ಮಂಗಳವಾರ, ಆಗಸ್ಟ್ 10, 2021

ಯಶಸ್ವಿಯಾಗಿ ನಡೆದ ವಚನ ವಾಚನ ವಾಚನ ಸ್ಪರ್ಧಾ ಕಾರ್ಯಕ್ರಮ : ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ - ಬೈಲಹೊಂಗಲ ತಾಲೂಕು ಘಟಕ.

ಯಶಸ್ವಿಯಾಗಿ ನಡೆದ ವಚನ ವಾಚನ ವಾಚನ ಸ್ಪರ್ಧಾ ಕಾರ್ಯಕ್ರಮ : ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ - ಬೈಲಹೊಂಗಲ ತಾಲೂಕು ಘಟಕ.
ಶ್ರೀ ಸಿದ್ದೇಶ್ವರ ಸಾಹಿತ್ಯ ವೇ‌ದಿಕೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವತಿಯಿಂದ ಹಮ್ಮಿಕೊಂಡಿದ್ದ  ವಚನ ವಾಚನ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ಮೂಡಿ ಬಂದಿತು. ಕಾರ್ಯಕ್ರಮದಲ್ಲಿ ನಾಡಿನಾದ್ಯಂತ ೫೦ ಕ್ಕೂ ಹೆಚ್ಚು ವಚನಕಾರರು ಭಾಗವಹಿಸಿ ತಮ್ಮ ವಚನ ವಾಚನವನ್ನು ತುಂಬಾ ಪರಿಣಾಮಕಾರಿಯಾಗಿ ಮಾಡಿದರು.
ಸತ್ಯಕ್ಕೆ ಅಸತ್ಯಕ್ಕೆ ಕಾರಣ  ನಾಸ್ತಿಕ , ಆಸ್ತಿಕತನಕೆ  ಕಾರಣ ಮನಸ್ಸು,  ಈ ಮನಸ್ಸು ಸರಿಯಾದ ಹಾದಿಯಲ್ಲಿ ನಡೆಯಬೇಕಾದರೆ ಸಂಸ್ಕಾರ ಅತ್ಯಗತ್ಯ. ಈ ಸನ್ಮಾರ್ಗದಲ್ಲಿ ನುಡಿದು ನಡೆಯುವಂತೆ ಮಾಡಿದ ಕಾಯಕ ಜ್ಯೋತಿಯೇ   ವಚನವೆಂಬ ಜ್ಯೋತಿ.  ಎಂದು ವಚನದ ಮಹತ್ವವನ್ನು,  ವಚನ ಸಾಹಿತ್ಯ ಜಗಕ್ಕೆಲ್ಲ ನೀಡಿದ ಸುಜ್ಞಾನದ ಬೆಳಕ ಮಹತ್ವವನ್ನು  ವಚನಕಾರರು ಶಬ್ದಗಳನ್ನು ಹಿಡಿದು ಒಂದು ರೂಪವನ್ನು ಕೊಟ್ಟುರು ಎಂದು
   ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶರಣೆ ಮಂಗಲಾ  ಎಸ್ ಮೇಟಗುಡ್ಡಯವರು ತಮ್ಮ ನುಡಿಯಲ್ಲಿ ತಿಳಿಸಿದರು.

ವಚನ ಎಂದರೆ ಬಸವ ಧರ್ಮ, ನ್ಯಾಯ ನೀತಿ, ಕಾಯಕ , ಲಿಂಗ ಸಮಾನತೆ, ಮಾನವೀಯ ಮೌಲ್ಯ, ಸುಜ್ಞಾನ, ಸಂಸ್ಕಾರ,  ಕಲೆ, ಮುಂತಾದ ಸಾರವಾಗಿದೆ.
ಅಲ್ಲದೆ ಮಾತು, ನುಡಿ,  ವಾಕ್ಯ,   ಸಲಹೆ, ಪ್ರಾಮಾಣಿಕತೆ, ಇವೆ ಮುಂತಾದ ಅರ್ಥವನ್ನು ಒಳಗೊಂಡಿದೆ.  ಬಸವಾದಿ ಶರಣರು ನುಡಿದಂತೆ ನಡೆದರು. ನಡೆದಂತೆ ಬರೆದರು.
ಸಾಮಾಜಿಕ ಬದ್ಧತೆಯನ್ನು, ಸಂಸ್ಕಾರದ ಸೂತ್ರವನ್ನು,    ಮಾನವೀಯತೆಯ ಚಿಂತನೆಯನ್ನು  ವಚನ ಯುಗ ಜಗತ್ತನ್ನು ಜ್ಯೋತಿಯಾಗಿ ಬೆಳಗಿಸಿದೆ. ಇಂತಹ ಹಾದಿಯಲ್ಲಿ  ಪ್ರಸ್ತುತ ಆಧುನಿಕ ವಚನಗಳು ಕಟ್ಟಿಕೊಡ ಬೇಕು. ಈ ನಿಟ್ಟಿನಲ್ಲಿ ಪರಮೇಶ್ವರ ಭಟ್ಟ, ಕಮಲ ಹಂಪನ, ಮುಂಜಗಮ್ಮ, ಸಿದ್ಧಯ್ಯಪುರಾಣಿಕ ಮುಂತಾದ ಪ್ರಮುಖರ ವಚನಗಳು ಇಂದು  ಪ್ರಸ್ತುತ .ಈ ವಚನಗಳಲ್ಲಿ ನೀತಿ, ರಾಜಕೀಯ ವಿಡಂಬನೆ,  ಮಾನವೀಯ ಮೌಲ್ಯಗಳ ಆಶಯವನ್ನು ಒಳಗೊಂಡಿದೆ. ಅಲ್ಲದೆ ಧರ್ಮ ಧರ್ಮವೆಂದು ಕುಣಿದಾಡುವ ಜನರೇ ಧರ್ಮವೆಂದರೆ ಪ್ರೀತಿ, ದಯೆ, ಕರ್ತವ್ಯ ಇದೆ ನಿಜವಾದ ಧರ್ಮ, ನಡೆ ನುಡಿ ಒಂದಾಗಿ, ಕಷ್ಟ ನಷ್ಟಗಳಿಗೆ ಸ್ಪಂದಿಸುವ ರೀತಿಯಲ್ಲಿ  ಆಧುನಿಕ  ವಚನಗಳು ರಚನೆಯಾಗ ಬೇಕು.  ಈ ನಿಟ್ಟಿನಲ್ಲಿ ಆನ್ಲೈನ್ ಮೂಲಕ ಸಿದ್ದೇಶ್ವರ ಸಾಹಿತ್ಯ ವೇದಿಕೆಯು ರಾಜ್ಯ ಮಟ್ಟದ ಸ್ವರಚಿತ ಆಧುನಿಕ ವಚನಗಳ ರಚನೆ ಮತ್ತು ವಾಚನ ಗೋಷ್ಠಿಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಕಾರ್ಯಕ್ರಮದಲ್ಲಿ ಉಪನ್ಯಾಸ ನುಡಿ ನಡೆಸಿಕೊಟ್ಟ ಶ್ರೀಯುತ ಮಲ್ಲಿಕಾರ್ಜುನ ಕೋಳಿಯವರು  ನಡೆಸಿಕೊಟ್ಟರು.
12ನೇ ಶತಮಾನದ ವಚನಕಾರರು ಕನ್ನಡ ಸಾಹಿತ್ಯಕ್ಕೆ ವಿಶ್ವ ಮೌಲ್ಯವನ್ನು ತಂದು ಕೊಟ್ಟರು ಅನುಭಾವ ಸಾಹಿತ್ಯ ರಚನೆ ಅನುಭಾವಿ ಗಳಿಂದಲೇ ಸಾಧ್ಯ ಅಂತ ಪರಂಪರೆಗೆ ನಾಂದಿ ಹಾಡಿದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಬೈಲ್ಹೊಂಗಲ್ ತಾಲೂಕ ಘಟಕದ ಸೇವೆ ಶ್ಲಾಘನೀಯ ಎಂದರು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಪೂಜ್ಯರ ಹೆಸರಿನಲ್ಲಿ ಸಾಹಿತ್ಯ ವೇದಿಕೆ ಹುಟ್ಟುಹಾಕಿದ್ದು ಅಭಿನಂದನೆ ಸಂಗತಿ ಎಂದರು

ವಿವಿಧ ತಾಲೂಕ ಘಟಕಗಳು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡುವುದರ ಮುಖಾಂತರ ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಿ ಕೆಲಸ ನಿರ್ವಹಿಸುತ್ತಿವೆ. ಬೈಲಹೊಂಗಲದ ಶರಣೆ ಪ್ರೇಮಕ್ಕ ಅಂಗಡಿಯವರು ವಚನ ಸಾಹಿತ್ಯದಲ್ಲಿ ಅಪಾರ ಕೃಷಿ ಮಾಡಿದವರು ಆ ಜ್ಞಾನವನ್ನು ಈ ವೇದಿಕೆಯ ಮುಖಾಂತರ ಸಮಾಜಕ್ಕೆ ಹಂಚುತ್ತಿರುವುದು ನನಗೆ ಖುಷಿ ತಂದಿದೆ ಎಂದರು. ಪ್ರತಿ ತಾಲೂಕಿನ ಅಧ್ಯಕ್ಷರ ಸಹಕಾರ ಸೌಜನ್ಯತೆ ಪ್ರೋತ್ಸಾಹದಿಂದ ನಾಲ್ಕು ಜಿಲ್ಲೆಗಳು ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದ ದಿವ್ಯ ‌ಸಾನಿಧ್ಯ ವಹಿಸಿ ಮಾತನಾಡ ಶ್ರೀ ಮ ನೀ ಪ್ರ ಸ್ವ ಪ್ರಭು ನೀಲಕಂಠ ಮಹಾಸ್ವಾಮಿಗಳು ಮೂರುಸಾವಿರ ಮಠ  ಇವರು ತಮ್ಮ ಆಶಿರ್ವಚನಗಳನ್ನು ಕವಿ ಮನಸ್ಸುಗಳಿಗೆ ಉಣಬಡಿಸುತ್ತ
"ವಚನಗಳು ಕೇವಲ ಓದಿಗೆ ಒದಗದೆ ಅವು ಪಚನವಾಗಬೇಕು.
ಸಮಾಜ ಸುಧಾರಣೆಗೆ ಶರಣರು ಅನುಭಾವದ 
ಅಡುಗೆಯನ್ನು ವಚನದ ಅಮೃತವನ್ನಾಗಿ ಉಣಬಡಿಸಿದ್ದಾರೆ.
ವಚನದ ಮೂರಕ್ಷರದ ಮೂಲಕ ಕ್ರಾಂತಿಯನ್ನೆ ಮಾಡಬಹುದು ಎಂದರು. ಕೊನೆಗೆ ಅಥಣಿಶರ ಒಂದು ವಚನದೊಂದಿಗೆ ಆಶಿರ್ವಚನಕ್ಕೆ ಮಂಗಲ ಮಾಡಿದರು" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮತಿ ಆಶಾ.ಎಸ್.ಯಮಕನಮರಡಿ ರಾಜ್ಯ ಸಂಚಾಲಕರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಇವರು ಮಾತನಾಡಿ "ಬದುಕಿನನುಭವದ
ನುಡಿಗಳೆ ಅನುಭಾವದ ವಚನಗಳಾಗಿವೆ. ನಡೆ ನುಡಿ ಒಂದಾಗಿ ನಡೆದವರೆ ನಮ್ಮ ಶರಣರು. ಅವರು ಅನುಭಾವದ ವಚನಗಳು ಸಾರ್ವಕಾಲಿಕ ಸತ್ಯದ ಸಂದೇಶಗಳಾಗಿ ನಮಗೆಲ್ಲಾ ದಾರಿದೀಪಗಳಾಗಿವೆ.‌
ನಡೆ ತಪ್ಪಿದರೆ ನಡೆ ಒಪ್ಪಿದರೆ ಎಲ್ಲದಕ್ಕೂ ವಚನಗಳು ಸಾಕ್ಷಿಯಾಗಿ ನಿಲ್ಲುತ್ತವೆ.
ಶುದ್ಧ ಕಾಯಕದ ಬದುಕಿನ ಆತ್ಮಸ್ಥೈರ್ಯದ ನುಡಿಗಳೆ ವಚನಗಳಾದರೆ ಸಮಾಜ ವ್ಯಕ್ತಿ ಬದುಕು
ಹಸನಗೊಳ್ಳುವುದು" ಎಂದರು. ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಅವರು ಸಂಸ್ಥಾಪಕರ ನುಡಿಯಲ್ಲಿ ಮಾತನಾಡಿ ಇಷ್ಟೋಂದು ಯಶಸ್ವಿಯಾಗಿ ಅದರಲ್ಲೂ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆ ಪಡುವ ಸಂಗತಿ. ವಚನ ಸಾಹಿತ್ಯ ಎಂದರೆ ಅದು ಸಮಾಜವನ್ನು ಸೂಕ್ಷ್ಮವಾಗಿ ತಿದ್ದುವ ಆಯುಧವೆಂದು ನುಡಿದರು. ಮುಖ್ಯ ಅತಿಥಿಗಳಾಗಿ ಶಿವಾನಂದ ಅರಭಾಂವಿ ನಿರ್ಣಾಯಕರಾಗಿ
 ಶ್ರೀ ಮಡಿವಾಳಪ್ಪ ಸಂಗೊಳ್ಳಿ ಶಿಕ್ಷಕರು ಬೈಲಹೊಂಗಲ  ಗೌರವ ಉಪಸ್ಥಿತಿಯಲ್ಲಿ ಶ್ರೀ ಮಹಾಂತೇಶ್ ರಾಜಗೋಳಿ ಪತ್ರಕರ್ತರು ಹಾಗೂ ರಾಜ್ಯ ಮಾಂಡವ್ಯ ಮಹರ್ಷಿ ಪ್ರಶಸ್ತಿ ಪುರಸ್ಕೃತರು ಹಾಗೂ ಮಹಾಂತೇಶ್ ರಾಜಗೋಳ ಅವರು ಇದ್ದರು. ಶೋಭಾ ಕರಡಿಗುದ್ದಿಯವರಕ ಕಾರ್ಯಕ್ರಮದ ನಿರೂಪಣೆಯನ್ನು ತುಂಬಾ ಯಶಸ್ವಿಯಾಗಿ ನಿರ್ವಹಿಸಿದರು. ರಾಜೇಶ್ವರಿ ಧ್ಯಾಮನಗೌಡರ್ ಪ್ರಾರ್ಥಿಸಿದರು, ಶ್ರೀಮತಿ ಶೋಭಾ ಗದಗ್ ಸ್ವಾಗತಿಸಿದರೆ ಶ್ರೀಮತಿ ಅಮಜವ್ವ ಬೋವಿ ವಂದಿಸಿದರು. ಒಟ್ಟಿನಲ್ಲಿ ಕಾರ್ಯಕ್ರಮವು ಅಭೂತಪೂರ್ವ ಅನುಭವ ಒಂದಕ್ಕೆ ಸಾಕ್ಷಿಯಾಯಿತು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...