ಶನಿವಾರ, ಆಗಸ್ಟ್ 14, 2021

ರಕ್ತದಾನ - ಜೀವದಾನ (ಕವಿತೆ) - ಶ್ರೀ ಶಿವನಗೌಡ ಪೊಲೀಸ್ ಪಾಟೀಲ.

ರಕ್ತದಾನ - ಜೀವದಾನ.

ಜೀವ ದ್ರವ್ಯವಾದ ರಕ್ತ
ಒಂದು ಜೀವ ಉಳಿವಿಗೆ ಉಪಯುಕ್ತ.
ಸ್ವಯಂಪ್ರೇರಿತ  ರಕ್ತದಾನ
ಸಾಯುವ ಜೀವಕ್ಕೆ ಜೀವದಾನ.

ರಕ್ತದಾನದಿಂದ ದಾನಿಗೆ 
ಬರುವದು ಹೊಸ ಚೈತನ್ಯ.
ಮೂರು  ಜೀವ ಉಳಿಸಿದಕ್ಕೆ
ಸಿಗುವದು ಸಾಕಷ್ಟು ಪುಣ್ಯ.

ಕಣ್ಣಿಗೆ ದೃಷ್ಟಿ ಕೊಟ್ಟದ್ದು ಸೃಷ್ಟಿ
ನೇತ್ರದಾನ ಮಾಡುವದು ಕೃಪಾದೃಷ್ಟಿ.
ಅಂದರಿಗೆ ನೀಡಿ ನಮ್ಮ‌ ದೃಷ್ಟಿ
ಅದರಿಂದಾಗುವದು ಸುಂದರ ಲೋಕ ಸೃಷ್ಟಿ.

ದೇಹ ಮಣ್ಣಾಗುವದಕಿಂತ
ಮುಂಚೆ ಇನ್ನೊಬ್ಬರ ಜ್ಞಾನದ ಕಣ್ಣಾಗಲಿ.
ತಾರ್ಕಿಕ ಜ್ಞಾನವು ವೃದ್ದಿಯಾಗಲಿ.

- ಶಿವನಗೌಡ ಪೊಲೀಸ್ ಪಾಟೀಲ
ಹವ್ಯಾಸಿ ಬರಹಗಾರರು.
ಉಪನ್ಯಾಸಕರು ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...