ಕರುಣೆ ತೋರು ಬಾ ವರುಣನೇ.
ಬಾ ಬಾರೋ ಮಳೆರಾಯ ಈ ಧರೆಗೆ
ಬತ್ತಿ ಬರಡಾದ ನೆಲ ಜಲದ ಕೆರೆಗೆ
ಕಾಯುತ ಕುಳಿತಿಹನು ಅನ್ನದಾತ ನೀ ಬರುವಿಕೆಯ ದಾರಿಯ
ಬೇಡುತ ಮಲಗಿಹನು ಧರೆಯೊಡೆಯ ನೀ ನೀಡುವ ಆ ವರುಣಾಮೃತ ಕೊಡುಗೆಯ.....!!
ನಿನ್ನ ಭೇಟಿಗಾಗಿ ಕಾದಿವೆ ಹಲವಾರು ಗಿಡಮರ
ತತ್ತರಿಸಿ ಜೀವ ಬಿಟ್ಟಿವೆ ಅದೆಷ್ಟೋ ಜಲಚರ
ನಿನ್ನ ಮೋಹಕೆ ಹಾತೊರೆದಿವೆ ಕುಣಿಯಲು ನವಿಲು
ತುಂಬಿ ಬಂದು ಬೆರೆಲ್ಲೋ ಸುರಿಸುತ್ತಿವೆ ಮಳೆಯನು ಕಪ್ಪಾದ ಮೋಡಗಳು.....!!
ನಿನ್ನ ಜೀವಜಲಕೆ ಕಾದಿವೆ ತರತರಹದ ಬೀಜ ಮೊಳಕೆಗಳು
ನೀನಿರದೇ ಒಣಗಿ ಬಿರುಕಾಗಿದೆ ಧರೆಯ ಪದರುಗಳು
ಮುನಿದ ಮನಕೆ ನಗುವ ತರುವವನಾಗು ಮಳೆರಾಯ
ನಿನ್ನ ನಂಬಿದ ಅನ್ನದಾತನಿಗೆ ನೀನೊಬ್ಬನೇ ಜಗದೊಡೆಯ.....!!
ಜೀವ ಉಳಿಸು ಬಾ ಕರುಣಾಮಯನೇ ಬೇಡುತಿರುವ ಬಂಧುವನ್ನು
ನೋವ ಕಳೆದು ಭಾವ ತುಂಬಿ ಸವಿದು ನಲಿಯಲು ಜೀವನವನ್ನು
ದಯವ ತೋರಿ ದಾನ ನೀಡಿ ಪ್ರಾಣ ಉಳಿಸು ವರುಣದಾತ
ಜೀವವನ್ನೇ ಹಿಡಿದು ಕುಳಿತ ನಿನ್ನ ನಂಬಿದ ಅನ್ನದಾತ.....!!
- ಹನುಮಂತ ದಾಸರ, ಹೊಗರನಾಳ.
ತಾ// ಮಸ್ಕಿ, ಜಿ//ರಾಯಚೂರು.
ಮೊ: 9945246234.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ