ಯಾವ ಕಾಲಕ್ಕೂ ಸಾಧಿಸಲ್ಪಟ್ಟಿಲ್ಲ . ಎಲ್ಲಾ ಪರಿಸ್ಥಿತಿಗಳಲ್ಲೂ ನಾವು ನಮ್ಮ ಆದರ್ಶವನ್ನು ಭದ್ರವಾಗಿ ಹಿಡಿದು ಇಟ್ಟುಕೊಂಡಿರಬೇಕು .ಅದರಲ್ಲೂ ಸೋಲಿನ ಖಿನ್ನತೆಯ ಸಂದರ್ಭಗಳಲ್ಲಿ ಅಪಾರ್ಥ ಟೀಕೆಗೊಳಗಾಗುವ ಸಂದರ್ಭಗಳಲ್ಲಿ .ಇದೇ ನಮ್ಮ ಬಲವನ್ನು ಆದರ್ಶದ ಮೇಲಿರುವ ನಮ್ಮ ಆಳವಾದ ಆಧ್ಯಾತ್ಮಿಕ ಭಕ್ತಿ ಹಾಗೂ ಬಲವನ್ನು ಸಾಧಿಸಿ ತೋರುವ ಮಾರ್ಗ .
ಒಬ್ಬ ಕೆಲಸಗಾರನಿಗೆ ಯಾವು ಮುಖ್ಯ ಸಂಗತಿಯ ಮೇಲೆ ಗಮನವಿರಬೇಕು ತಾನು ಮಾಡುವ ಕೆಲಸದ ಮೇಲೆ ತಾನೆ ?ಒಬ್ಬ ವಿದ್ಯಾರ್ಥಿಗೆ ಯಾವುದರ ಮೇಲೆ ಗಮನವಿರಬೇಕು? ಅವನು ಅಧ್ಯಯನದ ಮೇಲೆ . ಅವರು ಇನ್ನೊಂದರ ಮೇಲೆ ಪ್ರಜ್ಞೆ ಇಟ್ಟಿದ್ದರೆ .ಅದು ಯಾವುದೇ ಆಗಲಿ ಅದು ಅವರ ಶ್ರೇಯಸ್ಸಿಗೆ ಅಡ್ಡಿಯಾಗಿ ಪರಿಣಮಿಸಿರುವುದು .ನಮ್ಮ ಕೆಳಸ್ತರದ ಸ್ವಭಾವವನ್ನು ಬದಲಿಸಿ ಉನ್ನತ ಶಕ್ತಿಯೊಂದಿಗೆ ಹೃತ್ಪೂರ್ವಕವಾಗಿ ಬದಲಾಗುವ ವಿವೇಕ ನಮಗೆ ಬಂದಾಗ ಶಾಂತಿ ನಾವು ಪಡೆಯುವೆವು .
ಜೀವನ ಒಂದು ನಿರಂತರ ಹೋರಾಟ ಆದರೆ ಹೋರಾಟ ಒಳ್ಳೆಯದ್ದು .ಅದು ನಮ್ಮನ್ನು ಬಲಪಡಿಸುವುದು .ಆತ್ಮ ಪ್ರತಿಭೆಗೆ ನಮ್ಮ ಮನಸ್ಸನ್ನು ತೆರೆದಿಟ್ಟಾಗಲೇ ಎಲ್ಲಾ ವಿದ್ಯಾಭ್ಯಾಸದ ಗುರಿ ಮುಟ್ಟಿದಂತಾಗುವುದು ಅದೇ ವಿದ್ಯಾಭ್ಯಾಸದ ಕೊನೆಯ ಹೌದು .
ಜೀವನವೆಂದರೆ ನಾವು ಹಂತಹಂತವಾಗಿ ಸಮಯದೊಂದಿಗೆ ನಿರಂತರವಾಗಿ ಹತ್ತಿಹೋಗುವ ಮೆಟ್ಟಲುಗಳೇ ನಿಜವಾದ ಶ್ರೇಯಸ್ಸು ಎನಿಸಿಕೊಳ್ಳುತ್ತದೆ .
- ಸವಿತಾ ಆರ್ ಸ್ವಾಮಿ.
ಕನ್ನಡ ಉಪನ್ಯಾಸಕಿ ಬೆಂಗಳೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ತುಂಬಾ ಚೆನ್ನಾಗಿ ಹೇಳಿದ್ದಿರಿ 🙏
ಪ್ರತ್ಯುತ್ತರಅಳಿಸಿ