ಶುಕ್ರವಾರ, ಜುಲೈ 16, 2021

ಸಾಗುತಿದೆ ಒಂಟಿ ಪಯಣ (ಕವಿತೆ) - ಸವಿತ ಆರ್ ಅಂಗಡಿ.


ಸಾಗುತಿದೆ ಒಂಟಿ ಪಯಣ.

 ಸಾಗುತ್ತಿದೆ ಮಸಣದ ಕಡೆಗೆ
 ಮೆರವಣಿಗೆ ಇಲ್ಲ ಬ್ಯಾಂಡ್ ಇಲ್ಲ
ತಮಟೆ ಇಲ್ಲಾ. ಪಟಾಕಿ ಇಲ್ಲಾ
 ಪಲ್ಲಕ್ಕಿ ಇಲ್ಲ ಬಂದು ಬಳಗವಿಲ್ಲ
 ಆತ್ಮೀಯಾರಿಲ್ಲಾ ಗೆಳೆಯರ ದಂಡಿಲ್ಲಾ
 ಸಂಬಂಧಿಕರ ಹಿತನುಡಿಗಳು ಇಲ್ಲ
 ಬಂಧು-ಬಳಗದ ಆಕ್ರಂದನ ವಿಲ್ಲ
 ಯಾರಿದ್ದರೂ ಇಲ್ಲದ ಹಾಗೆ
 ಕೊನೆಯ ಮುಖ ನೋಡಲುಇಲ್ಲಾಅವಕಾಶವಿಲ್ಲ
 ಕಣ್ಣೀರಿಟ್ಟರು ಕೇಳುವವರಿಲ್ಲ

 ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗುವರು ಇಲ್ಲಾ
ನಿನ್ನನ್ನು ಹೊರುವವರಿಲ್ಲ
ಹೂಳುವರು ಮಸಣದಲ್ಲಿ
ತಿರುಗಿ ನೋಡದೆ ಹೋಗುವರು
ನಿನ್ನ ಜಾಗ ನೋಡದೆ
 ಇರುವಾಗ ನನ್ನದೆಂದ ಬಡಿದಾಡುವ
ನಾವು ಬದುಕಿನ  ಯಾಣ 
ಮುಗಿಸಿದಾಗ ಯಾರೂ ಬರಲಿಲ್ಲ ಜೊತೆಗೆ.
ನಾನು ನನ್ನವರು ಎನ್ನುವರು ಇಲ್ಲಾ
ಮನದಲಿ ಸಾವಿರ ನೋವಿದ್ದರೂ ಹೇಳಲು ಯಾರಿಲ್ಲ
ಕೊನೆಗೆ ರುದ್ರಭೂಮಿಗೂ ಬೇಡವಾದೆಯಾ ನೀನು
ಇನ್ನು ಮುಂದೆಯಾದರೂ ಬಿಡುವಯಾ ದುರಾಸೆ ಯನು
ಒಳಿತು ಮಾಡು ಮನುಜ
ನೀನಿರುವದು ಮೂರು ದಿವಸ. ಉಸಿರು ನಿಂತ ಮೇಲೆ ಹೆಣ
ಅನ್ನುವರು ಮಣ್ಣಾಗಿ ಹೂಳುವರು
ಇದೇ ಜೀವನ.

✍️ ಸವಿತಾ  ಆರ್ ಅಂಗಡಿ  ಮುಧೋಳ.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...