ಶನಿವಾರ, ಆಗಸ್ಟ್ 14, 2021

ಮಂಗಳಮುಖಿ (ಕವಿತೆ) - ಶ್ರೀ ಗೌತಮ್ ‌ಗೌಡ, ಕೀರಣಗೆರೆ.

ಮಂಗಳಮುಖಿ

ಈ ಅಮಂಗಳೆಯ ಬದುಕಿಗೇಕೆ ಮಂಗಳೇ ಎಂಬ ಹೆಸರು ?
ತನ್ನದಲ್ಲದ ತಪ್ಪಿಗೆ ಕ್ಷಣ ಕ್ಷಣವು ಭಾದಿಸುವ ಮನಕೆ
ಭರವಸೆಯ ಕಿರಣಗಳಿಲ್ಲದೆ
ಕಗ್ಗತ್ತಲಲ್ಲಿ ಸೆರಗು ಚಾಚಿ
ಮಲಗುವ ಈ ಮನಕ್ಕೇಕೆ ಮಂಗಳೆ ಎಂಬ ಹೆಸರು.

ಮಾಗದ ಮನದೊಳಗಿನ ನೋವಿಗೆ
ಲೇಹ್ಯಕ್ಕಿಂತ ಉಪ್ಪನ್ನೇ ಲೇಪಿಸುತ್ತಿರುವ
ಮಂಕುಚಿತ್ತಗಳಿಂದೇಕೆ..??
ಮಂಗಳೇ ಎಂಬ ಮಸಿ ಬಳಿದ ನಾಮ.

ಮುಂಜಾನೆ ಮುಖ ನೋಡಿದರೆ ಶುಭವೆಂದು 
ಮುಟ್ಟಲು ಮುನಿಯುವವರಿಂದೀಕೆ
ಮಂಗಳವಕ್ತ್ತ್ರ ಎಂಬ ಹುಸಿ ನಾಮ ?

ಜೀವವೆಂದು ತಿಳಿಯದೆ ಜಾಡಿಸುವ
ಅಮಂಗಳ ಮನಗಳಿಂದೇಕೆ
ಮಂಗಳಮುಖಿ ಎಂಬ ಹಂಗಿಸುವ ನಾಮ? 🏳️‍🌈
        
 -ಗೌತಮ್ ಗೌಡ, ಕೀರಣಗೆರೆ
ರಾಮನಗರ 9902549766.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...